ಭೂವಿಜ್ಞಾನ ಸಚಿವಾಲಯ
ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ನಡುಗಡ್ಡೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆ
1ನೇ ವಾರ (2020 ಡಿಸೆಂಬರ್ 24 ರಿಂದ 30) ಮತ್ತು 2 ನೇ ವಾರ (2020 ಡಿಸೆಂಬರ್ 31 ರಿಂದ 2021 ಜನವರಿ 6)ರ ವೇಳೆ ಹವಾಮಾನ ವ್ಯವಸ್ಥೆಗಳು ಮತ್ತು ಸಂಬಂಧಿತ ಮಳೆ
ಪಶ್ಚಿಮ ಹಿಮಾಲಯ ವಲಯ ಮತ್ತು ಈಶಾನ್ಯ, ಕೇಂದ್ರ ಹಾಗೂ ಪೂರ್ವ ಭಾರತದ ಕೆಲವು ಕಡೆ ಚದುರಿದಂತೆ ಶೀತ ಹವೆಯಂಥ ಪರಿಸ್ಥಿತಿ
ವಾಯವ್ಯ ಭಾರತ, ಮಧ್ಯ ಮ್ತತ್ತು ಅದಕ್ಕೆ ಹೊಂದಿಕೊಂಡ ಪರ್ಯಾಯ ದ್ವೀಪದ ಗಳ ಬಯಲು ಪ್ರದೇಶದಲ್ಲಿ ದಿನದ ತಾಪಮಾನ ಸಾಮಾನ್ಯಕ್ಕಿಂತ 1-3 ° ಸೆ. ಕಡಿಮೆ, ಪೂರ್ವ ಭಾರತದಲ್ಲಿ ಸಾಮಾನ್ಯಕ್ಕಿಂತ 1-3 ° ಸೆ.ಗಿಂತ ಹೆಚ್ಚು
ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್ ಗಳಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯಾಪಕ ಮಳೆ / ಹಿಮವರ್ಷ; ಹಿಮಾಚಲ ಪ್ರದೇಶ, ಉತ್ತರಾಖಂಡದ ಅಲ್ಲಲ್ಲಿ ಚದುರಿದಂತೆ ಮಳೆ / ಹಿಮವರ್ಷ ಮತ್ತು ವಾಯುವ್ಯ ಭಾರತಕ್ಕೆ ಹೊಂದಿಕೊಂಡ ಬಯಲು ಪ್ರದೇಶಗಳಲ್ಲಿ ಚದುರಿದಂತೆ ಮಳೆ / ಗುಡುಗು ಸಹಿತ ಸುರಿಮಳೆ
ಈಶಾನ್ಯ ರಾಜ್ಯಗಳ ಹೊರಗೆ ದೇಶದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 1-3° ಸೆ ಕಡಿಮೆಯಾಗುವ ನಿರೀಕ್ಷೆ
Posted On:
25 DEC 2020 2:08PM by PIB Bengaluru
ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ಪ್ರಕಾರ:
ವಾರ 1ರ ಮಳೆ: (24 ರಿಂದ 30 ಡಿಸೆಂಬರ್, 2020)
• ಪಶ್ಚಿಮದಲ್ಲಿನ ಸಕ್ರಿಯ ಕ್ಷೋಭೆ 26ರಿಂದ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇದರಿಂದ 2020 ರ ಡಿಸೆಂಬರ್ 27 ರಿಂದ 28 ರವರೆಗೆ ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್ ಗಳಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯಾಪಕ ಮಳೆ / ಹಿಮವರ್ಷಕ್ಕೆ ಕಾರಣವಾಗಬಹುದು; ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಚದುರಿದೆಂತೆ ಮಳೆ / ಹಿಮವರ್ಷ ಮತ್ತು ವಾಯುವ್ಯ ಭಾರತಕ್ಕೆ ಹೊಂದಿಕೊಂಡ ಬಯಲು ಪ್ರದೇಶಗಳಲ್ಲಿ ಚದುರಿದಂತೆ ಮಳೆ / ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.
• ಮೂಡಲ ಅಲೆಗಳು 2 ನೇ ವಾರದಲ್ಲಿ ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ನಡುಗಡ್ಡೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಗೆ ಕಾರಣವಾಗುವ ಸಾಧ್ಯತೆಯಿದೆ.
• ಒಟ್ಟಾರೆಯಾಗಿ, ತಮಿಳುನಾಡು ಮತ್ತು ದಕ್ಷಿಣ ಕೇರಳದ ಹೊರಗಿನ ದೇಶದ ಬಯಲು ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ, ಇದು 1ನೇ ವಾರದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಇರಬಹುದು. ವಾಡಿಕೆಗಿಂತ ಕಡಿಮೆ ಮಳೆ / ಹಿಮವರ್ಷ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ 1ನೇ ವಾರದಲ್ಲಿ ಆಗಬಹುದು. (ಅನುಬಂಧ IV ಮತ್ತು V).
2ನೇ ವಾರದಲ್ಲಿ ಮಳೆ (2020ರ ಡಿಸೆಂಬರ್ 31ರಿಂದ ಜನವರಿ 6ರವರೆಗೆ)
• ಮೂಡಣದ – ಪಡುವಣದ ನಡುವಿನ ಪ್ರಭಾವದಿಂದ 2ನೇ ವಾರಾಂತ್ಯದಲ್ಲಿ ಮಧ್ಯ ಭಾರತದಲ್ಲಿ ಮತ್ತು ಉತ್ತರದ ಬಯಲು ಪ್ರದೇಶಗಳಲ್ಲಿ ಹದವಾದ ಮಳೆಯಾಗುವ ನಿರೀಕ್ಷೆ ಇದೆ.
• ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ನಡುಗಡ್ಡೆಗಳಲ್ಲಿ 2ನೇ ವಾರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವ ಇದೆ. ವಾಡಿಕೆಗಿಂತ ಕಡಿಮೆ ಮಳೆ/ಹಿಮವರ್ಷ ಪಶ್ಚಿಮ ಹಿಮಾಲಯ ಮತ್ತು ವಾಯವ್ಯ ಭಾರತಕ್ಕೆ ಹೊಂದಿಕೊಂಡು ಬಯಲು ಪ್ರದೇಶಗಳಲ್ಲಿ ಪ್ರದೇಶದಲ್ಲಿ 2 ನೇ ವಾರದಲ್ಲಿ ಆಗಲಿದೆ (ಅನುಬಂಧ IV ಮತ್ತು V).
1 ಮತ್ತು 2ನೇ ವಾರದಲ್ಲಿ ತಾಪಮಾನ/ಮಂಜು : (2020ರ ಡಿಸೆಂಬರ್ 24 – 2021ರ ಜನವರಿ 6)
• ಈಶಾನ್ಯ ರಾಜ್ಯಗಳ ಹೊರಗೆ 1ನೇ ವಾರದಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 1-3°ಸೆ. ಕೆಳಗೆ ಇರಲಿದೆ. ಈಶಾನ್ಯ ರಾಜ್ಯಗಳಲ್ಲಿ 1ನೇ ವಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಇರುವ ಸಾಧ್ಯತೆ ಇದೆ. (ಅನುಬಂಧ VI).
• ಹಿಮಾಲಯ ವಲಯದ ಕೆಲವು ಭಾಗಗಳಲ್ಲಿ ಮತ್ತು ಈಶಾನ್ಯ, ಮಧ್ಯ ಮತ್ತು ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಚದುರಿದಂತೆ 1ನೇ ವಾರದ ದ್ವಿತೀಯಾರ್ಧದಲ್ಲಿ ಶೀತ ಅಲೆಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಒಡಿಶಾ ಒಳನಾಡು ಮತ್ತು ಪಕ್ಕದ ಛತ್ತೀಸಗಢ ದ ಕೆಲವು ಕಡೆಗಳಲ್ಲಿಯೂ ಶೀತ ಅಲೆಯ ಪರಿಸ್ಥಿತಿ ಕಂಡುಬರಲಿದೆ.
• ಮಧ್ಯ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ 2ನೇ ವಾರದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-4° ಸೆ. ಹೆಚ್ಚಾಗಿರಲಿದೆ. ಆದಾಗ್ಯೂ, ಇದು ವಾಯವ್ಯ ಭಾರತದ ಬಯಲು ಪ್ರದೇಶದಲ್ಲಿ ಮತ್ತು ಬಿಹಾರದಲ್ಲಿ 2-3°ಸೆ. ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಮತ್ತು ಒಡಿಶಾ ಮತ್ತು ಹೊಂದಿಕೊಂಡ ಛತ್ತೀಸಗಢದಲ್ಲಿ 2ನೇ ವಾರದಲ್ಲಿ 1-2° ಸೆ. ಗಿಂತ ಹೆಚ್ಚಾಗಿರಲಿದೆ. (ಅನುಬಂಧ VI).
• ಶೀಲ ಅಲೆ ಪರಿಸ್ಥಿತಿ ಪಶ್ಚಿಮ ಹಿಮಾಲಯ ವಲಯದ ಕೆಲವು ಕಡೆ ಮತ್ತು ವಾಯವ್ಯ ಭಾರತದಲ್ಲಿ ಚದುರಿದಂತೆ ಕೆಲವೆಡೆ 2ನೇ ವಾರದ ಪ್ರಥಮಾರ್ಧದಲ್ಲಿ ಇರುವ ನಿರೀಕ್ಷೆ ಇದೆ. ಸಾಮಾನ್ಯವಾಗಿ, ವಾಯವ್ಯ ಭಾರತದ ಹೊರಗೆ ಅದು 2ನೇ ವಾರದಲ್ಲಿ ಕಡಿಮೆ ಇರುವ ಸಾಧ್ಯತೆ ಇದೆ.
• ವಾಯವ್ಯ, ಮಧ್ಯ ಮತ್ತು ಪೂರ್ವ ಭಾರತದ್ಲಲಿ 1ನೇ ವಾರಕ್ಕೆ ಹೋಲಿಸಿದರೆ 2ನೇ ವಾರದಲ್ಲಿ, ಕನಿಷ್ಠ ತಾಪಮಾನದಲ್ಲಿ ಏರಿಕೆ ಆಗಲಿದೆ. (ಅನುಬಂಧ VI).
ಕನಿಷ್ಠ ತಾಪಮಾನ:
• ವಾಯುವ್ಯ ಭಾರತ, ಮಧ್ಯ ಭಾರತದ ಮತ್ತು ಹೊಂದಿಕೊಂಡ ಭಾರತ ಪರ್ಯಾಯ ದ್ವೀಪದ ಬಯಲು ಪ್ರದೇಶ ದಿನದ ತಾಪಮಾನ ಸಾಮಾನ್ಯಕ್ಕಿಂತ 1-3 °ಸೆ ವರೆಗೆ ಕಡಿಮೆ ಇರಲಿದೆ ಮತ್ತು ಸಾಮಾನ್ಯಕ್ಕಿಂತ ಪೂರ್ವ ಭಾರತ (ಒಡಿಶಾ ಮತ್ತು ಪಕ್ಕದ ಛತ್ತೀಸಗಢ, ಬಿಹಾರದಲ್ಲಿ) 1-3 °ಸೆ ನಷ್ಟು 1 ನೇ ವಾರದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ (ಅನುಬಂಧ VI ಮತ್ತು VII), ಇದೇ ಪರಿಸ್ಥಿತಿ 2 ನೇ ವಾರದಲ್ಲಿ ಮುಂದುವರಿಯಬಹುದು, ಆದರೆ 1ನೇ ವಾರದಲ್ಲಿ ದಿನದ ತಾಪಮಾನ ಸ್ವಲ್ಪ ಏರಿಕೆಯಾಗುವ ನಿರೀಕ್ಷೆ ಇದೆ. (ಅನುಬಂಧ VI ಮತ್ತು VII).
1ನೇ ವಾರಕ್ಕೆ ದಟ್ಟ ಮತ್ತು ಅತಿ ದಟ್ಟ ಮಂಜಿನ ಮುನ್ಸೂಚನೆ
ಪಂಜಾಬ್ ನ ಕೆಲವು ಭಾಗಗಳಲ್ಲಿ 25ರ ಮುಂಜಾನೆ ದಟ್ಟವಾದ ಮಂಜಿನಿಂದ ಕೂಡಿತ್ತು ಮತ್ತು 26 ರ ಬೆಳಗ್ಗೆ ಚದುರಿದಂತೆ ದಟ್ಟವಾದ ಮಂಜು ಇರಲಿದೆ. 2020 ರ ಡಿಸೆಂಬರ್ 25 ಮತ್ತು 26 ರ ಬೆಳಗಿನ ಕೆಲವು ಗಂಟೆಗಳಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣದ ಉತ್ತರ ಭಾಗಗಳಲ್ಲಿ ಚದುರಿದಂತೆ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಇರಲಿದೆ. ಡಿಸೆಂಬರ್ 29 ರಿಂದ ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ದಟ್ಟವಾದ ಮಂಜು ಬೀಳಲಿದೆ.
ನಿಮ್ನ ಒತ್ತಡ (ಸೈಕ್ಲೋಜೆನೆಸಿಸ್): 1ನೇ ವಾರ ಮತ್ತು 2 ನೇ ವಾರದಲ್ಲಿ ಉತ್ತರ ಹಿಂದೂ ಮಹಾಸಾಗರದ ಮೇಲೆ ನಿಮ್ನ ಒತ್ತಡ ಸಂಭವವಿಲ್ಲ.
ವಿವರಗಳಿಗಾಗಿ, ದಯವಿಟ್ಟು ಕ್ಲಿಕ್ ಮಾಡಿ
ಪ್ರದೇಶ ನಿರ್ದಿಷ್ಟ ಹವಾಮಾನ ಮುನ್ಸೂಚನೆ ಮತ್ತು ಎಚ್ಚರಿಕೆಗಾಗಿ ಮೌಸಮ್ ಡೌನ್ ಲೋಡ್ ಮಾಡಿಕೊಳ್ಳಿ. ಕೃಷಿ ಹವಾಮಾನ ಸಲಹೆಗಳಿಗಾಗಿ ಮೇಘದೂತ ಆಪ್ ಮತ್ತು ಸಿಡಿಲಿನ ಮುನ್ಸೂಚನೆಗಾಗಿ ದಾಮಿನಿ ಆಪ್ ಡೌನ್ ಲೋಡ್ ಮಾಡಿಕೊಳ್ಳಿ
***
(Release ID: 1683681)
Visitor Counter : 209