ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಪ್ರಮುಖ ಔಷಧ ಪರಿಕರಗಳು [ಕೆ.ಎಸ್.ಎಂಗಳು], ಸಕ್ರಿಯ ಔಷಧೀಯ ಪದಾರ್ಥಗಳ ದೇಶೀಯ ಉತ್ಪಾದನೆ ಉತ್ತೇಜಿಸಲು [ಎಪಿಐ] ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ [ಪಿ.ಎಲ್.ಐ] ಯೋಜನೆಯಡಿ ಅನುಮೋದನೆಗಳು

Posted On: 13 APR 2021 5:29PM by PIB Bengaluru

ದೇಶದಲ್ಲಿ ಪ್ರಮುಖ ಔಷಧ ಪರಿಕರಗಳು [ಕೆ.ಎಎಸ್.ಎಂಗಳು], ಸಕ್ರಿಯ ಔಷಧೀಯ ಪದಾರ್ಥಗಳ ದೇಶೀಯ ಉತ್ಪಾದನೆ ಉತ್ತೇಜಿಸಲು [ಎಪಿಐ] ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ ಯೋಜನೆಯಡಿ 16 ಅರ್ಜಿದಾರರಿಗೆ ಅನುಮೋದನೆ ನೀಡಲಾಗಿದೆ. 16 ಅರ್ಜಿದಾರರಿಂದ ಒಟ್ಟಾರೆ 348.70 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಇದರಿಂದ 3,042 ಉದ್ಯೋಗ ಸೃಷ್ಟಿಯಾಗಲಿದೆ. ಘಟಕಗಳಲ್ಲಿ ವಾಣಿಜ್ಯ ಉತ್ಪಾದನೆ 2023 ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ.

ಉತ್ಪಾದನಾ ಸಾಮರ್ಥ್ಯಕಿಂತ ಕನಿಷ್ಠ ಮತ್ತು ವಾರ್ಷಿಕ ಉದ್ದೇಶಿತ ಉತ್ಪಾದನೆಯ ಗರಿಷ್ಠ ಮತ್ತು ನಿಗದಿತ ಮಾನದಂಡಗಳನ್ನು ಪೂರೈಸುವ ಕೆಳಕಂಡ ಕಂಪೆನಿಗಳ ಅರ್ಜಿಗಳನ್ನು ಅನುಮೋದಿಸಲಾಗಿದೆ.  

(ಗುರಿ ವಿಭಾಗದ ಅಡಿಯಲ್ಲಿ IV):

ಕ್ರಮ ಸಂಖ್ಯೆ

ಅರ್ಹ ಉತ್ಪನ್ನದ ಹೆಸರು

ಅರ್ಜಿದಾರರ ಹೆಸರು

ಉತ್ಪಾದಿತ ಸಾಮರ್ಥ್ಯ

[ಮೆಟ್ರಿಕ್ ಟನ್ ಗಳಲ್ಲಿ]

ಉದ್ದೇಶಿತ ಹೂಡಿಕೆ

 [ಕೋಟಿ ಗಳಲ್ಲಿ]

1

ವಲ್ಸಾರ್ಟನ್

ಹಾನರ್ ಲ್ಯಾಬ್ ಲಿಮಿಟೆಡ್

300

26.88

2

ಲೋಸಾರ್ಟನ್ಅ

ಅನಸಿಯ ಲ್ಯಾಬ್ ಪ್ರೈವೆಟ್

ಲಿಮಿಟೆಡ್

400

29.12

3

 

ಲೇವೋಪ್ಲೋಕ್ಲಾಸೀನ್

ಹೆಟೆರೋ ಡ್ರಗ್ಸ್

ಲಿಮಿಎಟ್

230

9.00

4

ಚೆಮೆಕ್ಸ್ ಗ್ಲೋಬಲ್

115

20.00

5

ಸೂರ್ಯ ಲೈಫ ಸೈನ್ಸ್

ಲಿಮಿಟೆಡ್

230

20.00

6

ಸೆಲ್ಪಾಡಿಯಾಜಿನ್

ಆಂಧ್ರ ಆರ್ಗಾನಿಕ್

ಲಿಮಿಟೆಡ್

360

38.70

7

ಸಿಪ್ರೋಕ್ಲಾಸಿನ್

ಶ್ರೀಪಥಿ ಫಾರ್ಮಸುಟಿಕಲ್ಸ್

ಲಿಮಿಟೆಡ್

900

16.05

8

ಸಿಪ್ರೋಪ್ಲೋಕ್ಸಾಸಿನ್

ಶ್ರೀಪಥಿ ಫಾರ್ಮಸುಟಿಕಲ್ಸ್

ಲಿಮಿಟೆಡ್

300

16.05

9

ಗ್ಲೋಬಲ್ ಫಾರ್ಮ

ಹೆಲ್ತ್ ಪ್ರೈವೈಟ್

ಲಿಮಿಟೆಡ್

200

16.49

10

ಟೆಲ್ಮಿ ಸಾರ್ಟನ್

ಆಂಧ್ರ ಆರ್ಗ್ಯಾನಿಕ್

ಲಿಮಿಟೆಡ್

360

40.00

11

 

ಡೆಕ್ಲೋಫೆನಾಕ್ ಸೋಡಿಯಂ

ಕ್ರಿಯೇಟಿವ್ ಆಕ್ಟಿವ್ಸ್

ಪ್ರೈವೆಟ್ ಲಿಮಿಟೆಡ್

350

20.74

12

ಅಮೋಲಿ ಆರ್ಗ್ಯಾನಿಕ್ಸ್

ಪ್ರೈವೆಟ್ ಲಿಮಿಟೆಡ್

175

6.56

13

ವಪಿ ಕೇರ್ ಫಾರ್ಮಾ

ಪ್ರವೈಟ್ ಲಿಮಿಟೆಡ್

525

21.00

14

ಲೆವೆಟಿರಾಸೆಟಮ್

ಹಾನರ್ ಲ್ಯಾಬ್

ಲಿಮಿಟೆಡ್

840

31.36

15

ಕಾರ್ಬಿಡೋಪಾ

ಹೆಟೆರೋ ಡ್ರಗ್ಸ್

ಲಿಮಿಟೆಡ್

16

18.00

16

ಲೆವೋಡೋಪಾ

ಹೆಟೆರೋ ಡ್ರಗ್ಸ್

ಲಿಮಿಟೆಡ್

40

18.75

 

ನಿರ್ಣಾಯಕ ಬೃಹತ್ ಔಷಧ ಪರಿಕರಗಳ ಉತ್ಪಾದನಾ ವಲಯದಲ್ಲಿ [ಕೆ.ಎಸ್.ಎಂಗಳು] ಸ್ವಾವಲಂಬನೆ ಸಾಧಿಸಿ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸಕ್ರಿಯ ಔಷಧೀಯ ಪದಾರ್ಥಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು [ಎಪಿಐ] ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ [ಪಿ.ಎಲ್.] ಯೋಜನೆಯನ್ನು ಔಷಧ ಇಲಾಖೆ ಅನುಷ್ಠಾನಮಾಡಿದೆದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಹಸಿರು ವಲಯ ಘಟಕಗಳನ್ನು ಮೌಲ್ಯ ವರ್ಧಿತ ಭಾಗವಾಗಿ ನಾಲ್ಕು ವಿವಿಧ ವಲಯಗಳಲ್ಲಿ ಸ್ಥಾಪಿಸಲಾಗುತ್ತಿದೆ. [ ಎರಡು ಹುದುಗುವಿಕೆ ಆಧರಿತ ಕನಿಷ್ಠ - ಶೇ 90 ರಷ್ಟು ಮತ್ತು ಎರಡು ರಾಸಾಯನಿಕ ಸಂಶ್ಲೇಷಣೆ ಆಧರಿತ ಕನಿಷ್ಠ ಶೇ 70 ರಷ್ಟು ] 2020-21 ರಿಂದ 2029 – 30 ಅವಧಿಯಲ್ಲಿ 6,940 ಕೋಟಿ ರೂ ಮೊತ್ತದ 41 ಉತ್ಪನ್ನಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ.

ಒಟ್ಟು 4 ಗುರಿಗಳ ವಲಯಗಳಲ್ಲಿ 36 ಉತ್ಪನ್ನಗಳನ್ನು ಉತ್ಪಾದಿಸಲು 215 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಗುರಿ ನಿಗದಿಯಾಗಿರುವ 1, 2 ಮತ್ತು 3 ವಲಯಗಳ ಅರ್ಜಿಗಳನ್ನು ಪರಿಗಣಿಸಲಾಗಿದೆ. ಅರ್ಹತೆ ಇರುವ ಅರ್ಜಿಗಳಿಗೆ ಹಿಂದಿನ ಉನ್ನತಾಧಿಕಾರ ಸಮಿತಿಯಲ್ಲಿ ಅನುಮೋದನೆ ನೀಡಲಾಗಿತ್ತು.   ಗುರಿ ನಿಗದಿಯಾಗಿರುವ 4 ನೇ ಹಂತದಲ್ಲಿ ಒಟ್ಟು 23 ಉತ್ಪನ್ನಗಳ ಉತ್ಪಾದನೆಗೆ 174 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಸಿಂಥೆಸಿಸ್ ಆಧರಿತ ಇತರೆ ಕೆಮಿಕಲ್ ಉತ್ಪನ್ನಗಳ ಕೆ.ಎಂ.ಎಸ್ ಗಳು/ ಸಕ್ರಿಯ ಔಷಧಗಳ ಉತ್ಪಾದನೆ/ಎಪಿಐಗಳಲ್ಲಿ 11 ಅರ್ಹ ಉತ್ಪನ್ನಗಳ ಉತ್ಪಾದನೆಗಾಗಿ 79 ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲನೆಗೊಳಪಡಿಸಲಾಗಿತ್ತು. ಆರನೇ ಉನ್ನತಾಧಿಕಾರ ಸಮಿತಿಯಲ್ಲಿ 14 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿತ್ತು. ಏಳನೇ ಉನ್ನತಾಧಿಕಾರ ಸಮಿತಿ ಸಭೆ 19.3.2021 ರಂದು ನಡೆದಿತ್ತು. ನಾಲ್ಕನೇ ಗುರಿ ವಲಯದಲ್ಲಿ ಉಳಿದ 95 ಅರ್ಜಿಗಳನ್ನು ಪರಿಗಣಿಸಲಾಗಿತ್ತು.

ಸಕ್ರಿಯ ಔಷಧೀಯ ಪದಾರ್ಥಗಳ ಉತ್ಪಾದನೆ [ಎಪಿಐಗಳು] ಪಿ.ಎಲ್. ಯೋಜನೆಯಡಿ 5,366.35 ಕೋಟಿ ರೂಪಾಯಿ ಹೂಡಿಕೆಯ 215 ಅರ್ಜಿಗಳ ಪೈಕಿ 47 ಅರ್ಜಿಗಳಿಗೆ [ಇದೇ ಸಂದರ್ಭದಲ್ಲಿ ಎರಡು ಯಶಸ್ವಿ ಅರ್ಜಿಗಳನ್ನು ಹಿಂಪಡೆದಿರುವುದನ್ನು ಹೊರತುಪಡಿಸಿ] ಅನುಮೋದನೆ ನೀಡಲಾಗಿದೆ ಘಟಕಗಳ ಸ್ಥಾಪನೆಯಿಂದ ಬೃಹತ್ ಔಷಧಿ ವಲಯಗಳಿಗೆ ಸಂಬಂಧಿಸಿದಂತೆ ದೇಶವನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ವಾವಲಂಬಿ ಮಾಡಲು ಸಹಕಾರಿಯಾಗಲಿದೆ. ಮುಂದಿನ ಆರು ವರ್ಷಗಳ ಅವಧಿಯಲ್ಲಿ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹದ ವಿತರಣೆ ಗರಿಷ್ಠ ಮೊತ್ತ 6000 ಕೋಟಿ ರೂ ನಷ್ಟಿದ್ದು, ಇದಕ್ಕೆ ಬಜೆಟ್ ನಲ್ಲಿ 6,940 ಕೋಟಿ ರೂ ನಿಗದಿಮಾಡಲಾಗಿದೆ.

ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಿತ ಯೋಜನೆಯಡಿ [ಪಿ.ಎಲ್.] ದೇಶೀಯ ವೈದ್ಯಕೀಯ ಪರಿಕರಗಳ ಉತ್ಪಾದನೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಎಲ್ಲಾ 28 ಅರ್ಜಿಗಳನ್ನು ಪರಿಗಣಿಸಿ 14 ಅರ್ಜಿಗಳನ್ನು 873.93 ಕೋಟಿ ರೂ ಹೂಡಿಕೆಗಾಗಿ ಮಂಜೂರು ಮಾಡಲಾಗಿದೆ. ಒಟ್ಟಾರೆ ಬಜೆಟ್ ನಲ್ಲಿ ನಿಗದಿಪಡಿಸಿರುವ 3,420 ಕೋಟಿ ರೂ ಮೊತ್ತದಲ್ಲಿ ಕಂಪೆನಿಗಳು ಗರಿಷ್ಠ 1,694 ಕೋಟಿ ರೂ ಬಳಸಿಕೊಳ್ಳಲಿವೆಈಗಾಗಲೇ ಅನುಮೋದನೆ ಪಡೆಯಲಾಗಿರುವ ಹಣವನ್ನು ಬಳಸಿಕೊಳ್ಳುವ ಉದ್ದೇಶದಿಂದ ಬೃಹತ್ ಔಷಧ ಪದಾರ್ಥಗಳು ಮತ್ತು ವೈದ್ಯಕೀಯ ಸಾಧನಗಳಿಗಾಗಿ ಪಿಎಲ್ಐ ಯೋಜನೆಯಡಿ ಬಹಿರಂಗವಾಗದ ಮತ್ತು ಇದರಲ್ಲಿ ಒಳಗೊಳ್ಳದ ಉತ್ಪನ್ನಗಳ ಉತ್ಪಾದನೆಗಾಗಿ ಅರ್ಜಿಗಳನ್ನು ಮರು ಆಹ್ವಾನಿಸಲು ಸರ್ಕಾರ ನಿರ್ಧರಿಸಿದೆ.

ಭಾರತೀಯ ಔಷಧ ಕೈಗಾರಿಕೆ ಒಟ್ಟಾರೆ ಜಗತ್ತಿನಲ್ಲಿ 3 ನೇ ಅತಿ ದೊಡ್ಡ ರಾಷ್ಟ್ರವಾಗಿರುವುದು ವಿಶೇಷ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದಂತಹ ಆಧುನಿಕ ಆರ್ಥಿಕ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತಕ್ಕೆ ಉನ್ನತ ಮಾರುಕಟ್ಟೆ ಸ್ಥಾನವಿದೆ. ಕೈಗೆಟುಕುವ ದರದಲ್ಲಿ ಔಷಧಗಳನ್ನು ಉತ್ಪಾದಿಸಲು, ಅದರಲ್ಲೂ ನಿರ್ದಿಷ್ಟವಾಗಿ ಜನರಿಕ್ ವಲಯದಲ್ಲಿ ಭಾರತೀಯ ಕೈಗಾರಿಕೆಗಳು ಗುರುತಿಸಿಕೊಂಡಿವೆ. ಏನೇ ಆದರೂ ದೇಶ ಮೂಲ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆಔಷಧಗಳನ್ನು ಉತ್ಪಾದಿಸಲು ಬಳಸುವ  ಬೃಹತ್ ಔಷಧ ಪರಿಕರಗಳು, ಕೆಲವು ನಿರ್ದಿಷ್ಟ ಔಷಧಗಳ ಕ್ಷೇತ್ರದಲ್ಲಿ ಆಮದು ಅವಲಂಬನೆ ಶೇ 80 ರಿಂದ 100ರಷ್ಟಿದೆ.

***



(Release ID: 1711621) Visitor Counter : 307


Read this release in: English , Urdu , Marathi , Hindi