ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕೃಷಿ ಉತ್ಪನ್ನಗಳ ರಫ್ತು ಉತ್ತೇಜಿಸಲು ನಿಧಿ

Posted On: 18 SEP 2020 3:08PM by PIB Bengaluru

ಕೃಷಿ ರಫ್ತು ನೀತಿಯ ಅನುಷ್ಠಾನದ ಭಾಗವಾಗಿ, ಹಲವಾರು ರಾಜ್ಯಗಳು ಕೃಷಿ ಉತ್ಪನ್ನಗಳ ರಫ್ತಿಗೆ ಪರಿಣಾಮ ಬೀರುವ ವಿವಿಧ ಮೂಲಸೌಕರ್ಯಗಳ ನಡುವಿನ ಅಂತರಗಳನ್ನು ಕಡಿಮೆಗೊಳಿಸಲು ಮತ್ತು ಅಂತರವನ್ನು ಗುರುತಿಸುವ ಕ್ರಿಯಾ ಯೋಜನೆಗಳನ್ನು ಅಂತಿಮಗೊಳಿಸಲಾಗಿದೆ. ಅಂತರವನ್ನು ಪರಿಹರಿಸಲು, ರಾಜ್ಯಗಳು ವಾಣಿಜ್ಯ ಇಲಾಖೆಯ ರಫ್ತು ಯೋಜನೆ (ಟಿ...ಎಸ್.) ವ್ಯಾಪಾರ ಮೂಲಸೌಕರ್ಯದ ಅಡಿಯಲ್ಲಿ ಮತ್ತು ಕೇಂದ್ರ  ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ; ಕೇಂದ್ರ  ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯಕೇಂದ್ರ  ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಇತ್ಯಾದಿ ಸಚಿವಾಲಯಗಳ ಈಗಾಗಲೇ ಅಸ್ತಿತ್ವದಲ್ಲಿರುವ ವಿವಿಧ ಯೋಜನೆಗಳ ಅಡಿಯಲ್ಲಿ ನೆರವು ಪಡೆಯಬಹುದು.

 ಭಾರತೀಯ ಕೃಷಿಯ ರಫ್ತು ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಸಮಗ್ರ ಕೃಷಿ ರಫ್ತು ನೀತಿಯನ್ನು (..ಪಿ.) ಪರಿಚಯಿಸಿದೆವಾಣಿಜ್ಯ ಇಲಾಖೆ, ರಾಜ್ಯ / ಜಿಲ್ಲಾ ಮಟ್ಟದಲ್ಲಿ ..ಪಿ. ಜಾರಿಗೆ ತರಲು ಹಲವಾರು ಕ್ರಮಗಳನ್ನು ಕೈಗೊಂಡಿದೆರಾಜ್ಯ ನಿರ್ದಿಷ್ಟ ಕ್ರಿಯಾ ಯೋಜನೆಗಳು, ರಾಜ್ಯ ಮಟ್ಟದ ಮಾನಿಟರಿಂಗ್ ಸಮಿತಿಗಳು (ಎಸ್.ಎಲ್.ಎಂ.ಸಿ.), ಕೃಷಿ ರಫ್ತುಗಾಗಿ ನೋಡಲ್ ಏಜೆನ್ಸಿಗಳು ಮತ್ತು ಗುಂಪು (ಕ್ಲಸ್ಟರ್ ) ಮಟ್ಟದ ಸಮಿತಿಗಳನ್ನು ಹಲವಾರು ರಾಜ್ಯಗಳಲ್ಲಿ ರಚಿಸಲಾಗಿದೆ. ರಫ್ತು ಉತ್ತೇಜಿಸಲು ದೇಶ ಮತ್ತು ಉತ್ಪನ್ನ-ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ರೈತರು, ರೈತರ-ಉತ್ಪಾದಕರ ಸಂಸ್ಥೆಗಳು (ಎಫ್.ಪಿ..) ಮತ್ತು ಸಹಕಾರಿಗಳಿಗೆ ರಫ್ತುದಾರರೊಂದಿಗೆ ಸಂವಹನ ನಡೆಸಲು ವೇದಿಕೆ ಒದಗಿಸಲು .ಪಿ..ಡಿ..ಯಿಂದ ರೈತರ ಸಂಪರ್ಕ ಜಾಲತಾಣ (ಫಾರ್ಮರ್ ಕನೆಕ್ಟ್ ಪೋರ್ಟಲ್) ಅನ್ನು ಸ್ಥಾಪಿಸಲಾಗಿದೆ. ರಫ್ತು-ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸಲು ಖರೀದಿದಾರರ-ಮಾರಾಟಗಾರರ ಸಭೆಗಳನ್ನು (ಬಿ.ಎಸ್.ಎಂ.) ಎಲ್ಲಾ ಗುಂಪು(ಕ್ಲಸ್ಟರ್)ಗಳ ಮಟ್ಟದಲ್ಲಿ ಆಯೋಜಿಸಲಾಗಿದೆ.

ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಭಾರತ ಸರ್ಕಾರ ಕೆಳಗಿನ ಮೂರು ಸುಗ್ರೀವಾಜ್ಞೆಗಳನ್ನು ಪ್ರಕಟಿಸಿದೆ:  

i.          ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸವಲತ್ತುಗಳ) ಸುಗ್ರೀವಾಜ್ಞೆ, 2020 - ಇದು ರೈತರು ಮತ್ತು ವ್ಯಾಪಾರಿಗಳು, ರೈತರ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದ ಆಯ್ಕೆಯ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ರೈತರು ಪಡೆಯುವ ಅವಕಾಶಗಳ ಪೂರಕ ಪರಿಸರ ವ್ಯವಸ್ಥೆಯನ್ನು ರಚಿಸಲು ಬೇಕಾದ ಅಗತ್ಯ ಸೌಲಭ್ಯ ಒದಗಿಸುತ್ತದೆ. ಇದು ಸಂಭಾವನೆ ದರವನ್ನು ಸ್ಪರ್ಧಾತ್ಮಕ ರೀತಿಯಲ್ಲಿ ಪರ್ಯಾಯ ವ್ಯಾಪಾರ ಚಾನಲ್ಗಳ ಮೂಲಕ ಉತ್ತಮಗೊಳಿಸಿ ಸುಗಮಗೊಳಿಸುತ್ತದೆ. ವಿವಿಧ ರಾಜ್ಯ ಕೃಷಿ ಉತ್ಪಾದನಾ ಮಾರುಕಟ್ಟೆ ಶಾಸನಗಳ ಅಡಿಯಲ್ಲಿ ಅಧಿಸೂಚನೆಗೊಂಡ ಮಾರುಕಟ್ಟೆಗಳ ಭೌತಿಕ ಆವರಣದ ಹೊರಗೆ ಅಥವಾ ಸ್ವನಿಯಂತ್ರಿತ (ಡೀಮ್ಡ್) ಮಾರುಕಟ್ಟೆಗಳಲ್ಲಿ ರೈತರ ಉತ್ಪನ್ನಗಳನ್ನು ಮೌಲ್ಯ ಮತ್ತು, ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಇದು ತಡೆರಹಿತವಾಗಿ ರಾಜ್ಯದೊಳಗಡೆ ಮತ್ತು ಅಂತರ್-ರಾಜ್ಯ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸಲು ಪೂರಕ ವ್ಯವಸ್ಥೆಯನ್ನು ರೂಪಿಸುತ್ತದೆ; ಎಲೆಕ್ಟ್ರಾನಿಕ್ ವ್ಯಾಪಾರಕ್ಕಾಗಿ ಮತ್ತು ಅದರೊಂದಿಗೆ ಸಂಪರ್ಕ ಹೊಂದಿದ ಅಥವಾ ಪ್ರಾಸಂಗಿಕ ವಿಷಯಗಳಿಗೆ ಅನುಕೂಲಕರ ಚೌಕಟ್ಟನ್ನು ಒದಗಿಸುತ್ತದೆ

ii.         ಕೃಷಿ ಉತ್ಪನ್ನಗಳ ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ, 2020 - ಇದು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಜೊತೆಗೆ ಕೃಷಿ ವ್ಯವಹಾರಗಳ ಬಗ್ಗೆ ರಾಷ್ಟ್ರೀಯ ಚೌಕಟ್ಟನ್ನು ರೈತರಿಗೆ ಒದಗಿಸುತ್ತದೆ, ಇದು ಕೃಷಿ ವ್ಯವಹಾರ ಸಂಸ್ಥೆಗಳು, ಸಂಸ್ಕರಣ ಘಟಕಗಳು, ಸಗಟು ವ್ಯಾಪಾರಿಗಳು, ರಫ್ತುದಾರರು ಅಥವಾ ಕೃಷಿ ಸೇವೆಗಳಿಗಾಗಿ ದೊಡ್ಡ ಚಿಲ್ಲರೆ ವ್ಯಾಪಾರಿಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ರೈತರಿಗೆ ಅವಕಾಸ ನೀಡುತ್ತದೆ ಮತ್ತು ರೈತರನ್ನು ರಕ್ಷಿಸುತ್ತದೆ ಹಾಗೂ ರೈತರಿಗೆ ಸಂಪೂರ್ಣ ಅಧಿಕಾರ ನೀಡುತ್ತದೆಭವಿಷ್ಯದ ಕೃಷಿ ಉತ್ಪನ್ನಗಳನ್ನು ಪರಸ್ಪರ ಒಪ್ಪಿದ ಸಂಭಾವನೆ ಬೆಲೆ ಚೌಕಟ್ಟಿನಲ್ಲಿ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಮಾರಾಟ ಮಾಡುವುದು ಮತ್ತು ಅದರೊಂದಿಗೆ ಅಥವಾ ಪ್ರಾಸಂಗಿಕವಾಗಿ ಸಂಬಂಧಿಸಿದ ವಿಷಯಗಳಿಗೆ ಮಾರಾಟ ಮಾಡುವುದು ಮುಂತಾದ ಅವಕಾಶಗಳನ್ನು ರೈತರಿಗೆ ನೀಡುತ್ತದೆ

iii.        ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆ 2020 - ಇದು ಕೃಷಿ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವಾಗ ನಿಯಂತ್ರಕ ವ್ಯವಸ್ಥೆಯನ್ನು ಉದಾರೀಕರಣಗೊಳಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆಅಸಾಧಾರಣ / ವಿಶೇಷ ಸಂದರ್ಭಗಳಲ್ಲಿ (ಯುದ್ಧ, ಕ್ಷಾಮ, ಅಸಾಧಾರಣ ಬೆಲೆ ಏರಿಕೆ ಮತ್ತು ಗಂಭೀರ ರೀತಿಯ ನೈಸರ್ಗಿಕ ವಿಪತ್ತು) ಮಾತ್ರ ಕೆಲವು ಆಹಾರ ಪದಾರ್ಥಗಳ ಸರಬರಾಜನ್ನು ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಸುಗ್ರೀವಾಜ್ಞೆ ಅವಕಾಶ ನೀಡುತ್ತದೆ.

 ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಇಂದು ರಾಜ್ಯಸಭೆಯಲ್ಲಿ ಮಾಹಿತಿಯನ್ನು ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

***



(Release ID: 1656287) Visitor Counter : 253