ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಾರ್ವಜನಿಕರ ಪ್ರಯಾಣ ಕಡಿಮೆ ಮಾಡಲು ರಾಜ್ಯಗಳಿಗೆ ಸಲಹೆ

ಪ್ರಕಟಣಾ ದಿನಾಂಕ: 18 MAR 2020 6:15PM by PIB Bengaluru

ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಾರ್ವಜನಿಕರ ಪ್ರಯಾಣ ಕಡಿಮೆ ಮಾಡಲು ರಾಜ್ಯಗಳಿಗೆ ಸಲಹೆ

ಪ್ರಯಾಣವನ್ನು ಕಡಿತಗೊಳಿಸಲು ಮುಂಗಡ ಬುಕಿಂಗ್‌ ಶುಲ್ಕ ಮರುಪಾವತಿ ಪರಿಗಣಿಸಲು ವಿನಂತಿಸಿದೆ

 

ಸಾರ್ವಜನಿಕ ಸಾರಿಗೆಗಳಲ್ಲಿ ನಾವೆಲ್ ಕರೊನಾ ವೈರಸ್ -ಕೋವಿಡ್ 19 ನಿಯಂತ್ರಿಸಲು  ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೋರಿದೆ.  ಸಾರಿಗೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಆಯುಕ್ತರಿಗೆ ಬರೆದ ಪತ್ರದಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು  ಈ ರೋಗವನ್ನು ನಿಯಂತ್ರಿಸಲು ವ್ಯಕ್ತಿಗಳಲ್ಲಿ ಅಂತರವನ್ನು ಕಾಯ್ದುಕೊಳ್ಳುವ ಮಹತ್ವವನ್ನು ತಿಳಿಸಿದೆ.

ಸಾರ್ವಜನಿಕರು  ಪ್ರಯಾಣ ಮಾಡುವ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳ ಲು ಸಚಿವಾಲಯವು ರಾಜ್ಯಗಳಿಗೆ ವಿನಂತಿಸಿದೆ, ಮತ್ತು ಅನಿವಾರ್ಯವಾದರೆ, ಮುಂಗಡ ಬುಕಿಂಗ್  ಶುಲ್ಕವನ್ನು ಮರುಪಾವತಿ ಮಾಡುವುದನ್ನು ಪರಿಗಣಿಸಬಹುದು ಎಂದು ತಿಳಿಸಿದೆ.

ಇದಲ್ಲದೆ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು  ಪ್ರಯಾಣಿಕರಿಗೆ ಈ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಎಸ್‌ಎಂಎಸ್ ಕಳುಹಿಸುವ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ.

***


(ಪ್ರಕಟಣೆ ಐ.ಡಿ.: 1607061) ವಿಸಿಟರ್ ಕೌಂಟರ್ : 155
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Odia