ರಕ್ಷಣಾ ಸಚಿವಾಲಯ

ಏರೋ ಇಂಡಿಯಾ – 2021 ಕುರಿತ ವೆಬಿನಾರ್ ನ ಮಾಧ್ಯಮ ಪ್ರಕಟಣೆ

Posted On: 16 DEC 2020 7:53PM by PIB Bengaluru

ರಕ್ಷಣಾ ಸಚಿವಾಲಯ ಆಯೋಜಿಸುವ ದ್ವೈವಾರ್ಷಿಕ ಏರ್ ಷೋ ಮತ್ತು ರಕ್ಷಣಾ ಪ್ರದರ್ಶನ  ಏರೋ ಇಂಡಿಯಾ – 2021 ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 2021ರ ಫೆಬ್ರವರಿ 3 ರಿಂದ 7ರ ವರೆಗೆ ನಡೆಯಲಿದೆ. ಏರೋ ಇಂಡಿಯಾ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ಮಿಲಿಟರಿ ಮತ್ತು ನಾಗರಿಕ ವಿಮಾನಯಾನ, ಬಾಹ್ಯಾಕಾಶ, ವಿಮಾನ ಮೂಲಸೌಕರ್ಯ ಮತ್ತು ರಕ್ಷಣಾ ಇಂಜಿನಿಯರಿಂಗ್ ವಲಯದಲ್ಲಿನ ಜಾಗತಿಕ ಮುಂಚೂಣಿ ಕಂಪನಿಗಳ ಪ್ರದರ್ಶಕರನ್ನು ಅತಿ ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುವ ಪ್ರದರ್ಶನವಾಗಿದೆ.  ಪ್ರದರ್ಶನದಲ್ಲಿ ಏರೋ ಸ್ಪೇಸ್ ವಲಯದಲ್ಲಿ ಭಾರೀ ಪ್ರಮಾಣದ ಮಿಲಿಟರಿ ಉಪಕರಣಗಳ ಪ್ರದರ್ಶನ ಮತ್ತು ಹಾರಾಟ ಒಳಗೊಂಡಿದೆ.   

ಏರೋ ಇಂಡಿಯಾ ಪ್ರದರ್ಶನದ ಅಂಗವಾಗಿ 2020ರ ಡಿಸೆಂಬರ್ 17ರಿಂದ ವೆಬಿನಾರ್ ಸರಣಿ ಆರಂಭವಾಗಲಿದೆ. ಈ ವೆಬಿನಾರ್ ಗಳನ್ನು ಬಾಹ್ಯಾಕಾಶ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಸಮಕಾಲೀನ ವಿಷಯಗಳನ್ನು ಆಧರಿಸಿ ನಡೆಸಲಾಗುವುದು. ಈ ವೆಬಿನಾರ್ ಗಳನ್ನು ಜಗತ್ತಿನಾದ್ಯಂತ ಸ್ಟ್ರೀಮ್ ಮಾಡಲಾಗುವುದು.

          ವೆಬಿನಾರ್ ಗಳ ವಿಷಯವು ಶೈಕ್ಷಣಿಕ ಹಿತಾಸಕ್ತಿ ಮತ್ತು ರಕ್ಷಣೆ, ಬಾಹ್ಯಾಕಾಶ ಮತ್ತು ಭದ್ರತಾ ಉದ್ಯಮದ ಪ್ರಸ್ತುತತೆಯನ್ನು ಒಳಗೊಂಡಿರಲಿದೆ ಮತ್ತು ವಿದ್ಯಾರ್ಥಿ ಸಮುದಾಯದ ಶೈಕ್ಷಣಿಕ ಅರಿವಿಗೆ ಸಹಾಯಕವಾಗಲಿದೆ. ವೆಬಿನಾರ್ ಗಳ ವೇಳಾಪಟ್ಟಿ, ಭಾಗವಹಿಸಲು ಸಂಪರ್ಕಿಸುವ ಲಿಂಕ್ ಮತ್ತಿತರ ವಿವರಗಳನ್ನು ಏರೋ ಇಂಡಿಯಾ 2021 ವೆಬ್ ಸೈಟ್ (https://aeroindia.gov.in/)  ನಲ್ಲಿ ಪಡೆಯಬಹುದಾಗಿದೆ. ಈ ವೆಬಿನಾರ್ ಗಳನ್ನು ಟ್ವಿಟ್ಟರ್, ಯೂಟ್ಯೂಬ್ ಚಾನಲ್ ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುವುದು. ಜೊತೆಗೆ ವೆಬಿನಾರ್ ಗಳ ರೆಕಾರ್ಡಿಂಗ್ ಕೂಡ ಏರೋ ಇಂಡಿಯಾ 2021 ವೆಬ್ ಸೈಟ್ ನಲ್ಲಿ ಲಭ್ಯವಾಗಲಿವೆ, ವೆಬಿನಾರ್ ನ ವೇಳಾಪಟ್ಟಿ ಈ ಕೆಳಗಿನಂತಿದೆ:

 

ಏರೋ ಇಂಡಿಯಾ 2021 ವೆಬಿನಾರ್ ನ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ

ಕ್ರ.ಸಂ

ದಿನಾಂಕ

ಆಯೋಜಿಸುವ ಸಂಸ್ಥೆ/ಭಾಷಣಕಾರರು

ವಿಷಯ

  1.  

17ನೇ ಡಿಸೆಂಬರ್ 2020

(ಬೆಳಗ್ಗೆ 09.30 ರಿಂದ – ಮಧ್ಯಾಹ್ನ 12.45(ಭಾರತೀಯ ಕಾಲಮಾನ)

ಡಿಡಿಪಿ/ಎಫ್ ಐಸಿಸಿಐ

ಭಾರತ-ಮಾಲ್ಡವೀಸ್ ಉನ್ನತ ಮಟ್ಟದ ಜಂಟಿ ರಕ್ಷಣಾ ಸಹಭಾಗಿತ್ವ

  1.  

18ನೇ ಡಿಸೆಂಬರ್ 2020

(ಬೆಳಗ್ಗೆ 0900 ರಿಂದ  1130)

ಭಾರತೀಯ ಸೇನೆ ಮತ್ತು ಸಿಇಎನ್ ಜೆಒಡಬ್ಲ್ಯೂಎಸ್

ಬದಲಾಗುತ್ತಿರುವ ಹಿಂದೂಮಹಾಸಾಗರದ ಚಿತ್ರಣ

  1.  

6ನೇ ಜನವರಿ 2021

ಎಸ್ಐಡಿಎಂ:

ಶ್ರೀ ಜೆಡಿ ಪಾಟೀಲ್, ಎಲ್&ಟಿ & ಪ್ರೆಸಿಡೆಂಟ್ ಎಸ್ಐಡಿಎಂ

ಭಾರತ: ಅಭಿವೃದ್ಧಿ ಹೊಂದುತ್ತಿರುವ ರಕ್ಷಣಾ ಉತ್ಪಾದನಾ ಮತ್ತು ರಫ್ತು ತಾಣ

  1.  

7ನೇ ಜನವರಿ 2021

ಎಂಒಸಿಎ

ವಿಮಾನಗಳ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಗೊಳಿಸುವುದು(ಆತ್ಮನಿರ್ಭರ ಭಾರತ)

  1.  

13ನೇ ಜನವರಿ 2021

 

ಭಾರತ್ ಶಕ್ತಿ,

ನಿರ್ವಹಣೆ:

ಶ್ರೀ ನಿತಿನ್ ಗೋಖಲೆ

ಜಾಗತಿಕ ಭದ್ರತಾ ಹಿತಾಸಕ್ತಿಗಳ ಕುರಿತಂತೆ ಐಒಆರ್

ರಾಷ್ಟ್ರಗಳ ರಕ್ಷಣಾ ಸಾಮರ್ಥ್ಯ ಒಗ್ಗೂಡಿಸುವುದು

  1.  

18ನೇ ಜನವರಿ 2021

ಡಿಡಿಪಿ

ಏರೋ ಇಂಡಿಯಾ 2021ರ ಪ್ರಮುಖಾಂಶಗಳು

ಇತ್ತೀಚಿನ ನೀತಿ ಉಪಕ್ರಮಗಳು

  1.  

21ನೇ ಜನವರಿ 2021

ಅಧ್ಯಕ್ಷರು ಡಿಆರ್ ಡಿಒ

‘ಆತ್ಮನಿರ್ಭರ ಭಾರತ’

  1.  

ಡಿಸೆಂಬರ್ ’2020 / ಜನವರಿ’2021

ಡಿಡಿಪಿ ಜೊತೆ ಎಸ್ಐಡಿಎಂ ಮತ್ತು ಎಫ್ಐಸಿಸಿಐ ದೇಶದಲ್ಲಿ ವೆಬಿನಾರ್ ಗಳು

ಡಿಸೆಂಬರ್2020/ಜನವರಿ2021ರ ಅವಧಿಯಲ್ಲಿ ದೇಶಾದ್ಯಂತ ಸರಣಿ ವೆಬಿನಾರ್ ಗಳು ನಿಗದಿ

*****

 



(Release ID: 1681374) Visitor Counter : 260


Read this release in: English , Urdu , Hindi