ಉಕ್ಕು ಸಚಿವಾಲಯ

ಜಾಗತಿಕ ಸುರಕ್ಷತೆ ಮತ್ತು ಗುಣಮಟ್ಟ ಮಾನದಂಡಗಳಿಗೆ ಅನುಗುಣವಾಗಿ ಸ್ಪರ್ಧಾತ್ಮಕ, ಪರಿಣಾಮಕಾರಿ, ಪರಿಸರ ಸ್ನೇಹಿ ಉಕ್ಕು ಉದ್ಯಮದ ಬೆಂಬಲಕ್ಕೆ ಉಕ್ಕು ಸಚಿವಾಲಯದ ಹಲವು ಕಾರ್ಯಕ್ರಮ ಉಕ್ಕು: ಭಾರತದ 5 ಟ್ರಿಲಿಯನ್ ಡಾಲರ್ ಗುರಿ ಸಾಧನೆಗೆ ಮಹತ್ವದ್ದು

Posted On: 24 DEC 2019 10:24AM by PIB Bengaluru

ಜಾಗತಿಕ ಸುರಕ್ಷತೆ ಮತ್ತು ಗುಣಮಟ್ಟ ಮಾನದಂಡಗಳಿಗೆ ಅನುಗುಣವಾಗಿ ಸ್ಪರ್ಧಾತ್ಮಕ, ಪರಿಣಾಮಕಾರಿ, ಪರಿಸರ ಸ್ನೇಹಿ ಉಕ್ಕು ಉದ್ಯಮದ  ಬೆಂಬಲಕ್ಕೆ  ಉಕ್ಕು ಸಚಿವಾಲಯದ ಹಲವು ಕಾರ್ಯಕ್ರಮ

ಉಕ್ಕು: ಭಾರತದ 5 ಟ್ರಿಲಿಯನ್ ಡಾಲರ್ ಗುರಿ ಸಾಧನೆಗೆ ಮಹತ್ವದ್ದು

            2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಭಾರತದ ದೂರದೃಷ್ಟಿಯ ಗುರಿ ಸಾಧನೆಗೆ ಪೂರಕವಾಗಿ ಮೂಲಸೌಕರ್ಯ ವಲಯದಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ ಬಂಡವಾಳವನ್ನು ಹೂಡಿಕೆ ಮಾಡಲಾಗುತ್ತಿದೆ. ಅವುಗಳಲ್ಲಿ ಹಲವು ಉಕ್ಕು ಆಧಾರಿತ ವಲಯಗಳಾದ ಸರ್ವರಿಗೂ ವಸತಿ, ಶೇ. 100ರಷ್ಟು ವಿದ್ಯುದೀಕರಣ, ಸರ್ವರಿಗೂ ಕೊಳವೆ ಮಾರ್ಗದ ಮೂಲಕ ನೀರು ಮತ್ತಿತರ ಅಂಶಗಳು ಸೇರಿವೆ. ಉಕ್ಕು ಹಲವು ದೀರ್ಘಕಾಲ ಬಾಳಿಕೆಯ, ತ್ವರಿತವಾಗಿ ಪೂರ್ಣಗೊಳ್ಳುವ,  ಹೆಚ್ಚು ಪರಿಸರದ ಮೇಲೆ ಪರಿಣಾಮ ಬೀರದ ಮತ್ತು ಆರ್ಥಿಕತೆ ಚಲಾವಣೆ ಸೃಷ್ಟಿಸುವ ಹಲವು ಪ್ರಯೋಜನಗಳನ್ನು ಹೊಂದಿದೆ. ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೇರಲು ಉಕ್ಕು ಅತ್ಯಂತ ಮಹತ್ವದ ಪಾತ್ರವಹಿಸಲಿದೆ.

 

https://ci6.googleusercontent.com/proxy/AmK6lPxuffZC5KVJako3bpV-f_RNQCYEwlTZhRSwj1O-Y4BA93_t9bwyeUCS0B-fWZzY13kAcMfWvhwp4Ezzk4ObC8FS0pH1kRyK9PENspuYLwe4yqHZ=s0-d-e1-ft#https://static.pib.gov.in/WriteReadData/userfiles/image/image001BYU0.jpg

 

ಉಕ್ಕು ಸಚಿವಾಲಯದ ಐದು ವರ್ಷಗಳ ಮುನ್ನೋಟ:

      ಐದು ಟ್ರಿಲಿಯನ್ ಆರ್ಥಿಕತೆ ನಿರ್ಮಾಣಕ್ಕೆ ಉಕ್ಕಿನ ಅವಶ್ಯಕತೆ ಇದ್ದು, ಅದರ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡು ಉಕ್ಕು ಸಚಿವಾಲಯ ಭಾರತೀಯ ಉಕ್ಕು ವಲಯವನ್ನು ಮುನ್ನಡೆಸಲು ಮತ್ತು ಅದಕ್ಕೊಂದು ಹೊಸ ರೂಪ ನೀಡಲು ಮುನ್ನೋಟವನ್ನು ರೂಪಿಸಿದೆ. ಆ ಮುನ್ನೋಟದೊಂದಿಗೆ ಭಾರತದ ಪ್ರಗತಿಯನ್ನು ಕೊಂಡೊಯ್ಯುವ ಜೊತೆಗೆ ಭಾರತೀಯ ಉಕ್ಕು ಉದ್ಯಮದಲ್ಲಿ ಭಾಗಿಯಾಗಿರುವ ಎಲ್ಲರ ಆಶೋತ್ತರಗಳನ್ನು ಈಡೇರಿಸಲು ಸಮಗ್ರ ನೀತಿ ನಿರೂಪಣೆ ಅಧ್ಯಯನದ ಮೂಲಕ ಮತ್ತು ಸಮಾಲೋಚನೆಗಳೊಂದಿಗೆ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

  • ರಾಷ್ಟ್ರೀಯ ಉಕ್ಕು ನೀತಿ(ಎನ್ ಎಸ್ ಪಿ) 2017: ಉಕ್ಕು ಸಚಿವಾಲಯ ಇದನ್ನು ಅಂತಿಮಗೊಳಿಸಿದೆ ಮತ್ತು 2017ರ ಮೇ 8ರಂದು ಅದರ ಅಧಿಸೂಚನೆ ಹೊರಡಿಸಿದೆ. ಎನ್ ಎಸ್ ಪಿ ಭಾರತೀಯ ಉಕ್ಕು ವಲಯ ಆಧುನಿಕ ಭಾರತದಲ್ಲಿ ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ಈ ವಲಯದಲ್ಲಿ ಆರೋಗ್ಯಕರ ಸುಸ್ಥಿರ ಬೆಳವಣಿಗೆ ಉತ್ತೇಜನಕ್ಕೆ ಸಜ್ಜುಗೊಳಿಸುತ್ತಿದೆ.
  • ನೀತಿ ಆಯೋಗದ ಪ್ರಕಟಣೆಗಳೂ ಸೇರಿದಂತೆ ಉನ್ನತ ಮಟ್ಟದ ಸಂಸ್ಥೆಗಳಿಂದ ಪ್ರಕಟಣೆಗಳನ್ನು ಹೊರಡಿಸಲಾಗಿದೆ. ಉದಾಹರಣೆಗೆ ‘ಹೊಸ ಉಕ್ಕು ನೀತಿ ಅಗತ್ಯತೆ – 2016’ ‘ಉಕ್ಕು ಉದ್ಯಮದಲ್ಲಿ ಸಂಪನ್ಮೂಲಗಳನ್ನು ತ್ಯಾಜ್ಯ ಹಾಗೂ ಮತ್ತಿತರ ವಸ್ತುಗಳ ಸಂಸ್ಕರಣೆ ಮೂಲಕ ಪರಿಣಾಮಕಾರಿ ಬಳಕೆ ಕುರಿತ ಕಾರ್ಯತಂತ್ರ ವರದಿ’.
  • ಉಕ್ಕು ಮೌಲ್ಯ ಸರಣಿಯುದ್ಧಕ್ಕೂ 90ಕ್ಕೂ ಅಧಿಕ ಸಂಬಂಧಿಸಿದವರ ಜೊತೆ ಸಮಾಲೋಚನೆಗಳನ್ನು ನಡೆಸಲಾಗಿದೆ – ಕಚ್ಚಾ ಸಾಮಗ್ರಿ ಪೂರೈಕೆದಾರರು: ಪ್ರಾಥಮಿಕ ದ್ವಿತೀಯ ಮತ್ತು ಕೊನೆಯ ಹಂತದ ಬಳಕೆದಾರರು ಸಾಗಣೆ ಮತ್ತು ಇತರೆ ಉದ್ಯಮದಾರರು.
  • ಚಿಂತನ್ ಶಿವರ್’ -  ಉಕ್ಕು ಉದ್ಯಮದಲ್ಲಿರುವ 900ಕ್ಕೂ ಅಧಿಕ ಪ್ರತಿನಿಧಿಗಳನ್ನು ಒಗ್ಗೂಡಿಸಿಕೊಂಡು ಒಂದು ಚಿಂತನಾ ಕಾರ್ಯಾಗಾರ.
  • ಅಗತ್ಯ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆಗಳು ಮತ್ತು ಚರ್ಚೆಗಳು.

ಭಾರತೀಯ ಉಕ್ಕು ಉದ್ಯಮವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ವಿಸ್ತೃತ ಅಧ್ಯಯನಗಳು ಮತ್ತು ಸಮಾಲೋಚನೆಗಳನ್ನು ನಡೆಸಲಾಗಿದೆ ಮತ್ತು ಭಾರತ 5 ಟ್ರಿಲಿಯನ್ ಆರ್ಥಿಕತೆ ಹೊಂದಲು ಉಕ್ಕು ಉದ್ಯಮ ಅತ್ಯಂತ ಪ್ರಮುಖವಾಗಿದ್ದು, ಅದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಬೇಕಾಗಿದ್ದು, ಅದಕ್ಕಾಗಿ ಪರಿಸರ ಸುಸ್ಥಿರ ಮಾದರಿಗಳನ್ನು ಕೈಗೊಳ್ಳಬೇಕಾಗಿದೆ ಹಾಗೂ ಉಕ್ಕು ಸಚಿವಾಲಯ ಸಮಗ್ರ ಮುನ್ನೋಟವನ್ನು ಹೊರಡಿಸಿದೆ.

ಐದು ಟ್ರಿಲಿಯನ್ ಆರ್ಥಿಕತೆ ಹೊಂದಲು 160 ಮಿಲಿಯನ್ ಟನ್ ಉಕ್ಕಿನ ನಿರೀಕ್ಷಿತ ಬೇಡಿಕೆಯನ್ನು ಈಡೇರಿಸಬೇಕಾಗಿದೆ. ಅದನ್ನು ಜಾಗತಿಕ ಸುರಕ್ಷತೆ ಮತ್ತು ಗುಣಮಟ್ಟ ಮಾನದಂಡಗಳಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಪರಿಣಾಮಕಾರಿ ಪರಿಸರ ಸ್ನೇಹಿ ಉಕ್ಕು ಉದ್ಯಮ ಕ್ರಮಗಳನ್ನು ಕೈಗೊಳ್ಳಲಾಗಿದೆ.

https://ci4.googleusercontent.com/proxy/PB1_S_uRzNOym1-eQA1q448JqhjJ9YzA1OQtTIFsyyhCt8_ZKl8az_f0Qy8qyOR_g-Rk1lSgmmgm7QnFqMdfldmzjb9V5XooxfbU-6kBRFqN3qHYZWuw=s0-d-e1-ft#https://static.pib.gov.in/WriteReadData/userfiles/image/image0026D3D.jpg

ಐದು ವರ್ಷಗಳ ಮುನ್ನೋಟ ಸಾಧನೆಗೆ ಮಾರ್ಗಸೂಚಿ

            ಉಕ್ಕು ಸಚಿವಾಲಯದ 5 ವರ್ಷಗಳ ಮುನ್ನೋಟದಲ್ಲಿ ವಲಯದ ಐದು ವಿಸ್ತೃತ ಪ್ರದೇಶಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಮುನ್ನೋಟದಲ್ಲಿ ಉಲ್ಲೇಖಿಸಿರುವ ಅಂಶಗಳ ಸಾಧನೆಗೆ ಸಚಿವಾಲಯ ಪ್ರತಿ ಐದು ಅಂಶಗಳಿಗಾಗಿ 11 ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

https://ci4.googleusercontent.com/proxy/afLKWVuJO7KvYjA6fzU74tuVuJ5q-oartM61bdnx79ZZeWwoFqg8mjE-L2IS04VvzOi9B82qd1MCIIQTrwo1AyiPkNR6LbX6knjjmux2xmIwwMxEfSVW=s0-d-e1-ft#https://static.pib.gov.in/WriteReadData/userfiles/image/image003S5LG.jpg

  1. ಮೇಕ್ ಇನ್ ಸ್ಟೀಲ್ – ಬೇಡಿಕೆ ಸೃಷ್ಟಿಗೆ ಉತ್ತೇಜನ ನೀಡಲು ಉಕ್ಕು ಬಳಕೆಯನ್ನು ಹೆಚ್ಚಿಸಲು ಪ್ರೇರೇಪಿಸುವುದು.
  2. ಉಕ್ಕು ವಲಯದ ವ್ಯಾಪಾರ ಸಮತೋಲನ ಸುಧಾರಿಸುವುದು.
  3. ಉತ್ತಮ ವರ್ಗದ ಗ್ರೀನ್ ಫೀಲ್ಡ್ ಸಾಮರ್ಥ್ಯದ ಮೂಲಕ ಪೂರೈಕೆ ಮಾಡುವುದು.
  4. ಮೌಲ್ಯ ವೃದ್ಧಿಗೆ ಆದ್ಯತೆ ನೀಡಿ, ಉಕ್ಕು ಕ್ಲಸ್ಟರ್ ಗಳನ್ನು ಸ್ಥಾಪಿಸುವುದು.
  5. ಕಚ್ಚಾ ಸಾಮಗ್ರಿ ಉತ್ಪಾದನೆ ಹೆಚ್ಚಿಸುವುದು(ಗಣಿಗಾರಿಕೆಯಲ್ಲಿ ಡಿಜಿಟಲೀಕರಣಕ್ಕೆ ಒತ್ತು)
  6. ದೇಶೀಯ ಉತ್ಪಾದನೆಗೆ ಉತ್ತೇಜನ ಮತ್ತು ಉಕ್ಕು ಉತ್ಪನ್ನಗಳ ಸರಕು ಖರೀದಿ
  7. ಉಕ್ಕು ವಲಯವನ್ನು ಪರಿಸರಸ್ನೇಹಿಯನ್ನಾಗಿ ವರ್ಗಾಯಿಸಲು ಉತ್ತೇಜಿಸುವುದು
  8. ಭಾರತೀಯ ಉಕ್ಕು ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು.
  9. ಭಾರತೀಯ ಉಕ್ಕು ವಲಯದಲ್ಲಿ ಸುರಕ್ಷತೆ ಮತ್ತು ಸಿಬ್ಬಂದಿಯ ಕಲ್ಯಾಣಕ್ಕೆ ಉತ್ತೇಜನ.
  10. ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಹಕಾರ.
  11. ಸಾಕಷ್ಟು ಮೂಲಸೌಕರ್ಯ ಖಾತ್ರಿ ಮತ್ತು ಉಕ್ಕು ವಲಯಕ್ಕೆ ಅಗತ್ಯ ಸಾರಿಗೆ ಸಾಮರ್ಥ್ಯವೃದ್ಧಿ.

ಹೆಚ್ಚಿನ ಗಮನಹರಿಸಲು ಮತ್ತು ನಿಗದಿತ ಫಲಿತಾಂಶವನ್ನು ಪಡೆಯುವ ಸಲುವಾಗಿ ಸಚಿವಾಲಯ ಈ ಉಪಕ್ರಮಗಳಲ್ಲಿ ಐದಕ್ಕೆ ಆದ್ಯತೆ ನೀಡಿದೆ. ಅದರಲ್ಲಿ ವ್ಯಾಪಾರ/ ಜೀವನಕ್ಕೆ ಪೂರಕ ವಾತಾವರಣದ ಮೇಲೆ ಪರಿಣಾಮ, ಉದ್ಯೋಗಸೃಷ್ಟಿ ಅಂಶಗಳು ಆರ್ಥಿಕ ಬೆಳವಣಿಗೆಯಲ್ಲಿ ಅತ್ಯಂತ ಗಂಭೀರವಾದವು.

https://ci4.googleusercontent.com/proxy/KVlh9DJCvcEkvlsYbdS_IreEACBMMW7BvrS-v5EHLyHz4o45NYb4usGW2kcw1VZSVJSEV7rEDwrSJj81ufBSdGDkpgDcr8yEvsIzgSuGhYt2AERBuOBv=s0-d-e1-ft#https://static.pib.gov.in/WriteReadData/userfiles/image/image004K1V9.jpg

ನೂರು ದಿನಗಳ ಉಪಕ್ರಮಗಳಿಂದ ಗರಿಷ್ಠ ಪರಿಣಾಮ

ಈ ಎಲ್ಲ ಉಪಕ್ರಮಗಳಿಂದಾಗಿ ಸರ್ಕಾರ ತನ್ನ ನೂರು ದಿನಗಳ ಆಡಳಿತದಲ್ಲಿ ಉಕ್ಕು ಸಚಿವಾಲಯದ ಈ ನಾಲ್ಕು ಪ್ರಮುಖ ಅಂಶಗಳಿಗೆ ಆದ್ಯತೆ ನೀಡಿದೆ. ಆ ಉಪಕ್ರಮಗಳ ಪ್ರಗತಿಯ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ.

https://ci5.googleusercontent.com/proxy/XMiG9Z7o9sN4buLINA8MvzXlY5zhiBruuZOKJMzqXLZd_2AJNi4svoMWVvIRZwi96u34KkHsLJoMWRhpvYDqf9E5eafAbPM-m1_y1mab2uXQWF7V6bDp=s0-d-e1-ft#https://static.pib.gov.in/WriteReadData/userfiles/image/image005GJOT.jpg

ಎ) ಉಕ್ಕು ಕ್ಲಸ್ಟರ್ ಸೃಷ್ಟಿಗೆ ಒಪ್ಪಂದ ನೀತಿ – ಉಕ್ಕು ವಲಯದಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳಿಗೆ ಉತ್ತೇಜನ ನೀಡುವ ಗುರಿಯೊಂದಿಗೆ ಉಕ್ಕು ವಲಯದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ನೀಡುವುದಲ್ಲದೆ, ಆಮದು ತಗ್ಗಿಸುವ ಮತ್ತು ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ. ಅದಕ್ಕಾಗಿ ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ ಮತ್ತು ಸಂಬಂಧಿಸಿದವರ ಸಮಾಲೋಚನೆಗಾಗಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಇದಕ್ಕಾಗಿ ಸಂಪುಟ ಟಿಪ್ಪಣಿ ಸಿದ್ಧಪಡಿಸಲಾಗಿದ್ದು, ಸಂಪುಟದ ಅನುಮೋದನೆಯ ನಂತರ ನೀತಿಯನ್ನು ಪ್ರಕಟಿಸಲಾಗುವುದು.

ಬಿ) ಉಕ್ಕು ಸ್ಕ್ರ್ಯಾಪ್ (ತುಣುಕು ಅಥವಾ ಚೂರು) ನೀತಿ- ಉಕ್ಕು ಉತ್ಪಾದಕರಿಗೆ ಅಗತ್ಯ ಚೂರು (ಸ್ಕ್ಯಾಪ್) ಲಭ್ಯವಾಗುವುದನ್ನು ಖಾತ್ರಿಪಡಿಸಲು ಮತ್ತು ಅದರಿಂದ ಭಾರತದ ಉಕ್ಕು ಉದ್ಯಮದಲ್ಲಿ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ ಜೊತೆಗೆ ಆಮದನ್ನು ತಗ್ಗಿಸಲಿದೆ. ಉಕ್ಕು ಸ್ಕ್ಯ್ರಾಪ್ ನೀತಿಯನ್ನು 2019ರ ನವೆಂಬರ್ 7ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಅದರಲ್ಲಿ ಸಂಬಂಧಿಸಿದವರ ಪಾತ್ರಗಳು ಮತ್ತು ಹೊಣೆಗಾರಿಕೆಗಳ(ಅಗ್ರಿಗೇಟರ್ಸ್, ಸಂಸ್ಕರಣಾ ಕೇಂದ್ರಗಳು) ಮತ್ತು ಸರ್ಕಾರಿ ಸಂಸ್ಥೆಗಳು(ಉದಾಹರಣೆಗೆ ಎಂಒಇಎಫ್ ಸಿಸಿ, ಸಿಪಿಸಿಬಿ) ವ್ಯಾಖ್ಯಾನಿಸಲಾಗಿದೆ.

ಸಿ) ಉಕ್ಕು ಮತ್ತು ಅದಿರು ವಲಯದ ಸುರಕ್ಷತೆಗೆ ಮಾರ್ಗಸೂಚಿಗಳು – ಉಕ್ಕು ಸಚಿವಾಲಯ ಉಕ್ಕು ಮತ್ತು ಅದಿರುವ ವಲಯದಲ್ಲಿ ಸುರಕ್ಷತೆಗೆ ಅಳವಡಿಸಿಕೊಳ್ಳಬೇಕಿರುವ ಮಾದರಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಕಾರ್ಯಕಾರಿ ಸಮಿತಿಯನ್ನು ರಚಿಸಿತ್ತು. ಅದರಲ್ಲಿ ಎಲ್ಲ ದೊಡ್ಡ ಮತ್ತು ಸಣ್ಣ ಉಕ್ಕು ಮತ್ತು ಅದಿರು ಘಟಕಗಳು ಅಳವಡಿಸಿಕೊಳ್ಳಬೇಕಿರುವ ಸುರಕ್ಷತಾ ಕ್ರಮಗಳನ್ನು ವಿವರಿಸಲಾಗಿತ್ತು. ಅದರಡಿ ಆರೋಗ್ಯಕರ ಕೆಲಸ ಮಾಡುವ ವಾತಾವರಣ ಖಾತ್ರಿಪಡಿಸುವುದು, ಸಂಭಾವ್ಯ ಅಪಾಯಗಳನ್ನು ತಗ್ಗಿಸುವುದು ಮತ್ತು ದುಡಿಯುವ ಸ್ಥಳಗಳಲ್ಲಿ ಅಪಾಯಗಳನ್ನು ತಪ್ಪಿಸುವುದನ್ನು ಖಾತ್ರಿಪಡಿಸಬೇಕು. 25 ಸುರಕ್ಷತಾ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಅವುಗಳನ್ನು ಅದಿರು ಮತ್ತು ಉಕ್ಕು ವಲಯದಲ್ಲಿ ಅಳವಡಿಕೆಗೆ ಉಕ್ಕು ಸಚಿವಾಲಯದ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಡಿ) ಉಕ್ಕು ಆಮದು ಮೇಲ್ವಿಚಾರಣಾ ವ್ಯವಸ್ಥೆ(ಎಸ್ಐಎಂಎಸ್) – ಉಕ್ಕು ಆಮದು ಮೇಲ್ವಿಚಾರಣೆಗೆ ಒಂದು ಸಾಂಸ್ಥಿಕ ಕಾರ್ಯತಂತ್ರ ಮತ್ತು ಡಿಜಿಎಫ್ ಟಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಂಪೂರ್ಣ ಆನ್ ಲೈನ್ ವ್ಯವಸ್ಥೆಯಾಗಿದ್ದು, ಉದ್ದೇಶಿತ ಉಕ್ಕು ಆಮದಿಗೆ ಮುಂಗಡ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಈ ಮಾಹಿತಿ ಭಾರತೀಯ ದೇಶೀಯ ಉಕ್ಕು ಉದ್ಯಮಕ್ಕೆ ಮಾರುಕಟ್ಟೆ ಸ್ಥಿತಿಗತಿಗಳನ್ನು ಆಧರಿಸಿ ಕ್ರಿಯಾಶೀಲವಾಗಿ ಸ್ಪಂದಿಸಲು ನೆರವಾಗಲಿದೆ. ಎಸ್ಐಎಂಎಸ್ ವೇದಿಕೆಯನ್ನು 2019ರ ಸೆಪ್ಟೆಂಬರ್ 16ರಂದು ಉದ್ಘಾಟಿಸಲಾಯಿತು. 2019ರ ನವೆಂಬರ್ 1 ರಿಂದ ಬಂದರು ಪ್ರವೇಶದ ವೇಳೆ ಈಗಾಗಲೇ ಆ ವ್ಯವಸ್ಥೆ ಜಾರಿಗೆ ಬಂದಿದೆ.

        ಈ ನಾಲ್ಕು ಉಪಕ್ರಮಗಳಲ್ಲದೆ, ಉಕ್ಕು ಸಚಿವಾಲಯ ಹೆಚ್ಚುವರಿಯಾಗಿ ಆರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಆ ಉಪಕ್ರಮಗಳೆಂದರೆ

ಎ) ಕಚ್ಚಾ ಸಾಮಗ್ರಿ ಭದ್ರತೆ: ಉಕ್ಕು ವಲಯಕ್ಕೆ ಅಲ್ಪಕಾಲದ ಮತ್ತು ದೀರ್ಘಕಾಲದ ಅಗತ್ಯ ಕಚ್ಚಾ ಸಾಮಗ್ರಿ ಖಾತ್ರಿಪಡಿಸಲು ಉಕ್ಕು ಸಚಿವಾಲಯ, ಗಣಿ ಸಚಿವಾಲಯದ ಜೊತೆ ಅತ್ಯಂತ ನಿಕಟವಾಗಿ ಕಾರ್ಯನಿರ್ವಹಿಸಿ, ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

        ಗಣಿ ನಿಯಮಗಳಿಗೆ ಐದು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದ್ದು, ಅವುಗಳನ್ನು ಗಣಿ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅವುಗಳಲ್ಲಿ ಪ್ರಮುಖ ಪ್ರಸ್ತಾವಗಳು ಈ ಕೆಳಗಿನಂತಿವೆ.

  • ನಿಯಮ 3 (ಸರ್ಕಾರಿ ಕಂಪನಿಗಳ ಗಣಿಗಾರಿಕೆ ನಿಯಮ) 2015 ಅಡಿಯಲ್ಲಿ “ಸಾಧ್ಯತೆ” (ಮೇ) ಶಬ್ದದ ಬಲದಿಗೆ “ಅಗತ್ಯ” (ಶಲ್ ) ಎನ್ನುವ ಪದ ಸೇರಿಸಬೇಕು, ಇದರಿಂದ ಅನಿಶ್ಚಿತತೆ ದೂರವಾಗಲಿದೆ.
  • ಗೌರವ ಧನವನ್ನು (ರಾಯಲ್ಟಿ) ಶೇ. 15 ರಿಂದ ಶೇ.5ಕ್ಕೆ ಇಳಿಸುವ ಪ್ರಸ್ತಾವ ಸಲ್ಲಿಸಲಾಗಿದ್ದು, ಆ ಮೂಲಕ ಕಡಿಮೆ ದರ್ಜೆಯ ಚೂರುಗಳ ಬಳಕೆಗೆ ಪೆಲಿಟೈಷೇಷನ್ ಮತ್ತು ಬೆನಿಫೈಷನ್ ಗೆ ಪ್ರೋತ್ಸಾಹ ನೀಡುವುದು.
  • ಎಸ್ಎಐಎಲ್ ನಲ್ಲಿ 70 ಮಿಲಿಯನ್ ಟನ್ ಕಬ್ಬಿಣದ ಅದಿರು (ಸ್ಲೈಮ್ ಸೇರಿದಂತೆ) ವಿಲೇವಾರಿ ಮಾಡುವುದು.
  • ಗಣಿ ಗುತ್ತಿಗೆ ಪ್ರದೇಶಗಳ ಗಾತ್ರವನ್ನು ಹೆಚ್ಚಿಸುವುದು.

ಬಿ) ಸಾರ್ವಜನಿಕ ಕೇಂದ್ರ ಸರ್ಕಾರಿ ಒಡೆತನದ ಉಕ್ಕು ಉದ್ಯಮದ ಗಣಿಗಳಲ್ಲಿ ಡಿಜಿಟಲೀಕರಣ- ಗಣಿ ವಲಯದಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ನಿರ್ವಹಣಾ ಮತ್ತು ಕಡಿಮೆ ವೆಚ್ಚದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದನ್ನು ಉತ್ತೇಜಿಸಲು ಕೇಂದ್ರ ಸರ್ಕಾರಿ ಒಡೆತನದ ಎಲ್ಲ ಸಾರ್ವಜನಿಕ  ಉಕ್ಕು ಕಂಪನಿಗಳಲ್ಲಿ ಡಿಜಿಟಲೀಕರಣವನ್ನು ಕೈಗೊಳ್ಳಲಾಗಿದೆ. ದೇಶದ ಗಣಿ ವಲಯದ ಕಬ್ಬಿಣದ ಅದಿರು ವಿಭಾಗದಲ್ಲಿ ಡಿಜಿಟಲೀಕರಣದ ಪಯಣಕ್ಕೆ ವಿಸ್ತೃತ ಮಾರ್ಗಸೂಚಿಯ ಮೂಲಕ ಆರಂಭಿಸಲಾಗಿದ್ದು, ಅದರಿಂದ ಬಳಕೆ, ಉತ್ಪಾದನೆ ಮತ್ತು ಸುರಕ್ಷತೆಯಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರಬಹುದಾಗಿದೆ. ಪ್ರಮುಖ ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಒಳಗೊಂಡಂತೆ ಎರಡು ಹಂತಗಳಲ್ಲಿ ಈ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಎನ್ಎಂಡಿಸಿಯ ಡಿಜಿಟಲ್ ಲೈಟ್ ಹೌಸ್ ಯೋಜನೆಯಲ್ಲಿ ಗುರುತಿಸುವಿಕೆ ಮತ್ತು ಸಾಂಸ್ಥಿಕ ರೂಪಕ್ಕೆ ಒತ್ತು ನೀಡಲಾಗಿದ್ದು, ಕಾರ್ಯನಿರ್ವಹಣೆ ವಿಧಾನಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ.

ಸಿ) ನೋಮುಂದಿ ನಿಕ್ಷೇಪ ಉಪಕ್ರಮ – ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಮ್(ಛೈಬಾಸಾ) ಜಿಲ್ಲೆಯ ನೋಮುಂದಿ ನಿಕ್ಷೇಪದಲ್ಲಿ ಸಾಮಾಜಿಕ ಮಾನದಂಡಗಳಿದ್ದರೂ ಸಹ ಈ ಪ್ರದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳು(ಕಬ್ಬಿಣದ ಅದಿರು) ಶ್ರೀಮಂತವಾಗಿದೆ ಎಂಬುದು ಪ್ರತಿಫಲಗೊಂಡಿಲ್ಲ.  ಎಸ್ಎಐಎಲ್, ಟಾಟಾ ಸ್ಟೀಲ್ ಸೇರಿದಂತೆ ಬಹುದೊಡ್ಡ ಸಂಸ್ಥೆಗಳು ಸಾಕಷ್ಟು ಅನುಭವವನ್ನು ಹೊಂದಿದ್ದು, ಅವುಗಳು ಈ ಪ್ರದೇಶದ ಸಾಮಾಜಿಕ ಪರಿವರ್ತನೆಗೆ ಕೊಡುಗೆ ನೀಡಬಲ್ಲವು. ಪಶ್ಚಿಮ ಸಿಂಗ್ ಭೂಮ್ ನ ಡೆಪ್ಯುಟಿ ಕಮಿಷನರ್ ಅಧ್ಯಕ್ಷತೆಯಲ್ಲಿ ಎಸ್ಎಐಎಲ್, ಟಾಟಾ ಸ್ಟೀಲ್ ಮತ್ತು ಉಕ್ಕು ಸಚಿವಾಲಯದ ಪ್ರತಿನಿಧಿಗಳನ್ನು ಒಳಗೊಂಡಂತೆ ಕೋರ್ ಟೀಮ್ ಅನ್ನು ರಚಿಸಲಾಗಿದೆ. ಈ ಕಾರ್ಯಕ್ರಮ ತಂತ್ರಜ್ಞಾನ, ಸಂಪನ್ಮೂಲ ಮತ್ತು ಪ್ರಯತ್ನಗಳನ್ನು ಒಗ್ಗೂಡಿಸಿ, ಸಹಭಾಗಿತ್ವಕ್ಕೆ ಗಮನಹರಿಸುತ್ತದೆ ಮತ್ತು ಆ ಮೂಲಕ ಆರ್ಥಿಕತೆ ಮತ್ತು ಆಡಳಿತದಲ್ಲಿ ಜನರು ಪಾಲ್ಗೊಳ್ಳುವುದನ್ನು ಪ್ರೇರೇಪಿಸುತ್ತದೆ.

ಡಿ) ಉಕ್ಕು ಸಿಪಿಎಸ್ಇಎಸ್ ಗಳ ಸಿಬ್ಬಂದಿಗೆ ಜನಸಂಪರ್ಕ – ಬಹುತೇಕ ಸಂಸ್ಥೆಗಳ ಯಶಸ್ಸಿಗೆ ಜನರು ಅತ್ಯಂತ ಪ್ರಮುಖ ಪಾಲುದಾರರು. ಅದು ಉದ್ಯೋಗಿಗಳ ಆಧಾರಿತ ಉಕ್ಕು ವಲಯದಲ್ಲಿ ಇನ್ನು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಆದ್ದರಿಂದ ಉದ್ಯೋಗಿಗಳಿಗೆ ಸಂಸ್ಥೆಗಳು ಹೆಚ್ಚಿನ ಒತ್ತು ನೀಡಬೇಕಾಗಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಇದಕ್ಕಾಗಿ ಉಕ್ಕು ಸಿಪಿಎಸ್ಇಎಸ್ ಗಳಲ್ಲಿ ಬಹು ವಿಧದ ಕಾರ್ಯತಂತ್ರಗಳನ್ನು ಕೈಗೊಳ್ಳಲಾಗಿದೆ. ಎಸ್ಎಐಎಲ್ ನಲ್ಲಿ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ ಮತ್ತು ಅಧಿಕಾರೇತರ 2017ರಲ್ಲಿ ವೇತನ ಪರಿಷ್ಕರಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೂರನೇ ಪಿಆರ್ ಸಿ ಜಾರಿಗೊಳಿಸಲಾಗಿದೆ.

ಡಿ) ಉಕ್ಕು ಸಿಪಿಎಸ್ಇಎಸ್ ಆಸ್ಪತ್ರೆಗಳೊಂದಿಗೆ ಆಯುಷ್ಮಾನ್ ಭಾರತ್ ಯೋಜನೆ ಸಮನ್ವಯ - ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಆಯುಷ್ಮಾನ್ ಭಾರತ ಯೋಜನೆಯನ್ನು 2018ರಲ್ಲಿ ಆರಂಭಿಸಲಾಯಿತು. ಅದರಡಿ ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ರಕ್ಷಣೆಗೆ ಪ್ರತಿ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ವ್ಯಾಪ್ತಿಯ ವರೆಗೆ ವಿಮಾ ಸೌಕರ್ಯ ಒದಗಿಸಲಾಗುವುದು. ಎಸ್ಎಐಎಲ್ 3000ಕ್ಕೂ ಅಧಿಕ ಹಾಸಿಗೆಗಳ ಆಸ್ಪತ್ರೆಯನ್ನು ಉದ್ಯೋಗಿಗಳು ಅವರ ಕುಟುಂಬದವರು ಮತ್ತಿತರರಿಗೆ ನಿರ್ವಹಿಸುತ್ತಿದೆ.  ಈ ಎಸ್ಎಐಎಲ್ ಆಸ್ಪತ್ರೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಸಂಯೋಜಿಸಲಾಗಿದ್ದು, ಅವರಿಗೆ ಹಾಲಿ ಲಭ್ಯವಿರುವ ಯೋಜನೆಗಳ ಜೊತೆ ಸೇರ್ಪಡೆಗೊಳಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಈ ಆಸ್ಪತ್ರೆಗಳ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

ಇ) ಉಕ್ಕು ಬಳಕೆಗೆ ಉತ್ತೇಜನ –ಉಕ್ಕು ವಲಯ ಹಲವು ಪ್ರಯೋಜನಗಳನ್ನು ಒದಗಿಸುತ್ತಿದೆ ಮತ್ತು ಉಕ್ಕು ವಲಯವನ್ನು ಪರಿಸರಸ್ನೇಹಿ ಸುಸ್ಥಿರಗೊಳಿಸಲು ಪರಿವರ್ತನೆ ಕೈಗೊಂಡಿದೆ. ಅದಕ್ಕಾಗಿ ದೇಶದಲ್ಲಿ ಉಕ್ಕು ಬಳಕೆಯನ್ನು ಉತ್ತೇಜಿಸುವುದು ಅತ್ಯಂತ ಪ್ರಮುಖವಾಗಿದೆ. ದೀಶೀಯ ಉಕ್ಕು ಬೇಡಿಕೆಯನ್ನು ಹೆಚ್ಚಿಸಲು ಹಲವು ಉಪಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅವುಗಳೆಂದರೆ

  • ಕಾರ್ಯದರ್ಶಿಗಳ ಸಮಿತಿಯ(ಸಿಒಎಸ್) ಕರಡು ಟಿಪ್ಪಣಿಯನ್ನು ಅಂತರ ಸಚಿವಾಲಯ ಸಮಾಲೋಚನೆಗೆ ಕಳುಹಿಸಲಾಗಿದೆ. ಆ ಟಿಪ್ಪಣಿ ಅಡಿಯಲ್ಲಿ ಉಕ್ಕು ಆಧಾರಿತ ನಿರ್ಮಾಣ ಸಂಹಿತೆಗಳ ಹೆಚ್ಚುವರಿ/ಪರಿಷ್ಕೃತ ಮಾರ್ಗದರ್ಶಿ ಪ್ರಸ್ತಾವಗಳು ಮತ್ತು ಉಕ್ಕು ಬಳಕೆಯನ್ನು ಉತ್ತೇಜಿಸಲು ಅಗತ್ಯ ಟೆಂಡರ್ ದಾಖಲೆಗಳ ಪ್ರಸ್ತಾವವನ್ನು ಸೇರಿಸಲಾಗಿದೆ. ಅಲ್ಲದೆ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾರ್ಯದಲ್ಲಿ ಉಕ್ಕು ಬಳಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.
  • ‘ಇಸ್ಪತಿ ಇರಾದ’ ಹೆಸರಿನಲ್ಲಿ ಸಹಭಾಗಿತ್ವ ಬ್ರಾಂಡಿಂಗ್ ಅಭಿಯಾನ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಲೋಗೋ ಪೋರ್ಟಲ್ ಆರಂಭಿಸಲಾಗಿದೆ ಮತ್ತು ಸಂವಹನಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಅಂಬಾಸಿಡರ್ ಅನ್ನಾಗಿ ಪಿ.ವಿ. ಸಿಂಧು ಅವರನ್ನು ಆಯ್ಕೆ ಮಾಡಲಾಗಿದೆ.
  •  ಹಲವು ಸಚಿವಾಲಯಗಳು/ಇಲಾಖೆಗಳಿಗೆ ಸರ್ಕಾರಿ ಯೋಜನೆಗಳಲ್ಲಿ ಉಕ್ಕು ಬಳಕೆ ಹೆಚ್ಚಿಸಲು ಪತ್ರಗಳನ್ನು ಕಳುಹಿಸಲಾಗಿದೆ.
  • ಕಟ್ಟಡ ಮತ್ತು ಸೇತುವೆ ನಿರ್ಮಾಣ ಯೋಜನೆಗಳಲ್ಲಿ ಮತ್ತು ಉಕ್ಕು ಅಡೆತಡೆ(ಸ್ಟೀಲ್ ಕ್ರ್ಯಾಶ್ ಬ್ಯಾರಿಯರ್) ಗಳನ್ನು ಅಳವಡಿಸಲು ಹೆಚ್ಚಾಗಿ ಉಕ್ಕು ಬಳಕೆ ಮಾಡುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಮನವಿ ಕಳುಹಿಸಲಾಗಿದೆ.

        ಐಎನ್ಎಸ್ ಡಿಎಜಿ, ಎಸ್ಎಐಎಲ್-ಸಿಇಟಿ, ಎಂಇಸಿಒಎನ್, ಎಚ್ಎಸ್ ಸಿಎಲ್, ಐಎಸ್ಎ, ವಿನ್ಯಾಸಕಾರರು, ಬಿಲ್ಡರ್ ಗಳು ಮತ್ತು ಗುತ್ತಿಗೆದಾರರ ಜೊತೆ ಸಮಾಲೋಚನೆಗಳನ್ನು ನಡೆಸಿ, ವಾಣಿಜ್ಯ ಮತ್ತು ವಸತಿ ಉದ್ದೇಶಗಳ ನಿರ್ಮಾಣದಲ್ಲಿ ಹೆಚ್ಚಿನ ಉಕ್ಕು ಬಳಕೆಗೆ ಕೋರಲಾಗಿದೆ.

        ಭಾರತೀಯ ಉಕ್ಕು ವಲಯದ ಒಂದು ಸಂಕ್ಷಿಪ್ತ ನೋಟ ಈ ಕೆಳಗಿನಂತಿದೆ.

ಭಾರತೀಯ ಉಕ್ಕು ವಲಯದ ನೋಟ

            ಭಾರತದ ಕೈಗಾರಿಕಾ ಅಭಿವೃದ್ಧಿಯಲ್ಲಿ ಉಕ್ಕು ಉದ್ಯಮ ಒಂದು ಪ್ರಮುಖ ಆಧಾರಸ್ಥಂಬವಾಗಿದೆ. ಸ್ವಾತಂತ್ರ್ಯದ ಸಮಯದಲ್ಲಿ ಒಂದು ಮಿಲಿಯನ್ ಟನ್ ಇದ್ದ ಭಾರತದ ಕಚ್ಚಾ ಉಕ್ಕು ಸಾಮರ್ಥ್ಯ,  ಇದೀಗ 142 ಮಿಲಿಯನ್ ಟನ್ ಗೆ ಏರಿಕೆಯಾಗಿದೆ ಮತ್ತು ಭಾರತ ಇಂದು ವಿಶ್ವದ ಎರಡನೇ ಅತಿದೊಡ್ಡ ಉಕ್ಕು ತಯಾರಿಕಾ 2018ರಲ್ಲಿ 111 ಮಿಲಿಯನ್ ಟನ್ ಕಚ್ಚಾ ಉಕ್ಕು ಉತ್ಪಾದನೆ ರಾಷ್ಟ್ರವಾಗಿದೆ. ಆರ್ಥಿಕತೆಯ ಅಭಿವೃದ್ಧಿಗೆ ಕ್ರಿಯಾಶೀಲ ದೇಶೀಯ ಉಕ್ಕು ಉದ್ಯಮ ಅತ್ಯಂತ ಪ್ರಮುಖವಾಗಿದ್ದು, ಅದು ನಿರ್ಮಾಣ, ಮೂಲಸೌಕರ್ಯ, ಆಟೋಮೋಟಿವ್, ಸರಕು ಸಾಗಣೆ, ರಕ್ಷಣೆ, ರೈಲು ಮತ್ತಿತರ ಪ್ರಮುಖ ವಲಯಗಳಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಉಕ್ಕು ತನ್ನ ಮರು ಸಂಸ್ಕರಣೆ ಸ್ವರೂಪ ಮತ್ತು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಬಹುದಾದ ಗುಣಗಳಿಂದಾಗಿ ಉಕ್ಕು ಪರಿಸರ ಸ್ನೇಹಿ ಸುಸ್ಥಿರ ಆರ್ಥಿಕ ಅಭಿವೃದ್ಧಿಯ ಪ್ರಮುಖ ಚಾಲನಾಶಕ್ತಿಯಾಗಿದೆ. ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಗೆ ಇದು ಚಾಲನಾಶಕ್ತಿಯಾಗಿರುವುದರಿಂದ ಉಕ್ಕು ವಲಯ ರಾಷ್ಟ್ರದ ಮಹತ್ವದ ವಲಯವಾಗಿದೆ. ಇದು ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ಆರ್ಥಿಕ ಅಭಿವೃದ್ಧಿಗೆ ಬಹು ಆಯಾಮದ ಪರಿಣಾಮಗಳನ್ನು ಉಂಟುಮಾಡುವ ಜೊತೆಗೆ ಪೂರೈಕೆ ಸರಣಿ ಮತ್ತು ಉದ್ಯಮಗಳ ಬಳಕೆ ಮೇಲೂ ಪರಿಣಾಮ ಬೀರುತ್ತದೆ.

        ಭಾರತ ಸರ್ಕಾರದ ಉಕ್ಕು ಸಚಿವಾಲಯ ಉಕ್ಕು ಮತ್ತು ಕಬ್ಬಿಣ ಅದಿರು ಉದ್ಯಮದ ಅಭಿವೃದ್ಧಿ ಮತ್ತು ಯೋಜನೆಯ ಪ್ರಮುಖ ಹೊಣೆಯನ್ನು ನಿರ್ವಹಿಸುತ್ತಿದ್ದು, ಅದು ಅಗತ್ಯ ಕಬ್ಬಿಣ ಅದಿರು, ಲೈಮ್ ಸ್ಟೋನ್, ಡೋಲಮೈಟ್, ಮ್ಯಾಂಗನೀಸ್ ಅದಿರು, ಕ್ರೋಮೈಟ್ಸ್, ಫೆರೋ-ಅಲೈಯ್ಸ್, ಸ್ಪಾಂಜ್ ಐರನ್ ಮತ್ತಿತರ ಹಾಗೂ ಅದರ ಸಂಬಂಧಿ ಕಾರ್ಯಗಳ ಅಭಿವೃದ್ಧಿಯನ್ನು ಅಗತ್ಯವಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ.

  1. ಉಕ್ಕು ಉದ್ಯಮದ ನೋಟ

        ಭಾರತೀಯ ಉಕ್ಕು ಉದ್ಯಮ ಅತಿ ಸ್ಥಿರವಾಗಿ ಸ್ಥಾಪಿತವಾಗಿದ್ದು, ಅದು ಸ್ಥಿರ ಬೆಳವಣಿಗೆಯನ್ನು ಕಾಣುತ್ತಿದೆ. ಕಳೆದ ಐದು ವರ್ಷಗಳಿಂದೀಚೆಗೆ ಸಿದ್ಧವಾದ ಉಕ್ಕು ಬೇಡಿಕೆ ಕ್ರಮೇಣ ಶೇ. 6.4ರಷ್ಟು ಏರಿಕೆಯಾಗುತ್ತಿದ್ದು, 2018-19ನೇ ಸಾಲಿನಲ್ಲಿ 99 ಎಂಟಿಪಿಎ ತಲುಪಿದೆ. ಹೆಚ್ಚುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ದೇಶದಲ್ಲಿ ಕಚ್ಚಾ ಉಕ್ಕು ಸಾಮರ್ಥ್ಯ 142 ಎಂಟಿಪಿಎಗೆ ಏರಿಕೆಯಾಗಿದೆ.

1.1 ಭಾರತೀಯ ಕಚ್ಚಾ ಉಕ್ಕು ಸಾಮರ್ಥ್ಯ ಮತ್ತು ಉತ್ಪಾದನೆ

            ದೇಶೀಯ ಕಚ್ಚಾ ಉಕ್ಕು ಸಾಮರ್ಥ್ಯ ಮತ್ತು ಉತ್ಪಾದನೆ 2014-15ರಿಂದೀಚೆಗೆ ಕ್ರಮೇಣ ಏರಿಕೆಯಾಗುತ್ತಿದೆ. ಕಚ್ಚಾ ಉಕ್ಕು ಉತ್ಪಾದನೆ ಕಳೆದ ಐದು ವರ್ಷಗಳಲ್ಲಿ 2018-19ರಲ್ಲಿ ಕೊನೆಗೊಂಡಂತೆ ಕಾಂಪೋಂಡ್ ವಾರ್ಷಿಕ ಪ್ರಗತಿ ದರ(ಸಿಎಜಿಆರ್) ಶೇ.5.6ರಷ್ಟು ಬೆಳವಣಿಗೆ ಹೊಂದುತ್ತಿದ್ದು, 2014-15ರಲ್ಲಿ 110 ಮಿಲಿಯನ್ ಟನ್(ಎಂಟಿ) ಇದ್ದ ಸಾಮರ್ಥ್ಯವೃದ್ಧಿ 2018-19ರಲ್ಲಿ 142 ಮಿಲಿಯನ್ ಟನ್ ಗೆ ಏರಿದೆ. ಆ ಮೂಲಕ ಶೇ.6.6ರಷ್ಟು ಸಿಎಜಿಆರ್ ಪ್ರಗತಿ ಸಾಧಿಸಿದೆ.

 

https://ci6.googleusercontent.com/proxy/xHDDFPBQDsKJnRuCDhXGHT9gLErb1D36D76CSPZJ1F3Wc6f-wUBpn9HLPxbDcy25oPtBdqfx_EofZqc1jTRPvqHiZA7Jykxb1pi4nIUquml7k2pNq2Fv=s0-d-e1-ft#https://static.pib.gov.in/WriteReadData/userfiles/image/image006RDPZ.jpg

ಭಾರತದ ಕಚ್ಚಾ ಉಕ್ಕು ಸಾಮರ್ಥ್ಯ ಮತ್ತು ಉತ್ಪಾದನೆ(2014-19) (ಮೂಲ: ಜೆಪಿಸಿ)

  • 2018-19ರಲ್ಲಿ ದೇಶದ ಕಚ್ಚಾ ಉಕ್ಕು ಸಾಮರ್ಥ್ಯ 142.236 ಮಿಲಿಯನ್ ಟನ್ ಇತ್ತು. ಕಚ್ಚಾ ಉಕ್ಕು ಉತ್ಪಾದನೆ 110.921 ಮಿಲಿಯನ್ ಟನ್ ತಲುಪಿತ್ತು.

 

ಕಚ್ಚಾ ಉಕ್ಕು ಸಾಮರ್ಥ್ಯ ಮತ್ತು ಉತ್ಪಾದನೆ

(ಮಿಲಿಯನ್ ಟನ್ ಗಳಲ್ಲಿ)

ವರ್ಷ

ಕಾರ್ಯ ನಿರ್ವಹಣೆ ಸಾಮರ್ಥ್ಯ

ಉತ್ಪಾದನೆ

ಶೇಕಡಾವಾರು ಬಳಕೆ

2015-16

121.971

89.791

74%

2016-17

128.277

97.936

76%

2017-18

137.975

103.131

75%

2018-19

142.236

110.921

78%

ಮೂಲ : ಜೆಪಿಸಿ

 

 

 

 

https://ci3.googleusercontent.com/proxy/dZBkP1-VFv16_w_KNk8DyQ6p8xWex6qP6f3aZS7w-iukIoiJma0at_c7c0j_z1H8i-F-XOS7nv2IqioqCloOd_u2whts1CsYrtT4LRWW2w2D7xGtjnQY=s0-d-e1-ft#https://static.pib.gov.in/WriteReadData/userfiles/image/image007O4LH.png

1.2 ಜಾಗತಿಕ ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಭಾರತದ ಸ್ಥಾನ

          ನಿರಂತರ ಉತ್ಪಾದನಾ ಪ್ರಗತಿಯಿಂದಾಗಿ ಭಾರತ ಜಾಗತಿಕ ಉಕ್ಕು ಉದ್ಯಮದಲ್ಲಿ ಪ್ರಮುಖ ಸ್ಥಾನದಲ್ಲಿ ಮುಂದುವರಿದಿದೆ. ಭಾರತ ಎರಡನೇ ಅತಿ ದೊಡ್ಡ ಕಚ್ಚಾ ಉಕ್ಕು ಉತ್ಪಾದನೆ(75.69 ಎಂಟಿ) ರಾಷ್ಟ್ರವಾಗಿದ್ದು, ಒಟ್ಟಾರೆ ವಿಶ್ವದ ಉತ್ಪಾದನೆಯಲ್ಲಿ ಶೇ.6.1ರಷ್ಟು ಪಾಲು ಹೊಂದಿದೆ ಮತ್ತು 2018ರ ಇದೇ ಅವಧಿಯಲ್ಲಿ ಉತ್ಪಾದನೆ ಶೇ. 4.4ರಷ್ಟು ಬೆಳವಣಿಗೆ ಕಂಡಿತ್ತು.

 

ದೇಶ

2016

2017

2018

ಜನವರಿ-ಅಕ್ಟೋಬರ್ 2019

ಚೀನಾ

807.610

870.855

923.836

828.330

ಭಾರತ

95.480

101.455

109.272

93.304

ಜಪಾನ್

104.780

104.662

104.319

83.791

ಅಮೆರಿಕ

78.480

81.612

86.607

73.539

ದಕ್ಷಿಣ ಕೊರಿಯಾ

68.580

71.030

72.464

60.121

ರಷ್ಯಾ

70.450

71.491

71.246

59.341

ಜರ್ಮನಿ

42.080

43.297

42.435

34.017

ಟರ್ಕಿ

33.160

37.524

37.312

27.973

ಬ್ರೆಜಿಲ್

31.280

34.365

35.407

27.216

ಇಟಲಿ

23.370

24.068

24.532

19.845

ಇತರೆ

271.680

289.441

281.607

233.406

ಒಟ್ಟು

1626.950

1729.800

1789.035

1540.882

ಮೂಲ : ಡಬ್ಲ್ಯೂಎಸ್ಎ ಸಾಂಖ್ಯಿಕ ವರ್ಷ ಪುಸ್ತಕ 2019

  • ದೇಶ 2018ರಲ್ಲಿ ಸಿದ್ಧವಾದ ಉಕ್ಕಿನ ಮೂರನೇ ಅತಿದೊಡ್ಡ ಗ್ರಾಹಕವಾಗಿದೆ ಮತ್ತು ಸದ್ಯದಲ್ಲೇ ಅದು ಎರಡನೇ ಅತಿ ದೊಡ್ಡ ಗ್ರಾಹಕವಾಗುವ ಸಾಧ್ಯತೆ ಇದೆ. ಡಬ್ಲ್ಯೂಎಸ್ಎ ಮುನ್ಸೂಚನೆಯಂತೆ ಭಾರತ 2019ರ ವೇಳೆಗೆ ಎರಡನೇ ಅತಿದೊಡ್ಡ ಉಕ್ಕು ಬಳಕೆದಾರ ರಾಷ್ಟ್ರವಾಗಲಿದೆ.

ದೇಶಗಳು

2016

2017

2018

2019 (f)

2020 (f)

ಚೀನಾ

681.000

773.800

835.0

900.1

909.1

ಅಮೆರಿಕ

91.900

97.700

100.2

100.8

101.2

ಭಾರತ

83.643

88.680

96.7

101.6

108.7

ಜಪಾನ್

62.200

64.400

65.4

64.5

64.1

ದಕ್ಷಿಣ ಕೊರಿಯಾ

57.100

56.300

53.6

53.9

54.2

ರಷ್ಯಾ

38.700

40.900

41.2

43.2

43.9

ಜರ್ಮನಿ

40.500

41.000

40.8

37.2

37.8

ಟರ್ಕಿ

34.100

35.900

30.6

26.1

27.7

ಇಟಲಿ

23.700

25.100

26.4

26.9

27.5

ಮೆಕ್ಸಿಕೊ

25.500

26.500

25.4

24.7

25.1

ಇತರೆ

381.157

382.220

396.8

396.0

406.4

ಒಟ್ಟಾರೆ

1519.500

1632.500

1712.1

1775.0

1805.7

ಮೂಲ : ಡಬ್ಲ್ಯೂಎಸ್ ಎ ಸಾಂಖ್ಯಿಕ ವರ್ಷ ಪುಸ್ತಕ 2019, ಶಾರ್ಟ್ ರೇಂಜ್ ಔಟ್ ಲುಕ್ ಅಕ್ಟೋಬರ್ 2019

1.3 ಭಾರತದಲ್ಲಿ ಉತ್ಪಾದನೆಯ ನಾನಾ ವಿಧಾನಗಳ ಪಾಲು

ಎಲ್ಲಾ ಮೂರು ವಿಧಾನಗಳ ಉತ್ಪಾದನೆ(ಬಿಒಎಫ್, ಇಎಎಫ್ ಮತ್ತು ಐಎಫ್) ಇವುಗಳಲ್ಲಿ ಭಾರೀ ಪ್ರಗತಿಯನ್ನು ಹೊಂದುವುದರೊಂದಿಗೆ ಸಾಮರ್ಥ್ಯದಲ್ಲಿ ಭಾರೀ ವೃದ್ಧಿಯಾಗಿದೆ. ಇದರೊಂದಿಗೆ ಭಾರತೀಯ ಉಕ್ಕು ಉದ್ಯಮ ವಿಶೇಷ, ವಿಭಿನ್ನ ಎಂಬುದು ಖಾತ್ರಿಯಾಗಿದೆ. ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಭಾರತ, ಬಲಿಷ್ಠ ಪ್ರಗತಿ ದರ ಕಾಯ್ದುಕೊಳ್ಳಲು ಒಂದು ಪ್ರಮುಖವಾದ ಅಂಶವೆಂದರೆ ವಿದ್ಯುನ್ಮಾನ ವಿಧಾನದಲ್ಲಿ ಉಕ್ಕು ಉತ್ಪಾದನೆ(ಇಎಎಫ್ ಮತ್ತು ಐಎಫ್)ಯಲ್ಲಿ ಗಣನೀಯ ಪ್ರಗತಿ ದರ ಕಾಯ್ದುಕೊಂಡಿರುವುದು. ಇದರಲ್ಲಿ 2018-19ನೇ ಸಾಲಿನಲ್ಲಿ ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಶೇ.56ರಷ್ಟು ಪಾಲು ಹೊಂದಿದೆ.

https://ci6.googleusercontent.com/proxy/RJVx0SDZT21ikbGjKXYO3Pc38qm0bMk_Jo1DCOIpTIs-Sz_4XcKE1CU3TPRvNx7W8NKKGGLIpXEkBuQPiWiTw9xEcBIOGjS-J6xrShVQqdS7_hvfzQxg=s0-d-e1-ft#https://static.pib.gov.in/WriteReadData/userfiles/image/image008VTJK.jpg

 

ಕಚ್ಚಾ ಉಕ್ಕು ಉತ್ಪಾದನೆ ಪ್ರಕ್ರಿಯೆ ವಿಧಾನ(2014-19) (ಮೂಲ: ಜೆಪಿಸಿ)

 

1.4 ಉಕ್ಕಿನ ಬಳಕೆ

  • ಭಾರತದಲ್ಲಿ ಸಿದ್ಧವಾದ ಉಕ್ಕಿನ ತಲಾ ಬಳಕೆ 2014-15ರಲ್ಲಿ 60.8 ಕೆಜಿ ಇತ್ತು. 2018-19ರಲ್ಲಿ 74.1 ಕೆಜಿಗೆ ಏರಿಕೆಯಾಗಿದೆ.

ವಿವರಣೆ

2015-16

2016-17

2017-18

2018-19

ಕಚ್ಚಾ ಉಕ್ಕು ಉತ್ಪಾದನೆ

89.790

97.936

103.13

110.921

ಸಿದ್ಧವಾದ ಉಕ್ಕು ಉತ್ಪಾದನೆ

102.904

115.91

126.855

101.287*

ಆಮದು

11.712

7.227

7.483

7.835

ರಫ್ತು

4.079

8.243

9.620

6.361

ಉಕ್ಕು ಬಳಕೆ

81.525

84.042

90.707

98.708

ಶೇಕಡವಾರು ಪ್ರಗತಿ

5.9%

3.1%

11.3%

17.5%

ಜನಸಂಖ್ಯೆ(ಎಂಒಎಸ್ ಪಿಐ) ಕೋಟಿಗಳಲ್ಲಿ

128.3

129.9

131.6

133.2

ಎಎಸ್ ಯು ತಲಾ ಬಳಕೆ(ಕೆಜಿ)

63.54

64.70

68.93

74.11

ಶೇಕಡವಾರು ಪ್ರಗತಿ

4.6%

1.8%

8.5%

14.5%

ಮೂಲ : ಜೆಪಿಸಿ * ಕಚ್ಚಾ ಉಕ್ಕು ಸಮಾನ

  • ಭಾರತದಲ್ಲಿ ಸಿದ್ಧವಾದ ಉಕ್ಕು ತಲಾ ಬಳಕೆ ವಿವರ ಕ್ಯಾಲೆಂಡರ್ ವರ್ಷದಂತೆ ಈ ಕೆಳಗಿನಂತಿದೆ.

ಒಟ್ಟು ಸಿದ್ಧವಾದ ಉಕ್ಕು

2015

2016

2017

2018

ಎಎಸ್ ಯು(ಮಿಲಿಯನ್ ಟನ್ ಗಳಲ್ಲಿ)

80.075

83.643

88.68

96.738

ಜನಸಂಖ್ಯೆ(ಎಂಒಎಸ್ ಪಿಐ) ಕೋಟಿಗಳಲ್ಲಿ

126

127

129

132

ಎಎಸ್ ಯು ತಲಾ ಬಳಕೆ(ಕೆಜಿ)

64

66

69

73

ಶೇಕಡವಾರು ಪ್ರಗತಿ

4.9%

3.1%

4.5%

6.2%

 

1.5 ಭಾರತದಲ್ಲಿ ಕೈಗಾರಿಕೆಗಳಿಗೆ ಉಕ್ಕು ಪೂರೈಸುವ ದೃಢ ವ್ಯವಸ್ಥೆ

ಭಾರತ ಕಚ್ಚಾ ಉಕ್ಕು ಮತ್ತು ಸಿದ್ಧ ಉಕ್ಕು ಉತ್ಪಾದನೆಯಲ್ಲಿ ಬಲಿಷ್ಠ ಪ್ರಗತಿ ಸಾಧಿಸಲು ಕಂಪನಶೀಲ ಸ್ಪಾಂಜ್ ಐರನ್(ವಿಶೇಷವಾಗಿ ವಿದ್ಯುನ್ಮಾನ ವಿಧಾನದಲ್ಲಿ ಉಕ್ಕು ತಯಾರಿಕೆ) ಮತ್ತು ಪಿಗ್ ಐರನ್ ಕೈಗಾರಿಕೆಗಳು ಉಕ್ಕು ಉದ್ಯಮದಲ್ಲಿ ಮಹತ್ವದ್ದಾಗಿ ಕಾರ್ಯನಿರ್ವಹಿಸಿ ಬೆಂಬಲ ನೀಡುತ್ತಿದೆ.

ಭಾರತ 2003ರಿಂದೀಚೆಗೆ ಸ್ಪಾಂಜ್ ಐರನ್ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ದೇಶದ ಖನಿಷ್ಠ ಶ್ರೀಮಂತ ರಾಜ್ಯಗಳಲ್ಲಿ ಹೆಚ್ಚು ಕಲ್ಲಿದ್ದಲು ಆಧಾರಿತ ಘಟಕಗಳು ಸ್ಥಾಪನೆಯಾಗಿವೆ. ಹಲವು ವರ್ಷಗಳ ನಂತರ ಕ್ರಮೇಣ ಕಲ್ಲಿದ್ದಲು ಆಧಾರಿತ ವಿಧಾನ ಪ್ರಮುಖ ಪಾಲುದಾರರಾಗಿ ಮುಂದುವರಿದಿದ್ದು, 2018-19ರಲ್ಲಿ ದೇಶದ ಒಟ್ಟು ಸ್ಪಾಂಜ್ ಐರನ್ ಉತ್ಪಾದನೆಯಲ್ಲಿ ಶೇ.80ರಷ್ಟನ್ನು ಇವು ಕೊಡುಗೆಯಾಗಿ ನೀಡಿವೆ. ಹಲವು ವರ್ಷಗಳಿಂದೀಚೆಗೆ ಕ್ರಮೇಣ ಸ್ಪಾಂಜ್ ಐರನ್ ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗಿದೆ ಮತ್ತು 2018-19ರಲ್ಲಿ ಅದು 46.56 ಮಿಲಿಯನ್ ಟನ್ ತಲುಪಿದೆ.

https://ci5.googleusercontent.com/proxy/pW1BRURWkF7Dhds2hbll1sH-SBNperR4PETHyFQvbZfIAHnwd-fQuqozMhEIeH7zLVf56FY7CRWkiZ7VoSBAD_nc_tVJDsH-XPNWG1QbAC2_l9Drm8lN=s0-d-e1-ft#https://static.pib.gov.in/WriteReadData/userfiles/image/image009Q8SX.jpg

ಭಾರತದ ಸ್ಪಾಂಜ್ ಐರನ್ ಉತ್ಪಾನೆ(2014-19) (ಮೂಲ: ಜೆಪಿಸಿ)

        ಭಾರತ ಪಿಗ್ ಐರನ್ ಉತ್ಪಾದನೆಯಲ್ಲಿ ಅತ್ಯಂತ ಪ್ರಮುಖ ರಾಷ್ಟ್ರವಾಗಿದೆ. ಜಾಗತೀಕರಣದ ನಂತರ ಖಾಸಗಿ ವಲಯದ  ಹಲವು ಘಟಕಗಳು ಸ್ಥಾಪನೆಯಾಗಿವೆ. ಇದರಿಂದಾಗಿ ಆಮದು ಗಣನೀಯವಾಗಿ ತಗ್ಗಿರುವುದಲ್ಲದೆ, ಭಾರತ ಪಿಗ್ ಐರನ್ ನ ರಫ್ತು ರಾಷ್ಟ್ರವಾಗಿ ಹೊರಹೊಮ್ಮಿದೆ. 2018-19ರಲ್ಲಿ ದೇಶದ ಒಟ್ಟು ಪಿಗ್ ಐರನ್ ಉತ್ಪಾದನೆಯಲ್ಲಿ ಶೇ.91ರಷ್ಟು ಪಾಲು ಖಾಸಗಿಯವರದ್ದಾಗಿದೆ.

ಪಿಗ್ ಐರನ್ ದೇಶೀಯ ಲಭ್ಯತೆ ಚಿತ್ರಣ(ಮಿಲಿಯನ್ ಟನ್ ಗಳಲ್ಲಿ)

ಪದಾರ್ಥ

2014-15

2015-16

2016-17

2017-18

2018-19

Apr-Aug, 2019*

ಉತ್ಪಾದನೆ

10.23

10.24

10.34

5.73

6.41

2.56

ರಫ್ತು

0.54

0.29

0.39

0.52

0.32

0.15

ಆಮದು

0.02

0.02

0.03

0.02

0.07

0.01

ಬಳಕೆ

9.06

9.02

9.04

5.19

5.09

2.46

ಮೂಲ: ಜೆಪಿಸಿ; *ತಾತ್ಕಾಲಿಕ

1.6 ಭಾರತದಲ್ಲಿ ಸಿದ್ಧವಾದ ಉಕ್ಕು ಉತ್ಪಾದನೆ ಮತ್ತು ಒಟ್ಟು ರಫ್ತು / ಆಮದು ಚಿತ್ರಣ

ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಕಚ್ಚಾ ಉಕ್ಕು ಉತ್ಪಾನೆ ಸಾಮರ್ಥ್ಯ ಬಲಿಷ್ಠ ಹೆಚ್ಚಳದಿಂದಾಗಿ ಭಾರತದಲ್ಲಿ ಸಿದ್ಧವಾದ ಉಕ್ಕು ಉತ್ಪಾದನೆ(ಅಲೈ(ಮಿಶ್ರಲೋಹ)/ಸೈನ್ ಲೆಸ್+ ನಾನ್-ಅಲೈ) ಕಳೆದ ಐದು ವರ್ಷಗಳಿಂದೀಚೆಗೆ ಶೇ.6 ಸಿಎಜಿಆರ್ ಪ್ರಗತಿ ಸಾಧಿಸಿದೆ. ದೇಶೀಯ ಬೇಡಿಕೆ ಅಗತ್ಯವನ್ನು ಪೂರೈಸುವ ಜೊತೆಗೆ ಭಾರತೀಯ ಉಕ್ಕು ಉದ್ಯಮ ಜಾಗತಿಕ ರಫ್ತುದಾರವಾಗಿ ಮುಂದುವರಿದಿದ್ದು, ಕಳೆದ ಐದು ವರ್ಷಗಳಲ್ಲಿ ಆಮದು ಅಗತ್ಯ ಪ್ರಮಾಣವನ್ನು 9.32 ಟನ್ ನಿಂದ 7.83 ಮಿಲಿಯನ್ ಟನ್ ಗೆ ಇಳಿಕೆ ಮಾಡಿದೆ. ಭಾರತ 2016-17 ಮತ್ತು 2017-18ರಲ್ಲಿ ಒಟ್ಟು ರಫ್ತುದಾರ ರಾಷ್ಟ್ರವಾಗಿದ್ದು, 2018-19ನೇ ಸಾಲಿನಲ್ಲಿ ಆಮದು ರಾಷ್ಟ್ರಗಳ ಸಾಲಿಗೆ ವಾಪಸ್ಸಾಗಿದೆ. 2019-2020ನೇ ಹಣಕಾಸು ವರ್ಷದಲ್ಲಿ ಭಾರತ ಸಿದ್ಧ ಉಕ್ಕಿನ ರಫ್ತುದಾರ ರಾಷ್ಟ್ರವಾಗಿದೆ.

ಸಿದ್ಧವಾದ ಉಕ್ಕಿನ ವಹಿವಾಟು

(ಮಿಲಿಯನ್ ಟನ್ ಗಳಲ್ಲಿ)

ವ್ಯಾಪಾರ

2013-14

2014-15

2015-16

2016-17

2017-18

2018-19

ಏಪ್ರಿಲ್-ನವೆಂಬರ್  2019-20

ಆಮದು

5.45

9.32

11.712

7.227

7.483

7.834

5.077

ರಫ್ತು

5.985

5.596

4.079

8.243

9.62

6.361

5.753

ಬ್ಯಾಲೆನ್ಸ್ ಆಫ್ ಟ್ರೇಡ್

0.535

-3.724

-7.633

1.016

2.137

-1.473

0.676

ಆಮದು ತೀವ್ರತೆ

7.4%

12.1%

14.4%

8.6%

8.2%

7.9%

8.6%

ರಫ್ತು ತೀವ್ರತೆ

8.1%

7.3%

5.0%

9.8%

10.6%

6.4%

9.7%

ಮೂಲ: ಜೆಪಿಸಿ

 

 

 

 

 

 

 

 

 

https://ci4.googleusercontent.com/proxy/TKB3_3K4eUUt1xZRB0_ExDCX38PwTvMOIgDNMbz2A2Ko786FEv75FXO2k4HpjPveF8iGiFXR0nzt4tACrgnPztSGHOXiRWZAWOTgAheJcxJYQlItU-FF=s0-d-e1-ft#https://static.pib.gov.in/WriteReadData/userfiles/image/image010OXQM.png

 

   
 
     

 

     

ಮುಂದುವರಿದು ಹೇಳುವುದಾದರೆ 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಸರ್ಕಾರದ ಗುರಿ ಸಾಧನೆಗೆ ಉಕ್ಕು ಆಧಾರಿತ ವಲಯಗಳಾದ ಸರ್ವರಿಗೂ ವಸತಿ ಶೇ.100ರಷ್ಟು ವಿದ್ಯುದೀಕರಣ, ಎಲ್ಲರಿಗೂ ಕೊಳವೆ ಮಾರ್ಗದ ಮೂಲಕ ಕುಡಿಯುವ ನೀರು ಮತ್ತಿತರ ಯೋಜನೆಗಳಲ್ಲಿ ಬಂಡವಾಳ ತೊಡಗಿಸಬೇಕಿದೆ. ಈ ವಲಯದಲ್ಲಿ ದೇಶೀಯ ಉಕ್ಕು ಬಳಕೆಗೆ ಹೆಚ್ಚಿನ ಅವಕಾಶವಿದ್ದು, ಮುನ್ನೋಟಕ್ಕೆ ಅನುಗುಣವಾಗಿ ಅದು ಹೆಚ್ಚಾಗುತ್ತಿದೆ. ಈ ಬೇಡಿಕೆಯನ್ನು ದೇಶೀಯ ಉಕ್ಕು ಉದ್ಯಮದ ಮೂಲಕ ಪೂರೈಸಬಹುದಾಗಿದೆ. ರಾಷ್ಟ್ರೀಯ ಉಕ್ಕು ನೀತಿ 2017ರಲ್ಲಿ ಜಾಗತಿಕ, ಸ್ಪರ್ಧಾತ್ಮಕ ಉಕ್ಕು ವಲಯ ಸೃಷ್ಟಿಗಾಗಿ ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

  1. ರಾಷ್ಟ್ರೀಯ ಉಕ್ಕು ನೀತಿ 2017

ರಾಷ್ಟ್ರೀಯ ಉಕ್ಕು ನೀತಿ(ಎನ್ ಎಸ್ ಪಿ)ಯನ್ನು ಉಕ್ಕು ಸಚಿವಾಲಯ ಅನುಮೋದಿಸಿದೆ ಮತ್ತು 2017ರ ಮೇ 8ರಂದು ಅದರ ಅಧಿಸೂಚನೆ ಹೊರಡಿಸಲಾಗಿದ್ದು, ಅದರಲ್ಲಿ ಉಕ್ಕು ವಲಯದ ಆರೋಗ್ಯಕರ ಸುಸ್ಥಿರ ಪ್ರಗತಿಗೆ ಉತ್ತೇಜನ ಮತ್ತು ಆಧುನಿಕ ಭಾರತದ ಬೇಡಿಕೆಗಳನ್ನು ಈಡೇರಿಸುವುದನ್ನು ಖಾತರಿಪಡಿಸುವ ಉದ್ದೇಶ ಹೊಂದಿದೆ. ಎನ್ ಎಸ್ ಪಿಯಲ್ಲಿ ಮುನ್ನೋಟವನ್ನು ವ್ಯಾಖ್ಯಾನಿಸಲಾಗಿದ್ದು, “ತಾಂತ್ರಿಕವಾಗಿ ಮುಂದುವರಿದ ವ್ಯವಸ್ಥೆಯನ್ನು ಸೃಷ್ಟಿಸುವುದು ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಜಾಗತಿಕ ಸ್ಪರ್ಧಾತ್ಮಕ ಉಕ್ಕು ಉದ್ಯಮವನ್ನು ಸೃಷ್ಟಿಸುವುದಾಗಿದೆ” ನೀತಿಯಲ್ಲಿ ಉಕ್ಕು ಉದ್ಯಮದ ಪ್ರಮುಖ ಧ್ಯೇಯೋದ್ದೇಶಗಳನ್ನು ಪ್ರಸ್ತಾಪಿಸಲಾಗಿದ್ದು, ಉದ್ಯಮಕ್ಕೆ ಹಲವು ಉಪಕ್ರಮಗಳನ್ನು ಹಾಕಿಕೊಳ್ಳಲಾಗಿದೆ.

ಎನ್ ಎಸ್ ಪಿ 2017ರಲ್ಲಿ ಸೇರಿರುವ ಪ್ರಮುಖ ಅಂಶವೆಂದರೆ ಉಕ್ಕು ಉತ್ಪಾದನೆಯಲ್ಲಿ ಸ್ವಯಂ ಸ್ವಾವಲಂಬನೆ ಸಾಧಿಸುವುದು ಮತ್ತು ನೀತಿಗೆ ಬೆಂಬಲ ಮತ್ತು ಖಾಸಗಿ ಉತ್ಪಾದಕರು, ಎಂಎಸ್ಎಂಇ ಉಕ್ಕು ಉತ್ಪಾದಕರು ಮತ್ತು ಸಿಪಿಎಸ್ಇಎಸ್ ಗಳಿಗೆ ಮಾರ್ಗದರ್ಶನ ನೀಡುವುದಾಗಿದೆ. ಇದರಲ್ಲಿ ಸಾಮರ್ಥ್ಯ ವೃದ್ಧಿಗೆ ಉತ್ತೇಜನ, ಜಾಗತಿಕ ಸ್ಪರ್ಧಾತ್ಮಕ ಉಕ್ಕು ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸುವ ಜೊತೆಗೆ ಸ್ಥಳೀಯವಾಗಿ ಲಭ್ಯವಿರುವ ಕಬ್ಬಿಣದ ಅದಿರು, ಕೋಕಿಂಗ್ ಕೋಲ್ ಮತ್ತು ನೈಸರ್ಗಿಕ ಅನಿಲ ಹಾಗೂ ಹೊರ ದೇಶಗಳಿಂದ ಖರೀದಿಸುವ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಕೈಗೊಳ್ಳುವುದಾಗಿದೆ. ಈ ವಲಯದ ಬೆಂಬಲಕ್ಕೆ ದೇಶೀಯ ಉಕ್ಕು ಬೇಡಿಕೆಯನ್ನು ವೃದ್ಧಿಸಲೂ ಸಹ ಕ್ರಮ ಕೈಗೊಳ್ಳಲಾಗಿದೆ.

ಈ ನೀತಿಯಡಿ ಕಚ್ಚಾ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು 300 ಮಿಲಿಯನ್ ಟನ್(ಎಂಟಿ)ಗೆ,  ಉತ್ಪಾದನೆಯನ್ನು 255ಎಂಟಿಗೆ ಮತ್ತು ಸಿದ್ಧಪಡಿಸಿದ ಉಕ್ಕು ತಲಾ ಬಳಕೆ ಹಾಲಿ 74 ಕೆಜಿ ಇರುವುದನ್ನು  2030-31ರ ವೇಳೆಗೆ 160 ಕೆಜಿಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ನೀತಿಯಡಿ ಶೇ.100ರಷ್ಟು ದೇಶೀಯ ಬೇಡಿಕೆಯನ್ನು ಈಡೇರಿಸುವ ಜೊತೆಗೆ ಉನ್ನತ ಗುಣಮಟ್ಟದ ಆಟೋಮೋಟಿವ್ ಸ್ಟೀಲ್, ಎಲೆಕ್ಟ್ರಿಕಲ್ ಸ್ಟೀಲ್, ಸ್ಪೆಷಲ್ ಸ್ಟೀಲ್ ಮತ್ತು ಮಿಶ್ರಣ ಲೋಹದ ಬಳಕೆಯ ಜೊತೆಗೆ ವಾಷಡ್ ಕೋಕಿಂಗ್ ಕೋಲ್ ಅನ್ನು ಲಭ್ಯತೆ ಹೆಚ್ಚಿಸುವುದು, ಆ ಮೂಲಕ ಆಮದು ಅವಲಂಬನೆಯನ್ನು 2030-31 ವೇಳೆಗೆ ಶೇ.85ರಿಂದ ಶೇ.65ಕ್ಕೆ ಇಳಿಕೆ ಮಾಡುವ ಗುರಿ ಹೊಂದಲಾಗಿದೆ.

ರಾಷ್ಟ್ರೀಯ ಉಕ್ಕು ನೀತಿಯ ಭಾಗವಾಗಿ ಉಲ್ಲೇಖಿಸಿರುವ ಉಪಕ್ರಮಗಳ ಕಾರ್ಯ ಯೋಜನೆಗೆ ಉಕ್ಕು ಸಚಿವಾಲಯ ಕಾರ್ಯತಂತ್ರ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

ಕಾರ್ಯತಂತ್ರ ಮಾರ್ಗ ಸೂಚಿ ಅಭಿವೃದ್ಧಿ

ರಾಷ್ಟ್ರೀಯ ಉಕ್ಕು ನೀತಿ 2017ರಲ್ಲಿ ಉದ್ಯಮ ಎದುರಿಸುತ್ತಿರುವ ಹಲವು ಬಗೆಯ ಸಮಸ್ಯೆಗಳು ಮತ್ತು ಉಕ್ಕು ಸಚಿವಾಲಯ ಕೈಗೊಳ್ಳಬಹುದಾದ ಸಂಭಾವ್ಯ ಪರಿಹಾರಗಳನ್ನು ಒಳಗೊಂಡಿದ್ದು, ಅದು ಉಕ್ಕು  ಉದ್ಯಮದ 15 ನಾನಾ ವಿಭಾಗಗಳಲ್ಲಿ 106 ಉಪ ಕ್ರಮಗಳನ್ನು ಉಲ್ಲೇಖಿಸಿದೆ.

 

ಕ್ರ ಸಂ.

ಆದ್ಯತಾ ವಲಯ

# ಕ್ರಿಯೆಗಳು

1

ಉಕ್ಕು ಬೇಡಿಕೆ

5

2

ಉಕ್ಕು ಸಾಮರ್ಥ್ಯ

6

3

ಕಚ್ಚಾ ಸಾಮಗ್ರಿ

35

4

ಭೂಮಿ, ನೀರು ಮತ್ತು ವಿದ್ಯುತ್

10

5

ಮೂಲಸೌಕರ್ಯ ಮತ್ತು ಸಾರಿಗೆ

6

6

ಉತ್ಪನ್ನ ಗುಣಮಟ್ಟ

4

7

ಪರಿಣಾಮಕಾರಿ ತಾಂತ್ರಿಕತೆ

5

8

ಎಂಎಸ್ಎಂಇ ವಲಯ

3

9

ಅಲೈ ಸ್ಪೆಷಲ್ ಮತ್ತು ಸ್ಟೈನ್ ಲೆಸ್ ಸ್ಟೀಲ್ ಮೌಲ್ಯವರ್ಧನೆ

5

10

ಪರಿಸರ ನಿರ್ವಹಣೆ

7

11

ಸುರಕ್ಷತೆ

3

12

ವ್ಯಾಪಾರ

4

13

ಹಣಕಾಸಿನ ಅಪಾಯಗಳು

2

14

ಸಿಪಿಎಸ್ಇಎಸ್ ಗಳ ಪಾತ್ರ ಮತ್ತು ಮುನ್ನೋಟ

5

15

ಉನ್ನತ ಮಟ್ಟದ ಸಂಶೋಧನೆಗೆ ಆದ್ಯತೆ: ಎಸ್ಆರ್ ಟಿಎಂಐ

6

 

ಭಾರತೀಯ ಉಕ್ಕು ಉದ್ಯಮ ಈ ಹಲವು ಉಪಕ್ರಮಗಳಲ್ಲಿ ಅತ್ಯಂತ ಪ್ರಮುಖ ಪಾಲುದಾರಿಕೆ ಹೊಂದಿದೆ. ಭಾರತೀಯ ಉಕ್ಕು ಉದ್ಯಮ ಅತ್ಯಂತ ಭಿನ್ನ ಮತ್ತು ಕ್ರಿಯಾಶೀಲ ವ್ಯವಸ್ಥೆಯನ್ನು ಒಳಗೊಂಡಿದ್ದು, ಇದರ ಮೌಲ್ಯ ಸರಣಿಯಲ್ಲಿ ಹಲವು ಬಗೆಯ ಸಂಬಂಧಪಟ್ಟವರು ಒಳಗೊಂಡಿದ್ದಾರೆ. ಪ್ರತಿಯೊಬ್ಬ ಸಂಬಂಧಪಟ್ಟವರೂ ತಮ್ಮ ಅಗಾಧ ಅನುಭವವನ್ನು ಆಧರಿಸಿ ವಲಯಕ್ಕೆ ಮೌಲ್ಯಯುತ ಕೊಡುಗೆಯನ್ನು ನೀಡುತ್ತಿದ್ದಾರೆ. ಈ ಅನುಭವಗಳ ಸಮರ್ಪಕ ಬಳಕೆ ಮತ್ತು ಉಪಕ್ರಮಗಳ ಪರಿಣಾಮಕಾರಿ ಕಾರ್ಯಾಚರಣೆಗೊಳಿಸುವ ನಿಟ್ಟಿನಲ್ಲಿ ಸಚಿವಾಲಯ ಸಿಪಿಎಸ್ಇಎಸ್ ಗಳ ಮೂಲಕ ಸಂಬಂಧಪಟ್ಟವರೊಂದಿಗೆ ನಿರಂತರ ಸಂವಾದಗಳನ್ನು ನಡೆಸುತ್ತಿದೆ.

*****

 

 

 



(Release ID: 1597946) Visitor Counter : 245


Read this release in: English , Hindi , Bengali