ಹಣಕಾಸು ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ವಿಶ್ವಬ್ಯಾಂಕ್ ಭಾರತಕ್ಕೆ ನೀಡಿರುವ ಸಾಲದ ವಿವರ

Posted On: 15 SEP 2020 6:04PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸಲು ವಿಶ್ವ ಬ್ಯಾಂಕ್ ಭಾರತ ಸರ್ಕಾರಕ್ಕೆ 2.5 ಬಿಲಿಯನ್ ಡಾಲರ್ ಮೌಲ್ಯದ ಮೂರು ಸಾಲಗಳನ್ನು ನೀಡಿದೆ, ಆರೋಗ್ಯ ಸ್ಥಿತಿ ನಿರ್ವಹಣೆಗೆ (1 ಬಿಲಿಯನ್ ಡಾಲರ್ ), ಸಾಮಾಜಿಕ ಭದ್ರತೆಗಾಗಿ (0.75 ಬಿಲಿಯನ್ ಡಾಲರ್ ) ಮತ್ತು ಆರ್ಥಿಕ ಪುನಃಶ್ಚೇತನಕ್ಕಾಗಿ  (0.75 ಬಿಲಿಯನ್ ಡಾಲರ್), ಇವುಗಳ ಪ್ರಯೋಜನ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ದಕ್ಕಿದೆ. ಕೇಂದ್ರ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ರಾಜ್ಯಸಭೆಗೆ ಇಂದು ನೀಡಿದ ಲಿಖಿತ  ಉತ್ತರದಲ್ಲಿ ವಿಷಯ ತಿಳಿಸಿದ್ದಾರೆ.  

ಸಾಲಗಳ ಬಗ್ಗೆ ವಿವರ ನೀಡಿದ ಶ್ರೀ ಠಾಕೂರ್, 2020 ಏಪ್ರಿಲ್ 3ರಂದು ಮೊದಲ ಕಂತಿನಲ್ಲಿ ಆರೋಗ್ಯ ಕ್ರಮಗಳಿಗಾಗಿ 1,000 ಮಿಲಿಯನ್ ಡಾಲರ್ ಸಾಲಕ್ಕೆ ಸಹಿ ಹಾಕಲಾಯಿತು, ಭಾರತ ಸರ್ಕಾರ ಕೋವಿಡ್-19 ಕೋವಿಡ್ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು 15 ಸಾವಿರ ಕೋಟಿಗಳನ್ನು ಬಳಸಿಕೊಂಡಿತ್ತು. ಅದರಲ್ಲಿ ಕೋವಿಡ್-19 ಒಡ್ಡಿರುವ ಅಪಾಯವನ್ನು ಎದುರಿಸಲು, ಸೋಂಕು ಪತ್ತೆ ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಹಾಗೂ ಸಾರ್ವಜನಿಕ ಆರೋಗ್ಯ ಸಿದ್ಧತೆಗಳನ್ನು ಕೈಗೊಳ್ಳಲು ರಾಷ್ಟ್ರೀಯ ವ್ಯವಸ್ಥೆ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಯಿತು. ಈವರೆಗೆ 502.5 ಮಿಲಿಯನ್ ಡಾಲರ್ ಹಣವನ್ನು ಸಾಲದ ರೂಪದಲ್ಲಿ ಪಡೆಯಲಾಗಿದೆ.

ಎರಡನೇ ಸಾಲವನ್ನು ಸಾಮಾಜಿಕ ಭದ್ರತಾ ಕ್ರಮಗಳಿಗಾಗಿ 750 ಮಿಲಿಯನ್ ಡಾಲರ್ ಗೆ 2020 ಮೇ 15ರಂದು ಸಹಿ ಹಾಕಲಾಗಿದ್ದು, ಅದನ್ನು ಭಾರತ ಸರ್ಕಾರಕ್ಕೆ ಬಜೆಟ್ ಬೆಂಬಲವಾಗಿ ನೀಡಿ ಹಣವನ್ನು ಭಾರತದ ಕೋವಿಡ್ ಸಾಮಾಜಿಕ ರಕ್ಷಣಾ ಪ್ರತಿಸ್ಪಂದನಾ ಕಾರ್ಯಕ್ರಮಗಳಿಗಾಗಿ ಮತ್ತು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್(ಪಿಎಂಜಿಕೆಪಿ) ಅಡಿಯಲ್ಲಿ ಪರಿಹಾರ ಕ್ರಮಗಳನ್ನು ಬೆಂಬಲಿಸಲು ನೀಡಲಾಗಿದೆ. ಸಾಲವನ್ನು ಈವರೆಗೆ ಸಂಪೂರ್ಣವಾಗಿ ವಿನಿಯೋಗಿಸಲಾಗಿದೆ.

ಮೂರನೇ ಸಾಲವನ್ನು ಆರ್ಥಿಕ ಸಂಕಷ್ಟ ಪರಿಹಾರ ಕ್ರಮಗಳಿಗಾಗಿ ಸುಮಾರು 750 ಮಿಲಿಯನ್ ಡಾಲರ್ ಮೌಲ್ಯಕ್ಕಾಗಿ 2020 ಜುಲೈ 6ರಂದು ಸಹಿ ಹಾಕಲಾಯಿತು. ಇದನ್ನು ಬಜೆಟ್ ಬೆಂಬಲಕ್ಕಾಗಿ ಭಾರತ ಸರ್ಕಾರ ಆತ್ಮನಿರ್ಭರ ಭಾರತ ಪ್ಯಾಕೇಜ್(ಎಎನ್ ಬಿಪಿ) ಅಡಿಯಲ್ಲಿ ನೆರವು ನೀಡಲು ಬಳಸಿಕೊಂಡಿದೆ. ಸಾಲವನ್ನು ಈವರೆಗೆ ಸಂಪೂರ್ಣವಾಗಿ ವಿನಿಯೋಗಿಸಲಾಗಿದೆ.

***(Release ID: 1654776) Visitor Counter : 24


Read this release in: English , Urdu , Manipuri , Telugu