ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಯುವ ವ್ಯವಹಾರಗಳ ಇಲಾಖೆಯ ವರ್ಷಾಂತ್ಯದ ಪರಾಮರ್ಶೆ -2019

Posted On: 20 DEC 2019 10:38AM by PIB Bengaluru

ಯುವ ವ್ಯವಹಾರಗಳ ಇಲಾಖೆಯ ವರ್ಷಾಂತ್ಯದ ಪರಾಮರ್ಶೆ -2019

ಯುವಜನರ ಅಭಿವೃದ್ಧಿಗೆ ಬೆಂಬಲ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾಲ್ಗೊಳ್ಳುವಿಕೆಗೆ ಕೈಗೊಳ್ಳಲಾದ ಹಲವು ಉಪಕ್ರಮಗಳು

ಯುವ ವ್ಯವಹಾರಗಳ ಇಲಾಖೆಯ ಯೋಜನೆಗಳ ಪುನಾರಚನೆ

 

01.04.2016 ರಿಂದ ಅನ್ವಯವಾಗುವಂತೆ ಇಲಾಖೆಯ ಯೋಜನೆಗಳನ್ನು ಕ್ರೋಡೀಕರಿಸಿ ಮತ್ತು ಪುನಾರಚಿಸಿ 3 ಸಮಗ್ರ ಯೋಜನೆ ಮಾಡಲಾಗಿದ್ದು ಅವು ಈ ಕೆಳಕಂಡಂತಿವೆ:

1.     ರಾಷ್ಟ್ರೀಯ ಯುವ ಸಶಕ್ತೀಕರಣ ಕಾರ್ಯಕ್ರಮ (ಆರ್.ವೈ.ಎಸ್.ಕೆ) ಎಂದು ಕರೆಯಲಾಗುವ ಹೊಸ ಸಮಗ್ರ’ ಯೋಜನೆಯಲ್ಲಿ ಎಂಟು ಯೋಜನೆಗಳನ್ನು ವಿಲೀನಗೊಳಿಸಲಾಗಿದೆ.

2.     ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.)

3.     ರಾಜೀವ್ ಗಾಂಧಿ ರಾಷ್ಟ್ರೀಯ ಯುವಜನ ಅಭಿವೃದ್ಧಿ ಸಂಸ್ಥೆ (ಆರ್.ಜಿ. ಎನ್.ಐ.ವೈ.ಡಿ)

ಮೇಲ್ಕಂಡ ಯೋಜನೆ/ಉಪ ಯೋಜನೆಗಳ ಅಡಿಯಲ್ಲಿ 2019-20ರ ಅವಧಿಯಲ್ಲಿ ಈ ಕೆಳಕಂಡ ಪ್ರಮುಖ ಸಾಧನೆ ಮಾಡಲಾಗಿದೆ:

1.       ರಾಷ್ಟ್ರೀಯ ಯುವ ಸಶಕ್ತೀಕರಣ ಕಾರ್ಯಕ್ರಮ (ಆರ್.ವೈ.ಎಸ್.ಕೆ.)

2.       ನೆಹರೂ ಯುವ ಕೇಂದ್ರ ಸಂಘಟನ್ (ಎನ್.ವೈ.ಕೆ.ಎಸ್.)

ಎನ್.ವೈ.ಕೆ.ಎಸ್. 35.28 ಲಕ್ಷ ಯುವ ಜನರನ್ನು ತನ್ನ 1.80 ಲಕ್ಷ ಯುವ ಕ್ಲಬ್ ಗಳ ಮೂಲಕ ನೋಂದಾಯಿಸಿಕೊಂಡಿದ್ದು, ಯುವಜನರ ವ್ಯಕ್ತಿತ್ವದ ವಿಕಾಸಕ್ಕಾಗಿ ಮತ್ತು ರಾಷ್ಟ್ರ ನಿರ್ಮಾಣದ ಚಟುವಟಿಕೆಯಲ್ಲಿ ಅವರನ್ನು ತೊಡಗಿಸಲು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದೆ.

ಎನ್.ವೈ.ಕೆ.ಎಸ್. ನ ಕೆಲವು ಮಹತ್ವದ ಉಪಕ್ರಮಗಳು/ಸಾಧನೆಗಳು ಈ ಕೆಳಕಂಡಂತಿವೆ:  

·        ಎನ್.ವೈ.ಕೆ.ಎಸ್. ಸ್ವಯಂ ಸೇವಕರು 8.39 ಲಕ್ಷ ಸಸಿಗಳನ್ನು ನೆಟ್ಟಿದ್ದಾರೆ.

·        ಎನ್.ವೈ.ಕೆ.ಎಸ್. ಸ್ವಯಂ ಸೇವಕರು 49,050 ಯುನಿಟ್ ರಕ್ತದಾನ ಮಾಡಿದ್ದಾರೆ.

·        9,531 ಯುವಜನರನ್ನು ತೊಡಗಿಸಿಕೊಂಡು 286 ಮೂಲ ವೃತ್ತಿಗಳಲ್ಲಿ ಶಿಕ್ಷಣದ ಆಯೋಜನೆ.

·        55,325 ಯುವಜನರನ್ನು ತೊಡಗಿಸಿಕೊಂಡು  ಬ್ಲಾಕ್ ಗಳಲ್ಲಿ 359 ಕ್ರೀಡಾಕೂಟಗಳ ಆಯೋಜನೆ.

·        8,43,150 ಯುವ ಜನರನ್ನು ತೊಡಗಿಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಹತ್ವದ ದಿನಗಳ ಆಚರಣೆಗಾಗಿ 6,039 ಕಾರ್ಯಕ್ರಮಗಳು.

·        1,58,777 ಯುವಜನರನ್ನು ತೊಡಗಿಸಿಕೊಂಡು 286 ಜಿಲ್ಲಾ ಯುವ ಸಮಾವೇಶಗಳ ಆಯೋಜನೆ.

·        2019ರ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಭಾರತದಾದ್ಯಂತದ 33,264 ತಾಣಗಳ್ಲಲಿ 30.27 ಲಕ್ಷ ಯುವಜನರನ್ನು ತೊಡಗಿಸಿಕೊಂಡು ಕಾರ್ಯಕ್ರಮ ನಡೆಸಿದ ಎನ್.ವೈ.ಕೆ.ಎಸ್.

·        ಸ್ವಚ್ಛತೆ ಕಾರ್ಯಕ್ರಮವನ್ನು 98,681 ತಾಣಗಳಲ್ಲಿ 9,10,531 ಯುವಜನರನ್ನು ತೊಡಗಿಸಿಕೊಂಡು ಆಯೋಜಿಸಿ, 8,493 ಶಾಲೆಗಳು/ಕಾಲೇಜುಗಳು, 3,49 ಹಾಸ್ಟೆಲ್ ಗಳು ಮತ್ತು 6,525 ಪ್ರತಿಮೆಗಳ ಸ್ವಚ್ಛತೆ.

·        ಜಲ ಸಂರಕ್ಷಣೆ - 4.2 ಲಕ್ಷ ಯುವಜನರನ್ನು ತೊಡಗಿಸಿಕೊಂಡು 10,751 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, 2,346 ಹೊಸ ಜಲ ಕಾಯಗಳನ್ನು ನಿರ್ಮಿಸಲಾಗಿದೆ ಮತ್ತು 4,413 ಜಲ ಮೂಲಗಳನ್ನು ನಿರ್ವಹಣೆ ಮಾಡಲಾಗಿದೆ.

·        ಇಂಧ್ರಧನುಷ್ ಕಾರ್ಯಕ್ರಮ- ಇದರಲ್ಲಿ 1.27,995 ಮಕ್ಕಳಿಗೆ ಸೇವಾ ಪೂರೈಕೆದಾರರ ನೆರವಿನಿಂದ ರೋಗ ನಿರೋಧಕ ಲಸಿಕೆ ಹಾಕಲಾಗಿದೆ.  

·        ರಾಷ್ಟ್ರೀಯ ಏಕತಾ ದಿನ, ಮತ್ತು ಏಕತೆಗಾಗಿ ಓಟ ಕಾರ್ಯಕ್ರಮವನ್ನು ದೇಶದ ಜಿಲ್ಲಾ ನೆಹರೂ ಯುವ ಕೇಂದ್ರಗಳಲ್ಲಿ ಆಯೋಜಿಸಲಾಗಿದ್ದು, ಇದರಲ್ಲಿ 9.47 ಲಕ್ಷ ಯುವಜನರು ತೊಡಗಿಕೊಂಡಿದ್ದರು.

·        ಫಿಟ್ ಇಂಡಿಯಾ ಅಭಿಯಾನದ ಉದ್ಘಾಟನೆ – ಘನತೆವೆತ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಆಗಸ್ಟ್ 29ರಂದು ಫಿಟ್ ಇಂಡಿಯಾ ಅಭಿಯಾನಕ್ಕೆ ನವ ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದ ವೀಕ್ಷಣೆಸದೃಢತೆಯ ಪ್ರತಿಜ್ಞಾವಿಧಿ ಬೋಧನೆ, ಸದೃಢತೆ ಕಾರ್ಯಕ್ರಮಗಳಾದ ಗ್ರಾಮಿಣ ಮಹಾ ಓಟಹಗ್ಗ ಜಗ್ಗಾಟಖೋ-ಖೋಇತ್ಯಾದಿ ವೃಂದ ಮತ್ತು ವೈಯಕ್ತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸಲಾಯಿತು ಮತ್ತು ಯುವಜನರಿಗೆ ಸ್ಥಳೀಯ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಲಾಯಿತು. ಈ ಚಟುವಟಿಕೆಗಳಲ್ಲಿ21,50,537 ಯುವಜನರು ಮತ್ತು ಇತರ ಬಾಧ್ಯಸ್ಥರು ಭಾಗವಹಿಸಿದ್ದರು.

·        ಫಿಟ್ ಇಂಡಿಯಾ ಪ್ಲಾಗಿಂಗ್ ಓಟ – ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯಂದು ಅಂದರೆ 2019ರ ಅಕ್ಟೋಬರ್ 2ರಂದು ಫಿಟ್ ಇಂಡಿಯಾ ಪ್ಲಾಗ್ ಓಟವನ್ನು ಆಯೋಜಿಸಲಾಗಿತ್ತು. ಇದರಲ್ಲಿ  55,945 ಗ್ರಾಮೀಣ ಮೂಲದ ಯುವ ಕ್ಲಬ್ ಗಳ 19,36,312 ಯುವಜನರು ಮತ್ತು ಸಮಾಜದ ಎಲ್ಲ ವರ್ಗದ ಜನರು ಭಾಗಿಯಾಗಿದ್ದರು.

·        ಗಂಗಾ ಶುದ್ಧೀಕರಣ – ಎನ್.ವೈ.ಕೆ.ಎಸ್. ಗಂಗಾಶುದ್ಧೀಕರಣ ರಾಷ್ಟ್ರೀಯ ಅಭಿಯಾನದೊಂದಿಗೆ ಸೇರಿ, ಗಂಗಾ ನದಿಯ ತಟದ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಜಾಗೃತಿಯನ್ನು ಪಸರಿಸುತ್ತಿದೆ. ಗಂಗಾ ವೃಕ್ಷಾರೋಪಣ ಸಪ್ತಾಹವನ್ನು 4 ರಾಜ್ಯಗಳಾದ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ 53 ಆಯ್ದ ಬ್ಲಾಕ್ ಗಳಲ್ಲಿ ನಡೆಸಲಾಯಿತು.

·    ಪ್ರವಾಸೋದ್ಯಮದ ಮಹತ್ವವನ್ನು ಜನತೆ ತಿಳಿದುಕೊಳ್ಳಲಿ ಎಂಬ ಉದ್ದೇಶದೊಂದಿಗೆ ಪರ್ಯಟನ ಪರ್ವವನ್ನು 2019ರ ಅಕ್ಟೋಬರ್ 2ರಿಂದ 13ರವರೆಗೆ ಆಯೋಜಿಸಲಾಗಿತ್ತು.

·    ಬುಡಕಟ್ಟು ಯುವಜನರ ವಿನಿಮಯ ಕಾರ್ಯಕ್ರಮ (ಟಿವೈಇಪಿ) ವನ್ನು ದೇಶದ 20 ತಾಣಗಳಲ್ಲಿ ಆಯೋಜಿಸಲಾಗಿತ್ತು, 31 ಎಡ ಪಂಥೀಯ ವಿಧ್ವಂಸಕತೆಯಿಂದ ಬಾಧಿತವಾದ 7 ರಾಜ್ಯಗಳಾದ ಛತ್ತೀಸಗಢ, ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಬಿಹಾರದ 31 ಜಿಲ್ಲೆಗಳಿಂದ 4000 ಯುವಜನರು ಇದರಲ್ಲಿ ಭಾಗಿಯಾಗಿದ್ದರು.

·    ಕಾಶ್ಮೀರಿ ಯುವ ವಿನಿಮಯ ಕಾರ್ಯಕ್ರಮ, 2019-20ನ್ನು ದೇಶದ 10 ತಾಣಗಳಲ್ಲಿ ಆಯೋಜಿಸಲಾಗಿತ್ತು. ಕಾಶ್ಮೀರಿ ಯುವ ವಿನಿಮಯ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಗೃಹ ಸಚಿವಾಲಯದ ಜಮ್ಮು ಮತ್ತು ಕಾಶ್ಮೀರ ವ್ಯವಹಾರಗಳ ಇಲಾಖೆ ಹಣ ನೀಡಿತ್ತು.

·    ಈಶಾನ್ಯ ಯುವ ವಿನಿಮಯ ಕಾರ್ಯಕ್ರಮವನ್ನು 8 ಈಶಾನ್ಯ ರಾಜ್ಯಗಳಿಂದ ಆಯ್ದ ಪ್ರತಿ ತಾಣಕ್ಕೆ 25 ತಂಡ ನಾಯಕರೊಂದಿಗೆ 250 ಯುವಕರಿಗೆ  3 ತಾಣಗಳಿಗೆ (ಬೆಂಗಳೂರು, ಹೈದ್ರಾಬಾದ್ ಮತ್ತು ದೆಹಲಿ) ಮಂಜೂರು ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ಸಹಕರಿಸಿತ್ತು.

·    ಯುವ ಏಕ ಭಾರತ ಶ್ರೇಷ್ಠ ಭಾರತ – ಎನ್.ವೈ.ಕೆ.ಎಸ್. ವೈವಿಧ್ಯತೆಯಲ್ಲಿ ಏಕತೆಯನ್ನು ಆಚರಿಸುವ ದೃಷ್ಟಿಯೊಂದಿಗೆ, ರಾಷ್ಟ್ರೀಯ ಏಕತೆಯ ಸ್ಫೂರ್ತಿಯನ್ನು ಉತ್ತೇಜಿಸಲು ಜೊತೆಗೂಡಿಸಲಾದ ಎರಡು ರಾಜ್ಯಗಳ ನಡುವಿನ ಸ್ಪರ್ಧಾಳುಗಳ ನಡುವೆ ವರ್ಷವಿಡೀ  ಕಾರ್ಯಕ್ರಮದ ಮೂಲಕ ಯುವ ಏಕ ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

·    ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ – ಎನ್.ವೈ.ಕೆ.ಎಸ್. ದೇಶಾದ್ಯಂತ ಪೋಷಣ್ ಅಭಿಯಾನ ಕಾರ್ಯಕ್ರಮದ ಅನುಷ್ಠಾನದ ಪ್ರಮುಖ ಪಾಲುದಾರನಾಗಿದೆ. ವಿವಿಧ ಸ್ವರೂಪದ ಚಟುವಟಿಕೆಗಳಾದ ಗೋಷ್ಠಿ, ವಿಚಾರಗೋಷ್ಠಿ ಮತ್ತು ಚರ್ಚೆ, ಪೋಷಣ್ ಮಾಸ, ಗರ್ಭಿಣಿಯರ ಆರೈಕೆ, ಮದುವೆಯ ಸೂಕ್ತ ವಯಸ್ಸು, ಮಕ್ಕಳ ಆರೈಕೆ, ಮಕ್ಕಳ ನಡುವಿನ ಅಂತರ, ರೋಗ ನಿರೋಧಕ ಲಸಿಕೆ, 2 ವರ್ಷಗಳ ವರೆಗೆ ಎದೆಹಾಲು ಉಣಿಸುವುದು ಮತ್ತು ಪೂರಕ ಆಹಾರ ಮತ್ತು ನಿರ್ವಹಣೆ ಹಾಗೂ ಗ್ರಾಮಗಳಲ್ಲಿ ಸೂಕ್ತ ನೈರ್ಮಲ್ಯ ಇತ್ಯಾದಿಗಳ ಕುರಿತಂತೆ ದಕ್ಷ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸುವುದು.

·    ಸ್ವಚ್ಛ ಭಾರತ ಬೇಸಿಗೆ ತರಬೇತಿ ಕಾರ್ಯಕ್ರಮ -2.0- 5,19,439 ಯುವಜನರು ಐವತ್ತು ಗಂಟೆಗಳ ಕಾಲ 2,26,436 ಸ್ವಚ್ಛತಾ ಚಟುವಟಿಕೆ ಅಂದರೆ, ತಮ್ಮ ತಮ್ಮ ಗ್ರಾಮಗಳಲ್ಲಿ ಮಾಹಿತಿ – ಶಿಕ್ಷಣ – ಸಂವಹನ ಚಟುವಟಿಕೆ, ಘನ ತ್ಯಾಜ್ಯ ನಿರ್ವಹಣೆ ಮತ್ತು ಜಲ ಸಂರಕ್ಷಣೆ ಚಟುವಟಿಕೆಗಳನ್ನು ಕೈಗೊಂಡರು.

·    ಇ- ಆಡಳಿತ ಉಪಕ್ರಮ – ನೆಹರೂ ಯುವ ಕೇಂದ್ರ ಸಂಘಟನ್, ಪ್ರಮುಖ ಕಾರ್ಯಕ್ರಮಗಳು ಮತ್ತು ಸಹಯೋಗಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಮಾಸಿಕ ಪ್ರಗತಿ ವರದಿ ಅಳವಡಿಸಲು ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿದೆ.

·    ಈ ತಂತ್ರಾಂಶವು ಯುವ ಕ್ಲಬ್ ಗಳಿಗೆ ಎನ್.ವೈ.ಕೆ.ನಲ್ಲಿ ಆನ್ ಲೈನ್ ಮಾನ್ಯತೆ ಪಡೆಯಲು ಮತ್ತು ಹಾಲಿ ಇರುವ ಯುವ ಕ್ಲಬ್ ಗಳ ವಿವರ ನವೀಕರಿಸಲು  ಅವಕಾಶ ಕಲ್ಪಿಸುತ್ತದೆ.

ಬಿ. ರಾಷ್ಟ್ರೀಯ ಯುವ ಕಾರ್ಪ್ಸ್ (ಎನ್.ವೈ.ಸಿ.)

ರಾಷ್ಟ್ರೀಯ ಯುವ ಕಾರ್ಪ್ಸ್ (ಎನ್.ವೈ.ಸಿ.) ಯೋಜನೆಯನ್ನು ದೇಶದಲ್ಲಿ 2010-11ರ ಸಾಲಿನಲ್ಲಿ ಆರಂಭಿಸಲಾಯಿತು ಮತ್ತು ಇದನ್ನು ಎನ್.ವೈ.ಕೆ.ಎಸ್. ಮೂಲಕ ಅನುಷ್ಠಾನಗೊಳಿಸಲಾಯಿತು.

ಯೋಜನೆಯ ಪ್ರಮುಖ ಉದ್ದೇಶಗಳು ಈ ಕೆಳಕಂಡಂತಿವೆ: -

·         ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಒಲವು ಮತ್ತು ಮನೋಭಾವ ಹೊಂದಿರುವ ಶಿಸ್ತುಬದ್ಧ ಮತ್ತು ಸಮರ್ಪಿತ ಯುವಕರ ಗುಂಪನ್ನು ಸ್ಥಾಪಿಸುವುದು

·         ಸಮಗ್ರ ಪ್ರಗತಿಯ ಸಾಕ್ಷಾತ್ಕಾರವನ್ನು ಸಾಕಾರಗೊಳಿಸಲು (ಸಾಮಾಜಿಕ ಮತ್ತು ಆರ್ಥಿಕ ಎರಡೂ) ಅವಕಾಶ ಕಲ್ಪಿಸಲು.

·         ಸಮುದಾಯದಲ್ಲಿ ಮಾಹಿತಿಯ ಪ್ರಸಾರಮೂಲ ಜ್ಞಾನದ ಕೇಂದ್ರಗಳಾಗಿ ಕಾರ್ಯನಿರ್ವಹಿಸುವುದು

·         ಗುಂಪು ನಿರ್ವಾಹಕರು ಮತ್ತು ಸಹ ಗುಂಪು ಶಿಕ್ಷಕರಾಗಿ ಕಾರ್ಯನಿರ್ವಹಿಸುವುದು

·         ಕಿರಿಯ ಸಮೂಹಕ್ಕೆ ವಿಶೇಷವಾಗಿ ಸಾರ್ವಜನಿಕ ನೀತಿವರ್ಧನೆ ಮತ್ತು ಕಾರ್ಮಿಕರ ಘನತೆಯ ವರ್ಧನೆಗೆ ಆದರ್ಶಪ್ರಾಯರಾಗಿ ಕಾರ್ಯನಿರ್ವಹಿಸುವುದು.

ಯೋಜನೆಯ ನಿಯಮಾವಳಿಗಳ ರೀತ್ಯ, ಒಟ್ಟು 12,000 ಸ್ವಯಂ ಸೇವಕರನ್ನು ಪ್ರತಿ ವರ್ಷ ನಿಯುಕ್ತಿಗೊಳಿಸಲಾಗುತ್ತಿದೆ. ಜಿಲ್ಲೆಯ ಡಿಎಂ/ಡಿಸಿ ಅವರ ಅಧ್ಯಕ್ಷತೆಯಲ್ಲಿ ಸ್ವಯಂ ಸೇವಕರ ಆಯ್ಕೆಗೆ ಆಯ್ಕೆ ಸಮಿತಿ ಇರುತ್ತದೆ. 18-29 ವರ್ಷಗಳ ವಯೋಮಾನದ ಗುಂಪಿನ ಸ್ವಯಂ ಸೇವಕರನ್ನು 2 ವರ್ಷಗಳ ಅವಧಿಗೆ ಮಾತ್ರವೇ ನಿಯುಕ್ತಿಗೊಳಿಸಲಾಗುವುದು. ಪ್ರತಿ ಸ್ವಯಂ ಸೇವಕರಿಗೂ ರೂ.5000 ಮಾಸಿಕ ಗೌರವಧನ ನೀಡಲಾಗುವುದು.

ಸಾಮಾನ್ಯವಾಗಿ ಇಬ್ಬರು ಎನ್.ವೈ.ಸಿ. ಸ್ವಯಂಸೇವಕರನ್ನು ಪ್ರತಿ ಬ್ಲಾಕ್ ಗೆ ನಿಯುಕ್ತಿಗೊಳಿಸಲಾಗುವುದು. ಈ ಸ್ವಯಂ ಸೇವಕರು ಯುವ ಕ್ಲಬ್ ಸದಸ್ಯರು ಮತ್ತು ಸಂಬಂಧಿತ ಎನ್.ವೈ.ಕೆ/ಇತರ ಅನೇಕ ಇಲಾಖೆಗಳ ನಡುವೆ ಸಂಪರ್ಕವಾಗಿ ಕಾರ್ಯ ನರ್ವಹಿಸುತ್ತಾರೆ. ಸ್ವಯಂ ಸೇವಕರು ಗ್ರಾಮ / ಸಮುದಾಯ ಮಟ್ಟದಲ್ಲಿ ಯುವ ಕ್ಲಬ್ ಗಳ ಪುನಶ್ಚೇತನ ಮತ್ತು ಉತ್ತೇಜನದ ಕಾರ್ಯ ನಿರ್ವಹಿಸುತ್ತಾರೆ.

2019-20ರ ಹಣಕಾಸು ವರ್ಷದಲ್ಲಿ 13,206 ಗುರಿಗೆ ಪ್ರತಿಯಾಗಿ 13,044ಎನ್.ವೈ.ವಿಗಳನ್ನು ಈ ದಿನಾಂಕದವರೆಗೆ ಆಯ್ಕೆ ಮಾಡಲಾಗಿದೆ. 15 ದಿನಗಳ ಸೇರ್ಪಡೆ ತರಬೇತಿ ಕಾರ್ಯಕ್ರಮವನ್ನು ಹೊಸದಾಗಿ ನಿಯುಕ್ತಗೊಳಿಸಲಾದ ಸ್ವಯಂ ಸೇವಕರಿಗೆ ಮತ್ತು 7 ದಿನಗಳ ಪುನರ್ ಮನನ ತರಬೇತಿ ಕಾರ್ಯಕ್ರಮವನ್ನು 2ನೇ ವರ್ಷದಲ್ಲಿನ ಸ್ವಯಂ ಸೇವಕರಿಗೆ ನೀಡುವ ಕಾರ್ಯ ಪ್ರಗತಿಯಲ್ಲಿದೆ.

ಸ್ವಯಂ ಸೇವಕರು ಗ್ರಾಮ/ಸಮುದಾಯ ಮಟ್ಟದಲ್ಲಿ ಯುವ ಕ್ಲಬ್ ಗಳನ್ನು ಉತ್ತೇಜಿಸುವ ಮತ್ತು ಪುನಶ್ಚೇತನಗೊಳಿಸುವ ಕಾರ್ಯ ನಿರ್ವಹಿಸುವುದರ ಜೊತೆಗೆ, ಎನ್.ವೈ.ಕೆ.ಎಸ್.ನ ಪ್ರಮುಖ ಕಾರ್ಯಕ್ರಮಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.

ಸಿ.      ಅಂತಾರಾಷ್ಟ್ರೀಯ ಸಹಕಾರ

ಇಲಾಖೆಯು ಯುವಕರಲ್ಲಿ ಅಂತಾರಾಷ್ಟ್ರೀಯ ದೃಷ್ಟಿಕೋನ ಮೂಡಿಸಲು ವಿವಿಧ ದೇಶಗಳೊಂದಿಗೆ  ಅಂತಾರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮ ನಿರ್ವಹಣೆಯನ್ನು ಬಯಸುತ್ತದೆ ಮತ್ತು ಯುವ ಜನರ ಅಭಿವೃದ್ಧಿಗಾಗಿ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಯೋಗ ಬಯಸುತ್ತದೆ. ಈ ವರ್ಷದಲ್ಲಿನ ಕೆಲವು ಮಹತ್ವದ ಸಾಧನೆಗಳು ಕೆಳಕಂಡಂತಿವೆ:

1. 

ಇಬ್ಬರು ಸದಸ್ಯರ ಭಾರತೀಯ ಯುವ ನಿಯೋಗ 2019ರ ಏಪ್ರಿಲ್ 26-30ರವರೆಗೆ ನಡೆದ ವೈ 20 ಶೃಂಗದಲ್ಲಿ ಭಾಗಿಯಾಗಲು ಜಪಾನ್ ಗೆ ಭೇಟಿ ನೀಡಿತ್ತು.

2.

ಇಬ್ಬರು ಸದಸ್ಯರ ಭಾರತೀಯ ಯುವ ನಿಯೋಗ 2019ರ ಜೂನ್ 21-2ರವರೆಗೆ ನಡೆದ ಜಾಗತಿಕ ಸಚಿವರುಗಳ ಸಮಾವೇಶದಲ್ಲಿ ಭಾಗಿಯಾಗಲು ಪೋರ್ಚುಗಲ್ ಗೆ ಭೇಟಿನೀಡಿತ್ತು.

3.

ನಾಲ್ವರು ಸದಸ್ಯರ ಭಾರತೀಯ ಯುವ ನಿಯೋಗ 2019ರ ಜೂನ್ 25ರಿಂದ ಜುಲೈ 3ರವರೆಗೆ ನಡೆದ ರಷ್ಯ ಯುವ ವೇದಿಕೆಯಲ್ಲಿ ಭಾಗಿಯಾಗಲು ವಾಸ್ಟೋಕ್ ಗೆ ಭೇಟಿ ನೀಡಿತ್ತು.

4.

174 ಸದಸ್ಯರ ಭಾರತೀಯ ಯುವ ನಿಯೋಗ 2019ರ ಜುಲೈ 2-9ರವರೆಗೆ ಚೈನಾಗೆ ಭೇಟಿ ನೀಡಿತ್ತು.

5.

36 ಸದಸ್ಯರ ಭಾರತೀಯ ಯುವ ನೀಯೋಗ 2019ರ ಜುಲೈ 27ರಿಂದ ಆಗಸ್ಟ್ 3ರವರೆಗೆ ರಷ್ಯಾಗೆ ಭೇಟಿ ನೀಡಿತ್ತು.

6.

ನಾಲ್ವರು ಸದಸ್ಯರ ಭಾರತೀಯ ಯುವ ನಿಯೋಗ 2019ರ ಆಗಸ್ಟ್ 27-29ವರೆಗೆ  ನಡೆದ ಕಾಮನ್ ವೆಲ್ತ್ ಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬ್ರೂನೈಗೆ ಭೇಟಿ ನೀಡಿತ್ತು.

7.

ಹತ್ತು ಸದಸ್ಯರ ಪೋರ್ಚುಗಲ್ ಯುವ ನಿಯೋಗ 2019ರ ಸೆಪ್ಟೆಂಬರ್ 12-18ರವರೆಗೆ ಭಾರತಕ್ಕೆ ಭೇಟಿ ನೀಡಿತ್ತು.

8.

18 ಸದಸ್ಯರ ಭಾರತೀಯ ಯುವ ನಿಯೋಗ 2019ರ ಸೆಪ್ಟಂಬರ್ 7-14ರವರೆಗೆ ಕರ್ಗಿಸ್ತಾನ್ ಗೆ ಭೇಟಿ ನೀಡಿತ್ತು.

9.

ಹತ್ತು ಸದಸ್ಯರ ಭಾರತೀಯ ಯುವ ನಿಯೋಗ 2019ರ ಸೆಪ್ಟೆಂಬರ್ 17-24 ವಿಯಟ್ನಾಂಗೆ ಭೇಟಿ ನೀಡಿತ್ತು.

10.

ಹತ್ತು ಸದಸ್ಯರ ಭಾರತೀಯ ಯುವ ನಿಯೋಗ 2019ರ ಸೆಪ್ಟೆಂಬರ್ 20-17ರವರೆಗೆ ತಜಿಕಿಸ್ತಾನ್ ಗೆ ಭೇಟಿ ನೀಡಿತ್ತು.

11.

ಹತ್ತು ಸದಸ್ಯರ ವಿಯಟ್ನಾಂ ಯುವ ನೀಯೋಗ 2019ರ ಅಕ್ಟೋಬರ್ 16-23 ಭಾರತಕ್ಕೆ ಭೇಟಿ ನೀಡಿತ್ತು.

12.

ಹತ್ತು ಸದಸ್ಯರ ಭಾರತೀಯ ಯುವ ನಿಯೋಗ 2019ರ ಅಕ್ಟೋಬರ್ 17-20 ಬ್ರಿಕ್ಸ್ ಯುವ ಸಮಾವೇಶದಲ್ಲಿ ಭಾಗಿಯಾಗಲು ಬ್ರೆಜಿಲ್ ಗೆ ಭೇಟಿ ನೀಡಿತ್ತು.

13.

ಹತ್ತು ಸದಸ್ಯರ ತಜಕಿಸ್ತಾನ್ ಯುವ ನಿಯೋಗ 2019ರ ಅಕ್ಟೋಬರ್ 18-25ರವರೆಗೆ ಭಾರತಕ್ಕೆ ಭೇಟಿ ನೀಡಿತ್ತು.

14.

25 ಸದಸ್ಯರ ಭಾರತೀಯ ಯುವ ನಿಯೋಗ 2019ರ ನವೆಂಬರ್ 13-22ರವರೆಗೆ ದಕ್ಷಿಣ ಕೊರಿಯಾಗೆ ಭೇಟಿ ನೀಡಿತ್ತು.

15.

192 ಸದಸ್ಯರ ಚೈನಾ ಯುವ ನೀಯೋಗ 2019ರ ನವೆಂಬರ್ 20-17ರವರೆಗೆ ಭಾರತಕ್ಕೆ ಭೇಟಿ ನೀಡಿತ್ತು.

 

ಡಿ. ಯುವ ಮತ್ತು ಹದಿಹರೆಯದವರ ಅಭಿವೃದ್ಧಿಗೆ ರಾಷ್ಟ್ರೀಯ ಕಾರ್ಯಕ್ರಮ (ಎನ್.ಪಿ.ವೈ.ಎ.ಡಿ.):

·         ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಸರ್ಕಾರ/ಸರ್ಕಾರೇತರ ಸಂಸ್ಥೆಗಳಿಗೆ ಯುವ ಮತ್ತು ಹದಿಹರೆಯದವರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಚಟುವಟಿಕೆ ಕೈಗೊಳ್ಳಲು ಬೆಂಬಲ ನೀಡುವ ಸಲುವಾಗಿ ಯುವ ಮತ್ತು ಹದಿಹರೆಯದವರ ಅಭಿವೃದ್ಧಿಗೆ ರಾಷ್ಟ್ರೀಯ ಕಾರ್ಯಕ್ರಮ (ಎನ್.ಪಿ.ವೈ.ಎ.ಡಿ.) ಮತ್ತು ಇತರ ಯೋಜನೆಗಳನ್ನು ಒಗ್ಗೂಡಿಸಿ ರಾಷ್ಟ್ರೀಯ ಯುವ ಸಶಕ್ತೀಕರಣ ಕಾರ್ಯಕ್ರಮ (ಎನ್.ವೈ.ಎಸ್.ಕೆ.) ಎಂಬ ಹೆಸರಿನ ಒಂದು ಸಮಗ್ರ  ಯೋಜನೆಯನ್ನು ರೂಪಿಸಿದೆ.

·         2019-20ರ ಹಣಕಾಸು ವರ್ಷದಲ್ಲಿ (ಈವರೆಗೆ), 8 ಸ್ವಯಂ ಸೇವಾ ಸಂಸ್ಥೆಗಳು/ಸಂಘಟನೆಗಳಿಗೆ ಆರ್ಥಿಕ ನೆರವು ಒದಗಿಸಲಾಗಿದೆ.

·    ಈ ವರ್ಷ ತೇನ್ ಸಿಂಗ್ ನೋರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ 2018ನ್ನು ಆರು ಸಾಹಸಿಗರಿಗೆ ಜಲ, ನೆಲ, ವಾಯು ಸಾಹಸಕ್ಕೆ ಮತ್ತು ಜೀವಿತಾವಧಿ ಸಾಧನೆಗೆ ಪ್ರದಾನ ಮಾಡಲಾಗಿದೆ.

·    ರಾಷ್ಟ್ರೀಯ ಯುವ ಪ್ರಶಸ್ತಿ 2016-17ನ್ನು ಸಾಮಾಜಿಕ ಸೇವೆ ಮತ್ತು ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ನೀಡಿದ ಗಣನೀಯ ಸೇವೆಗಾಗಿ 20 ವ್ಯಕ್ತಿಗಳು ಮತ್ತು 3 ಸಂಘಟನೆಗಳಿಗೆ ನೀಡಲಾಗಿದೆ.

2.         ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.):

456 ವಿಶ್ವವಿದ್ಯಾಲಯಗಳು / + 2 ಮಂಡಳಿಗಳು17494 ಕಾಲೇಜುಗಳು / ತಾಂತ್ರಿಕ ಸಂಸ್ಥೆ ಮತ್ತು ದೇಶಾದ್ಯಂತ 12059 ಹಿರಿಯ ಮಾಧ್ಯಮಿಕ ಶಾಲೆಗಳ ಮೂಲಕ 42661 ಎನ್‌ಎಸ್‌ಎಸ್ ಘಟಕಗಳಲ್ಲಿ ಸುಮಾರು 3.91 ದಶಲಕ್ಷ ವಿದ್ಯಾರ್ಥಿ ಯುವಜನರ ದಾಖಲಾತಿಯೊಂದಿಗೆ ಎನ್‌ಎಸ್‌ಎಸ್ ಸ್ವಯಂಪ್ರೇರಿತ ಸಮುದಾಯ ಸೇವೆಯ ಮೂಲಕ ಯುವಕರ ವ್ಯಕ್ತಿತ್ವ ಮತ್ತು ನಡತೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ವರ್ಷದಲ್ಲಿ ಎನ್ಎಸ್ಎಸ್ ನ ಕೆಲವು ಕೈಗೊಂಡ ಮಹತ್ವದ ಉಪಕ್ರಮಗಳು / ಸಾಧನೆಗಳು ಹೀಗಿವೆ: -

ಎನ್.ಎಸ್.ಎಸ್. ಅನ್ನು ಕೇಂದ್ರ ವಲಯದ ಯೋಜನೆಯಾಗಿ 01.04.2016ರ ಜಾರಿಗೆ ಬರುವಂತೆ ಪುನಾರಚಿಸಲಾಗಿದೆ. ಈ ಯೋಜನೆ ಈಗ ಕೇಂದ್ರ ವಲಯ ಯೋಜನೆಯಾಗಿದೆ

ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಪ್ರಶಸ್ತಿಗಳು, 2017-18:            

2017-18ನೇ ಸಾಲಿನ ಎನ್.ಎಸ್.ಎಸ್. ಪ್ರಶಸ್ತಿಗಳನ್ನು 2 ವಿಶ್ವವಿದ್ಯಾಲಯಗಳು/+2 ಮಂಡಳಿಗಳು, 10 ಕಾರ್ಯಕ್ರಮ ಅಧಿಕಾರಿಗಳು/ಎನ್.ಎಸ್.ಎಸ್. ಘಟಕಗಳ ವಿಭಾಗದಲ್ಲಿ ಮತ್ತು 30 ಎನ್.ಎಸ್.ಎಸ್. ಸ್ವಯಂ ಸೇವಕರಿಗೆ 2019ರ ಸೆಪ್ಟೆಂಬರ್ 24ರಂದು ನವದೆಹಲಿಯ, ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಯವರು ಪ್ರದಾನ ಮಾಡಿದರು.

ಸ್ವಚ್ಛ ಭಾರತ ಅಭಿಯಾನ 2019:

ಎನ್.ಎಸ್.ಎಸ್. ಸ್ವಯಂ ಸೇವಕರು ವಾಸ್ತವವಾಗಿ ದೇಶದಾದ್ಯಂತ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗಿಯಾಗುತ್ತಿದ್ದಾರೆ. ಸ್ವಚ್ಛ ಭಾರತ ಪಕ್ವಾಡದ ವೇಳೆ 01.08.2019 ರಿಂದ 15.08.2019ರವರೆಗೆ ಎಲ್ಲ ಎನ್.ಎಸ್.ಎಸ್. ಘಟಕಗಳು ಸ್ಥಳೀಯ ಮೂಲದ ಜನಕಲ್ಯಾಣ ಸಂಸ್ಥೆಗಳು ಅಂದರೆ, ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಪುನರ್ವಸತಿ ಕೇಂದ್ರಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಇತ್ಯಾದಿಯನ್ನು ಗುರುತಿಸಿದ್ದು, ಈ ಪ್ರದೇಶಗಳ ಸ್ವಚ್ಛತೆಗೆ ತಾವು ಸೇವೆ ಮಾಡಲು ನಿರ್ಧರಿಸಿದರು ಮತ್ತು ಸಂಸ್ಥೆಗಳಲ್ಲಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರು. ಪ್ರವಾಸಿ ತಾಣಗಳು, ಪುರಾತತ್ವ ತಾಣಗಳು ಮತ್ತು ಪ್ರತಿಮೆಗಳ ಸ್ವಚ್ಛತೆಗಾಗಿ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಗಿತ್ತು.

ಸ್ವಚ್ಛತೆಯೇ ಸೇವೆ (ಎಸ್.ಎಚ್.ಎಸ್.)ಯನ್ನು 24.09.2018ರಂದು ಆಯೋಜಿಸಲಾಗಿತ್ತು. 24ನೇ ಸೆಪ್ಟೆಂಬರ್ ಎನ್.ಎಸ್.ಎಸ್. ದಿನವಾಗಿದ್ದು, ದೇಶದಾದ್ಯಂತ ಎನ್.ಎಸ್.ಎಸ್. ದೇಶದಾದ್ಯಂತ ತಮ್ಮ ತಮ್ಮ ಸಂಸ್ಥೆಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಿತ್ತು.

·         ಜಾಗೃತಿ ಕಾರ್ಯಕ್ರಮಗಳ ಮೂಲಕ ಬೀದಿಗಳುಚರಂಡಿಗಳು ಮತ್ತು ಹಿಂಭಾಗದ ಕಾಲುದಾರಿಗಳ ಸ್ವಚ್ಥತೆ ಕಾರ್ಯಕ್ರಮ ಆಯೋಜನೆ

·         ನೈರ್ಮಲ್ಯ ಸ್ವಭಾವಕ್ಕೆ ಸಂಬಂಧಿಸಿದಂತೆ ಸ್ವಭಾವದ ಬದಲಾವಣೆಯನ್ನು ಹೆಚ್ಚಿಸಲು ಮನೆ ಮನೆ ಸಭೆಗಳು,

·         ಸ್ವಚ್ಛತೆಗೆ ಸಂಬಂಧಿಸಿದ ನುಕ್ಕಡ್ ನಾಟಕ / ಬೀದಿ ನಾಟಕಗಳುಜಾನಪದ ಹಾಡು ಮತ್ತು ನೃತ್ಯ ಪ್ರದರ್ಶನ.

·         ಸ್ವಚ್ಛತೆ ವಿಷಯದ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಚಿತ್ರ ರಚನೆ ಮಾಡಲಾಗಿದೆ,

·         ಗೊಬ್ಬರದ ಗುಂಡಿಗಳನ್ನು ನಿರ್ಮಿಸಲು ಸಮುದಾಯವನ್ನು ಸಜ್ಜುಗೊಳಿಸಲಾಗಿದೆಅಲ್ಲಿ ಸಾವಯವ ಗೊಬ್ಬರ ತಯಾರಾಗುತ್ತಿದೆ.

·         ಘನ ತ್ಯಾಜ್ಯವನ್ನು ಜೈವಿಕ ವಿಘಟನೀಯ ಮತ್ತು ಜೈವಿಕ ವಿಘಟನೀಯವಲ್ಲದ ತ್ಯಾಜ್ಯಗಳಾಗಿ ವಿಂಗಡಿಸಲು ಸ್ವಯಂಪ್ರೇರಿತ ಸೇವೆ

ಅಂದಾಜು 84347 ಎನ್.ಎಸ್.ಎಸ್. ಸ್ವಯಂ ಸೇವಕರು 100 ಗಂಟೆಗಳ ಕಾಲ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಆಯೋಜಿಸಿದ್ದ ಸ್ವಚ್ಛ ಭಾರತ ಬೇಸಿಗೆ ಇಂಟರ್ನ್ ಶಿಪ್ (ಎಸ್.ಬಿ.ಎಸ್.ಐ.) 2.0 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಎನ್.ಎಸ್.ಎಸ್. ನ ಮಹತ್ವದ ಸಾಧನೆಗಳು: -

 ಕ್ರ.ಸಂ

ಚಟುವಟಿಕೆಯ ಹೆಸರು

ಚಟುವಟಿಕೆಯ ಸ್ವರೂಪ

ಭಾಗಿಯಾದ ಎನ್.ಎಸ್.ಎಸ್. ಸ್ವಯಂ ಸೇವಕರ ಸಂಖ್ಯೆ

1.

ಪೋಷಣ್ ಮಾಸ

ಜಾಗೃತಿ ಕಾರ್ಯಕ್ರಮಬೊಜ್ಜುಖಾದ್ಯ ಅಸ್ವಸ್ಥತೆಗಳುಪೌಷ್ಟಿಕತೆಪೌಷ್ಟಿಕಾಂಶ ಜಾಗೃತಿ ಅಭಿಯಾನಗಳುಸಾವಯವ ಆಹಾರದ ಪ್ರಚಾರ ಇತ್ಯಾದಿ ಕುರಿತು ಉಪನ್ಯಾಸಗಳು.

863845

2.

ರಾಷ್ಟ್ರೀಯ ಏಕತಾ ದಿವಸ

ವಿವಿಧ +2 ಶಾಲೆಗಳು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಏಕತೆಯ ಓಟ, ಪ್ರತಿಜ್ಞಾವಿಧಿ ಸ್ವೀಕಾರ, ಪ್ರಬಂಧ ಸ್ಪರ್ಧೆ, ಚಿತ್ರ ರಚನೆ ಸ್ಪರ್ಧೆ, ಉಪನ್ಯಾಸ ಹಾಗೂ ಚರ್ಚೆಗಳ ಆಯೋಜನೆ.

1236136

3.

ಫಿಟ್ ಇಂಡಿಯಾ ಪ್ಲಾಗ್ ಓಟ

ಫಿಟ್ ಇಂಡಿಯಾ ಫ್ಲಾಗ್ ಓಟ, ಎನ್.ಎಸ್.ಎಸ್. ಸ್ವಯಂ ಸೇವಕರು ಓಡುತ್ತಲೆ ಕಸವನ್ನು ಆರಿಸಿದರು.

930452

4.

ಸ್ವಚ್ಛ ಭಾರತ ಬೇಸಿಗೆ ಇಂಟರ್ನ್ ಶಿಪ್ (ಎಸ್.ಬಿ.ಎಸ್.ಐ.) 2.0

ತ್ಯಾಜ್ಯ ನಿರ್ವಹಣೆ ಸಂಬಂಧಿತ ಚಟುವಟಿಕೆಗಳು, ಗ್ರಾಮ ಸಮೀಕ್ಷೆ, ಸ್ವಚ್ಛತೆಯ ಕಾರ್ಯಕ್ರಮ, ಸ್ವಚ್ಛತೆ ಜಾಗೃತಿ ರ‍್ಯಾಲಿ, ಸ್ವಚ್ಛತೆ ಸಂಕಲ್ಪ, ಗೋಡೆ ಚಿತ್ರ, ಕಸದ ಬುಟ್ಟಿಗಳ ವಿತರಣೆ, ಮನೆ ಮನೆ ಜಾಗೃತಿ ಅಭಿಯಾನ, ಐತಿಹಾಸಿಕ ಸ್ಮಾರಕಗಳ ಸ್ವಚ್ಛತೆ, ರುದ್ರಭೂಮಿ, ಆಸ್ಪತ್ರೆ, ಚಿಕಿತ್ಸಾಲಯ ಆವರಣ, ಪ್ರತಿಮೆಗಳ ಸ್ವಚ್ಛತೆ, ಸ್ವಚ್ಛತೆ ಕುರಿತ ಬೀದಿ ನಾಟಕ, ಯುವ ರ‍್ಯಾಲಿಗಳು, ಸಂಭಾಷಣೆ ಮತ್ತು ಕವನ.

84347

5.

ಸ್ವಚ್ಛತೆಯೇ ಸೇವೆ

ಪಟ್ಟಣಗಳು ಮತ್ತು ಹಳ್ಳಿಗಳಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಕುರಿತಂತೆ ಎನ್.ಎಸ್.ಎಸ್. ಸ್ವಯಂ ಸೇವಕರಿಗೆ ಸಾಮರ್ಥ್ಯ ವರ್ಧನೆ/ಅರಿವು ಕಾರ್ಯಕ್ರಮ,  ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಕೇಂದ್ರಗಳ ಮಾಹಿತಿಸಾಮಾನ್ಯ ಶ್ರಮದಾನ ಚಟುವಟಿಕೆಗಳು.

ಹಂತ ಸಂಖ್ಯೆ:1

635661

ಹಂತ ಸಂಖ್ಯೆ:2

1216951

ಹಂತ:3

1192335

6.

ಸ್ವಚ್ಛತಾ ಪಕ್ವಾಡ

ಎಲ್ಲ ಎನ್.ಎಸ್.ಎಸ್. ಘಟಕಗಳು ತಮ್ಮ ತಮ್ಮ ಸಂಸ್ಥೆಗಳ ಆವರಣ ಸ್ವಚ್ಛತೆಗೆ ನಾಲ್ಕು ದಿನಗಳನ್ನು ಮುಡಿಪಾಗಿಟ್ಟಿದ್ದವು ಮತ್ತು ಆವರಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಿದವು.

ಸಸಿ ನೆಡುವ ಮತ್ತು ನಿರ್ವಹಣೆ ಮೂಲಕ ಹಸಿರು ಆವರಣ ಉತ್ತೇಜನಕ್ಕೆ ಶ್ರಮಿಸಿದರು.

711383

7.

ಸಸಿ ನೆಡುವ ಕಾರ್ಯಕ್ರಮ

ತೋಟಗಾರಿಗೆಸಸಿ

1165023

(ನವೆಂಬರ್ 2019ರ ವರೆಗೆ)

8.

ರಕ್ತ ದಾನ

ಎನ್.ಎಸ್.ಎಸ್. ಸ್ವಯಂ ಸೇವಕರು ದಾನ ಮಾಡಿದ ರಕ್ತದ ಯುನಿಟ್ ಸಂಖ್ಯೆ

64150 ಯುನಿಟ್

 

9.

ಎಸ್.ಎಸ್.ಎಸ್. ಸ್ವಯಂಸೇವಕರಿಗೆ ಆತ್ಮರಕ್ಷಣೆ ತರಬೇತಿ

ಆತ್ಮ ರಕ್ಷಣೆ ಕುರಿತಂತೆ ತರಬೇತಿ ಪಡೆದ ಸ್ವಯಂ ಸೇವಕರ ಸಂಖ್ಯೆ

47567

10.

 ಜಾಗೃತಿ ಕಾರ್ಯಕ್ರಮರ‍್ಯಾಲಿಗಳುಅಭಿಯಾನಗಳು

ಶಿಕ್ಷಣ, ವಯಸ್ಕರ ಶಿಕ್ಷಣ, ಆರೋಗ್ಯ, ಕುಟುಂಬ ಕಲ್ಯಾಣ, ಪೌಷ್ಟಿಕತೆ, ರಕ್ತದಾನ, ಏಡ್ಸ್ ಜಾಗೃತಿ, ಸ್ವಚ್ಥತೆ ಮತ್ತು ರಸ್ತೆಗಳ, ಚರಂಡಿ ನಿರ್ವಹಣೆ ಇತ್ಯಾದಿ, ಮಹಿಳೆಯರ ಸ್ಥಾನಮಾನ ಸುಧಾರಣೆ, ಮಹಿಳೆಯರ ಹಕ್ಕು, ಮಹಿಳೆಯರಿಗೆ ಕೌಶಲ ಹೆಚ್ಚಳ ಇತ್ಯಾದಿ ಹಾಗೂ ಮತದಾರರ ಜಾಗೃತಿ ಕುರಿತ ರ‍್ಯಾಲಿಗಳು,

39767

ಕಾರ್ಯಕ್ರಮಗಳ ಸಂಖ್ಯೆ

 

2461253

ಸ್ವಯಂ ಸೇವಕರ ಸಂಖ್ಯೆ

11

ಗಣರಾಜ್ಯ ದಿನ ಪೂರ್ವ ಶಿಬಿರ

ಗಣರಾಜ್ಯ ದಿನ ಪೂರ್ವ ಶಿಬಿರದಲ್ಲಿ ಭಾಗಿಯಾದ ಸ್ವಯಂ ಸೇವಕರ ಸಂಖ್ಯೆ

 

1000

12.

ಏಕ ಭಾರತ ಶ್ರೇಷ್ಠ ಭಾರತ  2019-2020

ಆಯಾ ರಾಜ್ಯಗಳ ಚಲನಚಿತ್ರ ಪ್ರದರ್ಶನ, ಜೊತೆಗೂಡಿಸಿರುವ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ, ಇತಿಹಾಸ, ಪ್ರವಾಸೋದ್ಯಮ ಇತ್ಯಾದಿ ಕುರಿತಂತೆ ಉಪನ್ಯಾಸ ಕಾರ್ಯಕ್ರಮ.

288729

(2019ನವೆಂಬರ್ ವರೆಗೆ)

13.

ಸಂವಿಧಾನ ದಿನ Day, 2019-2020

ನಾಗರಿಕ ಕೇಂದ್ರಿತವಾಗಿ ಗಮನ ಹರಿಸಿದ ಜಾಗೃತಿ ಅಭಿಯಾನ, 2019 ಭಾರತದ ಸಂವಿಧಾನದ (ವಿಧಿ 51ಎ ಲಗತ್ತಿಸಲಾಗಿದೆ)ಲ್ಲಿ ನಮೂದಿಸಲಾಗಿರುವ ಮೂಲಭೂತ ಕರ್ತವ್ಯಗಳು ಸೇರಿದಂತೆ ಕರ್ತವ್ಯಗಳು, ಎನ್.ಎಸ್.ಎಸ್. ರ‍್ಯಾಲಿಗಳು, ಜಾಗೃತಿ ರ‍್ಯಾಲಿಗಳು, ಎಲ್ಲ ವಿಶ್ವವಿದ್ಯಾಲಯಗಳು/ ಕಾಲೇಜುಗಳು/ಶಾಲೆಗಳಲ್ಲಿನ ಎನ್.ಎಸ್.ಎಸ್. ಘಟಕಗಳಲ್ಲಿ ಹೆಸರಾಂತ ವ್ಯಕ್ತಿಗಳಿಂದ ಸಂವಿಧಾನದ ಮುನ್ನುಡಿ , ವಿಧಿ 51ಎ ಮತ್ತು ಭಾರತೀಯ ಸಂವಿಧಾನ ಕುರಿತಂತೆ ಉಪನ್ಯಾಸ, ಚರ್ಚೆಗಳು, ಮಾತುಕತೆ,

3837481

(2019ನವೆಂಬರ್ ವರೆಗೆ)

 

3.       ಯುವ ಅಭಿವೃದ್ಧಿ ಕುರಿತ ರಾಜೀವ್ ಗಾಂಧಿ ರಾಷ್ಟ್ರೀಯ ಸಂಸ್ಥೆ  2014-2015 ರಿಂದ 2019-2020ರವರೆಗಿನ ಅವಧಿಯ ಸಾಧನೆಗಳು.

ತಮಿಳುನಾಡಿನ, ಶ್ರೀ ಪೆರಂಬದೂರಿನ ಯುವಜನರ ಅಭಿವೃದ್ಧಿ ಕುರಿತ ರಾಜೀವಗಾಂಧಿ ರಾಷ್ಟ್ರೀಯ ಸಂಸ್ಥೆ (ಆರ್.ಜಿ.ಎನ್.ಐ.ವೈ.ಡಿ.), ಒಂದು ರಾಷ್ಟ್ರೀಯ ಮಹತ್ವದ ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಸಂಸತ್ತಿನ ಕಾಯಿದೆಯ ಅಡಿ ಸ್ಥಾಪಿಸಲಾಗಿದೆ.

A.         ಶೈಕ್ಷಣಿಕ ಚಟುವಟಿಕೆಗಳು

(i)         ಶೈಕ್ಷಣಿಕ ಕಾರ್ಯಕ್ರಮಗಳು:

·         ವಿವಿಧ ವಿಭಾಗಗಳ ಐವರು ಪಿಎಚ್.ಡಿ. ವಿದ್ವಾಂಸರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

·         ವಿವಿಧ ವಿಷಯಗಳಲ್ಲಿ ಅಂದರೆ ಯುವಜನರ ಸಬಲೀಕರಣ, ವೃತ್ತಿಪರತೆ ಸಮಾಲೋಚನೆ, ಲಿಂಗ ಅಧ್ಯಯನ, ಸ್ಥಳೀಯ ಆಡಳಿತ, ಜೀವನ ಕೌಶಲ ಶಿಕ್ಷಣ ಮತ್ತು ಅಭಿವೃದ್ಧಿ ರೂಢಿಗಳಲ್ಲಿ 414 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಕಾರ್ಯಕ್ರಮ ಪೂರ್ಣಗೊಳಿಸಿದ್ದಾರೆ.

·         153 ವಿದ್ಯಾರ್ಥಿಗಳು ಯಶಸ್ವಿಯಾಗಿ ಮೂರು ವರ್ಷಗಳ ಬಿ.ವೋಕ್ ಪದವಿ ಕಾರ್ಯಕ್ರಮವನ್ನು ಎಟಿಡಿಸಿ, ನವದೆಹಲಿಯ ಸಹಯೋಗದಲ್ಲಿ ಪೂರ್ಣಗೊಳಿಸಿದ್ದಾರೆ.

 (ii)        ಸಂಶೋಧನೆಮೌಲ್ಯಮಾಪನ:

·    ಆರ್.ಜಿ.ಎನ್.ಐ.ವೈ.ಡಿ. ಬೋಧಕ ಸದಸ್ಯರಿಂದ ಸಾಕಷ್ಟು ಸಂಶೋಧನಾ ಚಟುವಟಿಕೆಗಳು ನಡೆದಿವೆ. ಇದರಲ್ಲಿ ತಮಿಳುನಾಡಿನ ವಲಸೆ ಸಮೀಕ್ಷೆ, ಉಪ ನಗರಗಳ ರೈಲು ನಿಲ್ದಾಣಗಳ ನೈರ್ಮಲ್ಯದ ಸಮೀಕ್ಷೆ, ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಅಗತ್ಯ ನೆರವಿನ ಸಮೀಕ್ಷೆ ಮತ್ತು ತಮಿಳು ನಾಡಿನ ಐದು ಜಿಲ್ಲೆಗಳಲ್ಲಿನ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಯೋಜನೆಗೆ ಮೂರನೇ ವ್ಯಕ್ತಿಯ ನಿರ್ಧರಣೆ ಮತ್ತು ತರಬೇತಿ ಕೈಪಿಡಿ ಅಭಿವೃದ್ಧಿ (ಜಿಪಿಡಿಪಿ)ಯೂ ಸೇರಿದೆ.

 (iii)       ನೀತಿ ಉಪಕ್ರಮಗಳು:

·    ಆರ್.ಜಿ.ಎನ್.ಐ.ವೈ.ಡಿ.ಯ ಬೋಧಕ ಸದಸ್ಯರು ಆಂಧ್ರಪ್ರದೇಶ, ಕೇರಳ, ಒಡಿಶಾ ಮತ್ತು ತಮಿಳುನಾಡಿನನಲ್ಲಿನ ರಾಜ್ಯ ಯುವ ನೀತಿ ರೂಪಿಸುವ ಅವಧಿಯಲ್ಲಿ ಪ್ರಮುಖ ತಂಡದ ಸದಸ್ಯರೂ ಆಗಿದ್ದಾರೆ.

·    ಸಿಕ್ಕಿಂ ಮತ್ತು ನಾಗಾಲ್ಯಾಂಡ್ ನಲ್ಲಿ 2014ರಲ್ಲಿ ರಾಜ್ಯ ಯುವ ನೀತಿ ರೂಪಿಸುವ/ಪರಿಷ್ಕರಿಸುವ ಕುರಿತಂತೆ ಸಮಾಲೋಚನಾ ಶಿಬಿರ ಆಯೋಜಿಸಲಾಗಿದೆ.

·    ತಮಿಳುನಾಡಿನಲ್ಲಿ ಹದಿಹರೆಯದವರ ಬಗ್ಗೆ ನೀತಿ ಸಂಕ್ಷಿಪ್ತ ರೂಪಗಳ ಸಿದ್ಧತೆ: ಯುನಿಸೆಫ್ಸಹಯೋಗದೊಂದಿಗೆ ತಮಿಳುನಾಡಿನಲ್ಲಿ ನೀತಿ ದೃಷ್ಟಿಕೋನಗಳನ್ನು ರೂಪಿಸಲು ಕೈಗೆತ್ತಿಕೊಳ್ಳಲಾಗಿದೆ (ಮಾರ್ಚ್ 2020 ರೊಳಗೆ ಪೂರ್ಣಗೊಳ್ಳಲಿದೆ)

 (iv)   ಯುವ ಅಭಿವೃದ್ಧಿ ಸೂಚ್ಯಂಕ ರೂಪಿಸುವುದು (ವೈ.ಡಿ.ಐ):

ಭಾರತ ಯುವ ಅಭಿವೃದ್ಧಿ ಸೂಚ್ಯಂಕ ಮತ್ತು ವರದಿ, ಇದು ಎಲ್ಲ 2017ರಲ್ಲಿ ರೂಪಿಸಲಾದ ಭಾರತದ ರಾಜ್ಯಗಳ ಯುಡಿಐ ಒಳಗೊಂಡಿದೆ.

 (v)      ಇತರ ಅನನ್ಯ ಉಪಕ್ರಮಗಳುಮಧ್ಯಪ್ರವೇಶ:

ಸಮುದಾಯ ಮಾನಸಿಕ ಆರೋಗ್ಯ, 80 ಗ್ರಾಮ ಪಂಚಾಯ್ತಿಗಳ ಆಸ್ತಿಯ ಶೋಧನೆ, ಕ್ಷೇತ್ರ ನಿರ್ವಹಣೆ ವ್ಯವಸ್ಥೆ ಕುರಿತ ಪ್ರಾಯೋಗಿಕ ಯೋಜನೆ, ಸಾಮಾಜಿಕ ಉದ್ಯಮಶೀಲತೆಯ ಆರಂಭಿಕ ಕ್ರಮ, ವೀಕ್ಷಕನ ಸ್ಥಾನ ಮಾನದ ಡಿಪ್ಲೊಮಾ.

ಕ್ಷೇತ್ರ ಸಂಪರ್ಕವಿಸ್ತರಣೆ ಕಾರ್ಯಕ್ರಮಗಳು:

ತಮಿಳುನಾಡಿನ ಶ್ರೀಪೆರಂಬದೂರ್, ಕಾಚಿಪೆಡು ಗ್ರಾಮದಲ್ಲಿ ಗ್ರಾಮ ದತ್ತು ಕಾರ್ಯಕ್ರಮ ಮತ್ತು ಅಸ್ಸಾಂನ ಪ್ಯಾರಂಗ ಮತ್ತು ಮೇಘಾಲಯದ ಉಮ್ ದೇನ್ ನಲ್ಲಿ ಮಾದರಿ ಗ್ರಾಮ ದತ್ತು ಕಾರ್ಯಕ್ರಮ.

ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನ:

ಶ್ರೀ ಪೆರಂಬದೂರು ಪಟ್ಟಣ ಪಂಚಾಯ್ತಿಯ ಪಂಚಾಲ್ ಪೆಟ್ ಮತ್ತು ನೆಮಿಲಿ ಗ್ರಾಮ ಪಂಚಾಯ್ತಿ ಪ್ರದೇಶದ ಜಲಕಾಯಗಳ ಸಂರಕ್ಷಣೆ ಮತ್ತು ರಕ್ಷಣೆ ಕಾರ್ಯಕ್ರಮ ಆಯೋಜನೆ. ಶ್ರೀ ಪೆರಂಬದೂರು ಬ್ಲಾಕ್ ನ ಶಾಲೆಗಳಲ್ಲಿ ಕೈತೊಳೆಯುವ ಅಭಿಯಾನದ ಆಯೋಜನೆ. ಶ್ರೀಪೆರಂಬದೂರ್ ನ ಸರ್ಕಾರಿ, ತಾಲೂಕು ಆಸ್ಪತ್ರೆಗಳಲ್ಲಿ ಸ್ವಚ್ಛತಾ ಚಟುವಟಿಕೆ. ತಮಿಳುನಾಡಿನ ತಿರುವಳ್ಳವೂರ್ ಮತ್ತು ಕಾಂಚಿಪುರಂ ಜಿಲ್ಲೆಯ ಆರು ಗ್ರಾಮ ಪಂಚಾಯ್ತಿಗಳಲ್ಲಿ ಬಯಲು ಶೌಚ ಮುಕ್ತ ಸಂಕಲ್ಪದ ಸಾಕಾರಕ್ಕೆ ಅಭಿಯಾನ.

ಈ ಪಿಆರ್.ಐಗಳಿಗೆ ಸ್ವಚ್ಛ ಪಂಚಾಯ್ತಿ ಪ್ರಶಸ್ತಿಗಳನ್ನು ಸಂಸ್ಥೆಯಿಂದ ನೀಡಲಾಗಿದೆ. ಸ್ವಚ್ಛ ಮತ್ತು ಸುಸ್ಥಿರ ಗ್ರಾಮಗಳುಧ್ಯೆಯದೊಂದಿಗೆ ತಮಿಳುನಾಡಿನ, ವೆಲ್ಲೂರು ಜಿಲ್ಲೆಯ, ತಿರುಪತ್ತೂರು ಬುಡಕಟ್ಟು ಪ್ರದೇಶದಲ್ಲಿ ವಿಶೇಷ ಎನ್.ಎಸ್.ಎಸ್. ಶಿಬಿರವನ್ನು ಆಯೋಜಿಸಲಾಗಿತ್ತು.

ರಾಷ್ಟ್ರೀಯ/ಅಂತಾರಾಷ್ಟ್ರೀಯ ಸಮಾವೇಶಗಳು, ವಿಚಾರಸಂಕಿರಣ ಮತ್ತು ಕಾರ್ಯಾಗಾರಗಳು:

10 ರಾಷ್ಟ್ರೀಯ ಮತ್ತು 2 ಅಂತಾರಾಷ್ಟ್ರೀಯ ಸಮಾವೇಶಗಳನ್ನು ಆಯೋಜಿಸಲಾಗಿದೆ.

ಸಂಸ್ಥೆಯಿಂದ ಪ್ರಮುಖ ಪ್ರಕಾಶನಗಳು:

ಸುಮಾರು 11 ಪ್ರಕಟಣೆಗಳನ್ನು ಯುವ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ವಿವಿಧ ಅಂಶಗಳನ್ನು ಒಳಗೊಂಡ ಬೋಧಕರಿಂದ ಹೊರತರಲಾಗಿದೆ.

ಪ್ರಮುಖ ಕಾರ್ಯಕ್ರಮ ಮತ್ತು ಸಮಿತಿಗಳಲ್ಲಿ ಬೋಧಕರ ಪಾಲ್ಗೊಳ್ಳುವಿಕೆ

ಆರ್.ಜಿ.ಎನ್.ಐ.ವೈ.ಡಿ. ಬೋಧಕ ಸದಸ್ಯರು ಸಾರ್ಕ್, ಬ್ರಿಕ್ಸ್ ನ ವಿವಿಧ ಸಭೆಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಚೈನಾ, ಕಜಕಿಸ್ತಾನ, ಇಸ್ತಾನ್ಬುಲ್, ಶ್ರೀಲಂಕಾ, ಕೆನಡಾ ಮತ್ತು ಉಗಾಂಡಾ ಮೊದಲಾದ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ.

B.        ತರಬೇತಿ ಕಾರ್ಯಕ್ರಮಗಳು

ಆರ್.ಜಿ.ಎನ್.ಐ.ವೈ.ಡಿ.ಯಿಂದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತರಬೇತುದಾರರ ತರಬೇತಿ (ಟಿಓಟಿ), ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳು, ಲಿಂಗ ಸಂವೇದನೆ ಕಾರ್ಯಕ್ರಮಗಳು, ಮಕ್ಕಳ ವೀಕ್ಷಣಾ ಮನೆಯಲ್ಲಿ ಹದಿಹರೆಯದವರಿಗೆ ಮಾನಸಿಕ-ಸಾಮಾಜಿಕ ಸಮಾಲೋಚನೆಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳುಯುವತಿಯರ ಉದ್ಯಮಶೀಲತೆ ಕಾರ್ಯಕ್ರಮಗಳು ಮತ್ತು ಸಕ್ರಿಯ ನಾಗರಿಕ ಕಾರ್ಯಕ್ರಮಗಳೂ ಸೇರಿವೆ.

ಅಂತಾರಾಷ್ಟ್ರೀಯ ಕಾರ್ಯಕ್ರಮಗಳು

ಬೋಧಕರು ಮತ್ತು ವಿದ್ಯಾರ್ಥಿಗಳು ಸಿಐಆರ್.ಡಿ.ಎ.ಪಿ ಸಹಯೋಗದಲ್ಲಿ ವಿವಿಧ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಮತ್ತು ಬಾಂಗ್ಲಾದೇಶ, ಶ್ರೀಲಂಕಾಗಳಿಗೆ ಯುವ ವಿನಿಮಯ ಕಾರ್ಯಕ್ರಮಕ್ಕಾಗಿ ಭೇಟಿ ನೀಡಿದ್ದರು.

ಆರ್.ಜಿ.ಎನ್.ಐ.ವೈ.ಡಿ ಪ್ರಾದೇಶಿಕ ಕೇಂದ್ರದಿಂದ ಕಾರ್ಯಕ್ರಮಗಳು:

ಹಲವಾರು ಟಿಓಟಿಗಳು, ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳು, ಉದ್ಯಮಶೀಲತಾ ಕಾರ್ಯಕ್ರಮಗಳು, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಇತ್ಯಾದಿಯನ್ನು ಆರ್.ಜಿ.ಎನ್.ಐ.ವೈ.ಡಿ. ಪ್ರಾದೇಶಿಕ ಕೇಂದ್ರ ಚಂಢೀಗಢದ ವತಿಯಿಂದ ಈ ಅವಧಿಯಲ್ಲಿ ಆಯೋಜಿಸಲಾಗಿತ್ತು.

ಸಿ.   ತಿಳಿವಳಿಕೆ ಒಪ್ಪಂದ/ಸಹಯೋಗಗಳಿಗೆ ಅಂಕಿತ:

ಇಸ್ರೋ, ಐಐಆರ್.ಎಸ್, ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಮತ್ತು ಇತರ ಸಂಸ್ಥೆಗಳೊಂದಿಗೆ ವಿವಿಧ ತಿಳಿವಳಿಕೆ ಒಪ್ಪಂದಗಳಿಗೆ ಅಂಕಿತ ಹಾಕಲಾಗಿದೆ.

*****


(Release ID: 1597323) Visitor Counter : 378