ಪ್ರಧಾನ ಮಂತ್ರಿಯವರ ಕಛೇರಿ
ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಜಲ - ಶಕ್ತಿ ಅಭಿಯಾನಕ್ಕೆ ತ್ವರಿತ ಪ್ರಗತಿ: ಪ್ರಧಾನ ಮಂತ್ರಿ
Posted On:
26 JAN 2020 8:32PM by PIB Bengaluru
ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಜಲ - ಶಕ್ತಿ ಅಭಿಯಾನಕ್ಕೆ ತ್ವರಿತ ಪ್ರಗತಿ: ಪ್ರಧಾನ ಮಂತ್ರಿ
ಯಶಸ್ವಿ ಮತ್ತು ಜಲ ಸಂರಕ್ಷಣೆಯಲ್ಲಿ ನಾವಿನ್ಯತೆ ಬಗ್ಗೆ ವಿಚಾರ ವಿನಿಮಯ
ಜಲ ಶಕ್ತಿ ಅಭಿಯಾನ
ಮನ್ ಕಿ ಬಾತ್ನಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜಲ ಶಕ್ತಿ ಅಭಿಯಾನವು ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ತ್ವರಿತ ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು. ಅವರು ದೇಶದ ಪ್ರತಿಯೊಂದು ಭಾಗದಲ್ಲೂ ಇರುವ ಕೆಲವು ವ್ಯಾಪಕ ಮತ್ತು ಯಶಸ್ವಿ ಮತ್ತು ಜಲ ಸಂರಕ್ಷಣೆಯಲ್ಲಿ ನಾವಿನ್ಯತೆ ಬಗ್ಗೆ ವಿಚಾರ ವಿನಿಮಯ ಹಂಚಿಕೊಂಡರು.
ರಾಜಸ್ಥಾನದ ಜಲೋರ್ ಜಿಲ್ಲೆಯ ಬಗ್ಗೆ ಪ್ರಸ್ತಾಪಿಸಿದ ಅವರು, “ಅಲ್ಲಿ ಎರಡು ಐತಿಹಾಸಿಕ ಕಲ್ಯಾಣಿಗಳು ಕಸ ಮತ್ತು ಕೊಳಕು ನೀರಿನ ಉಗ್ರಾಣಗಳಾಗಿ ಮಾರ್ಪಟ್ಟಿದ್ದವು. ಆದರೆ ಒಂದು ದಿನ, ಭದರಾಯೂನ್ ಮತ್ತು ತನವಾಲಾ ಪಂಚಾಯತ್ಗಳ ನೂರಾರು ಜನರು ಜಲ ಶಕ್ತಿ ಅಭಿಯಾನದಡಿಯಲ್ಲಿ ಅವುಗಳನ್ನು ಪುನಶ್ಚೇತನಗೊಳಿಸುವ ಸಂಕಲ್ಪವನ್ನು ಕೈಗೊಂಡರು. ಮಳೆಗಾಲಕ್ಕೂ ಬಹಳ ಮೊದಲು, ಜನರು ಸಂಗ್ರಹವಾದ ಹೊಲಸು ನೀರು, ಕಸ ಮತ್ತು ಕೆಸರುನ್ನು ತೆಗೆದು ಸ್ವಚ್ಛ ಗೊಳಿಸುವ ಕಾರ್ಯದಲ್ಲಿ ಮುಳುಗಿದರು. ಈ ಅಭಿಯಾನಕ್ಕಾಗಿ, ಕೆಲವರು ಹಣವನ್ನು ದಾನ ಮಾಡಿದರು; ಇತರರು ಶ್ರಮದಾನ ಮಾಡಿದರು. ಪರಿಣಾಮವಾಗಿ, ಈ ಕಲ್ಯಾಣಿಗಳು ಈಗ ಅವರುಗಳ ಜೀವಸೆಲೆಗಳಾಗಿ ಮಾರ್ಪಟ್ಟಿವೆ.”
ಅದೇ ರೀತಿ ಬರಾಬಂಕಿ ಉತ್ತರ ಪ್ರದೇಶದ ಸಾರಾಹಿ ಸರೋವರವನ್ನು ಗ್ರಾಮಸ್ಥರ ಸಾಮೂಹಿಕ ಪ್ರಯತ್ನದಿಂದ ಪುನರುಜ್ಜೀವನಗೊಳಿಸಲಾಯಿತು. ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಮತ್ತೊಂದು ಉದಾಹರಣೆಯೆಂದರೆ ಉತ್ತರಾಖಂಡದ ಅಲ್ಮೋರಾ-ಹಲ್ದ್ವಾನಿ ಹೆದ್ದಾರಿಯಲ್ಲಿರುವ ಗ್ರಾಮ ಸುನಿಯಕೋಟ್. ಇಲ್ಲಿನ ಗ್ರಾಮಸ್ಥರು ತಮ್ಮ ಹಳ್ಳಿಗೆ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡರು. ಜನರು ಹಣವನ್ನು ಸಂಗ್ರಹಿಸಿದರು ಶ್ರಮದಾನ ಮಾಡಿದರು. ಹಳ್ಳಿಗೆ ಒಂದು ಕೊಳವೆಯನ್ನು ಹಾಕಲಾಯಿತು ಮತ್ತು ಪಂಪಿಂಗ್ ಸ್ಟೇಷನ್ ಅನ್ನು ಸ್ಥಾಪಿಸಲಾಯಿತು. ಹೀಗಾಗಿ ದಶಕದಷ್ಟು ಹಳೆಯದಾದ ನೀರಿನ ಬಿಕ್ಕಟ್ಟನ್ನು ಪರಿಹರಿಸಲಾಯಿತು.
#Jalshakti4India ಬಳಸಿಕೊಂಡು ನೀರಿನ ಸಂರಕ್ಷಣೆ ಮತ್ತು ನೀರು ಕೊಯ್ಲು ಮಾಡುವ ಇಂತಹ ಪ್ರಯತ್ನಗಳ ಕಥೆಗಳನ್ನು ಪ್ರತಿಯೊಬ್ಬರೂ ಹಂಚಿಕೊಳ್ಳಬೇಕೆಂದು ಪ್ರಧಾನ ಮಂತ್ರಿಯವರು ವಿನಂತಿಸಿದರು.
ಜಲ ಶಕ್ತಿ ಅಭಿಯಾನ - ನೀರಿನ ಸಂರಕ್ಷಣೆ ಮತ್ತು ನೀರಿನ ಸುರಕ್ಷತೆಯ ಅಭಿಯಾನವು ಕಳೆದ ಮಾನ್ಸೂನ್ ಜುಲೈ, 2019 ರಲ್ಲಿ ಆರಂಭವಾಯಿತು. ಈ ಅಭಿಯಾನವು ನೀರಿಗೆ ಬರ ಇರುವ ಜಿಲ್ಲೆಗಳು ಮತ್ತು ಬ್ಲಾಕ್ ಗಳನ್ನು ಕೇಂದ್ರೀಕರಿಸಿದೆ.
***
(Release ID: 1600676)
Visitor Counter : 108