ಗೃಹ ವ್ಯವಹಾರಗಳ ಸಚಿವಾಲಯ

2021ರ ಭಾರತದ ಜನಗಣತಿ ನಡೆಸಲು ಮತ್ತು ರಾಷ್ಟ್ರೀಯ ಜನಸಂಖ್ಯಾ ದಾಖಲಾತಿಯನ್ನು ನವೀಕರಿಸಲು ಸಂಪುಟದ ಅನುಮೋದನೆ

Posted On: 24 DEC 2019 4:23PM by PIB Bengaluru

2021ರ ಭಾರತದ ಜನಗಣತಿ ನಡೆಸಲು ಮತ್ತು ರಾಷ್ಟ್ರೀಯ ಜನಸಂಖ್ಯಾ ದಾಖಲಾತಿಯನ್ನು ನವೀಕರಿಸಲು ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 8,754.23 ಕೋಟಿ ರೂಪಾಯಿ ವೆಚ್ಚದಲ್ಲಿ 2021ರ ಭಾರತದ ಜನಗಣತಿ ಮಾಡುವ  ಮತ್ತು 3,941.35 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ (ಎನ್.ಪಿ.ಆರ್.) ನವೀಕರಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

ಫಲಾನುಭವಿಗಳು:

ಜನಗಣತಿಯು ಇಡೀ ಭಾರತದಲ್ಲಿರುವ ಎಲ್ಲ ಜನಸಂಖ್ಯೆಗೂ ಅನ್ವಯಿಸಿದರೆ, ಎನ್.ಪಿ.ಆರ್. ಅಸ್ಸಾಂ ಹೊರತುಪಡಿಸಿ ಎಲ್ಲ ಜನಸಂಖ್ಯೆಗೂ ಅನ್ವಯಿಸುತ್ತದೆ.

 ವಿವರಗಳು:                                                                       

·    ಭಾರತೀಯ ಜನಗಣತಿ ವಿಶ್ವದಲ್ಲಿಯೇ ಒಂದು ಅತಿ ದೊಡ್ಡ ಆಡಳಿತಾತ್ಮಕ ಮತ್ತು ಸಾಂಖ್ಯಿಕ ಕಸರತ್ತು. ಮುಂದಿನ ದಶಮಾನದ ಜನಗಣತಿ 2021ಕ್ಕೆ ಬಾಕಿ ಇದೆ ಮತ್ತು ಇದನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ:

             i.       ಮನೆ ಪಟ್ಟಿ ಮತ್ತು ಮನೆ ಗಣತಿ – 2020ರ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಮತ್ತು

          ii.       ಜನಸಂಖ್ಯೆಯ ಎಣಿಕೆ – 2021ರ ಫೆಬ್ರವರಿ 9ರಿಂದ ಫೆಬ್ರವರಿ 28ರವರೆಗೆ.

ರಾಷ್ಟ್ರೀಯ ಜನಸಂಖ್ಯೆ ದಾಖಲಾತಿ (ಎನ್.ಪಿ.ಆರ್.) ನವೀಕರಣವನ್ನು ಕೂಡ ಮನೆ ಪಟ್ಟಿ ಮತ್ತು ಮನೆ ಗಣತಿಯ ಜೊತೆಗೆ ಅಸ್ಸಾಂ ಹೊರತುಪಡಿಸಿ ಉಳಿದೆಡೆ ನಡೆಯಲಾಗುವುದು.

·    30 ಲಕ್ಷ ಕ್ಷೇತ್ರ ಕಾರ್ಯಕರ್ತರು ರಾಷ್ಟ್ರೀಯ ಮಹತ್ವದ ಈ ಬೃಹತ್ ಕಸರತ್ತನ್ನು ಪೂರ್ಣಗೊಳಿಸಲಿದ್ದಾರೆ. 2011ರಲ್ಲಿ 28 ಲಕ್ಷ ಮಂದಿ ಈ ಕಾರ್ಯ ಮಾಡಿದ್ದರು.

·    ದತ್ತಾಂಶ ಸಂಗ್ರಹಣೆಗೆ ಮೊಬೈಲ್ ಆಪ್ ಬಳಸಲಾಗುವುದು ಮತ್ತು ನಿಗಾ ಉದ್ದೇಶದ ಕೇಂದ್ರೀಯ ಪೋರ್ಟಲ್, ಜನಗಣತಿಯ ದತ್ತಾಂಶವನ್ನು ಸುಧಾರಿತ ಗುಣಮಟ್ಟದೊಂದಿಗೆ ಶೀಘ್ರ ಬಿಡುಗಡೆಯ ಖಾತ್ರಿ ಒದಗಿಸುವುದು.

·    ದತ್ತಾಂಶದ ಪ್ರಸಾರ ಇನ್ನೂ ಉತ್ತಮವಾಗಿರಲಿದ್ದು, ಬಳಕೆದಾರ ಸ್ನೇಹಿಯಾಗಿರುತ್ತದೆ, ನೀತಿ ನಿರೂಪಣೆಗೆ ಅಗತ್ಯವಾದ ನಿಯತಾಂಕಗಳಲ್ಲಿನ ಎಲ್ಲಾ ಪ್ರಶ್ನೆಗಳೂ ಗುಂಡಿಯನ್ನು ಒತ್ತಿದರೆ ಲಭ್ಯವಾಗುತ್ತವೆ.

·    ಜನಗಣತಿ – ಒಂದು- ಸೇವೆಯಾಗಿ (ಸಿಎಎಎಸ್) ಬೇಡಿಕೆಯ ದತ್ತಾಂಶವನ್ನು ಸಚಿವಾಲಯಗಳಿಗೆ ಸ್ವಚ್ಛ, ಯಾಂತ್ರಿಕವಾಗಿ-ಓದಬಲ್ಲ ಮತ್ತು ಕ್ರಿಯಾತ್ಮಕ ಸ್ವರೂಪದಲ್ಲಿ ತಲುಪಿಸುತ್ತದೆ.

 ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮ:

·    ಜನಗಣತಿ ಎಂಬುದು ಕೇವಲ ಸಾಂಖ್ಯಿಕ ಕಸರತ್ತಲ್ಲ. ಇದರ ಫಲಿತಾಂಶವನ್ನು ಬಳಕೆದಾರ ಸ್ನೇಹಿ ಸ್ವರೂಪದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.

·    ಎಲ್ಲ ದತ್ತಾಂಶವನ್ನು ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು, ಸಂಶೋಧನಾ ಸಂಸ್ಥೆಗಳು ಇತ್ಯಾದಿ ಎಲ್ಲ ಬಾಧ್ಯಸ್ಥರ ಬಳಕೆಗಾಗಿ ಇಡಲಾಗುವುದು.

·    ದತ್ತಾಂಶವನ್ನು ಕೆಳಹಂತದ ಆಡಳಿತ ಘಟಕಗಳವರೆಗೆ ಎಲ್ಲರೊಂದಿಗೆ ಹಂಚಿಕೊಳ್ಳುವ ಅಂದರೆ, ಗ್ರಾಮ/ವಾರ್ಡ್ ಮಟ್ಟದವರೆಗೆ,

·    ಸಂಸತ್ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆಗಾಗಿ ಪುನರ್ವಿಂಗಡಣೆ ಆಯೋಗಕ್ಕೆ ಬ್ಲಾಕ್ ಮಟ್ಟದ ದತ್ತಾಂಶ.

·    ಇತರ ಆಡಳಿತಾತ್ಮಕ ಅಥವಾ ಸಮೀಕ್ಷಾ ದತ್ತಾಂಶದೊಂದಿಗೆ ಜನಗಣತಿ ದತ್ತಾಂಶವು ಸೇರಿದಾಗ ಸಾರ್ವಜನಿಕ ನೀತಿಯ ಅತ್ಯಂತ ಬಲಿಷ್ಠವಾದ ಸಾಧನವಾಗುತ್ತದೆ. ಜನಗಣತಿ ಒಂದು ಸೇವೆಯಾಗಿ (ಸಿಎಎಎಸ್) ವಿವಿಧ ಸಚಿವಾಲಯಗಳಿಗೆ/ರಾಜ್ಯ ಸರ್ಕಾರಗಳಿಗೆ ಮತ್ತು ಇತರ ಬಾಧ್ಯಸ್ಥರಿಗೆ ಬಳಕೆದಾರ ಸ್ನೇಹಿಯಾಗಿ, ಯಾಂತ್ರಿಕವಾಗಿ ಓದಬಲ್ಲ ಮತ್ತು ಕ್ರೀಯಾತ್ಮಕ ಸ್ವರೂಪದಲ್ಲಿ ಡ್ಯಾಷ್ ಬೋರ್ಡ್ ಇತ್ಯಾದಿ ಸೌಲಭ್ಯದೊಂದಿಗೆ ಬೇಡಿಕೆಗೆ ಅನುಗುಣವಾಗಿ ದತ್ತಾಂಶವನ್ನು ಒದಗಿಸುತ್ತದೆ.

·    ಈ ಎರಡು ಬೃಹತ್ ಕಸರತ್ತಿನ ಪ್ರಮುಖ ಫಲಶ್ರುತಿಗಳಲ್ಲಿ ಒಂದೆಂದರೆ ಅದು ದೇಶದಾದ್ಯಂತ ದೂರದೂರದ ಪ್ರದೇಶಗಳಲ್ಲೂ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸುತ್ತದೆ. ಇದು ಜನಗಣತಿ ಮತ್ತು ಎನ್.ಪಿ.ಆರ್. ಕಾರ್ಯವನ್ನು ಹೆಚ್ಚುವರಿಯಾಗಿ ಕೈಗೊಂಡ ಕಾರ್ಯಕರ್ತರಿಗೆ ಗೌರವಧನ ನೀಡುವುದರ ಹೊರತಾಗಿರುತ್ತದೆ. ಸ್ಥಳೀಯ ಮಟ್ಟದಲ್ಲಿ ಸುಮಾರು 48,000 ಮಾನವಶಕ್ತಿಯನ್ನು 2900 ದಿನಗಳ ಕಾಲ ನಿಯೋಜಿಸಲಾಗುವುದು. ಇನ್ನೊಂದು ರೀತಿ ಹೇಳುವುದಾದರೆ, ಸುಮಾರು 2.4 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗುತ್ತದೆ. ಜೊತೆಗೆ ತಾಂತ್ರಿಕ ಮಾನವಶಕ್ತಿಯ ಅವಕಾಶಗಳು ಡಿಜಿಟಲ್ ಮಾದರಿ ಮತ್ತು ಸಹಯೋಗ ಸೇರಿದಂತೆ ಉದ್ಯೋಗದ ಸ್ವರೂಪ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದ್ದಾದ್ದರಿಂದ ಶುಲ್ಕ/ಜಿಲ್ಲಾ  /ರಾಜ್ಯಮಟ್ಟದಲ್ಲಿ ಸಾಮರ್ಥ್ಯವರ್ಧನೆಗೆ ಕಾರಣವಾಗುತ್ತದೆ. ಇದು ಈ ವ್ಯಕ್ತಿಗಳ ಭವಿಷ್ಯದ ಉದ್ಯೋಗಕ್ಕೂ ನೆರವಾಗಲಿದೆ.

 ಅನುಷ್ಠಾನ ತಂತ್ರ ಮತ್ತು ಗುರಿಗಳು:   

·    ಜನಗಣತಿ ಪ್ರಕ್ರಿಯೆಯು ಪ್ರತಿಯೊಂದು ಮನೆಗೂ ಭೇಟಿ ನೀಡುವ ಮತ್ತು ಮನೆ ಪಟ್ಟಿ ಮತ್ತು ಮನೆ ಗಣತಿ ಹಾಗೂ ಜನಸಂಖ್ಯೆಯ ಎಣಿಕೆಗೆ ಪ್ರತ್ಯೇಕ ಪ್ರಶ್ನಾವಳಿಗಳನ್ನು ಪ್ರಚಾರ ಮಾಡುವುದನ್ನು ಒಳಗೊಂಡಿರುತ್ತದೆ.

·    ಗಣತಿದಾರರು, ಸಾಮಾನ್ಯವಾಗಿ ಸರ್ಕಾರಿ ಶಿಕ್ಷಕರಾಗಿರುತ್ತಾರೆ ಮತ್ತು ರಾಜ್ಯ ಸರ್ಕಾರಗಳಿಂದ ನೇಮಕಗೊಂಡವರಾಗಿರುತ್ತಾರೆ, ಅವರು ಎನ್.ಪಿ.ಆರ್.ನ ಕಾರ್ಯ ಹಾಗೂ ಗಣತಿಯನ್ನು ತಮ್ಮ ದೈನಂದಿನ ಕರ್ತವ್ಯದ ಜೊತೆಗೆ ಹೆಚ್ಚುವರಿಯಾಗಿ ನಿರ್ವಹಿಸುತ್ತಾರೆ.

·    ಇತರ ಜನಗಣತಿ ಕಾರ್ಯಕರ್ತರನ್ನು ಉಪ ಜಿಲ್ಲೆ, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ರಾಜ್ಯ/ಜಿಲ್ಲಾಡಳಿತಗಳು ನೇಮಕ ಮಾಡುತ್ತವೆ.

·    2021ರ ಜನಗಣತಿಗೆ ಕೈಗೊಂಡಿರುವ ನೂತನ ಉಪಕ್ರಮಗಳು:

i.                   ದತ್ತಾಂಶ ಸಂಗ್ರಹಣೆಗೆ ಇದೇ ಪ್ರಥಮ ಬಾರಿಗೆ ಮೊಬೈಲ್ ಆಪ್ ಬಳಕೆ
ii.                 ಜನಗಣತಿ ನಿಗಾ ಮತ್ತು ನಿರ್ವಹಣೆ ಪೋರ್ಟಲ್ ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಅಧಿಕಾರಿಗಳು/ಅಧಿಕಾರಿವರ್ಗಕ್ಕೆ ಬಹು ಭಾಷಾ ಬೆಂಬಲ ನೀಡಲು ಒಂದೇ ಮೂಲವಾಗಿದೆ.
iii.              ಜನ ಸಂಖ್ಯೆ ಎಣಿಕೆಯ ಹಂತದಲ್ಲಿ ಸಾರ್ವಜನಿಕರ ಆನ್ ಲೈನ್ ಸ್ವಯಂ ಎಣಿಕೆಗೆ ಸೌಲಭ್ಯ. ಸಮಯ ಉಳಿಸಲು ಮತ್ತು ದತ್ತಾಂಶ ಸಂಸ್ಕರಣೆಗೆ ವಿವರಣಾತ್ಮಕ ಪ್ರತಿಕ್ರಿಯೆಯ ದಾಖಲಿಸಲು ಕೋಡ್ ಡೈರೆಕ್ಟರಿ.
iv.              ಜನಗಣತಿ ಮತ್ತು ಎನ್.ಪಿ.ಆರ್. ಸಂಬಂಧಿತ ಕಾರ್ಯ ಮಾಡಿದ ಜನಗಣತಿ  ಕಾರ್ಯನಿರ್ವಹಣೆದಾರರಿಗೆ ಒಟ್ಟು ವೆಚ್ಚದ ಶೇ.60ಕ್ಕೂ ಹೆಚ್ಚಾಗುವ ಗೌರವಧನ ವರ್ಗಾವಣೆ ಇತ್ಯಾದಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆ (ಪಿಎಫ್.ಎಂ.ಎಸ್.) ಮತ್ತು ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಮೂಲಕ ಕಳುಹಿಸಲಾಗುತ್ತದೆ.
v.                 30 ಲಕ್ಷ ಕ್ಷೇತ್ರ ಕಾರ್ಯನಿರ್ವಹಣೆದಾರರಿಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ತರಬೇತಿ ಸಂಸ್ಥೆಗಳ ಸೇವೆಯನ್ನು ಬಳಸಿಕೊಂಡು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ತರಬೇತುದಾರರನ್ನು ತಯಾರು ಮಾಡಲು ಗುಣಾತ್ಮಕವಾದ ತರಬೇತಿ ನೀಡಲಾಗುವುದು.

 ಹಿನ್ನೆಲೆ:

ದಶಮಾಂಶದ ಜನ ಗಣತಿಯನ್ನು ಭಾರತದಲ್ಲಿ 182ರಿಂದ ಯಾವುದೇ ಬಿಡುವು ನೀಡದೆ ಸಂಲಗ್ನತೆಯಿಂದ ನಡೆಸಲಾಗುತ್ತಿದೆ. 2021ರ ಜನಗಣತಿ ದೇಶದ 16ನೇ ಜನಗಣತಿಯಾಗಿದೆ ಮತ್ತು ಸ್ವಾತಂತ್ರ್ಯಾನಂತರದ 8ನೇ ಜನಗಣತಿಯಾಗಿದೆ. ಜನಗಣತಿಯು ಗ್ರಾಮ, ಪಟ್ಟಣ ಮತ್ತು ವಾರ್ಡ್ ಮಟ್ಟದಲ್ಲಿ ಪ್ರಾಥಮಿಕ ದತ್ತಾಂಶ ಒದಗಿಸುವ ಬೃಹತ್ ಮೂಲವಾಗಿದ್ದು, ಮನೆಯ ಸ್ಥಿತಿ, ಸೌಲಭ್ಯಗಳು ಮತ್ತು ಆಸ್ತಿ, ಜನಸಂಖ್ಯೆ, ಧರ್ಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಭಾಷೆ, ಸಾಕ್ಷರತೆ ಮತ್ತು ಶಿಕ್ಷಣ, ಆರ್ಥಿಕ ಚಟುವಟಿಕೆ, ವಲಸೆ ಮತ್ತು ಫಲವತ್ತತೆ ಸೇರಿದಂತೆ ವಿವಿಧ ಮಾನದಂಡಗಳ ಸೂಕ್ಷ್ಮ ದತ್ತಾಂಶ ಒದಗಿಸುತ್ತದೆ. ಜನಗಣತಿ ಕಾಯಿದೆ 1948 ಮತ್ತು ಜನಗಣತಿ ನಿಯಮಗಳು 1990 ಜನಗಣತಿ ನಡೆಸಲು ಕಾನೂನು ಚೌಕಟ್ಟು ಒದಗಿಸುತ್ತದೆ.

ರಾಷ್ಟ್ರೀಯ ಜನಸಂಖ್ಯೆ ದಾಖಲಾತಿ (ಎನ್.ಪಿ.ಆರ್.) ಯನ್ನು 1955ರ ಪೌರತ್ವ ಕಾಯಿದೆ ಮತ್ತು ಪೌರತ್ವದ ನಿಯಮಗಳು, 2003ರ ನಿಬಂಧನೆಗಳ ಅಡಿಯಲ್ಲಿ 2010ರಲ್ಲಿ ತಯಾರಿಸಲಾಗಿತ್ತು, ಅದನ್ನು 2015ರಲ್ಲಿ ಆಧಾರ್ ಜೋಡಣೆಯ ಮೂಲಕ ಅದನ್ನು ನವೀಕರಿಸಲಾಗಿತ್ತು.
 

*****



(Release ID: 1597706) Visitor Counter : 87


Read this release in: Tamil , English , Urdu , Hindi , Telugu