ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಐಆರ್ ಇ ಡಿಎ “ಗ್ರೀನ್ ಉರ್ಜಾ ಪ್ರಶಸ್ತಿ” ತನ್ನದಾಗಿಸಿಕೊಂಡಿತು

Posted On: 11 MAY 2021 6:26PM by PIB Bengaluru

ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ (ಐಸಿಸಿ) ವತಿಯಿಂದ ವರ್ಷದ ನವೀಕರಿಸಬಹುದಾದ ಇಂಧನಕ್ಕಾಗಿ ಹಣಕಾಸು ಸಂಸ್ಥೆಗಳಲ್ಲಿ ಪ್ರಮುಖ ಸಾರ್ವಜನಿಕ ಸಂಸ್ಥೆ ಎಂದು  ಇಂಡಿಯನ್ ರಿನ್ಯೂಯಬಲ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿ ಲಿಮಿಟೆಡ್ ಸಂಸ್ಥೆಗೆ (ಐಆರ್ ಇಡಿಎ) "ಗ್ರೀನ್ ಉರ್ಜಾ ಪ್ರಶಸ್ತಿ" ನೀಡಲಾಯಿತು. ಇಂದು ನಡೆದ. ವರ್ಚುವಲ್ ಸಮಾರಂಭದಲ್ಲಿ ಐಸಿಸಿ ರಾಷ್ಟ್ರೀಯ ಇಂಧನ ತಜ್ಞರ ಸಮಿತಿಯ ಅಧ್ಯಕ್ಷರಾದ ಶ್ರೀ ಅನಿಲ್ ರಜ್ದಾನ್ ಅವರ ಸಮ್ಮುಖದಲ್ಲಿ ಆರ್ ಡಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಶ್ರೀ ಪ್ರದೀಪ್ ಕುಮಾರ್ ದಾಸ್ ಅವರು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಮಹಾನಿರ್ದೇಶಕ ಡಾ.ಅಜಯ್ ಮಾಥೂರ್ ಅವರಿಂದ ಸ್ವೀಕರಿಸಿದರು.

ಗ್ರೀನ್ ಎನರ್ಜಿ ಫೈನಾನ್ಸಿಂಗ್ನಲ್ಲಿ ಐಆರ್ ಇಡಿಎ ವಹಿಸುವ ಪ್ರಮುಖ ಮತ್ತು ಅಭಿವೃದ್ಧಿ ಪಾತ್ರಕ್ಕಾಗಿ ಪ್ರಶಸ್ತಿ ಪಡೆಯಿತು. ಇರೆಡಾವನ್ನು ಆಯ್ಕೆ ಮಾಡಿದ್ದಕ್ಕಾಗಿ ತೀರ್ಪುಗಾರ ಸದಸ್ಯರನ್ನು ಶ್ಲಾಘಿಸಿದ ಶ್ರೀ ದಾಸ್, ಇರೆಡಾ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕೆ ಗೌರವವಿದೆ ಎಂದು ಹೇಳಿದರು. ಗೌರವಾನ್ವಿತ ಪ್ರಧಾನ ಮಂತ್ರಿ ಅವರ  ದೂರದೃಷ್ಟಿಯ ಆತ್ಮ ನಿರ್ಭರ ಭಾರತ್ ಗೆ ಅನುಗುಣವಾಗಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ನಮ್ಮ ಸಂಸ್ಥೆಯ ಅಪಾರ ಕೊಡುಗೆಯನ್ನು ಪ್ರಶಸ್ತಿ ಗುರುತಿಸಿದೆ ಎಂದು ಹೇಳಿದರು.

ಇದಲ್ಲದೆ, ವಿದ್ಯುತ್ ಮತ್ತು ಆರ್ ವಲಯದ ಒಟ್ಟಾರೆ ಬೆಳವಣಿಗೆಗೆ ಇರೆಡಾಗೆ ತ್ವರಿತ ನಿರ್ಧಾರ ತೆಗೆದುಕೊಳ್ಳುವ ವಿಧಾನದಿಂದ ಮಾರ್ಗದರ್ಶನ ಮತ್ತು ಅನುಕೂಲ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾನ್ಯ ಕೇಂದ್ರ ಇಂದನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಆರ್ ಕೆ ಸಿಂಗ್ ಅವರಿಗೆ ಶ್ರೀ ದಾಸ್ ಕೃತಜ್ಞತೆ ಸಲ್ಲಿಸಿದರು. ಕಂಪನಿಗೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಎಂಎನ್ಆರ್ ಕಾರ್ಯದರ್ಶಿ ಶ್ರೀ ಇಂದೂ ಶೇಖರ್ ಚತುರ್ವೇದಿ ಮತ್ತು ಎಂಎನ್ಆರ್ ಇತರ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ಇರೆಡಾದ ಸಿಎಂಡಿಯವರು, ಎಲ್ಲಾ ಇರೆಡಾನ್ ಗಳಿಗೆ ಅವರ ನಿರಂತರ ಕಠಿಣ ಪರಿಶ್ರಮಕ್ಕಾಗಿ ಪ್ರಶಸ್ತಿಯನ್ನು ಅರ್ಪಿಸಿದರು ಮತ್ತು ಕೋವಿಡ್-19 ಸೇರಿದಂತೆ ಹಲವಾರು ಸವಾಲುಗಳ ನಡುವೆಯೂ ಕಳೆದ ಒಂದು ವರ್ಷದಲ್ಲಿ ಅತ್ಯುತ್ತಮ ಸಾಧನೆ ತೋರಿಸಲು ತಮ್ಮ ಸಂಸ್ಥೆ ಅತ್ಯುತ್ತಮ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದರು.

ಸಾಂಕ್ರಾಮಿಕ ಬಿಕ್ಕಟ್ಟಿನ ಹೊರತಾಗಿಯೂ, ಇರೆಡಾ 2020-21 ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಮತ್ತು ಎರಡನೇ ಅತಿ ಹೆಚ್ಚು (ಪ್ರಾರಂಭದ ದಿನಾಂಕದಿಂದ) ಸಾಲ ರೂ. 8827 ಕೋಟಿಯನ್ನು ವಿತರಿಸಿದೆ. ಇದು ಇರೆಡಾ ಸಮಸ್ಯೆಯನ್ನು ಒಂದು ಅವಕಾಶವಾಗಿ  ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದರು.

ಸಂದರ್ಭದಲ್ಲಿ, ಇರೆಡಾ ಸಿಎಮ್ ಡಿ ಅವರು, ಕೋವಿಡ್ -19 ಮೊದಲ ಮತ್ತು ಎರಡನೆಯ ಅಲೆಗಳನ್ನು ತಡೆಗಟ್ಟಲು ಇರೆಡಾ ಕೈಗೊಂಡ ಅನನ್ಯ ಉಪಕ್ರಮಗಳನ್ನು ಎತ್ತಿ ತೋರಿಸಿದರು. ಇದು ಆದರ್ಶಪ್ರಾಯವಾದ 'ಕೋವಿಡ್ ಕೇರ್ ರೆಸ್ಪಾನ್ಸ್ ಟೀಮ್' ಅನ್ನು ರಚಿಸಿದೆ, ಇದು ಕೋವಿಡ್-19 ಸೋಂಕಿತ ನೌಕರರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಜೂನ್ 2020 ರಿಂದ ನಿರಂತರವಾಗಿ ನೋಡಿಕೊಳ್ಳುತ್ತಿದೆ, ಇದರ ಪರಿಣಾಮವಾಗಿ 11 ಮೇ 2021 ಹೊತ್ತಿಗೆ ಕೋವಿಡ್ ಸೋಂಕಿಗೆ ಒಳಗಾದ / ಚಿಕಿತ್ಸೆಯಲ್ಲಿರುವ ನೌಕರರ ಸಂಖ್ಯೆಯು 'ಶೂನ್ಯ' ವಾಗಿದೆಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಇಡೀ ಜಗತ್ತು ಹೆಣಗಾಡುತ್ತಿರುವಾಗ, ಪೂರ್ವಭಾವಿ ಮತ್ತು ಸಮಯೋಚಿತ ಕೋವಿಡ್ ನಿರ್ವಹಣಾ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಇರೆಡಾ ತನ್ನ ಉದ್ಯೋಗಿಗಳಿಗೆ ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣವನ್ನು ಯಶಸ್ವಿಯಾಗಿ ಖಚಿತಪಡಿಸುತ್ತದೆ.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂಎನ್ಆರ್ ) ಆಡಳಿತ ನಿಯಂತ್ರಣದಲ್ಲಿರುವ ಇರೆಡಾ ಭಾರತದಲ್ಲಿ ನವೀಕರಿಸಬಹುದಾದ ಇಂಧನ (ಆರ್ ) ಮತ್ತು ಇಂಧನ ದಕ್ಷತೆ ( ) ಯೋಜನೆಗಳಿಗೆ ಹಣಕಾಸು ಒದಗಿಸುವ ಏಕೈಕ ಮೀಸಲಾದ ಸಂಸ್ಥೆಯಾಗಿದೆ. ಆರ್ ಮತ್ತು ಯೋಜನೆಗಳಿಗೆ ಹಣಕಾಸು ಒದಗಿಸುವ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವಲ್ಲಿ ಕಂಪನಿಯು ಪ್ರಾರಂಭದಿಂದಲೂ ಮುಖ್ಯ ಪಾತ್ರವನ್ನು ವಹಿಸಿದೆ. ಇರೆಡಾ ವರ್ಷಗಳಲ್ಲಿ ಒಟ್ಟು ರೂ. 96,601 ಕೋಟಿ ಸಾಲಗಳನ್ನು ಮಂಜೂರು ಮಾಡಿದೆ. 63,492 ಕೋಟಿ ರೂಪಾಯಿಗಳನ್ನು ವಿತರಿಸಿದೆ ಮತ್ತು ಇಲ್ಲಿಯವರೆಗೆ ದೇಶದಲ್ಲಿ 17,586 ಮೆಗಾವ್ಯಾಟ್ ಆರ್ ಸಾಮರ್ಥ್ಯವನ್ನು ಪೋಷಿಸಿದೆ.

***



(Release ID: 1717820) Visitor Counter : 229


Read this release in: English , Urdu , Hindi , Bengali