ಕೃಷಿ ಸಚಿವಾಲಯ
ನಬಾರ್ಡ್‌ನಿಂದ ಕಾರ್ಪಸ್ ನಿಧಿಯಡಿ ಐದು ಸಾವಿರ ಕೋಟಿ ರೂ. ಸೂಕ್ಷ್ಮ ನೀರಾವರಿ ನಿಧಿ ಸ್ಥಾಪನೆ
ಸೂಕ್ಷ್ಮ ನೀರಾವರಿ ನಿಧಿಗೆ ಮತ್ತೆ ಐದು ಸಾವಿರ ಕೋಟಿ ರೂ. ಸೇರ್ಪಡೆ: ದ್ವಿಗುಣಗೊಳಿಸುವ ಉದ್ದೇಶ
Posted On:
04 FEB 2021 6:40PM by PIB Bengaluru
ಕೇಂದ್ರ ಕೃಷಿ ಸಹಕಾರ ಮತ್ತು ರೈತ ಕಲ್ಯಾಣ [ಡಿಎಸಿ ಮತ್ತು ಎಫ್ ಡಬ್ಲ್ಯೂ] ಇಲಾಖೆಯಿಂದ 2015-16 ರಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ [ಪಿ.ಎಂ.ಕೆ.ಎಸ್.ವೈ-ಪಿಡಿಎಂಸಿ] ಮೂಲಕ “ಒಂದು ಹನಿ ಹೆಚ್ಚು ಬೆಳೆ“ ಕಾರ್ಯಕ್ರಮದಡಿ ಸೂಕ್ಷ್ಮ ನೀರಾವರಿ ಮೂಲಕ ಕೃಷಿಯಲ್ಲಿ ಹನಿ ಮತ್ತು ಸ್ಪಿಂಕ್ಲರ್ ಮೂಲಕ ನೀರಿನ ಬಳಕೆಯ ದಕ್ಷತೆ ಹೆಚ್ಚಿಸಲು ಆದ್ಯತೆ ನೀಡಲಾಗಿದೆ.
ಸೂಕ್ಷ್ಮ ನೀರಾವರಿ ಉತ್ತೇಜಿಸುವ ಜತೆಗೆ ಸೂಕ್ಷ್ಮ ನೀರಾವರಿಗಾಗಿ ನೀರಿನ ಸಂಗ್ರಹ, ನೀರಿನ ಸಂರಕ್ಷಣೆ, ನಿರ್ವಹಣಾ ಚಟುವಟಿಕೆಗಳನ್ನು ಇದು ಬೆಂಬಲಿಸುತ್ತದೆ. 2015 – 16 ರಿಂದ ಈ ವರೆಗೆ ದೇಶದಲ್ಲಿ 52.93 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ನೀರಾವರಿಯಲ್ಲಿ ವಿಸ್ತರಿಸಲಾಗಿದೆ. ಇದಲ್ಲದೇ ಈ ಯೋಜನೆಯಡಿ ಸೂಕ್ಷ್ಮ ನೀರಾವರಿಗೆ ಪೂರಕವಾಗಿ 4.84 ಲಕ್ಷ ಸಣ‍್ಣಮಟ್ಟದ ನೀರಿನ ಕೋಯ್ಲು, ದ್ವಿತೀಯ ಹಂತದ ಸಂಗ್ರಹಣಾ ರಚನೆಗಳನ್ನು ಸೃಷ್ಟಿಸಲಾಗಿದೆ.
ಇತ್ತೀಚೆಗೆ ನಡೆಸಲಾಗದ ಮೌಲ್ಯಮಾಪನದ ಪ್ರಕಾರ ಈ ಯೋಜನೆಯಿಂದ ಕೃ಼ಷಿ ನೀರಿನ ಬಳಕೆ, ದಕ್ಷತೆ ಗಣನೀಯವಾಗಿ ಸುಧಾರಣೆಯಾಗಿದ್ದು, ಬೆಳೆ ಉತ್ಪಾದಕತೆ ಹೆಚ್ಚಳ, ರೈತರಿಗೆ ಉತ್ತಮ ಆದಾಯವನ್ನು ಖಾತರಿಪಡಿಸುವ, ಉದ್ಯೋಗಾವಾಕಾಶ ಸೃಷ್ಟಿಸುವ, ಮುಂತಾದ ರಾಷ್ಟ್ರೀಯ ಆದ್ಯತೆಗಳನ್ನು ಸಾಧಿಸುವಲ್ಲಿ ಸೂಕ್ಷ್ಮ ನೀರಾವರಿ ಮಹತ್ವ ಪ್ರಸ್ತುತವಾಗಿದೆ. ಈ ಯೋಜನೆ ರೈತರಿಗೆ ಲಾಭ ತಂದುಕೊಡುವಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿದೆ. ಹೆಚ್ಚು ಉತ್ಪಾದಕತೆ, ಕಾರ್ಮಿಕರ ವೆಚ್ಚ, ಕಡಿಮೆ ಮಾಡುವ, ನೀರು, ವಿದ್ಯುತ್ ಬಳಕೆಯನ್ನು ತಗ್ಗಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಿದೆ.
ಅಟಲ್ ಭೂಜಲ್ ಯೋಜನೆ [ಎ.ಬಿ.ಎಚ್.ವೈ] ಯಡಿ “ ಒಂದು ಹನಿ ಹೆಚ್ಚು ಬೆಳೆ” ಕಾರ್ಯಕ್ರಮ ಬರಲಿದೆ. ನವಾಮಿ ಗಂಗೆ ಯೋಜನೆಯ ಜಿಲ್ಲೆಗಳು, ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷೇವೆಂ ಉತ್ತಮ್ ಮಹಾಭಿಯಾನ [ಪಿ.ಎಂ-ಕೆ.ಯು.ಎಸ್.ಯು.ಎಂ] ಯೋಜನೆ, ಜಲಾನಯನ ಅಭಿವೃದ್ಧಿ ಯೋಜನೆ [ಪಿ.ಎಂ.ಕೆ.ಎಸ್.ಐ] ಮೂಲಕ ಕೃಷಿಯಲ್ಲಿ ನೀರಿನ ಬಳಕೆ ಹೆಚ್ಚಿಸಲು ಆಪೇಕ್ಷಿತ ಗುರಿಗಳನ್ನು ಸಾಧಿಸುವಲ್ಲಿ ಸೂಕ್ಷ್ಮ ನೀರಾವರಿ ಕ್ಷೇತ್ರ ಸಹಕಾರಿಯಾಗಿದೆ.
ದೇಶದಲ್ಲಿ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲು 5000 ಕೋಟಿ ರೂ ರೂ ಕಾರ್ಪಸ್ ನಿಧಿಯಡಿ 2018-19 ರಲ್ಲಿ ಸೂಕ್ಷ್ಮ ನೀರಾವರಿ ನಿಧಿ ಸ್ಥಾಪನೆ ಮಾಡಲಾಗಿದೆ. ಪಿ.ಎಂ.ಕೆ.ಎಸ್.ವೈ – ಪಿಡಿಎಂಸಿ ಅಡಿಯಲ್ಲಿ ಲಭ‍್ಯವಿರುವ ನಿಬಂಧನೆಗಳನ್ನು ಮೀರಿ ಸೂಕ್ಷ್ಮ ನೀರಾವರಿಗೆ ಪ್ರೋತ್ಸಾಹಿಸಲು ರೈತರಿಗೆ ಉನ್ನತ, ಹೆಚ್ಚುವರಿ ಪ್ರೋತ್ಸಾಹವನ್ನು ಒದಗಿಸಲು, ಸಂಪನ್ಮೂಲಗಳನ್ನು ಸಜ್ಜುಗೊಳಿಸಿ ರಾಜ್ಯಗಳಿಗೆ ಅನುಕೂಲ ಮಾಡುವುದು ಇದರ ಉದ್ದೇಶವಾಗಿದೆ. ರಾಜ್ಯಗಳು ಸಹ ಸೂಕ್ಷ್ಮ ನೀರಾವರಿ ನಿಧಿಯಡಿ ನಾವೀನ್ಯತೆಯ ಸಮಗ್ರ ಯೋಜನೆಗಳನ್ನು [ಹೆಚ್ಚು ನೀರಿನ ಬಳಕೆಯಿರುವ ಕಬ್ಬು, ಸೌರ ವಿದ್ಯುತ್ ಸಂಪರ್ಕಿತ ವ್ಯವಸ್ಥೆ, ಸೂಕ್ಷ್ಮ ನೀರಾವರಿ ಪ್ರದೇಶ ಮತ್ತಿತರ ವಲಯಗಳನ್ನು ಒಳಗೊಂಡಂತೆ ] ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಕೈಗೆತ್ತಿಕೊಳ್ಳಬಹುದಾಗಿದೆ. ಸೂಕ್ಷ್ಮ ನೀರಾವರಿ ನಿಧಿಯಡಿ ನೆರವು ಪಡೆಯುವ ಸಾಲಕ್ಕೆ ಶೇ 3 ರಷ್ಟು ಬಡ್ಡಿ ಸಹಾಯಧವನ್ನು ಕೇಂದ್ರ ಸರ್ಕಾರ ಒದಗಿಸಲಿದೆ.
ಎಂ.ಐ.ಎಫ್ ನಿಧಿಯಡಿ ಆಂಧ್ರ ಪ್ರದೇಶ, ಗುಜರಾತ್, ತಮಿಳುನಾಡು, ಹರಿಯಾಣ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಈಗಾಗಲೇ 3970.17 ಕೋಟಿ ರೂಪಾಯಿ ಸಾಲ ಮಂಜೂರು ಮಾಡಲಾಗಿದ್ದು, ಇದರಡಿ 12.83 ಲಕ್ಷ ಹೆಕ್ಟೇರ್ ಸೂಕ್ಷ್ಮ ನೀರಾವರಿ ಪ್ರದೇಶವನ್ನು ವಿಸ್ತರಿಸಲಾಗಿದೆ. ಇದಲ್ಲದೇ ರಾಜಸ್ತಾನ, ಪಶ್ಛಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ಜಮ್ಮು-ಕಾಶ್ಮೀರದ ಸಾಲದ ಪ್ರಸ್ತಾವನೆಗಳು ಈ ಸೂಕ್ಷ್ಮ ನೀರಾವರಿ ನಿಧಿಯ ಮುಂದಿವೆ. ಸೂಕ್ಷ್ಮ ನೀರಾವರಿ ಯೋಜನೆಯ ಸಾಮರ್ಥ್ಯ ಮತ್ತು ಮಹತ್ವವನ್ನು ಪರಿಗಣಿಸಿ ಸೂಕ್ಷ್ಮ ನೀರಾವರಿ ನಿಧಿಯಿಂದ ನೆರವು ಪಡೆಯಲು ಹೆಚ್ಚು ಹೆಚ್ಚು ರಾಜ್ಯಗಳು ಮುಂದಾಗುತ್ತಿವೆ.
ದೇಶದ ರೈತರು ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದ್ದು, ಈ ಯೋಜನೆಯನ್ನು ವಿಸ್ತರಿಸುತ್ತಿದ್ದಾರೆ. ಇದರಿಂದ ನೀರಿನ ಬಳಕೆಯ ಸಮರ್ಥತೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಬಾರ್ಡ್ ನಿಂದ ಸ್ಥಾಪಿಸಲಾಗಿರುವ 5000 ಕೋಟಿ ರೂ ಸೂಕ್ಷ್ಮ ನೀರಾವರಿ ನಿಧಿಯನ್ನು ಮತ್ತೆ 5000 ಕೋಟಿ ರೂನಷ್ಟು ಸೇರಿಸಿ ದ್ವಿಗುಣಗೊಳಿಸುವುದಾಗಿ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.
ಕಾರ್ಪಸ್ ನಿಧಿಯನ್ನು ಮತ್ತೆ 5000 ಕೋಟಿ ರೂ ಗೆ ಹೆಚ್ಚಿಸುವುದರಿಂದ ನೀರಿನ ನ್ಯಾಯಯುತ ಬಳಕೆಯನ್ನು ಉತ್ತೇಜಿಸಲು, ನೀರಿನ ದಕ್ಷತೆ ಹೆಚ್ಚಿಸಲು, ಉತ್ಪಾದನೆ ಮತ್ತು ಉತ್ಪಾದಕೆಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ ಮತ್ತು ಅಂತಿಮವಾಗಿ ಈ ಯೋಜನೆ ಕೃಷಿ ಸಮುದಾಯದ ಆದಾಯ ಹೆಚ್ಚಿಸುತ್ತದೆ.
***
(Release ID: 1695431)
Visitor Counter : 296