ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಚಳಿಗಾಲದ ಝನ್ಸ್ಕಾರ್ ಖೇಲೋ ಇಂಡಿಯಾ ಕ್ರೀಡಾಕೂಟ ಮತ್ತು 2021 ರ ಯುವ ಉತ್ಸವಕ್ಕೆ ತೆರೆ


ಜನ್ಸ್ಕಾರ್ ನ ವಿವಿಧ ಭಾಗಗಳಿಂದ ಉತ್ಸವದಲ್ಲಿ ಸುಮಾರು 700 ಮಂದಿ ಭಾಗಿ

Posted On: 31 JAN 2021 5:56PM by PIB Bengaluru

ಕೇಂದ್ರಾಡಳಿತ ಪ್ರದೇಶ ಲದ್ದಾಕ್ ನ ಝನ್ಸ್ಕಾರ್ ನಲ್ಲಿ 13 ದಿನಗಳ ಚಳಿಗಾಲದ  ಖೇಲೋ ಇಂಡಿಯಾ ಕ್ರಿಡಾ ಕೂಟ ಮತ್ತು ಯುವ ಉತ್ಸವಕ್ಕೆ ತೆರೆ ಬಿದ್ದಿದೆ. ಲದ್ದಾಕ್ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಈ ಉತ್ಸವವನ್ನು ಇದೇ ಮೊದಲ ಬಾರಿಗೆ ಆಯೋಜಿಸಿತ್ತು.

 

ಸಾಹಸ ಪ್ರವಾಸೋದ್ಯಮದಲ್ಲಿರುವ ಅವಕಾಶಗಳು ಮತ್ತು ಕ್ರೀಡೆಯಲ್ಲಿನ ಸಾಮರ್ಥ್ಯ ಪ್ರದರ್ಶನ, ಲದ್ದಾಕ್ ನಲ್ಲಿ ಸಾಹಸ ಕ್ರೀಡೆಯ ಹೊಸ ಯುಗ ಆರಂಭಿಸುವ, ಆರ್ಥಿಕತೆಯನ್ನು ವೃದ್ಧಿಸುವ ಸಲುವಾಗಿ ಈ ಉತ್ಸವ ಆಯೋಜಿಸಲಾಗಿತ್ತು. 13 ದಿನಗಳ ಉತ್ಸವ ಜನವರಿ 18 ರ ಶನಿವಾರ ಪ್ರಾರಂಭವಾಗಿತ್ತು. ಲದ್ದಾಕ್ ನ ಸಂಸದ ಶ್ರೀ ಜಮ್ಯುಂಗ್ ತ್ಸೆರಿಂಗ್ ನಮ್ಗ್ಯಾಲ್  ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ಚಾ ಕ್ಷೇತ್ರದ ಕೌನ್ಸಿಲರ್ ಶ್ರೀ ಸ್ನತ್ ಜಿನ್ ಲಕ್ಪ ಅವರು ಮುಖ್ಯ ಅತಿಥಿಯಾಗಿದ್ದರು.   

ಕ್ರೀಡಾ ಇಲಾಖೆಯ ಕಾರ್ಯದರ್ಶಿ ಶ್ರೀ ರವಿಂದರ್ ಕುಮಾರ್, ಕೇಂದ್ರಾಡಳಿತ ಪ್ರದೇಶ ಲದ್ದಾಕ್ ನ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಶ್ರೀ ಕುಂಝೆಸ್ ಅಂಗ್ಮೋ, ಪದ್ರಶ್ರೀ ಪ್ರಶಸ್ತಿ ಪುರಸ್ಕೃತ ತ್ಸುಲ್ಟರಿಮ್ ಚೋಂಜೋರ್, ಝನ್ಸ್ಕಾರ್ ನ ಲದ್ದಾಕ್ ನ ಬೌದ್ಧ ಒಕ್ಕೂಟದ  ಅಧ್ಯಕ್ಷರು, ಎಲ್.ಬಿ.ಎ ಯುವ ಘಟಕ, ಮಸ್ಲಿಂ ಯುವ ಘಟಕ, ಝೆನ್ಸ್ಕಾರ್ ನ ಮಹಿಳಾ ಸಂಘ, ಕೇಂದ್ರಾಡಳಿತ ಪ್ರದೇಶ ಲದ್ದಾಕ್ ನ ಅಧೀನ ಕಾರ್ಯದರ್ಶಿ ಮತ್ತು ವಿಶೇಷಾಧಿಕಾರಿ, ಸೇನಾಧಿಕಾರಿಗಳು, ಜಿ.ಆರ್.ಇ.ಎಫ್ ಮತ್ತು ಇತರೆ ಉಪ ವಿಭಾಗದ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಮಾತನಾಡಿದ ಲದ್ದಾಕ್ ನ ಸಂಸದ ಶ‍್ರೀ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್, ಲದ್ದಾಕ್ ನಲ್ಲಿ ಚಳಿಗಾಲದ ಕ್ರೀಡೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಉತ್ಸವ ಮಹತ್ವದ ಸಾಧನೆಯಾಗಿದೆ. ಪ್ರವಾಸಿಗರು ಧಾರ್ಮಿಕ ಸ್ಥಳಗಳು ಮತ್ತಿತರ ತಾಣಗಳಿಗೆ ಮಾತ್ರ ಭೇಟಿ ನೀಡುತ್ತಾರೆ. ಆದರೆ ಈ ಕಾರ್ಯಕ್ರಮ ಪ್ರವಾಸೋದ್ಯಮ ಮತ್ತು ಆರ್ಥೀಕ ಚಟುವಟಿಕೆಯನ್ನು ವಿಸ್ತರಿಸಲಿದೆ ಎಂದರು.

ಕೇಂದ್ರಾಳಿತ ಪ್ರದೇಶದ ಆಡಳಿತ ಮತ್ತು ಇತರ ಸಂಬಂಧಪಟ್ಟ ಇಲಾಖೆಗಳು ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದು, ಇವರೆಲ್ಲರಿಗೂ ಅಭಿನಂದನೆಗಳು. ಮುಂಬರುವ ದಿನಗಳಲ್ಲಿ ಈ ಕ್ರೀಡಾಕೂಟವನ್ನು 70 ದಿನಗಳಿಗೆ ವಿಸ್ತರಿಸಲಾಗುವುದು. ಇದರಲ್ಲಿ ಚಾರಣ ಮತ್ತು ಚಾದರ್ ಟ್ರೆಕ್ ಸಹ ಸೇರ್ಪಡೆಮಾಡಲಾಗುವುದು ಎಂದರು.

ಕ್ರೀಡಾ ಇಲಾಖೆಯ ಶ್ರೀ ರವಿಂದರ್ ಕುಮಾರ್ ಮಾತನಾಡಿ, ಕೇಂದ್ರ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಪ್ರಯತ್ನ ಶ‍್ಲಾಘನೀಯ. ಕೇಂದ್ರ ಸಚಿವ ಶ್ರೀ ಕಿರೆನ್ ರಿಜಿಜು ಲದ್ದಾಕ್ ನ ಸಂಸದ ಶ್ರೀ ಜಮ್ಯಾಂಗ್ ತ್ಸೆರಿಂಗ್ ನಮಗ್ಯಾಲ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತಿತರ ಸಂಸ್ಥೆಗಳು, ವ್ಯಕ್ತಿಗಳು, ಉತ್ಸವ ಯಶಸ್ಸಿಗೆ ಶ್ರಮಿಸಿದ ಝನ್ಸ್ಕಾರ್ ನ ಜನತೆಯ ಸಹಕಾರದಿಂದ ಇದು ಯಶಸ್ವಿಯಾಗಿದೆ ಎಂದರು.

“ ಮುಂದಿನ ವರ್ಷ ಈ ಕಾರ್ಯಕ್ರಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಆಯೋಜಿಸಲಾಗುವುದು. ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ ಮೂಲ ಸೌಕರ್ಯ ಅಭಿವೃದ್ಧಿ, ಪರಿಕರಗಳ ಸಂಗ್ರಹಣೆ, ಮತ್ತಿತರ ಅಗತ್ಯವಲಯಗಳಿಗೆ ನೆರವು ನೀಡಲಿದೆ.” ಎಂದು ಶ್ರೀ ರವಿಂದರ್ ಕುಮಾರ್ ತಿಳಿಸಿದರು.  

ಲದ್ದಾಕ್ ನ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಶ್ರೀ ಕುಂಝೆಸ್ ಅಂಗ್ಮೋ ಮಾತನಾಡಿ, ಝನ್ಸ್ಕಾರ್ ನಲ್ಲಿ ಚಳಿಗಾಲದ ಕ್ರೀಡೆ ಮತ್ತು  ಪ್ರವಾಸೋದ್ಯಮ ನಡೆಸಲು ಎಲ್ಲಾ ಅವಕಾಶಗಳಿವೆ. ಇದಕ್ಕೆ ಪೂರಕವಾಗಿರುವ ಎಲ್ಲಾ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ಕಲ್ಪಿಸಲಿದೆ ಎಂದು ಹೇಳಿದರು.  

ಈ ಉತ್ಸವದಲ್ಲಿ ಹೊರಾಂಗಣ ಚಟುವಟಿಕೆಗಳಾದ ಐಸ್ ಹಾಕಿ, ಸ್ನೋ ಸ್ಕೈಯಿಂಗ್, ಯಲ್ಕ ಮತ್ತು ಕುದುರೆ ಸವಾರಿ, ಐಸ್ ಕ್ಲೈಂಬಿಂಗ್ ಮತ್ತು ಅರ್ಚರಿ ಗಮನ ಸೆಳೆಯಿತು. ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ನೋ ಶಿಲ್ಪಕಲೆ, ಆಹಾರ ಉತ್ಸವ, ಯೋಗ, ಧ್ಯಾನ ಕೂಡ ಈ ಉತ್ಸವದ ಭಾಗವಾಗಿತ್ತು.

ಅಥ್ಲೀಟ್ ಗಳು, ತರಬೇತುದಾರರು, ಸಂಘಟಕರು, ಪಾಲ್ಗೊಂಡ ಮತ್ತಿತರರಿಗೆ ಅಭಿನಂದನೆಯ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಹಲವಾರು ಕ್ರೀಡಾ ತಂಡಗಳು, ಝೆನ್ಸ್ಕಾರ್ ನ ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಿದ್ದವು. ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ಏರ್ಪಾಟಾಗಿತ್ತು. ಝನ್ಸ್ಕಾರ್ ನ 700 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಲದ್ದಾಕ್ ನ ಎಲ್ಲಾ ವಲಯಗಳಿಗೆ ಕ್ರೀಡಾ ಸೌಲಭ್ಯ ಕಲ್ಪಿಸಲು ಯೋಚಿಸಿದೆ. ಲದ್ದಾಕ್ ಅನ್ನು ಐಸ್ ಹಾಕಿ ಕೇಂದ್ರವನ್ನಾಗಿ ಮಾಡಲು, ಜತೆಗೆ ಅರ್ಚರಿ ಮತ್ತು ಪೋಲೋ ಕ್ರೀಡಾ ಕೇಂದ್ರವನ್ನು ತೆರೆಯಲು ಉದ್ದೇಶಿಸಿದೆ.



(Release ID: 1693876) Visitor Counter : 165


Read this release in: English , Urdu , Hindi , Tamil