ನೀತಿ ಆಯೋಗ

ನೀತಿ ಆಯೋಗದ ಸಭೆ: ಕೋವಿಡ್ ನಂತರ ಜಾಗತಿಕ ಆರ್ಥಿಕ ಕಾರ್ಯಸೂಚಿ ನಿಗದಿ ಕುರಿತು ಆರ್ಥಿಕ ತಜ್ಞರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ

Posted On: 08 JAN 2021 10:54PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನೀತಿ ಆಯೋಗ ಆಯೋಜಿಸಿದ್ದ ಕೋವಿಡ್ ನಂತರದ ಜಗತ್ತಿನಲ್ಲಿ ಆರ್ಥಿಕ ಕಾರ್ಯಸೂಚಿ ನಿಗದಿ ಕುರಿತು ಭಾರತದ ಹೆಸರಾಂತ ಆರ್ಥಿಕ ತಜ್ಞರೊಂದಿಗೆ ಸಂವಾದ ನಡೆಸಿದರು.

ಆರ್ಥಿಕ ಪುನಃಶ್ಚೇತನದ ಮಾನದಂಡಗಳು, ನಿರೀಕ್ಷೆಗೂ ಮೀರಿ ಅವಧಿಗೆ ಮುನ್ನವೇ ಚೇತರಿಕೆ ಕಂಡಿವೆ ಎಂಬುದನ್ನು ಬಹುತೇಕ ತಜ್ಞರು ಒಪ್ಪಿಕೊಂಡರು. ಮುಂದಿನ ವರ್ಷ ಉತ್ತಮ ಬೆಳವಣಿಗೆ ಕಾಣಲಿದೆ ಎಂಬುದನ್ನು ಬಹುತೇಕ ಎಲ್ಲರೂ ವಿಸ್ತೃತವಾಗಿ ಒಪ್ಪಿಕೊಂಡರು ಮತ್ತು ಹಾಲಿ ಇರುವ ಪ್ರಗತಿ ದರವನ್ನು ಕಾಯ್ದುಕೊಂಡು ಭಾರತದ ಸಾಮಾಜಿಕ ಆರ್ಥಿಕ ಪರಿವರ್ತನೆಯ ಕ್ರಮಗಳನ್ನು ಮುಂದುವರಿಸುವಂತೆ ಸಲಹೆ ಮಾಡಿದರು. ಕೆಲವು ವರ್ಷಗಳಿಂದ ಕೈಗೊಂಡಿರುವ ಬಲಿಷ್ಠ ಸಾಂಸ್ಥಿಕ ಸುಧಾರಣಾ ಕ್ರಮಗಳನ್ನು ಪ್ರಮುಖವಾಗಿ ಉಲ್ಲೇಖಿಸಿ ತಜ್ಞರು ಸಮಾಲೋಚನೆ ನಡೆಸಿದರು ಮತ್ತು ಅದು ಹೇಗೆ ಆತ್ಮನಿರ್ಭರ ಭಾರತ್ ನಿರ್ಮಾಣ ನಿಟ್ಟಿನಲ್ಲಿ ಸಹಕಾರಿಯಾಗಿದ ಎಂದು ಚರ್ಚಿಸಿದರು.  ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ಹಲವು ಸುಧಾರಣೆಗಳ ಕುರಿತು ಅವರು ಸಲಹೆಗಳನ್ನು ನೀಡಿದರು.
ಸರ್ಕಾರ ಮೂಲಸೌಕರ್ಯ ವೃದ್ಧಿಗೆ ಮಾಡುತ್ತಿರುವ ವೆಚ್ಚದ ಕುರಿತು ಹಲವು ತಜ್ಞರ ಸಮಾಲೋಚಿಸಿ, ಆದು ಮುಂದಿನ ವರ್ಷಗಳಲ್ಲಿ ಅಭಿವೃದ್ದಿಗೆ ಚಾಲಕ ಶಕ್ತಿಯಾಗಿದೆ ಮತ್ತು ಮೂಲಸೌಕರ್ಯ ವಲಯದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ತರಲು ಆರ್ಥಿಕತೆಗೆ ಮೇಲೆ ಹಲವು ಮಹತ್ವದ ಪ್ರಯೋಜನಗಳಾಗಿವೆ ಎಂದರು. ಹಲವು ಭಾಗಿದಾರರು ಕಾರ್ಮಿಕ ಆಧಾರಿತ ಉತ್ಪಾದನಾ ಚಟುವಟಿಕೆಗಳಿಗೆ ಒತ್ತು ನೀಡುವ ಕುರಿತು ಪ್ರಸ್ತಾಪಿಸಿದರು ಮತ್ತು ಸರ್ಕಾರ ಮೊಬೈಲ್ ಉತ್ಪಾದನೆಗೆ, ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್ ಐ) ಆರಂಭಿಸಿರುವುದರಿಂದ ದೊರೆತಿರುವ ಯಶಸ್ಸಿನ  ಬಗ್ಗೆ ಚರ್ಚೆ ನಡೆಸಿದರು. 

ಸಭೆಯಲ್ಲಿ ಭಾಗವಹಿಸಿದ್ದವರು ಮತ್ತಷ್ಟು ಸಂಭಾವ್ಯ ವಿತ್ತೀಯ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು ಮತ್ತು ಹಣಕಾಸು ಕ್ರೂಢೀಕರಣ ಹಾದಿಯಲ್ಲಿ ನಡೆಯಲು ಹಲವು ಕ್ರಮಗಳನ್ನು ಸಲಹೆ ಮಾಡಿದರು. ವಿತ್ತೀಯ ವಲಯದ ಸುಧಾರಣೆಗಳ ಬಗ್ಗೆ ಕೂಡ ತಜ್ಞರು ಸಮಾಲೋಚಿಸಿದರು. ಮೂಲಸೌಕರ್ಯ ಯೋಜನೆಗಳಲ್ಲಿ ದೀರ್ಘಾವಧಿ ಹೂಡಿಕೆಯ ಕುರಿತು ಸಂಭಾವ್ಯ ಮಾರ್ಗೋಪಾಯಗಳ ಕಂಡುಕೊಳ್ಳುವ ಅಗತ್ಯತೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಅಲ್ಲದೆ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣದಲ್ಲಿ ಹೂಡಿಕೆ ಮಾಡುವ ಪ್ರಾಮುಖ್ಯತೆಯ ಇದೆ, ಏಕೆಂದರೆ ಜ್ಞಾನಾಧಾರಿತ ಆರ್ಥಿಕತೆ ಮುಂದುವರಿಕೆಗೆ ಚಾಲನಶಕ್ತಿಯಾಗಲಿದೆ ಎಂದು ತಜ್ಞರು ಬಲವಾಗಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿ ಅವರು, ತಜ್ಞರಿಂದ ಮಾಹಿತಿ ಸ್ವೀಕರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ರಾಷ್ಟ್ರದ ಅಭಿವೃದ್ಧಿ ಕಾರ್ಯಸೂಚಿಗೆ ಇಂತಹ ಸಂವಾದಗಳು ಅತ್ಯಂತ ಮಹತ್ವದ ಪಾತ್ರ ವಹಿಸಲಿವೆ ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಮತ್ತು ಆನಂತರದ ನಿರ್ವಹಣೆಯಲ್ಲಿ ಅದರಲ್ಲಿ ಭಾಗಿಯಾದವರು ಎದುರಿಸಿದ ಸವಾಲುಗಳ ಕುರಿತು ಪ್ರಸ್ತಾಪಿಸಿದರು. ಅಲ್ಲದೆ, ಅವರು ಸಂಕಷ್ಟ ಪ್ಯಾಕೇಜ್ ಗಳ ಮೂಲಕ ಸರ್ಕಾರ ಹೇಗೆ ಸುಧಾರಣೆ ಆಧಾರಿತ ಸಂಕಷ್ಟ ಪ್ಯಾಕೇಜ್ ಗಳನ್ನು ಜಾರಿಗೊಳಿಸಿದ್ದನ್ನು ವಿಶೇಷವಾಗಿ ಕೃಷಿ, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಮತ್ತು ಕಾರ್ಮಿಕ ಸಂಹಿತೆಗಳ ಮೂಲಕ ಐತಿಹಾಸಿಕ ಸುಧಾರಣೆಗಳನ್ನು ಕೈಗೊಂಡಿದ್ದನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಪ್ರಧಾನಮಂತ್ರಿಗಳು ಆತ್ಮ ನಿರ್ಭರ ಭಾರತ ನಿರ್ಮಾಣದ ಹಿಂದಿನ ತಮ್ಮ ಕನಸನ್ನು ವಿವರಿಸಿದರು ಮತ್ತು ಹಿಂದೆಂದೂ ಕಾಣದ ರೀತಿಯಲ್ಲಿ ಭಾರತೀಯ ಕಂಪನಿಗಳು ಒಗ್ಗೂಡಿ ಜಾಗತಿಕ ಪೂರೈಕೆ ಸರಣಿಯನ್ನು ನಿರ್ವಹಣೆ ಮಾಡುತ್ತಿವೆ ಎಂದರು. ಅವರು, ಭಾರತದ ಪ್ರಗತಿಗಾಥೆಯಲ್ಲಿ ವಿಧೇಸಿ ಹೂಡಿಕೆದಾರರು ವಿಶ್ವಾಸ ತೋರುತ್ತಿದ್ದಾರೆ, ಅದರ ಪರಿಣಾಮ ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಕಳೆದ ಏಪ್ರಿಲ್ ಮತ್ತು ಅಕ್ಟೋಬರ್ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಶೇ.11ರಷ್ಟು ವೃದ್ದಿಯಾಗಿದೆ ಎಂದು ಹೇಳಿದರು. 

ಅಲ್ಲದೆ, ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಜಾಲದ ಮೂಲಕ ಸೃಷ್ಠಿಯಾಗಲಿರುವ ಆರ್ಥಿಕ ಸಂಭವನೀಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಆ ಮೂಲಕ ಭಾರತದ ಬಹುತೇಕ ಗ್ರಾಮಗಳಿಗೆ ಅಂತರ್ಜಾಲ ಸಂಪರ್ಕ ನೀಡಲಾಗುತ್ತಿದೆ ಎಂದರು. ಮೂಲಸೌಕರ್ಯ ವೃದ್ಧಿ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆಯಡಿ ವಿಶ್ವದರ್ಜೆಯ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು ನಮ್ಮ ಗುರಿಗಳ ಸಧಾನೆಗೆ ಪಾಲುದಾರಿಕೆ ಅತ್ಯಂತ ಪ್ರಮುಖವಾಗಿದೆ ಮತ್ತು ಇಂತಹ ಸಮಾಲೋಚನೆಗಳ ಮೂಲಕ ವಿಸ್ತೃತ ಆರ್ಥಿಕ ಕಾರ್ಯಸೂಚಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. 

ಪ್ರಧಾನಮಂತ್ರಿ ಅವರಲ್ಲದೆ, ಹಣಕಾಸು ಸಚಿವರು, ಹಣಕಾಸು ಖಾತೆ ರಾಜ್ಯ ಸಚಿವರು, ನೀತಿ ಆಯೋಗದ ಉಪಾಧ್ಯಕ್ಷರು, ಯೋಜನಾ ಖಾತೆ ರಾಜ್ಯ ಸಚಿವರು, ನೀತಿ ಆಯೋಗದ ಸದಸ್ಯರು, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪ್ರಧಾನಮಂತ್ರಿಗಳ ಪ್ರಧಾನ ಸಲಹೆಗಾರರು, ಸಂಪುಟ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಹಣಕಾಸು ಕಾರ್ಯದರ್ಶಿ, ಮುಖ್ಯ ಆರ್ಥಿಕ ಸಲಹೆಗಾರರು ಮತ್ತು ಆರ್ಥಿಕ ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರರು ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. 
ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರಮುಖ ಆರ್ಥಿಕ ತಜ್ಞರೆಂದರೆ:
ಅರವಿಂದ್ ಪನಗರಿಯಾ, ಅರವಿಂದ್ ವೀರಮಣಿ, ಅಭಯ್ ಪಥೆ, ಅಶೋಕ್ ಲಹಿರಿ, ಅಭೀಕ್ ಬರುವಾ, ಇಲಾಪಟ್ನಾಯಕ್, ಕೆ.ವಿ. ಕಾಮತ್, ಮೋನಿಕಾ ಹಲನ್, ರಾಜೀವ್ ಮಂತ್ರಿ, ರಕ್ಷಾ ಮೋಹನ್, ರವೀಂದ್ರ ಧೋಲಾಕಿಯಾ,  ಸೌಮ್ಯಕಾಂತಿ ಘೋಷ್, ಶಂಕರ್ ಆಚಾರ್ಯ, ಶೇಖರ್ ಷಾ, ಸೋನಲ್ ವರ್ಮ, ಸುನಿಲ್ ಜೈನ್.

***



(Release ID: 1687298) Visitor Counter : 176