ಸಂಪುಟ ಕಾರ್ಯಾಲಯ

ಕೋವಿಡ್-19 ಕೇಂದ್ರ ಸಂಪುಟ ಕಾರ್ಯದರ್ಶಿ, ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಜೊತೆ ಪರಿಸ್ಥಿತಿ ಬಗ್ಗೆ ಪರಾಮರ್ಶೆ; ರೋಗ ನಿಯಂತ್ರಣಕ್ಕೆ ಪ್ರಮುಖ ನಿರ್ಧಾರಗಳು ಜಾರಿ

Posted On: 22 MAR 2020 2:18PM by PIB Bengaluru

ಕೋವಿಡ್-19 ಕೇಂದ್ರ ಸಂಪುಟ ಕಾರ್ಯದರ್ಶಿ, ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಜೊತೆ ಪರಿಸ್ಥಿತಿ ಬಗ್ಗೆ ಪರಾಮರ್ಶೆ; ರೋಗ ನಿಯಂತ್ರಣಕ್ಕೆ ಪ್ರಮುಖ ನಿರ್ಧಾರಗಳು ಜಾರಿ
 

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಇಂದು ಮಹತ್ವದ ಸಭೆ ನಡೆಸಿದರು. ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದ ಜನತಾ ಕರ್ಫ್ಯೂ ಕರೆಗೆ ದೊರೆತ ಅದ್ಭುತ ಮತ್ತು ತಕ್ಷಣದ ಸ್ಪಂದನದ ಬಗ್ಗೆ ಎಲ್ಲಾ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದರು.

ಕೋವಿಡ್ 19 ಹರಡುವಿಕೆ ನಿಯಂತ್ರಣ ಹಿನ್ನೆಲೆಯಲ್ಲಿ ಅಂತಾರಾಜ್ಯ ಸಾರಿಗೆ ಬಸ್ ಸೇರಿದಂತೆ ಅಗತ್ಯ ಸೇವೆಯ ವ್ಯಾಪ್ತಿಯೊಳಗೆ ಬಾರದ ಪ್ರಯಾಣಿಕ ಸಾರಿಗೆ ವಾಹನಗಳ ಸಂಚಾರಕ್ಕೆ 2020 ರ ಮಾರ್ಚ್ 31 ರವರೆಗೆ ನಿರ್ಬಂಧ ವಿಸ್ತರಿಸುವ ಬಗ್ಗೆ ಒಪ್ಪಿಕೊಳ್ಳಲಾಯಿತು.

ವಿವರವಾದ ಸಮಾಲೋಚನೆಯ ಬಳಿಕ, ಕೋವಿಡ್ 19 ರ ಪರಿಣಾಮವಾಗಿ ಜೀವಹಾನಿ ಸಂಭವಿಸಿದ ಅಥವಾ ಕೋವಿಡ್ ದೃಢಪಟ್ಟ ಪ್ರಕರಣಗಳು ವರದಿಯಾದ 75 ಜಿಲ್ಲೆಗಳಲ್ಲಿ ಜೀವನಾವಶ್ಯಕ ಸೇವೆಗಳಿಗೆ ಮಾತ್ರ ಅವಕಾಶ ನೀಡುವುದಕ್ಕೆ ಸಂಬಂಧಿಸಿ ಸೂಕ್ತ ಆದೇಶಗಳನ್ನು ಹೊರಡಿಸಲು ರಾಜ್ಯ ಸರಕಾರಗಳಿಗೆ ಸಲಹೆ ನೀಡಲಾಯಿತು. ರಾಜ್ಯ ಸರಕಾರಗಳು ಪರಿಸ್ಥಿತಿಯ ಮೌಲ್ಯಮಾಪನ ಮಾಡಿಕೊಂಡು ಈ ಪಟ್ಟಿಯನ್ನು ವಿಸ್ತರಿಸಬಹುದು. ಹಲವು ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಈಗಾಗಲೇ ಆದೇಶ ಹೊರಡಿಸಿರುವುದನ್ನು ಗಮನಿಸಲಾಯಿತು.

ನಿರ್ಧಾರಗಳು:

ಈ ಕೆಳಗಿನ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಉಪನಗರ ರೈಲು ಸೇವೆ ಸಹಿತ ಎಲ್ಲಾ ರೈಲು ಸೇವೆಗಳನ್ನು 2020ರ ಮಾರ್ಚ್ 31 ರ ವರೆಗೆ ಸ್ಥಗಿತ. ಆದರೆ , ಸರಕು ಸಾಗಾಣಿಕೆ ರೈಲುಗಳಿಗೆ ವಿನಾಯತಿ.

ಎಲ್ಲಾ ಮೆಟ್ರೋ ರೈಲುಗಳ ಸೇವೆ 2020ರ ಮಾರ್ಚ್ 31 ರವರೆಗೆ ಸ್ಥಗಿತ. ಕೋವಿಡ್ 19 ಪ್ರಕರಣಗಳು ದೃಢಪಟ್ಟ 75 ಜಿಲ್ಲೆಗಳಲ್ಲಿ ಜೀವನಾವಶ್ಯಕ ಸೇವೆಗಳಿಗೆ ಮಾತ್ರವೇ ಕಾರ್ಯಾಚರಿಸಲು ಅವಕಾಶ ಇರುವಂತೆ ರಾಜ್ಯ ಸರಕಾರಗಳು ಆದೇಶ ನೀಡಬೇಕು.

· ಅಂತಾರಾಜ್ಯ ಪ್ರಯಾಣಿಕ ಸಾರಿಗೆ 2020 ರ ಮಾರ್ಚ್ 31 ರವರೆಗೆ ಸ್ಥಗಿತ.



(Release ID: 1607744) Visitor Counter : 136