ಭೂವಿಜ್ಞಾನ ಸಚಿವಾಲಯ
ದೆಹಲಿ-ಎನ್‌ಸಿಆರ್ನಲ್ಲಿ ಗಾಳಿಯ ಗುಣಮಟ್ಟವು ಸ್ವಲ್ಪ ಮಟ್ಟಿಗೆ ಸುಧಾರಿಸುವ ಸಾಧ್ಯತೆಯಿದೆ ಆದರೆ, ಏಪ್ರಿಲ್ 13ರಂದು ಸಾಧಾರಣದಿಂದ ಕಳಪೆ ಮಟ್ಟದಲ್ಲಿರಲಿದೆ
ಏಪ್ರಿಲ್ 14 ಮತ್ತು 15 ರಂದು ಗಾಳಿಯ ಗುಣಮಟ್ಟ ಸಾಧಾರಣವಾಗಿರುವ ಸಾಧ್ಯತೆಯಿದೆ
Posted On:
13 APR 2021 4:58PM by PIB Bengaluru
ಭಾರತ ಹವಾಮಾನ ಇಲಾಖೆಯ (ಐಎಂಡಿ) ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರ: ಗಾಳಿ ಮಾದರಿ ಮತ್ತು ವಾತಾಯನ ಸೂಚ್ಯಂಕದ ಮುನ್ಸೂಚನೆ
ದೆಹಲಿಯಲ್ಲಿ ವಾಯು ದ್ರವ್ಯರಾಶಿಯ ಒಳಹರಿವು ಮತ್ತು ವಾತಾಯನ ಗುಣಾಂಕ ಮುನ್ಸೂಚನೆ ಹಾಗೂ ಹವಾಮಾನ ಮುನ್ಸೂಚನೆ ಈ ಕೆಳಗಿನಂತಿದೆ:
ದೆಹಲಿ-ಎನ್‌ಸಿಆರ್ನಲ್ಲಿ ಗಾಳಿಯ ಗುಣಮಟ್ಟವು ಸ್ವಲ್ಪ ಮಟ್ಟಿಗೆ ಸುಧಾರಿಸುವ ಸಾಧ್ಯತೆಯಿದೆ. ಆದರೆ 13.04.2021ರಂದು ಕಳಪೆಯಿಂದ ಸಾಧಾರಣ ಮಟ್ಟದಲ್ಲಿ ಉಳಿಯಲಿದೆ. ಹೆಚ್ಚಿನ ಧೂಳಿನ ಸಾಂದ್ರತೆಯಿಂದಾಗಿ PM10 ಪ್ರಧಾನ ಮಾಲಿನ್ಯಕಾರಕ ಆಗಿರಲಿದೆ. 14.04.2021 ಮತ್ತು 15.04.2021 ರಂದು ಗಾಳಿಯ ಗುಣಮಟ್ಟವು ಸಾಧಾರಣ ಮಟ್ಟದಲ್ಲಿ ಉಳಿಯುವ ಸಾಧ್ಯತೆಯಿದೆ. ಮುಂದಿನ 5 ದಿನಗಳ ಮುನ್ಸೂಚನೆ: ಗಾಳಿಯ ಗುಣಮಟ್ಟವು ಬಹುತೇಕ ಸಾಧಾರಣ ಮಟ್ಟದಲ್ಲಿ ಉಳಿಯುವ ಸಾಧ್ಯತೆಯಿದೆ. 13.04.2021 ರಂದು ಪ್ರಧಾನ ಮೇಲ್ಮೈ ಗಾಳಿಯು ದೆಹಲಿಯ ಈಶಾನ್ಯ ದಿಕ್ಕಿನಿಂದ ಗಂಟೆಗೆ 08ರಿಂದ 15 ಕಿ.ಮೀ ವೇಗದಲ್ಲಿ ಬೀಸಲಿದ್ದು, ತಿಳಿ ಆಕಾಶ ಇರಲಿದೆ. 14.04.2021 ರಂದು ಪ್ರಧಾನ ಮೇಲ್ಮೈ ಗಾಳಿಯು ದೆಹಲಿಯ ಪಶ್ಚಿಮ ದಿಕ್ಕಿನಿಂದ ಗಂಟೆಗೆ 06ರಿಂದ 18 ಕಿ.ಮೀ ವೇಗದಲ್ಲಿ ಬೀಸಲಿದೆ ಮತ್ತು ಭಾಗಶಃ ಮೋಡಕವಿದ ವಾತಾವರಣ ಇರುವ ಸಾಧ್ಯತೆಯಿದೆ. 15.04.2021ರಂದು ದೆಹಲಿಯ ವಾಯವ್ಯ ದಿಕ್ಕಿನಿಂದ ಗಂಟೆಗೆ 05-18 ಕಿ.ಮೀ ವೇಗದಲ್ಲಿ ಪ್ರಧಾನ ಮೇಲ್ಮೈ ಗಾಳಿಯು ಬೀಸಲಿದ್ದು, ಮತ್ತು ಭಾಗಶಃ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ.
ದೆಹಲಿಯಲ್ಲಿ ನಿರೀಕ್ಷಿತ ಗರಿಷ್ಠ ಮಿಶ್ರಣದ ಆಳವು 13.04.2021 ರಂದು ಸುಮಾರು 4800 ಮೀ, 14.04.2021 ರಂದು 5300 ಮೀ ಮತ್ತು 15.04.2021 ರಂದು 5000 ಮೀ. ಇರಲಿದೆ.
ಗರಿಷ್ಠ ವಾತಾಯನ ಸೂಚ್ಯಂಕವು 13.04.2021 ರಂದು ಸುಮಾರು 42000 ಎಂ2/ಸೆಕೆಂಡ್‌ಗೆ; 14.04.2021 ರಂದು 36000 ಎಂ2/ಸೆಕೆಂಡ್‌ಗೆ; ಮತ್ತು 15.04.2021 ರಂದು 31500 ಎಂ2/ಸೆಕೆಂಡ್‌ಗೆ ಇರಲಿದೆ. ಸರಾಸರಿ ಗಾಳಿಯ ವೇಗವು ಗಂಟೆಗೆ 10 ಕಿ.ಮೀ.ಗಿಂತ ಕಡಿಮೆ ಇರಲಿದ್ದು, ಮಲಿನಕಾರಕಗಳನ್ನು ಚದುರಿಸಲು ಅನಾನುಕೂಲಕರವಾಗಿರಲಿದೆ.
ರಾಜಸ್ಥಾನ, ಗುಜರಾತ್, ದೆಹಲಿ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ಭಾಗಗಳಲ್ಲಿ ಹೆಚ್ಚಿನ ಧೂಳಿನ ಸಾಂದ್ರತೆ ಇರುವ ಸಾಧ್ಯತೆಯಿದೆ. ದೆಹಲಿ/ಎನ್‌ಸಿಆರ್ ವಾತಾವರಣದಲ್ಲಿ ಇಂದು ಸಾಗಿಬಂದ ಮತ್ತು ಸ್ಥಳೀಯ ಧೂಳಿನ ಪರಿಣಾಮ ಅಲ್ಪ ಪ್ರಮಾಣದಲ್ಲಿ ಇರುವ ಸಾಧ್ಯತೆಯಿದೆ.
ವಿವರವಾದ ಮುನ್ಸೂಚನೆ ವಿಶ್ಲೇಷಣೆ ಮತ್ತು ಪರಿಶೀಲನೆಗಾಗಿ https://ews.tropmet.res.in ನೋಡಬಹುದು.
(ಗ್ರಾಫಿಕ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ)
ಸ್ಥಳೀಯ ನಿರ್ದಿಷ್ಟ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಗಳಿಗಾಗಿ MAUSAM APP ಡೌನ್‌ಲೋಡ್ ಮಾಡಿಕೊಳ್ಳಿ. ಕೃಷಿ ಸಂಬಂಧಿತ ಹವಾಮಾನ ಮುನ್ಸೂಚನೆ, ಸಲಹೆಗಾಗಿ MEGHDOOT APP ಮತ್ತು ಸಿಡಿಲು, ಮಿಂಚಿನ ಎಚ್ಚರಿಕೆಗಾಗಿ DAMINI APP ಡೌನ್‌ಲೋಡ್ ಮಾಡಿಕೊಳ್ಳಿ. ಜಿಲ್ಲಾವಾರು ಮುನ್ನೆಚ್ಚರಿಕೆಗಳಿಗಾಗಿ MC/RMC ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.
***
(Release ID: 1711619)
Visitor Counter : 184