ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

21ನೇ ಶತಮಾನದ ಭಾರತದ ಭೂಪಟ

Posted On: 15 FEB 2021 12:48PM by PIB Bengaluru

ರಾಷ್ಟ್ರೀಯ ಮೂಲ ಸೌಕರ್ಯ ಯೋಜನೆಗಳಾದ ನದಿಗಳ ಸಂಪರ್ಕ, ಕೈಗಾರಿಕಾ ಕಾರಿಡಾರ್ ಗಳ ರಚನೆ ಮತ್ತು ಚತುರ ವಿದ್ಯುತ್ ವ್ಯವಸ್ಥೆಗಳನ್ನು ಸ್ಥಾಪಿಸಲು ನಕ್ಷೆಗಳು ಮತ್ತು ನಿಖರವಾದ ಭೂ ಪ್ರಾದೇಶಿಕ ದತ್ತಾಂಶ ಮಹತ್ವದ ಪಾತ್ರವಹಿಸುತ್ತದೆ.

ಡಿಜಿಟಲ್ ಇಂಡಿಯಾ, ಸ್ಮಾರ್ಟ್ ನಗರಗಳು, ಕಾಮರ್ಸ್, ಡ್ರೋನ್ ಗಳ ಬಳಕೆಗೆ ಸ್ವಾಯತ್ತತೆ, ವಿತರಣೆ, ವ್ಯವಸ್ಥಾಪನಾ ತಂತ್ರಗಾರಿಕೆ ಮತ್ತು ನಗರ ಸಾರಿಗೆಯಂತಹ ರೋಮಾಂಚಕ ತಂತ್ರಜ್ಞಾನಗಳು, ಹೆಚ್ಚಿನ ಆಳ, ಪರಿಹಾರ, ನಿಖರತೆಯೊಂದಿಗೆ ಸಾಗಲಿದೆ.

ಕೃಷಿ, ಹಣಕಾಸು, ನಿರ್ಮಾಣ ತಂತ್ರಜ್ಞಾನ, ಗಣಿಗಾರಿಕೆ ಮತ್ತು ಸ್ಥಳೀಯ ಉದ್ಯಮಗಳು, ಭೂ ಪ್ರಾದೇಶಿಕ ದತ್ತಾಂಶ ತಂತ್ರಜ್ಞಾನ, ಭೂಪಟದಂತಹ ಪ್ರತಿಯೊಂದು ನವೀನ ತಂತ್ರಜ್ಞಾನಗಳ ಮೂಲಕ ಮಹತ್ವದ ಲಾಭ ಗಳಿಸಲು ಸಹಕಾರಿಯಾಗಲಿದೆ.

ಆದರೂ ಅಸ್ಥಿತ್ವದಲ್ಲಿರುವ ಆಡಳಿತ, ಭೂಪಟದ ಉದ್ಯಮದ ಮೇಲೆ ಮಹತ್ವದ ನಿರ್ಬಂಧಗಳನ್ನು ವಿಧಿಸಿದೆ. ನಕ್ಷೆಗಳ ರಚನೆಯಿಂದ ಹಿಡಿದು ಪ್ರಸಾರದವರೆಗೆ, ವಿವಿಧ ಪರವಾನಗಿಗಳನ್ನು ಪಡೆಯುವ ಅಗತ್ಯವಿದೆ. ಇಂತಹ ಪೂರ್ವ ಅನುಮತಿಗಳ ತೊಡಕಿನ ವ್ಯವಸ್ಥೆಯನ್ನು ಅನುಸರಿಸುವುದರಿಂದ ನಿಯಂತ್ರಿತ ನಿರ್ಬಂಧಗಳ ಅನುಸರಣೆಗೆ ಸಹಕಾರಿಯಾಗಲಿದೆ. ಇದರಿಂದ ದೇಶದ ನವೋದ್ಯಮಗಳನ್ನು ಅನಗತ್ಯವಾಗಿ ರೆಡ್ ಟೇಪಿಸಂಗೆ ಒಳಪಡಿಸಿದಂತಾಗಿದೆ. ಇದರಿಂದ ದಶಕಗಳಿಂದ ದೇಶದಲ್ಲಿ ನಕ್ಷೆ ತಂತ್ರಜ್ಞಾನ ದೇಶದ ಅವಿಷ್ಕಾರಕ್ಕೆ ಅಡ್ಡಿಯಾಗಿದೆ ಎಂಬುದನ್ನು ಗೌರವಾನ್ವಿತ ಪ್ರಧಾನಮಂತ್ರಿಯವರು ಗಮನಿಸಿದ್ದಾರೆ.

ದೇಶದ ಆತ್ಮ ನಿರ್ಭರ್ ಭಾರತದ ದೃಷ್ಟಿಯನ್ನು ಸಾಕಾರಗೊಳಿಸಲು ಮತ್ತು 5 ಶತಕೋಟಿ ಡಾಲರ್ ಆರ್ಥಿಕತೆ ರಾಷ್ಟ್ರವಾಗಿ ಹೊರ ಹೊಮ್ಮಲು ಭೂ ಪ್ರಾದೇಶಿಕ ದತ್ತಾಂಶ ಮತ್ತು ಭೂಪಟ ವಯಲದಲ್ಲಿ ಅನ್ವಯವಾಗುವ ನಿಯಮಗಳು ಇನ್ನು ಮುಂದೆ ಅಮೂಲಾಗ್ರವಾಗಿ ಬದಲಾವಣೆಯಾಗಲಿವೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ದೇಶದ ಭೂಪಟ ನೀತಿಯಲ್ಲಿ ವಿಶೇಷವಾಗಿ ಭಾರತೀಯ ಕಂಪೆನಿಗಳಿಗೆ ಹೆಚ್ಚಿನ ಬದಲಾವಣೆಗಳನ್ನು ಪ್ರಕಟಿಸುತ್ತಿದೆ. ಜಾಗತಿಕವಾಗಿ ಲಭ್ಯವಿರುವುದನ್ನು ಭಾರತದಲ್ಲಿ ನಿರ್ಬಂಧಿಸುವ ಅಗತ್ಯವಿಲ್ಲ ಮತ್ತು ನಿರ್ಬಂಧಿತವಾಗಿದ್ದ ಭೂ ದತ್ತಾಂಶದ ಮಾಹಿತಿ ಈಗ ದೇಶದಲ್ಲಿ ಉಚಿತವಾಗಿ ಲಭ್ಯವಿರಲಿದೆ. ಇನ್ನು ಮುಂದೆ ನಮ್ಮ ವಿವಿಧ ನಿಗಮಗಳು ಮತ್ತು ನಾವೀತ್ಯತಾ ವಲಯದವರು ನಿರ್ಬಂಧಗಳಿಗೆ ಒಳಪಡುವುದಿಲ್ಲ ಅಥವಾ ಭಾರತದ ಭೂ ಪ್ರದೇಶದೊಳಗೆ ಭೂ ಪ್ರಾದೇಶಿಕ ದತ್ತಾಂಶಗಳನ್ನು, ನಕ್ಷೆಗಳನ್ನು ಸಂಗ್ರಹಿಸುವ, ಉತ್ಪಾದಿಸುವ, ತಯಾರಿಸುವ, ಪ್ರಸಾರ ಮಾಡುವ, ಪ್ರಕಟಿಸುವ, ಭೂ ಪ್ರಾದೇಶಿಕ ಡಿಜಿಟಲ್ ದತ್ತಾಂಶವನ್ನು ಮೇಲ್ದರ್ಜೆಗೇರಿಸುವ ಮತ್ತು ದೇಶದೊಗಳಗೆ ನಕ್ಷೆಗಳ ವಿಚಾರದಲ್ಲಿ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದೆ.

ನಮ್ಮ ನವೋದ್ಯಮಗಳು ಮತ್ತು ಭೂ ಪಟ ರಚಿಸುವ ನಾವೀನ್ಯತೆ ವಲಯದವರು ಸ್ವಯಂ ಆಗಿ ಪ್ರಾಮಾಣಿಕರಿಸಲು, ಉತ್ತಮ ಆದೇಶಗಳನ್ನು ಅಳವಡಿಸಿಕೊಳ್ಳಲು, ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಪ್ರದರ್ಶಿಸಲು ಅವಲಂಬಿಸಿರುತ್ತಾರೆ. ಇದರ ಜತೆಗೆ ಭಾರತೀಯ ನಕ್ಷೆ ತಯಾರಿಸುವ ತಂತ್ತಜ್ಞಾನದ ಲಾಭ ಪಡೆಯಲು ಭಾರತೀಯ ಭೂ ವೈಜ್ಞಾನಿಕ ಅವಿಷ್ಕಾರಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆಮುಂದಿನ ಪೀಳಿಗೆಯ ನಕ್ಷೆ ತಯಾರಿಕೆ ತಂತ್ರಜ್ಞಾನ ಜಗತ್ತಿನಾದ್ಯಂತ ಇರುವ ಅಂಶಗಳು ಅಡಕಗೊಳ್ಳುತ್ತಿದ್ದು, ನೀತಿ ನಾವೀನ್ಯಕಾರರಿಗೆ ನಕ್ಷೆ ತಯಾರಿಕೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲು ಅನುವು ಮಾಡಿಕೊಡುತ್ತದೆ ಮತ್ತು ಅಂತಿಮವಾಗಿ ಜನಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಸಣ್ಣ ಉದ್ಯಮ ವಲಯವನ್ನು ಸಬಲೀಕರಣಗೊಳಿಸುತ್ತದೆ. ಭಾರತ ನಕ್ಷೆ ತಯಾರಿಕೆಯಲ್ಲಿ ಶಕ್ತಿಶಾಲಿಯಾಗಿ ಹೊರ ಹೊಮ್ಮುವುದನ್ನು ಎದುರು ನೋಡುತ್ತಿದ್ದೇವೆ. ಭಾರತದ ದೇಶೀಯ ನಕ್ಷೆಗಳನ್ನು ಮುಂದಿನ ಪೀಳಿಗೆ ರಚಿಸುತ್ತದೆ ಮತ್ತು ಜಗತ್ತಿನ ಇತರೆ ಭಾಗಳಿಗೆ ತಂತ್ರಜ್ಞಾವನ್ನು ಕೊಂಡೊಯ್ಯುತ್ತದೆ.

***(Release ID: 1698168) Visitor Counter : 463


Read this release in: Tamil , Telugu , English , Urdu , Hindi