ಸಂಪುಟ

ಲೇಹ್‌ನಲ್ಲಿ ಸೋವಾ ರಿಗ್ಪಾ ರಾಷ್ಟ್ರೀಯ ಸಂಸ್ಥೆ(ಎನ್‌ಐಎಸ್ಆರ್) ಸ್ಥಾಪನೆಗೆ ಸಂಪುಟ ಅಂಗೀಕಾರ

Posted On: 20 NOV 2019 10:45PM by PIB Bengaluru

ಲೇಹ್ನಲ್ಲಿ ಸೋವಾ ರಿಗ್ಪಾ ರಾಷ್ಟ್ರೀಯ ಸಂಸ್ಥೆ(ಎನ್ಐಎಸ್ಆರ್ಸ್ಥಾಪನೆಗೆ ಸಂಪುಟ ಅಂಗೀಕಾರ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು  ಲೇಹ್ನಲ್ಲಿ ಆಯುಷ್ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಸೋವಾ-ರಿಗ್ಪಾ ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ನಿರ್ಮಾಣ ಹಂತದಿಂದಲೇ ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಹಂತ -14 (ರೂ .1,44,200-2,18,200/ಪೂರ್ವ-ಪರಿಷ್ಕೃತ ರೂ .37,000-67000 / - + ರೂ .10000 / -  ಗ್ರೇಡ್ ಪೇ /) ನಲ್ಲಿ ನಿರ್ದೇಶಕರ ಹುದ್ದೆಯನ್ನು ನಿರ್ಮಿಸಲೂ ಸಹ ಅನುಮೋದನೆ ನೀಡಿದೆ

ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ರಚಿಸಿದ ಪರಿಣಾಮವಾಗಿ ಮತ್ತು ಲಡಾಕ್ ಸ್ಥಳೀಯ ಸಂಸ್ಕೃತಿಯ ಉತ್ತೇಜನಕ್ಕಾಗಿಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ಲೇಹ್ನಲ್ಲಿ ಅಂದಾಜು 47.25 ಕೋಟಿ ರೂ.ವೆಚ್ಚದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋವಾ-ರಿಗ್ಪಾ (ಎನ್ಐಎಸ್ಆರ್ಸ್ಥಾಪಿಸುವ ಮೂಲಕ ಸೋವಾ-ರಿಗ್ಪಾ ವೈದ್ಯ ಪದ್ಧತಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸೋವಾ-ರಿಗ್ಪಾ ಭಾರತದ ಹಿಮಾಲಯ ಪ್ರದೇಶದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿದೆಇದನ್ನು ಸಿಕ್ಕಿಂಅರುಣಾಚಲ ಪ್ರದೇಶಡಾರ್ಜಿಲಿಂಗ್ (ಪಶ್ಚಿಮ ಬಂಗಾಳ), ಹಿಮಾಚಲ ಪ್ರದೇಶಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ಈಗ ಭಾರತದಾದ್ಯಂತ ಜನಪ್ರಿಯವಾಗಿ ಅಭ್ಯಾಸ ಮಾಡಲಾಗುತ್ತಿದೆ.

ಸೋವಾ-ರಿಗ್ಪಾ ರಾಷ್ಟ್ರೀಯ ಸಂಸ್ಥೆಯ ಸ್ಥಾಪನೆಯು ಭಾರತೀಯ ಉಪ-ಖಂಡದಲ್ಲಿ ಸೋವಾ-ರಿಗ್ಪಾ ಪುನರುಜ್ಜೀವನಕ್ಕೆ ಸಹಕಾರ ನೀಡುತ್ತದೆಭಾರತದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರ ದೇಶಗಳ ಸೋವಾ-ರಿಗ್ಪಾ ವಿದ್ಯಾರ್ಥಿಗಳಿಗೂ ಈ ಸಂಸ್ಥೆ ಅವಕಾಶಗಳನ್ನು ಒದಗಿಸುತ್ತದೆ.

ಪ್ರಧಾನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಸೋವಾ-ರಿಗ್ಪಾದಲ್ಲಿ ಅಂತರಶಿಕ್ಷಣ ಶಿಕ್ಷಣ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮತ್ತು ವಿವಿಧ ಔಷಧ ಪದ್ಧಿತಿಗಳ ಏಕೀಕರಣಕ್ಕೆ ಅನುಕೂಲವಾಗುವಂತೆ ಆಯುಷ್ ಸಚಿವಾಲಯದ ಅಡಿಯಲ್ಲಿ  ಸಂಸ್ಥೆಯು ಸ್ವಾಯತ್ತ ರಾಷ್ಟ್ರೀಯ ಸಂಸ್ಥೆಯಾಗಿದೆ.

ಎನ್ಐಎಸ್ಆರ್ ಅನ್ನು ಸ್ಥಾಪಿಸಿದ ನಂತರಈಗ ಅಸ್ತಿತ್ವದಲ್ಲಿರುವ ಸಂಸ್ಕೃತಿ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ ಸೋವಾ ರಿಗ್ಪಾ ಸಂಸ್ಥೆಗಳು – ಸಾರನಾಥ ಹಾಗೂ ವಾರಣಾಸಿಯ ಟಿಬೇಟಿಯನ್ ಅಧ್ಯಯನದ ಕೇಂದ್ರೀಯ ವಿಶ್ವವಿದ್ಯಾಲಯ, ಮತ್ತು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಬೌದ್ಧ ಅಧ್ಯಯನಲೇಹ್ಯೂನಿಯನ್ ಟೆರಿಟರಿ ಆಫ್ ಲಡಾಖ್ಇವು ಮತ್ತು ಎನ್ಐಎಸ್ಆರ್ ಜೊತೆ ಸಮನ್ವಯ ಸ್ಥಾಪಿಸಲಾಗುವುದು.

ಇದು ಗುಣಮಟ್ಟದ ಶಿಕ್ಷಣವೈಜ್ಞಾನಿಕ ಮಾನ್ಯೆತೆಗುಣಮಟ್ಟದ ನಿಯಂತ್ರಣ ಮತ್ತು ಪ್ರಮಾಣೀಕರಣ ಮತ್ತು ಸೋವಾ-ರಿಗ್ಪಾ ಉತ್ಪನ್ನಗಳ ಸುರಕ್ಷತಾ ಮೌಲ್ಯಮಾಪನಪ್ರಮಾಣೀಕೃತ ಸೋವಾ-ರಿಗ್ಪಾ ಆಧಾರಿತ ಟರ್ಷಿಯರಿ ಆರೋಗ್ಯ ವಿತರಣೆ ಮತ್ತು ಪದವಿಪೂರ್ವಸ್ನಾತಕೋತ್ತರ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಸೋವಾ-ರಿಗ್ಪಾ ಅಂತರಶಿಕ್ಷಣ ಸಂಶೋಧನೆ ಮತ್ತು ಶಿಕ್ಷಣವನ್ನು ಉತ್ತೇಜಿಸಲು ಅನುಕೂಲವಾಗಲಿದೆ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋವಾ ರಿಗ್ಪಾ ಅತ್ಯುತ್ತಮವಾದ ಸೋವಾ-ರಿಗ್ಪಾ ಚಿಕಿತ್ಸೆಯನ್ನು ಗುರುತಿಸುತ್ತದೆ - ಅವುಗಳ ಪ್ರಮಾಣಿತ ಕಾರ್ಯವಿಧಾನಗಳು ಸೇರಿದಂತೆ - ಸಾಂಪ್ರದಾಯಿಕ ಸೋವಾ-ರಿಗ್ಪಾ ತತ್ವದ ಚೌಕಟ್ಟಿನೊಳಗೆ ಮತ್ತು ಜೈವಿಕ-ಆಣ್ವಿಕ ಪಾಶ್ಚಿಮಾತ್ಯ ಔಷಧದೊಂದಿಗೆ ಸಹ-ಸಂಬಂಧದೊಮದಿಗೆ ಸಾಮಾನ್ಯ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ನೆರವಾಗುತ್ತದೆ.

ಉದ್ದೇಶ

ಸೋವಾ-ರಿಗ್ಪಾದ ಸಾಂಪ್ರದಾಯಿಕ ಬುದ್ಧಿಮತ್ತೆ ಮತ್ತು ಆಧುನಿಕ ವಿಜ್ಞಾನ, ಪರಿಕರಗಳು ಮತ್ತು ತಂತ್ರಜ್ಞಾನದ ನಡುವೆ ಉಪಯುಕ್ತ ಸಮನ್ವಯ ತರುವ ಉದ್ದೇಶದಿಂದ ಸೋವಾ-ರಿಗ್ಪಾ ಸಂಸ್ಥೆಯ ಉನ್ನತ ಸಂಸ್ಥೆಯಾಗಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋವಾ-ರಿಗ್ಪಾ (ಎನ್‌ಐಎಸ್ಆರ್)  ಸ್ಥಾಪನೆಯ ಉದ್ದೇಶವಾಗಿದೆ. ಇದು ಸೋವಾ-ರಿಗ್ಪಾದ ಅಂತರಶಿಕ್ಷಣ ಸಂಶೋಧನೆ ಮತ್ತು ಶಿಕ್ಷಣವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.


(Release ID: 1593058) Visitor Counter : 125