ಅಣುಶಕ್ತಿ ಇಲಾಖೆ

ವರ್ಷಾಂತ್ಯದ ಪರಾಮರ್ಶೆ: ಪರಮಾಣು ಇಂಧನ ಇಲಾಖೆ

Posted On: 24 DEC 2019 1:15PM by PIB Bengaluru

ವರ್ಷಾಂತ್ಯದ ಪರಾಮರ್ಶೆ: ಪರಮಾಣು ಇಂಧನ ಇಲಾಖೆ

 

2019ನೇ ಸಾಲಿನಲ್ಲಿ ಪರಮಾಣು ಇಂಧನ ಇಲಾಖೆ (ಡಿಎಇ)ಯ ಪ್ರಮುಖ ನೀತಿಗಳು ಮತ್ತು ಕಾರ್ಯಕ್ರಮಗಳು ಈ ಕೆಳಕಂಡಂತಿವೆ:

1.     ಪರಮಾಣು ವಿದ್ಯುತ್ ಕಾರ್ಯಕ್ರಮ:

·        ಕೈಗಾ ಅಣು ವಿದ್ಯುತ್ ಸ್ಥಾವರ (ಕೆಜಿಎಸ್ -1) 962 ಗಂಟೆಗಳ ಕಾಲ ಸತತವಾಗಿ ಕಾರ್ಯ ನಿರ್ವಹಿಸಿ ವಿಶ್ವದಾಖಲೆ ನಿರ್ಮಿಸಿದೆ.

·        ತಾರಾಪುರ ಪರಮಾಣು ವಿದ್ಯುತ್ ಘಟಕ (ಟಿಎಪಿಎಸ್ 1 ಮತ್ತು 2) 1969ರ ಏಪ್ರಿಲ್ ಮತ್ತು ಮೇನಲ್ಲಿ ಗ್ರಿಡ್ ಗೆ ಸೇರ್ಪಡೆಗೊಂಡಿದ್ದು 50 ವರ್ಷಗಳ ಸುರಕ್ಷಿತ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಟಿಎಪಿಎಸ್-1 ಮತ್ತು 2 ಪ್ರಸ್ತುತ ಕಾರ್ಯಾಚರಣೆಯಲ್ಲಿರುವ  ವಿಶ್ವತ ಅತ್ಯಂತ ಹಳೆಯ ವಿದ್ಯುತ್ ರಿಯಾಕ್ಟರ್ ಗಳಾಗಿವೆ ಹಾಗೂ ಪ್ರತಿ ಯೂನಿಟ್ ಗೆ ಸುಮಾರು 2 ರೂಪಾಯಿಯಂತೆ ವಿಶ್ವಾಸಾರ್ಹವಾಗಿ ವಿದ್ಯುತ್ ಉತ್ಪಾದಿಸುತ್ತಿವೆ.

·        ಪ್ರಸ್ತುತ 6780 ಮೆಗಾ ವ್ಯಾಟ್  ಸ್ಥಾಪಿತ ಸಾಮರ್ಥ್ಯ ಇರುವ 22 ರಿಯಾಕ್ಟರ್ ಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೇ.80ಕ್ಕಿಂತ ಅಧಿಕ ಸ್ಥಾವರದ ಲೋಡ್ ಫ್ಯಾಕ್ಟರ್ ಹೊಂದಿವೆ.

·        ತಲಾ 700 ಮೆ.ವ್ಯಾ. ವಿದ್ಯುತ್  ಸಾಮರ್ಥ್ಯದ ಆರು ಒತ್ತಡದ ಭಾರ ಜಲ ರಿಯಾಕ್ಟರ್ ಗಳ (ಪಿಎಚ್.ಡಬ್ಲ್ಯುಆರ್.ಗಳು) ನಿರ್ಮಾಣ ವಿವಿಧ ಹಂತಗಳಲ್ಲಿದ್ದು, ಇವು 4200 ಮೆ.ವ್ಯಾ. ವಿದ್ಯುತ್ ಸೇರ್ಪಡೆ ಮಾಡಲಿವೆ.

·        ನಾಲ್ಕು ವಿವಿಇಆರ್ ರಿಯಾಕ್ಟರ್ ಗಳು (ಕೆಕೆಎನ್.ಪಿಪಿ-3 ರಿಂದ 6), ಪ್ರತಿಯೊಂದೂ 1000 ಮೆ.ವ್ಯಾ. ವಿದ್ಯುತ್ ಸಾಮರ್ಥ್ಯದ್ದಾಗಿದ್ದು, ಇವು ನಿರ್ಮಾಣ ಹಂತದಲ್ಲಿವೆ.

·        ಪರಮಾಣು ಇಂಧನ ಸಂಕೀರ್ಣ (ಎನ್.ಎಫ್.ಸಿ.)ವು ಕಕರಾಪರ್ ಅಣು ವಿದ್ಯುತ್ ಸ್ಥಾವರ (ಕೆಎಪಿಪಿ3)ಕ್ಕೆ  37 ಎಲಿಮೆಂಟ್ ಇಂಧನ ಬಂಡಲ್ ಗಳ ಪೂರೈಕೆ ಪೂರ್ಣಗೊಳಿಸಿದೆ, ಮೊದಲಿಗೆ 700 ಮೆ.ವ್ಯಾ. ವಿದ್ಯುತ್ ಪಿಎಚ್.ಡಬ್ಲ್ಯು.ಆರ್, ಅನ್ನು 3 ಎಲಿಮೆಂಟ್ ಇಂಧನ ಬಂಡಲ್ ತಯಾರಿಕೆಗಾಗಿ ಫ್ಯಾಬ್ರಿಕೇಷನ್ ಸೌಲಭ್ಯ ಸ್ಥಾಪಿಸುವ ಮೂಲಕ ಪ್ರಾರಂಭಿಕ ಪ್ರಮುಖ ಆಗತ್ಯಕ್ಕಾಗಿ ಪೂರೈಸಿದೆ. 

       ii.     ಔಷಧ ಮತ್ತು ಆರೋಗ್ಯ ಆರೈಕೆ:

·        ಟಾಟಾ ಸ್ಮಾರಕ ಕೇಂದ್ರ (ಟಿಎಂಸಿ) ಹೊಸ ಆಸ್ಪತ್ರೆಗಳನ್ನು ಆರಂಭಿಸಿದ್ದು, 2019ರಲ್ಲಿ 5 ಲಕ್ಷಕ್ಕೂ ಹೆಚ್ಚು ರೋಗಿಗಳ ಅಗತ್ಯ ಪೂರೈಸಿದೆ, ಈ ಪೈಕಿ 1,25,000 ಹೊಸ ರೋಗಿಗಳಾಗಿದ್ದಾರೆ.

·        ಡಿ.ಎ.ಇ. ಜಾಗತಿಕ ಕ್ಯಾನ್ಸರ್ ಚಿಕಿತ್ಸೆ ಜಾಲ, ಎನ್.ಸಿ.ಜಿ. – ವಿಶ್ವಮ್ ಕ್ಯಾನ್ಸರ್ ಚಿಕಿತ್ಸೆ ಸಂಪರ್ಕ (ಎನ್.ಸಿ.ಜಿ. ವಿಶಅವಮ್ 3ಸಿ)ವನ್ನು 2019ರ ಸೆಪ್ಟೆಂಬರ್ 17ರಂದು ಆರಂಭಿಸಿದೆ. ಎನ್.ಸಿ.ಜಿ. ವಿಶ್ವಮ್ ಭಾರತದ ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್ (ಎನ್‌ಸಿಜಿ) ನೊಂದಿಗೆ ಪಾಲುದಾರ ರಾಷ್ಟ್ರಗಳಲ್ಲಿನ ಆಸ್ಪತ್ರೆಗಳು ಮತ್ತು ಸಂಬಂಧಿತ ಕ್ಯಾನ್ಸರ್ ಆರೈಕೆ ಸಂಸ್ಥೆಗಳ ಏಕೀಕರಣವನ್ನು ಉದ್ದೇಶಿಸುತ್ತದೆ.

 

o    ಸುಮಾರು 120 ಪರಮಾಣು ಔಷಧ ಕೇಂದ್ರಗಳು ಮತ್ತು 400ಕ್ಕೂ ಹೆಚ್ಚು ರೇಡಿಯೋ ಇಮ್ಯುನೊಆಸ್ಸೆ(ಆರ್.ಐ.ಎ) ಪ್ರಯೋಗಾಲಯಗಳು ದೇಶೀಯ ರೇಡಿಯೋ ಐಸೋಟೋಪ್ ಉತ್ಪನ್ನಗಳ ಪ್ರಯೋಜವನ್ನು ಪಡೆದುಕೊಳ್ಳುತ್ತಿವೆ. ಇದರಿಂದ 10 ಲಕ್ಷ ರೋಗಿಗಳಿಗೆ ಪ್ರಯೋಜನವಾಗಿದೆ.

o    ರಕ್ತದ ಉನ್ನತ ಮಟ್ಟದ ರೆಡಿಯೋ ವಿಕಿರಣ ಆನ್ವಯಿಕಕ್ಕಾಗಿ ಆಕ್ಟ್ಯ್ಯೂ ತ್ಯಾಜ್ಯದಿಂದ ಪಡೆದ ವಿಶ್ವದ ಪ್ರಥಮವೆನಬಹುದಾದ ಗಾಜಿನ ವೆಟ್ರಿಫೈಡ್ ಸೀಸಿಯೆಮ್ ಪೆನ್ಸಿಲ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು  ಅಂಥ ರಕ್ತ ವಿಕಿರಣಕಾರಕಗಳನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ.

o    4 ಹೊಸ ರೇಡಿಯೊಫಾರ್ಮಾಸ್ಯುಟಿಕಲ್ಸ್ ಅನ್ನು ಬಳಕೆಗೆ ಸಿದ್ಧವಾಗಿದೆ. ನ್ಯೂರೋ-ಎಂಡೋಕ್ರೈನೆಟ್ಯುಮರ್ಸ್‌ನ ಚಿತ್ರಣಕ್ಕಾಗಿ 99 ಎಂಟಿಸಿ- ಹೈನಿಕ್ ಟೇಟ್ ಚುಚ್ಚುಮದ್ದುಗಳುಮೂಳೆ ನೋವು ನಿವಾರಣೆಗೆ 188 ರೀ-ಹೆಡ್ಪಿ ಕೋಲ್ಡ್ ಕಿಟ್ಮೂಳೆ ನೋವು ನಿವಾರಣೆಗೆ 177 ಎಲ್.ಯು-ಇಡಿಟಿಎಂಪಿ ಚುಚ್ಚುಮದ್ದು ಮತ್ತು ಯಕೃತ್ತಿನ ಚಿಕಿತ್ಸೆಗಾಗಿ 131 ಅಯೋಡಿನ್- ಲಿಪಿಯೋಡಾಲ್ ಚುಚ್ಚುಮದ್ದು. ರೋಗನಿರ್ಣಯಚಿಕಿತ್ಸಕ ಮತ್ತು ಪ್ಯಾಲೆಟಿಕ್ ಬಳಕೆಗಾಗಿ ಅಭಿವೃದ್ಧಿಪಡಿಸಿದ ಮತ್ತು ಸರಬರಾಜು ಮಾಡಿದ 14 ವಿಧದ ಔಷಧೀಯ ರೇಡಿಯೊ ಐಸೋಟೋಪ್‌ಗಳು / ರೇಡಿಯೊ ಫಾರ್ಮಾಸ್ಯುಟಿಕಲ್ ಉತ್ಪನ್ನಗಳಿಗೆ ಇವು ಸೇರಿವೆ.

o    ನಿಯಂತ್ರಕಗಳ ಅನುಮತಿಯ ಬಳಿಕರೋಗಿಗಳ ಮೇಲೆ ಪ್ರಯೋಗ ಮಾಡಲು ಉನ್ನತ ಮಟ್ಟದ ತ್ಯಾಜ್ಯ ಪ್ರಯೋಗಗಳಿಂದ 90ವೈಅಸಿಟೇಟ್ ರೂಪದಲ್ಲಿ ಕ್ಲಿನಿಕಲ್ ದರ್ಜೆಯ ಯಟ್ರಿಯಮ್ -90 ಅನ್ನು ಹೊರತೆಗೆಯಲಾಗಿದೆ. 

      iii.     ಸಂಶೋಧನೆ ಮತ್ತು ಅಭಿವೃದ್ಧಿ 

o    ಇಸಿಐಎಲ್ ಇತ್ತೀಚಿನ ಮಾದರಿಯ ಎಂ 3ಯ 3.3 ಲಕ್ಷ ಯುನಿಟ್ ಇವಿಎಂಗಳನ್ನು ಮತ್ತು 5.8 ಲಕ್ಷ ಯುನಿಟ್ ವಿವಿಪ್ಯಾಟ್ ಗಳನ್ನು – 2019ರ ಸಾರ್ವತ್ರಿಕ ಚುನಾವಣೆಗೆ ಯಶಸ್ವಿಯಾಗಿ ಪೂರೈಸಿದೆ.

o     ಅಪ್ಸರ – ಯು - ನವೀಕೃತ ಈಜುಕೊಳ ಮಾದರಿಯ ರಿಯಾಕ್ಟರ್ಇದು ಪಿಇಟಿ ಸ್ಕ್ಯಾನ್‌ಗಳಲ್ಲಿ ಬಳಕೆಯ ಸಾಮರ್ಥ್ಯವನ್ನು ಹೊಂದಿರುವ ವಾಹಕ ಮುಕ್ತ ಸಿಯು-64 ರೇಡಿಯೊ ಐಸೋಟೋಪ್ ಅನ್ನು ಉತ್ಪಾದಿಸಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ.

o    ಸುಧಾರಿತ ಇಂಧನಗಳ ಮರು ಸಂಸ್ಕರಣೆಗೆ (ಸಿಓಆರ್.ಎ.ಎಲ್.ಒಂದು ಸಾಂದ್ರಿತ ಸೌಲಭ್ಯಕ್ಕೆ ನಿಯಂತ್ರಕ ಪ್ರಾಧಿಕಾರವು 2023 ರವರೆಗೆ ಮರುಪರವಾನಗಿ ನೀಡಿದೆ ಮತ್ತು ಎಫ್‌ಬಿಟಿಆರ್ ಸ್ಪೆಂಟ್ ಇಂಧನದ 50 ನೇ ಮರು ಸಂಸ್ಕರಣಾ ಅಭಿಯಾನವು ಪ್ರಗತಿಯಲ್ಲಿದೆ.

o    ನೀರಿನ ಕ್ರೋಮಿಯಂ ಮಾಲಿನ್ಯವನ್ನು ಪತ್ತೆಹಚ್ಚಲು ಅಭಿವೃದ್ಧಿಪಡಿಸಿದ ಕಿಟ್ - ನೀರಿನಲ್ಲಿರುವ ಕ್ಯಾನ್ಸರ್ ಜನಕ ಸಂಯುಕ್ತವಾದ ಸಿಆರ್ (VI) ನ ಸ್ಥಳದಲ್ಲಿಯೇ ನಿರ್ಣಯಿಸಲು ಸರಳಬಳಕೆದಾರ ಸ್ನೇಹಿತ್ವರಿತ ಮತ್ತು ವೆಚ್ಚದಾಯಕ ಕಿಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಿಟ್ ಐಎಸ್ 10500 ಮತ್ತು ಇಪಿಎ ಮಾನದಂಡವನ್ನು ಪೂರೈಸುತ್ತದೆ.

o    ಸಿಂಕ್ರೊಟ್ರಾನ್ಸೈಕ್ಲೋಟ್ರಾನ್ಧ್ರುವಫಾಸ್ಟ್ ಬ್ರೀಡರ್ ಟೆಸ್ಟ್ ರಿಯಾಕ್ಟರ್ (ಎಫ್‌ಬಿಟಿಆರ್) ಸೇರಿದಂತೆ ನಮ್ಮ ಅನೇಕ ಸಂಶೋಧನಾ ಸೌಲಭ್ಯಗಳು ಇದುವರೆಗಿನ ಅತ್ಯುನ್ನತ ಕಾರ್ಯಕ್ಷಮತೆಯನ್ನು ಸಾಧಿಸುತ್ತಲೇ ಬಂದಿವೆ. ಎಫ್‌ಬಿಟಿಆರ್ ಅನ್ನು 30 ಮೆಗಾವ್ಯಾಟ್ ವೇಗದಲ್ಲಿ ನಡೆಸಲಾಗಿದೆಇದು ಅದರ ಇತಿಹಾಸದಲ್ಲೇ ಪ್ರಮುಖ ಮೈಲಿಗಲ್ಲಾಗಿದೆ ಮತ್ತು ಅದರ ಟರ್ಬೊ ಜನರೇಟರ್ ಅನ್ನು ಗ್ರಿಡ್‌ಗೆ ಸಿಂಕ್ರೊನೈಸ್ ಮಾಡಲಾಗಿದೆಇದು 6.1 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಮಾಡುತ್ತಿದೆ.

o    ಆರ್‌ಆರ್‌ಸಿಎಟಿಯಲ್ಲಿ ಇಂಡಸ್ ಸಿಂಕ್ರೊಟ್ರಾನ್‌ಗಳು (ಇಂಡಸ್- ಮತ್ತು II) ಮೂರು ಪಾಳಿಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆದಿನವಿಡೀ ಮತ್ತು 20 ಬೀಮ್‌ ಲೈನ್‌ಗಳನ್ನು ದೇಶಾದ್ಯಂತದ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. 2019 ರ ನವೆಂಬರ್ ವರೆಗೆ ಸುಮಾರು 1,000 ಬಳಕೆದಾರ ಪ್ರಯೋಗಗಳನ್ನು ನಡೆಸಲಾಗಿದೆ.

o    ಆರ್.ಆರ್.ಸಿ.ಎ.ಟಿ. ಎರಡು ವೈದ್ಯಕೀಯ ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳೆಂದರೆ

        i.     ಟುಬೆರ್ಕ್ಯುಲೋಸ್ಕೋಪ್’, ಕ್ಷಯರೋಗವನ್ನು ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ಪತ್ತೆಹಚ್ಚುವಸಾಂದ್ರ ಮತ್ತು ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದಾದ ಸಾಧನ,  ಮತ್ತು

       ii.     ಆಂಕೋ ಡಯಾಗ್ನಾಸ್ಕೋಪ್, ಜೈವಿಕ ಅಂಗಾಂಶಗಳ  ಮೂಲ ಸ್ಥಾನದಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ಮಾಪನಗಳ  ಕಡಿಮೆ ವೆಚ್ಚದ ರಾಮನ್ ತಪಾಸಣಾ ಸಾಧನ.  ಬಾಯಿಯ ಕುಳಿಗಳಲ್ಲಿನ (ಪೂರ್ವ) ಆಕ್ರಮಣಕಾರಿಯಲ್ಲದ ಕ್ಯಾನ್ಸರ್ ಗಾಯಗಳ ಪತ್ತೆಗಾಗಿ ಬಳಸುವ ಇದು, ಸಾಂದ್ರಿತ ಮತ್ತು ಕೊಂಡೊಯ್ಯಬಹುದಾದ ವ್ಯವಸ್ಥೆಯಾಗಿದೆ. ಈ ಸಾಧನವನ್ನು ಜೋಧಪುರದ ಏಮ್ಸ್ ವೈದ್ಯರು ಆರು ಕ್ಯಾನ್ಸರ್ ತಪಾಸಣಾ ಶಿಬಿರಗಳಲ್ಲಿ ಯಶಸ್ವಿಯಾಗಿ ಅಲವಡಿಸಿಕೊಂಡಿದ್ದಾರೆ.

 

o    ಐಆರ್.ಇ.ಎಲ್. ಫ್ಲೋ ಶೀಟ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಮತ್ತು ಎನ್ಎಫ್.ಸಿ ರಾಫಿನೇಟ್ ನಿಂದ ಶೇ.99 ಶುದ್ಧ ಹ್ಯಾಫ್ನಿಯಮ್ ಆಕ್ಸೈಡ್ ಅನ್ನು ಉತ್ಪಾದಿಸಿದೆ. ಇವು ಮೌಲ್ಯವರ್ಧಿತ ಉತ್ಪನ್ನಗಳು. 

     iv.     ಬೃಹತ್ ವಿಜ್ಞಾನ ಯೋಜನೆಗಳು 

o    ವಿಜ್ಞಾನ ಸಮಾಗಮ, ವಿಶ್ವದಲ್ಲೇ ಮೊದಲೆನ್ನಬಹುದಾದ ಹಾಗೂ ಒಂದೇ ವೇದಿಕೆಯಲ್ಲಿ ಬೃಹತ್ ವಿಜ್ಞಾನ ಯೋಜನೆಗಳನ್ನು ಪ್ರದರ್ಶಿಸುವ ಸಂಚಾರಿ ವಸ್ತು ಪ್ರದರ್ಶನ. ಇದನ್ನು ಅಣು ಇಂಧನ ಇಲಾಖೆ (ಡಿ.ಎ.ಇ.), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ.) ಮತ್ತು ವಿಜ್ಞಾನ ವಸ್ತ್ರುಸಂಗ್ರಹಾಲಯದ ರಾಷ್ಟ್ರೀಯ ಮಂಡಳಿ, ಸಂಸ್ಕೃತಿ ಸಚಿವಾಲಯಗಳು ಜಂಟಿಯಾಗಿ ಬಹು ತಾಣಗಳಲ್ಲಿ ಅಂದರೆ ಮುಂಬೈ, ಬೆಂಗಳೂರು, ಕೋಲ್ಕತ್ತಾ ಮತ್ತು ನವದೆಹಲಿಯಲ್ಲಿ ವಿಜ್ಞಾನ ಸಂಗಮ್, ಬೃಹತ್ ವಿಜ್ಞಾನ ವಸ್ತುಪ್ರದರ್ಶನ ಆಯೋಜಿಸಿದ್ದವು, ಬೆಂಗಳೂರು ಮತ್ತು ಮುಂಬೈನಲ್ಲಿ ಇದಕ್ಕೆ ದೊರೆತ ಸ್ಪಂದನೆ ಬಹಳ ಉತ್ತಮವಾಗಿತ್ತು, 2.7 ಲಕ್ಷಕ್ಕೂ ಹೆಚ್ಚು ಸಂದರ್ಶಕರು ಈ ಎರಡು ನಗರಗಳಲ್ಲಿ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದರು.

o    ಎಫ್.ಎ.ಐ.ಆರ್., ಜರ್ಮನಿಯ ಕೈಗಾರಿಕಾ ಅಂಗೀಕಾರ ದೊರೆತ ಬಳಿಕ, ಹೈದ್ರಾಬಾದ್ ನ ಇಸಿಐಎಲ್ ನಲ್ಲಿ ನಿರ್ಮಾಣ ಮಾಡಲಾದ 67  ಅಲ್ಟ್ರಾ-ಸ್ಟೇಬಲ್ ಪವರ್ ಪರಿವರ್ತಕಗಳನ್ನು ಜರ್ಮನಿಗೆ ರವಾನಿಸಲಾಗಿದೆ.

 

      v.     ನಾಗರಿಕ ಪರಮಾಣು ಸಹಕಾರ:

ಪ್ರಮುಖ ಪಾಲುದಾರರೊಂದಿಗೆ ಭಾರತದ ನಾಗರಿಕ ಪರಮಾಣು ಸಹಕಾರದ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಕಾರ್ಯಕ್ರಮಗಳಲ್ಲಿ ಪ್ರಗತಿ ಆಗಿದೆ.

 

ರಷ್ಯಾ:

·         ಹೊಸ ತಾಣದಲ್ಲಿ 6x1200 ಮೆ.ವ್ಯಾ. ಪರಮಾಣು ವಿದ್ಯುತ್ ಸ್ಥಾವರ ನಿರ್ಮಿಸಲು ಆರ್.ಓ.ಎಸ್.ಎ.ಟಿ.ಓ.ಎಂನೊಂದಿಗೆ ಮಾತುಕತೆಗಳು ಪ್ರಗತಿಯಲ್ಲಿವೆ.

ಫ್ರಾನ್ಸ್:

·         ಜೈತಾಪುರ ಯೋಜನೆ ( 6x1650 ಮೆ.ವ್ಯಾ.) ಅನುಷ್ಠಾನಕ್ಕೆ ಮಾತುಕತೆಗಳು ಮುಂದುವರಿದ ಹಂತದಲ್ಲಿವೆ.

ಯು.ಎಸ್.ಎ:

6x100ಮೆ.ವ್ಯಾ. ಪರಮಾಣು ವಿದ್ಯುತ್ ಸ್ಥಾವರವನ್ನು ಕೊವ್ವಾಡ (ಎ.ಪಿ.)ಯಲ್ಲಿ ನಿರ್ಮಿಸಲು ವೆಸ್ಟಿಂಗ್ ಹೌಸ್ ನೊಂದಿಗೆ ಮಾತುಕತೆಗಳು ನಡೆಯುತ್ತಿವೆ.

 

(vi). ಪ್ರಮುಖ ಜಾಗತಿಕ ಪೂರೈಕೆದಾರರಿಂದ ಯುರೇನಿಯಂ ದಾಸ್ತಾನು ಪ್ರಗತಿಯಲ್ಲಿ

 ಭಾರತದ ಅಂತಾರಾಷ್ಟ್ರೀಯ ನಾಗರಿಕ ಪರಮಾಣು ಸಹಕಾರವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನ ಭಾರತದ ಪ್ರಯತ್ನದ ಭಾಗವಾಗಿ, ಪ್ರಮುಖ ಜಾಗತಿಕ ಪೂರೈಕೆದಾರರಾದ ಕೆನಡಾ, ಕಜಕಿಸ್ತಾನ್ ಮತ್ತು ಆಸ್ಟ್ರೇಲಿಯಾಗಳೊಂದಿಗೆ ಇಂಧನ ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ಫಲಶ್ರುತಿಗಳನ್ನು ಸಾಧಿಸಲಾಗಿದೆ. 

     vi.     ಮಾನವ ಸಂಪನ್ಮೂಲ ಅಭಿವೃದ್ಧಿ 

    

o    ಇಲಾಖೆಯ ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿರುವ ಹೋಮಿ ಭಾಭಾ ರಾಷ್ಟ್ರೀಯ ಸಂಸ್ಥೆ (ಎಚ್‌.ಬಿ.ಎನ್‌.ಐ2008 ರಲ್ಲಿ ಪ್ರಾರಂಭವಾದಾಗಿನಿಂದಕಳೆದ ವರ್ಷದವರೆಗೆ, 1000 ಪಿಎಚ್‌ಡಿ ಪದವಿ ಮತ್ತು 1000 ಎಂ.ಟೆಕ್ ಪದವಿಗಳನ್ನು ನೀಡುವ ಮೂಲಕ ಪ್ರತಿಷ್ಠಿತ ಮೈಲಿಗಲ್ಲನ್ನು ದಾಟಿದೆ. ಮಾರ್ಚ್ 31, 2018 ರವರೆಗೆ,

o    ಎಚ್‌.ಬಿ.ಎನ್‌.ಐ. 1132 ಪಿಎಚ್‌ಡಿ ಪದವಿ ಮತ್ತು 1060 ಎಂ.ಟೆಕ್ ಪದವಿಗಳನ್ನು ಪ್ರದಾನ ಮಾಡಿದೆ. ಇಂದುದೇಶದಲ್ಲಿ ಹೆಚ್ಚಿನ ಸಂಖ್ಯೆಯ ಅಭ್ಯಾಸ ಮಾಡುವ ಆಂಕೊಲಾಜಿಸ್ಟ್ ಗಳು ಎಚ್‌.ಬಿ.ಎನ್‌.ಐ. ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅದರ ನ್ಯಾಕ್ ಮಾನ್ಯತೆಯ ಆಧಾರದ ಮೇಲೆಎಚ್‌.ಬಿ.ಎನ್‌.ಐ ಅನ್ನು ಯುಜಿಸಿ ವರ್ಧಿತ ಸ್ವಾಯತ್ತತೆಯನ್ನು ನೀಡುವ ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂದು ಆಯ್ಕೆ ಮಾಡಿದೆ.

o     ಪರಮಾಣು ಇಂಧನ ಸಹಭಾಗಿತ್ವದ ಜಾಗತಿಕ ಕೇಂದ್ರ (ಜಿಸಿಎನ್‌ಇಪಿ), ಬಹಾದ್ದೂರ್ ಗಢ ಬಳಿ ತಾನು ಹೊಸದಾಗಿ ಅಭಿವೃದ್ಧಿಪಡಿಸಿರುವ ಕ್ಯಾಂಪಸ್‌ನಲ್ಲಿ ಏಪ್ರಿಲ್ 2017 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಈ ಕೇಂದ್ರ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 18ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮಗಳು, ತಾಂತ್ರಿಕ ಸಭೆಗಳು, ಕಾರ್ಯಾಗಾರ ಇತ್ಯಾದಿಗಳನ್ನು ನಡೆಸಿದೆ. ಜಿ.ಸಿ.ಎನ್.ಇ.ಪಿ. ಮತ್ತು ಬಾಂಗ್ಲಾದೇಶ ಅಣು ಇಂಧನ ಆಯೋಗದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದಾಗಿನಿಂದ, ಡಿಎಇಯ 10 ತಜ್ಞರನ್ನು ಬಾಂಗ್ಲಾದೇಶದ ರೂಪ್ ಪುರ್ ಪರಮಾಣು ಇಂಧನ ಸ್ಥಾವರದಲ್ಲಿ ಕೆಲವು ವಾರಗಳಿಂದ 3 ತಿಂಗಳುಗಳಿಗಿಂತ ಕಡಿಮೆ ಅವಧಿಯವರೆಗೆ ಸಮಾಲೋಚನಾ ಕಾರ್ಯಕ್ಕೆ ನಿಯುಕ್ತಿಗೊಳಿಸಲಾಗಿದೆ.  

*****


(Release ID: 1597977) Visitor Counter : 367


Read this release in: English , Hindi , Bengali , Malayalam