ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ

ದಿವಾಳಿ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಅಧ್ಯಾದೇಶ, 2019ರ ಘೋಷಣೆಗೆ ಸಂಪುಟದ ಅನುಮೋದನೆ

Posted On: 24 DEC 2019 4:45PM by PIB Bengaluru

ದಿವಾಳಿ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಅಧ್ಯಾದೇಶ, 2019ರ ಘೋಷಣೆಗೆ ಸಂಪುಟದ ಅನುಮೋದನೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದಿವಾಳಿ ಮತ್ತು ದಿವಾಳಿತನ ಸಂಹಿತೆ 2016ಕ್ಕೆ ತಿದ್ದುಪಡಿ ತರುವ ಮತ್ತು ಅಧ್ಯಾದೇಶದ ಘೋಷಣೆ ಮಾಡುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

ಈ ತಿದ್ದುಪಡಿಯು ದಿವಾಳಿ ಮತ್ತು ದಿವಾಳಿತನ ಸಂಹಿತೆ 2016ರಲ್ಲಿರುವ ಕೆಲವೊಂದು ಅಸ್ಪಷ್ಟತೆಗಳನ್ನು ತೆಗೆದುಹಾಕುತ್ತದೆ ಮತ್ತು ಸಂಹಿತೆಯ ಸುಗಮ ಅನುಷ್ಠಾನದ ಖಾತ್ರಿ ಒದಗಿಸುತ್ತದೆ.

ತಿದ್ದುಪಡಿಗಳ ಅಡಿಯಲ್ಲಿ, ಸಾಂಸ್ಥಿಕ ದಿವಾಳಿತನ ನಿರ್ಣಯ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು ಸಾಂಸ್ಥಿಕ ಸಾಲಗಾರನು ಈ ಹಿಂದೆ ಎಸಗಿದ ಅಪರಾಧದ ಹೊಣೆಗಳನ್ನು ನಿರ್ಬಂಧಿಸುತ್ತದೆ, ಮತ್ತು ಪರಿಹಾರ ಪ್ರಕ್ರಿಯೆ ತೀರ್ಪು ನೀಡುವ ಪ್ರಾಧಿಕಾರದಿಂದ ಅನುಮೋದನೆಯಾದ ದಿನಾಂಕದಿಂದ ಸಾಂಸ್ಥಿಕ ಸಾಲಗಾರನು ಅಂಥ ಅಪಾಧಗಳಿಗೆ ದಂಡನೆಗೆ ಒಳಪಡುವುದಿಲ್ಲ, ಒಂದೊಮ್ಮೆ ಪರಿಹಾರ ಯೋಜನೆ ಈ ಕೆಳಗಿನ ವ್ಯಕ್ತಿ ಯಾರು ಅಲ್ಲವೋ ಅವನಿಗೆ ಸಾಂಸ್ಥಿಕ ಸಾಲಗಾರನ ನಿಯಂತ್ರಣ ಅಥವಾ ಆಡಳಿತ ಬದಲಾವಣೆಗೆ ಕಾರಣವಾಗುವಂತಿದ್ದರೆ:

a. ಸಾಂಸ್ಥಿಕ ಸಾಲಗಾರನ ನಿಯಂತ್ರಣ ಅಥವಾ ಆಡಳಿತದಲ್ಲಿರುವ ಪ್ರವರ್ತಕ ಅಥವಾ ಅಂತಹ ವ್ಯಕ್ತಿಗೆ ಸಂಬಂಧಿತ ಪಕ್ಷಕಾರ; ಅಥವಾ

b. ಸೂಕ್ತ ತನಿಖಾ ಪ್ರಾಧಿಕಾರವು ಒಬ್ಬ ವ್ಯಕ್ತಿ ತನ್ನ ವಶದಲ್ಲಿರುವ ವಸ್ತುಗಳ ಆಧಾರದ ಮೇಲೆ, ಅಪರಾಧದ ಮಾಡುವುದಕ್ಕಾಗಿ ಅವನು ಕುಮ್ಮಕ್ಕು ನೀಡಿದ್ದಾನೆ ಅಥವಾ ಪಿತೂರಿ ಮಾಡಿದ್ದಾನೆ ಎಂದು ನಂಬಲು ಕಾರಣವಿದ್ದಲ್ಲಿ, ಮತ್ತು ಸೂಕ್ತ ಶಾಸನಾತ್ಮಕ ಪ್ರಾಧಿಕಾರಕ್ಕೆ ಅಥವಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾನೆ ಅಥವಾ ದೂರು ನೀಡಿದ್ದಾನೆ ಎಂದಾದಲ್ಲಿ.

ಸೂಕ್ತ ನಿಬಂಧನೆಗಳಿಗೆ ಒಳಪಟ್ಟು, ಸಾಂಸ್ಥಿಕ ದಿವಾಳಿತನ ಪರಿಹಾರ ಪ್ರಕ್ರಿಯೆಯ ಪ್ರಾರಂಭದ ಮೊದಲು ಮಾಡಿದ ಅಪರಾಧದ ತನಿಖೆ ನಡೆಸುವ ಯಾವುದೇ ಪ್ರಾಧಿಕಾರಕ್ಕೆ ಸಾಂಸ್ಥಿಕ ಸಾಲಗಾರನು ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಸಹಕಾರವನ್ನು ವಿಸ್ತರಿಸಬೇಕು.
 

****


(Release ID: 1597697)
Read this release in: English , Urdu , Hindi , Tamil