ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆಯ ಇಂಧನ ಸ್ವಾವಲಂಬನೆ ಸಾಧನೆಗೆ ಭಾರತ ಮತ್ತು ಬ್ರಿಟನ್ ತಿಳುವಳಿಕೆ ಒಡಂಬಡಿಕೆಗೆ ಸಚಿವ ಸಂಪುಟ ಅನುಮೋದನೆ
Posted On:
08 JAN 2020 3:18PM by PIB Bengaluru
ಭಾರತೀಯ ರೈಲ್ವೆಯ ಇಂಧನ ಸ್ವಾವಲಂಬನೆ ಸಾಧನೆಗೆ ಭಾರತ ಮತ್ತು ಬ್ರಿಟನ್ ತಿಳುವಳಿಕೆ ಒಡಂಬಡಿಕೆಗೆ ಸಚಿವ ಸಂಪುಟ ಅನುಮೋದನೆ
ಭಾರತೀಯ ರೈಲ್ವೇ ಇಂಧನ ಸ್ವಾವಲಂಬನೆ ಹೊಂದಲು ಡಿಸೆಂಬರ್ 2, 2019 ರ ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆ (ಬ್ರಿಟನ್ ಸರ್ಕಾರ) ಜೊತೆ ಭಾರತ ತಿಳುವಳಿಕೆ ಒಡಂಬಡಿಕೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಅನುಷ್ಠಾನ ನೀತಿ ಮತ್ತು ಗುರಿಗಳು
ಭಾರತೀಯ ರೈಲ್ವೇ ಇಂಧನ ಸ್ವಾವಲಂಬನೆ ಹೊಂದಲು ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆ (ಬ್ರಿಟನ್ ಸರ್ಕಾರ) ಜೊತೆ ಭಾರತದ ರೈಲ್ವೇ ಸಚಿವಾಲಯ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿರುವುದು ಈ ಕೆಳಕಂಡ ನಿಭಂದನೆಗಳನ್ನು ಒಳಗೊಂಡಿದೆ.
a) ಭಾರತೀಯ ರೈಲ್ವೇ ಇಂಧನ ದಕ್ಷತೆ ಮತ್ತು ಇಂಧನ ಸ್ವಾವಲಂಬನೆ ಸಾಧಿಸಲು ಅನುವು ಮಾಡಿಕೊಡುವ ಪ್ರಯತ್ನಗಳ ಅಂಗವಾಗಿ ಕೈಗೊಳ್ಳಬೇಕಾದ ಚಟುವಟಿಕೆಗಳಿಗೆ ಉಭಯ ಪಕ್ಷಗಳ ಅಂಗೀಕಾರ
b) ಉಭಯ ದೇಶಗಳು ಅವರವರ ದೇಶದ ಕಾನೂನುಗಳು, ನಿಯಮಗಳು, ನಿರ್ಭಂಧನೆಗಳು ಮತ್ತು ರಾಷ್ಟ್ರೀಯ ನೀತಿಗಳಿಗೆ ಒಳಪಟ್ಟಿರುತ್ತವೆ ಹಾಗೂ ಭಾರತೀಯ ರೈಲ್ವೇ ಇಂಧನ ದಕ್ಷತೆ ಮತ್ತು ಇಂಧನ ಸ್ವಾವಲಂಬನೆ ಸಾಧಿಸಲು ಕಾಲಕಾಲಕ್ಕೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತವೆ.
c) ಸೌರ ಮತ್ತು ಪವನ ಶಕ್ತಿ ವಿಭಾಗ, ಇಂಧನ ಕಾರ್ಯಕ್ಷಮತೆ ಪದ್ಧತಿಗಳ ಅಳವಡಿಕೆ, ಇಂಧನ ಕಾರ್ಯಕ್ಷಮತೆಯನ್ನು ಸಕ್ರೀಯಗೊಳಿಸುವುದು, ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ ಮಾಡುವ ಮೂಲ ಸೌಕರ್ಯ ನಿಯೋಜನೆ, ಬ್ಯಾಟರಿ ಚಾಲಿತ ಶಂಟಿಂಗ್ ಲೊಕೊಮೊಟಿವ್ಸ್, ಹಾಗೂ ಸಾಮರ್ಥ್ಯ ವೃದ್ಧಿ ಮಾಡುವ ತರಬೇತಿ ಕಾರ್ಯಕ್ರಮಗಳು, ಕೈಗಾರಿಕಾ ಭೇಟಿಗಳು, ಕ್ಷೇತ್ರ ಭೇಟಿಗಳು ಅಥವಾ ಇನ್ನಿತರ ಯಾವುದೇ ರೀತಿಯ ಸಹಕಾರವನ್ನು ಉಭಯ ದೇಶಗಳು ಲಿಖಿತ ರೂಪದಲ್ಲಿ ಅಂಗೀಕರಿಸುವುದು ಮುಂತಾದವುಗಳಿಗೆ ಉಭಯ ಪಕ್ಷಗಳು ಒಪ್ಪಿಗೆ ನೀಡುತ್ತವೆ
d) ಈ ಒಪ್ಪಂದದಡಿ ಉಭಯ ಪಕ್ಷಗಳು ಸೂಕ್ತವೆನಿಸುವ ಚಟುವಟಿಕೆಗಳಿಗೆ ಸಂಘಟಿತಗೊಳ್ಳುತ್ತವೆ. ಉಭಯ ದೇಶಗಳ ಮಧ್ಯೆ ಸಹಕಾರಕ್ಕೆ ಸಂಬಂಧಿಸಿ ಪ್ರಸ್ತುತ ಅಥವಾ ಭವಿಷ್ಯದ ಒಪ್ಪಂದಗಳಿಗೆ ಪೂರ್ವಾಗ್ರಹಕ್ಕೆ ಈ ಒಪ್ಪಂದದಲ್ಲಿ ಅವಕಾಶವಿಲ್ಲ.
e) ಈ ಒಪ್ಪಂದದ ಭಾಗಶಃ ಅಥವಾ ಸಂಪೂರ್ಣ ಪರಿಷ್ಕರಣೆ, ಮಾರ್ಪಾಡು ಅಥವಾ ತಿದ್ದುಪಡಿಗೆ ಮುಂಚಿತವಾಗಿ ಲಿಖಿತ ಮನವಿಯನ್ನು ಮಾಡಬಹುದು. ಉಭಯ ಪಕ್ಷಗಳ ಯಾವುದೇ ಅಂಗೀಕೃತ ಪರಿಷ್ಕರಣೆ, ಮಾರ್ಪಾಡು ಅಥವಾ ತಿದ್ದುಪಡಿ ಪರಿಷ್ಕೃತ ಒಪ್ಪಂದದ ಭಾಗವಾಗುತ್ತದೆ. ಉಭಯ ಪಕ್ಷಗಳು ನಿರ್ಧರಿಸಿದ ದಿನಾಂಕದಿಂದ ಇಂತಹ ಪರಿಷ್ಕರಣೆ, ಮಾರ್ಪಾಡು ಅಥವಾ ತಿದ್ದುಪಡಿ ಜಾರಿಗೆ ಬರುತ್ತದೆ.
f) ಉಭಯ ಪಕ್ಷಗಳ ಅಧಿಕೃತ ಪ್ರತಿನಿಧಿಗಳು ಸಹಿ ಹಾಕಿದ ನಂತರ ಈ ಒಪ್ಪಂದವು ಜಾರಿಗೆ ಬರುವುದು ಮತ್ತು ಯಾವುದೇ ಪಕ್ಷ ಲಿಖಿತ ಸಂವಹನದ ಮೂಲಕ ಮತ್ತೊಂದು ಪಕ್ಷಕ್ಕೆ ತಿಳಿಸುವ ಮೂಲಕ ಈ ಒಪ್ಪಂದವನ್ನು ರದ್ದುಪಡಿಸಬಹುದಾಗಿದೆ. ಇಂಥ ಸಂದರ್ಭದಲ್ಲಿ ಲಿಖಿತ ಮನವಿ ಪಡೆದ 6 ತಿಂಗಳುಗಳ ನಂತರ ಈ ಒಪ್ಪಂದ ಮುಕ್ತಾಯಗೊಳ್ಳುತ್ತದೆ.
g) ಒಪ್ಪಂದ ರದ್ದುಗೊಳ್ಳುವ ಮೊದಲು ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳು ಮತ್ತು / ಅಥವಾ ಕಾರ್ಯಕ್ರಮಗಳ ಅನುಷ್ಠಾನದ ಮೇಲೆ ಈ ಒಪ್ಪಂದ ರದ್ದುಗೊಳ್ಳುವಿಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಒಪ್ಪಂದ ರದ್ದುಗೊಳ್ಳುವ ದಿನಾಂಕದ ಮೊದಲು ಪೂರ್ವ ಒಪ್ಪಂದದಂತೆ ಎಲ್ಲ ವಿಭಾಗಗಳಲ್ಲಿ ಅವಶ್ಯಕ ಸಹಕಾರ ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳು ಮತ್ತು / ಅಥವಾ ಕಾರ್ಯಕ್ರಮಗಳಿಗೆ ಮುಂದುವರಿಸಲಾಗುತ್ತದೆ.
h) ಉಭಯ ಪಕ್ಷಗಳ ಮಧ್ಯೆ ಯಾವುದೇ ವ್ಯಾಜ್ಯೆ ಅಥವಾ ಭಿನ್ನತೆ ಇದ್ದಲ್ಲಿ ಅವುಗಳನ್ನು ಪರಸ್ಪರ ಸಮಾಲೋಚನೆ ಮತ್ತು ಮಾತುಕತೆ ಮೂಲಕ ಇತ್ಯರ್ಥಪಡಿಸತಕ್ಕದ್ದು
ಹಿನ್ನೆಲೆ:
ಇಂಧದ ವಿಭಾಗದ ಅಭಿವೃದ್ಧಿ ಕ್ಷೇತ್ರದಲ್ಲಿ ತಾಂತ್ರಿಕ, ನೀತಿ, ಸಂಶೋಧನೆ ಮತ್ತು ವಾಣಿಜ್ಯ ಅಂಶಗಳ ಸಹಕಾರಕ್ಕೆ ರೈಲ್ವೇ ಸಚಿವಾಲಯವು ತಿಳುವಳಿಕೆ ಒಡಂಬಡಿಕೆಗೆ ಸಹಿ ಹಾಕಿದೆ. ವಿದ್ಯುತ್ ಗ್ರಿಡ್ ನಲ್ಲಿ ರಚನಾತ್ಮಕ ಸುಧಾರಣೆಗಳ ಸಹಕಾರ ಮತ್ತು ಪರ್ಯಾಯ ಇಂಧನ ಅಳವಡಿಕೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಇಂಗಾಲದ ಹೊರಸೂಸುವಿಕೆ ತಗ್ಗಿಸುವುದು, ಇಂಧನ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿ ಸೇರಿದಂತೆ ಸುಸ್ಥಿರತೆಯನ್ನು ಸಾಧಿಸುವುದು ಇದರ ಗುರಿಯಾಗಿದೆ.
ರೈಲ್ವೇ ವಿಭಾಗದಲ್ಲಿ ಇತ್ತೀಚಿನ ಅಭಿವೃದ್ಧಿ ಮತ್ತು ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಸಮಾಲೋಚನೆಗೆ ಈ ತಿಳುವಳಿಕೆ ಒಡಂಬಡಿಕೆಗೆ ಭಾರತೀಯ ರೈಲ್ವೆಗೆ ವೇದಿಕೆ ಕಲ್ಪಿಸಲಿವೆ. ತಾಂತ್ರಿಕ ಪರಿಣಿತರು, ವರದಿಗಳು ಮತ್ತು ತಾಂತ್ರಿಕ ದಾಖಲೆಗಳು, ತರಬೇತಿ ಹಾಗೂ ಪರ್ಯಾಯ ಇಂಧನದಂಥ ಕ್ಷೇತ್ರಗಳಲ್ಲಿ ನಿರ್ದಿಷ್ಟ ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸುವ ಕಾರ್ಯಾಗಾರಗಳು ಮತ್ತು ಜ್ಞಾನ ಹಂಚಿಕೆಗೆ ಇತರ ಸಮಾಲೋಚನೆಗಳಿಗೆ ತಿಳುವಳಿಕೆ ಒಡಂಬಡಿಕೆಗೆ ಅವಕಾಶ ಕಲ್ಪಿಸುತ್ತವೆ.
*****
(Release ID: 1598832)
Visitor Counter : 117