ವಾರ್ತಾ ಮತ್ತು ಪ್ರಸಾರ ಸಚಿವಾಲಯ

51 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಚಾಲನೆ: ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ ಬಿಸ್ವಜಿತ್ ಚಟರ್ಜಿ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಘೋಷಣೆ


ಬಾಂಗ್ಲಾದೇಶದ ಶ್ರೀ ಶೇಕ್ ಮುಜಿಬುರ್ ರೆಹಮಾನ್ ಅವರ 100 ನೇ ಜನ್ಮ ಶತಮಾನೋತ್ಸವ: ಭಾರತ – ಬಾಂಗ್ಲಾದೇಶದಿಂದ ಜಂಟಿಯಾಗಿ “ಬಂಗಬಂಧು” ಸಿನೆಮಾ ನಿರ್ಮಣ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವ್ಡೆಕರ್

ಸಿನೆಮಾ ಹೊಸ ಗೀಳಾಗಿ ಪರಿವರ್ತೆನೆಯಾಗಲಿ : ಚಿತ್ರನಟ ಸುದೀಪ್

ನೀವು ಏನು ಮಾಡುತ್ತೀರೋ ಅದನ್ನು ಪ್ರೀತಿಸಿ: ನೀವು ಏನನ್ನಾದರೂ ಪ್ರೀತಿಸಿದರೆ ಮತ್ತು ನಂಬಿದರೆ ಮಾತ್ರ ಅದನ್ನು ಸಾಧಿಸಲು ಸಾಧ್ಯ: ಐಐಎಫ್ಐ ಜೀವಮಾನ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿರುವ, ಮತ್ತು ಇಟಲಿಯ ಸಿನೆಮಾಟೋಗ್ರಾಫರ್ ಶ್ರೀ ವಿಟ್ಟೋರಿಯೋ ಸ್ಟೊರರೊ

ಈ ಸವಾಲಿನ ಸಮಯದಲ್ಲಿ ಚಲನಚಿತ್ರೋತ್ಸವ ಆಯೋಜಿಸುವುದು ನಿಮ್ಮ ಬದ್ಧತೆ ಮತ್ತು ಧೈರ್ಯವನ್ನು ತೋರಿಸುತ್ತದೆ. ಕಲೆ ಮತ್ತು ಸಂಸ್ಕೃತಿಯ ಬಗೆಗೆ ನಿಮಗಿರುವ ಉತ್ಸಾಹ ಮತ್ತು ಪ್ರೀತಿಯನ್ನು ಇದು ಪ್ರತಿಬಿಂಬಿಸುತ್ತದೆ: ಭಾರತದಲ್ಲಿ ಬಾಂಗ್ಲಾದೇಶದ ರಾಯಭಾರಿ

ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ, ಬೆರಗುಗೊಳಿಸುವ ಸಮಾರಂಭದಲ್ಲಿ ಬಹು ನಿರೀಕ್ಷಿತ 51 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ [ಐಎಫ್ಎಫ್ಐ] ಗೆ ಚಾಲನೆ ದೊರೆಯಿತು.

ಗೋವಾದ ಪಣಜಿಯ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಜನತ್ತಿನಾದ್ಯಂತ ಆಗಮಿಸಿದ್ದ ಚಲನಚಿತ್ರ ನಟರು, ಚಿತ್ರ ನಿರ್ಮಾಪಕರು ಮತ್ತು  ಚಿತ್ರಪ್ರೇಮಿಗಳ ಅಮಿತೋತ್ಸಾಹದ ನಡುವೆ ಚಿತ್ರೋತ್ಸವ ಅನಾವರಣಗೊಂಡಿತು.

ಏಷ್ಯಾದ ಅತಿದೊಡ್ಡ ಮತ್ತು ಭಾರತದ ಅತ್ಯಂತ ಪುರಾತನ 51 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆರಂಭಿಕ ಸಮಾರಂಭದ ಮುಖ್ಯ ಅತಿಥಿಗಳಾಗಿ ಕನ್ನಡ ಚಲನಚಿತ್ರನಟ ಶ್ರೀ ಸುದೀಪ್ ಮತ್ತು ಪ್ರಖ್ಯಾತ ಚಿತ್ರ ನಿರ್ಮಾಪಕ ಪ್ರಿಯದರ್ಶನ್ ನಾಯರ್ ಮತ್ತು ನಟ, ಲೇಖಕ ಮತ್ತು ಚಲನಚಿತ್ರ ನಿರ್ಮಾಪಕ ಟೆಸ್ಕಾ ಚೋಪ್ರಾ ಅವರ ಉಪಸ್ಥಿತಿಯಲ್ಲಿ ವೈಭವದ ಆರಂಭ ಪಡೆಯಿತು.

ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವ ್ರೀ ಪ್ರಕಾಶ್ ಜಾವ್ಡೆಕರ್ ಮತ್ತು ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮತ್ತಿತರ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡದ ಚಿತ್ರನಟ ಶ್ರೀ ಸುದೀಪ್ ಮಾತನಾಡಿ, ಸಿನೆಮಾ ಎಂಬುದು ಸಾಂಕ್ರಾಮಿಕದಂತೆ ಗೀಳಾಗಬೇಕು. “ಸಿನೆಮಾ ಒಂದು ಬ್ರಾತ್ರುತ್ವವಾಗಿದ್ದು, ಒಂದು ಕಡೆಯಿಂದ ನಿಮ್ಮನ್ನು ಜಗತ್ತಿನಾದ್ಯಂತ ಕರೆದೊಯ್ಯುತ್ತದೆ. ನಿಮಗೆ ಜ್ಞಾನ ನೀಡುತ್ತದೆ. ಪ್ರಪಂಚದಾದ್ಯಂತ ಇದು ಪ್ರತಿಯೊಂದು ಹಂತದಲ್ಲೂ ಬ್ರಾತ್ರುತ್ವದ ಸಂಸ್ಕೃತಿಗೆ ನಿಮ್ಮನ್ನು ಹತ್ತಿರವಾಗಿಸುತ್ತದೆಎಂದು ಪ್ರತಿಪಾದಿಸಿದರು.

ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವ್ಡೆಕರ್, ವರ್ಷದ ಚಲನಚಿತ್ರೋತ್ಸವಕ್ಕೆ 600 ಅಂತಾರಾಷ್ಟ್ರೀಯ ಮತ್ತು ದೇಶೀಯವಾಗಿ 190 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಇದು ಚಿತ್ರೋತ್ಸವದ ಮಹತ್ವವನ್ನ ನಿರೂಪಿಸಿದ್ದು, ಇದಕ್ಕೆ ವಿಶ್ವ ಮಾನ್ಯತೆ ಇದೆ ಎಂದರು.

ಬಾಂಗ್ಲಾದೇಶದ ಶ್ರೀ ಶೇಕ್ ಮುಜಿಬುರ್ ರೆಹಮಾಹ್ ಅವರ 100 ನೇ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಭಾರತಬಾಂಗ್ಲಾದೇಶದಿಂದ ಜಂಟಿಯಾಗಿಬಂಗಬಂಧುಸಿನೆಮಾ ನಿರ್ಮಣ ಮಾಡಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವ್ಡೆಕರ್ ಹರ್ಷೋದ್ಗಾರಗಳ ನಡುವೆ ಪ್ರಕಟಿಸಿದರು.

ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀ ಬಿಸ್ವಜಿತ್ ಚಟರ್ಜಿ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಲಾಗುವುದು ಇದೇ ಸಂದರ್ಭದಲ್ಲಿ ಘೋಷಿಸಿದರು.

ಇತರೆ ದೇಶಗಳಂತೆ ಚಲನಚಿತ್ರಗಳ ಚಿತ್ರೀಕರಣಕ್ಕೆ ಭಾರತದ ಪ್ರದೇಶಗಳು ಕೂಡ ಬಹು ಮೆಚ್ಚಿನ ತಾಣಗಳಾಗಿವೆ. “ ಭಾರತದಲ್ಲಿ ಚಿತ್ರೀಕರಣಎಂಬ ಘೋಷಣೆಯನ್ನು ಉತ್ತೇಜಿಸಬೇಕು ಎಂದು ನೆರೆದಿದ್ದ  ದೇಶ ವಿದೇಶಗಳ ಚಿತ್ರೋದ್ಯಮ ಗಣ್ಯರಿಗೆ ಕರೆ ನೀಡಿದರು. ಹೇಳಿದರು.

ಚಲನಚಿತ್ರದ ಮಾರುಕಟ್ಟೆ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಪ್ರಕಾಶ್ ಜಾವ್ಡೆಕರ್, ಚಲನಚಿತ್ರ ಕೇವಲ ಮನರಂಜನೆಯ ಮೂಲವಲ್ಲ. ಇದು ಅತಿ ದೊಡ್ಡ ಮಾರುಕಟ್ಟೆಯೂ ಹೌದು. ಮನುಷ್ಯ ಕಾಲ್ಪನಿಕ ಜೀವಿ. ಕಲ್ಪನೆಗೆ ಇಷ್ಟವಾಗುವ ಚಲನಚಿತ್ರಗಳು ನಮ್ಮನ್ನು ರಂಜಿಸುತ್ತವೆ. ಅಳುವಂತೆ ಮಾಡುತ್ತವೆ. ನಮ್ಮನ್ನು ಒಂದಾಗಿಸುತ್ತವೆ. ಅಂತಿಮವಾಗಿ ಎಲ್ಲರೂ ಕಥೆಯಲ್ಲಿ ಒಂದಾಗುತ್ತವೆ. ಕಥೆಯನ್ನು ಚೆನ್ನಾಗಿ ಪ್ರತಿಬಿಂಬಿಸಿದರೆ ಸಿನೆಮಾ ಜನಪ್ರಿಯವಾಗುತ್ತದೆ. ಮುಂದಿನ 52 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ [ಐಎಫ್ಎಫ್ಐ] ದಲ್ಲಿ ಖಾಸಗಿ ವಲಯ ಸಹ ಪಾಲ್ಗೊಳ್ಳುವಂತೆ ಮಾಡಲಾಗುವುದು. 51ನೇ ಐಎಫ್ಎಫ್ಐ ಚಿತ್ರೋತ್ಸವ ಏಳು ಪರದೆಗಳಲ್ಲಿ, ಲಕ್ಷಾಂತರ ಮೊಬೈಲ್ ಗಳಲ್ಲಿ, ಟಿ.ವಿ. ಮತ್ತು ಜಗತ್ತಿನಾದ್ಯಂತ ಪ್ರಸಾರವಾಗಲಿದೆ ಎಂದರು.

ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮಾತನಾಡಿ, ಗೋವಾ ಚಿತ್ರೀಕರಣಕ್ಕೆ ಪ್ರಮುಖ ತಾಣವಾಗಿದ್ದು, ಭಾರತೀಯ ಮತ್ತು ಜಗತ್ತಿನ ಪ್ರಮುಖ ಚಿತ್ರ ನಿರ್ಮಾಣಕಾರರು ಗೋವಾದಲ್ಲಿ ಚಿತ್ರೀಕರಣ ನಡೆಸಲು ಮುಂದಾಗಬೇಕು. 51 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ [ಐಎಫ್ಎಫ್ಐ] ಜಗತ್ತಿನ ಚಿತ್ರೋದ್ಯಮಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಭಾರತದಲ್ಲಿನ ಬಾಂಗ್ಲಾದೇಶದ ರಾಯಭಾರಿ ್ರೀ ಮೊಹಮದ್ ಇಮ್ರಾನ್ ಅವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅವರು ಕಾರ್ಯಕ್ರಮದಲ್ಲಿ ಮಾತನಾಡಿ. ಬಾಂಗ್ಲಾದೇಶ ಕೂಡ ಬಾರಿ ಚಿತ್ರೋತ್ಸವ ಆಚರಿಸಲು ತನ್ನ ಗಮನ ಕೇಂದ್ರೀಕರಿಸಿದೆ. ಕೋವಿಡ್ -19 ಸಂಕಷ್ಟ ಪರಿಸ್ಥಿತಿಯಲ್ಲಿ ಚಲನಚಿತ್ರೋತ್ಸವ ಆಯೋಜಿಸುವುದು ನಿಮ್ಮ ಬದ್ಧತೆ ಮತ್ತು ಧೈರ್ಯವನ್ನು ತೋರಿಸುತ್ತದೆ. ಕಲೆ ಮತ್ತು ಸಂಸ್ಕೃತಿಯ ಬಗ್ಗೆ ನಿಮ್ಮ ಉತ್ಸಾಹ ಮತ್ತು ಪ್ರೀತಿಯನ್ನು ಇದು ಪ್ರತಿಬಿಂಬಿಸುತ್ತದೆ. ಬಾಂಗ್ಲಾದೇಶದ ಹತ್ತು ಉತ್ತಮ ಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಜಗತ್ತಿನ ಚಿತ್ರೋದ್ಯಮಕ್ಕೆ ಬಾಂಗ್ಲಾದೇಶದ ಸಾಮರ್ಥ್ಯವನ್ನು ತೋರಿಸಲು ಉತ್ತಮ ಅವಕಾಶ ಮಾಡಿಕೊಟ್ಟಿದೆ ಎಂದರು.

51 ಐಎಫ್ಎಫ್ಐ ಜೀವಮಾನ ಸಾಧನೆಗೆ ಆಯ್ಕೆಯಾಗಿರುವ ಇಟಲಿಯ ಸಿನೆಮಾಟೋಗ್ರಾಫರ್ ಶ್ರೀ ವಿಟ್ಟೋರಿಯೋ ಸ್ಟೊರರೊ,  ತಾವು ಪರಮೋಚ್ಛ ನಿರ್ದೇಶಕರಾದ ಶ್ರೀ ಬೆರ್ನಾಡೋ ಬೆರ್ಟೋಲುಸ್ಸಿ, ಶ್ರೀ ಪ್ರಾನ್ಸಿಸ್ ಕೊಪ್ಪೊಲ, ಶ್ರೀ ಕಾರ್ಲೋ್ಸ್ ಒಲಿವೆರ ಮತ್ತು ವೂಡೆ ಅಲೆನ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ಇವರೆಲ್ಲರೂ ನನ್ನನ್ನು ವಿಶೇಷ ದಾರಿಯಲ್ಲಿ ನಡೆಯುವಂತೆ ಮಾಡಿದರು. ಸಂಗೀತಗೋಷ್ಠಿಯಲ್ಲಿ ಭಾಷೆಯ ಬೆಳಕು ಹರಿಯುವಂತೆ ನೋಡಿಕೊಂಡರು ಎಂದರು.

ಇದೇ ಸಂದರ್ಭದಲ್ಲಿ ಅವರು ಯುವ ಸಿನೆಮಾಟ್ರೋಗ್ರಾಫರ್ ಗಳಿಗೆ ಕಿವಿ ಮಾತು ಹೇಳಿದ ಅವರು, “ ಅಧ್ಯಯನ, ಸಂಶೋಧನೆ ಮಾಡುವ ಜತೆಗೆ ನಿಮ್ಮಲ್ಲಿ ನಿಮ್ಮನ್ನು ಸನ್ನದ್ಧಗೊಳಿಸಿ. ನೀವು ಏನು ಮಾಡುತ್ತೀರೋ ಅದನ್ನು ಪ್ರೀತಿಸಿ: ನೀವು ಏನನ್ನಾದರೂ ಪ್ರೀತಿಸಿದರೆ ಮತ್ತು ನಂಬಿದರೆ ಮಾತ್ರ ಅದನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.

ಅರ್ಜೇಂಟೈನಾದ ಚಿತ್ರನಿರ್ದೇಶಕ ಮತ್ತು ಅಂತಾರಾಷ್ಟ್ರೀಯ ಜ್ಯೂರಿ ಅಧ್ಯಕ್ಷ ಶ್ರೀ ಪಾಬ್ಲೋ ಸೀಸರ್ ತಮ್ಮ ವಿಡಿಯೋ ಸಂದೇಶದಲ್ಲಿ, “ ಭಾರತ ಅದ್ಭುತ ಬ್ರಹ್ಮಾಂಡವಾಗಿದೆ. ಇಲ್ಲಿ ಎಲ್ಲವೂ ಸಾಧ್ಯವಿದ್ದು, ದಿನದಿಂದ ದಿನಕ್ಕೆ ಕನಸು ಕಾಣಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಪ್ರಕಾಶ್ ಜಾವ್ಡೆಕರ್ ಅವರು 14 ನೇ ಆವೃತ್ತಿಯ ಎನ್.ಎಫ್.ಡಿ.ಸಿ. ಫಿಲ್ಮ್ ಬಜಾರ್ ಉದ್ಘಾಟಿಸಿದರು. ಎನ್.ಎಫ್.ಡಿ.ಸಿ. ಫಿಲ್ಮ್ ಬಜಾರ್ ಹೈಬ್ರಿಡ್ ಮಾದರಿಯಾಗಿದ್ದು, ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ವಿಧಾನದಲ್ಲೂ ಲಭ್ಯವಿದೆ. ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದ ಅತಿದೊಡ್ಡ ಚಲನಚಿತ್ರದ ಮಾರುಕಟ್ಟೆಯಾಗಿದೆ. ಫಿಲ್ಮ್ ಬಜಾರ್ ವರ್ಚುವಲ್ ಮೂಲಕ ನಡೆಯಲಿದ್ದು, ಹಿಂದಿನ ಎಲ್ಲಾ ಆವೃತ್ತಿಗಳನ್ನು ಇದು ಒಳಗೊಂಡಿದೆ. ಇದು ದಕ್ಷಿಣ ಏಷ್ಯಾ ಮತ್ತು ಅಂತಾರಾಷ್ಟ್ರೀಯ ಚಿತ್ರ ಸಮುದಾಯದ ನಡುವೆ ಕ್ರಿಯಾಶೀಲತೆ ಮತ್ತು ಆರ್ಥಿಕ ಸಹಭಾಗಿತ್ವವನ್ನು ಹೊಂದಿದೆ.

ಚಿತ್ರೋತ್ಸವದ ಆರಂಭದಲ್ಲಿ ಡ್ಯಾನಿಷ್ ಚಿತ್ರ ನಿರ್ಮಾಪಕ ಶ್ರೀ ಥಾಮಸ್ ವೆಂಟೆರ್ ಬರ್ಗ್ ಅವರಅನದರ್ ರೌಂಡ್ಚಿತ್ರವನ್ನು ಪ್ರದರ್ಶಿಸಲಾಯಿತು.

ಚಿತ್ರದ ನಿರ್ದೇಶಕರು  ತನ್ನ ವಿಡಿಯೋ ಸಂದೇಶದಲ್ಲಿ ಚಿತ್ರ ಆರಂಭಿಕ ಹಂತದಲ್ಲಿ ಇದು ಶುದ್ದ ಮದ್ಯದ ಆಚರಣೆಯನ್ನು ಒಳಗೊಂಡಿರುತ್ತದೆ. ಆದರೆ ನಂತರ ಇದು ಜೀವನದ ಆಚರಣೆಯಾಗಿ ಬೆಳೆಯುತ್ತದೆ.” ಎಂದು ಹೇಳಿದ್ದಾರೆ.

 ಡೆನ್ಮಾರ್ಕ್ ಚಿತ್ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿತ್ತು ಮತ್ತು ಶ್ರೀ ಮಡ್ಸ್ ಮಿಕ್ಕೆಲ್ ಸೆನ್ ಅವರಿಗೆ ಉತ್ತಮ ನಟ ಪ್ರಶಸ್ತಿ ಕೂಡ ದೊರೆತಿದೆ.

51 ನೇ ಐಎಫ್ಎಫ್ಐ ಚಿತ್ರೋತ್ಸವದಲ್ಲಿ 60 ದೇಶಗಳ 126 ಚಿತ್ರಗಳು ಅಂತಾರಾಷ್ಟ್ರೀಯ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಪ್ರೀಮಿಯರ್ ಪರದೆ ಮೇಲೆ 85 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಇದರಲ್ಲಿ 7 ಪ್ರೀಮಿಯರ್, 6 ಅಂತಾರಾಷ್ಟ್ರೀಯ ಪ್ರೀಮಿಯರ್, 22 ಏಷ್ಯನ್ ಪ್ರಿಮಿಯರ್ ಮತ್ತು 50 ಭಾರತೀಯ ಪ್ರೀಮಿಯರ್ ನಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಮಾಸ್ಟರ್ ಕ್ಲಾಸ್ ಮತ್ತು ಸಂವಾದಗೋಷ್ಠಿಯಲ್ಲಿ ಹಲವಾರು ವರ್ಷಗಳ ಐಎಫ್ಎಫ್ಐ ಪ್ರಮುಖ ಅಂಶಗಳನ್ನು ಪ್ರತಿಬಿಂಬಿಸಲಾಗುತ್ತಿದ್ದು, ಕಾರ್ಯಕ್ರಮ ವರ್ಚುವಲ್ ವೇದಿಕೆ ಮೂಲಕ ನಡೆಯಲಿದೆ. ಚಿತ್ರೋದ್ಯಮದ ಪ್ರಮುಖರಾದ ಶ್ರೀ ಶೇಖರ್ ಕಪೂರ್, ಶ್ರೀ ಪ್ರಿಯದರ್ಶನ್, ಪಾಬ್ಲೋ ಸೀಸರ್ [ ಅರ್ಜೇಂಟೈನಾ] ಮತ್ತು ಪ್ರಸನ್ನ ವಿತಂತೆ [ಶ್ರೀಲಂಕಾ] ಅವರು ಗೋಷ್ಠಿಗಳಲ್ಲಿ ತಮ್ಮ ಮೌಲ್ಯಯುತ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಹಿಂದಿನ ಆವೃತ್ತಿಗಳಂತೆ ಬಾರಿಯೂ ಸಹ ಭಾರತೀಯ ಚಿತ್ರೋದ್ಯಮದ ದಂತಕಥೆ ಶ್ರೀ ಸತ್ಯಜಿತ್ ರೈ ಅವರ ಖ್ಯಾತ ಚಿತ್ರ ಪತೇರ್ ಪಂಚಾಲಿ, ಶತ್ರಂಜ್ ಕೆ ಖಿಲಾರಿ, ಚರುಲತಾಘರೆ ಬೈರೆ ಮತ್ತು ಸೊನಾರ್ ಕೆಲ್ಲಾ ಪ್ರದರ್ಶಿಸಲಾಗುತ್ತಿದೆಭಾರತೀಯ ಚಿತ್ರೋದ್ಯಮದ 150 ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಚಿತ್ರೋದ್ಯಮದ ಪಿತಾಮಹ ಶ್ರೀ ದಾದಾ ಸಾಹೇಬ್ ಫಾಲ್ಕೆ ಅವರ ನಾಲ್ಕು ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಐಎಫ್ಎಫ್ಐ ನಲ್ಲಿ ಹಿಂದಿನ ವರ್ಷ ನಿಧನರಾದ 18 ಪ್ರಮುಖ ಚಿತ್ರೋದ್ಯಮದ ಗಣ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅವರಲ್ಲಿ ಶ್ರೀ ಇರ್ಪಾನ್ ಖಾನ್, ಶ್ರೀ ರಿಷಿ ಕಪೂರ್, ಶ್ರೀ ಎಸ್.ಪಿ. ಬಾಲಸುಬ್ರಮಣ್ಯಂ, ಶ್ರೀ ಸೌಮಿತ್ರ ಚಟರ್ಜಿ, ಶ್ರೀ ಸುಶಾಂತ್ ಸಿಂಗ್ ರಜಪುತ್ ಮತ್ತು ಶ್ರೀ ಬಸು ಚಟರ್ಜಿ  ಅವರು ಸಹ ಸೇರಿದ್ದಾರೆ.

ಐಎಫ್ಎಫ್ಐ ಮಧ್ಯಭಾಗದಲ್ಲಿ ವರ್ಲ್ಡ್ ಪ್ರೀಮಿಯರ್ ನಲ್ಲಿ ಶ್ರೀ ಸಂದೀಪ್ ಕುಮಾರ್ ಅವರಮೆಹರುನ್ನೀಸಾಪ್ರದರ್ಶನವಾಗಲಿದೆಜಪಾನ್ ಚಿತ್ರ, ಶ್ರೀ ಕಿಯೊಶಿ ಕುರೊಸವ ಅವರ ನಿರ್ದೇಶನದವೈಪ್ ಆಪ್ ಸ್ಪೈಚಿತ್ರ ಚಿತ್ರೋತ್ಸವದಲ್ಲಿ ಕಡೆಯ ಚಿತ್ರವಾಗಿ ಪ್ರದರ್ಶನವಾಗಲಿದೆ.

ಚಿತ್ರೋತ್ಸವದಲ್ಲಿ ಚಲನಚಿತ್ರರಂಗದ ಅಭಿಜ್ಞರಾದ ಶ್ರೀ ಪೆಡ್ರೋ ಅಲ್ಮೋಡೊವರ್ ಕಬಲ್ಲೆರೋ, ಶ್ರೀ ರುಬೆನ್ ಓಸ್ಟ್ಲಾಂಡ್ ಮತ್ತು ಶ್ರೀ ಕಿಮ್ ಕಿ ಡುಕ್ ಅವರ ಚಿತ್ರಗಳನ್ನು ದೇಶ, ವಿದೇಶಗಳ ಪ್ರತಿನಿಧಿಗಳು ನೋಡಿ ಆನಂದಿಸಲು ಸದಾವಕಾಶವಾಗಿದೆ. ಇದರ ಜತೆಗೆ ಏಳು ಹೊಸ  ಮತ್ತು ಮೊಚ್ಚಲ ಪ್ಯೂಚರ್ ಫಿಲ್ಮ್ ನಿರ್ದೇಶಕರ ಚಿತ್ರಗಳನ್ನು ಸಹ ವೀಕ್ಷಿಸಲು ಅವಕಾಶ ದೊರೆತಿದೆ. ಇದಲ್ಲದೇ ಐಸಿಎಫ್ ಟಿಯುಎನ್ಇಎಸ್ ಸಿಓ ಮಹಾತ್ಮಾ ಗಾಂಧಿ ಪದಕ ಸ್ಪರ್ಧೆಯಲ್ಲಿ ಹತ್ತು ಸಿನೆಮಾಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ. ಚಿತ್ರಗಳಲ್ಲಿ ಮಹಾತ್ಮಾ ಗಾಂಧೀಜಿ ಅವರ ಶಾಂತಿ, ಸಹಿಷ್ಣುತೆ ಮತ್ತು ಅಹಿಂಸೆಯ ಅಂಶಗಳು ಅಡಕವಾಗಿವೆ.

ಕೋವಿಡ್ -19 ಸೋಂಕು ಹಿನ್ನೆಲೆಯಲ್ಲಿ ಹಲವಾರು ಬಾಲಿವುಡ್ ಸೆಲೆಬ್ರೆಟಿಗಳು ಬಾರಿಯ ಚಿತ್ರೋತ್ಸವದಲ್ಲಿ ಭೌತಿಕವಾಗಿ ಪಾಲ್ಗೊಳ್ಳುತ್ತಿಲ್ಲ. ಆದರೆ ಅವರ ವಿಡಿಯೋ ಸಂದೇಶವನ್ನು ಚಿತ್ರೋತ್ಸವದಲ್ಲಿ ಪ್ರಸಾರ ಮಾಡಲಾಗುತ್ತಿದೆ.

  • 51 ನೇ ಐಎಫ್ಎಫ್ಐ ಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ನನ್ನ ಅಭಿನಂದನೆಗಳುಶ್ರೀ ಅನುಪನ್ ಖೇರ್
  • ಜಗತ್ತಿನಾದ್ಯಂತ ಅತ್ಯುನ್ನತ ಚಿತ್ರಗಳನ್ನು ಸಂಭ್ರಮಿಸುವ ಮೂಲಕ 2021 ನ್ನು ಸ್ವಾಗತಿಸುತ್ತಿರುವುದು ಅದ್ಭುತ ಬೆಳವಣಿಗೆಶ್ರೀ ಆಯಷ್ಮಾನ್ ಖುರಾನ
  • 51 ನೇ ಐಎಫ್ಎಫ್ಐ ಚಿತ್ರೋತ್ಸವವನ್ನು ನಾವೆಲ್ಲರೂ ಎದುರು ನೋಡುತ್ತಿದ್ದೇವೆ. ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಹಬ್ಬಗಳಲ್ಲಿ ಒಂದಾಗಿದೆಶ್ರೀ ಅನಿಲ್ ಕಪೂರ್
  • ಜಗತ್ತಿನ ಉನ್ನತ ಸಿನೆಮಾ ಕಾರ್ಯಗಳನ್ನು ವೀಕ್ಷಿಸುವ ಮೂಲಕ 2021 ವರ್ಷವನ್ನು ಸ್ವಾಗತಿಸಲು ಇದಕ್ಕಿಂತ ಉತ್ತಮ ಮಾರ್ಗ ಯಾವುದಿದೆಶ್ರೀಮತಿ ಮಾಧುರಿ ದೀಕ್ಷಿತ್
  • ಐಎಫ್ಎಫ್ಐ 51 ನೇ ಆವೃತ್ತಿ ಆರಂಭವಾಗುತ್ತಿರುವುದು ಅಭಿನಂದನೀಯಶ್ರೀ ರಣವೀರ್ ಸಿಂಗ್
  • ಹೋಗಿ ಮತ್ತು ಅತ್ಯುತ್ತಮ ಚಿತ್ರಗಳನ್ನು ವೀಕ್ಷಿಸಿ” – ಶ್ರೀ ಸಿದ್ದಾರ್ಥ್ ಚತುರ್ವೇದಿ.
  • ಕೋವಿಡ್ – 19 ಸೋಂಕು ಮತ್ತು ಪರೀಕ್ಷೆಗಳ ಹೊರತಾಗಿಯೂ ಸುರಕ್ಷಿತ ವಿಧಾನಗಳ ಮೂಲಕ ಐಐಎಫ್ಐ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಶ್ರೀಮತಿ ವಿದ್ಯಾಬಾಲನ್
  • ಜನತೆ ಚಲನಚಿತ್ರಗಳನ್ನು ನೋಡುವ ಅನುಭವವನ್ನು ಅಂತರ್ಜಾಲ ವ್ಯವಸ್ಥೆ ಬದಲಾಯಿಸುತ್ತಿದೆ ಎಂಬುದು ಸಾಕಷ್ಟು ಸುಸ್ಪಷ್ಟವಾಗಿದೆ. ಗೋವಾ ಚಲನ ಚಿತ್ರೋತ್ಸವ ಚಲನಚಿತ್ರದ ಅನುಭವವನ್ನು ಮರುಶೋಧಿಸುತ್ತಿದೆ ಇಲ್ಲವೆ ಮರು ಹೊಂದಿಸುತ್ತದೆ ಎಂಬ ಖಾತ್ರಿ ನನಗಿದೆ. ಇಂತಹ ಆನ್ ಲೈನ್ ಉತ್ಸವಗಳು ಸಮುದಾಯವನ್ನು ನಿರ್ಮಿಸುವ ಮಾರ್ಗವಾಗಿ ಜನಪ್ರಿಯವಾಗುವುದನ್ನು ನಾನು ಎದುರು ನೋಡುತ್ತಿದ್ದೇನೆ. ಚಲನಚಿತ್ರ ತಯಾರಕರು, ನಟರು ಮತ್ತು ತಂತ್ರಜ್ಞರೊಂದಿಗೆ ಜಗತ್ತಿನಾದ್ಯಂತ ಸಂವಹನ ನಡೆಸುವ ಹೊಸ ರೂಪವಾಗಿದೆಮೋಹನ್ ಲಾಲ್

ಚಲನಚಿತ್ರೋತ್ಸವದ ನಿರ್ದೇಶಕ ಶ್ರೀ ಚೈತನ್ಯ ಪ್ರಸಾದ್ ಮಾತನಾಡಿ, 51 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹೊಸ ನಿರೂಪಣೆಯನ್ನು ಬರೆದಿದೆ. ವಿಶ್ವದ ಇತರೆ ಚಿತ್ರೋತ್ಸವಗಳಂತೆ ಉತ್ಸವವು ಸಹ ಹೊಸ ಶ್ರೇಷ್ಠತೆಯನ್ನು ಮೆರೆಯಲಿದೆ ಎಂದರು. ಪುನರುಜ್ಜೀವನ ಭಾರತ, ನವ ಭಾರತ ಮತ್ತು ಸ್ಪೂರ್ತಿದಾಯಕ ಭಾರತವನ್ನು ಉಲ್ಲೇಖಿಸಿದ ಅವರು, ಉತ್ಸವವನ್ನು ಚಿತ್ರೋದ್ಯಮ ಮಾಧ್ಯಮವಾಗಿ ನೋಡಬೇಕು. ಹಬ್ಬ ತಂತ್ರಜ್ಞಾನದೊಂದಿಗೆ ವಿಷಯವನ್ನು ಹೇಗೆ ನೇಯ್ಗೆ ಮಾಡಲಿದೆ ಎಂಬುದನ್ನು ನಮಗೆ ಕಲಿಸಿದೆ. ನಾವು ಹೈಬ್ರಿಡ್ ಉತ್ಸವ ನಡೆಸುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಮುಂದಿನ ಕೆಲವು ದಿನಗಳ ನಂತರ ನಾವು ಚಲನಚಿತ್ರೋತ್ಸವಗಳಿಗೆ ಮಾನದಂಡ ನಿಗದಿಪಡಿಸಲಿದ್ದೇವೆ ಎಂದರು.

ಸ್ವಾಗತ ಭಾಷಣ ಮಾಡಿದ ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನೀರಜ್ ಶೇಖರ್ದೇಶದಲ್ಲಿ ಚಲನಚಿತ್ರ ವಲಯವನ್ನು ಮತ್ತಷ್ಟು ಉತ್ತೇಜಿಸಲು ಬದ್ಧರಾಗಿದ್ದೇವೆ. ಜತೆಗೆ ಎವಿಜಿಸಿ ವಲಯವನ್ನೂ ಸಹ ಸಕ್ರೀಯವಾಗಿ ಪ್ರೋತ್ಸಾಹಿಸಲು ಮುಂದಾಗುತ್ತೇವೆ ಎಂದರು.

ಗೋವಾ ರಾಜ್ಯದ ಮುಖ್ಯ ಕಾರ್ಯದರ್ಶಿ ಶ್ರೀ ಪುನಿತ್ ಕುಮಾರ್, ಗೋವಾದ ಮನೋರಂಜನಾ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಮಿತ್ ಸುತಿಜ, ಭಾರತೀಯ ಚಲನಚಿತ್ರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ್ರೀ ರವಿ ಕೊಟ್ಟರಕರ, ಐಎಫ್ಎಫ್ಐ ಚಿತ್ರೋತ್ಸವದ ನಿರ್ದೇಶಕ ಶ್ರೀ ಚೈತನ್ಯ ಪ್ರಸಾದ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಅದರಲ್ಲೂ ಪ್ರಮುಖಗಾಗಿ ಸ್ಥಳೀಯ ಜಾನಪದ ಕಾರ್ಯಕ್ರಮ ಮತ್ತು 2004 ರಿಂದ ಚಿತ್ರೋತ್ಸವದಲ್ಲಿ ನಡೆಸುತ್ತಿರುವ ಮ್ಯೂಸಿಕ್ ಆಫ್ ಗೋವಾ ಕಾರ್ಯಕ್ರಮ ಗಮನ ಸೆಳೆಯಿತು.

***


(Release ID: 1689447) Visitor Counter : 247