ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ 147 ಸಭೆಯ ಅಧ್ಯಕ್ಷತೆ ವಹಿಸಿದ ಡಾ.ಹರ್ಷವರ್ಧನ್


ಕೋವಿಡ್ ನಂತರದ ಜಗತ್ತಿನಲ್ಲಿ ವಾಸ್ತವ ವ್ಯತ್ಯಾಸಗಳನ್ನು ತರಲು ನಮ್ಮ ಆರೋಗ್ಯ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಬೇಕಿದೆ

ನಾವು ಕಷ್ಟಕರ ಆಯ್ಕೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ ಮತ್ತು ವ್ಯವಸ್ಥೆಯೊಳಗೆ ಕೆಲವು ಕ್ರಾಂತಿಕಾರಕ ಬದಲಾವಣೆ ತರಬೇಕಿದೆ

Posted On: 16 NOV 2020 8:07PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ 147ನೇ ಸಭೆಯ ಅಧ್ಯಕ್ಷತೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಹಿಸಿದ್ದರು.

ಸಭೆಯ ಕೊನೆಯಲ್ಲಿ ಅವರು ಮಾಡಿದ ಭಾಷಣ ಹೀಗಿದೆ.

ಎಲ್ಲ ಗೌರವಾನ್ವಿತರೇ, ಸಹ ಅಧ್ಯಕ್ಷರೇ, ನಮ್ಮ ಮಹಾನಿರ್ದೇಶಕರು , ಪ್ರಾದೇಶಿಕ ನಿರ್ದೇಶಕರೇ, ಆದರಣೀಯ ಪ್ರತಿನಿಧಿಗಳೇ, ಗೌರವಾನ್ವಿತ ಪಾಲುದಾರರೇ, ಮಹಿಳೆಯರೇ ಮತ್ತು ಮಹನೀಯರೇ.

ನಾವು ಕಾರ್ಯಕಾರಿ ಮಂಡಳಿಯ ಮತ್ತೊಂದು ಸಭೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸುವ ಹಂತಕ್ಕೆ ಬಂದಿದ್ದೇವೆ. 2020ರ ವರ್ಷವನ್ನು ನೀವು ನೆನಪಿಸಿಕೊಳ್ಳಿ, ನಾವು ಕನಿಷ್ಠ ಏಳು ಬಾರಿ ಕಾರ್ಯಕಾರಿ ಮಂಡಳಿಯ ಸಭೆಯನ್ನು ಸೇರಿ ಸಮಾಲೋಚನೆಗಳನ್ನು ನಡೆಸಿದ್ದೀವಿ. ಇದರಲ್ಲಿ ಜನವರಿಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಮತ್ತು ಪಿಬಿಎಸಿ ಮಂಡಳಿಗಳು, ಆರೋಗ್ಯ ಅಸೆಂಬ್ಲಿಯ ವರ್ಚುವಲ್ ಕಿರು ಗೋಷ್ಠಿಗಳು ಮತ್ತು ಮೇ ತಿಂಗಳಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆ, ಕಾರ್ಯಕಾರಿ ಮಂಡಳಿಯ ವಿಶೇಷ ಅಧಿವೇಶನ ಮತ್ತು ಅಕ್ಟೋಬರ್ ನಲ್ಲಿ ನಡೆದ 32ನೇ ಪಿಬಿಎಸಿ ಸಭೆ, ಆರೋಗ್ಯ ಅಸೆಂಬ್ಲಿಯ ಪುನಾರಂಭ ಅಧಿವೇಶನ ಮತ್ತು ಇದೀಗ ನಡೆದ ಕಾರ್ಯಕಾರಿ ಮಂಡಳಿ ಸಭೆ.

ಈ ವರ್ಷದ ಈ ಅದ್ಬುತ ಗೋಷ್ಠಿಯಲ್ಲಿ, ನನ್ನ ಸಹೋದ್ಯೋಗಿಗಳಾದ ಉಪಾಧ್ಯಕ್ಷರು ನೀಡಿದ ಬೆಂಬಲಕ್ಕಾಗಿ ನಾನು ಪ್ರಾಮಾಣಿಕವಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಮತ್ತು ನಾನಾ ಬಗೆಯ ಸಮಯ ವಲಯಗಳ ನಡುವೆ ಅತ್ಯಂತ ಕಷ್ಟಕರ ಸ್ಥಿತಿಯಲ್ಲಿಯೂ ಕಾರ್ಯಕಾರಿ ಮಂಡಳಿ ಮತ್ತು ಪುನಾರಂಭಗೊಂಡ ಅಧಿವೇಶನ ಯಶಸ್ವಿಯಾಗಿ ನಡೆಸಲು ಸಹಕರಿಸದ ಎಲ್ಲರಿಗೂ ಕೃತಜ್ಞತೆಗಳು.

ಸದಸ್ಯ ರಾಷ್ಟ್ರಗಳ ಸಕ್ರಿಯ ಮಧ್ಯಪ್ರವೇಶದ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ. ಅವರ ಸಲಹೆಗಳು ಮತ್ತು ಮಾಹಿತಿ ಕಾರ್ಯಕಾರಿ ಸಂಸ್ಥೆಯ ಕಾರ್ಯನಿರ್ವಹಣೆಯ ಮಾರ್ಗದರ್ಶನಕ್ಕೆ ಅತ್ಯಂತ ಉಪಕಾರಿಯಾಗಿದೆ ಮತ್ತು ನಮ್ಮೆಲ್ಲರ ಜೀವನದ ಮೇಲೆ ಪರಿಣಾಮ ಬೀರಿರುವ ಸಾಂಕ್ರಾಮಿಕ ನಿಯಂತ್ರಿಸಲು ನಾವು ಮುನ್ನಡೆಯಲು ನಮ್ಮ ಸಂಕಲ್ಪ ಇನ್ನಷ್ಟು ಬಲವರ್ಧನೆಗೆ ಸಹಕಾರಿಯಾಗಿದೆ.

ವಿಶ್ವಸಂಸ್ಥೆಯ ನಮ್ಮ ಸೋದರ ಸಂಸ್ಥೆಗಳು, ಅಂತರ ಸರ್ಕಾರ ಸಂಸ್ಥೆಗಳು, ಪಾಲುದಾರರು, ಸದಸ್ಯರಲ್ಲದ ರಾಷ್ಟ್ರಗಳ ಪಾತ್ರವನ್ನು ಗುರುತಿಸಿ, ಅವರ ಬದ್ಧತೆ ಮತ್ತು ಬೆಂಬಲಕ್ಕಾಗಿ ನಾನು ಶ್ಲಾಘಿಸುತ್ತೇನೆ ಮತ್ತು ಪಾಲುದಾರಿಕೆ ಮತ್ತು ಸಕ್ರಿಯ ಒಳಗೊಳ್ಳುವಿಕೆಗಾಗಿ ನಾನು ಧನ್ಯವಾದಗಳನ್ನು ಹೇಳುತ್ತೇನೆ.

ಹಲವು ಸವಾಲುಗಳ ನಡುವೆಯೇ, ಜಗತ್ತಿನಾದ್ಯಂತ ನಿಮ್ಮೆಲ್ಲರ ಅನುಭವ ಮತ್ತು ಉತ್ತಮ ಪದ್ಧತಿಗಳ ಕುರಿತು ನಿಮ್ಮೆಲ್ಲರ ಮಾತು ಕೇಳಲು ಹಾಗೂ ನಿಮ್ಮೊಂದಿಗೆ ಕಾಲ ಕಳೆಯುವುದು ಹೆಮ್ಮೆ ಎನಿಸುತ್ತಿದೆ.

ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ,

 ಇಲ್ಲಿನ ಸಮಾಲೋಚನೆಗಳು ಮತ್ತು ಹೇಳಿಕೆಗಳು ಕಾರ್ಯಕಾರಿ ಮಂಡಳಿ ಮತ್ತು ಅದರ ಪಾಲುದಾರರ ನಡುವೆ ಸಮನ್ವಯ, ಮುನ್ನಡೆಸುವುದು ಮತ್ತು ಬೆಂಬಲ ನೀಡುವಲ್ಲಿ ಸದಸ್ಯ ರಾಷ್ಟ್ರಗಳ ನಡುವಿನ ಆಳವಾದ ಮತ್ತು ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಹಾಗೂ  ಅನಿರೀಕ್ಷಿತ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಜಾಗತಿಕ ಪ್ರತಿಸ್ಪಂದನೆಗಳನ್ನು ಬೆಂಬಲಿಸಬೇಕಿದೆ. ವ್ಯವಹಾರಿಕ, ಆಡಳಿತಾತ್ಮಕ, ಹಣಕಾಸು ಮತ್ತು ಸಿಬ್ಬಂದಿ ವಿಚಾರಗಳಲ್ಲಿ ನಿಮ್ಮ ಮಧ್ಯಪ್ರವೇಶದ ಕಾರ್ಯಸೂಚಿ ಚರ್ಚಾ ವಿಷಯಗಳಲ್ಲಿತ್ತು.

ಸದಸ್ಯ ರಾಷ್ಟ್ರಗಳ ಬೆಂಬಲ ಮತ್ತು ಉತ್ಕೃಷ್ಟ ಮಾಹಿತಿಯಿಂದ ಕಾರ್ಯಕಾರಿ ಮಂಡಳಿಯನ್ನು ಮತ್ತಷ್ಟು ಬಲವರ್ಧನೆ ಮಾಡುವ ಸಂಕಲ್ಪದ ಜೊತೆಗೆ, ಆರೋಗ್ಯಕರ, ಸುಭದ್ರ ಮತ್ತು ಸಮೃದ್ಧ ಜಗತ್ತು ನಿರ್ಮಾಣ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ.

 ಇಂದಿನ ಸಮಾಲೋಚನೆಗಳು ಮತ್ತು ಸಲಹೆಗಳು ನಮ್ಮ ಸಾಮೂಹಿಕ ಪ್ರತಿಸ್ಪಂದನಾ ಕ್ರಮಗಳನ್ನು ಬಲವರ್ಧನೆಗೊಳಿಸುವುದಲ್ಲದೆ, ಜಾಗತಿಕ ಸಹಕಾರವನ್ನು ಉತ್ತೇಜಿಸುತ್ತದೆ.

ಇದೇ ವೇಳೆ, ವಿಶ್ವ ಆರೋಗ್ಯ ಸಂಸ್ಥೆಯ ಮೂರು ಹಂತದ ಕೇಂದ್ರ ಕಚೇರಿ, ಪ್ರಾದೇಶಿಕ ಕಚೇರಿಗಳು ಮತ್ತು ದೇಶದ ಕಚೇರಿಗಳಲ್ಲಿನ ಸಿಬ್ಬಂದಿಯ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ನಾನು ಶ್ಲಾಘಿಸುತ್ತೇನೆ. ನಿಮ್ಮ ಕೆಲಸವನ್ನು ನಾವೊಬ್ಬರೇ ಗೌರವಿಸುತ್ತಿಲ್ಲ. ರೋಗಕ್ಕೆ ಸಂಬಂಧಿಸಿದಂತೆ ಖಚಿತ ವೈಜ್ಞಾನಿಕ ಮಾಹಿತಿಯನ್ನು ವಿಶ್ವಾಸಾರ್ಹ ರೀತಿಯಲ್ಲಿ ನೀಡುತ್ತಿರುವುದರಿಂದ ಜಗತ್ತಿನಾದ್ಯಂತ ಎಲ್ಲ ರಾಷ್ಟ್ರಗಳ ಸಾರ್ವಜನಿಕರೂ ಕೂಡ ಪ್ರಶಂಸಿಸಿದ್ದಾರೆ.

          ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಪ್ರಧಾನ ನಿರ್ದೇಶಕರು, ಪ್ರಾದೇಶಿಕ ನಿರ್ದೇಶಕರು ಮತ್ತು ಸಚಿವಾಲಯದ ತಂಡದ ಎಲ್ಲರ ಶ್ರಮ ಮತ್ತು ಅವರು ತೋರಿದ ಒಳನೋಟ ಮತ್ತು ಸದಸ್ಯ ರಾಷ್ಟ್ರಗಳು ತುರ್ತು ಸಂದರ್ಭಗಳಲ್ಲಿ ಮಾತ್ರವಲ್ಲದೆ ಎಲ್ಲ ವೇಳೆ ಎಲ್ಲ ರೀತಿಯಲ್ಲೂ ನೀಡುತ್ತಿರುವ ಬೆಂಬಲವನ್ನು ಶ್ಲಾಘಿಸುತ್ತೇನೆ.  

          ನಾನು ಅನುವಾದಕರು ಮತ್ತು ಐಸಿಟಿ ತಂಡಕ್ಕೂ ಪ್ರಾಮಾಣಿಕ ಧನ್ಯವಾದಗಳನ್ನು ಹೇಳುತ್ತೇನೆ. ಅವರು ಈ ವರ್ಚುವಲ್ ಕಾರ್ಯಕಾರಿ ಮಂಡಳಿಯ ಅಧಿವೇಶನವನ್ನು ಸುಗಮ ರೀತಿಯಲ್ಲಿ ನಡೆಸಲು ತುಂಬಾ ಶ್ರಮ ವಹಿಸಿದ್ದಾರೆ. ಅವರ ನಿರಂತರ ಪ್ರಯತ್ನಗಳಿಂದಾಗಿ ಈ ಅದ್ಭುತ ಸಮಾವೇಶ ಸಮಾಪನಗೊಳ್ಳುತ್ತಿದೆ.

          ಸಂಸ್ಥೆಯ ಮಹಾನಿರ್ದೇಶಕರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಭಾವನೆಗಳಿಗೆ ಅನುಗುಣವಾಗಿ ಐಕ್ಯತೆ ಮತ್ತು ಸಹಭಾಗಿತ್ವ ಅತ್ಯಂತ ಪ್ರಮುಖವಾಗಿದ್ದು, ಅದು ಈ ಸಾಂಕ್ರಾಮಿಕದಿಂದ ಹೊರಬರಲು ಮತ್ತು ಆರೋಗ್ಯ ರಕ್ಷಣಾ ಸೇವೆ ಗುಣಮಟ್ಟದಿಂದ ಕೂಡಿರುವಂತೆ, ಕೈಗೆಟಕುವಂತೆ ಮಾಡುವುದು ಹಾಗೂ ಆದ್ಯತೆಯಲ್ಲಿ ಸುಧಾರಣೆ ತರುವುದು ಸಾಧ್ಯವಾಗಿದೆ.

          ಕೊನೆಯಲ್ಲಿ ಮತ್ತೊಮ್ಮೆ ನಾನು ಈ ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಅವರ ಒಳನೋಟ ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾನು ನಮ್ಮ ಜೊತೆ ಕೈಜೋಡಿಸಿರುವ ಮತ್ತು ಆರೋಗ್ಯ ವಿಷಯದಲ್ಲಿ ಇಡೀ ಸಮಾಜದ ಹಿತವನ್ನು ಕಾಯಲು ಸಹಕರಿಸುತ್ತಿರುವ ಹಲವು ಸರ್ಕಾರೇತರ ಸಂಸ್ಥೆ ಮತ್ತು ಅಂತರ ಸರ್ಕಾರಿ ಸಂಸ್ಥೆಗಳನ್ನು ಅಭಿನಂದಿಸುತ್ತೇನೆ.

ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನಿಯರೇ

ಭಾರತದಲ್ಲಿ ಈಗಷ್ಟೆ ಬೆಳಕಿನ ಹಬ್ಬ ದೀಪಾವಳಿಯ ವೈಭವದ ಆಚರಣೆ ಮುಕ್ತಾಯವಾಗಿದೆ. ವಿಶ್ವದಾದ್ಯಂತ ಈಗ ಹಬ್ಬದ ಋತುಮಾನವಿದೆ. ಮುಂದಿನ ತಿಂಗಳು ಕ್ರಿಸ್ ಮಸ್, ಈಸ್ಟರ್ ಮತ್ತು ಹೊಸ ವರ್ಷಾಚರಣೆಗಳು ಬರಲಿವೆ. ಹೊರಗಿನ ಬಾಹ್ಯ ಸಕಾರಾತ್ಮಕ ವ್ಯಕ್ತಿಯಾಗಿ,  ನಾನು ಈ ಹಬ್ಬ ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ ಹಾಗೂ ಸಾಂಕ್ರಾಮಿಕದ ಕಪ್ಪು ಮೋಡ ಸದ್ಯದಲ್ಲೇ ಮರೆಯಾಗಲಿ ಎಂದು ಆಶಿಸುತ್ತೇನೆ.  

ಎಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಅನಿರೀಕ್ಷಿತ ಬಿಕ್ಕಟ್ಟನ್ನು ಎದುರಿಸಲು ಇಡೀ ವಿಶ್ವದ ಜನರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಹಾಗೂ ಜೀವನ ಲಭಿಸಲಿ ಎಂದು ನಾನು ಆಶಿಸುತ್ತೇನೆ.

ಈ ಅವಕಾಶವನ್ನು ಬಳಸಿಕೊಂಡು ಅತ್ಯಂತ ಕ್ಷಿಪ್ರವಾಗಿ ದೂರದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಿದೆ. ಬದಲಾದ ಕಾಲಘಟ್ಟದಲ್ಲಿ ನಾವು ವಿಶ್ವ ಆರೋಗ್ಯ ಸಂಸ್ಥೆಯನ್ನು ನಾಯಕತ್ವ ಪಾತ್ರದಲ್ಲಿ ನೋಡಲು ಕಾರ್ಯ ಕೈಗೊಳ್ಳಬೇಕಿದೆ. ಆದರೂ ಈ ಅವಕಾಶವನ್ನು ನಾವು ಸರಿಯಾಗಿ ಬಳಸಿಕೊಳ್ಳದಿದ್ದರೆ ನಮ್ಮಲ್ಲಿರುವ ಸಾಮರ್ಥ್ಯ ಹಾಗೆಯೇ ಉಳಿದು ಬಿಡುತ್ತದೆ.

          ವಿಶ್ವ ಆರೋಗ್ಯ ಸಂಸ್ಥೆಗೆ ಹೊಸ ದೂರದೃಷ್ಟಿಯನ್ನು ರೂಪಿಸಲು ಮತ್ತು ಸಮಾಲೋಚನೆಗಳನ್ನು ಒಗ್ಗೂಡಿಸಲು ಇದು ನಮಗೆ ಸಕಾಲ. ಇದಕ್ಕಾಗಿ ಮುಂದಿನ ತಿಂಗಳುಗಳಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳ ನಡುವೆ ಅತ್ಯಂತ ನಿಕಟವಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ಏಕೆಂದರೆ ಅವರಿಂದ ಭಿನ್ನವಾದ ಆಲೋಚನೆಗಳು ಮತ್ತು ಇತ್ತೀಚಿನ ದಿನಗಳಲ್ಲಿ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಂಡು ನೈಪುಣ್ಯತೆ ಗಳಿಸಿರುವ ಮಾಹಿತಿ ದೊರಕಲಿದೆ.

ಗೌರವಾನ್ವಿತರೇ,

ನಾವು ಇದೀಗ ‘ವಿ ಅಟ್ ಡಬ್ಲ್ಯೂಎಚ್ಒ’ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಟ್ರೈಲ್ ಬ್ಲೇಜರ್ ನಂತೆ ಕಾರ್ಯನಿರ್ವಹಿಸಬೇಕಿದೆ.

ನಮ್ಮ ಸುತ್ತಲಿನ ಜಗತ್ತು ಕ್ಷಣ ಕ್ಷಣಕ್ಕೂ ಅತ್ಯಂತ ವೇಗದಲ್ಲಿ ಬದಲಾಗುತ್ತಿದೆ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಸ್ಥಿರವಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಸಂಯಮ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಿದೆ. ಜಗತ್ತಿನಲ್ಲಿ ಬದಲಾವಣೆಗಳು ಆಗಬೇಕಿವೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಬದ್ಧತೆಯೊಂದಿಗೆ ನಮ್ಮ ಸದಸ್ಯ ರಾಷ್ಟ್ರಗಳ ನಡುವೆ ಪರಿವರ್ತನಾತ್ಮಕ ಬದಲಾವಣೆಗಳನ್ನು ಕಾಣಬೇಕಿದೆ.  .

          ನಮ್ಮ ಡಿಎನ್ಎ ಸದಾ “ಬೇರೆಯವರಿಗೆ ಸೇವೆ ಮಾಡಿ ಎಂದು” ಬಯಸುತ್ತದೆ. ಕೋವಿಡ್ ನಂತರದ ಜಗತ್ತಿನಲ್ಲಿ ವಾಸ್ತವ ವ್ಯತ್ಯಾಸಗಳನ್ನು ಅರಿತು ಅದಕ್ಕೆ ತಕ್ಕಂತೆ ನಮ್ಮ ಆರೋಗ್ಯ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ. ಕೆಲವು ಕಾಲ ಇದು ಹೋರಾಟ ನಡೆಸಿ, ಆನಂತರ ತನ್ನ ಕಾಲ ಮೇಲೆ ತಾನು ನಿಲ್ಲಲಿದೆ. ಇದನ್ನೆಲ್ಲಾ ಮಾಡಲು ನಾವು ವ್ಯವಸ್ಥೆಯೊಳಗೆ ಕೆಲವೊಂದು ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಅಗತ್ಯವಿದೆ.

ನಾವು ಕೆಲವು ಆಯ್ಕೆಗಳನ್ನು ಮಾಡಬೇಕಿದೆ – ಅವುಗಳಲ್ಲಿ ಬಹುತೇಕ ಕಷ್ಟಕರವಾದವು.

ನಾವು ಕ್ರಮಗಳನ್ನು ಕೈಗೊಳ್ಳಬೇಕಿದೆ – ಅವುಗಳಲ್ಲಿ ಬಹುತೇಕ ಸವಾಲುಗಳಿರುತ್ತವೆ.

ವೈಯಕ್ತಿಕವಾಗಿ ಹಾಗೂ ನಾವು ಸಾಮೂಹಿಕವಾಗಿ ನಾವು ಈ ಪ್ರಯತ್ನದಲ್ಲಿ ತೊಡಗಿಕೊಳ್ಳಬೇಕಿದೆ.

          ಆದರೆ ಇದಕ್ಕಾಗಿ ಬಹುಮಾನ ಇರಲಿದೆ. ಈ ಕ್ಷಣವನ್ನು ನಾವು ವಶಪಡಿಸಿಕೊಳ್ಳುವ ಧೈರ್ಯದಿಂದ ಮುನ್ನುಗ್ಗಿದರೆ ನಾವೆಲ್ಲಾ ಒಟ್ಟಾಗಿ ಭಾಗವಹಿಸಿದರೆ ಅದು ನಮಗಿಂತ ದೊಡ್ಡದೇನಲ್ಲ.

        ಈ ಮಾತುಗಳೊಂದಿಗೆ ನಾನು ನನ್ನ ಸಮಾಪನಾ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ. ಮುಂದಿನ ವರ್ಷ ಕಾರ್ಯಕಾರಿ ಮಂಡಳಿಯ 148ನೇ ಸಭೆಯಲ್ಲಿ ನಾನು ನಿಮ್ಮೆಲ್ಲರನ್ನೂ ಭೌತಿಕವಾಗಿ ಭೇಟಿ ಮಾಡುವ ಕ್ಷಣಕ್ಕೆ ಎದುರು ನೋಡುತ್ತಿದ್ದೇನೆ.

ಧನ್ಯವಾದಗಳು ಮತ್ತು ನಮಸ್ಕಾರ

***



(Release ID: 1673427) Visitor Counter : 151