ಹಣಕಾಸು ಸಚಿವಾಲಯ

ಕೇಂದ್ರ ಸರ್ಕಾರಿ ನೌಕರರು ಹಾಗೂ ಇತರೆ ಸರ್ಕಾರೇತರ ಸಿಬ್ಬಂದಿ ವರ್ಗಕ್ಕೆ ಡೀಮ್ಡ್ ಎಲ್ ಟಿಸಿ ಪಾವತಿಗೆ ಆದಾಯ ತೆರಿಗೆ ವಿನಾಯಿತಿ

Posted On: 29 OCT 2020 8:11PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಹಾಗೂ ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರಿಗೆ ಮತ್ತು ಆತಿಥ್ಯ ವಲಯಕ್ಕೆ ತೀವ್ರ ತೊಂದರೆಯಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಅಗತ್ಯವಿರುವುದರಿಂದ ಹೆಚ್ಚಿನ ಪ್ರಮಾಣದ ಉದ್ಯೋಗಿಗಳು 2018-21ರ ಬ್ಲಾಕ್ ಸದ್ಯದ ಅವಧಿಯಲ್ಲಿ ರಜೆ ಪ್ರಯಾಣ ರಿಯಾಯಿತಿ (ಎಲ್ ಟಿಸಿ)ಯನ್ನು ಪಡೆದುಕೊಳ್ಳಲಾಗುತ್ತಿಲ್ಲ.

ಕೇಂದ್ರ ಸರ್ಕಾರಿ ನೌಕರರಿಗೆ ಅದಕ್ಕೆ ಪರಿಹಾರವನ್ನು ನೀಡಲು ಪ್ರೋತ್ಸಾಹಕರ ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಆ ಮೂಲಕ ಬಳಕೆ ವೆಚ್ಚವನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗಿದೆ. ಭಾರತ ಸರ್ಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಕೆಲವು ಷರತ್ತುಗಳೊಂದಿಗೆ ಎಲ್ ಟಿ ಸಿ ದರಕ್ಕೆ ಸಮನಾದ ನಗದು ಭತ್ಯೆಯನ್ನು ಪಾವತಿಸಲು OM No F. No 12(2)/2020-EII (A) ಆದೇಶವನ್ನು 2020ರ ಅಕ್ಟೋಬರ್ 12ರಂದು ಹೊರಡಿಸಿದೆ. ಅದರಡಿ ಎಲ್ ಟಿಸಿ ದರಕ್ಕೆ ಬದಲಾಗಿ ನಗದು ಭತ್ಯೆಯನ್ನು ನೀಡುವುದರಿಂದ ಅದಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಲಾಗುವುದು. ಹಾಲಿ ಜಾರಿಯಲ್ಲಿರುವ ಆದಾಯ ತೆರಿಗೆ ವಿನಾಯಿತಿ ಮಾದರಿಯಲ್ಲೇ ಎಲ್ ಟಿಸಿ ದರಕ್ಕೂ ವಿನಾಯಿತಿ ನೀಡಲಾಗುವುದು.

ಮೇಲೆ ಉಲ್ಲೇಖಿಸಿದ ಆದೇಶದ ವ್ಯಾಪ್ತಿಗೆ ಒಳಪಡದ ಇತರೆ ಉದ್ಯೋಗಿಗಳಿಗೆ(ಅಂದರೆ ಕೇಂದ್ರ ಸರ್ಕಾರಿ ಉದ್ಯೋಗಿಗಳನ್ನು ಹೊರತುಪಡಿಸಿ) ಈ ಪ್ರಯೋಜನವನ್ನು ದೊರಕಿಸಿಕೊಡಲು ನಿರ್ಧರಿಸಿದ್ದು, ಅದರಂತೆ ಕೇಂದ್ರ ಸರ್ಕಾರಿ ಉದ್ಯೋಗಿಗಳಲ್ಲದವರಿಗೂ ಎಲ್ ಟಿ ಸಿ ದರಕ್ಕೆ ಸಮನಾದ ನಗದು ಮೊತ್ತ ಪಾವತಿಸಿದರೆ ಅದಕ್ಕೆ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ. ಅದರಂತೆ ನಗದು ಭತ್ಯೆ ಪಾವತಿ ಓರ್ವ ವ್ಯಕ್ತಿಯ(ಒಟ್ಟಾರೆ ಪ್ರಯಾಣ) ಡೀಮ್ಡ್ ಎಲ್ ಟಿಸಿಯ ಗರಿಷ್ಠ 36,000 ರೂ.ಗಳವರೆಗೆ ಕೇಂದ್ರ ಸರ್ಕಾರಿ ನೌಕರರನ್ನು ಹೊರತುಪಡಿಸಿ ಇತರೆ ಉದ್ಯೋಗಿಗಳು ಪ್ಯಾರಾ 4ರಲ್ಲಿ ಉಲ್ಲೇಖಿಸಿರುವ ಷರತ್ತುಗಳಿಗೆ ಅನುಗುಣವಾಗಿ ಆದಾಯ ತೆರಿಗೆ ವಿನಾಯಿತಿಯನ್ನು ನೀಡಲಾಗುವುದು.  

ಕೇಂದ್ರ ಸರ್ಕಾರಿ ನೌಕರರನ್ನು ಹೊರತುಪಡಿಸಿ(ಉದ್ಯೋಗಿ) ಇತರೆಯವರಿಗೆ ಡೀಮ್ಡ್ ಎಲ್ ಟಿಸಿ ದರಕ್ಕೆ ನಗದು ಪಾವತಿಗೆ ಲಭ್ಯವಿರುವ ಆದಾಯ ತೆರಿಗೆ ಪಾವತಿ ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ನೀಡಲಾಗುವುದು.

 ()     ಉದ್ಯೋಗಿ ಡೀಮ್ಡ್ ಎಲ್ ಟಿಸಿ ದರವನ್ನು 2018-21ನೇ ಬ್ಲಾಕ್ ವರ್ಷದಲ್ಲಿ ಎಲ್ ಟಿಸಿಗೆ ಅನ್ವಯಿಸಿದಾಗ ಮಾತ್ರ.

(ಬಿ)      ಉದ್ಯೋಗಿ ಡೀಮ್ಡ್ ಎಲ್ ಟಿಸಿ ದರಕ್ಕೆ ಸಮನಾದ ಮೂರು ಪಟ್ಟು ಮೌಲ್ಯದ ಹಣವನ್ನು ಸರಕು/ಸೇವೆಗಳ ಖರೀದಿಗೆ ಖರ್ಚು ಮಾಡಿದರೆ ಅದಕ್ಕೆ ಜಿಎಸ್ ಟಿಯ ಶೇ.12ಕ್ಕಿಂತ ಕಡಿಮೆ ಇಲ್ಲದಂತೆ ನೋಂದಾಯಿತಿ ಮಾರಾಟಗಾರರಿಂದ/ಸೇವಾ ಪೂರೈಕೆದಾರರಿಂದ(ನಿರ್ದಿಷ್ಟ ವೆಚ್ಚ) 2020ರ ಅಕ್ಟೋಬರ್ 12ರಿಂದ 2021ರ ಮಾರ್ಚ್ 31ರ ಅವಧಿ(ನಿರ್ದಿಷ್ಟ ಅವಧಿ)ಯಲ್ಲಿ ಡಿಜಿಟಲ್ ಮೂಲಕ ಪಾವತಿಸಿರಬೇಕು ಮತ್ತು ಜಿಎಸ್ ಟಿ ಸಂಖ್ಯೆ ಜಿಎಸ್ ಟಿ ಮೊತ್ತ ಪಾವತಿಯ ವೋಚರ್ ಹೊಂದಿರಬೇಕು.

 (ಸಿ)     ಯಾವುದೇ ಉದ್ಯೋಗಿ ಡೀಮ್ಡ್ ಎಲ್ ಟಿಸಿ ದರಕ್ಕಿಂತ ಮೂರು ಪಟ್ಟು ಕಡಿಮೆ ಖರ್ಚು ಮಾಡಿದರೆ ಅಂತಹ ನಿರ್ದಿಷ್ಟ ವೆಚ್ಚವನ್ನು ನಿರ್ದಿಷ್ಟ ಸಮಯದಲ್ಲಿ ಮಾಡಿದಾಗ ಡೀಮ್ಡ್ ಎಲ್ ಟಿಸಿಯ ಪೂರ್ಣ ಮೊತ್ತವನ್ನು ಸ್ವೀಕರಿಸಲು ಅರ್ಹವಾಗುವುದಿಲ್ಲ ಮತ್ತು ಆದಾಯ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಎರಡೂ ಮೊತ್ತಗಳು ಕೆಳಗೆ ಉದಾಹರಣೆ-ಎ ಅಲ್ಲಿ ನೀಡಿರುವಂತೆ ಸೂಕ್ತ ರೀತಿಯಲ್ಲಿ ಪ್ರಮಾಣಕ್ಕೆ ಅನುಗುಣವಾಗಿ ತಗ್ಗಲಿದೆ.

ಡಿಡಿಒಗಳು ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ರೂಪದಲ್ಲಿ ಮಾಡಿರುವ ಖರ್ಚುಗಳ ರಸೀದಿಗಳನ್ನು ಪಡೆದು, ಮೇಲಿನ ಷರತ್ತುಗಳಿಗೆ ಒಳಪಟ್ಟು ಆದಾಯ ತೆರಿಗೆ ವಿನಾಯಿತಿಗೆ ಅವಕಾಶ ನೀಡಬಹುದು. ಅಲ್ಲದೆ ಈ ವಿನಾಯಿತಿ ಎಲ್ ಟಿಸಿ ದರದ ಬದಲಿಗೆ ನೀಡುತ್ತಿರುವ ವಿನಾಯಿತಿ ಆಗಿರುವುದರಿಂದ ಯಾವ ಉದ್ಯೋಗಿ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 115ಬಿಎಸಿ ಅಡಿಯಲ್ಲಿ ಕನ್ಸೆಷನಲ್ ತೆರಿಗೆ ಪದ್ಧತಿಯಡಿ ಆದಾಯ ತೆರಿಗೆ ಪಾವತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೋ ಅವರು ಇಂತಹ ವಿನಾಯಿತಿಗೆ ಅರ್ಹರಾಗುವುದಿಲ್ಲ.

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಆದೇಶ ಸಂಖ್ಯೆ OM F. No 12(2)/2020-EII (A) ದಿನಾಂಕ 2020ರ ಅಕ್ಟೋಬರ್ 20ರಂದು ಸ್ಪಷ್ಟೀಕರಣ ಹೊರಡಿಸಲಾಗಿದ್ದು, ಆನಂತರವೂ ಸ್ಪಷ್ಟೀಕರಣ ನೀಡಲಾಗಿದೆ. ಆ ಕುರಿತಂತೆ ಯಾವುದೇ ಆದೇಶಗಳನ್ನು ಹೊರಡಿಸಿದ್ದರೆ ಅದು ಕೇಂದ್ರ ಸರ್ಕಾರಿ ನೌಕರರನ್ನು ಹೊರತುಪಡಿಸಿ ಇತರೆಯವರಿಗೆ ಅನ್ವಯವಾಗುತ್ತದೆ, ಅದಕ್ಕೆ ಷರತ್ತುಗಳನ್ನು ಪ್ಯಾರಾಗಳಲ್ಲಿ ತಿಳಿಸಲಾಗಿದೆ.

ಆದಾಯ ತೆರಿಗೆ ಕಾಯ್ದೆ 1961ರ ನಿಯಮಗಳ ಕಾನೂನಾತ್ಮಕ ತಿದ್ದುಪಡಿಯನ್ನು ಈ ಉದ್ದೇಶಕ್ಕಾಗಿ ಮುಂದಿನ ದಿನಗಳಲ್ಲಿ ಮಾಡಲಾಗುವುದು:

ಉದಾಹರಣೆ-

ಡೀಮ್ಡ್ ಎಲ್ ಟಿಸಿ ದರ            : ರೂ.20,000 x 4 = ರೂ. 80,000

ಖರ್ಚು ಮಾಡಬೇಕಿರುವ ಮೊತ್ತ : ರೂ. 80,000 x 3 = ರೂ. 2,40,000

ಆದ್ದರಿಂದ ಉದ್ಯೋಗಿ 2,40,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿದರೆ ಆತ ಪೂರ್ಣ ಡೀಮ್ಡ್ ಎಲ್ ಟಿಸಿ ದರಕ್ಕೆ ಅರ್ಹರಾಗಿರುತ್ತಾರೆ ಮತ್ತು ಅದಕ್ಕೆ ಆದಾಯ ತೆರಿಗೆ ವಿನಾಯಿತಿಯೂ ಸಿಗಲಿದೆ. ಅದೇ ರೀತಿ ಉದ್ಯೋಗಿ ಕೇವಲ 1,80,000 ರೂ. ಖರ್ಚು ಮಾಡಿದರೆ ಶೇ.75ರಷ್ಟು ಅಂದರೆ (60,000 ರೂ.). ಡೀಮ್ಡ್ ಎಲ್ ಟಿ ಸಿ ದರ ಮತ್ತು ಅದಕ್ಕೆ ಆದಾಯ ತೆರಿಗೆ ವಿನಾಯಿತಿಯೂ ಸಿಗಲಿದೆ. ಒಂದು ವೇಳೆ ಉದ್ಯೋಗಿ ಈಗಾಗಲೇ ಉದ್ಯೋಗದಾತರಿಂದ ಮುಂಗಡವಾಗಿ 80,000 ರೂ.ಗಳನ್ನು ಸ್ವೀಕರಿಸಿದ್ದರೆ ಆತ 20,000 ರೂ.ಗಳನ್ನು ಉದ್ಯೋಗದಾತರಿಗೆ ಮರುಪಾವತಿ ಮಾಡಬೇಕಾಗಿರುತ್ತದೆ ಮತ್ತು ಆತ ಶೇ.75ರಷ್ಟು ಮೊತ್ತವನ್ನು ಮಾತ್ರ ಖರ್ಚು ಮಾಡಬಹುದಾಗಿದೆ.

***


(Release ID: 1668845) Visitor Counter : 295