ಜವಳಿ ಸಚಿವಾಲಯ

ಜವಳಿ ಸಚಿವಾಲಯ 2019ರ ವರ್ಷಾಂತ್ಯದ ಅವಲೋಕನ

Posted On: 27 DEC 2019 3:28PM by PIB Bengaluru

ಜವಳಿ ಸಚಿವಾಲಯ 2019ರ ವರ್ಷಾಂತ್ಯದ ಅವಲೋಕನ

 

ಜಿನಿವಾದಲ್ಲಿ ನಡೆದ ವಿಶ್ವ ಹತ್ತಿ ದಿನದಲ್ಲಿ ಜವಳಿ ಸಚಿವಾಲಯ ಭಾಗಿ: ಎಸ್ ಐ ಟಿಪಿ ಅಡಿ ಪಾಶ್ಮಿನಾ ಶಾಲ್ ಗಳ ಉತ್ತೇಜನಕ್ಕೆ ಕ್ರಮ; ಜಾರ್ಖಂಡ್ ಮತ್ತು ಹರಿಯಾಣದ ಎನ್ ಐ ಎಫ್ ಟಿ ನ  348 ತಾಂತ್ರಿಕ ಜವಳಿ ಉತ್ಪನ್ನಗಳಿಗೆ ಬಿಐಎಸ್ ನಿಂದ ಮಾನದಂಡ ಅಭಿವೃದ್ಧಿ;  59 ಜವಳಿ ಪಾರ್ಕ್ ಗಳಿಗೆ ಅನುಮೋದನೆ; ಕರಕುಶಲ ವಸ್ತುಗಳಿಗೆ 21 ಹೊಸ ಬ್ಲಾಕ್ ಮಟ್ಟದ ಕ್ಲಸ್ಟರ್ ಗಳ ಅಭಿವೃದ್ಧಿ

 

ಭಾರತ ಸರ್ಕಾರದ ಜವಳಿ ಸಚಿವಾಲಯ ಅಕ್ಟೋಬರ್ 7 ರಿಂದ 11ರ ವರೆಗೆ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ) ಜಿನಿವಾದಲ್ಲಿ ಆಯೋಜಿಸಿದ್ದ ವಿಶ್ವ ಹತ್ತಿ ದಿನ ಆಚರಣೆಯಲ್ಲಿ ಭಾಗವಹಿಸಿತ್ತು. ಡಬ್ಲ್ಯೂಟಿಒ ವಿಶ್ವ ಹತ್ತಿ ದಿನವನ್ನು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಒ), ವಿಶ್ವ ಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶ(ಯುಎನ್ ಸಿಟಿಎಡಿ), ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆ(ಐಟಿಸಿ) ಮತ್ತು ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿ(ಐಸಿಎಸಿ) ಕಾರ್ಯದರ್ಶಿಗಳ ಸಹಭಾಗಿತ್ವದಲ್ಲಿ ಆಯೋಜಿಸಿತ್ತು. ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಝುಬಾನಿ ಇರಾನಿ ಅವರು ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಭಾಗಹಿಸಿದ್ದರು. ಅದರಲ್ಲಿ ಎಲ್ಲ ದೇಶಗಳ ಮುಖ್ಯಸ್ಥರು ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ವಿಶ್ವ ವ್ಯಾಪಾರ ಸಂಸ್ಥೆ-ಡಬ್ಲ್ಯೂಟಿಒ, ಹತ್ತಿ ಬೆಳೆಯುವ ನಾಲ್ಕು ಪ್ರಮುಖ ರಾಷ್ಟ್ರಗಳಾದ ಬೆನಿನ್, ಬುರ್ಕಿನ ಫಾಸೋ, ಚಾದ್ ಮತ್ತು ಮಾಲಿ ಆ ರಾಷ್ಟ್ರಗಳ ಮನವಿ ಮೇರೆಗೆ ಮತ್ತು ಅವುಗಳ ಅಧಿಕೃತ ಅರ್ಜಿ ಮೇರೆಗೆ ಅಕ್ಟೋಬರ್ 7ಅನ್ನು ವಿಶ್ವ ಸಂಸ್ಥೆ ವಿಶ್ವ ಹತ್ತಿ ದಿನವನ್ನಾಗಿ ಆಚರಿಸಲು ಮಾನ್ಯತೆ ನೀಡಿತು. ವಿಶ್ವ ಹತ್ತಿ ದಿನವನ್ನು ಹತ್ತಿಯಿಂದ ಇರುವ ಪ್ರಯೋಜನಗಳು, ಅದರಲ್ಲಿನ ನೈಸರ್ಗಿಕ ಗುಣಗಳು, ಅದರ ಉತ್ಪಾದನೆಯಿಂದ ಜನರಿಗಾಗುವ ಅನುಕೂಲಗಳು, ಪರಿವರ್ತನೆ, ವ್ಯಾಪಾರ ಮತ್ತು ಬಳಕೆ ಮತ್ತಿತರ ವಿಷಯಗಳನ್ನು ಇಟ್ಟುಕೊಂಡು ಆಚರಿಸಲಾಗುವುದು. ಅಲ್ಲದೆ ವಿಶ್ವ ಹತ್ತಿ ದಿನವನ್ನು ಜಗತ್ತಿನಾದ್ಯಂತ ಹತ್ತಿ ಆಧಾರಿತ ಆರ್ಥಿಕತೆಗಳು ಎದುರಿಸುತ್ತಿರುವ ಸವಾಲುಗಳತ್ತ ಬೆಳಕು ಚೆಲ್ಲಲು ಬಳಸಲಾಗುತ್ತಿದೆ ಮತ್ತು ಹತ್ತಿ, ಅತಿ ಕನಿಷ್ಠ ಅಭಿವೃದ್ಧಿಯಾಗಿರುವ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿರುವ ಆರ್ಥಿಕತೆಗಳನ್ನು ಒಳಗೊಂಡಿದೆ.

2011ರಿಂದ 2018ರ ನಡುವೆ ಭಾರತ ಹತ್ತಿ ತಾಂತ್ರಿಕ ನೆರವು ಕಾರ್ಯಕ್ರಮ(ಕಾಟನ್ ಟಿಎಪಿ-1) ಅನ್ನು ಜಾರಿಗೊಳಿಸಿದ್ದು, ಅದು 2.85 ಮಿಲಿಯನ್ ಡಾಲರ್ ರೂಪಾಯಿಗಳದ್ದಾಗಿದ್ದು, ಅದು 7 ಆಫ್ರಿಕಾ ರಾಷ್ಟ್ರಗಳಾದ ಬೆನಿನ್, ಬುರ್ಕಿನಾಫಾಸೋ, ಮಾಲಿ ಮತ್ತು ಚಾದ್ ಹಾಗೂ ಉಗಾಂಡ, ಮವಾಯ್ ಮತ್ತು ನೈಜೀರಿಯಾ ಒಳಗೊಂಡಿದೆ. ಈ ತಾಂತ್ರಿಕ ನೆರವು ಹತ್ತಿ ಬೆಳೆಯಲ್ಲಿ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ ಮತ್ತು ಈ ದೇಶಗಳಲ್ಲಿ ಹತ್ತಿ ಆಧಾರಿತ ಜವಳಿ ಮತ್ತು ಜವಳಿ ಉದ್ಯಮದಲ್ಲಿ ಸರಣಿ ಮಧ್ಯ ಪ್ರವೇಶದ ಮೂಲಕ ಯೋಜನೆ ಮಹತ್ವದ ಫಲಿತಾಂಶವನ್ನು ಕಾಣಲಾಗಿದೆ.

ಜಿನಿವಾದಲ್ಲಿ ನಡೆದ ಪಾಲುದಾರರ ಸಮಾವೇಶದಲ್ಲಿ ಜವಳಿ ಸಚಿವರು ಭಾರತ, ಆಫ್ರಿಕಾಕ್ಕಾಗಿ ಎರಡನೇ ಹಂತದ ಹತ್ತಿ ತಾಂತ್ರಿಕ ನೆರವು ಕಾರ್ಯಕ್ರಮ(ಟಿಎಪಿ) ಆರಂಭಿಸಲಿದೆ ಎಂದು ಪ್ರಕಟಿಸಿದರು.  ಎರಡನೇ ಹಂತದ ಐದು ವರ್ಷಗಳ ಸುದೀರ್ಘ ಅವಧಿಯಲ್ಲಿ ಈ ಕಾರ್ಯಕ್ರಮದ ಗಾತ್ರ ಮತ್ತು ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು ಮತ್ತು ಅದನ್ನು ಐದು ಹೆಚ್ಚುವರಿ ದೇಶಗಳಾದ ಮಾಲಿ, ಘಾನಾ, ಟೊಗೊ, ಝಾಂಬಿಯಾ ಮತ್ತು ತಾಂಜೇನಿಯಾಗಳಲ್ಲಿ ಪರಿಚಯಿಸಲಾಗಿದೆ. ಹತ್ತಿ ಟಿಎಪಿ ಕಾರ್ಯಕ್ರಮ ಇದೀಗ ಸಿ4(ಬೆನಿನ್, ಬುರ್ಕಿನಫಾಸೋ, ಚಾದ್ ಮತ್ತು ಮಾಲಿ) ಸೇರಿದಂತೆ 11 ಆಫ್ರಿಕನ್ ರಾಷ್ಟ್ರಗಳನ್ನು ಒಳಗೊಂಡಿದೆ.

ಹತ್ತಿ ಜಾಗತಿಕ ವಸ್ತುವಾಗಿದ್ದು, ಅದನ್ನು ಜಗತ್ತಿನಾದ್ಯಂತ ಉತ್ಪಾದಿಸಲಾಗುತ್ತಿದೆ ಮತ್ತು ಒಂದು ಟನ್ ಹತ್ತಿ ಸರಾಸರಿ ಐದು ಜನರಿಗೆ ವರ್ಷವಿಡೀ ಉದ್ಯೋಗ ಒದಗಿಸುತ್ತದೆ. ಹತ್ತಿ ಬರವನ್ನು ಎದುರಿಸುವ  ಬೆಳೆಯಾಗಿದ್ದು, ಅದನ್ನು ಒಣಹವೆಯಲ್ಲೂ ಬೆಳೆಯಬಹುದಾಗಿದೆ, ಅದು ವಿಶ್ವದ ಕೃಷಿಯೋಗ್ಯ ಭೂಮಿಯ ಶೇ.2.1ರಷ್ಟು ವ್ಯಾಪಿಸಿದೆ. ಅದು ಜಗತ್ತಿನ ಜವಳಿ ಉದ್ಯಮದ ಅಗತ್ಯತೆಯನ್ನು ಶೇ.27ರಷ್ಟನ್ನು ಪೂರೈಸುತ್ತಿದೆ. ಇದಲ್ಲದೆ ಜವಳಿ ಮತ್ತು ವಸ್ತ್ರೋದ್ಯಮದಲ್ಲಿ ಫೈಬರ್ ಬಳಕೆ ಮಾಡಲಾಗುತ್ತಿದೆ. ಹತ್ತಿಯಿಂದ ಆಹಾರ ಪದಾರ್ಥಗಳನ್ನು ತೈಲ ಮತ್ತು ಅದರ ಬೀಜವನ್ನು ಪ್ರಾಣಿಗಳಿಗೆ ಆಹಾರವನ್ನಾಗಿ ನೀಡಲಾಗುತ್ತಿದೆ.

 

ಪಾಶ್ಮಿನ ಶಾಲುಗಳಿಗೆ ಉತ್ತೇಜನ

        ಭಾರತ ಸರ್ಕಾರ ಪಾಶ್ಮಿನ ಶಾಲುಗಳು ಸೇರಿದಂತೆ ಎಲ್ಲ ಬಗೆಯ ಕರಕುಶಲ ವಸ್ತುಗಳಿಗೆ ದೇಶಾದ್ಯಂತ ತನ್ನ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ(ಎನ್ಎಚ್ ಡಿಪಿ) ಭಾಗವಾದ ಕರಕುಶಲ ಮಾರುಕಟ್ಟೆ ನೆರವಿ(ಎಚ್ಎಂಎ)ನಡಿ ಮಾರುಕಟ್ಟೆ ಸೌಕರ್ಯಗಳನ್ನು ಒದಗಿಸುತ್ತಿದೆ. 2016-17ರಿಂದೀಚೆಗೆ ಒಟ್ಟು ದೇಶದ ನಾನಾ ರಾಜ್ಯಗಳಲ್ಲಿ ಒಟ್ಟು 678 ಕೈಮಗ್ಗ ಮಾರುಕಟ್ಟೆ ಕಾರ್ಯಕ್ರಮಗಳು/ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಆ ಮೂಲಕ ದೇಶಾದ್ಯಂತ ಇರುವ  ನೇಕಾರರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೇಲಿನ ಉತ್ಪನ್ನ ಕಾಶ್ಮೀರ, ಪಾಶ್ಮಿನ ಶಾಲು ಉತ್ಪನ್ನಗಳಿಗೆ ಭೌಗೋಳಿಕ ಇಂಡಿಕೇಷನ್ ಆಫ್ ಗೂಡ್ಸ್ –ಜಿಐಎಸ್ (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999ರಡಿ ಅರ್ಜಿ ಸಂಖ್ಯೆ 46ರಡಿ ನೋಂದಣಿ ಮಾಡಿಸಲಾಗಿದೆ.

        ಭಾರತ ಸರ್ಕಾರ ಸಮಗ್ರ ಜವಳಿ ಪಾರ್ಕ್(ಎಸ್ ಐ ಟಿಪಿ) ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ಜವಳಿ ಪಾರ್ಕ್ ಗಳಿಗೆ ಅನುಮೋದನೆ ನೀಡಿದೆ.

 

 

 

ಕ್ರಮ ಸಂಖ್ಯೆ

ಜವಳಿ ಪಾರ್ಕ್ ಹೆಸರು

ಜಿಲ್ಲೆ

ಭಾರತ ಸರ್ಕಾರದ ಪಾಲು

1

ಜೆ ಅಂಡ್ ಕೆ ಜವಳಿ ಪಾರ್ಕ್, ಕತುವಾ, ಜಮ್ಮು

ಕತುವಾ

39.70

2

ಕಾಶ್ಮೀರ ಉಣ್ಣೆ ಅಂಡ್ ರೇಷ್ಮೆ ಜವಳಿ ಪಾರ್ಕ್, ಘಾಟಿ, ಜೆ&ಕೆ

ಕತುವಾ

40.00

 

ಭಾರತೀಯ ಮಾನಕ ಬ್ಯೂರೋ(ಬಿಎಎಸ್) ಈ ವರ್ಷದ ಆಗಸ್ಟ್ ನಲ್ಲಿ ಪಾಶ್ಮಿನ ಉತ್ಪನ್ನಗಳ ಶುದ್ಧತೆಯನ್ನು  ಪ್ರಮಾಣೀಕರಿಸಲು ಅವುಗಳನ್ನು ಗುರುತಿಸುವಿಕೆ, ಮಾರ್ಕಿಂಗ್ ಮತ್ತು ಲೇಬಲಿಂಗ್ ಗೆ ಭಾರತೀಯ ಮಾನದಂಡವನ್ನು ಪ್ರಕಟಿಸಿದೆ.

ಈ ಪ್ರಮಾಣೀಕರಣದಿಂದಾಗಿ ಪಾಶ್ಮಿನ ಶಾಲು ನಕಲು ಮಾಡುವುದನ್ನು ತಡೆಯಲು ಸಹಾಯಕವಾಗಲಿದೆ ಮತ್ತು ಪಾಶ್ಮಿನ ಶಾಲುಗಳಿಗೆ ಕಚ್ಚಾ ಸಾಮಗ್ರಿ ಉತ್ಪಾದಿಸುವ ಲಡಾಖ್ ನ ಅಲೆಮಾರಿ ಮತ್ತು ಸ್ಥಳೀಯ ಕರಕುಶಲಕರ್ಮಿಗಳ ಹಿತಾಸಕ್ತಿಯನ್ನು ರಕ್ಷಿಸಿದಂತಾಗಿದೆ. ಅಲ್ಲದೆ ಇದರಿಂದ ಗ್ರಾಹಕರಿಗೂ ಪಾಶ್ಮಿನ ಶಾಲುಗಳ ಪರಿಶುದ್ಧತೆ ಖಾತ್ರಿಗೊಳಿಸಿದಂತಾಗಿದೆ.

ಪಾಶ್ಮಿನ ಶಾಲುಗಳಿಗೆ ಬಿಐಎಸ್ ಪ್ರಮಾಣೀಕರಣ ನೀಡಿರುವುದರಿಂದ ದೀರ್ಘಕಾಲದಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಶುದ್ಧ ಪಾಶ್ಮಿನ ಶಾಲು ಎಂದು ಲೇಬಲ್ ಹಚ್ಚಿ ಮಾರಾಟ ಮಾಡಲಾಗುತ್ತಿರುವ ಕಳಪೆ ಮತ್ತು ನಕಲು ಉತ್ಪನ್ನಗಳನ್ನು ನಿರುತ್ತೇಜನಗೊಳಿಸಿದಂತಾಗಿದೆ.

ಭಾರತದಲ್ಲಿ ತಾಂತ್ರಿಕ ಜವಳಿ ಉದ್ಯಮ

            ತಾಂತ್ರಿಕ ಜವಳಿ ಮುಖ್ಯವಾಗಿ ಸಾಮಗ್ರಿಗಳು ಮತ್ತು ಉತ್ಪನ್ನಗಳಾಗಿದ್ದು, ಅವುಗಳನ್ನು ಮುಖ್ಯವಾಗಿ ತಾಂತ್ರಿಕ ಪರಿಣತಿ ಮತ್ತು ಕಾರ್ಯಗಳಿಂದ ಉತ್ಪಾದಿಸಲಾಗುತ್ತಿದ್ದು, ಅಲ್ಲಿ ಲಲಿತ ಕಲೆಯ ವಿಜ್ಞಾನಗಳಿಗೆ ಅವಕಾಶವಿಲ್ಲ. ತಾಂತ್ರಿಕ ಜವಳಿಯ ಬಳಕೆ ವ್ಯಾಪ್ತಿ ಹಲವು ರೂಪಗಳಲ್ಲಿ ಅನ್ವಯವಾಗುತ್ತವೆ. ಅವುಗಳೆಂದರೆ ಕೃಷಿ ಜವಳಿ, ವೈದ್ಯಕೀಯ ಜವಳಿ, ಭೌಗೋಳಿಕ ಜವಳಿ, ರಕ್ಷಣಾ ಜವಳಿ, ಕೈಗಾರಿಕಾ ಜವಳಿ, ಕ್ರೀಡಾ ಜವಳಿ ಮತ್ತು ಇತರೆ ಬಳಕೆಗಾಗಿ ತಾಂತ್ರಿಕ ಜವಳಿಗಳ ಬಳಕೆಯಿಂದ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ವಲಯದಲ್ಲಿ ಉತ್ಪಾದನೆ ಹೆಚ್ಚಳವಾಗಿದೆ. ಮಿಲಿಟರಿ, ಅರೆಮಿಲಿಟರಿ, ಪೊಲೀಸ್ ಮತ್ತು ಭದ್ರತಾ ಪಡೆಗಳಿಗೆ ಉತ್ತಮ ರಕ್ಷಣೆ ದೊರೆತಿದೆ, ಹೆದ್ದಾರಿ, ರೈಲ್ವೆ, ಬಂದರು ಮತ್ತು ವಿಮಾನಗಳಿಗೆ ಬಲಿಷ್ಠ ಮತ್ತು ದೃಢ ಸಾರಿಗೆ ಮೂಲಸೌಕರ್ಯ ದೊರೆತಿದೆ. ಸಾರ್ವಜನಿಕರಲ್ಲಿ ಆರೋಗ್ಯ ರಕ್ಷಣೆ ಮತ್ತು ಶುಚಿತ್ವ ಸುಧಾರಿಸಿದೆ. ಭಾರತದಲ್ಲಿ ತಾಂತ್ರಿಕ ಜವಳಿ ಉದ್ದಿಮೆ ಮತ್ತು ನಾನಾ ವಲಯಗಳಲ್ಲಿ ಬಳಕೆ ಮಾಡುತ್ತಿರುವುದರಿಂದ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ.

        ತಾಂತ್ರಿಕ ಜವಳಿ ಎಲ್ಲ ವಲಯಗಳಲ್ಲೂ ಮುಂಚೂಣಿಯಲ್ಲಿದ್ದು, ಅದು ಜೀವನದ ಪ್ರತಿಯೊಂದು ಭಾಗಗಳಲ್ಲಿಯೂ ವ್ಯಾಪಿಸಿದೆ ಮತ್ತು ಉತ್ಪಾದನೆ, ಪರಿಣಾಮಕಾರಿ ಬಳಕೆ, ದರ ಆರ್ಥಿಕತೆ ಮತ್ತು ಹಲವು ಇಂಜಿನಿಯರಿಂಗ್ ಮತ್ತು ಸಾಮಾನ್ಯ ಬಳಕೆಗೆ ನಾವಿನ್ಯ ಪರಿಹಾರಗಳನ್ನು ನೀಡಿದೆ. ಇದಲ್ಲದೆ ವಾಣಿಜ್ಯ ಬಳಕೆಯಲ್ಲಿ ತಾಂತ್ರಿಕ ಜವಳಿ ಹಲವು ಪ್ರಮುಖ ಯೋಜನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಮತ್ತು ಭಾರತ ಸರ್ಕಾರದ ಯೋಜನೆಗಳಲ್ಲಿ ಕಡ್ಡಾಯವಾಗಿ ಗುರುತಿಸಲ್ಪಟ್ಟಿದೆ. ಅವುಗಳಲ್ಲಿ ಕೆಲವೆಂದರೆ ರಾಷ್ಟ್ರೀಯ ಆರೋಗ್ಯ ಮಿಷನ್, ಜಲ ಜೀವನ್ ಮಿಷನ್, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ಹೆದ್ದಾರಿ, ರೈಲ್ವೆ ಮತ್ತು ಬಂದರು ಮೂಲಸೌಕರ್ಯ ಅಭಿವೃದ್ಧಿ. ದೇಶದಲ್ಲಿ ತಾಂತ್ರಿಕ ಜವಳಿ ವಲಯ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವುದರಿಂದ ಅದಕ್ಕೆ ಇನ್ನಷ್ಟು ಉತ್ತೇಜನ ನೀಡಲು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ.

ವಿದೇಶಿ ವ್ಯಾಪಾರ ನೀತಿ ಅಡಿಯಲ್ಲಿ ಹಾರ್ಮೊನೈಜಡ್ ಸಿಸ್ಟಮ್ ಆಫ್ ನಾಮೆನ್ ಕ್ಲೇಚರ್ (ಎಚ್ಎಸ್ಎನ್) ಅಡಿಯಲ್ಲಿ ಪ್ರತ್ಯೇಕ ಸಂಹಿತೆಯ 207 ತಾಂತ್ರಿಕ ಜವಳಿ ಉತ್ಪನ್ನಗಳನ್ನು ಗುರುತಿಸಲಾಗಿದೆ.

        ನಾನಾ ವಲಯಗಳಲ್ಲಿ ತಾಂತ್ರಿಕ ಜವಳಿಯ ಅನುಕೂಲಗಳನ್ನು ಪರಿಗಣಿಸಲು ಪ್ರಸ್ತುತ ಹತ್ತು ಕೇಂದ್ರ ಸಚಿವಾಲಯಗಳು/ಇಲಾಖೆಗಳಲ್ಲಿ 92 ಅನ್ವಯಿಕ ವಲಯಗಳಲ್ಲಿ ಕಡ್ಡಾಯವಾಗಿ ಬಳಕೆ ಮಾಡಲು ಗುರುತಿಸಲಾಗಿದೆ. ತಾಂತ್ರಿಕ ಜವಳಿ ರಫ್ತು 2019ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.11ರಷ್ಟು ಏರಿಕೆಯಾಗಿದೆ.

        ಭಾರತೀಯ ಮಾನಕ ಬ್ಯೂರೋ(ಬಿಐಎಸ್) 348 ತಾಂತ್ರಿಕ ಜವಳಿ ಉತ್ಪನ್ನಗಳಿಗೆ ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ.

        ಉದ್ಯಮದ ಬೇಡಿಕೆ ಮೇರೆಗೆ ಜವಳಿ ಸಚಿವಾಲಯ ತಮ್ಮ ಸಮರ್ಥ ಹೆಸರಿನ ತನ್ನ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಆರು ಹೆಚ್ಚುವರಿ ತಾಂತ್ರಿಕ ಜವಳಿ ಕೋರ್ಸ್ ಗಳನ್ನು ಸೇರ್ಪಡೆ ಮಾಡಿದೆ.

        ತಾಂತ್ರಿಕ ಜವಳಿ ವಲಯದ ಕುರಿತು ಹೊಸದಾಗಿ ಸಮೀಕ್ಷೆ ನಡೆಸುವ ಕಾರ್ಯವನ್ನು ಐಐಟಿ ದೆಹಲಿಗೆ ನೀಡಲಾಗಿದೆ.

ಸಾರ್ವಜನಿಕ ಖರೀದಿ (ಮೇಕ್ ಇನ್ ಇಂಡಿಯಾಗೆ ಆದ್ಯತೆ) ಅಡಿಯಲ್ಲಿ ಸಚಿವಾಲಯ 2019ರ ಅಕ್ಟೋಬರ್ 23ರಂದು ಆದೇಶ ಹೊರಡಿಸಿತ್ತು. ಅದರಲ್ಲಿ ತಾಂತ್ರಿಕ ಜವಳಿ ಉತ್ಪನ್ನಗಳಿಗೆ ಹತ್ತು ವಲಯಗಳಲ್ಲಿ ಸರ್ಕಾರಿ ಖರೀದಿಯಲ್ಲಿ ಕನಿಷ್ಠ ಸ್ಥಳೀಯ ಉತ್ಪನ್ನ ಖರೀದಿ ನಿಗದಿಪಡಿಸಿದೆ.

2015ರಲ್ಲಿ ಸಲ್ಲಿಸಲಾದ ಜವಳಿ ಸಚಿವಾಲಯದ ಸಮೀಕ್ಷೆಯಲ್ಲಿ 2017ನೇ ವರ್ಷದಲ್ಲಿ ಭಾರತದ ಮಾರುಕಟ್ಟೆಯ ಗಾತ್ರ 1,16,217 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಹಿಂದಿನ ಬೇಸ್ ಲೈನ್ ಸಮೀಕ್ಷೆಯಲ್ಲಿ 2020-21ಕ್ಕೆ ಯಾವುದೇ ಅಂದಾಜು ಮಾಡಿರಲಿಲ್ಲ. ಪ್ರಸಕ್ತ ಬೆಳವಣಿಗೆ ದರ ಮತ್ತು ಸರ್ಕಾರದ ಹಲವು ಉಪಕ್ರಮಗಳನ್ನು ಆಧರಿಸಿ 2020-21ಕ್ಕೆ ತಾಂತ್ರಿಕ ಜವಳಿ ವಲಯದ ಮಾರುಕಟ್ಟೆ ಗಾತ್ರ ಸುಮಾರು 2 ಲಕ್ಷ ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ.

ಈಶಾನ್ಯ ಭಾಗದಲ್ಲಿ ಆಗ್ರೋ  ಟೆಕ್ಸ್ ಟೈಲ್ ಬಳಕೆ ಉತ್ತೇಜನಕ್ಕೆ ಯೋಜನೆ:

        ಈಶಾನ್ಯ ಭಾಗದಲ್ಲಿ ಆಗ್ರೋ ಟೆಕ್ಸ್ ಟೈಲ್ ಬಳಕೆಯಿಂದಾಗಿ ರೈತರ ಆದಾಯ ಸರಾಸರಿ ಶೇ.67ರಿಂದ 75ಕ್ಕೆ ಏರಿಕೆಯಾಗಿದೆ. ವರ್ಷದಲ್ಲಿ ಬೆಳೆ ಅವಧಿ 3 ರಿಂದ 4ಕ್ಕೆ ಹೆಚ್ಚಾಗಿದ್ದು, ವರ್ಷವಿಡೀ ಕೃಷಿ ಕಾರ್ಯ ಕೈಗೊಳ್ಳಲಾಗುತ್ತಿದೆ ಮತ್ತು ಇದರಿಂದ ನೀರಿನ ಬಳಕೆ ಶೇ.30ರಿಂದ 45ರಷ್ಟು ತಗ್ಗಿದೆ ಹಾಗೂ ಬೆಳೆ ಪಕ್ಷಿಗಳು ಹಾಗೂ ಆಲಿಕಲ್ಲಿನಿಂದ ಹಾಳಾಗುವುದು ನಿಯಂತ್ರಿಸಲ್ಪಟ್ಟಿದೆ.

ಈಶಾನ್ಯ ಭಾಗದಲ್ಲಿ ಜಿಯೋ ಟೆಕ್ನಿಕಲ್  ಜವಳಿ ಬಳಕೆ ಉತ್ತೇಜನಕ್ಕೆ ಯೋಜನೆ:

            ಮೂಲ ಸೌಕರ್ಯ ಯೋಜನೆಗಳಲ್ಲಿ ಜಿಯೋ ಟೆಕ್ಸ್ ಟೈಲ್ ಬಳಕೆಯಿಂದಾಗಿ ಮೂಲಸೌಕರ್ಯ ವಲಯದಲ್ಲಿ ಸೇವಾ ಸಾಮರ್ಥ್ಯ ಸಾಕಷ್ಟು ಸುಧಾರಣೆಯಾಗಿದೆ ಮತ್ತು ರಸ್ತೆಗಳು ಮತ್ತು ಕಡಿದಾದ ಪ್ರದೇಶಗಳಲ್ಲಿ ಮೂಲಸೌಕರ್ಯ ನಿರ್ವಹಣೆ ಹೆಚ್ಚಾಗಿದೆ.

ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ(ಎನ್ ಐ ಎಫ್ ಟಿ)

            ಎರಡು ಹೊಸ ಎನ್ ಐ ಎಫ್ ಟಿ ಕ್ಯಾಂಪಸ್ ಗಳನ್ನು ಪಂಚಕುಲ(ಹರಿಯಾಣ) ಮತ್ತು ರಾಂಚಿ(ಜಾರ್ಖಂಡ್)ಗಳಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಎನ್ ಐ ಎಫ್ ಟಿ ದೇಶಾದ್ಯಂತ 16 ಕ್ಯಾಂಪಸ್ ಗಳನ್ನು ಹೊಂದಿದೆ.

ಕ್ರ.ಸಂ.

ಎನ್ ಐ ಎಫ್ ಟಿ ಕ್ಯಾಂಪಸ್ ಗಳು

ರಾಜ್ಯ

1

ಬೆಂಗಳೂರು

ಕರ್ನಾಟಕ

2

ಭೂಪಾಲ್

ಮಧ್ಯಪ್ರದೇಶ

3

ಭುವನೇಶ್ವರ

ಒಡಿಶಾ

4

ಚೆನ್ನೈ

ತಮಿಳುನಾಡು

5

ಗಾಂಧಿನಗರ

ಗುಜರಾತ್

6

ಹೈದರಾಬಾದ್

ತೆಲಂಗಾಣ

7

ಜೋಧ್ ಪುರ

ರಾಜಸ್ತಾನ

8

ಕಾಂಗ್ರಾ

ಹಿಮಾಚಲಪ್ರದೇಶ

9

ಕಣ್ಣೂರು

ಕೇರಳ

10

ಕೋಲ್ಕತಾ

ಪಶ್ಚಿಮ ಬಂಗಾಳ

11

ಮುಂಬೈ

ಮಹಾರಾಷ್ಟ್ರ

12

ನವದೆಹಲಿ

ದೆಹಲಿ

13

ಪಾಟ್ನಾ

ಬಿಹಾರ್

14

ರಾಯ್ ಬರೇಲಿ

ಉತ್ತರ ಪ್ರದೇಶ

15

ಶಿಲ್ಲಾಂಗ್

ಮೇಘಾಲಯ

16

ಶ್ರೀನಗರ

ಜಮ್ಮು ಕಾಶ್ಮೀರ

 

ಜವಳಿ ಮತ್ತು ವಸ್ತ್ರ ಉದ್ಯಮ ಹಾಗೂ ಧಿರಿಸುಗಳಲ್ಲಿ ಇತ್ತೀಚಿನ ಟ್ರೆಂಡ್ ಗಳನ್ನು ಆಧರಿಸಿ ಎನ್ ಐ ಎಫ್ ಟಿ ಸಂಭಾವ್ಯ ಅಧ್ಯಯನವನ್ನು ಕೈಗೊಂಡಿದ್ದು, 2020-21ರ ಶೈಕ್ಷಣಿಕ ವರ್ಷದಿಂದ ಎನ್ ಐ ಎಫ್ ಟಿ ತನ್ನ ಎರಡು ಕ್ಯಾಂಪಸ್ ಗಳಲ್ಲಿ ಪದವಿ ಕೋರ್ಸ್ ಗಳನ್ನು ಆರಂಭಿಸಲಿದೆ.

ಎನ್ ಐ ಎಫ್ ಟಿ ಶಿಲ್ಲಾಂಗ್

  1. ವಸ್ತ್ರ ವಿನ್ಯಾಸ ಪದವಿ(ಟೆಕ್ಸ್ ಟೈಲ್ ಡಿಸೈನ್)
  2. ವಿನ್ಯಾಸ ಸಂವಹನ ಪದವಿ(ಫ್ಯಾಷನ್ ಕಮ್ಯುನಿಕೇಷನ್)

 

ಎನ್ ಐ ಎಫ್ ಟಿ ಭೂಪಾಲ್

  1. ವಿನ್ಯಾಸ ಸಂವಹನ ಪದವಿ(ಫ್ಯಾಷನ್ ಕಮ್ಯುನಿಕೇಷನ್)
  2. ವಸ್ತ್ರ ವಿನ್ಯಾಸ ಪದವಿ(ಫ್ಯಾಷನ್ ಡಿಸೈನ್)
  3. ವಿನ್ಯಾಸ ಪದವಿ(ಆಪರಲ್ ಪ್ರೊಡಕ್ಷನ್)

ಈ ಮೇಲಿನ ಕಾರ್ಯಕ್ರಮಗಳು ಈಗಾಗಲೇ ಕ್ಯಾಂಪಸ್ ಗಳಲ್ಲಿ ನಡೆಯುತ್ತಿರುವ ಕೋರ್ಸ್ ಗಳಿಗೆ ಹೆಚ್ಚುವರಿಯಾಗಲಿದೆ.

ಸಮಗ್ರ ಟೆಕ್ಸ್ ಟೈಲ್ ಪಾರ್ಕ್

ಸರ್ಕಾರ ಸಮಗ್ರ ಟೆಕ್ಸ್ ಟೈಲ್ ಪಾರ್ಕ್ ಯೋಜನೆ(ಎಸ್ ಐ ಟಿಪಿ)ಯನ್ನು ಜಾರಿಗೊಳಿಸುತ್ತಿದ್ದು, ಅದರಲ್ಲಿ ಜವಳಿ ಘಟಕಗಳನ್ನು ಸ್ಥಾಪಿಸಲು ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಸೃಷ್ಟಿಸಲು ನೆರವು ನೀಡಲಾಗುವುದು. 40 ಕೋಟಿ ರೂಪಾಯಿಗಳ ಮಿತಿಯ ಯೋಜನೆಗೆ ಭಾರತ ಸರ್ಕಾರ, ಯೋಜನಾ ವೆಚ್ಚದ ಶೇ.40ರಷ್ಟನ್ನು ಭರಿಸಲಿದೆ. ಆದರೆ ಭಾರತ ಸರ್ಕಾರದ ಅನುದಾನ ಅರುಣಾಚಲಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್, ತ್ರಿಪುರಾ, ಸಿಕ್ಕಿಂ, ಹಿಮಾಚಲಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ತಲಾ ಎರಡು ಯೋಜನೆಗಳಿಗೆ 40 ಕೋಟಿ ರೂ. ಮಿತಿಯ ಪ್ರತಿ ಜವಳಿ ಪಾರ್ಕ್ ಗೆ ಶೇ.90ರಷ್ಟು ಅನುದಾನವನ್ನು ಭಾರತ ಸರ್ಕಾರ ನೀಡಲಿದೆ.

ಈ ಯೋಜನೆ ಬೇಡಿಕೆ ಆಧರಿಸಿದ್ದಾಗಿದೆ. ಜವಳಿ ಸಚಿವಾಲಯ ಎಸ್ ಐಟಿಪಿ ಅಡಿಯಲ್ಲಿ ಒಟ್ಟಾರೆ 59 ಜವಳಿ ಪಾರ್ಕ್ ಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಅವುಗಳಲ್ಲಿ 22 ಜವಳಿ ಪಾರ್ಕ್ ಗಳು ಈಗಾಗಲೇ ಪೂರ್ಣಗೊಂಡಿವೆ ಮತ್ತು ಉಳಿದವು ನಾನಾ ಹಂತದಲ್ಲಿ ನಿರ್ಮಾಣ ಕಾರ್ಯದಲ್ಲಿವೆ.

 

 

 

ಕ್ರ.ಸಂ.

ಜವಳಿ ಪಾರ್ಕ್ ಗಳು

ಸ್ಥಳ

ರಾಜ್ಯ

 
 

1

ಇಸ್ಲಾಮ್ ಪುರ್ ಇಂಟಿಗ್ರೇಟೆಡ್ ಜವಳಿ ಪಾರ್ಕ್

ಇಸ್ಲಾಮ್ ಪುರ್

ಮಹಾರಾಷ್ಟ್ರ

 

2

ಲಾತೂರ್ ಇಂಟಿಗ್ರೇಟೆಡ್ ಜವಳಿ ಪಾರ್ಕ್

ಲಾತುರ್

ಮಹಾರಾಷ್ಟ್ರ

 

3

ಅಮಿತ್ರ ಗ್ರೀನ್ ಹೈಟೆಕ್ ಜವಳಿ ಪಾರ್ಕ್

ಅಹಮದಾಬಾದ್

ಗುಜರಾತ್

 

4

ಕಾರಂಜ್ ಜವಳಿ ಪಾರ್ಕ್

ಸೂರತ್

ಗುಜರಾತ್

 

5

ಷಾಲೂನ್ ಜವಳಿ ಪಾರ್ಕ್

ಸೂರತ್

ಗುಜರಾತ್

 

6

ಪಲ್ಸಾನಾ ಜವಳಿ ಪಾರ್ಕ್

ಸೂರತ್

ಗುಜರಾತ್

 

7

ಶಾಂತಿ ಇಂಟಿಗ್ರೇಟೆಡ್ ಜವಳಿ ಪಾರ್ಕ್

ಸೂರತ್

ಗುಜರಾತ್

 

8

ಸತ್ಯರಾಜ್ ಇಂಟಿಗ್ರೇಟೆಡ್ ಜವಳಿ ಪಾರ್ಕ್

ಇಚಲಕಾರಂಜಿ

ಮಹಾರಾಷ್ಟ್ರ

 

9

ಧುಲೆ ಜವಳಿ ಪಾರ್ಕ್

ಧುಲೆ

ಮಹಾರಾಷ್ಟ್ರ

 

10

ಶ್ರೀ ಗಣೇಶ್ ಇಂಟಿಗ್ರೇಟೆಡ್ ಜವಳಿ ಪಾರ್ಕ್

ಧುಲೆ

ಮಹಾರಾಷ್ಟ್ರ

 

11

ಆಲಿಶಾನ್ ಎಕೊ ಜವಳಿ ಪಾರ್ಕ್

ಪಾಣಿಪತ್

ಹರಿಯಾಣ

 

12

ಗುಂಟೂರ್ ಜವಳಿ ಪಾರ್ಕ್

ಗುಂಟೂರ್

ಆಂಧ್ರಪ್ರದೇಶ

 

13

ತಾರಕೇಶ್ವರ ಜವಳಿ ಪಾರ್ಕ್

ನೆಲ್ಲೂರ್

ಆಂಧ್ರಪ್ರದೇಶ

 

14

ಬ್ರಾಂಡಿಕ್ಸ್ ಇಂಡಿಯಾ ಅಪರೆಲ್ ಸಿಟಿ ಪ್ರೈ.ಲಿ.

ವಿಶಾಖಪಟ್ಟಣಂ

ಆಂಧ್ರಪ್ರದೇಶ

 

15

ಗುಜಾರಾತ್ ಎಕೊ ಜವಳಿ ಪಾರ್ಕ್ ಲಿ.

ಸೂರತ್

ಗುಜರಾತ್

 

16

ಮುಂದ್ರಾ ಎಸ್ಇಝೆಡ್ ಜವಳಿ ಮತ್ತು ಅಪರೆಲ್ ಪಾರ್ಕ್ ಲಿ.

ಕಛ್

ಗುಜರಾತ್

 

17

ಫೇರ್ ಡೀಲ್ ಜವಳಿ ಪಾರ್ಕ್ ಪ್ರೈವೆಟ್ ಲಿ.

ಸೂರತ್

ಗುಜರಾತ್

 

18

ವಿರಾಜ್ ಇಂಟಿಗ್ರೇಟೆಡ್ ಜವಳಿ ಪಾರ್ಕ್ ಲಿ.

ಅಹಮದಾಬಾದ್

ಗುಜರಾತ್

 

19

ಸಯಾನಾ ಜವಳಿ ಪಾರ್ಕ್ ಲಿ.

ಸೂರತ್

ಗುಜರಾತ್

 

20

ದೊಡ್ಡಬಳ್ಳಾಪುರ ಇಂಟಿಗ್ರೇಟೆಡ್ ಜವಳಿ ಪಾರ್ಕ್

ದೊಡ್ಡಬಳ್ಳಾಪುರ

ಕರ್ನಾಟಕ

 

21

ಮೆಟ್ರೋ ಹೈಟೆಕ್ ಕೋ ಆಪರೇಟಿವ್ ಪಾರ್ಕ್ ಲಿ.

ಇಚ್ಚಲಕಾರಂಜಿ

ಮಹಾರಾಷ್ಟ್ರ

 

22

ಪ್ರೈಡ್ ಇಂಡಿಯಾ ಕೋಆಪರೇಟಿವ್ ಜವಳಿ ಪಾರ್ಕ್ ಲಿ.

ಇಚ್ಚಲಕಾರಂಜಿ

ಮಹಾರಾಷ್ಟ್ರ

 

23

ಬಾರಾಮತಿ ಹೈಟೆಕ್ ಜವಳಿ ಪಾರ್ಕ್ ಲಿ.

ಬಾರಾಮತಿ

ಮಹಾರಾಷ್ಟ್ರ

 

24

ಪುರ್ನಾ ಗ್ಲೋಬಲ್ ಜವಳಿ ಪಾರ್ಕ್ ಲಿ.

ಹಿಂಗೋಳಿ

ಮಹಾರಾಷ್ಟ್ರ

 

25

ಲೋಟಸ್ ಇಂಟಿಗ್ರೇಟೆಡ್ ಜವಳಿ ಪಾರ್ಕ್

ಬರ್ನಾಲಾ

ಪಂಜಾಬ್

 

26

ರಿದಂ ಜವಳಿ ಮತ್ತು ಅಪರೆಲ್ ಪಾರ್ಕ್ ಲಿ.

ನವನ್ ಶೆಹರ್

ಪಂಜಾಬ್

 

27

ಲೂಧಿಯಾನ ಇಂಟಿಗ್ರೇಟೆಡ್ ಜವಳಿ ಪಾರ್ಕ್ ಲಿ

ಲೂಧಿಯಾನ

ಪಂಜಾಬ್

 

28

ಕಿಶನ್ ಗಢ್ ಹೈಟೆಕ್ ಜವಳಿ ನೇಕಾರಿಕೆ ಲಿ.

ಕಿಶನ್ ಗಢ್,

ರಾಜಸ್ತಾನ

 

29

ನೆಕ್ಟ್ಸ್  ಜನ್ ಜವಳಿ ಪಾರ್ಕ್ ಪ್ರೈ ಲಿ.

ಪಾಲಿ

ರಾಜಸ್ತಾನ

 

30

ಜೈಪುರ್ ಇಂಟಿಗ್ರೇಟೆಡ್ ಜವಳಿ ಪಾರ್ಕ್ ಪ್ರೈ.ಲಿ.

ಜೈಪುರ್

ರಾಜಸ್ತಾನ

 

31

ಪಲ್ಲದಾಮ್ ಹೈಟೆಕ್ ವೀವಿಂಗ್ ಪಾರ್ಕ್

ಪಲ್ಲದಾಮ್

ತಮಿಳುನಾಡು

 

32

ಕೋಮರಪಾಳ್ಯಂ ಹೈಟೆಕ್ ವೀವಿಂಗ್ ಪಾರ್ಕ್ ಪ್ರೈ.ಲಿ.

ಕೋಮರಪಾಳ್ಯಂ

ತಮಿಳುನಾಡು

 

33

ಕರೂರು ಇಂಟಿಗ್ರೇಟೆಡ್ ಜವಳಿ ಪಾರ್ಕ್

ಕರೂರ್ ಪಾರ್ಕ್

ತಮಿಳುನಾಡು

 

34

ಮಧುರೈ ಇಂಟಿಗ್ರೇಟೆಡ್ ಜವಳಿ ಪಾರ್ಕ ಲಿ.

ಮಧುರೈ

ತಮಿಳುನಾಡು

 

35

ದಿ ಗ್ರೇಟ್ ಇಂಡಿಯನ್ ಲೈನಿನ್ & ಜವಳಿ ಮೂಲಸೌಕರ್ಯ ಕಂಪನಿ, ಉತುಕುಲಿ

ತಿರುಪುರ್ ಜಿಲ್ಲೆ

ತಮಿಳುನಾಡು

 

36

ಪೂಚಂಪಲ್ಲಿ ಹ್ಯಾಂಡ್ ಲೂಮ್ ಪಾರ್ಕ್ ಪ್ರೈ.ಲಿ.

ಭುವನಗಿರಿ

ತೆಲಂಗಾಣ

 

37

ವೈಟ್ ಗೋಲ್ಡ್ ಜವಳಿ ಪಾರ್ಕ್

ರಂಗಾರೆಡ್ಡಿ

ಆಂಧ್ರಪ್ರದೇಶ

 

38

ಹೊಸೈರಿ ಪಾರ್ಕ್

ಹೌರ

ಪಶ್ಚಿಮ ಬಂಗಾಳ

 

39

ಪ್ರಾಗ್ ಜ್ಯೋತಿ ಜವಳಿ ಪಾರ್ಕ್

ದಾರಂಗ್

ಅಸ್ಸಾಂ

 

40

ಹಿಂದೂಪುರ್ ವ್ಯಾಪಾರ್ ಅಪರೆಲ್ ಪಾರ್ಕ್ ಲಿ.

ಅನಂತಪುರಂ

ಆಂಧ್ರಪ್ರದೇಶ

 

41

ಎಂಎಎಸ್ ಫ್ಯಾಬ್ರಿಕ್ ಪಾರ್ಕ್(ಇಂಡಿಯಾ ಲಿ.)

ನೆಲ್ಲೂರ್

ಆಂಧ್ರಪ್ರದೇಶ

 

42

ಸೂರತ್ ಸೂಪರ್ ಯಾರ್ನ್ ಪಾರ್ಕ್ ಲಿ.

ಸೂರತ್

ಗುಜರಾತ್

 

43

ಕೇಜ್ರಿವಾಲ್ ಇಂಟಿಗ್ರೇಟೆಡ್ ಜವಳಿ ಪಾರ್ಕ್

ಸೂರತ್

ಗುಜರಾತ್

 

44

ಜೆ & ಕೆ ಜವಳಿ ಪಾರ್ಕ್

ಕತುವಾ

ಜೆ&ಕೆ

 

45

ಗುಲ್ಬರ್ಗಾ ಜವಳಿ ಪಾರ್ಕ್

ಗುಲ್ಬರ್ಗಾ

ಕರ್ನಾಟಕ

 

46

ಎಸ್ ಐ ಎಂ ಎ ಜವಳಿ ಸಂಸ್ಕರಣಾ ಕೇಂದ್ರ

ಕುಡ್ಡಲೂರು

ತಮಿಳುನಾಡು

 

47

ಇಐಜಿಎಂಇಎಫ್ ಅಪೆರಲ್ ಪಾರ್ಕ್ ಲಿ.

ಕೋಲ್ಕತ್ತಾ

ಪಶ್ಚಿಮ ಬಂಗಾಳ

 

48

ಅಸ್ಮಿತ ಇನ್ಫ್ರಾಟೆಕ್ ಲಿ.

ಥಾಣೆ

ಮಹಾರಾಷ್ಟ್ರ

 

49

ದೀಸಾನ್ ಇನ್ಫ್ರಾಸ್ಟ್ರೆಕ್ಚರ್ ಪ್ರೈ ಲಿ.

ಧುಲೆ

ಮಹಾರಾಷ್ಟ್ರ

 

50

ಆರ್ ಜೆಡಿ ಇಂಟಿಗ್ರೇಟೆಡ್ ಜವಳಿ ಪಾರ್ಕ್ ಪ್ರೈ.ಲಿ.

ಸೂರತ್

ಗುಜರಾತ್

 

51

ಕಾಶ್ಮೀರ್ ಉಣ್ಣೆ ಮತ್ತು ರೇಷ್ಮೆ ಜವಳಿ ಪಾರ್ಕ್

ಘಟ್ಟಿ

ಜೆ&ಕೆ

 

52

ಫಾರುಖಾಬಾದ್ ಜವಳಿ ಪಾರ್ಕ್

ಫಾರುಖಾಬಾದ್

ಉತ್ತರ ಪ್ರದೇಶ

 

53

ಇಕೊ-ಟೆಕ್ಸ್ ಜವಳಿ ಪಾರ್ಕ್

ಬರೇಲಿ

ಉತ್ತರ ಪ್ರದೇಶ

 

54

ಎನ್ಎಸ್ ಪಿ ಇನ್ಫ್ರಾಸ್ಟ್ರೆಕ್ಚರ್ ಪ್ರೈ. ಲಿ.

ಸೂರತ್

ಗುಜರಾತ್

 

55

ಹಿಂಗಾಗಘಟ್ ಇಂಟಿಗ್ರೇಟೆಡ್ ಜವಳಿ ಪಾರ್ಕ್

ವಿದರ್ಭ

ಮಹಾರಾಷ್ಟ್ರ

 

56

ಪಲ್ಲವಡ ತಾಂತ್ರಿಕ ಜವಳಿ ಪಾರ್ಕ್  ಪ್ರೈ.ಲಿ.

ಎರೋಡ್

ತಮಿಳುನಾಡು

 

57

ಹಿಮಾಚಲ್ ಜವಳಿ ಪಾರ್ಕ್

ಉನಾ

ಹಿಮಾಚಲ ಪ್ರದೇಶ

 

58

ಕಾಂಚಿಪುರಂ ಪೆರಾರಿಯಂಗರ್ ಅಣ್ಣಾ ರೇಷ್ಮೆ ಪಾರ್ಕ್

ಕಾಂಚಿಪುರಂ

ತಮಿಳುನಾಡು

 

59

ಕಲ್ಪನಾ ಅವಡೆ ಜವಳಿ ಪಾರ್ಕ್

ಕೊಲ್ಹಾಪುರ

ಮಹಾರಾಷ್ಟ್ರ

 

 

ಯೋಜನೆಯಡಿ ಉತ್ತರ ಪ್ರದೇಶಕ್ಕೆ ಎರಡು ಜವಳಿ ಪಾರ್ಕ್ ಗಳನ್ನು ಈವರೆಗೆ ಅನುಮೋದಿಸಲಾಗಿದೆ

ಕ್ರ.ಸಂ

ಪಾರ್ಕ್ ಹೆಸರು

ಸ್ಥಳ

ಅನುಮೋದನೆ ವರ್ಷ

ಭಾರತ ಸರ್ಕಾರದ ಅನುದಾನ(ಕೋಟಿ ರೂ.ಗಳಲ್ಲಿ

ಸ್ಥಿತಿ

1

ಫಾರೂಖಾಬಾದ್ ಜವಳಿ ಪಾರ್ಕ್

ಫಾರೂಖಾಬಾದ್

2016

40.00

ಅನುಮೋದನೆ

2

ಎಕೊ ಟೆಕ್ಸ್ ಜವಳಿ ಪಾರ್ಕ್

ಬರೇಲಿ

2015

40.00

ಅನುಮೋದನೆ

 

ಜವಳಿ ವಲಯದಲ್ಲಿ ಸಾಮರ್ಥ್ಯ ವೃದ್ಧಿ

            ಸರ್ಕಾರ ‘ಸಮರ್ಥ’ ಹೆಸರಿನ ಕೌಶಲ್ಯಾಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದೆ. ಯೋಜನೆ ಜವಳಿ ವಲಯದಲ್ಲಿ ಸಾಮರ್ಥ್ಯವೃದ್ಧಿ ಉದ್ದೇಶ ಹೊಂದಿದ್ದು, ಅದು ಸಂಘಟಿತ ವಲಯದಲ್ಲಿನ ನೇಯ್ಗೆ ಮತ್ತು ಚರಕ ಹೊರತುಪಡಿಸಿ ಇಡೀ ಜವಳಿ ವಲಯದ ಎಲ್ಲ ಮೌಲ್ಯ ಸರಣಿ ವ್ಯಾಪ್ತಿಯನ್ನು ಒಳಗೊಂಡಿದೆ. ತ್ರಿಪುರಾ ರಾಜ್ಯ ಸೇರಿದಂತೆ ಭಾರತದಾದ್ಯಂತ 2017-18ರಿಂದ 2019-20ರ ಮೂರು ವರ್ಷಗಳ ಅವಧಿಯಲ್ಲಿ 10 ಲಕ್ಷ ಮಂದಿಗೆ ತರಬೇತಿ ನೀಡಲು 1,300 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು. ಯೋಜನೆಯ ಪ್ರಮುಖಾಂಶಗಳು ಈ ಕೆಳಗಿನಂತಿವೆ.

  1. ರಾಷ್ಟ್ರೀಯ ಕೌಶಲ್ಯ ಅರ್ಹತಾ ಒಪ್ಪಂದ(ಎನ್ಎಸ್ ಕ್ಯೂಎಫ್) ಪಾಲನೆ ಅಡಿಯಲ್ಲಿ ಸಾಮಾನ್ಯ ನಿಯಮ ಮತ್ತು ಕೋರ್ಸ್ ಗಳ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.
  2. ಯೋಜನೆಯ ಮೇಲ್ವಿಚಾರಣೆ ಮತ್ತು ಜಾರಿಗೆ ವೆಬ್ ಆಧಾರಿತ ಎಂಐಎಸ್ ಬಳಕೆ.
  3. ತರಬೇತಿ ಗುರಿಗಳನ್ನು ನಿಗದಿಪಡಿಸುವ ಮುನ್ನ ತರಬೇತಿ ಕೇಂದ್ರಗಳ ಭೌತಿಕ ಪರಿಶೀಲನೆ
  4. ಸಂಘಟಿತ ವಲಯದಲ್ಲಿ ತರಬೇತಿ ಪೂರ್ಣಗೊಳಿಸಿದ 3 ತಿಂಗಳಲ್ಲಿ ಶೇ.70ರಷ್ಟು ಉದ್ಯೋಗಾವಕಾಶ ದೊರಕಿಸಿಕೊಡುವುದು ಕಡ್ಡಾಯ.
  5. ಟ್ರೈನರ್ಸ್ ಆಫ್ ಟ್ರೈನರ್(ಟಿಒಟಿ) ಕೋರ್ಸ್ ಗಳನ್ನು ಪೂರೈಸಿದ ಪ್ರಮಾಣೀಕೃತ ತರಬೇತುದಾರರಿಂದ ತರಬೇತಿ.
  6. ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ(ಎಇಬಿಎಎಸ್)
  • VII. ಇಡೀ ತರಬೇತಿ ಕಾರ್ಯಕ್ರಮ ಮತ್ತು ಮೌಲ್ಯಮಾಪನ ಪ್ರಕ್ರಿಯೆ ಸಿಸಿಟಿವಿಯಲ್ಲಿ ರೆಕಾರ್ಡ್ ಮಾಡುವುದು.
  1. ಉದ್ಯೋಗ ಪಡೆದ ನಂತರವೂ ಅವರ ಮೇಲೆ ನಿಗಾ ಇಡುವುದು
  2. ಯೋಜನೆ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ನಾನಾ ಭಾಗೀದಾರರಿಗಾಗಿ ಮೊಬೈಲ್ ಆಪ್
  3. ಆಶೋತ್ತರ ಜಿಲ್ಲೆಗಳು ಮತ್ತು ತುಳಿಕತಕ್ಕೊಳಗಾದ ಸಾಮಾಜಿಕ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡುವುದು.
  4. ಸಾರ್ವಜನಿಕ ದೂರು ಇತ್ಯರ್ಥ ಕಾರ್ಯತಂತ್ರ.
  • XII. ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ(ನಿಯಂತ್ರಣ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013ರ ಅಡಿಯಲ್ಲಿ ಆಂತರಿಕ ದೂರು ಸಮಿತಿ.

ಈವರೆಗೆ ಕೌಶಲ್ಯ ತರಬೇತಿಗೆ ರಾಜ್ಯ ಸರ್ಕಾರಿ ಏಜೆನ್ಸಿಗಳಿಗೆ ಹಂಚಿಕೆ ಮಾಡಲಾದ ವಿವರ ಮತ್ತು ‘ಸಮರ್ಥ್’ ಯೋಜನೆಯಡಿ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಜವಳಿ ಸಚಿವಾಲಯ ನವದೆಹಲಿಯಲ್ಲಿ 2019ರ ಆಗಸ್ಟ್ 14ರಂದು ನಡೆದ ಕಾರ್ಯಕ್ರಮದಲ್ಲಿ ಒಪ್ಪಂದಗಳಿಗೆ ಸಹಿ ಹಾಕಿರುವ ವಿವರ ಈ ಕೆಳಗಿನಂತಿದೆ.

 

ಕ್ರ.ಸಂ.

ಅನುಷ್ಠಾನಗೊಳಿಸುವ ಏಜೆನ್ಸಿ ಹೆಸರು

ರಾಜ್ಯ

1

ಅರುಣಾಚಲಪ್ರದೇಶ ಕೈಮಗ್ಗ ಮತ್ತು ಕರಕುಶಲ ಸೊಸೈಟಿ ಲಿ

ಅರುಣಾಚಲ ಪ್ರದೇಶ

2

ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಕಣ್ಣೂರು

ಕೇರಳ

3

ಕೈಮಗ್ಗ ಮತ್ತು ಕರಕುಶಲ ವಿಭಾಗ, ವಾಣಿಜ್ಯ ಮತ್ತು ಕೈಗಾರಿಕಾ ನಿರ್ದೇಶನಾಲಯ

ಮಿಝೋರಾಂ

4

ಕೈಮಗ್ಗ ಮತ್ತು ಜವಳಿ

ತಮಿಳುನಾಡು

5

ತೆಲಂಗಾಣ ರಾಜ್ಯ ಜವಳಿ ಸಂಕೀರ್ಣ ಸಹಕಾರಿ ಸೊಸೈಟಿ

ತೆಲಂಗಾಣ

6

ಯುಪಿ ಕೈಗಾರಿಕಾ ಸಹಕಾರ ಅಸೋಸಿಯೇಷನ್ ಲಿ.

ಉತ್ತರ ಪ್ರದೇಶ

7

ಖಾದಿ ಗ್ರಾಮ ಕೈಗಾರಿಕಾ ಮಂಡಳಿ(ಯುಪಿಕೆವಿಐಬಿ)

ಉತ್ತರ ಪ್ರದೇಶ

8

ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ, ಕಾನ್ಪುರ

ಉತ್ತರ ಪ್ರದೇಶ

9

ಉತ್ತರಾಖಂಡ ಕೌಶಲ್ಯ ಅಭಿವೃದ್ಧಿ ಸೊಸೈಟಿ, ಡೆಹ್ರಾಡೂನ್

ಉತ್ತರಾಖಂಡ

10

ಕೈಮಗ್ಗ ಮತ್ತು ಜವಳಿ ನಿರ್ದೇಶನಾಲಯ

ಆಂಧ್ರಪ್ರದೇಶ

11

ಅಸ್ಸಾಂ ಕೌಶಲ್ಯಾಭಿವೃದ್ಧಿ ಯೋಜನೆ

ಅಸ್ಸಾಂ

12

ಕೈಮಗ್ಗ ಜವಳಿ ಮತ್ತು ರೇಷ್ಮೆ ಇಲಾಖೆ

ಅಸ್ಸಾಂ

13

ಮಧ್ಯಪ್ರದೇಶ ಲಘು ಉದ್ಯೋಗ ನಿಗಮ

ಮಧ್ಯಪ್ರದೇಶ

14

ಕೌಶಲ್ಯಾಭಿವೃದ್ಧಿ ನಿರ್ದೇಶನಾಲಯ

ತ್ರಿಪುರ

15

ಕರ್ನಾಟಕ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ

ಕರ್ನಾಟಕ

16

ಜವಳಿ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ, ಕೈಮಗ್ಗ ಮತ್ತು ಜವಳಿ ನಿರ್ದೇಶನಾಲಯ, ಮಣಿಪುರ ಸರ್ಕಾರ

ಮಣಿಪುರ

17

ಕೈಗಾರಿಕಾ ಮತ್ತು ವಾಣಿಜ್ಯ ನಿರ್ದೇಶನಾಲಯ

ಹರಿಯಾಣ

18

ರೇಷ್ಮೆ ಮತ್ತು ನೇಕಾರಿಕೆ ನಿರ್ದೇಶನಾಲಯ

ಮೇಘಾಲಯ

19

ಕೈಮಗ್ಗ ರೇಷ್ಮೆ ಮತ್ತು ಕರಕುಶಲ ನಿರ್ದೇಶನಾಲಯ

ಜಾರ್ಖಂಡ್

20.

ಜಮ್ಮು ಮತ್ತು ಕಾಶ್ಮೀರ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ*

ಜಮ್ಮು&ಕಾಶ್ಮೀರ*

21.

ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ, ಒಡಿಶಾ*

ಒಡಿಶಾ*

 

* ಈವರೆಗೆ ಒಪ್ಪಂದಗಳಿಗೆ ಸಹಿ ಮಾಡದಿರುವುದು

        ಸಚಿವಾಲಯ 18 ರಾಜ್ಯಗಳ ಸರ್ಕಾರಿ ಏಜೆನ್ಸಿಗಳಲ್ಲಿ ಸಂಘಟಿತ ಮತ್ತು ಸಾಂಪ್ರದಾಯಿಕ ವಲಯಗಳಲ್ಲಿ ಸುಮಾರು 4 ಲಕ್ಷ ಮಂದಿಗೆ ಕೌಶಲ್ಯ ತರಬೇತಿ ಗುರಿಯನ್ನು ನಿಗದಿಪಡಿಸಿದೆ. ಸಾಂಪ್ರದಾಯಿಕ ವಲಯದಲ್ಲಿ ಕೌಶಲ್ಯಾಭಿವೃದ್ಧಿ ಗುರಿಯನ್ನು ಜವಳಿ ಸಚಿವಾಲಯ ವಲಯವಾರು ಆಧರಿಸಿದೆ.(ಕೇಂದ್ರೀಯ ರೇಷ್ಮೆ ಮಂಡಳಿ, ಕರಕುಶಲ ಅಭಿವೃದ್ಧಿ ಆಯುಕ್ತರು, ಹ್ಯಾಂಡ್ ಲೂಮ್  ಅಭಿವೃದ್ಧಿ ಆಯುಕ್ತರು ಮತ್ತು ರಾಷ್ಟ್ರೀಯ ಸೆಣಬು ಮಂಡಳಿ)ಗೆ ಯೋಜನೆಯಡಿ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಯೋಜನೆಯ ಮಾರ್ಗಸೂಚಿಯಂತೆ ಜವಳಿ ಉದ್ಯಮ/ಉದ್ಯಮಕ್ಕೆ ಸಂಬಂಧಿಸಿದವರಿಗೆ ತರಬೇತಿ ಗುರಿ ನಿಗದಿ ಮತ್ತು ಅದಕ್ಕೆ ಏಜೆನ್ಸಿಗಳ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಸಮರ್ಥ್ ಯೋಜನೆ ಆರಂಭವಾದಾಗಿನಿಂದ ಆರ್ಥಿಕ ಅನುದಾನ ನಿಗದಿ ಮತ್ತು ಬಳಕೆ ಮಾಡಿರುವ ವಿವರಗಳು ಈ ಕೆಳಗಿನಂತಿವೆ.

ವರ್ಷ

ಹಣ ನಿಗದಿ

(ಕೋಟಿ ರೂ.ಗಳಲ್ಲಿ)

ನಿಧಿ ಬಳಕೆ

(ಕೋಟಿ ರೂ.ಗಳಲ್ಲಿ)

2017-18

100.00

100.00

2018-19

42.00

16.98

2019-20

(ಈ ದಿನದ ವರೆಗೆ)

100.50

17.39

ಒಟ್ಟಾರೆ

242.50

134.37

  

ಯೋಜನೆ ಅಡಿಯಲ್ಲಿ ತರಬೇತಿ ಕಾರ್ಯಕ್ರಮದ ಅನುಷ್ಠಾನದ ಎಲ್ಲ ಆಯಾಮಗಳ ಬಗ್ಗೆ ಮೇಲ್ವಿಚಾರಣೆ ನಡೆಸಲು ವೆಬ್ ಆಧಾರಿತ ಮಾಹಿತಿ ನಿರ್ವಹಣಾ ವ್ಯವಸ್ಥೆ(ಎಂಐಎಸ್) ಕಾರ್ಯಾಚರಣೆಗೊಳಿಸಲಾಗಿದೆ. ತರಬೇತಿ ಕಾರ್ಯಕ್ರಮದ ಎಲ್ಲ ಆಯಾಮಗಳೆಂದರೆ ಉದಾಹರಣೆಗೆ ಅನುಷ್ಠಾನಗೊಳಿಸುವ ಪಾಲುದಾರರು, ತರಬೇತಿ ಕೇಂದ್ರದ ಪರಿಶೀಲನೆ, ತರಬೇತುದಾರರ ನೋಂದಣಿ, ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ, ಮೌಲ್ಯಮಾಪನ ಮತ್ತು ಪ್ರಮಾಣೀಕರಣ, ತರಬೇತಿ ಪಡೆದವರ ನಿಯುಕ್ತಿ ಮತ್ತು ಅವರ ಮೇಲೆ ನಿಗಾ ಇಡುವುದು, ಅನುಷ್ಠಾನ ಪಾಲುದಾರರಿಗೆ ಪಾವತಿ ಮತ್ತಿತರ ಅಂಶಗಳನ್ನು ವೆಬ್ ಆಧಾರಿತ ಸಮರ್ಥ್ ಎಂಐಎಸ್ ಮೂಲಕ ಮುಖಾಮುಖಿಗೊಳಿಸಲಾಗಿದೆ.

ರಾಜ್ಯ ಮತ್ತು ತೆರಿಗೆಗಳಿಗೆ ವಿನಾಯಿತಿ ಮತ್ತು ಸುಂಕ (ಆರ್ ಒ ಎಸ್ ಸಿಟಿಎಲ್)

            ಜವಳಿ ಮತ್ತು ಸಿದ್ಧ ಉಡುಪುಗಳ ರಫ್ತು ವಹಿವಾಟಿನಲ್ಲಿ ಸ್ಪರ್ಧಾತ್ಮಕತೆ ಉತ್ತೇಜನಕ್ಕೆ 2019ರ ಮಾರ್ಚ್ 6ರಂದು ಸಚಿವ ಸಂಪುಟ ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಮತ್ತು ಸುಂಕ ಯೋಜನೆ (ಆರ್ ಒಎಸ್ ಸಿಟಿಎಲ್)ಗೆ ಅನುಮೋದನೆ ನೀಡಿತು. ಮಾಹಿತಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ತೆರಿಗೆ ಮತ್ತು ಸುಂಕ ವಿನಾಯಿತಿ ಅನುಮೋದನೆ ನೀಡಿ ಆ ದರಗಳನ್ನು 2020ರ ಮಾರ್ಚ್ 31ರ ವರೆಗೆ ಅನ್ವಯಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ.

ಪವರ್ ಟೆಕ್ಸ್ ಇಂಡಿಯಾ

            ಪವರ್ ಟೆಕ್ಸ್ ಇಂಡಿಯಾ ಅಡಿಯಲ್ಲಿ 4,797 ಕೈಮಗ್ಗಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಪ್ಲೈನ್ ಪವರ್ ಲೂಮ್ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ 44.98 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಗುಂಪು ಕಾರ್ಯ ನಿರ್ವಹಣಾ ಯೋಜನೆಯಲ್ಲಿ 141 ಯೋಜನೆಗಳಿಗೆ 7.64 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಅಂತೆಯೇ ನೂಲು ಬ್ಯಾಂಕ್ ಯೋಜನೆಯಡಿ 8 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 5.27 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 1.35 ಕೋಟಿ ರೂ. ವೆಚ್ಚದಲ್ಲಿ 12 ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶಗಳನ್ನು ಸಂಘಟಿಸಲಾಗಿದೆ. 4.58 ಕೋಟಿ ರೂಪಾಯಿ ವೆಚ್ಚದಲ್ಲಿ 19 ವಿದ್ಯುತ್ ಮಗ್ಗ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ರೇಷ್ಮೆ – ಉತ್ಪಾದನೆ ಪ್ರಗತಿ

ರೇಷ್ಮೆ ಉದ್ಯಮದ ಅಭಿವೃದ್ಧಿಗೆ ಸಮಗ್ರ ಯೋಜನೆ

ಭಾರತೀಯ ರೇಷ್ಮೆ ಉದ್ಯಮದ ಪೇಟೆಂಟ್ ಗಳ ಅಭಿವೃದ್ಧಿಗೆ 5 ತಾಂತ್ರಿಕ ಪ್ಯಾಕೇಜ್ ಗಳಿಗೆ ಒಪ್ಪಿಗೆ ನೀಡಲಾಗಿದ್ದು, 50 ಸಂಶೋಧನಾ ಯೋಜನೆಗಳು ಮುಕ್ತಾಯವಾಗಿವೆ ಮತ್ತು 55 ತಾಂತ್ರಿಕ ಪ್ಯಾಕೇಜ್ ಗಳು ವಿತರಣೆಯಾಗಿವೆ. ಕೇಂದ್ರೀಯ ರೇಷ್ಮೆ ಮಂಡಳಿಯ(ಸಿಎಸ್ ಬಿ) ಅಡಿಯಲ್ಲಿ ಸಂಶೋಧನಾ ಮತ್ತು ತರಬೇತಿ ಕೇಂದ್ರದ ವತಿಯಿಂದ ನಾನಾ ಕಾರ್ಯಕ್ರಮಗಳಡಿ 13,885 ವ್ಯಕ್ತಿಗಳಿಗೆ ತರಬೇತಿಯನ್ನು ನೀಡಲಾಗಿದೆ.

2018-19ರ ಅವಧಿಯಲ್ಲಿ ಒಟ್ಟು ಕಚ್ಚಾ ರೇಷ್ಮೆ ಉತ್ಪಾದನೆ ಶೇ.11ರಷ್ಟು(35,468ಎಂಟಿ) ಹೆಚ್ಚಾಗಿದೆ. ಹಿಂದಿನ 2017-18ನೇ ವರ್ಷದಲ್ಲಿ ಅದು(31,906ಎಂಟಿ) ಇತ್ತು. ಬೈ ವೋಲ್ಟೇನ್ ಕಚ್ಚಾ ರೇಷ್ಮೆ ಉತ್ಪಾದನೆ 2018-19ರಲ್ಲಿ ದಾಖಲೆಯ 6,987 ಮಿಲಿಯನ್ ಟನ್ ಉತ್ಪಾದನೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.18.91ರಷ್ಟು ಹೆಚ್ಚಿನ ಪ್ರಗತಿ ದಾಖಲಾಗಿದೆ. ಕಚ್ಚಾ ರೇಷ್ಮೆ ಇಳುವರಿ 2014-15ರಲ್ಲಿ ಪ್ರತಿ ಹೆಕ್ಟೇರ್ ಗೆ 96 ಕೆಜಿ ಇತ್ತು. ಆ ಅವಧಿಗೆ ಹೋಲಿಸಿದರೆ 2018-19ರಲ್ಲಿ ಅದು 105 ಕೆಜಿಗೆ  ಏರಿಕೆಯಾಗಿದೆ. ರೇಷ್ಮೆ ಬೆಳೆಗಾರರ ಹಿತವನ್ನು ಕಾಯುವ ಸಲುವಾಗಿ ಜವಳಿ ಸಚಿವಾಲಯ ಕೇಂದ್ರೀಯ ರೇಷ್ಮೆ ಮಂಡಳಿ(ಸಿಎಸ್ ಬಿ)ಯ ಮೂಲಕ ಹಲವು ಕ್ರಮಗಳನ್ನು ಕೈಗೊಂಡಿದೆ.

ಸಿಎಸ್ ಬಿ ಪರಿಷ್ಕೃತ ಕೇಂದ್ರೀಯ ವಲಯ ಯೋಜನೆ ಸಿಲ್ಕ್ ಸಮಗ್ರ ದಡಿಯಲ್ಲಿ ರೈತರ ಹಿತರಕ್ಷಣೆಗೆ ಈಶಾನ್ಯ ಭಾಗದಲ್ಲಿ ಜವಳಿ ಉತ್ತೇಜನ ಯೋಜನೆ(ಎನ್ ಇ ಆರ್ ಟಿಪಿಎಸ್) ಅಡಿಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ರೈತರಿಗೆ ಕಿಸಾನ್ ನರ್ಸರಿ, ಪ್ಲಾಂಟೇಷನ್ ಮತ್ತು ಹಿಪ್ಪುನೇರಳೆಯ ನಾನಾ ತಳಿಗಳು, ನೀರಾವರಿ, ಸಂಪೋಷಣಾ ಸೌಕರ್ಯಗಳಿರುವ ಚೌಕಿ ಸಾಗಾಣಿಕೆ ಕೇಂದ್ರಗಳು, ಉಗ್ರಾಣಗಳ ನಿರ್ಮಾಣ, ರೇಷ್ಮೆ ಸಾಕಾಣಿಕೆ ಸಲಕರಣೆಗಳು ಮತ್ತು ಅವುಗಳಿಗೆ ರೋಗಗಳು ಹರಡದಂತೆ ಏಜೆಂಟ್ ಗಳ ಮೂಲಕ ಮನೆ ಬಾಗಿಲಿಗೆ ಸೇವೆ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಟ್ಟು 42,026 ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ. 32,552 ಎಕರೆಗಳಲ್ಲಿ ಹಿಪ್ಪು ನೇರಳೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈಶಾನ್ಯ ಭಾಗದಲ್ಲಿ ಕಚ್ಚಾ ರೇಷ್ಮೆ ಉತ್ಪಾದನೆ 2013-14ರಲ್ಲಿ 4,602ಎಂಟಿ ಇದ್ದದ್ದು, 2018-19ರಲ್ಲಿ 7,482ಎಂಟಿ ಏರಿಕೆಯಾಗಿದೆ. ಒಟ್ಟಾರೆ ಭಾರತದ ಒಟ್ಟು ಉತ್ಪಾದನೆಯ ಶೇ.17ರಿಂದ ಶೇ.22ರಷ್ಟು ಹೆಚ್ಚಾಗಿದೆ. ಅಲ್ಲದೆ ಇದರಿಂದ ಬುಡಕಟ್ಟು ಸಮುದಾಯದವರಿಗೆ ಉದ್ಯೋಗ ಸೃಷ್ಟಿಯಾಗಿರುವುದಲ್ಲದೆ, ಅವರಿಗೆ ಸುಸ್ಥಿರ ಜೀವನೋಪಾಯ ದೊರೆತಿದೆ. ಮತ್ತೊಂದು ಸಕಾರಾತ್ಮಕ ಪರಿಣಾಮದಿಂದ ಪ್ರತಿಫಲನಗೊಂಡಿರುವ ಮಹತ್ವದ ಅಂಶವೆಂದರೆ ಖಾಯಿಲೆ ರಹಿತ ಲೈಯಿಂಗ್ಸ್(ಡಿಎಫ್ಎಲ್ಎಸ್) ಬಳಕೆ, ಕೊಕೋನ್ ಉತ್ಪಾದನೆ, ಕಚ್ಚಾ ರೇಷ್ಮೆ ಉತ್ಪಾದನೆಯಿಂದ ರೇಷ್ಮೆಯಲ್ಲಿ ಆದಾಯವೃದ್ಧಿಯಾಗಿರುವುದಲ್ಲದೆ, ಒಟ್ಟಾರೆ ಕುಟುಂಬದ ವಾರ್ಷಿಕ ಆದಾಯದ ಪ್ರಮಾಣದಲ್ಲಿ ಏರಿಕೆಯಾಗಿದೆ.

ರೇಷ್ಮೆ ಗೂಡು ಉತ್ಪಾದನೆ ಮಟ್ಟವನ್ನು ಸುಧಾರಿಸಲು ಬಲವರ್ಧಿತ ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆಯನ್ನು ಮಾಡಲಾಗಿದೆ ಮತ್ತು ಸುಧಾರಿತ ಹಿಪ್ಪುನೇರಳೆ/ನಾನಾ ತಳಿಗಳು, ರೇಷ್ಮೆ ಹೈಬ್ರಿಡ್ ಹುಳಗಳು ಮತ್ತು ತಂತ್ರಜ್ಞಾನ ಪ್ಯಾಕೇಜ್ ಗಳ ಬಳಕೆಯಿಂದ ಗುಲಾಮಗಿರಿಯನ್ನು ಕನಿಷ್ಠಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

3ಎ-4ಎ ಗ್ರೇಡ್ ನ ಕಚ್ಚಾ ರೇಷ್ಮೆಯನ್ನು ಬೈವೋಲ್ಟೇನ್ ರೇಷ್ಮೆ ಗೂಡುಗಳಿಂದ ಉತ್ಪಾದಿಸಲಾಗುವುದು. ಅದಕ್ಕಾಗಿ ದೇಶದಲ್ಲಿ ಸ್ವಯಂಚಾಲಿತ ರೀಲಿಂಗ್ ಯಂತ್ರಗಳು(ಎಆರ್ ಎಂ)ಅನ್ನು ಸ್ಥಾಪಿಸಲಾಗಿದೆ. ಕೇಂದ್ರೀಯ ರೇಷ್ಮೆ ಮಂಡಳಿ ಮತ್ತು ರಾಜ್ಯ ಸರ್ಕಾರಗಳು ರೇಷ್ಮೆ ಅಭಿವೃದ್ಧಿಗೆ ಹೆಚ್ಚುವರಿ ನಿಧಿಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನ್ರೇಗಾ), ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(ಆರ್ ಕೆ ವಿವೈ) ಸೇರಿದಂತೆ ಹಲವು ಯೋಜನೆಗಳನ್ನು ಒಗ್ಗೂಡಿಸಿಕೊಂಡು ಭಾರತ ಸರ್ಕಾರದ ಇತರೆ ಸಚಿವಾಲಯಗಳ ಜೊತೆ ಸೇರಿ ಅನುಷ್ಠಾನಗೊಳಿಸಲಾಗುತ್ತಿದೆ.

ಕಚ್ಚಾ ರೇಷ್ಮೆ ಮತ್ತು ಕಚ್ಚಾ ರೇಷ್ಮೆ ನೂಲು ಆಮದಿನ ಮೇಲೆ ಕ್ರಮವಾಗಿ ಶೇ.10 ಮತ್ತು ಶೇ.20ರಷ್ಟು ಮೂಲ ಸೀಮಾಸುಂಕ ವಿಧಿಸಲಾಗುತ್ತಿದೆ. ಇದರಿಂದ ದೇಶೀಯ ರೇಷ್ಮೆ ನೇಕಾರಿಕೆ ಮಾರುಕಟ್ಟೆ ವಲಯ ಬಲಿಷ್ಠವಾಗಿದೆ ಮತ್ತು ಭಾರತೀಯ ರೇಷ್ಮೆ ರಫ್ತು ವಲಯ ಹೆಚ್ಚು ಸ್ಪರ್ಧಾತ್ಮಕಗೊಂಡಿದೆ.

ಸೆಣಬು ಮತ್ತು ಸೆಣಬಿನ ಜವಳಿ ಉದ್ಯಮ

            ಭಾರತದ ಆರ್ಥಿಕತೆಯಲ್ಲಿ ಸೆಣಬು ಉದ್ಯಮ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಅದು ಪೂರ್ವದ ರಾಜ್ಯಗಳಲ್ಲಿ ವಿಶೇಷವಾಗಿ ಬಂಗಾಳದಲ್ಲಿ ಪ್ರಮುಖ ಉದ್ದಿಮೆಯಾಗಿದೆ.  ಸೆಣಬನ್ನು ಗೋಲ್ಡನ್ ಫೈಬರ್ ಎಂದು ಕರೆಯಲಾಗುತ್ತಿದ್ದು, ಅದು ಸುರಕ್ಷಿತ ಪ್ಯಾಕಿಂಗ್ ನ ಎಲ್ಲ ಮಾನದಂಡಗಳನ್ನು ಪೂರೈಸಲಿದೆ. ಅಲ್ಲದೆ ನೈಸರ್ಗಿಕ, ನವೀಕರಿಸಬಹುದಾದ ಜೀವವೈವಿಧ್ಯ ಮತ್ತು ಪರಿಸರಸ್ನೇಹಿ ಉತ್ಪನ್ನಗಳನ್ನು ಒಳಗೊಂಡಿದೆ. ಸೆಣಬಿನ ಉದ್ಯಮ ಸಂಘಟಿತ ಕಾರ್ಖಾನೆಗಳಲ್ಲಿ 0.37 ಮಿಲಿಯನ್ ಸಿಬ್ಬಂದಿಗೆ ನೇರ ಉದ್ಯೋಗ ಒದಗಿಸಿಕೊಟ್ಟಿದೆ ಎಂದು ಅಂದಾಜಿಸಲಾಗಿದೆ ಮತ್ತು ಭಿನ್ನ ಘಟಕಗಳು ಮತ್ತು ಜೀವನೋಪಾಯ ನೆರವಿನಿಂದ ಸುಮಾರು 4.0 ಮಿಲಿಯನ್ ರೈತ ಕುಟುಂಬಗಳಿಗೆ  ಬೆಂಬಲ ನೀಡಲಾಗಿದೆ.

ಸೆಣಬಿನ ವಲಯದ ಅಭಿವೃದ್ಧಿ

            ಸೆಣಬು ಬೆಳೆಯುವ ರೈತರ ಕಲ್ಯಾಣಕ್ಕಾಗಿ ಐಸಿಎಆರ್ ಇ(ಸುಧಾರಿತ ಬೆಳೆ ಮತ್ತು ಅತ್ಯಾಧುನಿಕ ರೀಟಿಂಗ್ ಅಭ್ಯಾಸ)ವನ್ನು ಆರಂಭಿಸಲಾಗಿದ್ದು, ಅದರಲ್ಲಿ ಸೆಣಬಿನ ಬೆಳೆಗಾಗಿ ಗುಣಾತ್ಮಕ ಮತ್ತು ಋಣಾತ್ಮಕ ಸುಧಾರಣೆಗಳನ್ನು ತರಲು ವೈಜ್ಞಾನಿಕ ಪದ್ಧತಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಆಧುನೀಕರಣ ಮತ್ತು ಹಾಲಿ ಸೆಣಬಿನ ಕಾರ್ಖಾನೆಗಳಲ್ಲಿರುವ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಿಕೊಳ್ಳಲಾಗುವುದು ಜಿಡಿಪಿ ಘಟಕಗಳಿಗೆ ಪ್ರೋತ್ಸಾಹ ಧನ ನೀಡುವ ಅಕ್ವಿಸಿಷನ್ ಆಫ್ ಸೆಲೆಕ್ಟ್ ಮಿಷನರಿ(ಐಎಸ್ಎಪಿಎಂ) ಆರಂಭಿಸಲಾಗಿದೆ.

ನೋಂದಾಯಿತ ಸೆಣಬಿನ ರಫ್ತುದಾರರಿಗೆ ನೆರವಾಗಲು ವಿದೇಶಿ ಮೇಳಗಳು/ಬಿಎಸ್ಎಂಗಳು ಮತ್ತು ವ್ಯಾಪಾರ ನಿಯೋಗಗಳು ಸೆಣಬಿನ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ರಫ್ತು ಮಾರುಕಟ್ಟೆ ಅಭಿವೃದ್ಧಿ ಸಹಾಯ ಯೋಜನೆ(ಇಎಂಡಿಎ)ಅನ್ನು ಆರಂಭಿಸಲಾಗಿದೆ. ಸೆಣಬಿನ ಉದ್ದಿಮೆದಾರರು ಮೆಟ್ರೋ ನಗರಗಳಲ್ಲಿ ಸಗಟು ಔಟ್ ಲೆಟ್ ಗಳ ಮೂಲಕ ವಿಭಿನ್ನ ಬಗೆಯ ಸೆಣಬಿನ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ರಾಜ್ಯಗಳ ರಾಜಧಾನಿ ಮತ್ತು ಪ್ರವಾಸಿ ತಾಣಗಳಲ್ಲಿ ಸೆಣಬಿನಿಂದ ತಯಾರಿಸಿದ ನಾನಾ ಉತ್ಪನ್ನಗಳಿಗೆ ಸಗಟು ಮಳಿಗೆ ಒದಗಿಸಲಾಗುತ್ತಿದೆ ಮತ್ತು ಭಾರೀ ಪ್ರಮಾಣದ ಪೂರೈಕೆ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಸೆಣಬಿನ ಕಾರ್ಖಾನೆಗಳಿಗೆ ನೆರವು ನೀಡುವ ಉದ್ದೇಶದಿಂದ ಸೆಣಬಿನ ಕಾರ್ಖಾನೆಯ ಸಿಬ್ಬಂದಿಗೆ ಶೌಚಾಲಯಗಳ ಬ್ಲಾಕ್ ನಿರ್ಮಾಣ ಮಾಡಲು ನೆರವು ನೀಡಲಾಗಿದೆ. ಸಿಬ್ಬಂದಿಯ ಕಲ್ಯಾಣ ಯೋಜನೆ(ಸುಲಭ್ ಶೌಚಾಲಯ)ಅನ್ನು ಜಾರಿಗೊಳಿಸಲಾಗಿದೆ. ಶಿಕ್ಷಣಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಸೆಣಬಿನ ಕಾರ್ಖಾನೆಗಳು/ಎಂಎಸ್ಎಂಇಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳ ಹೆಣ್ಣು ಮಕ್ಕಳು ಯಶಸ್ವಿಯಾಗಿ 10 ಮತ್ತು 12ನೇ ತರಗತಿ ಉತ್ತೀರ್ಣರಾದವರಿಗೆ ಆರ್ಥಿಕ ಸಹಾಯಧನ ನೀಡಲಾಗುವುದು.

ಮೌಲ್ಯ ಆಧಾರಿತ ಜಿಡಿಪಿಗಳ ಉತ್ಪಾದನೆಗೆ ಹೊಸ ಕೌಶಲ್ಯ ಹೊಂದಿದ ದುಡಿಯುವ ಪಡೆಯನ್ನು ಸ್ವಯಂ ಉದ್ಯೋಗಾವಕಾಶಗಳಿಗೆ ತೆರೆದುಕೊಳ್ಳುವಂತೆ ಮಾಡುವುದು ಮತ್ತು ಸೆಣಬು ಇಂಟಿಗ್ರೇಟೆಡ್ ಅಭಿವೃದ್ಧಿ ಯೋಜನೆ(ಜೆಐಡಿಎಸ್)ಅನ್ನು ಆರಂಭಿಸಲಾಗಿದ್ದು, ಅದರಡಿ ಹೊಸ ಹಾಗೂ ಹಳೆಯ ಉದ್ಯಮಿಗಳ ನಡುವೆ ಸಂಪರ್ಕ ಕಲ್ಪಿಸುವುದನ್ನು ಉತ್ತೇಜಿಸಲಾಗುವುದು. ಎಂಎಸ್ಎಂಇ ಘಟಕಗಳು ಮತ್ತು ಕರಕುಶಲಕರ್ಮಿಗಳು ಕಚ್ಚಾ ಸೆಣಬು ಪದಾರ್ಥಗಳನ್ನು ಪೂರೈಸಲು ಸೆಣಬು ಕಚ್ಚಾ ಸಾಮಗ್ರಿ ಬ್ಯಾಂಕ್(ಜೆಆರ್ ಎಂಬಿ) ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಅದರಡಿ ಮಿಲ್ ಗೇಟ್ (ಕಾರ್ಖಾನೆಯ ಬಾಗಿಲ ದರ) ದರ ಮತ್ತು ಸಾರಿಗೆ ವೆಚ್ಚವನ್ನು ನೀಡಲಾಗುವುದು.

ಭಾರತೀಯ ಸೆಣಬು ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಭಾರತೀಯ ಸೆಣಬು ಕೈಗಾರಿಕೆಗಳ ಸಂಶೋಧನಾ ಒಕ್ಕೂಟ(ಐಜೆಐಆರ್ ಎ)ಅನ್ನು ಸ್ಥಾಪಿಸಲಾಗಿದೆ. ಐಜೆಐಆರ್ ಎ ಅಡಿಯಲ್ಲಿ ನಾನಾ ಬಗೆಯ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಸೆಣಬು ಘಟಕಗಳಿಗೆ  ಸೆಣಬು  ಗಿಡಗಳನ್ನು ತ್ವರಿತವಾಗಿ ಬೆಳೆಸುವುದು ಮತ್ತು ಪರಿಸರಸ್ನೇಹಿ ತೈಲರಹಿತ ಸೆಣಬು ಸಂಸ್ಕರಣಾ ಪ್ರಕ್ರಿಯೆಯನ್ನು ಸುಲಭಗೊಳಿಸುವುದು  ಮತ್ತಿತರ ಅಂಶಗಳು ಸೇರಿವೆ.

ಉತ್ಪನ್ನ ಅಭಿವೃದ್ಧಿ ವಲಯದಲ್ಲಿ ಐಜೆಐಆರ್ ಎ ಕಡಿಮೆ ತೂಕದ ಸೆಣಬಿನ ಚೀಲಗಳನ್ನು ಅಭಿವೃದ್ಧಿಪಡಿಸಲಾಯಿತು. ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಸೆಣಬಿನ ಜಿಯೋ ಟೆಕ್ಸ್ ಟೈಲ್ ಬಳಕೆ, ಜೂಟ್ ಥರ್ಮ ಪ್ಲಾಸ್ಟಿಕ್ ಕಾಂಪೋಸಿಟ್ ಮತ್ತು ಜೈವಿಕ ಪರಿಸರದೊಂದಿಗೆ ಕರಗುವ ಸೆಣಬಿನ ಬಟ್ಟೆ, ಐಜೆಐಆರ್ ಎ ಉನ್ನತ ಗುಣಮಟ್ಟದ ಉತ್ಪನ್ನಗಳಾದ ಸೆಣಬು ಆಧಾರಿತ ಏರ್ ಫಿಲ್ಟರ್ ಮೀಡಿಯಾ, ಸೆಣಬಿನ ಕಡ್ಡಿ ಮತ್ತು ತ್ಯಾಜ್ಯ ಸಂಸ್ಕರಣೆ ಹಾಗೂ ಸೆಣಬು ಆಧಾರಿತ ಸ್ಯಾನಿಟರಿ ನ್ಯಾಪ್ಕಿನ್ ಗಳ ಉತ್ಪಾದನೆಗೆ ಯಂತ್ರೋಪಕರಣಗಳ ಅಭಿವೃದ್ಧಿ ವಲಯದಲ್ಲಿ ಐಜೆಐಆರ್ ಎ ಹೈಸ್ಪೀಡ್ ರೋಲರ್ ಡ್ರಾಫ್ಟಿಂಗ್ ಮಿಷನ್ ಅಭಿವೃದ್ಧಿಗೊಳಿಸಲಾಗಿದೆ.

ಸಮಗ್ರ ಕೈಮಗ್ಗ  ಅಭಿವೃದ್ಧಿ ಕಾರ್ಯಕ್ರಮ

            ಸಮಗ್ರ ಕೈಮಗ್ಗ ಕ್ಲಸ್ಟರ್ ಅಭಿವೃದ್ಧಿ ಯೋಜನೆ(ಸಿಎಚ್ ಸಿಡಿಎಸ್) ಅಡಿಯಲ್ಲಿ ನಿಗದಿತ ಭೌಗೋಳಿಕ ಪ್ರದೇಶಗಳಲ್ಲಿ ಮೆಗಾ ಹ್ಯಾಂಡ್ ಲೂಮ್ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ತಲಾ 40 ಕೋಟಿ ರೂ. ನೆರವಿನೊಂದಿಗೆ ಭಾರತ ಸರ್ಕಾರ ಕನಿಷ್ಠ 15 ಸಾವಿರ ಕೈಮಗ್ಗಗಳಿಗೆ ನೆರವು ನೀಡಲು ನಿರ್ಧರಿಸಿದೆ. ಅಧ್ಯಯನ ಕಚ್ಚಾ ಸಾಮಗ್ರಿಗಳಿಗೆ ನಿಧಿ ಮತ್ತಿತರವುಗಳನ್ನು ಭಾರತ ಸರ್ಕಾರ ಸಂಪೂರ್ಣವಾಗಿ ಭರಿಸಲಿದ್ದು, ಘಟಕಗಳು, ಕೈಮಗ್ಗಗಳಿಗೆ ತಾಂತ್ರಿಕ ಮೇಲ್ದರ್ಜೆಗೇರಿಸುವುದು ಮತ್ತು ಇತರೆ ಸಾಧನೆಗಳಿಗೆ ಭಾರತ ಸರ್ಕಾರ ಶೇ.90ರಷ್ಟು ನೆರವನ್ನು ಒದಗಿಸಲಿದೆ. ಅಧ್ಯಯನ ವಿನ್ಯಾಸ ಮೂಲಸೌಕರ್ಯ, ಮಾರುಕಟ್ಟೆ ಪ್ರಾಂಗಣ, ಗಾರ್ಮೆಂಟ್ ಘಟಕ, ಮಾರುಕಟ್ಟೆ ಅಭಿವೃದ್ಧಿ, ರಫ್ತು ಮತ್ತು ಪ್ರಚಾರ ಸಹಾಯಧನ ಮತ್ತಿತರ ಕಾರ್ಯಗಳಿಗೆ ಭಾರತ ಸರ್ಕಾರ ಶೇ.80ರಷ್ಟು ನೆರವು ನೀಡಲಿದೆ.

8 ಮೆಗಾ ಕೈಮಗ್ಗ ಕ್ಲಸ್ಟರ್ ಗಳು ಅಂದರೆ ವಾರಾಣಸಿ(ಉತ್ತರ ಪ್ರದೇಶ), ಶಿವಸಾಗರ(ಅಸ್ಸಾಂ), ವಿರುದ್ಧನಗರ(ತಮಿಳುನಾಡು), ಮುರ್ಷಿದಾಬಾದ್(ಪಶ್ಚಿಮಬಂಗಾಳ), ಪ್ರಕಾಶಂ ಮತ್ತು ಗುಂಟೂರು ಜಿಲ್ಲೆಗಳು(ಆಂಧ್ರಪ್ರದೇಶ), ಗೊಡ್ಡ ಮತ್ತು ನೆರೆಹೊರೆಯ ಜಿಲ್ಲೆಗಳು(ಜಾರ್ಖಂಡ್), ಬಾಗಲ್ ಪುರ್(ಬಿಹಾರ) ಮತ್ತು ತಿರುಚಿ(ತಮಿಳುನಾಡು)ಗಳನ್ನು ಅಭಿವೃದ್ಧಿಗಾಗಿ ಕೈಗೆತ್ತಿಕೊಳ್ಳಲಾಗಿದೆ. ಈ ಸಿಎಚ್ ಸಿಡಿಎಸ್ ಅಡಿಯಲ್ಲಿ ಕಳೆದ ನಾಲ್ಕು ಹಣಕಾಸು ವರ್ಷಗಳಿಂದ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ನಾನಾ ಯೋಜನೆಗಳ ಮೂಲಕ 1.75 ಲಕ್ಷ ನೇಕಾರರಿಗೆ 131.91 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ(ಎಚ್ಎಚ್ ಡಿಪಿ) ಅಡಿಯಲ್ಲಿ ರಾಜ್ಯ ಸರ್ಕಾರಗಳಿಂದ ಕಾರ್ಯಸಾಧುವಾದ ಪ್ರಸ್ತಾವಗಳನ್ನು ಸ್ವೀಕರಿಸಲಾಗಿದೆ. 294 ವಲಯ ಮಟ್ಟದ ಕ್ಲಸ್ಟರ್ ಗಳನ್ನು ದೇಶದಲ್ಲಿ ಮಂಜೂರು ಮಾಡಲಾಗಿದ್ದು, ಆ ಮೂಲಕ 1.6 ಲಕ್ಷ ಕೈಮಗ್ಗ ನೇಕಾರರಿಗೆ ಹಿಂದಿನ ನಾಲ್ಕು ವರ್ಷಗಳಲ್ಲಿ ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ 165.99 ಕೋಟಿ ಹಣವನ್ನು ನಾನಾ ಯೋಜನೆಗಳಡಿ ಬಿಡುಗಡೆ ಮಾಡಲಾಗಿದೆ.

ಮುದ್ರಾ ಯೋಜನೆಯಡಿ 35,952 ನೇಕಾರರಿಗೆ ಒಟ್ಟಾರೆ 181.68 ಕೋಟಿ ಸಾಲವನ್ನು ಮಂಜೂರು ಮಾಡಲಾಗಿದೆ. 8611 ಕೈಮಗ್ಗ ನೇಕಾರರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. 7417 ಹತ್ ಕರಗ ಸಂವರ್ಧನ್ ಸಹಾಯತಾ(ಎಚ್ ಎಸ್ ಎಸ್) ವಸ್ತುಗಳನ್ನು 7285 ಫಲಾನುಭವಿಗಳಿಗೆ ವಿತರಿಸಲಾಗಿದೆ.

ಕೈಮಗ್ಗ ಅಭಿವೃದ್ಧಿಗೆ 34 ಆಶೋತ್ತರ ಜಿಲ್ಲೆಗಳಲ್ಲಿ 38.77 ಕೋಟಿ ಆರ್ಥಿಕ ಸಹಾಯಧನವನ್ನು ನೀಡಲಾಗಿದೆ. ಹಸ್ತಕಲಾ ಸಹಯೋಗ ಶಿಬಿರಗಳನ್ನು ಸಂಘಟಿಸಲಾಗಿದ್ದು, ಆ ಮೂಲಕ ದೇಶಾದ್ಯಂತ ಕರಕುಶಲ ಕರ್ಮಿಗಳು ಮತ್ತು ನೇಕಾರರಿಗೆ ಲಭ್ಯವಿರುವ ಪ್ರಯೋಜನಗಳು ಮತ್ತು ನಾನಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನೇಕಾರರ ಆದಾಯ ವೃದ್ಧಿ ಮಾಡುವ ಸಲುವಾಗಿ ಹ್ಯಾಂಡ್ ಲೂಮ್ ಕ್ಲಸ್ಟರ್ ಗಳಲ್ಲಿ ಜವಳಿ ಕಂಪನಿಗಳು ಮತ್ತು ನೇಕಾರರ ಮುಖಾಮುಖಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕಂಪನಿ ಕಾಯ್ದೆಯಡಿ ಉತ್ಪಾದನಾ ಕಂಪನಿಗಳು, ಕೈಮಗ್ಗ ನೇಕಾರರು, ಸೊಸೈಟಿಗಳು ಮತ್ತು ಸ್ವಸಹಾಯ ಸಂಘಗಗಳನ್ನು ರಚಿಸಲಾಗಿದೆ.

ಕೈಮಗ್ಗಗಳ ಆಧುನೀಕರಣ

            ಕೋಲ್ಕತ್ತಾದ ವಾಣಿಜ್ಯ ಗುಪ್ತಚರ ಮತ್ತು ಸಾಂಖ್ಯಿಕ ಮಹಾನಿರ್ದೇಶನಾಲಯ(ಡಿಜಿಸಿಐಎಸ್)ನ ಪ್ರಕಾರ 2018-19ರಲ್ಲಿ 29.93 ಲಕ್ಷ ಹತ್ತಿ ಗಂಟು (ಬೇಲ್ ) ಗಳನ್ನು ಆಮದು ಮಾಡಿಕೊಳ್ಳಲಾಗಿದೆ ಮತ್ತು 42.83 ಲಕ್ಷ ಬೇಲ್ ಗಳನ್ನು ರಫ್ತು ಮಾಡಲಾಗಿದೆ. ಹತ್ತಿ ಲಾಭಃ ನಷ್ಟ ಪಟ್ಟಿಯಲ್ಲಿ ಕಳೆದ ಮೂರು ವರ್ಷಗಳಿಂದೀಚೆಗೆ ಹತ್ತಿ ಸಲಹಾ ಮಂಡಳಿ(ಸಿಎಬಿ) ಅಂತಿಮಗೊಳಿಸಿರುವ ರಫ್ತು ಮತ್ತು ಆಮದು ಪ್ರಮಾಣ ಈ ಕೆಳಗಿನಂತಿದೆ.

 

(ಪ್ರಮಾಣ ಲಕ್ಷ ಬೇಲ್ ಗಳಲ್ಲಿ – 170ಕೆಜಿಗಳು)

ಬೆಳೆ ವರ್ಷ

ಆರಂಭಿಕ ದಾಸ್ತಾನು

ಉತ್ಪಾದನೆ

ಆಮದು

ಬಳಕೆ

ರಫ್ತು

ಮುಕ್ತಾಯ ದಾಸ್ತಾನು

2016-17

36.44

345.00

30.94

310.41

58.21

43.76

2017-18

43.76

370.00

15.80

3019.06

67.59

42.91

2018-19 (ಪಿ)

42.91

337.00

22.00

311.50

50.00

40.41

 

        ದೇಶದಲ್ಲಿನ ಬೇಡಿಕೆ ಮತ್ತು ಪೂರೈಕೆ ಸ್ಥಿತಿಗತಿಯನ್ನು ಪರಿಗಣನೆಗೆ ತೆಗೆದುಕೊಂಡು ಈ ಮೇಲಿನ ಹೇಳಿಕೆಯಂತೆ ದೇಶದಲ್ಲಿ ಅಗತ್ಯ ಹತ್ತಿ ಲಭ್ಯತೆ ಸಾಕಷ್ಟಿದೆ.

        ಜವಳಿ ಸಚಿವಾಲಯ ಈ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ –(i) ನೂಲು ಪೂರೈಕೆ ಯೋಜನೆ – ಕೈಮಗ್ಗ ನೇಕಾರರಿಗೆ ಮಿಲ್ ಗೇಟ್ (ಕಾರ್ಖಾನೆ ಬಾಗಿಲ ಬಳಿ ದರ )ದರದಲ್ಲಿ ಎಲ್ಲ ಬಗೆಯ ನೂಲನ್ನು ದೇಶಾದ್ಯಂತ ಲಭ್ಯವಾಗುವಂತೆ ಮಾಡುವುದು, ಈ ಯೋಜನೆಯನ್ನು ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ, ಈ ಯೋಜನೆಯಡಿ ಕಾರ್ಯನಿರ್ವಹಿಸುವ ಡಿಪೊ ಏಜೆನ್ಸಿಗಳಿಗೆ ಶೇ.2ರಷ್ಟು ಕಾರ್ಯ ನಿರ್ವಹಣಾ ವೆಚ್ಚವನ್ನು ನೀಡಲಾಗುವುದು ಮತ್ತು ಸರಕು ಸಾಗಾಣೆ ವೆಚ್ಚವನ್ನು ಮರುಪಾವತಿ ಮಾಡಲಾಗುವುದು, ಕೈಮಗ್ಗಗಳಿಗೆ ಹಾಂಕ್   ನೂಲು ಹೊಂದಿರುವವರಿಗೆ ಶೇ. 10ರಷ್ಟು ದರ ಸಬ್ಸಿಡಿ ನೀಡಲಾಗುವುದು, ಇದು ಹತ್ತಿ, ಸ್ಥಳೀಯ ರೇಷ್ಮೆ, ವೂಲ್ ಮತ್ತು ಲೈನಿನ್ ನೂಲುಗಳಿಗೆ ಗುಣಮಟ್ಟ ಆಧರಿಸಿ ಅನ್ವಯವಾಗುವುದು.

(ii) ವಿದ್ಯುತ್ ಮಗ್ಗ ವಲಯ- ನೂಲು ಬ್ಯಾಂಕ್ ಯೋಜನೆ ಬಡ್ಡಿರಹಿತ ಆವರ್ತನಿಧಿಯನ್ನು ಸುಮಾರು 2 ಕೋಟಿ ರೂ.ಗಳವರೆಗೆ ಒದಗಿಸಲಿದ್ದು, ಅದಕ್ಕಾಗಿ ವಿಶೇಷ ಉದ್ದೇಶದ ಘಟಕ(ಎಸ್ ಪಿ ವಿ)/ ವಿದ್ಯುತ್ ಮಗ್ಗ ನೇಕಾರರ ಒಕ್ಕೂಟವನ್ನು ರಚಿಸಲಾಗಿದ್ದು, ಅವರು ಸಗಟು ದರದಲ್ಲಿ ನೂಲನ್ನು ಖರೀದಿಸಲು ಮತ್ತು ಸಣ್ಣ ನೇಕಾರರಿಗೆ ಆ ನೂಲನ್ನು ಸೂಕ್ತ ಬೆಲೆಗೆ ನೀಡಲಾಗುವುದು. ಭಾರತದಾದ್ಯಂತ 89 ನೂಲು ಬ್ಯಾಂಕ್ ಗಳು ಕಾರ್ಯ ನಿರ್ವಹಿಸುತ್ತಿದ್ದು, ಭಾರತ ಸರ್ಕಾರ ಅವುಗಳಿಗಾಗಿ 26.17 ಕೋಟಿ ಬಡ್ಡಿರಹಿತ ಆವರ್ತನಿಧಿಯನ್ನು ನೀಡಿದೆ. ವಿದ್ಯುತ್ ಮಗ್ಗ ನೇಕಾರರಿಗೆ ನೂಲು ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ.

ಭಾರತ ಸರ್ಕಾರದ ಜವಳಿ ಸಚಿವಾಲಯ, ನೂಲುವುದು, ಡೈಯಿಂಗ್(ಬಣ್ಣ ಹಚ್ಚುವುದು), ವಿನ್ಯಾಸ ಮತ್ತಿತರ ಉನ್ನತೀಕರಿಸಿದ ಕೌಶಲ್ಯ ತರಬೇತಿಯನ್ನು ಒದಗಿಸಲು ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ (ಎನ್ಎಚ್ ಡಿಪಿ) ಮತ್ತು ಸಮಗ್ರ ಕೈಮಗ್ಗ ಕ್ಲಸ್ಟರ್ ಅಭಿವೃದ್ಧಿ ಯೋಜನೆ(ಸಿಎಚ್ ಸಿಡಿಎಸ್) ಅಡಿಯಲ್ಲಿ ಬ್ಲಾಕ್ ಹಂತದ ಕ್ಲಸ್ಟರ್ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಮತ್ತು ಉತ್ಪಾದನೆ ಹೆಚ್ಚಳ ಮತ್ತು ವಸ್ತ್ರಗಳ ಗುಣಮಟ್ಟ ಸುಧಾರಣೆ ದೃಷ್ಟಿಯಿಂದ ಕೈಮಗ್ಗ ನೇಕಾರರಿಗೆ ಉನ್ನತ ಮಟ್ಟದ ಮಗ್ಗಗಳು/ಇತರೆ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಎನ್ಎಚ್ ಡಿಪಿ/ ಸಿಎಚ್ ಸಿಡಿಎಸ್ ಅಡಿಯಲ್ಲಿ 2015-16 ರಿಂದ 2019-20(18.11.2019ರ ವರೆಗೆ)ಒಟ್ಟು 436 ವಲಯ ಮಟ್ಟದ ಕ್ಲಸ್ಟರ್ ಗಳಿಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ ದೇಶಾದ್ಯಂತ 303366 ಫಲಾನುಭವಿಗಳಿಗೆ ನೆರವಾಗಲಿದ್ದು, ಆ ಪೈಕಿ 52 ವಲಯ ಮಟ್ಟದ ಕ್ಲಸ್ಟರ್ ಗಳನ್ನು ತಮಿಳುನಾಡು ರಾಜ್ಯವೊಂದಕ್ಕೆ ಅನುಮೋದಿಸಲಾಗಿದ್ದು, ಅದರಲ್ಲಿ 58268 ಫಲಾನುಭವಿಗಳಿಗೆ ಪ್ರಯೋಜನ ದೊರಕಿದೆ.

ಕೈಮಗ್ಗ ನೇಕಾರರ ಕಲ್ಯಾಣಕ್ಕಾಗಿ ಕೈಮಗ್ಗ ನೇಕಾರರು/ಸಿಬ್ಬಂದಿಗೆ ಜೀವ ಮತ್ತು ಅಪಘಾತ ವಿಮೆ ಒದಗಿಸಲಾಗುವುದು. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ(ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷ ಬಿಮಾ ಯೋಜನೆ(ಪಿಎಂಎಸ್ ಬಿವೈ)ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವವರಿಗೆ ಮಹಾತ್ಮ ಗಾಂಧಿ ಬುಂಕರ್ ಬಿಮಾ ಯೋಜನೆ(ಎಂಜಿಬಿಬಿವೈ) ಅಡಿಯಲ್ಲಿ ದೇಶಾದ್ಯಂತ ವಿಮೆಗೆ ಒಳಪಡಿಸಲಾಗಿದೆ. ಪ್ರಯೋಜನದ ವಿವರಗಳು ಮತ್ತು ವಾರ್ಷಿಕ ಒಟ್ಟು ಪ್ರೀಮಿಯಂ ಪ್ರಮಾಣ ಅಂದರೆ ಭಾರತ ಸರ್ಕಾರ ಎಲ್ ಐ ಸಿ ಮತ್ತು  ನೇಕಾರರು ಪಿಎಂಜೆಜೆಬಿವೈ/ ಪಿಎಂಎಸ್ ಬಿವೈ ಅಡಿಯಲ್ಲಿ ನೇಕಾರರು/ಸಿಬ್ಬಂದಿ ಮತ್ತು ಎಂಜಿಬಿಬಿವೈ ಅಡಿಯಲ್ಲಿ ಕೈಮಗ್ಗ ನೇಕಾರರಿಗೆ ಸಮಗ್ರ ಕಲ್ಯಾಣ ಯೋಜನೆ ಅಡಿಯಲ್ಲಿ ಈ ಕೆಳಗಿನಂತಿದೆ.

 

ಯೋಜನೆಯ ಅಂಶಗಳು

ವಯೋಮಾನ

ವಿಮಾ ವ್ಯಾಪ್ತಿ

ಪ್ರಯೋಜನ(ರೂ.ಗಳಲ್ಲಿ)

ವಾರ್ಷಿಕ ಪ್ರೀಮಿಯಂ

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ

(ಪಿಎಂಜೆಜೆಬಿವೈ)

18-50 ವರ್ಷ

ಸಹಜಸಾವು

2,00,000

330 ರೂ.

 

ಭಾರತ ಸರ್ಕಾರದ ಪಾಲು – 150 ರೂ.

ಎಲ್ ಐ ಸಿ ಪಾಲು – 100 ರೂ.

ನೇಕಾರರು/ಸಿಬ್ಬಂದಿ -80 ರೂ.

ಅಪಘಾತದಿಂದ ಸಾವು

2,00,000

ಪ್ರಧಾನಮಂತ್ರಿ ಸುರಕ್ಷ ಬಿಮಾ ಯೋಜನೆ(ಪಿಎಂಎಸ್ ಬಿವೈ)

18-50 ವರ್ಷ

ಅಪಘಾತದಿಂದ ಸಾವು

2,00,000

12 ರೂ.

 

ಸಂಪೂರ್ಣ ಭಾರತ ಸರ್ಕಾರ ಭರಿಸಲಿದೆ(ಜಿಒಐ)

 

ಸಂಪೂರ್ಣ ಅಂಗವಿಕಲತೆ

2,00,000

ಭಾಗಶಃ ಅಂಕವಿಕಲತೆ

1,00,000

ಮಹಾತ್ಮ ಗಾಂಧಿ ಬುಂಕರ್ ಯೋಜನೆ (ಎಂಜಿಬಿಬಿವೈ)

51-59 ವರ್ಷ

ಸಹಜ ಸಾವು

60,000

470 ರೂ.

ಭಾರತ ಸರ್ಕಾರದ ಪಾಲು – 290ರೂ.

ಎಲ್ ಐ ಸಿ ಪಾಲು – 100 ರೂ.

ನೇಕಾರರು/ಸಿಬ್ಬಂದಿ -80 ರೂ.

ಅಪಘಾತದಿಂದ ಸಾವು

1,50,000

ಸಂಪೂರ್ಣ ಅಂಗವಿಕಲತೆ

1,50,000

ಭಾಗಶಃ ಅಂಕವಿಕಲತೆ

75,000

 

 

ನೇಕಾರರು ಮತ್ತು ಅವರ ಕುಟುಂಬದವರಿಗೆ ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸಲು ಜವಳಿ ಸಚಿವಾಲಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಐಜಿಎನ್ ಒಯು) ಮತ್ತು ರಾಷ್ಟ್ರೀಯ ಮುಕ್ತ ಶಾಲಾ ಕೇಂದ್ರಗಳು(ಎನ್ ಐಒಎಸ್) ಜೊತೆ ಒಡಂಬಡಿಕೆಗೆ ಸಹಿ ಹಾಕಿದೆ. ಎನ್ ಐಒಎಸ್, ಪ್ರೌಢ ಮತ್ತು ಹಿರಿಯ ಪ್ರೌಢ ಮಟ್ಟದ ಶಿಕ್ಷಣವನ್ನು ವಿಶೇಷ ವಿಷಯಗಳಾದ ವಿನ್ಯಾಸ, ಮಾರುಕಟ್ಟೆ, ಬಿಸಿನೆಸ್ ಅಭಿವೃದ್ಧಿ ಮತ್ತಿತರ ವಿಷಯಗಳಲ್ಲಿ ಶಿಕ್ಷಣವನ್ನು ದೂರ ಶಿಕ್ಷಣ ಕಲಿಕೆ ಮೂಲಕ ನೇಕಾರರಿಗೆ ನೀಡಲಿದೆ. ಇಗ್ನೋ, ನೇಕಾರರ ಆಶೋತ್ತರಗಳು ಮತ್ತು ಅವರ ಮಕ್ಕಳ ಭವಿಷ್ಯದ ಪ್ರಗತಿಗೆ ಅನುಗುಣವಾಗಿ ಸರಳ ಹಾಗೂ ಲಭ್ಯ ಕಲಿಕೆ ಕಾರ್ಯಕ್ರಮಗಳ ಮೂಲಕ ನಿರಂತರ ಶಿಕ್ಷಣವನ್ನು ನೀಡುತ್ತಿದೆ. ಜವಳಿ ಸಚಿವಾಲಯ ಎನ್ ಐಒಎಸ್/ ಐಜಿಎನ್ ಒಯು ಕೋರ್ಸ್ ಗಳಲ್ಲಿ ಪ್ರವೇಶ ಪಡೆದ ಕೈಮಗ್ಗ ನೇಕಾರ ಕುಟುಂಬಕ್ಕೆ ಸೇರಿದ ಎಸ್ ಸಿ, ಎಸ್ ಟಿ, ಬಿಪಿಎಲ್ ಮತ್ತು ಮಹಿಳೆಯರಿಗೆ ಶುಲ್ಕದ ಶೇ.75ರಷ್ಟು ಹಣವನ್ನು ಮರುಪಾವತಿ ಮಾಡುತ್ತಿದೆ.

ಕರಕುಶಲ ಅಭಿವೃದ್ಧಿ

            ಕರಕುಶಲ ವಲಯದ ಉನ್ನತೀಕರಣಕ್ಕೆ ಕರಕುಶಲ ಕರ್ಮಿಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಕರಕುಶಲಕರ್ಮಿಗಳಿಗೆ ಜವಳಿ ಸಚಿವಾಲಯದ ಅಭಿವೃದ್ಧಿ ಆಯುಕ್ತರಿಂದ( ಕರಕುಶಲ) ನೇರ ಪ್ರಯೋಜನಗಳನ್ನು ಈ ಕೆಳಗಿನ ಯೋಜನೆಗಳ ಮೂಲಕ ಕರಕುಶಲಕರ್ಮಿಗಳಿಗೆ ಒದಗಿಸಲಾಗುವುದು.

  1. ಕರಕುಶಲರ್ಮಿಗಳಿಗೆ ಬಡ್ಡಿ ಸಹಾಯಧನದೊಂದಿಗೆ ಮುದ್ರಾ ಸಾಲ ಮತ್ತು ಹಣಕಾಸಿನ ನೆರವು: ಮುದ್ರಾ ಸಹಾಯ ಯೋಜನೆಯಡಿ ಕರಕುಶಲಕರ್ಮಿಗಳು/ನೇಕಾರರಿಗೆ ಶೇ.6ರ ಬಡ್ಡಿ ಸಹಾಯಧನದ ವಿನಾಯಿತಿಯೊಂದಿಗೆ 3 ವರ್ಷಗಳ ಅವಧಿಗೆ ಗರಿಷ್ಠ 1,00000 ರೂ.ಗಳನ್ನು ಸಾಲದ ಅಗತ್ಯತೆಗಳಿಗೆ ಒದಗಿಸಲಾಗುವುದು. ಅಲ್ಲದೆ ಕರಕುಶಲಕರ್ಮಿಗಳನ್ನು ಉತ್ತೇಜಿಸಲು ಮುದ್ರಾ ಸಾಲದ ಪ್ರಯೋಜನವನ್ನು ಸಾಲದ ಮೊತ್ತದ ಶೇ.20ರಷ್ಟು ಅಂದರೆ ಶೇ. 10,000 ಮೀರದಂತೆ ಹಣಕಾಸಿನ ನೆರವನ್ನು ಒದಗಿಸಲಾಗುವುದು. ಕರಕುಶಲ ಸೇವಾ ಕೇಂದ್ರಗಳನ್ನು ತೆರೆದು, ಕರಕುಶಲಕರ್ಮಿಗಳಿಗೆ ಸಾಲ ಸೌಕರ್ಯ ಯೋಜನೆಗೆ ನೆರವಾಗುತ್ತಿದ್ದು, ಆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ಬ್ಯಾಂಕ್ ಗಳಿಗೆ ಅರ್ಜಿ ನಮೂನೆಗಳನ್ನು ಸಲ್ಲಿಸಲಾಗುತ್ತಿದೆ.
  2. ನಿರ್ಗತಿಕ ಪರಿಸ್ಥಿತಿಗಳಲ್ಲಿ ಕರಕುಶಲಕರ್ಮಿಗಳಿಗೆ ಬೆಂಬಲ(ಪಿಂಚಣಿ ಯೋಜನೆ): ಈ ಯೋಜನೆಯಡಿ ಶಿಲ್ಪಗುರು ಪ್ರಶಸ್ತಿ/ರಾಷ್ಟ್ರೀಯ ಪ್ರಶಸ್ತಿ/ರಾಷ್ಟ್ರೀಯ ಮೆರಿಟ್ ಸರ್ಟಿಫಿಕೇಟ್ ಹೊಂದಿರುವವರು/ರಾಜ್ಯ ಪ್ರಶಸ್ತಿ ಪಡೆದಿರುವ ಕರಕುಶಲಕರ್ಮಿಗಳಿಗೆ ಆರ್ಥಿಕ ಸಹಾಯ ಒದಗಿಸಲಾಗುವುದು. 60 ವರ್ಷಕ್ಕಿಂತ ಕಡಿಮೆ ಇಲ್ಲದ ಮತ್ತು ವಾರ್ಷಿಕ ಆದಾಯ 50,000ಕ್ಕಿಂತ ಕಡಿಮೆ ಇಲ್ಲದವರಿಗೆ ಈ ನೆರವು ಸಿಗಲಿದೆ. ದೇಶೀಯ ಪರಿಸ್ಥಿತಿಗಳಲ್ಲಿ ನುರಿತ ಕರಕುಶಲಕರ್ಮಿಗೆ ಪ್ರತಿ ತಿಂಗಳು 3,500 ರೂ. ಆರ್ಥಿಕ ನೆರವು ನೇಡಲಾಗುವುದು.
  3. ಕರಕುಶಲಕರ್ಮಿಗಳಿಗೆ ವಿಮಾ ಯೋಜನೆ : ಎಂಜೆಜೆಬಿವೈ ಮತ್ತು ಪಿಎಂಎಸ್ ಬಿವೈ ಅಡಿಯಲ್ಲಿ 18ರಿಂದ 50 ವರ್ಷದೊಳಗಿನ ಕರಕುಶಲಕರ್ಮಿಗಳು/ಸಿಬ್ಬಂದಿಗೆ ಜೀವ, ಅಪಘಾತ ಮತ್ತು ಅಂಗವೈಕಲ್ಯತೆ ವ್ಯಾಪ್ತಿಯ ವಿಮೆಯನ್ನು ಒದಗಿಸಲಾಗಿದೆ. 51 ರಿಂದ 59 ವರ್ಷದೊಳಗಿನ ಕರಕುಶಲಕರ್ಮಿಗಳು ಈಗಾಗಲೇ ಆಮ್ ಆದ್ಮಿ ಬಿಮಾ ಯೋಜನೆ (ಎಎಬಿವೈ)ಅಡಿ ನೋಂದಣಿ ಮಾಡಿಕೊಂಡಿದ್ದಾರೆ ಮತ್ತು ಅವರು ಪರಿಷ್ಕೃತ ಆಮ್ ಆದ್ಮಿ ಬಿಮಾ ಯೋಜನೆ (ಕನ್ವರ್ಜಡ್    ಎಎಬಿವೈ) ವ್ಯಾಪ್ತಿಯಲ್ಲಿ ವಿಮಾ ಸೌಕರ್ಯ ಪಡೆಯುತ್ತಾರೆ.
  4. ಎನ್ ಐಒಎಸ್ ಮತ್ತು ಐಜಿಎನ್ಒಯು ಜೊತೆ ಒಡಂಬಡಿಕೆ : ನೇಕಾರರು ಮತ್ತು ಅವರ ಕುಟುಂಬದವರಿಗೆ ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸಲು ಜವಳಿ ಸಚಿವಾಲಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಐಜಿಎನ್ ಒಯು) ಮತ್ತು ರಾಷ್ಟ್ರೀಯ ಮುಕ್ತ ಶಾಲಾ ಕೇಂದ್ರಗಳು(ಎನ್ ಐಒಎಸ್)ಮತ್ತು ಅಭಿವೃದ್ದಿ ಆಯುಕ್ತರ ಕಚೇರಿ(ಕರಕುಶಲ) ಜೊತೆ  ಒಡಂಬಡಿಕೆಗೆ ಸಹಿ ಹಾಕಿವೆ. ಇದರಲ್ಲಿ ಎಸ್ ಸಿ/ಎಸ್ ಟಿ/ಬಿಪಿಎಲ್ ಮತ್ತು ಮಹಿಳಾ ಕರಕುಶಲಕರ್ಮಿಗಳ ಮಕ್ಕಳು ಪಾವತಿಸಿದ ಶೇ.75ರಷ್ಟು ಶುಲ್ಕವನ್ನು ಮರುಪಾವತಿ ಮಾಡಲಾಗುವುದು. ಒಡಂಬಡಿಕೆಯಲ್ಲಿ ಕರಕುಶಲಕರ್ಮಿಗಳು ಮತ್ತು ಅವರ ಮಕ್ಕಳಿಗೆ ವಿಶೇಷ ಕೋರ್ಸ್ ಗಳನ್ನು ಆರಂಭಿಸುವ ಪ್ರಸ್ತಾವವೂ ಇದೆ. ಅದರಂತೆ ಎನ್ ಐ ಒ ಎಸ್, ವಾರಾಣಸಿ ವಲಯದಲ್ಲಿ ಝರಿ ಝರ್ದೋಯಿ ಕಲೆಯಲ್ಲಿ  15 ತರಬೇತಿ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಿದೆ. ಅದು ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತರಬೇತಿ ಸಂಸ್ಥೆಗಳನ್ನು ತೆರೆದಿದೆ. ಈವರೆಗೆ 99 ಪರಿಶಿಷ್ಟ ಜಾತಿಯ ಕರಕುಶಲಕರ್ಮಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಸಂಪೂರ್ಣ ಕಲಿಕೆಯೊಂದಿಗೆ ಅವರು ಆ ಕಲೆಯನ್ನು ಪಾಲಿಸುತ್ತಿದ್ದಾರೆ.

ಜವಳಿ ಸಚಿವಾಲಯ ಕರಕುಶಲಕರ್ಮಿಗಳ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ(ಎನ್ಎಚ್ ಡಿಪಿ) ಮತ್ತು ಸಮಗ್ರ ಕರಕುಶಲ ಕ್ಲಸ್ಟರ್ ಅಭಿವೃದ್ಧಿ ಯೋಜನೆ(ಸಿಎಚ್ ಸಿಡಿಎಸ್) ಅಡಿಯಲ್ಲಿ ನಾನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

ಎನ್ಎಚ್ ಡಿಪಿ ಅಡಿಯಲ್ಲಿ ಈ ಕೆಳಗಿನ ಅಂಶಗಳಿವೆ

  1. ಬೇಸ್ ಲೈನ್ ಸರ್ವೆ ಮತ್ತು ಅಂಬೇಡ್ಕರ್ ಹಸ್ತಶಿಲ್ಪ ವಿಕಾಸ ಯೋಜನೆಯಡಿ ಕರಕುಶಲಕರ್ಮಿಗಳನ್ನು ಒಗ್ಗೂಡಿಸುವುದು
  2. ವಿನ್ಯಾಸ ಮತ್ತು ತಂತ್ರಜ್ಞಾನ ಉನ್ನತೀಕರಣ
  3. ಮಾನವ ಸಂಪನ್ಮೂಲ ಅಭಿವೃದ್ಧಿ
  4. ಕರಕುಶಲಕರ್ಮಿಗಳಿಗೆ ನೇರ ಪ್ರಯೋಜನ
  5. ಮೂಲಸೌಕರ್ಯ ಮತ್ತು ತಂತ್ರಜ್ಞಾನ ಬೆಂಬಲ
  6. ಸಂಶೋಧನೆ ಮತ್ತು ಅಭಿವೃದ್ಧಿ
  7. ಮಾರುಕಟ್ಟೆ ಬೆಂಬಲ ಮತ್ತು ಸೇವೆಗಳು

ಸಿಎಚ್ ಸಿಡಿಎಸ್ ನಲ್ಲಿ ಈ ಕೆಳಗಿನ  ಅಂಶಗಳಿವೆ

  1. ಮೆಗಾ ಕ್ಲಸ್ಟರ್
  2. ಸಮಗ್ರ ಅಭಿವೃದ್ದಿ ಮತ್ತು ಕರಕುಶಲ ಉತ್ತೇಜನ(ಐಡಿಪಿಎಚ್) ಅಡಿಯಲ್ಲಿ ವಿಶೇಷ ಯೋಜನೆಗಳು

ಸರ್ಕಾರ ಉತ್ತರ ಪ್ರದೇಶದಲ್ಲಿ ಕರಕುಶಲಕರ್ಮಿಗಳ ಅಭಿವೃದ್ಧಿಗೆ ಅಂಬೇಡ್ಕರ್ ಹಸ್ತಶಿಲ್ಪ ವಿಕಾಸ ಯೋಜನೆ(ಎಎಚ್ ವಿ ವೈ) ಅಡಿಯಲ್ಲಿ ಕ್ಲಸ್ಟರ್ ಅಭಿವೃದ್ಧಿ ಯೋಜನೆ ಜಾರಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶಕ್ಕೆ 62 ಕ್ಲಸ್ಟರ್ ಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಒಟ್ಟು 31,000 ಕರಕುಶಲಕರ್ಮಿಗಳು ಅದರ ಪ್ರಯೋಜನ ಪಡೆದಿದ್ದಾರೆ. ಸರ್ಕಾರ ಸಿಎಚ್ ಸಿಡಿಎಸ್ ಅಡಿಯಲ್ಲಿ ಉತ್ತರ ಪ್ರದೇಶಕ್ಕೆ ಕರಕುಶಲ ಕಲೆಯ ನಾಲ್ಕು ಮೆಗಾ ಕ್ಲಸ್ಟರ್ ಗಳನ್ನು ಮಿರ್ಜಾಪುರ್-ಭಾಧೋಯ್, ಮೊರಾದಾಬಾದ್, ಬರೇಲಿ ಮತ್ತು ಲಕ್ನೋಗೆ ಅನುಮೋದನೆ ನೀಡಲಾಗಿದೆ. ಅಲ್ಲದೆ 21 ಹೊಸ ವಲಯ ಮಟ್ಟದ ಕ್ಲಸ್ಟರ್ ಗಳನ್ನೂ ಸಹ ಮಂಜೂರು ಮಾಡಲಾಗಿದೆ.

ಪಹಚಾನ್ ಯೋಜನೆಯಡಿ 2019ರ ಮಾರ್ಚ್ 31ರ ವರೆಗೆ 23.68 ಲಕ್ಷ ಕರಕುಶಲಕರ್ಮಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. 50 ಸಾವಿರ ಹೊಸ ಕರಕುಶಲಕರ್ಮಿಗಳು ಪಹಚಾನ್ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. 309 ಕರಕುಶಲ ತರಬೇತಿ ಕಾರ್ಯಕ್ರಮಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳಲಾಗಿದ್ದು, ಅದರಿಂದ 7600 ಕರಕುಶಲಕರ್ಮಿಗಳು ನೇರ ಪ್ರಯೋಜನ ಪಡೆಯಲಿದ್ದಾರೆ.

ಭಾರತೀಯ ಕರಕುಶಲ ಕಲೆಯನ್ನು ಉತ್ತೇಜಿಸುವ ಸಲುವಾಗಿ 5754 ಸುಧಾರಿತ ಟೂಲ್ ಕಿಟ್ (ಯಂತ್ರೋಪಕರಣ) ಗಳನ್ನು ವಿತರಿಸಲಾಗಿದೆ ಮತ್ತು ಎರಡು ಸಾವಿರ ಟೂಲ್ ಕಿಟ್ ಗಳನ್ನು ವಿನ್ಯಾಸ ಮತ್ತು ತಾಂತ್ರಿಕ ಉನ್ನತೀಕರಣ ಯೋಜನೆಯಡಿ ಹಂಚಿಕೆ ಮಾಡಲಾಗಿದೆ. 327 ಕರಕುಶಲ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅವುಗಳಿಂದ 6720 ಕರಕುಶಲಕರ್ಮಿಗಳಿಗೆ ನೇರ ಅನುಕೂಲವಾಗಿದೆ.

63 ಸ್ಥಳೀಯ ಹಾಗೂ 54 ಅಂತಾರಾಷ್ಟ್ರೀಯ ಮಾರುಕಟ್ಟೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅವುಗಳಿಂದ 12075 ಕರಕುಶಲಕರ್ಮಿಗಳಿಗೆ ನೇರ ಅನುಕೂಲವಾಗಿದೆ. 2019-20ನೇ ಸಾಲಿನಲ್ಲಿ 190 ರಾಷ್ಟ್ರೀಯ ಮತ್ತು 80 ಅಂತಾರಾಷ್ಟ್ರೀಯ ಮಾರ್ಕೆಟಿಂಗ್ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ.

 

********


 


(Release ID: 1597963) Visitor Counter : 465


Read this release in: English , Hindi , Bengali