ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಆಕಾಶವಾಣಿಯ ಸಂಗೀತ ಸಮ್ಮೇಳನ ಇನ್ನು ಮುಂದೆ ಭಾರತ ರತ್ನ ಪಂಡಿತ್ ಭೀಮಸೇನ ಜೋಶಿ ಆಕಾಶವಾಣಿ ಸಂಗೀತ ಸಮ್ಮೇಳನ

ಪ್ರಕಟಣಾ ದಿನಾಂಕ: 06 FEB 2021 7:11PM by PIB Bengaluru

ಪ್ರತಿಷ್ಠಿತ ಆಕಾಶವಾಣಿ ಸಂಗೀತೋತ್ಸವ, ಇನ್ನು ಮುಂದೆ ಭಾರತ ರತ್ನ ಪಂಡಿತ್ ಭೀಮಸೇನ ಜೋಶಿ ಅವರ ಹೆಸರಿನಲ್ಲಿ ನಡೆಯಲಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು ಪಂಡಿತ್ ಭೀಮಸೇನ ಜೋಶಿ ಶತಮಾನೋತ್ಸವ ಸಂದರ್ಭದಲ್ಲಿ ಪುಣೆಯಲ್ಲಿಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ್ದಾರೆ.

ಆಕಾಶವಾಣಿ, ತನ್ನ ನಿಯಮಿತ ಸಂಗೀತ ಪ್ರಸಾರದ ಜೊತೆಗೆ, ಆಕಾಶವಾಣಿ ಸಂಗೀತ ಸಮ್ಮೇಳನ ಆಯೋಜಿಸುವ ಮೂಲಕ ಶಾಸ್ತ್ರೀಯ ಸಂಗೀತ ಶ್ರೋತೃಗಳಿಗೆ ಇಷ್ಟವಾಗವಂತೆ ಸ್ವಯಂ ಸಂಗೀತ ಸಮ್ಮೇಳನ ಆಯೋಜಿಸುತ್ತಿದ್ದು, ಇದರಲ್ಲಿ ದೇಶಾದ್ಯಂತದ ಹೆಸರಾಂತ ಕಲಾವಿದರು ಪ್ರದರ್ಶನ ನೀಡುತ್ತಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಜಾವಡೇಕರ್, "ದೂರದರ್ಶನ ಮತ್ತು ಆಕಾಶವಾಣಿ ಪಂಡಿತ್ ಭೀಮಸೇನ ಜೋಶಿ ಅವರ ಬೃಹತ್ ಸಂಗೀತ ಭಂಡಾರವನ್ನೇ ಸಾರ್ವಜನಿಕರಿಗಾಗಿ ತೆರೆದಿದೆ. ಈ ಧ್ವನಿಮುದ್ರಿಕೆಗಳು ಯೂಟ್ಯೂಬ್ ನಲ್ಲಿ ಲಭ್ಯವಿದ್ದು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ದೇಶಾದ್ಯಂತ ಹೆಚ್ಚಿನ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.

"ಸಂಗೀತದಲ್ಲಿ ಹಲವು ಪ್ರಕಾರ ಇದೆ ಮತ್ತು ಇದಕ್ಕೆ ನಮಗೆ ಪ್ರೇರಣೆ ನೀಡುವ ಶಕ್ತಿ ಇದೆ. ಪಂಡಿತ್ ಭೀಮಸೇನ ಜೋಶಿ ಅವರ ಆಶೀರ್ವಾದದಿಂದ ಆರ್ಯ ಸಂಗೀತ ಪ್ರಸಾರಕ ಮಂಡಲ 67 ವರ್ಷಗಳಿಂದ ತಡೆರಹಿತವಾಗಿ ನಡೆಯುತ್ತಿದೆ. ಪಂಡಿತ್ ಅವರು ಎಲ್ಲರಿಗೂ ಆಪ್ತರಾಗಿದ್ದರು. ವಿದೇಶಗಳಲ್ಲಿ ನಡೆದ ಸಂಗೀತ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ ರೀತಿಯಲ್ಲೇ ಅವರು ಜೀವನದ ಎಲ್ಲಾ ಸ್ತರಗಳ ಜನರಿಗಾಗಿ ಸಂಗೀತ ಉಣಬಡಿಸಿದರು"ಎಂದು ಶ್ರೀ ಜಾವಡೇಕರ್ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.

ಪಂಡಿತ್ ಭೀಮಸೇನ ಜೋಶಿ ಅವರಿಗೆ 2009ರಲ್ಲಿ ಭಾರತರತ್ನ ಗೌರವ ನೀಡಲಾಗಿತ್ತು.

ಪಂಡಿತ್ ಭೀಮಸೇನ ಜೋಶಿ ಅವರು 1922ರ ಫೆಬ್ರವರಿ 4ರಂದು ಅಂದು ಕರ್ನಾಟಕದ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಗದಗದಲ್ಲಿ ಜನಿಸಿದರು. ಪುಣೆ ಅವರ ಕರ್ಮಭೂಮಿ ಅಲ್ಲಿ ಅವರು ಖಯಾಲ್ ಹಾಡುವಿಕೆಯ ಪ್ರಮುಖ ಪ್ರತಿಪಾದಕರಾಗಿ, ಜೊತೆಗೆ ಭಕ್ತಿ ಸಂಗೀತದ ಭಜನ್ ಮತ್ತು ಅಭಾಂಗ್‌ ಗಳ ಜನಪ್ರಿಯ ನಿರೂಪಣೆಗಳಿಗಾಗಿ ಖ್ಯಾತಿಯನ್ನು ಪಡೆದಿದ್ದರು.

ಹಿರಿಯ ನಾಯಕ ಶರದ್ ಪವಾರ್ ಮತ್ತು ಶ್ರೀ ವಿನಯ್ ಸಹಸ್ರಬುದ್ಧೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಂಡಿತ್ ಜೋಶಿ ಅವರ ಶಿಷ್ಯರಾದ ಉಪೇಂದ್ರ ಭಟ್ ಮತ್ತು ಆನಂದ್ ಭಾತೆ ಈ ಸಂದರ್ಭದಲ್ಲಿ ಸಂಗೀತ ಕಚೇರಿ ನಡೆಸಿಕೊಟ್ಟರು.

***


(ಪ್ರಕಟಣೆ ಐ.ಡಿ.: 1696440) ವಿಸಿಟರ್ ಕೌಂಟರ್ : 217
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Manipuri , Tamil