ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ರಾಮಚಂದ್ರ ಮಿಷನ್‌ನ 75ನೇ ವರ್ಷಾಚರಣೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
Posted On:
16 FEB 2021 5:33PM by PIB Bengaluru
ನಮಸ್ಕಾರ,
ಶ್ರೀ ರಾಮ ಚಂದ್ರ ಮಿಷನ್ 75 ವರ್ಷಗಳು ಪೂರ್ಣಗೊಳಿಸಿದ ಈ ಸಂದರ್ಭದಲ್ಲಿ ನಿಮಗೆಲ್ಲರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳು! 75 ವರ್ಷಗಳ ಈ ಮೈಲಿಗಲ್ಲು ರಾಷ್ಟ್ರ ನಿರ್ಮಾಣ ಮತ್ತು ಸಮಾಜವನ್ನು ದೃಢವಾಗಿ ಮುನ್ನಡೆಸುವಲ್ಲಿ ಬಹಳ ಮುಖ್ಯವಾಗಿದೆ. ಈ ಪಯಣವು ಇಂದು 150ಕ್ಕೂ ಹೆಚ್ಚು ದೇಶಗಳಿಗೆ ಹರಡಿರುವ ಗುರಿಯ ಬಗೆಗಿನ ನಿಮ್ಮ ಸಮರ್ಪಣೆಯ ಫಲಿತಾಂಶವಾಗಿದೆ. ಇಂದು ನಾವು ಗುರು ರಾಮ್ ಚಂದ್ರ ಜಿ ಅವರ ಜನ್ಮ ದಿನಾಚರಣೆಯನ್ನು ಬಸಂತ್ ಪಂಚಮಿಯ ಶುಭ ಸಂದರ್ಭದಲ್ಲಿ ಆಚರಿಸುತ್ತಿದ್ದೇವೆ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಯೊಂದಿಗೆ, ನಾನು ಬಾಬುಜಿಯವರಿಗೆ ಗೌರವಯುತ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇನೆ. ನಿಮ್ಮ ಅದ್ಭುತ ಸೇವೆಯ ಪ್ರಯಾಣಕ್ಕೆ ಮತ್ತು ನಿಮ್ಮ ಹೊಸ ಪ್ರಧಾನ ಕಚೇರಿ ಕಾನ್ಹಾ ಶಾಂತಿ ವನಮ್ ಗಾಗಿ ನಾನು ನಿಮಗೆ ಅಭಿನಂದಿಸುತ್ತೇನೆ. ಕನ್ಹಾ ಶಾಂತಿವನಮ್ ಅನ್ನು ನಿರ್ಮಿಸಿದ ಸ್ಥಳವು ಹಿಂದೆ ಬಂಜರು ಭೂಮಿಯಾಗಿತ್ತು ಎಂದು ನನಗೆ ತಿಳಿಸಲಾಯಿತು. ನಿಮ್ಮ ಉತ್ಸಾಹ ಮತ್ತು ಸಮರ್ಪಣೆ ಈ ಬಂಜರು ಭೂಮಿಯನ್ನು ಕನ್ಹಾ ಶಾಂತಿ ವನಮ್ಮಾಆಗಿ ಪರಿವರ್ತಿಸಿದೆ. ಈ ಶಾಂತಿ ವನಮ್ ಬಾಬುಜಿಯವರ ಬೋಧನೆಗಳ ಸಾಕ್ಷಿಯಾಗಿದೆ
ಸ್ನೇಹಿತರೇ,
ನೀವೆಲ್ಲರೂ ಬಾಬುಜಿಯವರಿಂದ ಸ್ಫೂರ್ತಿಯನ್ನು ನಿಕಟವಾಗಿ ಅನುಭವಿಸಿದ್ದೀರಿ. ಜೀವನದ ಮಹತ್ವವನ್ನು ಸಾಧಿಸಲು ಅವರು ಮಾಡಿದ ಪ್ರಯೋಗಗಳು ಮತ್ತು ಮನಶ್ಶಾಂತಿ ಸಾಧಿಸಲು ಅವರು ಮಾಡಿದ ಪ್ರಯತ್ನಗಳು ನಮ್ಮೆಲ್ಲರಿಗೂ ಉತ್ತಮ ಪ್ರೇರಣೆಯಾಗಿದೆ. ಈ 20-20 ಜಗತ್ತಿನಲ್ಲಿ, ವೇಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜನರಿಗೆ ಸಮಯದ ಅಭಾವವಿದೆ. ಕ್ರಿಯಾತ್ಮಕ ಆಧ್ಯಾತ್ಮಿಕತೆಯ ಮೂಲಕ ಜನರನ್ನು ಸುಲಭ ರೀತಿಯಲ್ಲಿ ಆರೋಗ್ಯವಾಗಿಡುವ ಮೂಲಕ ನೀವು ಉತ್ತಮ ಕೊಡುಗೆ ನೀಡುತ್ತಿರುವಿರಿ. ನಿಮ್ಮ ಸಾವಿರಾರು ಸ್ವಯಂಸೇವಕರು ಮತ್ತು ತರಬೇತುದಾರರು ಯೋಗ ಮತ್ತು ಧ್ಯಾನದ ಕೌಶಲ್ಯವನ್ನು ಇಡೀ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಇದು ಮಾನವೀಯತೆಗೆ ಸಲ್ಲಿಸುತ್ತಿರುವ ದೊಡ್ಡ ಸೇವೆಯಾಗಿದೆ. ನಿಮ್ಮ ತರಬೇತುದಾರರು ಮತ್ತು ಸ್ವಯಂಸೇವಕರು ಜ್ಞಾನದ ನಿಜವಾದ ಅರ್ಥಕ್ಕೆ ರೂಪವನ್ನು ಕೊಟ್ಟಿದ್ದಾರೆ. ನಮ್ಮ ಕಮಲೇಶ್ ಜಿ ಅವರನ್ನು ಧ್ಯಾನ ಮತ್ತು ಆಧ್ಯಾತ್ಮಿಕ ಜಗತ್ತಿನಲ್ಲಿ 'ದಾ ಜಿ' ಎಂದು ಕರೆಯಲಾಗುತ್ತದೆ. ಸಹೋದರ ಕಮಲೇಶ್ ಜಿ ಬಗ್ಗೆ ನಾನು ಏನು ಹೇಳಬಲ್ಲೆ ಎಂದರೆ ಅವನು ಪಶ್ಚಿಮ ಮತ್ತು ಭಾರತದ ಗುಣಗಳ ಸಂಗಮ. ನಿಮ್ಮ ಆಧ್ಯಾತ್ಮಿಕ ನಾಯಕತ್ವದಲ್ಲಿ, ಶ್ರೀ ರಾಮ್ ಚಂದ್ರ ಮಿಷನ್ ಇಡೀ ಜಗತ್ತನ್ನು, ವಿಶೇಷವಾಗಿ ಯುವಕರನ್ನು ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಮನಸ್ಸಿನತ್ತ ಪ್ರೇರೇಪಿಸುತ್ತಿದೆ.
ಸ್ನೇಹಿತರೇ,
ಇಂದು, ಜೀವನಶೈಲಿಯ ರೋಗಗಳಿಂದ ಸಾಂಕ್ರಾಮಿಕ ರೋಗಗಳಿಗೆ ಮತ್ತು ಖಿನ್ನತೆಯಿಂದ ಭಯೋತ್ಪಾದನೆಯವರೆಗೆ ಜಗತ್ತು ಸಂಕಷ್ಟಗಳಿಗೆ ಸಿಲುಕಿದೆ. ಅಂತಹ ಪರಿಸ್ಥಿತಿಯಲ್ಲಿ, ಸಹಜ ಮಾರ್ಗ, ಹಾರ್ಟ್ ಫುಲ್ನೆಸ್ ಕಾರ್ಯಕ್ರಮ ಮತ್ತು ಯೋಗವು ಪ್ರಪಂಚದ ಭರವಸೆಯ ಕಿರಣದಂತೆ ಆಗಿವೆ. ಇತ್ತೀಚಿನ ದಿನಗಳಲ್ಲಿ, ಸ್ವಲ್ಪ ಮುಂಜಾಗ್ರತೆಯು ದೊಡ್ಡ ಬಿಕ್ಕಟ್ಟುಗಳನ್ನು ನಿವಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಇಡೀ ಜಗತ್ತು ಒಂದು ಉದಾಹರಣೆಯನ್ನು ಕಂಡಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ 130 ಕೋಟಿ ಭಾರತೀಯರ ಅರಿವು ಜಗತ್ತಿಗೆ ಹೇಗೆ ಒಂದು ಉದಾಹರಣೆಯಾಯಿತು ಎಂಬುದಕ್ಕೂ ನಾವು ಸಾಕ್ಷಿಯಾಗಿದ್ದೇವೆ. ಈ ಹೋರಾಟದಲ್ಲಿ, ನಮ್ಮ ಮನೆಗಳಲ್ಲಿ ಕಲಿಸಿದ ವಿಷಯಗಳು, ಅಭ್ಯಾಸಗಳು ಮತ್ತು ಯೋಗ-ಆಯುರ್ವೇದ ಸಹ ಬಹಳ ದೊಡ್ಡ ಪಾತ್ರವನ್ನು ವಹಿಸಿವೆ. ಸಾಂಕ್ರಾಮಿಕ ರೋಗವು ಹರಡಿದಾಗ ಇಡೀ ಜಗತ್ತು ಭಾರತದ ಬಗ್ಗೆ ಚಿಂತೆ ಮಾಡಿತ್ತು. ಆದರೆ ಇಂದು, ಕೊರೊನಾ ವಿರುದ್ಧದ ಭಾರತದ ಹೋರಾಟವು ಜಗತ್ತಿಗೆ ಸ್ಪೂರ್ತಿದಾಯಕವಾಗಿದೆ.
ಸ್ನೇಹಿತರೇ,
ಜಾಗತಿಕ ಒಳಿತನ್ನು ಹೆಚ್ಚಿಸಲು ಭಾರತ ಮಾನವ ಕೇಂದ್ರಿತ ವಿಧಾನವನ್ನು ಅನುಸರಿಸುತ್ತಿದೆ. ಈ ಮಾನವ ಕೇಂದ್ರಿತ ವಿಧಾನವು ಈ ಆರೋಗ್ಯಕರ ಸಮತೋಲನವನ್ನು ಆಧರಿಸಿದೆ: ಕಲ್ಯಾಣ, ಯೋಗಕ್ಷೇಮ, ಸಂಪತ್ತು. ಕಳೆದ ಆರು ವರ್ಷಗಳಲ್ಲಿ, ವಿಶ್ವದ ಅತಿದೊಡ್ಡ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಭಾರತ ಕೈಗೆತ್ತಿಕೊಂಡಿದೆ. ಈ ಪ್ರಯತ್ನಗಳು ಬಡವರಿಗೆ ಘನತೆ ಮತ್ತು ಅವಕಾಶವನ್ನು ನೀಡುವ ಗುರಿಯನ್ನು ಹೊಂದಿವೆ. ಸಾರ್ವತ್ರಿಕ ನೈರ್ಮಲ್ಯ ವ್ಯಾಪ್ತಿಯಿಂದ ಹಿಡಿದು ಸಮಾಜ ಕಲ್ಯಾಣ ಯೋಜನೆಗಳವರೆಗೆ, ಹೊಗೆಮುಕ್ತ ಅಡಿಗೆಮನೆಗಳಿಂದ ಹಿಡಿದು , ಬ್ಯಾಂಕಿನ ಸೇವೆ ಲಭ್ಯವಿಲ್ಲದವರಿಗೆ ಬ್ಯಾಂಕಿನ ಸೇವೆ ಒದಗಿಸುವದು, ತಂತ್ರಜ್ಞಾನದ ತಲುಪುವಿಕೆ, ಎಲ್ಲರಿಗೂ ವಸತಿ. ಭಾರತದ ಸಾರ್ವಜನಿಕ ಕಲ್ಯಾಣ ಯೋಜನೆಗಳು ಅನೇಕ ಜನರನ್ನು ಮುಟ್ಟಿದೆ. ಜಾಗತಿಕ ಸಾಂಕ್ರಾಮಿಕ ರೋಗವು ಬರುವ ಮೊದಲೇ, ನಮ್ಮ ರಾಷ್ಟ್ರವು ಸ್ವಾಸ್ಥ್ಯದತ್ತ ಗಮನವನ್ನು ಹೆಚ್ಚಿಸಿತ್ತು.
ಸ್ನೇಹಿತರೇ,
ಸ್ವಾಸ್ಥ್ಯದ ನಮ್ಮ ಕಲ್ಪನೆಯು ಕೇವಲ ರೋಗವನ್ನು ಗುಣಪಡಿಸುವುದಕ್ಕಿಂತಲೂ ಮೀರಿದೆ. ಮುಂಜಾಗರೂಕತೆಯ ಆರೋಗ್ಯ ರಕ್ಷಣೆಯ ಬಗ್ಗೆ ವ್ಯಾಪಕವಾದ ಕಾರ್ಯಗಳು ನಡೆದಿವೆ. ಭಾರತದ ಪ್ರಮುಖ ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ್ ಅಮೆರಿಕ ಮತ್ತು ಅನೇಕ ಯುರೋಪಿಯನ್ ರಾಷ್ಟ್ರಗಳ ಜನಸಂಖ್ಯೆಗಿಂತ ಹೆಚ್ಚಿನ ಫಲಾನುಭವಿಗಳನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ. ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಯೋಗದ ಜನಪ್ರಿಯತೆ ನಿಮ್ಮೆಲ್ಲರಿಗೂ ತಿಳಿದಿದೆ. ಈ ಪ್ರಾಮುಖ್ಯತೆಯು ನಮ್ಮ ಯುವಜನರು ಸಧೃಡವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಮತ್ತು, ಅವರು ಜೀವನ ಶೈಲಿಯ ಸಂಬಂಧಿತ ಕಾಯಿಲೆಗಳನ್ನು ಎದುರಿಸಬೇಕಾಗಿಲ್ಲ. ಕೋವಿಡ್-19ನಿಂದಾಗಿ ಜಗತ್ತಿಗೆ ಔಷಧಿಗಳು ಬೇಕಾದಾಗ, ಅವುಗಳನ್ನು ಎಲ್ಲೆಡೆ ಕಳುಹಿಸಿರುವುದು ಭಾರತದ ಹೆಮ್ಮೆಯ ವಿಷಯವಾಗಿದೆ. ಈಗ, ಜಾಗತಿಕ ವ್ಯಾಕ್ಸಿನೇಷನ್‌ನಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ. ಆರೋಗ್ಯಕ್ಕಾಗಿ ಹೊಂದಿರುವ ನಮ್ಮ ದೃಷ್ಟಿಯು ಸ್ವದೇಶದಷ್ಟೇ ಜಾಗತಿಕವಾಗಿದೆ.
ಸ್ನೇಹಿತರೇ,
ಕೋವಿಡ್-19 ರ ನಂತರ ಪ್ರಪಂಚವು ಆರೋಗ್ಯ ಮತ್ತು ಸ್ವಾಸ್ಥ್ಯ ವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ಈ ವಿಷಯದಲ್ಲಿ ಭಾರತದಿಂದ ಸಾಕಷ್ಟು ಕೊಡುಗೆಗಳಿವೆ. ಭಾರತವನ್ನು ಆಧ್ಯಾತ್ಮಿಕ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ. ನಮ್ಮ ಯೋಗ ಮತ್ತು ಆಯುರ್ವೇದವು ಆರೋಗ್ಯಕರ ಭೂಮಿಗೆ ಕೊಡುಗೆ ನೀಡುತ್ತದೆ. ಇವುಗಳನ್ನು ಅವರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಜಗತ್ತಿಗೆ ಪ್ರಸ್ತುತಪಡಿಸುವುದು ನಮ್ಮ ಗುರಿ. ನಾವು ಅವುಗಳ ಪ್ರಯೋಜನಗಳನ್ನು ವೈಜ್ಞಾನಿಕವಾಗಿ ವಿವರಿಸಬೇಕು ಮತ್ತು ಭಾರತಕ್ಕೆ ಬಂದು ಪುನಶ್ಚೇತನಗೊಳ್ಳಲು ಜಗತ್ತನ್ನು ಆಹ್ವಾನಿಸಬೇಕು. ನಿಮ್ಮ ಸ್ವಂತ ಹಾರ್ಟ್ ಫುಲ್ನೆಸ್ ಅಭ್ಯಾಸವು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ.
ಸ್ನೇಹಿತರೇ,
ಕೊರೊನಾ ಹೆಮ್ಮಾರಿಯ ನಂತರದ ಜಗತ್ತಿನಲ್ಲಿ, ಯೋಗ ಮತ್ತು ಧ್ಯಾನದ ಬಗ್ಗೆ ಇರುವ ಗಂಭೀರತೆ ಈಗ ಪ್ರಪಂಚದಾದ್ಯಂತ ಹೆಚ್ಚುತ್ತಿದೆ. ಇದನ್ನು ಭಗವದ್ಗೀತೆಯಲ್ಲಿ ಹೀಗೆ ಬರೆಯಲಾಗಿದೆ: ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಅಂದರೆ, ಪರಿಪೂರ್ಣತೆ ಮತ್ತು ವೈಫಲ್ಯ ಎರಡರಲ್ಲೂ ಸಮಚಿತ್ತತೆಯೊಂದಿಗೆ, ಯೋಗದಲ್ಲಿ ಮುಳುಗುವ ಮೂಲಕ ಕ್ರಿಯೆಗಳನ್ನು ಮಾಡಿರಿ. ಈ ಸಮಚಿತ್ತತೆಯನ್ನು ಯೋಗ ಎಂದು ಕರೆಯಲಾಗುತ್ತದೆ. ಇಂದಿನ ಜಗತ್ತಿನಲ್ಲಿ ಯೋಗದ ಜೊತೆಗೆ ಧ್ಯಾನವೂ ಅಗತ್ಯ. ಖಿನ್ನತೆಯು ಮಾನವಕುಲಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ ಎಂದು ವಿಶ್ವದ ಅನೇಕ ಪ್ರಮುಖ ಸಂಸ್ಥೆಗಳು ಪ್ರತಿಪಾದಿಸಿವೆ. ನಿಮ್ಮ ಹಾರ್ಟ್ ಫುಲ್ನೆಸ್ ಕಾರ್ಯಕ್ರಮದಿಂದ ಯೋಗ ಮತ್ತು ಧ್ಯಾನದ ಮೂಲಕ ಈ ಸಮಸ್ಯೆಯನ್ನು ಎದುರಿಸಲು ನೀವು ಮಾನವಕುಲಕ್ಕೆ ಸಹಾಯ ಮಾಡುತ್ತೀರಿ ಎಂದು ನನಗೆ ಖಾತ್ರಿಯಿದೆ.
ಸ್ನೇಹಿತರೇ,
ನಮ್ಮ ವೇದಗಳು, ಯತಾ ದಯೋಶ್ ಚ, ಪೃಥ್ವಿ ಚ, ಬಿಭೀತೋ, ನ ರಿಷ್ಯತಃ , ಎವಾ ಮೆ ಪ್ರಾಣ ಮಾ ವಿಬೆಃ ಅಂದರೆ, ಹೇಗೆ ಆಕಾಶ ಮತ್ತು ಭೂಮಿಯು ನಿರ್ಭೀತವಾಗಿ ಮತ್ತು ನಾಶವಾಗದಂತೆಯೇ ಇರುತ್ತವೆಯೋ , ಓ ನನ್ನ ಆತ್ಮವೇ! ನೀನೂ ಭಯವಿಲ್ಲದೆ ಇರು. ಯಾರು ನಿರ್ಭಯವಾಗಿರುವರೋ ಅವರು ಒಬ್ಬ ಸ್ವತಂತ್ರವಾಗಿರಬಹುದು. ಸಹಜ್ ಮಾರ್ಗವನ್ನು ಅನುಸರಿಸುವ ಮೂಲಕ ನೀವು ಜನರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿರ್ಭಯರನ್ನಾಗಿ ಮಾಡುತ್ತೀರಿ ಎಂದು ನನಗೆ ವಿಶ್ವಾಸವಿದೆ. ರೋಗರುಜಿನಗಳಿಂದ ಮುಕ್ತವಾಗಿರುವ ನಾಗರಿಕರು ಮತ್ತು ಮಾನಸಿಕವಾಗಿ ಸಶಕ್ತ ನಾಗರಿಕರು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಈ ವರ್ಷ, ನಾವು ನಮ್ಮ ಸ್ವಾತಂತ್ರ್ಯದ 75 ನೇ ವರ್ಷದೆಡೆಗೆ ಸಾಗುತ್ತಿದ್ದೇವೆ. ನಿಮ್ಮ ಪ್ರಯತ್ನಗಳು ದೇಶವನ್ನು ಮುಂದೆ ಕೊಂಡೊಯ್ಯಲಿ! ಈ ಆಕಾಂಕ್ಷೆಗಳೊಂದಿಗೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭ ಹಾರೈಸುತ್ತೇನೆ.
ಧನ್ಯವಾದಗಳು!
ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
***
(Release ID: 1698643)
Visitor Counter : 223
Read this release in:
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam