ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಹಿಮಾಲಯದಲ್ಲಿ ಏಕರೂಪತೆ ಇಲ್ಲದಿರುವುದರಿಂದ ದೊಡ್ಡ ಭೂಕಂಪಗಳು ಘಟಿಸುವ ಮುನ್ಸೂಚನೆ

Posted On: 09 APR 2021 4:50PM by PIB Bengaluru

ಹಿಮಾಲಯವು ಏಕರೂಪವಾಗಿಲ್ಲ, ವಿಭಿನ್ನ ದಿಕ್ಕುಗಳಲ್ಲಿ, ವಿಭಿನ್ನ ಭೌತಿಕ ಮತ್ತು ಯಾಂತ್ರಿಕ ಗುಣಲಕ್ಷಣಗಳನ್ನು ಹೊಂದಿದೆ ಎಂಬುದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅನಿಸೋಟ್ರೋಫಿ ಎಂದು ಕರೆಯಲ್ಪಡುವ ಹರಳಿನಲ್ಲಿನ ಒಂದು ಅಂಶವಾಗಿದೆ, ಅದು ಹಿಮಾಲಯದಲ್ಲಿ ಗಮನಾರ್ಹವಾದ ದೊಡ್ಡ ಭೂಕಂಪಗಳು ಘಟಿಸುವುದಕ್ಕೆ ಕಾರಣವಾಗಬಹುದು.

ಗರ್ವಾಲ್ ಮತ್ತು ಹಿಮಾಚಲಪ್ರದೇಶದವರೆಗಿನ ವ್ಯಾಪ್ತಿಯ ಭಾರತದ ವಾಯುವ್ಯ ಭಾಗ 20ನೇ ಶತಮಾನದ ಆರಂಭದಿಂದ ನಾಲ್ಕು ಅನಾಹುತಕಾರಿ ಮಧ್ಯಮದಿಂದ ಭಾರಿ ಕಂಪನಗಳು ಘಟಿಸಿವೆ, 1905 ಕಂಗ್ರಾ ಭೂಕಂಪ, 1975 ಕಿನ್ನೌರ್ ಭೂಕಂಪ, 1991 ಉತ್ತರಾಕಾಶಿ ಭೂಕಂಪ ಮತ್ತು 1999 ಚಮೂಲಿ ಭೂಕಂಪ. ಭೂಕಂಪನ ಚಟುವಟಿಕೆಗಳು ಭೂಮಿಯ ಮೇಲ್ಮೈನ ವಿರೂಪ ಮತ್ತು ದುರ್ಬಲ ವಲಯಗಳನ್ನು ತಿಳಿಸುತ್ತವೆ ಮತ್ತು ಮೂಲಕ ಟೆಕ್ಟೋನಿಕಲ್ ಅಸ್ಥಿರ ವಲಯಗಳ ಅಡಿಯಲ್ಲಿ ಹಾನಿಕಾರಕ ಅಂಶಗಳ ಬಗ್ಗೆ ಅಳವಾದ ಒಳನೋಟವನ್ನು ಹೊಂದುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸುತ್ತದೆ.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಬರುವ ಡೆಹ್ರಾಡೂನ್ ವಾಡಿಯಾ ಹಿಮಾಲಯನ್ ಭೂ ವಿಜ್ಞಾನ ಕೇಂದ್ರ (ಡಬ್ಯೂಐಎಚ್ ಜಿಸ್ವಾಯತ್ತ ಸಂಸ್ಥೆಯ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ ಖರಗ್ ಪುರ್ (ಐಐಟಿ-ಖರಗ್ ಪುರ್ ) ಸಂಶೋಧಕರಾದ ಡಾ.ಸುಶೀಲ್ ಕುಮಾರ್, ವಿಜ್ಞಾನಿ, ‘ಜಿಡಬ್ಲೂಐಎಚ್ ಜಿಶುಭಸ್ಮಿತ ಬಿಸ್ವಾಲ್, ಸಂಶೋಧಕರು, ಡಬ್ಲೂಐಎಚ್ ಜಿ ಮತ್ತು ಐಐಟಿ ಕೆಜಿಪಿ: ವಿಲಿಯಂ ಮೊಹಂತಿ, ಪ್ರೊಫೆಸರ್ , ಐಐಟಿ ಕೆಜಿಪಿ ಮತ್ತು ಮಹೇಶ್ ಪ್ರಸಾದ್ ಪರಿಜಾ, ಮಾಜಿ ಸಂಶೋಧಕರು, ಡಬ್ಲೂಐಎಚ್ ಜಿ ಅವರು ಡಬ್ಲೂಐಎಚ್ ಜಿ ದತ್ತಾಂಶ ಬಳಿಸಿಕೊಂಡುವಾಯುವ್ಯ ಹಿಮಾಲಯ ಪ್ರದೇಶದ ಹರಳುಗಳಲ್ಲಿ ಒಂದು ವಿಶಿಷ್ಟ ಲಕ್ಷಣ ಇರುವುದನ್ನು ಪತ್ತೆಹಚ್ಚಿದ್ದಾರೆ.

ಪಶ್ಚಿಮ ಹಿಮಾಲಯದಲ್ಲಿ ನಿಯೋಜಿಸಲಾದ 20 ಬ್ರಾಡ್ ಬ್ಯಾಂಡ್ ಕಂಪನ ಕೇಂದ್ರಗಳು ದಾಖಲಿಸಿದ 167 ಕಂಪನ ಅಲೆಗಳನ್ನು ಬಳಸಿ ಜಂಟಿ ಅಧ್ಯಯನವನ್ನು ಕೈಗೊಳ್ಳಲಾಗಿದೆ. ಅದು ನೀಡಿರುವ ಸಲಹೆಯಂತೆ ಅನಿಸೋಟ್ರೋಫಿಗೆ ಮುಖ್ಯ ಕಾರಣವೆಂದರೆ ಇಂಡೋ-ಯುರೇಷಿಯಾ ಘರ್ಷಣೆಯಿಂದ ಉಂಟಾಗುವ ಒತ್ತಡ( 50 ಮಿಲಿಯನ್ ವರ್ಷಗಳಿಂದ ನಡೆಯುತ್ತಿದೆ) ಘರ್ಷಣೆಯಿಂದಾಗಿ ಮೇಲ್ಮೈಗಿಂತ ಹೆಚ್ಚು ಹಾನಿ ಸಂಭವಿಸುತ್ತದೆ. ಇದು ಇತ್ತೀಚೆಗೆ 2020ರಲ್ಲಿಲಿಥೋಸ್ಪಿಯರ್ (ಜಿಎಸ್ ) ಜರ್ನಲ್ ನಲ್ಲಿ ಪ್ರಕಟವಾಗಿದೆ.

ಮುಖ್ಯ ಹಿಮಾಲಯ ಥ್ರಸ್ಟ್ (ಎಂಎಚ್ ಟಿ) ವ್ಯವಸ್ಥೆಯಲ್ಲಿ ಜಿಯೋಮಿತ್ರಿಯಲ್ಲಿ ವ್ಯತ್ಯಯವಾಗುವ ಕಾರಣ ಹಿಮಾಲಯದಲ್ಲಿ ಒತ್ತಡದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಭೂಕಂಪನದ ವೇಳೆ ಹಾನಿಯಾಗುವ ಗಾತ್ರವನ್ನು ನಿಯಂತ್ರಸುತ್ತದೆ. ಹಿಮಾಲಯದಲ್ಲಿ ಏಕರೂಪದ ಭೌತಿಕ ಮತ್ತು ಯಾಂತ್ರಿಕ ಗುಣಲಕ್ಷಣಗಳ ಕೊರತೆ ಹಿನ್ನೆಲೆಯಲ್ಲಿ ಹಿಮಾಲಯದ ಪರ್ವತ ರಚನೆಯಲ್ಲಿ ತೊಡಗಿರುವ ಹಿಮಾಲಯ-ಟಿಬೆಟ್ ಭಾಗದಲ್ಲಿ ನಡೆಯುತ್ತಿರುವ ಹಾನಿಯ ಬಗ್ಗೆ ಹೊಸ ದೃಷ್ಟಿಕೋನಗಳನ್ನು ಅನ್ವೇಷಿಸಲು ಸಹಾಯಕವಾಗುತ್ತವೆ

 

  

ನಕ್ಷೆ: ನಕ್ಷೆಯಲ್ಲಿ ವೇಗದ ದೃವೀಕರಣ ಅಜಿಮತ್ಸ್  (Φ)ಮತ್ತು ಸಮಯ ವಿಳಂಬ (δt)ವನ್ನು ಹಿಂದಿನ ಅಧ್ಯಯನಗಳಿಂದ ನೋಡಬಹುದಾಗಿದೆ ಮತ್ತು ನೀಲಿ ಹಾಗೂ ಕೆಂಪು ಸಂಕೇತಗಳು ಸರಾಸರಿ ಶರ್ ವೇವ್ ಸ್ಪ್ಲಿಟಿಂಗ್ ಫಲಿತಾಂಶಗಳನ್ನು ಅಧ್ಯಯನದಿಂದ ಕಾಣಬಹುದು. ಹಿಂದಿನ ಸ್ಪ್ಲಿಟಿಂಗ್ ಅಳತೆ ಯನ್ನು ಇಲ್ಲಿಂದ  http://splitting.gm.univmontp2. fr/DB ಪಡೆಯಬಹುದು. ಅಧ್ಯಯನ ಪ್ರದೇಶವನ್ನು ಆಯತಾಕಾರದಲ್ಲಿ ತೋರಿಸಲಾಗಿದೆ. ಚಿತ್ರ-2ರಲ್ಲಿ ಉಲ್ಲೇಖಿಸಿರುವಂತೆ ಬೌಗೋಳಿಕ ಗಡಿಗಳು ಇದರಲ್ಲಿ ಸೇರಿವೆ, ಬಿಎನ್ ಎಸ್ (ಬಾನ್ ಗೂಂಗ್- ನುಜಿಯಾಂಗ್ ಸುಚರ್ ವಲಯ), ಜೆಆರ್ ಎಸ್ (ಜಿನ್ಷಾ- ರಿವರ್ ಸುಚರ್ ), ಎಟಿಎಫ್ (ಅಲ್ ತ್ಯಾನ್ ತಾಗ್ ಫಾಲ್ಟ್ ), ಕೆಎಫ್ (ಕರಕೋರಂ ಫಾಲ್ಟ್ ), ಕ್ಯೂಬಿಎಫ್ ( ಖೈದಂ ಬಸಿನ್ ಫಾಲ್ಟ್ ), ಐಜಿಪಿ: ಇಂಡೋ-ಗ್ಯಾಂಜಿಟಿಕ್ ಫ್ಲೇನ್, ಎಸ್ ಎಚ್ : ಸಿವಾಲಿಕ್ ಹಿಮಾಲಯ, ಎಲ್ ಎಚ್: ಲೆಸರ್ ಹಿಮಾಲಯ, ಎಚ್ ಎಚ್: ಹೈಯರ್ ಹಿಮಾಲಯ ಟಿಎಚ್; ಟೆತೈಯಸ್ ಎಲ್ ಡಿಎಚ್; ಲಡಾಖ್ ಹಿಮಾಲಯ, ಐಎಸ್ ಸಿ: ಇಂಡಿಯನ್ ಸಬ್ ಕಾಂಟಿನೆಂಟ್, ಡಿವಿಪಿ: ಡೆಕ್ಕನ್ ವೋಲ್ಕ್ಯಾನಿಕ್ ಪ್ರಾವಿನ್ಸ್, ಇಡಿಸಿ: ಇರ್ಸ್ಟನ್ ಘಾಟ್ ಮೊಬೈಲ್  ಬೆಲ್ಟ್, ಡಬ್ಲೂಟಿ: ವೆರ್ಸ್ಟನ್ ಟಿಬಿಟ್, ಸಿಟಿ: ಸೆಂಟ್ರಲ್ ಟಿಬೆಟ್, ಇಟಿ: ಇರ್ಸ್ಟನ್ ಟಿಬೆಟ್, ಎಸ್ ಟಿ: ಸದರನ್ ಟಿಬೆಟ್; ಎಚ್ ಸಿ ಝಡ್: ಹಿಮಾಲಯನ್ ಕೊಲ್ಯೂಷನ್ ಝೋನ್, ಸಿಎ : ಸೆಂಟ್ರಲ್ ಏಷ್ಯಾ, ಎನ್ ಇಐನಾರ್ತ್ಈಸ್ಟ್ ಇಂಡಿಯಾ. ಘನ ವಸ್ತು ತುಂಬಿದ ವರ್ತುಲ ಮತ್ತು ಪಟ್ಟಿಯ ಉದ್ದವು ಕ್ರಮವಾಗಿ ನಿಲ್ದಾಣಗಳ ಸ್ಥಳ ಮತ್ತು ವಿಳಂಬದ ಸಮಯವನ್ನು ಪ್ರತಿನಿಧಿಸುತ್ತದೆ

ಪಬ್ಲಿಕೇಷನ್ ಲಿಂಗ್ ಗೆ ಇಲ್ಲಿ ಕ್ಲಿಕ್ ಮಾಡಿ: https://doi.org/10.2113/2020/8856812.

ಹೆಚ್ಚಿನ ವಿವರಗಳಿಗೆ ಡಾ.ಸುಶೀಲ್ ಕುಮಾರ್ ಮುಖ್ಯಸ್ಥರು, ಜಿಯೋಫಿಸಿಕ್ಸ್, ಡಬ್ಲೂಐಎಚ್ ಜಿ, ಡೆಹ್ರಾಡೂನ್,  (sushil.rohella[at]gmail[dot]com, 9634223377) ವಿಳಾಸದಲ್ಲಿ ಸಂಪರ್ಕಿಸಬಹುದು.

***



(Release ID: 1711113) Visitor Counter : 201


Read this release in: English , Urdu , Hindi , Punjabi