ಭೂವಿಜ್ಞಾನ ಸಚಿವಾಲಯ

ಒಡಿಶಾ, ತೆಲಂಗಾಣ, ಕರ್ನಾಟಕ, ಕೇರಳ, ಮಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ನ ಅಲ್ಲಲ್ಲಿ ಭಾರೀ ಮಳೆ ಸಂಭವ


ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ ಮತ್ತು ಮಹೆ, ತಮಿಳುನಾಡು, ಪುದುಚೇರಿ ಮತ್ತು ಕೇರಳದ ಅಲ್ಲಲ್ಲಿ ಏಪ್ರಿಲ್ 16 ರಂದು ಭಾರೀ ಮಳೆ ನಿರೀಕ್ಷೆ

ಏಪ್ರಿಲ್ 19 ರಂದು ಪಶ್ಚಿಮ ಬಂಗಾಳದ ಉಪ ಹಿಮಾಲಯ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ನಾಗಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರದಲ್ಲಿ ಮಿಂಚು, ಗುಡುಗು ಸಹಿತ ಭಾರೀ ಗಾಳಿ ಬೀಸುವ ಸಾಧ್ಯತೆ

Posted On: 15 APR 2021 12:01PM by PIB Bengaluru

ಭಾರತೀಯ ಹವಾಮಾನ ಇಲಾಖೆ [ಐಎಂಡಿ]ಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಮಾಹಿತಿ

ಅಖಿಲ ಭಾರತ ಪರಿಣಾಮ ಆಧರಿತ ಹವಾಮಾನ ಎಚ್ಚರಿಕೆ ವರದಿ

15 ಏಪ್ರಿಲ್ [ದಿನ 1]: ತೆಲಂಗಾಣದ ಅಲ್ಲಲ್ಲಿ ಮಿಂಚು, ಆಲಿಕಲ್ಲು ಮತ್ತು ಭಾರೀ ಗಾಳಿ ಬಿಸುವ ಸಾಧ್ಯತೆ [ ಗಾಳಿಯ ವೇಗ ಗಂಟೆಗೆ 40 – 50 ಕಿಲೋಮೀಟರ್ ವೇಗ] : ಮಧ್ಯ ಮಹಾರಾಷ್ಟ್ರ, ಆಂಧ್ರ ಪ್ರದೇಶದ ಕರಾವಳಿ ಮತ್ತು ಯನಮ, ಒಡಿಶಾ ಮತ್ತು ಚತ್ತೀಸ್ ಘರ್ ನ ಅಲ್ಲಲ್ಲಿ ಮಿಂಚು, ಆಲಿಕಲ್ಲು, ಭಾರೀ ಗಾಳಿ ಬೀಸುವ ಸಂಭವ [ ಗಾಳಿಯ ವೇಗ ಪ್ರತಿ ಗಂಟೆಗೆ 30-40 ಕಿಲೋಮೀಟರ್] : ರಾಯಲಸೀಮ, ಮರಾಠವಾಡದ ಅಲ್ಲಲ್ಲಿ ಮಿಂಚು ಮತ್ತು ಭಾರೀ ಗಾಳಿ ಬೀಸುವ ಸಾಧ್ಯತೆ [ವೇಗ 30-40 ಕಿಲೋಮೀಟರ್ ಪ್ರತಿ ಗಂಟೆಗೆ ತಲುಪಲಿದೆ] : ಜಮ್ಮು, ಕಾಶ್ಮೀರ, ಲದ್ದಾಖ‍್, ಗಿಲ್ಗಿಟ್, ಬಲ್ತಿಸ್ಥಾನ್ ಮತ್ತು ಮುಝಫರಾಬಾದ್, ರಾಜಸ್ಥಾನ್, ಪಂಜಾಬ್, ಹರಿಯಾಣ, ಚಂಡಿಘರ್ ಮತ್ತು ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ವಿದರ್ಭಾ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಂ ಮತ್ತು ತ್ರಿಪುರ, ಆಂಧ್ರ ಪ್ರದೇಶದ ಕರಾವಳಿ ಮತ್ತು ಯನಮ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಹಾಗೂ ಕೇರಳ, ಮಹೆಯಲ್ಲಿ ಮಿಂಚು ಮತ್ತು ಭಾರೀ ಗಾಳಿ ಬೀಸುವ ಸಂಭವ [ ಗಾಳಿಯ ವೇಗ ಪ್ರತಿಗಂಟೆಗೆ 30-40 ಕಿಲೋಮೀಟರ್ ತಲುಪುವ ನಿರೀಕ್ಷೆ] ಮತ್ತು ಹಿಮಾಚಲ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳದ ಗಾಂಗೆಟಿಕ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಕೊಂಕಣ ಮತ್ತು ಗೋವಾ, ಕರ್ನಾಟಕ, ಲಕ್ಷ ದ್ವೀಪದ ಅಲ್ಲಲ್ಲಿ ಮಿಂಚು ಕಾಣಿಸಿಕೊಳ್ಳಲಿದೆ.

· ಒಡಿಶಾ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ಮಹೆ ಹಾಗೂ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ನಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ

ಹರಿಯಾಣ, ಸೌರಾಷ್ಟ್ರ ಮತ್ತು ಕಚ್ ನ ಕೆಲವೆಡೆ ಬಿಸಿ ಗಾಳಿ ಬೀಸುವ ನಿರೀಕ್ಷೆ

ಏಪ್ರಿಲ್ 16 [ದಿನ 2] : ಜಮ್ಮು, ಕಾಶ್ಮೀರ, ಲದ್ದಾಖ್, ಗಿಲ್ಗಿಟ್, ಬಲ್ತಿಸ್ಥಾನ್ ಮತ್ತು ಮುಝಫರಾಬಾದ್ ನ ಅಲ್ಲಲ್ಲಿ ಗುಡುಗು ಸಹಿತ ಮಿಂಚು, ಭಾರೀ ಗಾಳಿ ಬೀಸುವ ಸಂಭವ [ ಗಾಳಿಯ ವೇಗ ಪ್ರತಿಗಂಟೆಗೆ 30-40 ಕಿಲೋಮೀಟರ್] : ಅಸ್ಸಾಂ ಮತ್ತು ಮೇಘಾಲಯದ ಅಲ್ಲಲ್ಲಿ ಭಾರೀ ಗಾಳಿ ಸಹಿತ ಮಿಂಚು ಕಾಣಿಸಿಕೊಳ್ಳುವ ಸಂಭವ [ಗಾಳಿಯ ವೇಗ ಪ್ರತಿಗಂಟೆಗೆ 40-50 ಕಿಲೋಮೀಟರ್] : ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ್, ಚತ್ತೀಸ್ ಘರ್, ಜಾರ್ಖಂಡ್, ಪಶ್ಚಿಮ ಬಂಗಾಳದ ಗಂಗೆಟಿಕ್, ನಾಗಾಲ್ಯಾಂಢ‍್, ಮಣಿಪುರ, ಮಿಝೋರಾಂ ಮತ್ತು ತ್ರಿಪುರ, ತೆಲಂಗಾಣ, ತಮಿಳುನಾಡು, ಪುಚುಚೇರಿ, ಕಾರೈಕಲ್ ಮತ್ತು ಕೇರಳ, ಹಾಗೂ ಮಹೆಯಲ್ಲಿ ಭಾರೀ ಗಾಳಿಯೊಂದಿಗೆ ಮಿಂಚು ಕಾಣಿಸಿಕೊಳ್ಳುವ ಸಂಭವ [ಗಾಳಿಯ ವೇಗ ಪ್ರತಿಗಂಟೆಗೆ 30-40] ಮತ್ತು ಪೂರ್ವ ಮಧ್ಯಪ್ರದೇಶ, ವಿದರ್ಭ, ಪಶ್ಚಿಮ ಬಂಗಾಳದ ಉಪ ಹಿಮಾಲಯ ಪ್ರದೇಶ, ಸಿಕ್ಕಿಂ, ಮಧ‍್ಯ ಮಹಾರಾಷ್ಟ್ರ, ಮರಾಠವಾಡ, ಒಡಿಶಾ, ಆಂದ್ರಪ್ರದೇಶದ ಕರಾವಳಿ ಮತ್ತು ಯನಮ, ರಾಯಲಸೀಮ, ಅರುಣಾಚಲ ಪ್ರದೇಶ, ಅಂಡಮಾನ್ ನಿಕೋಬಾರ್ ದ್ವೀಪಗಳು, ಕರ್ನಾಟಕ ಮತ್ತು ಲಕ್ಷ ದ್ವೀಪದ ಅಲ್ಲಲ್ಲಿ ಮಿಂಚು ಕಾಣಿಸಿಕೊಳ್ಳುವ ನಿರೀಕ್ಷೆ.

· ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಕೇರಳ ಮತ್ತು ಮಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ನ ಅಲ್ಲಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ.

· ಪಶ್ಚಿಮ ರಾಜಸ್ಥಾನದಲ್ಲಿ ಧೂಳಿನ ಚಂಡಮಾರುತ/ಗುಡುಗು ಸಹಿತ ಭಾರೀ ಗಾಳಿ ಬೀಸುವ ನಿರೀಕ್ಷೆ [ಗಾಳಿಯ ವೇಗ 30-40 ಕಿಲೋಮೀಟರ್ ಪ್ರತಿಗಂಟೆಗೆ]

ಏಪ್ರಿಲ್ 17 [ದಿನ 3] : ಪಶ್ಛಿಮ ಬಂಗಾಳದ ಉಪ ಹಿಮಾಲಯ ಪ್ರದೇಶ ಮತ್ತು ಸಿಕ್ಕಿಂ ನ ಅಲ್ಲಲ್ಲಿ ಗುಡುಗು ಸಹಿತ ಮಿಂಚು, ಆಲಿಕಲ್ಲು ಬೀಳುವ ಜತೆಗೆ ಬಿರುಸಾಗಿ ಗಾಳಿ ಬೀಸುವ ನಿರೀಕ್ಷೆ [ ಗಾಳಿಯ ವೇಗ ಪ್ರತಿಗಂಟೆಗೆ 40-50 ಕಿಲೋಮೀಟರ್] : ಜಮ್ಮು ಮತ್ತು ಕಾಶ್ಮೀರ, ಲದ್ದಾಖ್, ಗಿಲ್ಗಿಟ್-ಬಲ್ತಿಸ್ಥಾನ್, ಮುಝಫರಾಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಚಂಡಿಘರ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ದೆಹಲಿ ಮತ್ತು ಪಂಜಾಬ್ ನಲ್ಲಿ ಗುಡುಗು ಸಹಿತ ಆಲಿಕಲ್ಲು ಬೀಳುವ, ಭಾರೀ ಗಾಳಿ ಬೀಸುವ ನಿರೀಕ್ಷೆ [ಗಾಳಿಯ ವೇಗ ಪ್ರತಿಗಂಟೆಗೆ 30-40 ಕಿಲೋಮೀಟರ್] : ರಾಜಸ್ಥಾನ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರದ ಅಲ್ಲಲ್ಲಿ ಮಿಂಚು ಮತ್ತು ಗಾಳಿ ಬೀಸುವ ನಿರೀಕ್ಷೆ. [ಗಾಳಿಯ ವೇಗ ಪ್ರತಿಗಂಟೆಗೆ 40-50 ಕಿಲೋಮೀಟರ್] : ಪಶ್ಚಿಮ ಉತ್ತರ ಪ್ರದೇಶ, ಚತ್ತೀಸಘರ್, ಜಾರ್ಖಂಡ್, ಪಶ್ಚಿಮ ಬಂಗಾಳದ ಗಂಗೆಟಿಕ್, ಕೇರಳ ಮತ್ತು ಮಹೆಯ ಅಲ್ಲಲ್ಲಿ ಮಿಂಚು ಮತ್ತು ಗಾಳಿ ಬೀಸುವ ನಿರೀಕ್ಷೆ [ ಗಾಳಿಯ ವೇಗ ಪ್ರತಿಗಂಟೆಗೆ 30-40 ಕಿಲೋಮೀಟರ್] : ವಿದರ್ಭ, ಬಿಹಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಕೊವಟಲ್ ಮತ್ತು ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ, ಕಾರೈಕಲ್ ಮತ್ತು ಲಕ್ಷದ್ವೀಪದ ಅಲ್ಲಲ್ಲಿ ಮಿಂಚು ಕಾಣಿಸಿಕೊಳ್ಳುವ ನಿರೀಕ್ಷೆ

· ಜಮ್ಮು ಮತ್ತು ಕಾಶ್ಮೀರ, ಲದ್ಧಾಖ್, ಗಿಲ್ಗಿಟ್-ಬಲ್ತಿಸ್ಥಾನ್, ಮುಝಫರಾಬಾದ್, ಹಿಮಾಚಲ ಪ್ರದೇಶ, ಕೇರಳ ಮತ್ತು ಮಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ನ ಅಲ್ಲಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ.

· ರಾಜಸ್ಥಾನದ ಅಲ್ಲಲ್ಲಿ ಧೂಳಿನ ಚಂಡಮಾರುತ, ಗುಡುಗು ಸಹಿತ ಭಾರೀ ಗಾಳಿ ಬೀಸುವ ಸಾಧ್ಯತೆ [ಗಾಳಿ ಪ್ರತಿಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಬೀಸುವ ನಿರೀಕ್ಷೆ]

ಏಪ್ರಿಲ್ 18 [ದಿನ 4] ಉತ್ತರಾಖಂಡದ ಅಲ್ಲಲ್ಲಿ ಗುಡುಗು ಸಹಿತ ಆಲಿಕಲ್ಲು, ಮಿಂಚು ಭಾರೀ ಗಾಳಿ ಬೀಸುವ ನಿರೀಕ್ಷೆ [ಗಾಳಿ ಪ್ರತಿಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ] : ಪಶ‍್ಚಿಮ ಬಂಗಾಳದ ಉಪ ಹಿಮಾಲಯ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಝೋರಂ, ತ್ರಿಪುರ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಮಿಂಚು ಮತ್ತು ಭಾರೀ ಗಾಳಿ ಬೀಸುವ ನಿರೀಕ್ಷೆ: ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ] : ಜಮ್ಮು – ಕಾಶ್ಮೀರ, ಲದ್ಧಾಖ್, ಗಿಲ್ಗಿಟ್ – ಬಲ್ತಿಸ್ಥಾನ್, ಮುಝಫರಾಬಾದ್, ಹಿಮಾಚಲ ಪ್ರದೇಶ‍, ಹರಿಯಾಣ, ಚಂಡಿಘರ್, ದೆಹಲಿ, ಪಂಜಾಬ್, ಪೂರ್ವ ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳದ ಗಂಗೆಟಿಕ್, ಕೇರಳ, ಮಹೆಯ ಅಲ್ಲಲ್ಲಿ ಮಿಂಚು ಮತ್ತು ಬಿರುಸಾಗಿ ಗಾಳಿ ಬೀಸುವ ನಿರೀಕ್ಷೆ [ಗಾಳಿ ಪ್ರತಿಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಬೀಸುವ ನಿರೀಕ್ಷೆ] : ಬಿಹಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷ ದ್ವೀಪದ ಅಲ್ಲಲ್ಲಿ ಮಿಂಚು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

· ಜಮ್ಮು – ಕಾಶ್ಮೀರ, ಲದ್ಧಾಖ‍್, ಗಿಲ್ಗಿಟ್-ಬಲ್ತಿಸ್ಥಾನ್, ಮುಝಫರಾಬಾದ್, ಹಿಮಾಚಲ ಪ್ರದೇಶ, ಕೇರಳ ಮತ್ತು ಮಹೆಯ ಅಲ್ಲಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ.

· ಪೂರ್ವ ರಾಜಸ್ಥಾನದ ಅಲ್ಲಲ್ಲಿ ಧೂಳಿನ ಚಂಡಮಾರುತ, ಗುಡುಗು ಸಹಿತ ಬಿರುಸಾಗಿ ಗಾಳಿ ಬೀಸುವ ನಿರೀಕ್ಷೆ [ಗಾಳಿ ಪ್ರತಿಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಬೀಸುವ ನಿರೀಕ್ಷೆ]

· ಏಪ್ರಿಲ್ 19 [ದಿನ 5] ಪಶ್ಚಿಮ ಬಂಗಾಳದ ಉಪ ಹಿಮಾಲಯ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮೇಘಾಲಯ ಮತ್ತು ನಾಗಲ್ಯಾಂಡ್, ಮಣಿಪುರ್, ಮಿಝೋರಂ, ತ್ರಿಪುರದ ಅಲ್ಲಲ್ಲಿ ಗುಡುಗು ಸಹಿತ ಮಿಂಚು ಕಾಣಿಸಿಕೊಳ್ಳುವ ಜತೆಗೆ ಬಿರುಸಾಗಿ ಗಾಳಿ ಬೀಸಲಿದೆ. [ಗಾಳಿ ಪ್ರತಿಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ] : ಪಶ್ಚಿಮ ಬಂಗಾಳದ ಗಂಗೆಟಿಕ್, ಜಾರ್ಖಂಡ್ ನ ಅಲ್ಲಲ್ಲಿ ಮಿಂಚು ಮತ್ತು ಬಿರುಸಾಗಿ ಗಾಳಿ ಬೀಸಲಿದೆ. [ಗಾಳಿಯ ವೇಗ 30-40 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ]: ಅರುಣಾಚಲ ಪ್ರದೇಶ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಕೇರಳ ಹಾಗೂ ಮಹೆಯ ಅಲ್ಲಲ್ಲಿ ಮಿಂಚು ಕಾಣಿಸಿಕೊಳ‍್ಳಲಿದೆ.

[ದಯವಿಟ್ಟು ಗ್ರಾಫಿಕ್ಸ್ ನಲ್ಲಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ]  

ನಿರ್ದಿಷ್ಟ ಮುನ್ಸೂಚನೆ ಮತ್ತು ಎಚ್ಚರಿಕೆಗಾಗಿ ದಯವಿಟ್ಟು ಮೌಸಮ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಕೃಷಿ ಸಲಹೆಗಾಗಿ ಮೇಘಧೂತ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ಮಿಂಚು ಕುರಿತ ಎಚ್ಚರಿಕೆಗಾಗಿ ದಾಮಿನಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಜಿಲ್ಲಾವಾರು ಮಿಂಚು ಕುರಿತ ಎಚ್ಚರಿಕೆಗಾಗಿ ರಾಜ್ಯ ಎಂ.ಸಿ/ಆರ್.ಎಂ.ಸಿ ವೆಬ್ ಸೈಟ್ ಗಳಿಗೆ ಭೇಟಿ ನೀಡಿ.

***



(Release ID: 1712110) Visitor Counter : 145


Read this release in: Hindi , English , Urdu , Tamil , Telugu