ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಪ್ರಗತಿ ಮೈದಾನದ ಭೂಮಿ ಮಂಜೂರಾತಿಗೆ ಅನುಮೋದನೆ

Posted On: 04 DEC 2019 1:33PM by PIB Bengaluru

ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಪ್ರಗತಿ ಮೈದಾನದ ಭೂಮಿ ಮಂಜೂರಾತಿಗೆ ಅನುಮೋದನೆ

 

ಪ್ರಗತಿ ಮೈದಾನವನ್ನು ವಿಶ್ವ ದರ್ಜೆಯ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರವನ್ನಾಗಿ ಪುನರಾಭಿವೃದ್ಧಿಗೊಳಿಸುವ ಐಟಿಪಿಒ  ಬೃಹತ್ ಯೋಜನೆಗೆ 99 ವರ್ಷಗಳ ನಿಗದಿತ ಗುತ್ತಿಗೆ ಆಧಾರದ ಪ್ರಗತಿ ಮೈದಾನದಲ್ಲಿ 3.7 ಎಕರೆ ಭೂಮಿಯನ್ನು ವರ್ಗಾಯಿಸಲು ಐಟಿಪಿಒ ಅಧಿಕಾರ ಹೊಂದಿದೆಅತ್ಯಾಧುನಿಕ ಸೌಕರ್ಯಗಳುಳ್ಳ ಪಂಚತಾರಾ ಹೋಟೆಲ್ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಐಟಿಡಿಸಿ ಮತ್ತು  ಆರ್ ಸಿ ಟಿ ಸಿ ವಿಶೇಷ ವಾಹನಗಳ ನಿರ್ಮಾಣಕ್ಕೆ ಮುಂದಾಗಿವೆಹೋಟೆಲ್ ಸೌಲಭ್ಯ ಐಇಸಿಸಿ ಯೋಜನೆಗೆ ಹೆಚ್ಚಿನ ಮಹತ್ವ ತರಲಿದೆ ಜೊತೆಗೆ ಉದ್ಯೋಗ ಸೃಷ್ಟಿಯೊಂದಿಗೆ ಭಾರತವನ್ನು ವ್ಯಾಪಾರ ಮತ್ತು ವಾಣಿಜ್ಯಕ್ಕಾಗಿ ಜಾಗತಿಕ ತಾಣವಾಗಿ ಉತ್ತೇಜಿಸಲಿದೆಅಲ್ಲದೆ ಮೇಕ್ ಇನ್ ಇಂಡಿಯಾಸ್ಕಿಲ್ ಇಂಡಿಯಾ ಮತ್ತು ಇನ್ವೆಸ್ಟ್ ಇಂಡಿಯಾದಂತಹ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳನ್ನು ಬೆಂಬಲಿಸುವಂತಹ ಪ್ರಸಿದ್ಧ ಅಂತಾರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ಉತ್ತೇಜನ ನೀಡುತ್ತದೆಐಇಸಿಸಿ ಯೋಜನೆ ಭರದಿಂದ ಸಾಗಿದ್ದು 2020 – 21  ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು ಯೋಜನೆಗೆ ಮಂಜೂರಾತಿಯನ್ನು ನೀಡಿದ್ದು  611 ಕೋಟಿ ರೂ ಗಳ ಬೆಲೆಗೆ 99 ವರ್ಷಗಳ ನಿಗದಿತ ಅವಧಿಯ ಗುತ್ತಿಗೆ ಆಧಾರದ ಮೇಲೆ ಎಸ್ ಪಿ ವಿ ಗೆ 3.7 ಎಕರೆ ಭೂಮಿಯನ್ನು ಇಂಡಿಯಾ ಟ್ರೇಡ್ ಪ್ರಮೋಶನ್ ಆರ್ಗನೈಸೇಶನ್ (ಐಟಿಪಿಒಗೆ ವರ್ಗಾಯಿಸುವಂತೆ ಅಧಿಕೃತ ಸೂಚನೆ ನೀಡಿದೆಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿಇದನ್ನು ನಿರ್ಮಿಸಲಿದ್ದು ಪಂಚತಾರಾ ಹೋಟೆಲ್ ಅಭಿವೃದ್ಧಿ ಮತ್ತು ಕಾರ್ಯ ಚಟುವಟಿಕೆಗೆ ಭಾರತೀಯ ರೈಲ್ವೇ ಸೌಲಭ್ಯ ನಿಗಮ (ಐಟಿಡಿಸಿಮತ್ತು ಪ್ರವಾಸೋದ್ಯಮ ನಿಗಮ ( ಆರ್ ಸಿ ಟಿ ಸಿಕೈ ಜೋಡಿಸಲಿವೆ.

ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮ್ಮೇಳನಾ ಕೇಂದ್ರದ (ಐಇಸಿಸಿಯೋಜನೆ ಅನುಷ್ಠಾನ ಭರದಿಂದ ಸಾಗಿದ್ದು 2020 – 21 ರಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ.

ತ್ವರಿತವಾಗಿ ಪ್ರಗತಿ ಮೈದಾನದ ಹೋಟೆಲ್ ಯೋಜನೆಯನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಲು ಎಸ್ ಪಿ ವಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಿದೆಇದಕ್ಕಾಗಿ ನಿರ್ಮಾಣ ಮತ್ತು ಹೋಟೆಲ್ ನ್ನು ಸುದೀರ್ಘಾವಧಿಗೆ ನಿಗದಿತ ಗುತ್ತಿಗೆ ಆಧಾರದ ಮೇಲೆ ನಿರ್ವಹಿಸಲು ಪಾರದರ್ಶಕ ಸ್ಪರ್ಧಾತ್ಮದ ಹರಾಜಿನ ಮೂಲಕ ಸೂಕ್ತ ವ್ಯಕ್ತಿಗತ ಅಥವಾ ಯಾವುದೇ ವೃತ್ತಿಪರ ಬ್ರಾಂಡ್  ಅಭಿವೃದ್ಧಿದಾರರು ಮತ್ತು ನಿರ್ವಹಣೆದಾರರನ್ನು ಆಯ್ಕೆ ಮಾಡಬಹುದಾಗಿದೆ.

ಉತ್ತಮ ಗುಣಮಟ್ಟ ಮತ್ತು ಸೇವೆಗಳೊಂದಿಗೆ ಭಾರತದ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮವನ್ನು ಆಮೂಲಾಗ್ರ ಬದಲಾವಣೆಗೊಳಿಸುವ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಗತಿ ಮೈದಾನವನ್ನು ವಿಶ್ವ ದರ್ಜೆ ಐಇಸಿಸಿ ರೂಪದಲ್ಲಿ ಪುನರಾಭಿವೃದ್ಧಿಗೊಳಿಸಲು ಐಟಿಪಿಒ ಬೃಹತ್ ಯೋಜನೆಯನ್ನು ಜಾರಿಗೆ ತರುತ್ತಿದೆವಿಶ್ವಾದ್ಯಂತ ಯಾವುದೇ ಸಭೆ ಸಮಾರಂಭಗಳುಸಮಾವೇಶಗಳು ಮತ್ತು ಪ್ರದರ್ಶನಗಳಿಗೆ ಹೋಟೆಲ್ ಸೌಲಭ್ಯ ಅವಿಭಾಜ್ಯ ಅಂಗವಾಗಿದೆ.  

ಭಾರತವನ್ನು ಜಾಗತಿಕ ಸಭೆ ಸಮಾರಂಭಸಮಾವೇಶ ಮತ್ತು ಪ್ರದರ್ಶನ (ಎಂಐಸಿಇಕೇಂದ್ರವನ್ನಾಗಿ ಪ್ರೋತ್ಸಾಹಿಸಲು ಹೋಟೆಲ್ ಸೌಲಭ್ಯ ಐಇಸಿಸಿಯ ಒಂದು ಅವಿಭಾಜ್ಯ ಅಂಗವಾಗಿದೆಜೊತೆಗೆ ಇದು ಉದ್ಯೋಗ ಸೃಷ್ಟಿಯನ್ನು ಮಾಡುವುದಲ್ಲದೆ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಉತ್ತೇಜನವನ್ನು ನೀಡಲಿದೆ  ಸಿ ಸಿ ಯೋಜನೆಗೆ  ಹೋಟೆಲ್ ಮೌಲ್ಯ ವೃದ್ಧಿಸಲಿದೆ ಮತ್ತು ಭಾರತೀಯ ವ್ಯಾಪಾರ ಮತ್ತು ಉದ್ಯಮಕ್ಕೆ ಲಾಭದಾಯಕವಾಗಲಿದೆ.

ಪ್ರಗತಿ ಮೈದಾನದ ರೂಪಾಂತರದಿಂದಾಗಿ ಪ್ರತಿವರ್ಷ ಅಂತಾರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರು ಮತ್ತು ಕಿರು ವ್ಯಾಪಾರಿಗಳಿಗೂ ಲಾಭವಾಗಲಿದೆಸೌಕರ್ಯಾಭಿವೃದ್ಧಿ ಮತ್ತು ಆಧುನಿಕ ಸೌಲಭ್ಯಗಳು ಪಾಲ್ಗೊಳ್ಳುವ ವ್ಯಾಪಾರಿಗಳಿಗೆಉದ್ದಿಮೆದಾರರಿಗೆ ಮತ್ತು ಪ್ರವಾಸಿಗರಿಗೆ ಬಹಳ ಲಾಭದಾಯಕವಾಗಿವೆ ವ್ಯಾಪಾರ ಮೇಳವು ವಹಿವಾಟು ವಿಸ್ತರಣೆ ಮತ್ತು ಭಾರತೀಯ ಸರಕು ಮತ್ತು ಸೇವೆಗಳನ್ನು ಉತ್ತೇಜಿಸಲು ಉಜ್ವಲ ವೇದಿಕೆಯಾಗಲಿದೆ.

*******



(Release ID: 1594960) Visitor Counter : 99


Read this release in: English , Urdu , Hindi , Tamil , Telugu