ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಸಾಧನೆಗೈದ ಮಹಿಳೆಯರ ಹೆಸರಿನಲ್ಲಿ ಸರಕಾರದಿಂದ 11 ಪೀಠಗಳ ಘೋಷಣೆ

Posted On: 29 FEB 2020 4:56PM by PIB Bengaluru

ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಸಾಧನೆಗೈದ ಮಹಿಳೆಯರ ಹೆಸರಿನಲ್ಲಿ ಸರಕಾರದಿಂದ 11 ಪೀಠಗಳ ಘೋಷಣೆ
 

ರಾಷ್ಟ್ರೀಯ ವಿಜ್ಞಾನ ದಿನವಾದ ಇಂದು ಸರಕಾರವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 11 ಮಂದಿ  ಭಾರತೀಯ ಮಹಿಳಾ ವಿಜ್ಞಾನಿಗಳ ಹೆಸರಿನಲ್ಲಿ 11 ಪೀಠಗಳನ್ನು ಘೋಷಿಸಿದೆ.  ವಿವಿಧ ಕ್ಷೇತ್ರಗಳ ಯುವ ಮಹಿಳಾ ಸಂಶೋಧಕರಿಗೆ ಮನ್ನಣೆ ನೀಡಲು ಮತ್ತು ಮಹಿಳೆಯರನ್ನು ಸಶಕ್ತೀಕರಣ ಮಾಡಲು , ಅವರಿಗೆ ಪ್ರೋತ್ಸಾಹ ನೀಡಲು ಮತ್ತು ಉತ್ತೇಜನ ನೀಡಲು ಸರಕಾರ ಈ ಕ್ರಮ ಕೈಗೊಂಡಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ಸಶಕ್ತೀಕರಣಕ್ಕಾಗಿರುವ ಹಲವಾರು ಯೋಜನೆಗಳನ್ನು ಪ್ರಕಟಿಸಿದರು ಮತ್ತು ಈ ವರ್ಷದ ರಾಷ್ಟ್ರಿಯ ವಿಜ್ಞಾನ ದಿನದ ಘೋಷ ವಾಕ್ಯವಾಗಿರುವ “ವಿಜ್ಞಾನದಲ್ಲಿ ಮಹಿಳೆಯರು” ಶೀರ್ಷಿಕೆಯನ್ನು ಅನುಸರಿಸಿ ಈ ಪ್ರಸ್ತಾವಗಳನ್ನು ಮಾಡಲಾಗಿದೆ.

ಈ 11 ಪೀಠಗಳಲ್ಲಿ  ಕೃಷಿ, ಜೈವಿಕ ತಂತ್ರಜ್ಞಾನ, ರೋಗನಿರೋಧಕ ವಿಜ್ಞಾನ, ಫೈಟೋವೈದ್ಯಕೀಯ, ಜೀವರಸಾಯನ ವಿಜ್ಞಾನ, ವೈದ್ಯಕೀಯ, ಸಮಾಜ ವಿಜ್ಞಾನ, ಭೂ ವಿಜ್ಞಾನ ಮತ್ತು ಹವಾಮಾನ/ ಪವನ ವಿಜ್ಞಾನ , ಇಂಜಿನಿಯರಿಂಗ್, ಗಣಿತ, ಮತ್ತು ಭೌತ ವಿಜ್ಞಾನ ಹಾಗು ಮೂಲಭೂತ ಸಂಶೋಧನಾ ಕ್ಷೇತ್ರಗಳ ಸಹಿತ ವಿವಿಧ ಸಂಶೋಧನಾ ವಲಯಗಳು ಸೇರಿವೆ. 

ಸ್ಥಾಪನೆಯಾಗಿರುವ ಒಂದು ಪೀಠಕ್ಕೆ ಪ್ರಖ್ಯಾತ ಮಾನವಶಾಸ್ತ್ರಜ್ಞೆ ಡಾ. ಇರಾವತಿ ಕರ್ವೆ ಅವರ ಹೆಸರನ್ನಿರಿಸಲಾಗಿದೆ.

ವಿವರಗಳು ಈ ಕೆಳಗಿನಂತಿವೆ

ಕ್ರಮ ಸಂಖ್ಯೆ

 ಸ್ಥಾಪನೆಯಾಗುತ್ತಿರುವ ಪೀಠ ಈ ಕೆಳಗಿನವರ ಹೆಸರಿನಲ್ಲಿರಲಿದೆ

ಸಂಬಂಧಿತ ವಿಜ್ಞಾನಿ ಕೆಲಸ ಮಾಡಿದ ಕ್ಷೇತ್ರ

 

ಡಾ. ಅರ್ಚನಾ ಶರ್ಮಾ (1932-2008) ಪ್ರಖ್ಯಾತ ಕೋಶ- ತಳಿವಿಜ್ಞಾನ

ಕೃಷಿ ಮತ್ತು ಆ ಸಂಬಂಧಿ ಸಂಶೋಧನೆ

 

ಡಾ. ಜಾನಕಿ ಅಮ್ಮಾಳ್ (1897-1984)

ಸಸ್ಯವಿಜ್ಞಾನಿ

ಜೀವ ತಂತ್ರಜ್ಞಾನ

 

 

ಡಾ. ದರ್ಶನ್ ರಂಗನಾಥನ್ (1941-2001)

ಸಾವಯವ ರಸಾಯನವಿಜ್ಞಾನಿ

ರೋಗನಿರೋಧಕ ಶಾಸ್ತ್ರ

 

ಡಾ. ಅಶಿಮಾ ಚಟರ್ಜಿ (1917-2006) ಶ್ರೇಷ್ಟ ರಸಾಯನ ತಜ್ಞೆ

ಸಾವಯವ ರಸಾಯನ ಶಾಸ್ತ್ರ, ಫೈಟೋಮೆಡಿಸಿನ್

 

 

ಡಾ. ಕದಂಬಿನಿ ಗಂಗೂಲಿ (1861-1923) ವೈದ್ಯರು

ವೈದ್ಯಕೀಯ

 

ಡಾ. ಇರಾವತಿ ಕಾರ್ವೆ (1905-1970) ಮಾನವ ಶಾಸ್ತ್ರ ಅಧ್ಯಯನ

ಸಮಾಜವಿಜ್ಞಾನ

 

ಡಾ. ಅನ್ನಾ ಮಣಿ (1918-2001)

ಆದ್ಯಪ್ರವರ್ತಕ ಭಾರತೀಯ ಹವಾಮಾನ ತಜ್ಞೆ

ಪವನವಿಜ್ಞಾನ

 

ಡಾ. ರಾಜೇಶ್ವರಿ ಚಟರ್ಜಿ (1922-2010) ಕರ್ನಾಟಕ ರಾಜ್ಯದಿಂದ ಮೊದಲ ಮಹಿಳಾ ಇಂಜಿನಿಯರ್

ಇಂಜಿನಿಯರಿಂಗ್, ತಂತ್ರಜ್ಞಾನ

 

ಡಾ. ರಾಮನ್ ಪರಿಮಳ (ಜನನ 1948) ಗಣಿತಜ್ಞೆ (ಭಟ್ನಾಗರ್ ಪ್ರಶಸ್ತಿ, 1987)

ಗಣಿತ

 

ಬಿಭಾ ಚೌಧುರಿ (1913-1991)

ಭೌತ ವಿಜ್ಞಾನ

 

ಕಮಾಲ್ ರಣದಿವೆ (8 ನವೆಂಬರ್ 1917-2001) (ವೈದ್ಯಕೀಯ)

ಜೀವ ವೈದ್ಯಕೀಯ ಸಂಶೋಧನೆ.

 

ಪೀಠಗಳು ಮತ್ತು ಸಂಶೋಧನಾ ಕ್ಷೇತ್ರಗಳ ಇತರ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. click here

 

*****



(Release ID: 1605074) Visitor Counter : 128


Read this release in: English , Hindi , Tamil