ಗೃಹ ವ್ಯವಹಾರಗಳ ಸಚಿವಾಲಯ

2021-22ನೇ ಸಾಲಿನ ಬಜೆಟ್ ಆರ್ಥಿಕ ಅಭಿವೃದ್ಧಿಗೆ ಉತ್ತೇಜನಕಾರಿ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ


ಕೊರೊನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಬಜೆಟ್ ಸಿದ್ಧತೆ ಸಂಕೀರ್ಣ ಕೆಲಸವಾಗಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹಣಕಾಸು ಸಚಿವರಿಂದ ಸರ್ವರಿಗೂ ಹಿತವಾದ ಬಜೆಟ್ ಮಂಡನೆ

ಕಷ್ಟಕರ ಸಂದರ್ಭದಲ್ಲಿ ವಿಶೇಷ ಬಜೆಟ್

ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡಲು ಮಹತ್ವದ ಕೊಡುಗೆ


ಬಜೆಟ್ ನಲ್ಲಿ ಆರ್ಥಿಕ ಸುಧಾರಣೆಗಳು ಮತ್ತು ಹೂಡಿಕೆಗೆ ಒತ್ತು


ರೈತರ ಆದಾಯ ದುಪ್ಪಟ್ಟುಗೊಳಿಸಲು ಹಾದಿ ಸುಗಮ

ಸಂಕಷ್ಟದ ಸಮಯದಲ್ಲೂ ಜನರ ಮೇಲೆ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸಿಲ್ಲ

ಶ್ರೀ ಮೋದಿ ಅವರ ಸ್ವಾವಲಂಬಿ ಭಾರತ ಸಂಕಲ್ಪ ಸಾಧನೆಗೆ ಇಂಬು

ಸಮಾಜದ ಪ್ರತಿಯೊಂದು ವರ್ಗದ ಹಿತ ಕಾಯುವ ಬಜೆಟ್

ದಕ್ಷಿಣದ ರಾಜ್ಯಗಳು ಮತ್ತು ಈಶಾನ್ಯ ಭಾರತದ ಅಭಿವೃದ್ಧಿಗೆ ಬಜೆಟ್ ನಲ್ಲಿ ವಿಶೇಷ ಆದ್ಯತೆ

2022ರ ಮಾರ್ಚ್ 31ರವರೆಗೆ ನವೋದ್ಯಮಗಳು ತೆರಿಗೆ ಪಾವತಿಸುವಂತಿಲ್ಲ

Posted On: 01 FEB 2021 8:53PM by PIB Bengaluru

2021-22ನೇ ಸಾಲಿನ ಬಜೆಟ್ ಆರ್ಥಿಕ ಅಭಿವೃದ್ಧಿಗೆ ಉತ್ತೇಜನಕಾರಿ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಕೃತಜ್ಞತೆಗಳನ್ನ ಸಲ್ಲಿಸಿದ್ದಾರೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವರ್ಷದ ಬಜೆಟ್ ಸಿದ್ಧಪಡಿಸುವುದು ಸಂಕೀರ್ಣ ಕೆಲಸವಾಗಿತ್ತು ಎಂದು ಅಮಿತ್ ಶಾ ಹೇಳಿದರು. ಆದರೆ ಪ್ರಧಾನಿ  ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಎಲ್ಲರನ್ನೂ ಒಳಗೊಂಡ ಬಜೆಟ್ ಮಂಡಿಸಿದ್ದಾರೆ, ಇದು ಪ್ರಧಾನಮಂತ್ರಿ ಅವರ ಕನಸಿನ ಸ್ವಾವಲಂಬಿ ಭಾರತ, 5 ಟ್ರಿಲಿಯನ್ ಆರ್ಥಿಕತೆ ಮತ್ತು ರೈತರ ಆದಾಯ ದುಪ್ಪಟ್ಟುಗೊಳಿಸುವ ಕನಸು ಸಾಕಾರಕ್ಕೆ ಹಾದಿ ಸುಗಮವಾಗಲಿದೆ. ಕೊರೊನಾ ಸಾಂಕ್ರಾಮಿಕದ ನಂತರ ಜಾಗತಿಕ ಆರ್ಥಿಕತೆ ವಿಶ್ರಾಂತ ಸ್ಥಿತಿಗೆ ಸಾಗಿದೆ ಮತ್ತು ವರ್ಷದ ಬಜೆಟ್ ಖಂಡಿತಾ ಪ್ರಸಕ್ತ ಜಾಗತಿಕ ಸನ್ನಿವೇಶದಲ್ಲಿ ಭಾರತ ಅತ್ಯಂತ ಬಲಿಷ್ಠವಾಗಿ ಹೊರಹೊಮ್ಮಲು ಸಹಾಯಕವಾಗಲಿದೆ ಮತ್ತು ಮುಂದಿನ ದಿನಗಳಲ್ಲಿ  ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಗುವ ಆರ್ಥಿತೆಯಾಗಲಿದೆ ಎಂದರು.

ಸಂಕಷ್ಟದ ಸಮಯದಲ್ಲಿ ದೇಶದ ಜನರ ಮೇಲೆ ಯಾವುದೇ ರೀತಿಯ ಹೆಚ್ಚುವರಿ ತೆರಿಗೆಯನ್ನು ವಿಧಿಸಿಲ್ಲ ಮತ್ತು ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನೇರ ತೆರಿಗೆಗಳ ಪ್ರಮಾಣ ಅತಿ ಕಡಿಮೆ ಮಯತ್ತು ತೆರಿಗೆ ಪದ್ದತಿಯನ್ನು ಸರಳೀಕರಣಗೊಳಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ದೇಶದ ಆರ್ಥಿಕತೆಗೆ ವೇಗವನ್ನು ನೀಡಲು, ಬಂಡವಾಳ ವೆಚ್ಚ ಕಳೆದ ವರ್ಷ 4.12 ಲಕ್ಷ ಕೋಟಿ ಇತ್ತು, ಅದನ್ನು 5.54 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ ಅಂದರೆ ಶೇ.34.5ರಷ್ಟು ಹೆಚ್ಚಳ ಮಾಡಲಾಗಿದೆ ಎಂದರು. ಅಲ್ಲದೆ, ಸರ್ಕಾರಿ ಯಂತ್ರದ ಸುಧಾರಣೆಯಲ್ಲಿ ಬಂಡವಾಳ ವಾಪಸಾತಿಯನ್ನು ಉತ್ತೇಜಿಸುವುದನ್ನು ಪ್ರಮುಖ ಹಜ್ಜೆಯನ್ನಾಗಿ ಗುರುತಿಸಿ, ಅದಕ್ಕಾಗಿ ರಾಜ್ಯಗಳು ಮತ್ತು ಸ್ವತಂತ್ರ ಸಂಸ್ಥೆಗಳಿಗೆ 2 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಈ ಎಲ್ಲ ಕ್ರಮಗಳು ದೂರಗಾಮಿ ಪರಿಣಾಮಗಳನ್ನು ಬೀರಲಿವೆ ಮತ್ತು ಸ್ವಾವಲಂಬಿ ಭಾರತ ಅಭಿಯಾನ ಮತ್ತಷ್ಟು ಬಲವರ್ಧನೆಯಾಗಲಿದೆ. ಇಷ್ಟೇ ಇಲ್ಲದೆ, 2022ರ ಮಾರ್ಚ್ 31ರವರೆಗೆ ನವೋದ್ಯಮಗಳು ಯಾವುದೇ ತೆರಿಗೆಯನ್ನು ಪಾವತಿಸುವಂತಿಲ್ಲ, ಇವು ಖಂಡಿತಾ ಹೊಸ ಉದ್ದಿಮೆದಾರರನ್ನು ಪ್ರೋತ್ಸಾಹಿಸಲಿವೆ. 2021ರ ಅಕ್ಟೋಬರ್ ನಲ್ಲಿ ಹೊಸ ಸುಂಕ ನೀತಿಯನ್ನು ಪರಿಚಯಿಸಲಾಗುವುದು ಮತ್ತು ಇದು ಆಮದುದಾರರಿಗೆ ಸಹಾಯಕವಾಗಲಿದೆ ಎಂದರು.

ಬಜೆಟ್ ನಿಂದ ಆರ್ಥಿಕ ಸುಧಾರಣೆ ಮತ್ತು ಹೂಡಿಕೆಗೆ ವೇಗ

ಆರ್ಥಿಕ ಸುಧಾರಣೆಗಳು ಮೋದಿ ಅವರ ಸರ್ಕಾರ ವಿಶೇಷತೆಗಳಾಗಿವೆ ಎಂದ ಶ್ರೀ ಅಮಿತ್ ಶಾ ಮತ್ತು ಕಳೆದ ಆರು ವರ್ಷಗಳಲ್ಲಿ ಕೈಗೊಂಡಿರುವ ಸುಧಾರಣೆಗಳನ್ನು ಕಳೆದ 70 ವರ್ಷಗಳಲ್ಲಿ ಕೈಗೊಂಡಿರಲಿಲ್ಲ ಎಂದರು. ಈ ಸುಧಾರಣೆಗಳನ್ನು ಮತ್ತಷ್ಟು ಮುಂದುರಿಸಲು ಬಜೆಟ್ ನಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ, 2022ರೊಳಗೆ ಏಕರೂಪದ ಷೇರು ಮಾರುಕಟ್ಟೆ ಸಂಹಿತೆ, ಗಿಫ್ಟ್ ವಿಶ್ವ ದರ್ಜೆಯ ಫಿನ್ ಟೆಕ್ ತಾಣ, ಕಾರ್ಪೋರೇಟ್ ಬಾಂಡ್ ಮಾರುಕಟ್ಟೆಗೆ ಕಾಯಂ ಸಾಂಸ್ಥಿಕ ನೀತಿ, ಸಾಮಗ್ರಿ ಮಾರುಕಟ್ಟೆ ಸುಧಾರಣೆ, ವಿಮಾ ಕಾಯಿದೆ 1938ರಲ್ಲಿ ಸುಧಾರಣೆಗಳು, ಸ್ವತ್ತು ಪುನರ್ ನಿರ್ಮಾಣ ಕಂಪನಿ ಮತ್ತು ಸ್ವತ್ತು ನಿರ್ವಹಣಾ ಕಂಪನಿ ಸ್ಥಾಪನೆ ಮತ್ತಿತರ ಕ್ರಮಗಳು.  ಈ ಎಲ್ಲ ಸುಧಾರಣೆಗಳ ಪರಿಣಾಮ, ದೇಶಕ್ಕೆ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ ಮತ್ತು ಅದು ಕಳೆದ ತ್ರೈಮಾಸಿಕದಲ್ಲಿ 24.6 ಬಿಲಿಯನ್ ಡಾಲರ್ ದಾಟಿದೆ. ಸಾಂಕ್ರಾಮಿಕದ ಸಮಯದಲ್ಲೂ ಸಹ ಅಷ್ಟು ದೊಡ್ಡ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳವನ್ನು ಸ್ವೀಕರಿಸಿರುವ ಏಕೈಕ ರಾಷ್ಟ್ರವೆಂದರೆ ಅದು ಭಾರತವಾಗಿದೆ. ಅದರ ಭಾಗವಾಗಿ 7 ಜವಳಿ ಪಾರ್ಕ್ ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಮತ್ತು ಮಿತ್ರಾ ಯೋಜನೆಯಡಿ ಹೂಡಿಕೆಯನ್ನು ಮತ್ತಷ್ಟು ಉತ್ತೇಜಿಸಲಾಗುತ್ತಿದೆ.

ಭಾರತದ ಆರ್ಥಿಕತೆಯ ಕೇಂದ್ರ ಬಿಂದುವಾಗಿರುವ ಎಂಎಸ್ ಎಂಇ ವಲಯದ ಅಭಿವೃದ್ಧಿಗೆ ಆತ್ಮನಿರ್ಭರ್ ಭಾರತ ಪ್ಯಾಕೇಜ್ ಅಡಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅಲ್ಲದೆ, ಹೆಚ್ಚುವರಿಯಾಗಿ ಬಜೆಟ್ ನಲ್ಲಿ 15,7000 ಕೋಟಿ ರೂ.ಗಳನ್ನು ಬಜೆಟ್ ಗೆ ತೆಗೆದಿರಿಸಲಾಗಿದೆ. ಸಣ್ಣ ಕಂಪನಿಗಳ ಮಾನದಂಡವನ್ನು 50 ಲಕ್ಷ ಮೂಲ ಬಂಡವಾಳದಿಂದ 2 ಕೋಟಿವರೆಗೆ ಹೆಚ್ಚಿಲು ಪ್ರಸ್ತಾಪಿಸಲಾಗಿದ್ದು, ಇದು ಎಂಎಸ್ ಎಂಇಗಳಿಗೆ ದೊಡ್ಡ ರಿಲೀಫ್ ನೀಡಲಿದೆ.

ಬಹುತೇಕ ಕಳೆದ 80 ವರ್ಷಗಳಿಂದ ಚಾಲ್ತಿಯಲ್ಲಿರುವ 1938ರ ವಿಮಾ ಕಾಯಿದೆಗೆ ಸುಧಾರಣೆ ತರುತ್ತಿರುವುದು ಸಾಕಾರಾತ್ಮಕ ಹೆಜ್ಜೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವಿಮಾ ವಲಯದಲ್ಲಿ ಎಫ್ ಡಿಐ ಪ್ರಮಾಣ ಶೇಕಡ 49ರಿಂದ ಶೇಕಡ 74ಕ್ಕೆ ಹೆಚ್ಚಿಸಲಾಗಿದ್ದು, ಇದರಿಂದಾಗಿ ಭಾರತಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದು ಬರಲಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ 20,000 ಕೋಟಿ ರೂ. ನಗದು ಸೇರ್ಪಡೆಯಿಂದಾಗಿ ಬ್ಯಾಂಕಿಂಗ್ ವಲಯ ಇನ್ನಷ್ಟು ಬಲವರ್ಧನೆಯಾಗಲಿದೆ. ಸ್ವತ್ತು ಪುನರ್ ನಿರ್ಮಾಣ ಮತ್ತು ಸ್ವತ್ತು ನಿರ್ವಹಣಾ ಕಂಪನಿ ಸೃಷ್ಟಿಯಿಂದಾಗಿ ಬ್ಯಾಂಕುಗಳಲ್ಲಿನ ಎನ್ ಪಿಎ ಸುಧಾರಿಸಲಿದೆ.

ಬಂದರು ಅಭಿವೃದ್ಧಿಗೆ ಪಿಪಿಪಿ ಮಾದರಿ ಪ್ರಸ್ತಾಪಿಸಿರುವುದರಿಂದ ಮತ್ತು ಮರ್ಚೆಂಟ್ ಶಿಪ್ಪಿಂಗ್ ಗೆ ಸಬ್ಸಿಡಿ ಘೋಷಣೆ. ರಿಸೈಕ್ಲಿಂಗ್ ಕಾಯ್ದೆ 2019 ಜಾರಿ ಮರು ಸಂಸ್ಕರಣಾ ಸಾಮರ್ಥ್ಯ 2024ರ ವೇಳೆಗೆ ದುಪ್ಪಟ್ಟುಗೊಳಿಸುವ ಕ್ರಮಗಳು ಬಂದರು ಉದ್ಯಮದ ಅಭಿವೃದ್ಧಿಗೆ ವಿಶೇಷ ಒತ್ತು ಸಿಗಲಿದೆ ಮತ್ತು ಅದರಲ್ಲಿ ವಿದೇಶಿ ಹಾಗೂ ಖಾಸಗಿ ಹೂಡಿಕೆ ಸಾಧ್ಯತೆಗಳು ಹೆಚ್ಚಳವಾಗುತ್ತವೆ. ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 20,000 ಕೋಟಿ ರೂ. ನಗದು ಸೇರ್ಪಡೆಯಿಂದ ಬ್ಯಾಂಕಿಂಗ್ ವಲಯ ಮತ್ತಷ್ಟು ಬಲವರ್ಧನೆಯಾಗಲಿದೆ. ಇದಿಷ್ಟೇ ಅಲ್ಲದೆ ಸಾಲ ಮತ್ತು ಹೂಡಿಕೆ ಲಭ್ಯತೆ ಮೇಲೆ ನೇರ ಪರಿಣಾಮ ಬೀರಲಿರುವ ನಗದು ಲಭ್ಯತೆಯನ್ನು ಮಾರುಕಟ್ಟೆಯಲ್ಲಿ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಶ್ರೀ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ (ಸ್ವಾವಲಂಬಿ) ನಿರ್ಮಾಣದ ಸಂಕಲ್ಪಕ್ಕೆ ವೇಗ

ಬಲಿಷ್ಠ ಮೂಲಸೌಕರ್ಯ ಅಭಿವೃದ್ಧಿಯಾಗದೆ ಭಾರತ ಜಗತ್ತಿನ ಆರ್ಥಿಕ ಮುಂಚೂಣಿ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ವಲಯದಲ್ಲಿ ಹೂಡಿಕೆ ಮಾಡುವ ಮೂಲಕ ಮೂಲಸೌಕರ್ಯ ಬಲವರ್ಧನೆಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈ ವರ್ಷದ ಬಜೆಟ್ ನಲ್ಲಿ ರಸ್ತೆ ಅಭಿವೃದ್ಧಿ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1.18 ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಿದ್ದಾರೆ. ರೈಲ್ವೆ ವ್ಯಾಪ್ತಿಯ ಹೆಚ್ಚಳ, ಸುಗಮ ಪ್ರಯಾಣ, ಪ್ರಯಾಣಿಕರ ಸುರಕ್ಷತೆ ಮತ್ತು ರೈಲ್ವೆ ವಹಿವಾಟನ್ನು ಉತ್ತೇಜಿಸಲು ಹಲವು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಈ ವರ್ಷದ ಬಜೆಟ್ ನಲ್ಲಿ ರೈಲ್ವೆ ಸಚಿವಾಲಯಕ್ಕೆ 1.10 ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ ಮತ್ತು ಮತ್ತು ರಾಷ್ಟ್ರೀಯ ರೈಲು ಯೋಜನೆ 2030ಯನ್ನು ಸಿದ್ಧಪಡಿಸಲಾಗಿದೆ. ದೊಡ್ಡ ನಗರಗಳಲ್ಲಿ ಮೆಟ್ರೋ ವ್ಯಾಪ್ತಿಯನ್ನು ವಿಸ್ತರಿಸಲು ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಸಣ್ಣ ನಗರಗಳಲ್ಲಿ ‘ಮೆಟ್ರೋ ಲೈಟ್’ ಮತ್ತು ‘ಮೆಟ್ರೋ ನಿಯೊ’ ತಂತ್ರಜ್ಞಾನಗಳನ್ನು ಬಳಸಿಕೊಂಡು ಒಂದನೇ ದರ್ಜೆ ಮತ್ತು ಎರಡನೇ ದರ್ಜೆಗಳ ನಗರ ವಾಸಿಗಳ ಭವಿಷ್ಯದಲ್ಲಿ ಮೆಟ್ರೋ ಪ್ರಯಾಣದಂತಹ ಅನುಭವ ಮತ್ತು ಆನಂದ ನೀಡುವ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆಗೆ ಆತ್ಮನಿರ್ಭರ ಭಾರತ ಯೋಜನೆ ಅಡಿ 18,000 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದ್ದು, ಅದರಲ್ಲಿ 20,000 ಹೊಸ ಬಸ್ ಗಳನ್ನು ಖರೀದಿಸಲಾಗುವುದು. ಇದರಿಂದ ಸಾರಿಗೆ ಸುಗಮವಾಗುವುದಲ್ಲದೆ, ಆಟೋ ಮೊಬೈಲ್ ವಲಯ ಅಭಿವೃದ್ಧಿಯಾಗಲಿದೆ ಮತ್ತು ಉದ್ಯೋಗಗಳು ಸೃಷ್ಟಿಯಾಗಲಿವೆ.

ಪ್ರಧಾನಮಂತ್ರಿಗಳ ಪ್ರತಿಯೊಂದು ಗ್ರಾಮಕ್ಕೂ, ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಅಭಿಯಾನ ಕ್ಷಿಪ್ರವಾಗಿ ಸಾಗುತ್ತಿದೆ ಎಂದು ಶ್ರೀ ಅಮಿತ್ ಷೇ ಹೇಳಿದರು. ಈ ಬಜೆಟ್ ನಲ್ಲಿ ಗ್ರಾಹಕರಿಗೆ ವಿದ್ಯುತ್ ವಿದ್ಯುತ್ ವಿತರಣಾದಾರರ ಸೇವೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ವರ್ಷದಿಂದ ವಿದ್ಯುತ್ ವಲಯದಲ್ಲಿ 3 ಲಕ್ಷ ಕೋಟಿಗೂ ಅಧಿಕ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಕಳೆದ ಆರು ವರ್ಷಗಳಲ್ಲಿ ಭಾರತ ಬಾಹ್ಯಾಕಾಶ ವಲಯದಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ಅವುಗಳನ್ನು ಮುಂದುವರಿಸಿಕೊಂಡು ಹೋಗುತ್ತಾ ದೇಶದ ಮೊದಲ ಮಾನವರಹಿತ ಉಪಗ್ರಹ ಯೋಜನೆ ಗಗನಯಾನ ಮಿಷನ್ 2021ರ ಡಿಸೆಂಬರ್ ನಲ್ಲಿ ಉಡಾಯಿಸಲಾಗುವುದು ಎಂದು ಹೇಳಿದರು.

ಸಮಾಜದ ಎಲ್ಲ ವರ್ಗದ ಹಿತಕಾಯುವ ಬಜೆಟ್

ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಮತ್ತು ಹಿಂಜರಿಕೆಯ ನಡುವೆಯೂ ಆತ್ಮನಿರ್ಭರ ಭಾರತ ಬಜೆಟ್ ಸಮಾಜದ ಎಲ್ಲ ವರ್ಗಗಳ ಹಿತಕಾಯುತ್ತಿದೆ. ಜೊತೆಗೆ ವಿಶೇಷವಾಗಿ ಉತ್ತರದಲ್ಲಿ ಲಡಾಖ್ ವರೆಗೆ, ದಕ್ಷಿಣದಲ್ಲಿ ತಮಿಳುನಾಡು ಮತ್ತು ಪೂರ್ವದಲ್ಲಿ ಅಸ್ಸಾಂವರೆಗೆ ಎಲ್ಲ ಪ್ರದೇಶಗಳ  ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ದೇಶದ ಜನರ ಮೇಲೆ ಯಾವುದೇ ಹೆಚ್ಚುವರಿ ತೆರಿಗೆಯನ್ನು ವಿಧಿಸದೆ ಬಜೆಟ್ ನಲ್ಲಿ ಹಲವು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಮೋದಿ ಅವರ ಸರ್ಕಾರ ನವಭಾರತ ಅಭಿಯಾನದಡಿ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್’ ಅಭಿಯಾನದೊಂದಿಗೆ ಕಾರ್ಯೋನ್ಮುಖವಾಗಿದೆ.

ರೈತರು ದೇಶದ ಬೆನ್ನೆಲುಬಾಗಿದ್ದಾರೆ, ಹಾಗಾಗಿ ಮೊದಲನೇ ದಿನದಿಂದಲೂ ಮೋದಿ ಅವರ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಯತ್ನ ನಡೆಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಬಜೆಟ್ ನಲ್ಲಿ ಮೋದಿ ಅವರ ಸರ್ಕಾರ ಎಂಎಸ್ ಪಿಗೆ ಒಂದೂವರೆ ಪಟ್ಟು ವೆಚ್ಚವನ್ನು ಖಾತ್ರಿಪಡಿಸುವ ಸಂಕಲ್ಪ ಮಾಡಿದೆ. ಇದು ವರ್ಷ ಭತ್ತಕ್ಕೆ ಎಂಎಸ್ ಪಿ ನಿಗದಿಪಡಿಸಿರುವುದನ್ನು ತೋರುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮೊತ್ತ ಎರಡುಪಟ್ಟು ಹೆಚ್ಚಾಗಿದೆ. ಇದರಿಂದ 1.5 ಕೋಟಿ ರೈತರಿಗೆ ಅನುಕೂಲವಾಗಲಿದೆ. ಮೋದಿ ಅವರ ಸರ್ಕಾರ ಪ್ರತಿಯೊಂದು ವಲಯದಲ್ಲೂ ರೈತರಿಗೆ ಬೆಂಬಲ ನೀಡುತ್ತಿದೆ. ಬೇಳೆಕಾಳು, ಗೋಧಿ, ಭತ್ತ ಹಾಗೂ ಇತರೆ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ಎಪಿಎಂಸಿಗಳ ಬಲವರ್ಧನೆಗೆ ಕೃಷಿ ನಿಧಿಯ ಒಂದು ಭಾಗವನ್ನು ಬಳಕೆ ಮಾಡಿಕೊಳ್ಳಲಾಗುವುದು.

ರೈತರಿಗೆ ಸುಲಭವಾಗಿ ಸಾಲ ಸೌಲಭ್ಯ ದೊರಕುವಂತೆ ಮಾಡಲು 16.5 ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಇದರಿಂದಾಗಿ ರೈತರು ಸುಲಭವಾಗಿ ಅವಧಿ ಸಾಲಗಳನ್ನು ಪಡೆಯಬಹುದಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸೂಕ್ಷ್ಮ ನೀರಾವರಿ ನಿಧಿಗೆ 5,000 ಕೋಟಿ ರೂ.ಗಳನ್ನು ಸೃಷ್ಟಿಸಲಾಗಿದ್ದು, ಇದರಿಂದಾಗಿ ನೀರಾವರಿ ಪ್ರದೇಶ ಹೆಚ್ಚಳವಾಗುವ ಜೊತೆ ಜಲ ಸಂರಕ್ಷಣೆಗೂ ಸಹಾಯಕವಾಗಲಿದೆ. ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆಗೆ ಮತ್ತು ಪರಿಣಾಮಕಾರಿ ಮಾರುಕಟ್ಟೆಗಳನ್ನು ಒದಗಿಸಲು ದೇಶಾದ್ಯಂತ 5 ಕೃಷಿ ಉತ್ಪನ್ನಗಳ ತಾಣವನ್ನು ರೂಪಿಸಲಾಗುವುದು. ಆಪರೇಷನ್ ಗ್ರೀನ್ ಯೋಜನೆಯಡಿ 22 ಬಹು ಬೇಗ ನಾಶವಾಗುವಂತಹ ಬೆಳೆಗಳನ್ನು ಸೇರಿಸಲಾಗಿದೆ. ಇದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ರೈತರಿಗೆ ತಮ್ಮ ಭೂ ಮಾಲಿಕತ್ವದ ತೊಂದರೆಗಳನ್ನು ನಿವಾರಿಸಲು ‘ಸ್ವಾಮಿತ್ವ’(ಭೂಮಾಲಿಕತ್ವ) ಯೋಜನೆಯಡಿ ರಾಷ್ಟ್ರ ಮಟ್ಟದಲ್ಲಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು.

ಕೊರೊನಾ ಸಾಂಕ್ರಾಮಿಕದ ವೇಳೆ ಭಾರತ ಆರೋಗ್ಯ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇಂದು ನಾವು ರಾಷ್ಟ್ರ ಮಟ್ಟದಲ್ಲಿ ಪರೀಕ್ಷಾ ಜಾಲವನ್ನು ಸೃಷ್ಟಿಸಿದ್ದೇವೆ. ವೆಂಟಿಲೇಟರ್ ಮತ್ತು ಪಿಪಿಇ ಕಿಟ್ ಗಳನ್ನು ಉತ್ಪಾದಿಸುತ್ತಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷ ಬಜೆಟ್ ನಲ್ಲಿ ಶೇ.137ರಷ್ಟು ಅಧಿಕ ಹಣವನ್ನು ಆರೋಗ್ಯ ವಲಯಕ್ಕೆ ನೀಡಲಾಗಿದೆ. ಈ ಬಜೆಟ್ ನಲ್ಲಿ 64 ಸಾವಿರ ಕೋಟಿ ರೂ.ಗಳ ಹೂಡಿಕೆಯೊಂದಿಗೆ ‘ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಾಸ್ಥ ಭಾರತ’ ಯೋಜನೆಯನ್ನು ಆರಂಭಿಸಲಾಗುವುದು. ಇದರಿಂದ 75 ಸಾವಿರ ಗ್ರಾಮಗಳಲ್ಲಿ ಯೋಗಕ್ಷೇಮ ಕೇಂದ್ರಗಳನ್ನು ತೆರೆಯಲು ನೆರವಾಗಲಿದೆ ಜೊತೆಗೆ 6.2 ಜಿಲ್ಲೆಗಳಲ್ಲಿ ಗಂಭೀರ ಆರೈಕೆ ಆಸ್ಪತ್ರೆಗಳು ಮತ್ತು ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ವ್ಯವಸ್ಥೆ ಬಲವರ್ಧನೆಗೊಳಿಸಲಾಗುವುದು. 4 ಹೊಸ ರಾಷ್ಟ್ರೀಯ ವೈರಾಣು ಸಂಸ್ಥೆಗಳು ಮತ್ತು 9 ಜೈವಿ ಸುರಕ್ಷತಾ ಮೂರನೇ ಹಂತದ ಪ್ರಯೋಗಾಲಯ ಆರಂಭಿಸುವುದನ್ನು ಘೋಷಿಸಲಾಗಿದೆ. ಜೊತೆಗೆ ವಿಶ್ವ ಆರೋಗ್ಯ ರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಲಾಗುವುದು. ಇದು ಸಾರ್ವಜನಿಕ ಆರೋಗ್ಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ನಮ್ಮ ಸೂಕ್ಷ್ಮ ಮನಸ್ಸಿನ ಪ್ರಧಾನಮಂತ್ರಿ ಅವರು ಕೊರೊನಾ ಲಸಿಕೆಗಾಗಿ 35 ಸಾವಿರ ಕೋಟಿ ರೂ.ಗಳನ್ನು ವ್ಯವಸ್ಥೆ ಮಾಡಿದ್ದಾರೆ ಮತ್ತು ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದು, ಲಸಿಕೀಕರಣದ ಮೂಲಕ ಭಾರತವನ್ನು ಕೊರೊನಾ ಮುಕ್ತಗೊಳಿಸುವ ಗುರಿ ಇದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಸ್ವಾಸ್ಥ ಭಾರತ ಮಿಷನ್ 2.0ಗೆ 1.41 ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಭಾರತದ ನಗರಗಳು ವಿಶ್ವದ ಅಭಿವೃದ್ಧಿ ಹೊಂದಿದ ನಗರಗಳ ವರ್ಗಕ್ಕೆ ಸೇರಿಸಲು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಲ್ಲದೆ 4378 ನಗರ ಸ್ಥಳೀಯ ಸಂಸ್ಥೆಗಳಲ್ಲಿ 2.86 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಉದ್ದೇಶದೊಂದಿಗೆ ಜಲಜೀವನ್ ಮಿಷನ್(ನಗರ) ಯೋಜನೆ ಆರಂಭಿಸಲಾಗುವುದು. ನಗರದ ವಾಯು ಸ್ವಚ್ಛಗೊಳಿಸಲು ಮತ್ತು ಮಾಲಿನ್ಯ ನಿಯಂತ್ರಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಈ ವರ್ಷದ ಬಜೆಟ್ ನಲ್ಲಿ ಉಜ್ವಲ ಯೋಜನೆಯಡಿ 1 ಕೋಟಿ ಸಹೋದರಿಯರು ಮತ್ತು ತಾಯಂದಿರಿಗೆ  ಹೆಚ್ಚುವರಿಯಾಗಿ ಎಲ್ ಪಿಜಿ ಸಂಪರ್ಕಗಳನ್ನು ಒದಗಿಸಲಾಗುವುದು. ಪ್ರಧಾನಮಂತ್ರಿಗಳು ದೇಶದ ಪ್ರತಿಯೊಬ್ಬ ಪ್ರಜೆಗೂ ಶುದ್ಧ ಅಡುಗೆ ಅನಿಲ ಒದಗಿಸಲು, ಪ್ರತಿಯೊಂದು ಮನೆಗೂ  ಶುದ್ಧ ಗಾಳಿ, ಶುದ್ಧ ನೀರಿ ಮತ್ತು ಶುದ್ಧ ವಸತಿ ಕಲ್ಪಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಮತ್ತು ಇಂದು ಭಾರತ  ನಿಟ್ಟಿನಲ್ಲಿ ಸಾಕಷ್ಟು ಯಶಸ್ವಿಯಾಗಿದೆ ಎಂದರು.

ಶಿಕ್ಷಣ ಹಕ್ಕು ಯೋಜನೆಯನ್ನು ಮುಂದುರಿಸಿಕೊಂಡು ಹೋಗುತ್ತಾ, ತಳಮಟ್ಟದಲ್ಲಿ ಶಿಕ್ಷಣದ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶ್ರಿ ಅಮಿತ್ ಶಾ ಹೇಳಿದರು. ಅವುಗಳಲ್ಲಿ ಪ್ರಮುಖ ಅಂಶಗಳೆಂದರೆ,  15 ಸಾವಿರ ಶಾಲೆಗಳನ್ನು ಆದರ್ಶ ಶಾಲೆಗಳ ವರ್ಗಕ್ಕೆ ಸೇರಿಸುವುದು, ದುರ್ಬಲ ವರ್ಗದ ಮಕ್ಕಳಿಗೆ 750 ಏಕಲವ್ಯ ಮಾದರಿ ಶಾಲೆಗಳ ಆರಂಭ ಮತ್ತು 100 ಹೊಸ ಸೈನಿಕ ಶಾಲೆಗಳ ಆರಂಭ ಸೇರಿದೆ. ಅಷ್ಟೇ ಅಲ್ಲದೆ, ಗುಣಮಟ್ಟದ ಶಿಕ್ಷಣಕ್ಕಾಗಿ ರಾಷ್ಟ್ರೀಯ ತರಬೇತಿ ಯೋಜನೆಗೆ 3 ಸಾವಿರ ಕೋಟಿ ವಿನಿಯೋಗಿಸಲಾಗುವುದು, 50ಸಾವಿರ ಕೋಟಿ ರೂ,ಗಳನ್ನು ಸಂಶೋಧನೆಗೆ ತೆಗೆದಿರಿಸಲಾಗಿದೆ. ಲಡಾಖ್ ನಲ್ಲಿ ಶಿಕ್ಷಣವನ್ನು ವಿಸ್ತರಿಸಲು ಮೋದಿ ಅವರ ಸರಕಾರ ಲೇಹ್ ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧರಿಸಿದೆ ಮತ್ತು ಇದು ಸ್ಥಳೀಯ ಯುವಕರಿಗೆ ಉತ್ತೇಜನ ನೀಡಲಿದೆ ಮತ್ತು ಇದರಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶದ ಸಮಗ್ರ  ಅಭಿವೃದ್ಧಿ ನಿಟ್ಟಿನಲ್ಲಿ ಬದ್ಧತೆಯನ್ನು ತೋರುತ್ತದೆ.

ಮೋದಿ ಅವರ ಸರ್ಕಾರ ಸದಾ ಸಮಾಜದ ವಿಶೇಷ ವರ್ಗಗಳಿಗೆ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಿರುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅದರ ಭಾಗವಾಗಿ ವರ್ಷ 5 ಹೊಸ ಬಂದರುಗಳನ್ನು ಅಭಿವೃದ್ಧಿಪಡಿಸಲಾಗುವುದು, ಆ ಮೂಲಕ ಮೀನುಗಾರಿಕೆಗೆ ಸಂಬಂಧಿಸಿದ ಉದ್ಯಮವನ್ನೂ ಸಹ ಅಭಿವೃದ್ಧಿಗೊಳಿಸಲಾಗುವುದು. ವಲಸೆ ಕಾರ್ಮಿಕರ ಜೀವನವನ್ನು ಸುಗಮಗೊಳಿಸಲು, 32 ರಾಜ್ಯಗಳ 70 ಕೋಟಿ ವಲಸೆ ಕಾರ್ಮಿಕರಿಗೆ ಒಂದು ರಾಷ್ಟ್ರ- ಒಂದು ಪಡಿತರ ಕಾರ್ಡ್ ನೀಡಲಾಗಿದೆ ಮತ್ತು ಇದರಿಂದಾಗಿ ಅವರು ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ತಮ್ಮ ಪಡಿತರವನ್ನು ಪಡೆಯಬಹುದಾಗಿದೆ.

ನರೇಂದ್ರ ಮೋದಿ ಅವರ ಸರ್ಕಾರ ಸದಾ ಹಿರಿಯ ನಾಗರಿಕರ ಬಗ್ಗೆ ಕಾಳಜಿ ಹೊಂದಿದೆ.  ಕೈಗೆಟುಕುವ ದರದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ಹಲವು ಯೋಜನೆಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇದೀಗ ಬಜೆಟ್ ನಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಿಂದ ವಿನಾಯ್ತಿ ನೀಡಲಾಗಿದೆ ಮತ್ತು ಇದರಿಂದಾಗಿ ಅವರು ತಮ್ಮ ಉಳಿತಾದ ಹಣದಿಂದ ಜೀವನ ನಡೆಸುವುದು ಸುಲಭವಾಗುತ್ತದೆ. ಮಧ್ಯಮ ವರ್ಗದವರ ಹಿತ ಕಾಯಲು ಕೈಗೆಟುಕುವ ದರದಲ್ಲಿ ವಸತಿ ಕಲ್ಪಿಸುವ ಯೋಜನೆಯನ್ನು ಇನ್ನೂ ಒಂದು ವರ್ಷ ಮುಂದುವರಿಸಲಾಗುವುದು.

ಈಶಾನ್ಯ ಭಾರತ  ಮತ್ತು ದಕ್ಷಿಣ  ಭಾಗದ ಅಭಿವೃದ್ಧಿಗೆ ಬಜೆಟ್ ನಲ್ಲಿ ಒತ್ತು

ಪೂರ್ವ ಕ್ರಿಯಾ ಅಭಿಯಾನದಡಿ, ನರೇಂದ್ರ ಮೋದಿ ಅವರ ಸರ್ಕಾರ ಈಶಾನ್ಯ ಭಾರತದ  ಮತ್ತು ದಕ್ಷಿಣ ಭಾಗದ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ, ಹಲವು ದಶಕಗಳ ಕಾಲ ಭಾಗ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಆ ನಿಟ್ಟಿನಲ್ಲಿ ಅಸ್ಸಾಂಗೆ ಬಜೆಟ್ ನಲ್ಲಿ ವಿಶೇಷ ಒತ್ತು ನೀಡಲಾಗಿದೆ.  ಚಹಾ ತೋಟದ ಕಾರ್ಮಿಕರು ನಿರ್ಲಕ್ಷ್ಯದ ಸಂತ್ರಸ್ತರಾಗಿದ್ದಾರೆ.  ಬಿಜೆಪಿ ಸರ್ಕಾರ  ಈಗಾಗಲೇ ಅವರ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರದ ಕ್ರಮಗಳನ್ನು ಕುರಿತು ಮಾತನಾಡಿದ ಅವರು, ಈ ಬಜೆಟ್ ನಲ್ಲಿ ಚಹಾ ತೋಟದ ಉದ್ಯೋಗಿಗಳಿಗಾಗಿ ಒಂದು ಸಾವಿರ ಕೋಟಿ ರೂ. ವಿಶೇಷ ಅನುದಾನ ನಿಗದಿಪಡಿಸಲಾಗಿದೆ. ಭಾರತ್ ಮಾಲಾ ಯೋಜನೆಯಡಿ ಅಸ್ಸಾಂಗೆ ರಸ್ತೆ ಅಭಿವೃದ್ಧಿಗಾಗಿ 35ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ ಎಂದರ. ಅದೇ ರೀತಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗೆ ಅನುಕೂಲವಾಗುವ ಪೂರ್ವ-ಪಶ್ಚಿಮ ಕಾರಿಡಾರ್ ರೈಲ್ವೆ ಸರಕು ಕಾರಿಡಾರ್ ಅಭಿವೃದ್ಧಿಗೆ 1,78,000 ಕೋಟಿ ರೂ. ಗಳನ್ನು ಬಜೆಟ್ ನಲ್ಲಿ ಒದಗಿಸಲಾಗಿದೆ.

ನರೇಂದ್ರ ಮೋದಿ ಅವರು ಸರ್ಕಾರ ದಕ್ಷಿಣದ ರಾಜ್ಯಗಳ ಅಭಿವೃದ್ಧಿಗೂ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ ಎಂದ ಶ್ರಿ ಅಮಿತ್ ಶಾ ಅವರು, ಅದಕ್ಕೆ ನಿದರ್ಶನವೆಂದರೆ ಇತರೆ ಯೋಜನೆಗಳ ಜೊತೆಗೆ ರಕ್ಷಣಾ ಕಾರಿಡಾರ್ ಅನ್ನು ತಮಿಳುನಾಡಿಗೆ ನೀಡಿರುವುದು ಎಂದರು. ಭಾರತ್ ಮಾಲಾ ಯೋಜನೆಯಡಿ 3.3ಲಕ್ಷ ಕೋಟಿ ರೂ,ಗಳನ್ನು ನಿಗದಿಪಡಿಸಲಾಗಿದೆ, ಅದರಲ್ಲಿ ದಕ್ಷಿಣದ ರಾಜ್ಯಗಳಿಗೆ ವಿಶೇಷ ಒತ್ತು ನೀಡಲಾಗಿದೆ.  ಅದರಡಿ ತಮಿಳುನಾಡಿನಲ್ಲಿ 1.03 ಲಕ್ಷ ಕೋಟಿ ವೆಚ್ಚದಲ್ಲಿ 3500 ಕಿ.ಮೀ  ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ಕೇರಳದಲ್ಲಿ 65,000 ಕೋಟಿ ವೆಚ್ಚದಲ್ಲಿ 1,1000 ಕಿ.ಮೀ ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಸೇರಿರುವುದು ಸ್ವಾಗತಾರ್ಹ ಎಂದರು. ದಕ್ಷಿಣ ಭಾರತದ ಮೂರು ನಗರಗಳಲ್ಲಿ ಮೆಟ್ರೋ ಜಾಲದ ಅಭಿವೃದ್ಧಿಗೆ 10ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅದರಡಿ ಕೋಚಿ ಮೆಟ್ರೋ ಎರಡನೇ ಹಂತದ 11.5 ಕಿಲೋ ಮೀಟರ್ ಉದ್ದದ 1957 ಕೋಟಿ ವೆಚ್ಚದ ಯೋಜನೆ, ಬೆಂಗಳೂರು ಮೆಟ್ರೋ ಎರಡನೇ ಹಂತದ 14,788 ಕೋಟಿ ವೆಚ್ಚದ 58.19 ಕಿ.ಮೀ ಉದ್ದದ ಯೋಜನೆ, ಚೆನ್ನೈ ಮೆಟ್ರೋದ 63,246 ಕೋಟಿ ವೆಚ್ಚದ 118 ಕಿಲೋಮೀಟರ್ ಅಭಿವೃದ್ಧಿ ಸೇರಿದೆ ಎಂದು ಅವರು ಹೇಳಿದರು.

***


(Release ID: 1694444) Visitor Counter : 276