ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವಾರ್ತಾ ಮತ್ತು ಪ್ರಸಾರ ಸಚಿವಾಲಯ ವರ್ಷಾಂತ್ಯದ ಪರಾಮರ್ಶೆ- 2019

Posted On: 27 DEC 2019 5:15PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯ ವರ್ಷಾಂತ್ಯದ ಪರಾಮರ್ಶೆ- 2019

 

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸರ್ಕಾರದ ನೀತಿಗಳುಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ವಿವಿಧ ಸಂವಹನ ಮಾಧ್ಯಮಗಳ ಮೂಲಕ ಪ್ರಚುರ ಪಡಿಸುವ ಕೆಲಸವನ್ನು ಮಾಡುತ್ತಿದೆ.

ಸರ್ಕಾರದ ಎಲ್ಲಾ ಪ್ರಮುಖ ಚಟುವಟಿಕೆಗಳ ಬಗ್ಗೆ ಪಾರದರ್ಶಕ ಮತ್ತು ನಿಖರವಾಗಿ ಸಾರ್ವಜನಿಕರಿಗೆ ತಿಳಿಸಲು ಸಚಿವಾಲಯವು 2019 ರಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿತು.

 

ಮಾಹಿತಿ ಕ್ಷೇತ್ರ

2019  ಜನವರಿ 5 ರಿಂದ 13 ರವರೆಗೆ ನವದೆಹಲಿಯಲ್ಲಿ ನಡೆದ ವಿಶ್ವ ಪುಸ್ತಕ ಮೇಳವಿಶ್ವ ಪುಸ್ತಕ ಮೇಳದಲ್ಲಿ ಪ್ರಕಾಶನ ವಿಭಾಗ ಆಯೋಜಿಸಿದ್ದ ‘ಮಕ್ಕಳ ಸಾಹಿತ್ಯ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಲ್ಲಿ ಸಿಕ್ಕಿಬಿದ್ದ ಯುವ ಓದುಗರುಕುರಿತು ಚರ್ಚೆ ನಡೆಯಿತು ಸಂದರ್ಭದಲ್ಲಿ ಪ್ರಕಾಶನ ವಿಭಾಗವು ಹತ್ತು ಪುಸ್ತಕಗಳನ್ನು ಬಿಡುಗಡೆ ಮಾಡಿತು. ಅವುಗಳೆಂದರೆಸರಳ ಪಂಚತಂತ್ರ ಭಾಗ I; ಮಕ್ಕಳ ವಿವೇಕಾನಂದಮಕ್ಕಳ ಮಹಾಭಾರತ ಇಂಗ್ಲಿಷ್ನಲ್ಲಿಶೇಖಾವತಿ ಕಿ ಲೋಕ ಸಂಸ್ಕೃತಿಹಮಾರೆ ಸಮಯ್ ಮೆ ಉಪನಿಷತ್ಹಾರ್ ಕಿ ಖುಷಿಮಾ ಕಾ ಜನಮ್ ದಿನ್ಬಾಪು ಕಿ ವಾಣಿವೇದ ಗಥಾಮತ್ತು ಬಾಲ ಮಹಾಭಾರತ್ ಹಿಂದಿಯಲ್ಲಿ.

2019 ಮಾರ್ಚ್ 12 ರಿಂದ 14 ರವರೆಗೆ ನಡೆದ ಲಂಡನ್ ಪುಸ್ತಕ ಮೇಳದಲ್ಲಿ ಇಂಡಿಯಾ ಪೆವಿಲಿಯನ್ಇಂಡಿಯಾ ಪೆವಿಲಿಯನ್ ಮಹಾತ್ಮ ಗಾಂಧಿಯವರ 150 ನೇ ಜಯಂತಿಯ ಮೇಲೆ ವಿಶೇಷ ಗಮನ ಹರಿಸಿತು ಮತ್ತು ಮಹಾತ್ಮ ಗಾಂಧಿಯವರು ಸಂಗ್ರಹಿಸಿದ ಕೃತಿಗಳ ಡಿಜಿಟಲ್ ಆವೃತ್ತಿಯನ್ನು ಪ್ರದರ್ಶಿಸಲಾಯಿತು. ಇದರ ಹೊರತಾಗಿ ಭಾರತದ ಸಂಸ್ಕೃತಿಇತಿಹಾಸ ಮತ್ತು ಜಾನಪದದ ವಿವಿಧ ಕೃತಿಗಳ ಪ್ರದರ್ಶನವು ಇತ್ತು.

ಭಾರತ್ 2019’ ಮತ್ತು ‘ಇಂಡಿಯಾ 2019’ ಗಳ ಬಿಡುಗಡೆ- ಪ್ರಕಾಶನ ವಿಭಾಗವು ಹೊರತಂದ ಪ್ರಮುಖ ಪ್ರಕಟಣೆಗಳು.

ಅಮೃತಸರದಲ್ಲಿ ಜಲಿಯನ್ ವಾಲಾ ಬಾಗ್ ಘಟನೆಯ ಶತಮಾನೋತ್ಸವದ ಸ್ಮರಣಾರ್ಥ ಫೋಟೋ ಪ್ರದರ್ಶನ. 2019  ಏಪ್ರಿಲ್ನಲ್ಲಿ ಪ್ರಾದೇಶಿಕ ಔಟ್ ರೀಚ್ ಬ್ಯೂರೋದಿಂದ ಸ್ವಾತಂತ್ರ್ಯ ಹೋರಾಟ ಕುರಿತ ಫೋಟೋ ಪ್ರದರ್ಶನ ಎಂಬ ಶೀರ್ಷಿಕೆಯಲ್ಲಿ ಆಯೋಜನೆ.

ಪ್ರಕಾಶನ ವಿಭಾಗದ ಅನೇಕ -ಯೋಜನೆಗಳಿಗೆ ಚಾಲನೆ. ಮರುವಿನ್ಯಾಸಗೊಳಿಸಿದ ಪ್ರಕಾಶನ ವಿಭಾಗದ ವೆಬ್ಸೈಟ್ಮೊಬೈಲ್ ಅಪ್ಲಿಕೇಶನ್ “ಡಿಜಿಟಲ್ ಡಿಪಿಡಿ”, ರೋಜ್ಗಾರ್ ಸಮಾಚಾರ್ -ಆವೃತ್ತಿ ಮತ್ತು “ಸತ್ಯಾಗ್ರಹ ಗೀತ” -ಬುಕ್  ಇದರಲ್ಲಿ ಸೇರಿವೆ.

ರೋಜ್ಗಾರ್ ಸಮಾಚಾರ್ -ಆವೃತ್ತಿ ಆರಂಭ. ಸಾರ್ವಜನಿಕ ವಲಯದ ಉದ್ಯಮಗಳು ಸೇರಿದಂತೆ ಸರ್ಕಾರಿ ವಲಯದಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ಆಕಾಂಕ್ಷಿಗಳಿಗೆ ಅರಿವು ಮೂಡಿಸುವ ಉದ್ದೇಶ.

ಪುಣೆಯ ಪ್ರಾದೇಶಿಕ ಔಟ್ ರೀಚ್ ಬ್ಯೂರೋದಿಂದ ‘ಜಲದೂತ್’  ಜಲಶಕ್ತಿ ಅಭಿಯಾನ ಪ್ರದರ್ಶನ. ಪ್ರದರ್ಶನವು ವಿವಿಧ ಮಾಹಿತಿ ಪ್ರದರ್ಶನ ಫಲಕಗಳು ಮತ್ತು ಆಡಿಯೋ-ವಿಷುಯಲ್ ಘಟಕಗಳನ್ನು ಒಳಗೊಂಡಿದ್ದುಸರ್ಕಾರವು ಉಪಕ್ರಮಗಳು ಮತ್ತು ನಿರ್ಣಾಯಕ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ.

 ‘ಲೋಕತಂತ್ರ ಕೆ ಸ್ವರ್’ ಮತ್ತು ‘ದಿ ರಿಪಬ್ಲಿಕನ್ ಎಥಿಕ್ ಎರಡನೇ ಸಂಪುಟ ಬಿಡುಗಡೆ- ಭಾರತದ ರಾಷ್ಟ್ರಪತಿಗಳ ಆಯ್ದ ಭಾಷಣಗಳ ಸಂಕಲನಇದನ್ನು ನಿರ್ದೇಶನಾಲಯದ ಪ್ರಕಟಣಾ ವಿಭಾಗವು ಹೊರತಂದಿದೆ.

 

ಪ್ರಸಾರ ಕ್ಷೇತ್ರ

ದೂರದರ್ಶನದಲ್ಲಿ ರಾಗ್ ರಾಗ್ ಮೇ ಗಂಗಾ ಪ್ರವಾಸ ಕಥನ ಮತ್ತು “ಮೇರಿ ಗಂಗಾ” ರಸಪ್ರಶ್ನೆ ಕಾರ್ಯಕ್ರಮಗಳ ಪ್ರಾರಂಭ. ಗಂಗಾ ನದಿಯ ಸ್ವಚ್ಚತೆಗಾಗಿನ ರಾಷ್ಟ್ರೀಯ ಅಭಿಯಾನದ (ಎನ್ಎಂಸಿಜಿಸಹಯೋಗದೊಂದಿಗೆ ಪ್ರವಾಸ ಕಥನ “ರಾಗ್ ರಾಗ್ ಮೇ ಗಂಗಾ” ಅನ್ನು ದೂರದರ್ಶನ ನಿರ್ಮಿಸಿದೆ ಕಾರ್ಯಕ್ರಮವು ಗಂಗಾ ನದಿಯನ್ನು ಪುನಶ್ಚೇತನಗೊಳಿಸುವ ಅಗತ್ಯತೆಯ ಸಂದೇಶವನ್ನು ಪ್ರಸಾರ ಮಾಡುತ್ತದೆ ಮತ್ತು ಗಂಗಾನದಿ ಸ್ವಚ್ಛತೆಯ ಬಗೆಗಿನ ಸರ್ಕಾರದ ಪ್ರಯತ್ನಗಳ ಬಗ್ಗೆ ತಿಳಿಸುತ್ತದೆಕಾರ್ಯಕ್ರಮವನ್ನು ವಿಶಿಷ್ಟ ಮತ್ತು ಆಸಕ್ತಿದಾಯಕ ಸ್ವರೂಪದಲ್ಲಿ ಪ್ರಸ್ತುತಪಡಿಸಲಾಗಿದೆದೇಶದ ಎಲ್ಲ ವಲಯಗಳ ಶಾಲಾ ಮಕ್ಕಳನ್ನು ಒಳಗೊಂಡು ಮತ್ತು ಅವರಲ್ಲಿ ಗಂಗಾನದಿಯ ಸ್ವಚ್ಛತೆಯ ಉದ್ದೇಶದ ಬಗ್ಗೆ ಕುತೂಹಲವನ್ನು ಕೆರಳಿಸುವ ಪ್ರಯತ್ನದಲ್ಲಿ ದೂರದರ್ಶನವು ಎನ್ಎಂಸಿಜಿಯ ಸಹಯೋಗದೊಂದಿಗೆ ‘ಮೇರಿ ಗಂಗಾ’ ಎಂಬ ರಸಪ್ರಶ್ನೆ ಕಾರ್ಯಕ್ರಮವನ್ನು ಸಹ ನಿರ್ಮಿಸಿದೆ.

ಆಕಾಶವಾಣಿಯ ಸುದ್ದಿ ಸಮಾಚಾರಗಳನ್ನು ಪ್ರಸಾರ ಮಾಡಲು ಷರತ್ತುಗಳೊಂದಿಗೆ ಖಾಸಗಿ ಎಫ್ ಎಂ ರೇಡಿಯೋ ಚಾನಲ್ ಗಳಿಗೆ ಅನುಮತಿ. ಬುಲೆಟಿನ್ ಗಳ ಪಟ್ಟಿಯ ಪ್ರಕಾರ ಹಿಂದಿ ಮತ್ತು ಇಂಗ್ಲಿಷ್ ಸುದ್ದಿಗಳ ಪ್ರಸಾರಕ್ಕೆ ಅನುಮತಿ.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ  ಡಿಡಿ ಅರುಣ್ ಪ್ರಭಾಕ್ಕೆ ಚಾಲನೆ. ಅರುಣಾಚಲ ಪ್ರದೇಶಕ್ಕಾಗಿ ಮೀಸಲಾದ 24x7 ದೂರದರ್ಶನ ಉಪಗ್ರಹ ಚಾನೆಲ್ ಡಿಡಿ ಅರುಣ್ ಪ್ರಭಾ, ಫೆಬ್ರವರಿ 9, 2019 ರಂದು ಪ್ರಧಾನಿಯವರಿಂದ ಆರಂಭವಾಯಿತು.

ಇನ್ನೂ 11 ರಾಜ್ಯಗಳ ದೂರದರ್ಶನ ಚಾನೆಲ್ಗಳನ್ನು ಉಚಿತ ದೂರದರ್ಶನ ಡಿಶ್ ಮೂಲಕ ಉಪಗ್ರಹ ಸೇವೆಗೆ ಸೇರಿಸಲಾಯಿತು. ಛತ್ತೀಸ್ ಗಢ ಗೋವಾಹರಿಯಾಣಹಿಮಾಚಲ ಪ್ರದೇಶಜಾರ್ಖಂಡ್ಮಣಿಪುರಮೇಘಾಲಯಮಿಜೋರಾಂನಾಗಾಲ್ಯಾಂಡ್ತ್ರಿಪುರ ಮತ್ತು ಉತ್ತರಾಖಂಡ ರಾಜ್ಯಗಳು ಉಚಿತ ದೂರದರ್ಶನ ಡಿಶ್ ಮೂಲಕ ಉಪಗ್ರಹ ಜಾಲದಲ್ಲಿ ತಮ್ಮದೇ ಆದ ದೂರದರ್ಶನ ಚಾನೆಲ್ ಗಳನ್ನು ಇದೇ ಮೊದಲ ಬಾರಿಗೆ ಪಡೆದುಕೊಂಡವು.

ಜಮ್ಮು ಮತ್ತು ಕಾಶ್ಮೀರದಲ್ಲಿ ದೂರದರ್ಶನದ ಉಚಿತ ಡಿಶ್ ಸೆಟ್ ಟಾಪ್ ಬಾಕ್ಸ್‌ಗಳ ವಿತರಣೆ. ಗಡಿ ಪ್ರದೇಶಗಳಿಗೆ ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯನ್ನು ತಲುಪಿಸಲು ಡಿಡಿ ಕಾಶೀರ್‌ನಿಂದ ಅರ್ಧ ಘಂಟೆಯ ಡೋಗ್ರಿ ಕಾರ್ಯಕ್ರಮ ಮತ್ತು ಸುದ್ದಿ ಬುಲೆಟಿನ್ ಮತ್ತು ಚಾನೆಲ್‌ನ ಸಿಗ್ನೇಚರ್ ಟ್ಯೂನ್ ಬಿಡುಗಡೆ.

ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಸಮುದಾಯ ರೇಡಿಯೋ ಕೇಂದ್ರ. ಸಮುದಾಯ ರೇಡಿಯೋ ತಳಮಟ್ಟದಲ್ಲಿ ಹೆಚ್ಚಿನ ಮಾಹಿತಿ ಪ್ರಸಾರಕ್ಕೆ ಸಹಾಯವಾಗುವುದರಿಂದ, ಆಗಸ್ಟ್ 2019 ರಲ್ಲಿ 7 ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಸಮ್ಮೇಳನದಲ್ಲಿ ಘೋಷಿಸಿದಂತೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಸಮುದಾಯ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವನ್ನು ಸಚಿವಾಲಯ ಹೊಂದಿದೆ. ಇದು ಜನರ ಮತ್ತಷ್ಟು ಸಬಲೀಕರಣಕ್ಕೆ ಕಾರಣವಾಗುತ್ತದೆ.

ಟಿವಿ ಕಾರ್ಯಕ್ರಮಗಳಲ್ಲಿ ದಿವ್ಯಾಂಗರಿಗಾಗಿ ಲಭ್ಯತೆಯ ಮಾನದಂಡಗಳನ್ನು ಜಾರಿಗೆ ತರಲಾಗಿದೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಿಂದ ಆರಂಭಿಸಿ, ಖಾಸಗಿ ಉಪಗ್ರಹ ಸುದ್ದಿ ಟಿವಿ ಚಾನೆಲ್‌ಗಳು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳನ್ನು ಸಂಕೇತ ಭಾಷೆಯ ವಿವರಣೆಯೊಂದಿಗೆ ಪ್ರಸಾರ ಮಾಡಿದವು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೂರದರ್ಶನದಿಂದ ದೇಶಭಕ್ತಿ ಗೀತೆ “ವತನ್” ನಿರ್ಮಾಣ. ಈ ಗೀತೆಯು ನವ ಭಾರತಕ್ಕೆ ಗೌರವ ಸಲ್ಲಿಸುತ್ತದೆ. "ಚಂದ್ರಯಾನ 2" ಅನ್ನು ಯಶಸ್ವಿಯಾಗಿ ಉಡಾಯಿಸಿದ ಹಿಂದಿನ ದೃಢ ನಿಶ್ಚಯ ಮತ್ತು ದೃಷ್ಟಿ ಸೇರಿದಂತೆ ಸರ್ಕಾರದ ಹಲವಾರು ಉಪಕ್ರಮಗಳನ್ನು ಇದು ಎತ್ತಿ ತೋರಿಸುತ್ತದೆ. ಈ ಹಾಡು ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಾಹಸ ಹಾಗೂ  ದೇಶದ ಹುತಾತ್ಮರಿಗೆ ಗೌರವ ಸಲ್ಲಿಸುತ್ತದೆ.

 

ಚಲನಚಿತ್ರ ಕ್ಷೇತ್ರ

2019 ರ ಫೆಬ್ರವರಿ 1 ರಿಂದ 3 ರವರೆಗೆ  ರಾಂಚಿಯಲ್ಲಿ 2 ನೇ ಜಾರ್ಖಂಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ. ಸಿನೆಮಾವನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ ರಾಜ್ಯಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ.

ನವದೆಹಲಿಯಲ್ಲಿ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಭಾರತೀಯ ಪನೋರಮಾ ಚಲನಚಿತ್ರೋತ್ಸವ. ಈ ರೀತಿಯ ಚಿತ್ರೋತ್ಸವಗಳು ವೀಕ್ಷಕರಿಗೆ ಭಾಷೆಯ ತಡೆಗೋಡೆಯನ್ನು ಮೀರಲು ಸಹಾಯ ಮಾಡುತ್ತವೆ. ಪರಸ್ಪರರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ವಿವಿಧ ನಗರಗಳಿಂದ ಬಂದ ಜನರೊಡನೆ  ಸಂಪರ್ಕ ಸಾಧಿಸಲು ಇದರಿಂದ ಅನುಕೂಲವಾಗುತ್ತದೆ.

69 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯಾ ಪೆವಿಲಿಯನ್. ಸಾಗರೋತ್ತರ ಮಾರುಕಟ್ಟೆಯಲ್ಲಿ ಭಾರತೀಯ ಸಿನೆಮಾವನ್ನು ಜನಪ್ರಿಯಗೊಳಿಸಲು ಮತ್ತು ಹೊಸ ವ್ಯಾಪಾರ ಅವಕಾಶಗಳಿಗೆ ಅನುಕೂಲ ಕಲ್ಪಿಸುವ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ಅಬುಧಾಬಿ ಅಂತರರಾಷ್ಟ್ರೀಯ ಪುಸ್ತಕ ಮೇಳ 2019 ರಲ್ಲಿ ಇಂಡಿಯಾ ಪೆವಿಲಿಯನ್. ಭಾರತವನ್ನು ಪುಸ್ತಕ ಮೇಳಕ್ಕೆ ಗೌರವ ಅತಿಥಿಯಾಗಿ ನೇಮಿಸಲಾಗಿತ್ತು, ಇದು 2019 ರ ಏಪ್ರಿಲ್ 24 ರಿಂದ 30 ರವರೆಗೆ ನಡೆಯಿತು.

ಕ್ಯಾನೆ ಚಿತ್ರೋತ್ಸವ 2019 ರಲ್ಲಿ ಇಂಡಿಯಾ ಪೆವಿಲಿಯನ್. ವಿತರಣೆ, ನಿರ್ಮಾಣ, ಭಾರತದಲ್ಲಿ ಚಿತ್ರೀಕರಣ, ಸ್ಕ್ರಿಪ್ಟ್ ಅಭಿವೃದ್ಧಿ, ತಂತ್ರಜ್ಞಾನ, ಚಲನಚಿತ್ರ ಮಾರಾಟ ಮತ್ತು ಸಿಂಡಿಕೇಶನ್ ಅನ್ನು ಉತ್ತೇಜಿಸುವಲ್ಲಿ ಅಂತರರಾಷ್ಟ್ರೀಯ ಸಹಭಾಗಿತ್ವವನ್ನು ರೂಪಿಸುವ ಉದ್ದೇಶದಿಂದ ಭಾಷಾ, ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವೈವಿಧ್ಯತೆಯಾದ್ಯಂತ ಭಾರತೀಯ ಸಿನೆಮಾವನ್ನು ಪ್ರದರ್ಶಿಸಲು ಕ್ಯಾನೆ ಚಿತ್ರೋತ್ಸವ 2019 ರಲ್ಲಿ ಇಂಡಿಯಾ ಪೆವಿಲಿಯನ್ ಆಯೋಜಿಸಲಾಗಿತ್ತು. ‘ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಸೆಪ್ಟೆಂಬರ್ 2019) ದಲ್ಲಿಯೂ ಇಂಡಿಯಾ ಪೆವಿಲಿಯನ್ ಅನ್ನು ಆಯೋಜಿಸಲಾಗಿತ್ತು.

ಗೋವಾದಲ್ಲಿ ಭಾರತದ 50 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ. ಚಿತ್ರೋತ್ಸವದಲ್ಲಿ ರಷ್ಯಾ ದೇಶ ಕೇಂದ್ರಬಿಂದುವಾಗಿತ್ತು. ಭಾರತೀಯ ಚಿತ್ರರಂಗದ ವರಿಷ್ಠ ಶ್ರೀ ಅಮಿತಾಬ್ ಬಚ್ಚನ್ ಮತ್ತು ಭಾರತೀಯ ಚಲನಚಿತ್ರೋದ್ಯಮದ ‘ತಲೈವಾ ಶ್ರೀ ರಜನಿಕಾಂತ್ ಅವರು ಧ್ವಜಾರೋಹಣ ಮಾಡಿ ಉತ್ಸವವನ್ನು ಉದ್ಘಾಟಿಸಿದರು. ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಶ್ರೀ ರಜನಿಕಾಂತ್ ಅವರಿಗೆ 'ಐಕಾನ್ ಆಫ್ ಗೋಲ್ಡನ್ ಜುಬಿಲಿ ಪ್ರಶಸ್ತಿ' ನೀಡಲಾಯಿತು. ಫ್ರೆಂಚ್ ಸಿನೆಮಾ ನಟಿ ಮಿಸ್ ಇಸಾಬೆಲ್ಲೆ ಆನ್ ಮೆಡೆಲೀನ್ ಹಪ್ಪರ್ಟ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. ಗೋರನ್ ಪಾಸ್ಕಲ್ಜೆವಿಕ್ ನಿರ್ದೇಶನದ ಇಟಾಲಿಯನ್ ಚಲನಚಿತ್ರ ‘ಡಿಸ್ಪೈಟ್ ದ ಫಾಗ್ನೊಂದಿಗೆ ಚಿತ್ರೋತ್ಸವ ಉತ್ಸವ ಪ್ರಾರಂಭವಾಯಿತು. ಬ್ಲೇಸ್ ಹ್ಯಾರಿಸನ್ ನಿರ್ದೇಶಿಸಿದ ಮತ್ತು ಎಸ್ಟೆಲ್ಲೆ ಫಿಯಾಲನ್ ನಿರ್ಮಿಸಿದ ‘ಪಾರ್ಟಿಕಲ್ಸ್ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಲಿಜೋ ಜೋಸ್ ಪೆಲ್ಲಿಸ್ಸೆರಿ ‘ಜಲ್ಲಿಕಟ್ಟು ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡರು; ಸೆಯು ಜಾರ್ಜ್ ಅವರನ್ನು ಅತ್ಯುತ್ತಮ ನಟ (ಪುರುಷ) ಪ್ರಶಸ್ತಿ ಮತ್ತು ಉಷಾ ಜಾಧವ್ ಅತ್ಯುತ್ತಮ ನಟಿ (ಮಹಿಳಾ) ಪ್ರಶಸ್ತಿ ಪಡೆದರು.

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು. 2018ನೇ ಸಾಲಿನ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಉಪ ರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರು ನವದೆಹಲಿಯಲ್ಲಿ ಪ್ರದಾನ ಮಾಡಿದರು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಗುಜರಾತಿ ಚಲನಚಿತ್ರ ಹೆಲ್ಲರೊಯಿನ್, ಅತ್ಯುತ್ತಮ ಮನರಂಜನಾ ಚಿತ್ರವಿಭಾಗದಲ್ಲಿ ಬದಾಯಿ ಹೋ ಚಿತ್ರಗಳು ಪ್ರಶಸ್ತಿಗಳನ್ನು ಪಡೆದುಕೊಂಡವು. ಹಿಂದಿ ಚಲನಚಿತ್ರ ಪ್ಯಾಡ್ ಮ್ಯಾನ್ ಅತ್ಯುತ್ತಮ ಸಾಮಾಜಿಕ ಚಲನಚಿತ್ರ ಪ್ರಶಸ್ತಿ ಪಡೆಯಿತು.  ಆದಿತ್ಯ ಧರ್  ಉರಿ-ದ ಸರ್ಜಿಕಲ್ ಸ್ಟ್ರೈಕ್ ಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು: ಆಯುಷ್ಮಾನ್ ಖುರಾನಾ ಮತ್ತು ವಿಕ್ಕಿ ಕೌಶಲ್ ಜಂಟಿಯಾಗಿ ಅಂಧಾಧುನ್ ಹಾಗೂ ಉರಿ- ದಿ ಸರ್ಜಿಕಲ್ ಸ್ಟ್ರೈಕ್ ನಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು,  ತೆಲುಗು ಚಲನಚಿತ್ರ ಮಹಾನಟಿ ಚಿತ್ರದ ಅಭಿನಯಕ್ಕಾಗಿ ಕೀರ್ತಿ ಸುರೇಶ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಮರಾಠಿ ಚಲನಚಿತ್ರ ನಾಲ್ ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಪಡೆದರೆ, ಮತ್ತೊಂದು ಮರಾಠಿ ಚಲನಚಿತ್ರ ಪಾನಿ ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಿತ್ರಕ್ಕಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗಿಸ್‌ದತ್ ಪ್ರಶಸ್ತಿಯನ್ನು ಕನ್ನಡದ ಒಂದಲ್ಲಾ ಎರಡಲ್ಲಾ ಚಿತ್ರಕ್ಕೆ ಪ್ರದಾನ ಮಾಡಲಾಯಿತು. ಉತ್ತರಾಖಂಡಕ್ಕೆ ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯವೆಂದು ನೀಡಲಾಯಿತು.

ಇದಲ್ಲದೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಘಟಕಗಳ ಮೊದಲ ವಾರ್ಷಿಕ ಸಮ್ಮೇಳನವನ್ನು ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಸಮ್ಮೇಳನದಲ್ಲಿ, ಮಾಧ್ಯಮ ಘಟಕಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಯಿತು. ಮಾಧ್ಯಮ ಘಟಕಗಳ ನಡುವಿನ ದಿನನಿತ್ಯದ ಕಾರ್ಯಚಟುವಟಿಕೆಯನ್ನು ಖಾತರಿಪಡಿಸುವುದು. ಸಂವಹನಕ್ಕಾಗಿ ಆಧುನಿಕ ತಾಂತ್ರಿಕ ಸಾಧನಗಳನ್ನು ಬಳಸುವ ಬಗ್ಗೆ ಚರ್ಚೆಗಳು ಸಹ ಸಮ್ಮೇಳನದಲ್ಲಿ ನಡೆದವು.


(Release ID: 1597991) Visitor Counter : 263