ನೌಕಾ ಸಚಿವಾಲಯ

ನಾವಿಕರ ಪ್ರಮಾಣಪತ್ರಗಳ ಮಾನ್ಯತೆ ಕುರಿತ ಭಾರತ ಮತ್ತು ಸ್ವೀಡನ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ಪ್ರಕಟಣಾ ದಿನಾಂಕ: 24 DEC 2019 4:44PM by PIB Bengaluru

ನಾವಿಕರ ಪ್ರಮಾಣಪತ್ರಗಳ ಮಾನ್ಯತೆ ಕುರಿತ ಭಾರತ ಮತ್ತು ಸ್ವೀಡನ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಾವಿಕರಿಗಾಗಿ ತರಬೇತಿ ಮತ್ತು ಪ್ರಮಾಣೀಕರಣ ಮಾನದಂಡಗಳ ಕುರಿತಾದ ಅಂತರರಾಷ್ಟ್ರೀಯ ಸಮಾವೇಶದ 1978 ರ ರೆಗ್ಯುಲೇಶನ್ I / 10 ರ ಅನುಸಾರವಾಗಿ, ನಾವಿಕರ ಪ್ರಮಾಣಪತ್ರಗಳನ್ನು ಗುರುತಿಸುವ ಕುರಿತು ಭಾರತ ಮತ್ತು ಸ್ವೀಡನ್ ನಡುವಿನ ಒಪ್ಪಂದಕ್ಕೆ ಪೂರ್ವಾನ್ವಯ ಅನುಮೋದನೆಯನ್ನು ನೀಡಿದೆ.

ಒಪ್ಪಂದವು ಕಡಲ ಶಿಕ್ಷಣ ಮತ್ತು ತರಬೇತಿ, ಸಾಮರ್ಥ್ಯದ ಪ್ರಮಾಣಪತ್ರಗಳು, ಅನುಮೋದನೆಗಳು, ತರಬೇತಿ ಮತ್ತು ಸಾಕ್ಷ್ಯಗಳು ಮತ್ತು ಉಭಯ ದೇಶಗಳ ಸರ್ಕಾರವು ನಾವಿಕರಿಗೆ ನೀಡುವ ವೈದ್ಯಕೀಯ ಪ್ರಮಾಣಪತ್ರಗಳನ್ನು 1/10 ರ ರೆಗ್ಯುಲೇಷನ್ ನಿಬಂಧನೆಗೆ ಅನುಗುಣವಾಗಿ ಮಾನ್ಯ ಮಾಡಲು ಸಹಕಾರಿಯಾಗುತ್ತದೆ. ಎಸ್‌ಟಿಸಿಡಬ್ಲ್ಯೂ ಸಮಾವೇಶ ಮತ್ತು ನಾವಿಕರ ತರಬೇತಿ ಪ್ರಮಾಣೀಕರಣ ಮತ್ತು ನಿರ್ವಹಣೆಯಲ್ಲಿ ಉಭಯ ದೇಶಗಳ ನಡುವಿನ ಸಹಕಾರಕ್ಕೂ ನೆರವಾಗುತ್ತದೆ.

ಸ್ವೀಡನ್ ಹಡಗು ಮಾಲೀಕತ್ವದ ರಾಷ್ಟ್ರವಾಗಿದ್ದರೆ, ಭಾರತವು ನಾವಿಕರನ್ನು ಪೂರೈಸುವ ದೇಶವಾಗಿದ್ದು, ಈ ಒಪ್ಪಂದವು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಲಿದೆ.


(ಪ್ರಕಟಣೆ ಐ.ಡಿ.: 1597689) ವಿಸಿಟರ್ ಕೌಂಟರ್ : 80
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil