ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕಿರಿದಾದ ಉತ್ಸರ್ಜನ ರೇಖೆಗಳನ್ನು ಹೊಂದಿರುವ ಗಾಮಾ-ಕಿರಣವನ್ನು ಹೊರಸೂಸುವ ಅತ್ಯಂತ ದೂರದ ಸಕ್ರಿಯ ನೀಹಾರಿಕೆಯನ್ನು ಅನ್ವೇಷಿಸಿದ ವಿಜ್ಞಾನಿಗಳು

Posted On: 13 APR 2021 12:32PM by PIB Bengaluru

ಖಗೋಳಶಾಸ್ತ್ರಜ್ಞರು ಇದುವರೆಗೂ ಕಣ್ಣಿಗೆ ಬೀಳದಂತಹ, ಅತ್ಯಂತ ದೂರದ ಗಾಮಾ-ಕಿರಣ ಹೊರಸೂಸುವ ನೀಹಾರಿಕೆ ಎಂದು ಗುರುತಿಸಲಾದ ಹೊಸ ಸಕ್ರಿಯ ನೀಹಾರಿಕೆಯನ್ನು ಕಂಡುಹಿಡಿದಿದ್ದಾರೆ. ಸುಮಾರು 31 ಶತಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ʻನ್ಯಾರೋ-ಲೈನ್ ಸೆಫರ್ಟ್ 1ʼ (ಎನ್ಎಲ್ಎಸ್1) ನೀಹಾರಿಕೆ ಎಂದು ಕರೆಯಲ್ಪಡುವ ಈ ಸಕ್ರಿಯ ನೀಹಾರಿಕೆಯು, ಇಂತಹ ಗಾಮಾ-ಕಿರಣ ಹೊರಸೂಸುವ ಮತ್ತಷ್ಟು ನೀಹಾರಿಕೆಗಳ ಅನ್ವೇಷಣಗೆ ದಾರಿ ಮಾಡಿದೆ.

ಬ್ರಹ್ಮಾಂಡ ಅಥವಾ ವಿಶ್ವ ವಿಸ್ತರಿಸುತ್ತಿದೆ ಎಂದು 1929ರಲ್ಲಿ ಎಡ್ವಿನ್ ಹಬಲ್ ಕಂಡುಹಿಡಿದಾಗಿನಿಂದಲೂ, ಇತರ ನೀಹಾರಿಕೆಗಳು ನಮ್ಮಿಂದ ದೂರ ಸರಿಯುತ್ತಿವೆ ಎಂಬುದನ್ನು ನಾವು ತಿಳಿದಿದ್ದೇವೆ. ಈ ನೀಹಾರಿಕೆಗಳ ಬೆಳಕು ಲಂಬ (ಅಂದರೆ ಕೆಂಪು) ತರಂಗಾಂತರಗಳಿಗೆ ವರ್ಗಾಯಿಸಲ್ಪಡುತ್ತದೆ ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಅದು ಕೆಂಪು-ಪಲ್ಲಟಗೊಳ್ಳುತ್ತದೆ. ಆರಂಭಿಕ ಬ್ರಹ್ಮಾಂಡವನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಇಂತಹ ಮತ್ತಷ್ಟು ಕೆಂಪು-ಪಲ್ಲಟ ನೀಹಾರಿಕೆಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆ ʻಆರಿಸ್‌ʼನ (ARIES) ವಿಜ್ಞಾನಿಗಳು, ಇತರ ಸಂಸ್ಥೆಗಳ ಸಂಶೋಧಕರ ಸಹಯೋಗದೊಂದಿಗೆ, ʻಸ್ಲೋನ್ ಡಿಜಿಟಲ್ ಸ್ಕೈ ಸಮೀಕ್ಷೆʼ (ಎಸ್‌ಡಿಎಸ್‌ಎಸ್) ಭಾಗವಾಗಿ ಸುಮಾರು 25,000 ಪ್ರಕಾಶಮಾನವಾದ ಸಕ್ರಿಯ ನೀಹಾರಿಕೆಗಳ ಕೇಂದ್ರ ಭಾಗಗಳನ್ನು (ಎಜಿಎನ್) ಅಧ್ಯಯನ ಮಾಡಿದ್ದಾರೆ.  ʻಎಸ್‌ಡಿಎಸ್‌ಎಸ್ʼ ಎಂಬುದು ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಆಕಾಶ ಕಾಯಗಳ ಪ್ರಮುಖ ʻಆಪ್ಟಿಕಲ್ ಇಮೇಜಿಂಗ್ ಮತ್ತು ರೋಹಿತದರ್ಶಕʼ ಸಮೀಕ್ಷೆಯಾಗಿದ್ದು, ಇದರ ಭಾಗವಾಗಿ ನಡೆಸಿದ ಈ ಅಧ್ಯಯನದಲ್ಲಿ ಅತ್ಯಧಿಕ ಕೆಂಪು-ಪಲ್ಲಟ  (1 ಕ್ಕಿಂತ ಹೆಚ್ಚು) ಹೊಂದಿರುವಂತಹ, ಪ್ರಬಲ ಗಾಮಾ ಕಿರಣಗಳನ್ನು ಹೊರಸೂಸುವ ವಿಶಿಷ್ಟ ವಸ್ತು ಬೆಳಕಿಗೆ ಬಂದಿದೆ. ಅವರು ಇದನ್ನು ಗಾಮಾ-ಕಿರಣ  ಹೊರಸೂಸುವ ʻಎನ್‌ಎಲ್ಎಸ್‌1 ನೀಹಾರಿಕೆʼ ಎಂದು ಗುರುತಿಸಿದ್ದಾರೆ. ಇದು ಬಾಹ್ಯಾಕಾಶದಲ್ಲಿ ಅಪರೂಪದ ಘಟಕವಾಗಿದೆ.

ಬೆಳಕಿನ ವೇಗದಲ್ಲಿ ಚಲಿಸುವ ಶಕ್ತಿಯುತ ಸಾಪೇಕ್ಷ ಚಿಮ್ಮುವ ಧಾರೆಗಳು ಅಥವಾ ಬ್ರಹ್ಮಾಂಡದ ಕಣಗಳ ಮೂಲಗಳು ಸಾಮಾನ್ಯವಾಗಿ ʻಎಜಿಎನ್ʼನಿಂದ ಉತ್ಪಾದಿಸಲ್ಪಡುತ್ತವೆ. ದೊಡ್ಡ ಕಪ್ಪು ರಂಧ್ರಗಳು ಇವುಗಳಿಗೆ ಶಕ್ತಿ ತುಂಬುತ್ತವೆ. ದೈತ್ಯ ಅಂಡಾಕಾರದ ನೀಹಾರಿಕೆಗಳಲ್ಲಿ ಇವುಗಳು ನೆಲೆಗೊಂಡಿರುತ್ತವೆ. ಆದಾಗ್ಯೂ, ʻಎನ್ಎಲ್ಎಸ್ನಿಂದ ಗಾಮಾ-ಕಿರಣ ಹೊರಸೂಸುವಿಕೆ ಪತ್ತೆಯಾಗಿರುವುದು ಸಾಪೇಕ್ಷ ಚಿಮ್ಮುವ ಧಾರೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ಕಲ್ಪನೆಗೆ ಸವಾಲು ಹಾಕುತ್ತದೆ. ಏಕೆಂದರೆ ʻಎನ್ಎಲ್ಎಸ್ ಗಳು, ʻಎಜಿಎನ್ʼನ ಒಂದು ವಿಶಿಷ್ಟ ವರ್ಗವಾಗಿದ್ದು, ಅವು ಕಡಿಮೆ ದ್ರವ್ಯರಾಶಿಯ ಕಪ್ಪು ರಂಧ್ರದಿಂದ ಶಕ್ತಿ ಪಡೆಯುತ್ತವೆ ಮತ್ತು ಸುರುಳಿಯಾಕಾರದ ಗ್ಯಾಲಕ್ಸಿಯಲ್ಲಿ ನೆಲೆಗೊಂಡಿರುತ್ತವೆ. ಇಂದಿನವರೆಗೂ, ಗಾಮಾ-ಕಿರಣ ಹೊರಸೂಸುವಿಕೆಯನ್ನು ಸುಮಾರು ಒಂದು ಡಜನ್ ಎನ್ಎಲ್ಎಸ್1 ನೀಹಾರಿಕೆಗಳಲ್ಲಿ ಪತ್ತೆ ಹಚ್ಚಲಾಗಿದ್ದು, ಇವು ನಾಲ್ಕು ದಶಕಗಳ ಹಿಂದೆ ಗುರುತಿಸಲಾದ ʻಎಜಿಎನ್ʼನ ಪ್ರತ್ಯೇಕ ವರ್ಗವೊಂದಕ್ಕೆ ಸೇರಿವೆ. ಅವೆಲ್ಲವೂ ಒಂದಕ್ಕಿಂತ ಕಡಿಮೆ ಕೆಂಪು-ಪಲ್ಲಟಗಳನ್ನು ಹೊಂದಿದ್ದು, ಒಂದಕ್ಕಿಂತ ಹೆಚ್ಚು ಕೆಂಪು-ಪಲ್ಲಟ ಹೊಂದಿರುವ ʻಎನ್ಎಲ್ಎಸ್ಅನ್ನು ಕಂಡುಹಿಡಿಯಲು ಇಲ್ಲಿಯವರೆಗೆ ಯಾವುದೇ ವಿಧಾನ ಇರಲಿಲ್ಲ. ಈ ಆವಿಷ್ಕಾರವು ಆರಂಭಿಕ ಹಂತದ ಬ್ರಹ್ಮಾಂಡದಲ್ಲಿ ಗಾಮಾ-ಕಿರಣ ಹೊರಸೂಸುವ ʻಎನ್ಎಲ್ಎಸ್ನೀಹಾರಿಕೆಗಳನ್ನು ಕಂಡುಹಿಡಿಯಲು ಹೊಸ ಮಾರ್ಗವನ್ನು ತೆರೆದಿಟ್ಟಿದೆ.

ಸಂಶೋಧನೆಗಾಗಿ, ವಿಜ್ಞಾನಿಗಳು ಅಮೆರಿಕದ ಹವಾಯಿಯಲ್ಲಿರುವ ವಿಶ್ವದ ಅತಿದೊಡ್ಡ ನೆಲ-ಆಧಾರಿತ ದೂರದರ್ಶಕಗಳಲ್ಲಿ ಒಂದಾದ 8.2 ಎಂ ʻಸುಬಾರುʼ ದೂರದರ್ಶಕಗಳನ್ನು ಬಳಸಿದ್ದಾರೆ. ಇವುಗಳಿಂದಾಗಿ ಈ ಹಿಂದೆ ತಿಳಿದಿರದಂತಹ, ಅಧಿಕ ಕೆಂಪು-ಪಲ್ಲಟ ಹೊಂದಿರುವ ʻಎನ್ಎಲ್ಎಸ್ನೀಹಾರಿಕೆಗಳನ್ನು ಕಂಡುಹಿಡಿಯಲು ಹೊಸ ವಿಧಾನವನ್ನು ಅನುಸರಿಸಲು ಸಹಾಯಕವಾಯಿತು. ನೀಹಾರಿಕೆಗಳ ರೋಹಿತ ಅಥವಾ ತರಂಗಾಂತರದಲ್ಲಿ ವಿಭಿನ್ನ ಉತ್ಸರ್ಜನ ರೇಖೆಗಳನ್ನು ಹೋಲಿಸುವ ಮೂಲಕ ಇವುಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತು. ಪ್ರಸ್ತುತ ಬ್ರಹ್ಮಾಂಡದ ವಯೋಮಾನ ಸುಮಾರು 13.8 ಶತಕೋಟಿ ವರ್ಷಗಳು. ಆದರೆ, ಬ್ರಹ್ಮಾಂಡ 4.7 ಶತಕೋಟಿ ವರ್ಷಗಳ  ವಯೋಮಾನದಲ್ಲಿದ್ದಾಗ ಗಾಮಾ-ಕಿರಣ ಹೊರಸೂಸುವ ʻಎನ್ಎಲ್ಎಸ್ 1ʼ  ಸೃಷ್ಟಿಗೊಂಡಿದೆ.

ಆರೀಸ್‌(ARIES) ವಿಜ್ಞಾನಿ ಡಾ. ಸುವೇಂದು ರಕ್ಷಿತ್ ಅವರು ತಮ್ಮ ನೇತೃತ್ವದಲ್ಲಿ ವಿವಿಧ ವಿಜ್ಞಾನಿಗಳಾದ ಮಾಲ್ಟೆ ಶ್ರಾಮ್ (ಜಪಾನ್), ಸಿ.ಎಸ್. ಸ್ಟಾಲಿನ್ (ಐಐಎ, ಭಾರತ), ಐ. ತನಕಾ (ಯುಎಸ್ಎ), ವೈದೇಹಿ ಎಸ್. ಪಾಲಿಯಾ (ಆರೀಸ್‌), ಇಂದ್ರಾಣಿ ಪಾಲ್ (ಐಐಎ, ಭಾರತ), ಜರಿ ಕೊಟಿಲೈನೆನ್ (ಫಿನ್ಲ್ಯಾಂಡ್) ಮತ್ತು ಜೇಜಿನ್ ಶಿನ್ (ದಕ್ಷಿಣ ಕೊರಿಯಾ) ಅವರ ಸಹಯೋಗದೊಂದಿಗೆ ನಡೆಸಿದ ಸಂಶೋಧನೆಯನ್ನು ʻಮಂತ್ಲಿ ನೋಟಿಸ್‌ ಆಫ್‌ ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿʼ ನಿಯತಕಾಲಿಕದಲ್ಲಿ ಪ್ರಕಟಿಸಲು ಇತ್ತೀಚೆಗೆ ಸ್ವೀಕರಿಸಲಾಗಿದೆ. ಈ ಸಂಶೋಧನೆಯಿಂದ ಪ್ರೇರೇಪಿತರಾದ ಡಾ. ರಕ್ಷಿತ್ ಮತ್ತು ಅವರ ಸಹ ಅಧ್ಯಯನಕಾರರು ಗಾಮಾ ಕಿರಣ ಉತ್ಸರ್ಜಿಸುವ ʻಎನ್‌ಎಲ್‌ಎಸ್‌1’ ನೀಹಾರಿಕೆಗಳನ್ನು ಮತ್ತಷ್ಟು ಅಧಿಕ ಕೆಂಪು-ಪಲ್ಲಟದಲ್ಲಿ ಗುರುತಿಸುವ ಸಲುವಾಗಿ, ಇತ್ತೀಚೆಗೆ ʻಆರೀಸ್‌ʼನಲ್ಲಿ ನಿಯೋಜಿಸಲಾದ 3.6 ಎಂ ʻದೇವಸ್ಥಲ್ ಆಪ್ಟಿಕಲ್ ಟೆಲಿಸ್ಕೋಪ್ʼನಲ್ಲಿ  (ಡಿಒಟಿ) ʻಟಿಐಎಫ್ಆರ್-ಆರಿಸ್‌ ನಿಯರ್-ಇನ್ಫ್ರಾರೆಡ್ ರೋಹಿತದರ್ಶಕʼ ನೀಡುವ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದಾರೆ.

Description: Macintosh HD:Users:rakshit:WORK:PAPER_DRAFT:finca:TXS1206:TXS1206_mnras_accepted_clean:spectra.pdf

ಚಿತ್ರ 1. ಟಿಎಕ್ಸ್ಎಸ್ 1206+549 ನ ರೋಹಿತ. ಎಡ ಫಲಕ: ಎಸ್‌ಡಿಎಸ್‌ಎಸ್‌ ರೋಹಿತದ ಎಂಜಿ 2 ಲೈನ್ ಫಿಟ್ಟಿಂಗ್‌.  ಎಂಜಿ 2 ಲೈನ್‌ ಫಿಟ್ಟಿಂಗ್‌ನ ಸನಿಹ ದರ್ಶನ ಆವೃತ್ತಿಯನ್ನು ಒಳ ಚಿತ್ರದಲ್ಲಿ ತೋರಿಸಲಾಗಿದೆ. ಬಲ ಫಲಕ: ಸುಬಾರು ರೋಹಿತಕ್ಕೆ ಮಾಡೆಲ್‌ ಫಿಟ್‌.

ಹೆಚ್ಚಿನ ವಿವರಗಳಿಗೆ ಡಾ.ಸುವೇಂದು ರಕ್ಷಿತ್ (suvendu@aries.res.in) ಅವರನ್ನು ಸಂಪರ್ಕಿಸಬಹುದು.

ಪ್ರಕಾಶನ ಲಿಂಕ್‌ಗಳು:

DOI: https://doi.org/10.1093/mnrasl/slab031

arXiv: https://arxiv.org/abs/2103.16521

***



(Release ID: 1711617) Visitor Counter : 245