ಭೂವಿಜ್ಞಾನ ಸಚಿವಾಲಯ

ಗಾಳಿಯ ಮಾದರಿ ಮತ್ತು ವಾತಾಯನ ಸೂಚ್ಯಂಕದ ಮುನ್ಸೂಚನೆ


ದೆಹಲಿ-ಎನ್‌.ಸಿ.ಆರ್‌.ನಲ್ಲಿ ವಾಯು ಗುಣಮಟ್ಟ ಮಧ್ಯಮ ಪ್ರವರ್ಗದಲ್ಲಿ ಉಳಿಯುವ ಸಾಧ್ಯತೆ

प्रविष्टि तिथि: 01 APR 2021 2:55PM by PIB Bengaluru

ಭಾರತೀಯ ಹವಾಮಾನ ಇಲಾಖೆ (.ಎಂ.ಡಿ.) ಪರಿಸರ ನಿಗಾ ಮತ್ತು ಸಂಶೋಧನಾ ಕೇಂದ್ರ (.ಎಂ.ಆರ್.ಸಿ.) ಪ್ರಕಾರ:

ದೆಹಲಿಯಲ್ಲಿ ವಾಯು ಸಮೂಹ ಒಳಹರಿವು ಮುನ್ಸೂಚನೆ ಜೊತೆಗೆ ವಾತಾಯನ ಗುಣಾಂಕ ಮತ್ತು ಹವಾಮಾನ ಮುನ್ಸೂಚನೆ ಕೆಳಕಂಡಂತಿದೆ:

1.   ದೆಹಲಿ-ಎನ್‌.ಸಿ.ಆರ್. ವಾಯು ಗುಣಮಟ್ಟವು 01.04.2021 ಮತ್ತು 02.04.2021 ರಂದು ಮಧ್ಯಮ ವಿಭಾಗದಲ್ಲಿ ಉಳಿಯುವ ಸಾಧ್ಯತೆಯಿದೆ. ಏಪ್ರಿಲ್ 1 ಮತ್ತು 2 ಸಮಯದಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸಲಿದ್ದು, ನೆರೆಯ ಪ್ರದೇಶದಿಂದ ಧೂಳನ್ನು ಹೊತ್ತು ತರುವ ಸಾಧ್ಯತೆಯಿದೆ. ಪ್ರಧಾನ ಮಾಲಿನ್ಯಕಾರಕವು ಪಿಎಂ10 ಆಗಿರುತ್ತದೆ. 03.04.2021ರಂದು ವಾಯು ಗುಣಮಟ್ಟ ಸಾಮಾನ್ಯದಿಂದಕಳಪೆ ಪ್ರವರ್ಗದಲ್ಲಿರುವ ಸಾಧ್ಯತೆ ಇದೆ. ಮುಂದಿನ 5 ದಿನಗಳ ಮುನ್ನೋಟ ಇಂತಿದೆ: ವಾಯು ಗುಣಮಟ್ಟವು ಬಹುತೇಕ ಸಾಮಾನ್ಯದಿಂದ ಕಳಪೆಯಾಗಿರಲಿದೆ.

2.   ದೆಹಲಿಯ ವಾಯವ್ಯ ದಿಕ್ಕಿನಿಂದ ಪ್ರತಿ ಗಂಟೆಗೆ16-35 ಕಿ.ಮೀ. ವೇಗದಲ್ಲಿ ಮೇಲ್ಮೈಗಾಳಿ ಬೀಸುವ ಸಾಧ್ಯತೆಯಿದ್ದು, 01.04.2021ರಂದು ಹಗಲಲ್ಲಿ ಬಹುತೇಕ ಶುಭ್ರ ಆಕಾಶವಿದ್ದು, (35-45 ಕಿ.ಮೀ. ಪ್ರತಿಗಂಟೆಯ ವೇಗದಲ್ಲಿ) ಬಲವಾದ ಧೂಳು ಮಿಶ್ರಿತ ಗಾಳಿ ಬೀಸುವ ಸಾಧ್ಯತೆ ಇದೆ. 02.04.2021ರಂದು ವಾಯವ್ಯ ದಿಕ್ಕಿನಿಂದ ಮೇಲ್ಮೈ ಗಾಳಿ10-20 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಬೀಸಲಿದ್ದು, ಶುಭ್ರ ಆಕಾಶವಿರುತ್ತದೆ ಮತ್ತು ಹಗಲಿನ ವೇಳೆ ಬಲವಾದ ಗಾಳಿ (ಪ್ರತಿ ಗಂಟೆಗೆ 20-30 ಕಿ.ಮೀ) ಬೀಸಲಿದೆ03.04.2021ರಂದು ಬಹುತೇಕ ಶುಭ್ರ ಆಕಾಶವಿದ್ದು, ದೆಹಲಿಯ ವಾಯವ್ಯ ದಿಕ್ಕಿನಿಂದ 5-12 ಕಿಮೀ ಪ್ರತಿ ಗಂಟೆ ವೇಗದಲ್ಲಿ ಗಾಳಿ ಬೀಸಲಿದೆ,

3.   ಗರಿಷ್ಠ ಮಿಶ್ರಿತ ಆಳದ ಅಂದಾಜು, ದೆಹಲಿಯಲ್ಲಿ 01.04.2021 ರಂದು 2700 ಮೀ, 02.04.2021 ರಂದು 3100 ಮೀ ಮತ್ತು 03.04.2021 ರಂದು 3400 ಮೀ. ಆಗಿರಲಿದೆ. ಗರಿಷ್ಠ ವಾತಾಯನ ಸೂಚ್ಯಂಕವು  01.04.2021, 34,000 ಎಂ.2/ಎಸ್, 02.04.2021   ರಂದು 30000 ಎಂ2/ಎಸ್  ಮತ್ತು 03.04.2021ರಂದು 27000 ಎಂ2/ಎಸ್. ಆಗಿರುತ್ತದೆ. ವಾತಾಯನ ಸೂಚ್ಯಂಕವು ಪ್ರತಿ ಗಂಟೆಗೆ 10 ಕಿ.ಮೀ.ಗಿಂತ ಕಡಿಮೆ ವೇಗದ ಸರಾಸರಿ ವೇಗದ ಗಾಳಿಯೊಂದಿಗೆ 6000 ಎಂ2/ಎಸ್ ಗಿಂತ ಕಡಿಮೆ ಇರಲಿದ್ದು, ಮಾಲಿನ್ಯಕಾರಕಗಳ ಪ್ರಸರಣಕ್ಕೆ ಪ್ರತಿಕೂಲವಾಗಿದೆ.

4.   1 ಮತ್ತು 2ನೇ ಏಪ್ರಿಲ್ ನಂದು ದೆಹಲಿ/ಎನ್.ಸಿ.ಆರ್. ನೆರೆಯ ಪ್ರದೇಶಗಳಿಂದ ಧೂಳಿನ ಪ್ರಸರಣವಾಗುವ ನಿರೀಕ್ಷೆ ಇದೆ.

5.   ಸವಿವರವಾದ ಮುನ್ಸೂಚನೆಯ ವಿಶ್ಲೇಷಣೆ ಮತ್ತು ಪರಿಶೀಲನೆಯನ್ನು  https://ews.tropmet.res.in ನಲ್ಲಿ ನೋಡಬಹುದು.

ದೆಹಲಿಯಲ್ಲಿ ವಾಯು ಸಮೂಹ ಒಳಹರಿವು ಮತ್ತು ವಾತಾಯನ ಸೂಚ್ಯಂಕವನ್ನು ಲಗತ್ತಿಸಲಾಗಿದೆ.

 (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)

ಸ್ಥಳ ನಿರ್ದಿಷ್ಟ ಮುನ್ನೆಚ್ಚರಿಕೆ ಮತ್ತು ಹವಾಮಾನ ಮುನ್ಸೂಚನೆಗಳಿಗಾಗಿ ಮೌಸಮ್ ಆಪ್ MAUSAM APP  ಕೃಷಿ ಸಂಬಂಧಿತ ಮುನ್ಸೂಚನೆಗಳಿಗೆ ಮೇಘದೂತ್ ಆಪ್ MEGHDOOT APP  ಮತ್ತು ಮಿಂಚು, ಸಿಡಿಲಿನ ಮುನ್ನೆಚ್ಚರಿಕೆಗಾಗಿ ದಾಮಿನಿ ಆಪ್ DAMINI APP  ಡೌನ್ ಲೋಡ್ ಮಾಡಿಕೊಳ್ಳಿಜಿಲ್ಲಾವಾರು ಹವಾಮಾನ ಮುನ್ಸೂಚನೆಗಳಿಗಾಗಿ ಎಂ.ಸಿ /ಆರ್.ಎಂ.ಸಿ. ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

***


(रिलीज़ आईडी: 1708999) आगंतुक पटल : 302
इस विज्ञप्ति को इन भाषाओं में पढ़ें: English , Urdu , हिन्दी , Punjabi