ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಖಗೋಳ ವಿಜ್ಞಾನದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಹಯೋಗವನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಸ್ಪೇನ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವುದಕ್ಕೆ ಸಂಪುಟದ ಅನುಮೋದನೆ

Posted On: 04 NOV 2020 3:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತೀಯ ಖಭೌತಶಾಸ್ತ್ರ ಸಂಸ್ಥೆ (ಐಐಎ), ಬೆಂಗಳೂರು ಮತ್ತು ಸ್ಪೇನ್ ನ ಇನ್ಸ್ಟಿಟ್ಯೂಟೊ ಡಿ ಆಸ್ಟ್ರೋಫಿಸಿಕಾ ಡಿ ಕೆನಾರಿಯಾಸ್ (ಐಎಸಿ) ಮತ್ತು ಗ್ರ್ಯಾಂಟೆಕನ್, ಎಸ್.ಎ. (ಜಿಟಿಸಿ) ನಡುವೆ ಖಗೋಳ ವಿಜ್ಞಾನ ಕ್ಷೇತ್ರದಲ್ಲಿನ ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃದ್ಧಿಯ ಸಹಯೋಗ ಕುರಿತಂತೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಬಗ್ಗೆ ವಿವರಿಸಲಾಯಿತು.
ಈ ತಿಳಿವಳಿಕೆ ಒಪ್ಪಂದದಡಿಯಲ್ಲಿ ಕೈಗೊಳ್ಳಲಾಗುವ ಚಟುವಟಿಕೆಗಳು (i) ಹೊಸ ವೈಜ್ಞಾನಿಕ ಫಲಿತಾಂಶಗಳು; (ii) ಹೊಸ ತಂತ್ರಜ್ಞಾನಗಳು; (iii) ಹೆಚ್ಚಿನ ವೈಜ್ಞಾನಿಕ ಸಂವಹನ ಮತ್ತು ತರಬೇತಿಯ ಮೂಲಕ ಸಾಮರ್ಥ್ಯ ವರ್ಧನೆ; (iv) ಜಂಟಿ ವೈಜ್ಞಾನಿಕ ಯೋಜನೆಗಳು ಇತ್ಯಾದಿಗಳಿಗೆ ಕಾರಣವಾಗುತ್ತವೆ. 
ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಜಂಟಿ ಸಂಶೋಧನಾ ಯೋಜನೆಗಳು, ತರಬೇತಿ ಕಾರ್ಯಕ್ರಮಗಳು, ಸಮಾವೇಶಗಳು, ವಿಚಾರಗೋಷ್ಠಿ ಇತ್ಯಾದಿಗಳು ಎಲ್ಲ ಅರ್ಹತೆ ಪಡೆದ ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ತಂತ್ರಜ್ಞರಿಗೆ ಮುಕ್ತವಾಗಿರುತ್ತದೆ ಮತ್ತು ವೈಜ್ಞಾನಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಮಾತ್ರವೇ ಬೆಂಬಲಿತವಾಗಿರುತ್ತದೆ. ವಿಭಾಗೀಯ ದೂರದರ್ಶಕದ ತಂತ್ರಜ್ಞಾನಗಳ ಅಭಿವೃದ್ಧಿಯ ಜೊತೆಗೆ ರೊಬೊಟಿಕ್ ದೂರದರ್ಶಕಗಳ ಅಭಿವೃದ್ಧಿ ಮತ್ತು ಭವಿಷ್ಯದ ಇತರ ಸಂಭಾವ್ಯ ಸಹಯೋಗಗಳೂ ಇದರಲ್ಲಿ ಸೇರಿವೆ.
 

*******

 



(Release ID: 1670173) Visitor Counter : 124