ಪ್ರಧಾನ ಮಂತ್ರಿಯವರ ಕಛೇರಿ

ನವದೆಹಲಿಯಲ್ಲಿ ಗರ್ವಿ ಗುಜರಾತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಅವರು ಮಾಡಿದ ಭಾಷಣದ ಪಠ್ಯ

Posted On: 02 SEP 2019 10:44PM by PIB Bengaluru

ನವದೆಹಲಿಯಲ್ಲಿ ಗರ್ವಿ ಗುಜರಾತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಅವರು ಮಾಡಿದ ಭಾಷಣದ ಪಠ್ಯ

 

ಗುಜರಾತ್ ನ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಜಿ, ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ಗುಜರಾತ್ ನ ಮಾಜಿ ಮುಖ್ಯಮಂತ್ರಿ ಸಹೋದರಿ ಆನಂದಿ ಬೆನ್, ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಜಿ ಮತ್ತು ಎಲ್ಲ ಗಣ್ಯರೇ ಹಾಗೂ ಇಲ್ಲಿ ನೆರೆದಿರುವ ಮಹನಿಯರೇ ಮತ್ತು ಮಹಿಳೆಯರೇ,

ಸುಮಾರು 12-15 ವರ್ಷಗಳ ನಂತರ ನಾನು ಇಲ್ಲಿ ಹಲವು ಜನರನ್ನು ನೋಡುತ್ತಿದ್ದೇನೆ ಮತ್ತು ಗುಜರಾತ್ ನಲ್ಲಿ ತಮ್ಮ ಯೌವ್ವನವನ್ನು ಕಳೆದ ಹಲವರು ಇಲ್ಲಿದ್ದೀರಿ. ಹಲವು ನಿವೃತ್ತ ಅಧಿಕಾರಿಗಳನ್ನು ಇಲ್ಲಿ ನೋಡುತ್ತಿದ್ದೇನೆ, ಅವರು ತಮ್ಮ ಅಧಿಕಾರಾವಧಿಯಲ್ಲಿ ಗುಜರಾತ್ ಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಹಾಗೂ ಅದರಿಂದಾಗಿ ಗುಜರಾತ್ ನ ದೀಪ ನಮಗೆ ಬೆಳಕು ನೀಡುತ್ತಿದೆ. 

ನಾನು ಗುಜರಾತ್ ನ ಗವರ್ನರ್ ಗೆ ವಿಶೇಷವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ಇಲ್ಲಿ ನಿಮ್ಮನ್ನೆಲ್ಲ ನೋಡುವ ಅವಕಾಶ ದೊರಕಿತು. ಕಟ್ಟಡವನ್ನು ಉದ್ಘಾಟಿಸುವುದು ಎರಡನೆಯ ಸಂಗತಿ. 

ಮೊದಲಿಗೆ ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು, ಗಣೇಶ ದೇಶದ ಎಲ್ಲರನ್ನು ಹರಸಲಿ ! ರಾಷ್ಟ್ರ ನಿರ್ಮಾಣದ ಪ್ರತಿಯೊಂದು ನಿರ್ಣಯಗಳು ಕೈಗೂಡಲಿ, ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ದೇಶ ನಿಮ್ಮೆಲ್ಲರಿಗೂ ಹಾಗೂ ದೇಶವಾಸಿಗಳಿಗೆಲ್ಲರಿಗೂ ವಿಶೇಷವಾಗಿ ಗುಜರಾತ್ ಜನತೆಗೆ ನನ್ನ ಶುಭ ಕಾಮನೆಗಳು. 

ಗಣೇಶ ಚತುರ್ಥಿ ದಿನ ಸಂಜೆ,  ಚತುರ್ಥಿಯ ನಂತರ ನಾವು ‘ಪ್ರತಿಕ್ರಮಣ’ ಅಥವಾ ‘ಆತ್ಮಾವಲೋಕನ’ ಪೂರ್ಣಗೊಳಿಸಬೇಕು. ಇದು ಜೈನ ಸಂಪ್ರದಾಯದಲ್ಲಿ ಅತ್ಯಂತ ಪ್ರಮುಖ ಕಾರ್ಯ ಮತ್ತು ಸಂಪ್ರದಾಯವಾಗಿದೆ. ಇದನ್ನು ‘ಮಿಚ್ಚಾಮಿ ದುಕದಮ್’ ಎನ್ನುತ್ತಾರೆ. ಯಾರನ್ನಾದರೂ ನೀವು ಮಾತಿನಿಂದ ಅಥವಾ ಕೃತಿಯಿಂದ ನೋಯಿಸಿದ್ದರೆ, ಅಂತಹವರಿಂದ ಕ್ಷಮೆ ಕೋರುವುದನ್ನು ‘ಮಿಚ್ಚಾಮಿ ದುಕದಮ್’ ಎಂದು ಕರೆಯಲಾಗುವುದು. ಹಾಗಾಗಿ ನಾನು ಗುಜರಾತ್ ನ ಜನತೆಗೆ ಹಾಗೂ ಎಲ್ಲ ದೇಶವಾಸಿಗಳಿಗೆ ಮತ್ತು ಇಡೀ ವಿಶ್ವದ ಜನತೆಗೆ ‘ಮಿಚ್ಚಾಮಿ ದುಕದಮ್‘ ಶುಭಾಶಯಗಳನ್ನು ಕೋರುತ್ತೇನೆ. 

ಸಿದ್ಧಿವಿನಾಯಕನ ಹಬ್ಬದ ವೇಳೆ ನಾವು  ಮತ್ತೊಂದು ಸಿದ್ಧಿಯ ಆಚರಣೆಗಾಗಿ ಇಲ್ಲಿ ನೆರೆದಿರುವುದು ಹರ್ಷತಂದಿದೆ. ಗರ್ವಿ ಗುಜರಾತ್ ಸದನ ನಿಮ್ಮೆಲ್ಲರನ್ನು ವಿಶೇಷವಾಗಿ ಗುಜರಾತ್ ನ ಭಾವನೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಪಾಲಿಸಿಕೊಂಡು ಬರುತ್ತಿರುವ ಕೋಟ್ಯಾಂತರ ಜನರಿಗೆ ಸೇವೆ ಸಲ್ಲಿಸಲು ಸಿದ್ಧವಾಗಿದೆ. ಅದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಹಾಗೂ ಗುಜರಾತ್ ನ ಜನತೆಯನ್ನು ಅಭಿನಂದಿಸುತ್ತೇನೆ. 

ನೀವೆಲ್ಲಾ ಈಗಷ್ಟೇ ಗುಜರಾತ್ ಭವನದ ಚಲನಚಿತ್ರವನ್ನು ವೀಕ್ಷಿಸಿದ್ದೀರಿ. ಆಗಷ್ಟೇ ನಾನು ಇಲ್ಲಿಗೆ ಬಂದೆ. ಕೆಲವು ಕ್ಷಣಗಳ ಹಿಂದೆ ಗುಜರಾತ್ ಸಂಸ್ಕೃತಿಯ ವೈಭವದ ಚಿತ್ರಣವನ್ನು ನೀವು ಪಡೆದುಕೊಂಡಿರಿ, ಕಡಿಮೆ ಸ್ಥಳಾವಕಾಶ ಮತ್ತು ಅತ್ಯಲ್ಪ ಸಮಯದಲ್ಲಿ ಕಲಾವಿದರು ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದಾರೆ. 

ಗೆಳೆಯರೇ, 

ಗುಜರಾತ್  ಭವನದ ನಂತರ, ಗರ್ವಿ ಗುಜರಾತ್ ಸದನ ಇರುವಿಕೆ ಹಲವು ಮಾರ್ಗಗಳಲ್ಲಿ ಲಭ್ಯವಾಗಲಿದೆ. ನಿಗದಿತ ಅವಧಿಗಿಂತ ಮುಂಚೆಯೇ ಅದ್ಭುತ ಕಟ್ಟಡವನ್ನು ನಿರ್ಮಾಣ ಮಾಡಿದ ಮತ್ತು ಈ ಕಟ್ಟಡ ನಿರ್ಮಾಣದಲ್ಲಿ ಭಾಗಿಯಾಗಿರುವ ಎಲ್ಲ ಗೆಳೆಯರನ್ನು ನಾನು ಅಭಿನಂದಿಸುತ್ತೇನೆ. 

ಈ ಸದನ ನಿರ್ಮಾಣಕ್ಕೆ ಎರಡು ವರ್ಷದ ಹಿಂದೆ ಸೆಪ್ಟೆಂಬರ್ ನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ನನಗೀಗ ಸೆಪ್ಟೆಂಬರ್ ತಿಂಗಳಲ್ಲಿ  ಅದನ್ನು ಉದ್ಘಾಟಿಸುವ ಅವಕಾಶ ದೊರೆತಿದೆ. ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಹವ್ಯಾಸದ ಬಗ್ಗೆ ನನಗೆ ಸಂತೋಷವಾಗುತ್ತದೆ. ಅದನ್ನು  ಸರ್ಕಾರಿ ಸಂಸ್ಥೆಗಳನ್ನು ಮತ್ತು ಸರ್ಕಾರಿ ಏಜೆನ್ಸಿಗಳು ಪಾಲಿಸಬೇಕು. 

ನಾನು ಗುಜರಾತ್ ನಲ್ಲಿದ್ದಾಗ ಬದ್ಧತೆಯಿಂದ ಹೇಳುತ್ತಿದ್ದುದೆಂದರೆ, ನಾನು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳನ್ನಷ್ಟೇ ಉದ್ಘಾಟಿಸುತ್ತೇನೆ ಎಂದು. ಇದರಲ್ಲಿ ಯಾವುದೇ ಅಹಂ ಇಲ್ಲ, ಕೇವಲ ಸಾರ್ವಜನಿಕ ಬದ್ಧತೆ ಮಾತ್ರ ಇದೆ. ಹಾಗಾಗಿ ನನ್ನ ಎಲ್ಲಾ ಸಹೋದ್ಯೋಗಿಗಳು ಕೂಡ ಅದೇ ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ ಮತ್ತು ನಾವು ಅದರಿಂದ ಅಗತ್ಯ ಫಲಿತಾಂಶಗಳನ್ನೂ ಸಹ ಪಡೆದಿದ್ದೇನೆ. ನಾವು ಅಂತಹ ಕೆಲಸದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಮಾತ್ರವಲ್ಲ ಅದನ್ನು ಎಲ್ಲ ಹಂತದಲ್ಲೂ ವಿಸ್ತರಿಸುವ ಅಗತ್ಯವಿದೆ. 

ಈ ಕಟ್ಟಡ ಮಿನಿ ಗುಜರಾತ್ ನ ಮಾದರಿಯಾಗಿದೆ ಮತ್ತು ಇದು ನಮ್ಮ ನವ ಭಾರತದ ಕನಸಿಗೆ ನೇರ ಪುರಾವೆಯಾಗಿದೆ. ನವಭಾರತದಲ್ಲಿ ನಾವು ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಮುಂದೆ ಕೊಂಡೊಯ್ಯಲು ಬಯಸಿದ್ದೇವೆ. ನಾವು ನಮ್ಮ ಬೇರುಗಳೊಂದಿಗೆ ಸಂಪರ್ಕ ಇಟ್ಟುಕೊಂಡೇ ಆಗಸವನ್ನು ಮುಟ್ಟಲು ಬಯಸುತ್ತಿದ್ದೇವೆ. 

ಈಗಾಗಲೇ ಈ ವರ್ಷದಂತೆ ಈ ಕಟ್ಟಡದಲ್ಲಿ ಆಧುನಿಕ ಸೌಕರ್ಯಗಳಿದ್ದು, ಪರಿಸರ ಸ್ನೇಹಿಯಾಗಿದೆ, ಮಳೆನೀರು ಕೊಯ್ಲು ವ್ಯವಸ್ಥೆಯಿದೆ, ಜಲಸಂಸ್ಕರಣೆ ಸೌಕರ್ಯವಿದ್ದು, ಮತ್ತೊಂದೆಡೆ ರಾಣಿ ಕಿ ವಾಗ್ ಚಿತ್ರಣವಿದೆ. ಸೌರಶಕ್ತಿ ಉತ್ಪಾದನಾ ವ್ಯವಸ್ಥೆಯನ್ನು ಜೊತೆಗೆ ಮೊಧೇರಾ ಸೂರ್ಯ ದೇವಾಲಯವೂ ಸಹ ಇದೆ. ಆಧುನಿಕ ತಂತ್ರಜ್ಞಾನವಲ್ಲದೆ, ಘನತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ, ಕಚ್ ನ ಲಿಪ್ಪಾನ್ ಕಲೆಯನ್ನು ಕಟ್ಟಡದ ಗೋಡೆಯ ಮೇಲೆ ಬಿಡಿಸಲಾಗಿದ್ದು, ಪ್ರಾಣಿ ತ್ಯಾಜ್ಯಕ್ಕೂ ಕಲೆಯ ರೂಪ ನೀಡಲಾಗಿದೆ. 

ಸಹೋದರ ಸಹೋದರಿಯರೇ, 

ಈ ಕಟ್ಟಡ ಗುಜರಾತ್ ನ ಕಲೆ ಮತ್ತು ಕರಕುಶಲ ಕಲೆ ಹಾಗೂ ಕೈಮಗ್ಗದ ವಸ್ತುಗಳಿಗೆ ಅತ್ಯಂತ ಪ್ರಾಮುಖ್ಯತೆಯನ್ನು  ನೀಡಲಾಗಿದ್ದು, ಅದರ ಜೊತೆಗೆ ಗುಜರಾತ್ ನ ಪಾರಂಪರಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿದೆ. ಜಗತ್ತಿನ ಎಲ್ಲ ಜನರು ಮತ್ತು ವಾಣಿಜ್ಯೋದ್ಯಮಿಗಳು ಭೇಟಿ ನೀಡುವ ದೇಶದ ರಾಜಧಾನಿಯಲ್ಲಿ ಎಲ್ಲ ಬಗೆಯ ಸೌಕರ್ಯಗಳನ್ನು ಹೊಂದಿರುವ ಈ ಕಟ್ಟಡ ಎಲ್ಲ ರೀತಿಯಲ್ಲೂ ಉಪಯುಕ್ತವಾಗಿದೆ. 

ಅದೇ ರೀತಿ ಗುಜರಾತಿ ಸಂಸ್ಕೃತಿಯನ್ನು ಆಧರಿಸುವ ಪ್ರದರ್ಶನಕ್ಕೆ ಕೇಂದ್ರೀಯ ಆರ್ಕ್ಯಾಯುಸಮ್ ನಲ್ಲಿ ಅವಕಾಶ ನೀಡಿರುವುದು ಶ್ಲಾಘನಾರ್ಹ. 

ನಾನು ಇಲ್ಲಿನ ಗುಜರಾತ್ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ನಾನು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಹಾರ ಮೇಳಗಳ ಮೂಲಕ ದೇಶಾದ್ಯಂತ ಪ್ರವಾಸಿಗರನ್ನು ಗುಜರಾತ್ ನೊಂದಿಗೆ ಬೆಸೆಯುವ ಕಾಲಾವಕಾಶ ಬೇಕು. 

ಅದೊಂದು ಕಾಲವಿತ್ತು, ಉತ್ತರ ಭಾರತದ ಜನರು, ವಿಶೇಷವಾಗಿ ಗುಜರಾತ್ ನ ಆಹಾರವನ್ನು ಇಷ್ಟಪಡುತ್ತಿರಲಿಲ್ಲ. ಅವರು ಹೀಗೆ ಹೇಳುತ್ತಿದ್ದರು ‘ಓ ವ್ಯಕ್ತಿಯೇ ಗುಜರಾತಿ ಆಹಾರ ತುಂಬಾ ಸಿಹಿ ಇರುತ್ತದೆ. ನೀವು ಹಾಗಲಕಾಯಿಗೂ ಸಕ್ಕರೆ ಸೇರಿಸುತ್ತೀರಿ ಎನ್ನುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಕೇಳುತ್ತಾರೆ ‘ಎಲ್ಲಿ ಉತ್ತಮ ಗುಜರಾತಿ ಆಹಾರ ಸಿಗುತ್ತದೆ ? ಎಲ್ಲಿ ಒಳ್ಳೆಯ ಗುಜರಾತಿ ಥಾಲಿ ದೊರಕುತ್ತದೆ ? ಎಂದು ಗುಜರಾತಿ ಜನರ ವಿಶೇಷತೆ ಎಂದರೆ ಅವರು, ಗುಜರಾತ್ ನಲ್ಲಿದ್ದಾಗ ಶನಿವಾರ ಮತ್ತು ಭಾನುವಾರ ಆಹಾರವನ್ನು ಬೇಯಿಸುವುದಿಲ್ಲ ಮತ್ತು ಅವರು ಹೊರಗೆ ಹೋಗಿ ಇಟಲಿಯನ್, ಮೆಕ್ಸಿಕನ್ ಅಥವಾ ದಕ್ಷಿಣ ಭಾರತದ ತಿನಿಸುಗಳನ್ನು ತಿನ್ನಲು ಬಯಸುತ್ತಾರೆ. ಆದರೆ ಗುಜರಾತ್ ನ ಹೊರಗೆ ಹೋದರೆ ಅವರು ಗುಜರಾತ್ ಖಾದ್ಯಗಳನ್ನೇ ಬಯಸುತ್ತಾರೆ. ಇಲ್ಲಿ ಖಮ್ಮಾನ್ ಅನ್ನು ಡೋಕ್ಲಾ ಎಂದು ಕರೆಯಲಾಗುತ್ತದೆ ಮತ್ತು ಹಂದ್ವಾ ಅನ್ನು ಕೂಡ ಡೋಕ್ಲಾ ಎಂದು ಕರೆಯಲಾಗುತ್ತದೆ. ಆದರೆ ಅವು ಒಂದೇ ಬಗೆಯವು. ಇತ್ತೀಚಿನ ದಿನಗಳಲ್ಲಿ ಗುಜರಾತ್ ನ ಜನರು ಒಳ್ಳೆಯ ಬ್ರ್ಯಾಂಡಿಂಗ್ ಮಾಡುವುದು ಮತ್ತು ಅವುಗಳನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಿಳಿಯಪಡಿಸುವುದರಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಖಮ್ಮಾನ್ ಡೋಕ್ಲಾ ಮತ್ತು ಹಂದ್ವಾ ಮೂರು ಕೂಡ ಭಿನ್ನ ಆಹಾರಗಳು. 

ಗುಜರಾತ್ ಗೆ ಹೆಚ್ಚಿನ ಬಂಡವಾಳವನ್ನು ಆಕರ್ಷಿಸಲು ಹೊಸ ಕಟ್ಟಡದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಗುಜರಾತ್ ನಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇದು ಪ್ರಮುಖ ಕೇಂದ್ರವಾಗಲಿದೆ. ಗುಜರಾತ್ ನಲ್ಲಿ ಬಂಡವಾಳ ಹೂಡಬಯಸುವ ಭಾರತೀಯ ಮತ್ತು ವಿದೇಶಿ ಹೂಡಿಕೆದಾರರಿಗೆ ಇನ್ನೂ ಹೆಚ್ಚಿನ ಸೌಕರ್ಯಗಳು ದೊರಕಲಿವೆ ಎಂಬ ವಿಶ್ವಾಸ ನನಗಿದೆ. 

ಗೆಳೆಯರೇ, 

ಕಟ್ಟಡದ ಆಧುನಿಕ ಊಟದ ಕೋಣೆಯಲ್ಲಿ ಜನರು ಕುಳಿತು ಡೋಕ್ಲಾ, ಫಲುಡಾ, ಖಾಂಡ್ವಿ, ಪುದೀನಾ ಮೆತಿಯಾ, ಮೋಹನ್ ಪಾಲ್, ತೆಪ್ಲಾ ಹೊ, ಸೇವ್ ಮತ್ತು ಟೊಮೆಟೊ ಚಾಟ್ ತಿನ್ನುವುದನ್ನು ಊಹಿಸಿಕೊಳ್ಳಿ, ಒಮ್ಮೆ ಪತ್ರಕರ್ತರು ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನನ್ನ ಸಂದರ್ಶನ ಮಾಡಲು ಬಯಸಿದ್ದರು. ಅವರು ಬೆಳಗಿನ ಉಪಹಾರದ ವೇಳೆ ಸಂದರ್ಶನ ಮಾಡುವ ಪರಿಪಾಠ ಹೊಂದಿದ್ದರು ಮತ್ತು ಉಪಹಾರ ತಿನ್ನುತ್ತಲೇ ಸಂದರ್ಶನ ಮಾಡುತ್ತಿದ್ದರು. ಸಂದರ್ಶನ ಚೆನ್ನಾಗಿತ್ತು, ನನಗೆ ಏನು ಹೇಳಬೇಕು ಮತ್ತು ಏನನ್ನು ಹೇಳಬೇಕೋ ಎಂಬುದು ತಿಳಿಯದಾಗಿತ್ತು ಮತ್ತು ನಾನು ಹೆಚ್ಚಿನದೇನನ್ನು ಹೇಳಲಿಲ್ಲ, ಆದರೆ ಆ ನಂತರ ಅವರು ವರದಿ ಮಾಡಿದಾಗ ಅವರು ಹೀಗೆ ಬರೆದಿದ್ದರು. ‘ನಾನು ಗುಜರಾತ್ ಭವನಕ್ಕೆ ಭೇಟಿ ನೀಡಿ, ಅಲ್ಲಿ ಗುಜರಾತ್ ಮುಖ್ಯಮಂತ್ರಿಯೊಂದಿಗೆ ಮಾತನಾಡಿದೆ. ಆದರೆ ಅವರು ಗುಜರಾತಿ ಉಪಹಾರ ನೀಡದೆ, ದಕ್ಷಿಣ ಭಾರತದ ಉಪಹಾರ ನೀಡಿದ್ದು ಬೇಸರವಾಯಿತು ಎಂದು ವರದಿ ಮಾಡಿದ್ದರು ಎಂದು ಹೇಳಿದ್ದರು. ಹಾಗಾಗಿ ಇದೀಗ ನಾನು ಅಂತಹ ಸ್ಥಿತಿಯನ್ನೇ ಇತರೆಯವರು ಎದುರಿಸುವುದು ಬೇಡ ಎಂದು ಬಯಸುತ್ತೇನೆ. ಗುಜರಾತ್ ಭವನಕ್ಕೆ ತನ್ನದೇ ಆದ ಸ್ವಂತಿಕೆ ಇದೆ ಮತ್ತು ಜನರು ಅದನ್ನು ನೋಡಿ ಅಲ್ಲಿಗೆ ಬರುತ್ತಾರೆ. 

ಗುಜರಾತ್ ಸದಾ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಕಾರ್ಮಿಕರ ಪ್ರಾಮುಖ್ಯತೆಯನ್ನು ಹೊಂದಿದೆ. ನಾನು ಸುಮಾರು ಒಂದೂವರೆ ದಶಕಗಳ ಕಾಲ ಗುಜರಾತ್ ನ ಮುಖ್ಯಮಂತ್ರಿಯಾಗಿ ಅಭಿವೃದ್ಧಿಗಾಗಿ ಗುಜರಾತ್ ನ ಭಾರಿ ಉತ್ಸಾಹವನ್ನು ಗಮನಿಸಿದ್ದೇನೆ. ಕಳೆದ ಐದು ವರ್ಷಗಳಿಂದೀಚೆಗೆ ಗುಜರಾತ್ ನ ಅಭಿವೃದ್ಧಿ ಪಯಣವನ್ನು ನಾನು ಗಮನಿಸಿದ್ದೇನೆ. ಮೊದಲು ಆನಂದಿ ಬೆನ್ ಪಟೇಲ್ ಅವರು ಅಭಿವೃದ್ಧಿಯ ವೇಗಕ್ಕೆ ಮತ್ತಷ್ಟು ಶಕ್ತಿ ಮತ್ತು ಸಾಮರ್ಥ್ಯವನ್ನು ತುಂಬಿದರು. ಆನಂತರ ರೂಪಾನಿ ಜಿ ಅವರ ಹೊಸ ಪ್ರಯತ್ನಗಳಿಂದಾಗಿ ಹೊಸ ಎತ್ತರಕ್ಕೆ ಏರಿದೆ. ಇತ್ತೀಚಿನ ದಿನಗಳಲ್ಲಿ ಗುಜರಾತ್ ನ ಪ್ರಗತಿ ದರ ಶೇಕಡ ಹತ್ತಕ್ಕೂ ಅಧಿಕವಿದೆ. 

ಗೆಳೆಯರೇ, 

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ  ರಾಜ್ಯದಲ್ಲಿ ಮತ್ತು ನಂತರ ಎರಡೂ ಸರ್ಕಾರಗಳ ಸಂಘಟಿತ ಪ್ರಯತ್ನದಿಂದಾಗಿ ಗುಜರಾತ್ ನ ಅಭಿವೃದ್ಧಿಗೆ ಇದ್ದ ಹಲವು ಅಡೆತಡೆಗಳನ್ನು ನಿವಾರಿಸಲಾಗಿದೆ. ಅಡೆತಡೆ ಎಂದರೆ ನರ್ಮದಾ ಅಣೆಕಟ್ಟು ಮತ್ತು ಈಗಷ್ಟೇ ವಿಜಯ್ ಜಿ ಅವರು ಆ ಬಗ್ಗೆ ಸಾಕಷ್ಟು ಉಲ್ಲೇಖ ಮಾಡಿದ್ದಾರೆ. ಇಂದು ನಾವು ಎಷ್ಟು ಬೇಗ ಸಮಸ್ಯೆ ಬಗೆಹರಿಯುತ್ತದೆಯೋ ಅಷ್ಟು ಬೇಗ ಗುಜರಾತ್ ನ ಗ್ರಾಮಗಳ ಜನರ ನೀರಡಿಕೆಯನ್ನು ನರ್ಮದಾ ನೀರು ನಿವಾರಿಸಲಿದೆ ಮತ್ತು ಅದು ರೈತರಿಗೆ ಅನುಕೂಲವಾಗಲಿದೆ. 

ಗೆಳೆಯರೇ, 

ಸೌನಿ ಯೋಜನಾ ಮತ್ತು ಸುಜಲಾಂ-ಸುಫಲಾಂ ನ ಯೋಜನೆಗಳು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಗುಜರಾತ್ ನ ಲಕ್ಷಾಂತರ ಕುಟುಂಬಗಳಿಗೆ ಇಂದು ಅನುಕೂಲವಾಗಲಿದೆ. ಗುಜರಾತ್ ನಲ್ಲಿ ಈಗ ನೀರಿನ ಲಭ್ಯತೆ ಖಾತ್ರಿಯಾಗಿದೆ. 

ಗುಜರಾತ್ ಜಲಸಂರಕ್ಷಣೆಯಲ್ಲಿ ಮಾತ್ರವಲ್ಲದೆ, ಗ್ರಾಮ ಗ್ರಾಮಗಳಿಗೆ ನೀರು ಪೂರೈಕೆಯಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ನನಗೆ ಸಂಸತವಾಗುತ್ತಿದೆ. ವ್ಯವಸ್ಥಿತ ರೂಪದಿಂದ ಇದು ಸಾಧ್ಯವಾಗಿದೆ ಮತ್ತು ಇದರಲ್ಲಿ ಜನರ ಸಹಭಾಗಿತ್ವವೂ ಸಹ ಒಳಗೊಂಡಿದೆ. ಸಾರ್ವಜನಿಕ ಸಹಭಾಗಿತ್ವದಿಂದ ಇದು ಈಡೇರಿದೆ. ಅಂತಹ ಪ್ರಯತ್ನಗಳಿಂದ ದೇಶದ ಪ್ರತಿಯೊಂದು ಮನೆಗೂ 2024ರ ವೇಳೆಗೆ ನೀರು ಪೂರೈಸುವ ಕೆಲಸದಲ್ಲಿ ಯಶಸ್ವಿಯಾಗುತ್ತೇವೆ ಎಂಬ ಭರವಸೆ ಇದೆ. 

ನೀರಾವರಿ ಮಾತ್ರವಲ್ಲದೆ, ಗುಜರಾತ್ ಕಳೆದ ಐದು ವರ್ಷಗಳಲ್ಲಿ ಗುಜರಾತ್ ನಲ್ಲಿ ನೀರಾವರಿ ಮಾತ್ರವಲ್ಲದೆ, ಇತರ ಮೂಲಸೌಕರ್ಯ ವಲಯಗಳಲ್ಲಿ ಅನಿರೀಕ್ಷಿತ ಬಂಡವಾಳ ಹರಿದುಬಂದಿದೆ ಮತ್ತು ಮೂಲಸೌಕರ್ಯ ಯೋಜನೆಗಳ ವೇಗ ಹೆಚ್ಚಿದೆ. ಅಹಮದಾಬಾದ್ ಮೆಟ್ರೋ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳು ಶೀಘ್ರಗತಿಯಲ್ಲಿ ಪೂರ್ಣಗೊಂಡಿವೆ. ಬರೋಡಾ, ರಾಜ್ ಕೋಟ್, ಸೂರತ್ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳು ಆಧುನೀಕರಣಗೊಂಡಿವೆ. ಅಲ್ಲದೆ, ಧೋಲೇರಾ ವಿಮಾನ ನಿಲ್ದಾಣ ಮತ್ತು ಎಕ್ಸ್ ಪ್ರೆಸ್ ವೇ ಅನ್ನು ಭಾರತ ಅನುಮೋದಿಸಿದೆ. ವಿಜಯ್ ಜಿ ಹೇಳುತ್ತಿರುವಂತೆ ಭಾರತದಲ್ಲಿ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ರೈಲ್ವೆ ವಿಶ್ವವಿದ್ಯಾಲಯ, ಸಾಗರ ಮ್ಯೂಸಿಯಂ, ಮೆರೈನ್  ಪೊಲೀಸ್ ಅಕಾಡೆಮಿ, ಗಾಂಧಿ ಮ್ಯೂಸಿಯಂ ಮತ್ತು ಇತರೆ ಕಾಮಗಾರಿಗಳನ್ನು ಕಳೆದ ಐದು ವರ್ಷಗಳಿಂದೀಚೆಗೆ ಕೈಗೊಳ್ಳಲಾಗಿದೆ. ಏಕತಾ ಮೂರ್ತಿ ವಿಶ್ವದ ಪ್ರವಾಸಿ ಭೂಪಟದಲ್ಲಿ ಭಾರತವನ್ನು ಗುರುತಿಸಲು ಸಹಾಯ ಮಾಡಿ, ವೈಭವವನ್ನು ತಂದಿದೆ. ವಿಶ್ವದ ಹೆಸರಾಂತ ಮ್ಯಾಗಜೈನ್ ಗಳು ವಿಶೇಷವಾಗಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದವು ಏಕತಾ ಮೂರ್ತಿ ಬಗ್ಗೆ ವರದಿ ಮಾಡಿವೆ. ನಾನು ಕೆಲವು ದಿನಗಳ ಹಿಂದೆ ಓದುತ್ತಿದ್ದೆ, ಜನ್ಮಾಷ್ಠಮಿಯನ್ನು ಸುಮಾರು 34 ಸಾವಿರ ಮಂದಿ ಸರ್ದಾರ್ ಪಟೇಲ್ ಅವರ ಏಕತಾ ಮೂರ್ತಿಯನ್ನು ನೋಡಲು ಆಗಮಿಸಿದ್ದರು ಎಂಬುದು ಸಂತಸದ ಸಂಗತಿ. ದಿನವೊಂದರಲ್ಲಿ 34 ಸಾವಿರ ಮಂದಿ ಭೇಟಿ ನೀಡುವುದೇ ಒಂದು ಭಾರೀ ವಿಶೇಷ. 

ಸಾಮಾನ್ಯ  ಜನರ ಆರೋಗ್ಯ ಉತ್ತಮಗೊಳಿಸುವ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಗುಜರಾತ್ ಶ್ಲಾಘನಾರ್ಹ ಕೆಲಸ ಮಾಡಿದೆ. ಕಳೆದ ಐದಾರು ವರ್ಷಗಳಲ್ಲಿ ಗುಜರಾತ್ ನ ಮೂಲಸೌಕರ್ಯ ವಲಯದಲ್ಲಿ ಕ್ಷಿಪ್ರ ಕೆಲಸ ಕಾರ್ಯಗಳು ನಡೆಯುತ್ತಿವೆ. ಅಹಮದಾಬಾದ್ ಸೇರಿದಂತೆ ದೇಶದ ಹಲವೆಡೆ ಆಧುನಿಕ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಜಾಲ ಸೃಷ್ಟಿಸಲಾಗಿದೆ. ಅದರ ಪರಿಣಾಮ ಗುಜರಾತ್ ನಲ್ಲಿಯೇ ಯುವಕರು ವೈದ್ಯಕೀಯ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ. 

ಆರೋಗ್ಯ ಮಾತ್ರವಲ್ಲದೆ ಗುಜರಾತ್ ಉಜ್ವಲ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಯಲ್ಲಿ ಮುಂಚೂಣಿಯಲ್ಲಿದೆ. ಈ ಆಂದೋಲನದಿಂದ ಗುಜರಾತ್ ನ ಜನರ ಜೀವನ ಸುಲಭವಾಗಿದ್ದು, ಅವರ ಜೀವನ ಸುಲಭಗೊಳಿಸಲು ನಾವು ಇನ್ನಷ್ಟು ವೇಗ ನೀಡುವ ಅಗತ್ಯವಿದೆ. 

ಭಾರತದ ಪ್ರತಿ ರಾಜ್ಯದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಾಮರ್ಥ್ಯ ಶ್ರೇಷ್ಠ ಮತ್ತು ಬಲಿಷ್ಠಗೊಳಿಸಿದೆ. ಆದ್ದರಿಂದ ದೇಶದ ಪ್ರತಿಯೊಂದು ಭಾಗ ಮತ್ತು ಪ್ರತಿಯೊಂದು ರಾಜ್ಯದ ಸಾಮರ್ಥ್ಯವನ್ನು ನಾವು ಗುರುತಿಸಬೇಕು ಮತ್ತು ನಾವು ಅದನ್ನು ಮುಂದೆ ಕೊಂಡೊಯ್ಯಬೇಕು. ಆ ಮೂಲದ ನಾವು ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ನೀಡಬೇಕಾಗಿದೆ. ಈ ಸಾಮಾನ್ಯ ಬಲದೊಂದಿಗೆ ಮುಂದಿನ ಐದು ವರ್ಷಗಳ ಕಾಲ ನಿಗದಿಪಡಿಸಿರುವ ಗುರಿ ಹಾಗೂ ನಿರ್ಣಯಗಳನ್ನು ಸಾಧಿಸಬೇಕಾಗಿದೆ. 

ದೆಹಲಿಯಲ್ಲಿ ದೇಶದ ಪ್ರತಿಯೊಂದು ರಾಜ್ಯಗಳ ಕಟ್ಟಡ ಮತ್ತು ಭವನಗಳಿಗೆ ಇವು ಕೇವಲ ಅತಿಥಿ ಗೃಹಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು. ಈ ರಾಜ್ಯಗಳ ಭವನಗಳು ನಿಜ ಅರ್ಥದಲ್ಲಿ ದೆಹಲಿಯಲ್ಲಿ ಆಯಾ ರಾಜ್ಯಗಳ ಬ್ರ್ಯಾಂಡ್ ಗಳಾಗಿ ಪ್ರತಿನಿಧಿಸುತ್ತವೆ. ಅವು ದೇಶ ಮತ್ತು ಜಗತ್ತಿನೊಂದಿಗೆ ಸಂಪರ್ಕ ಸಾಧಿಸುತ್ತಾ ಇಲ್ಲಿ ಕೆಲಸ ಮಾಡುವ ಅಗತ್ಯತೆಯನ್ನು ಪ್ರತಿಪಾದಿಸುತ್ತವೆ. ಈ ಭವನಗಳನ್ನು ಪ್ರವಾಸೋದ್ಯಮ ಮತ್ತು ವ್ಯಾಪಾರ ಕೇಂದ್ರಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಬೇಕು. 

ದೇಶದಲ್ಲಿ ಹಲವು ರಾಜ್ಯಗಳು ಸಂಪರ್ಕ ವಿಚಾರದಲ್ಲಿ ಬಹು ದೂರದಲ್ಲಿವೆ, ಹಲವು ಸಂದರ್ಭಗಳಲ್ಲಿ ದೇಶ ವಿದೇಶಗಳ ವಾಣಿಜ್ಯ ನಾಯಕರು ಮತ್ತು ಉದ್ಯಮಿಗಳಿಗೆ ದೆಹಲಿಯಿಂದ ಆಯಾ ರಾಜ್ಯಗಳಿಗೆ ಭೇಟಿ ನೀಡುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ, ಸಮಯ ಕಡಿಮೆ ಇದ್ದ ಸಂದರ್ಭದಲ್ಲಿ ರಾಜ್ಯಗಳ ವಾಣಿಜ್ಯ ಕೇಂದ್ರಗಳು ದೇಶದ ರಾಜಧಾನಿಯಲ್ಲಿ ತಮ್ಮ ಸಂಸ್ಕೃತಿ ಮತ್ತು ಕರಕುಶಲ ಕಲೆಯನ್ನು ಪ್ರದರ್ಶಿಸಲು ಉಪಯುಕ್ತವಾಗುತ್ತವೆ. 

ಜಮ್ಮು – ಕಾಶ್ಮೀರದ ಲೇಹ್ ಲಡಾಖ್ ನಿಂದ ವಿಂದ್ಯ ಪರ್ವತಗಳವರೆಗೆ, ದಕ್ಷಿಣದಲ್ಲಿ ಸಾಗರದವರೆಗೆ ದೇಶದಲ್ಲಿ ಹೆಚ್ಚಿನ ಸಂಪತ್ತಿದ್ದು, ನಾವು ಅದನ್ನು ವಿಶ್ವಕ್ಕೆ ನೀಡಬೇಕಾಗಿದೆ. ನಾವು ಅದನ್ನು ಉತ್ತೇಜಿಸಲು ಹೆಚ್ಚಿನ ಕೆಲಸ ಕಾರ್ಯಗಳನ್ನು ಕ್ರಿಯಾಶೀಲಗೊಳಿಸಬೇಕಿದೆ. ಅಂತಹ ಸಂದರ್ಭಗಳಲ್ಲಿ ಪ್ರವಾಸೋದ್ಯಮದಿಂದ ಬಂಡವಾಳ ಹೂಡಿಕೆವರೆಗೆ ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರಗಳು ಸಿಗುತ್ತವೆ, ಪ್ರತಿಯೊಂದು ರಾಜ್ಯ ಕಟ್ಟಡಗಳು ಮತ್ತು ಭವನಗಳು ಅಂತಹ ವ್ಯವಸ್ಥೆಯನ್ನು ಹೊಂದಿರುತ್ತವೆ. 

ಗರ್ವಿ ಗುಜರಾತ್ ಸಂದರ್ಭದಲ್ಲಿ ನಾನು ಮತ್ತೊಮ್ಮೆ ನಿಮಗೆಲ್ಲಾ ಅಭಿನಂದನೆ ಸಲ್ಲಿಸುತ್ತೇನೆ, ನಾನು ಈ ವೇಳೆ ಗುಜರಾತ್ ನ ಖಾದ್ಯದ ರುಚಿ ಸವಿದಿದ್ದೀರ ಎಂಬ ಭರವಸೆ ಹೊಂದಿದ್ದೇನೆ ಮತ್ತು ನಾವು ಬಿಡಿ ಪ್ಲಾಸ್ಟಿಕ್ ಬಳಕೆಯಿಂದ ದೇಶವನ್ನು ಮುಕ್ತಗೊಳಿಸಬೇಕಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳೋಣ. ಆ ಯೋಜನೆ ಕಾರ್ಯಗತವಾಗುವಲ್ಲಿ ಗರ್ವಿ ಗುಜರಾತ್ ಸದನ ಒಂದು ಉದಾಹರಣೆಯಾಗುತ್ತದೆ ಎಂಬುದನ್ನು ನಾನು ನಂಬಿದ್ದೇನೆ. 

ಈ ಹೊಸ ಕಟ್ಟಡಕ್ಕಾಗಿ ನಾನು ಮತ್ತೊಮ್ಮೆ ನಿಮಗೆಲ್ಲಾ ಅಭಿನಂದಿಸುತ್ತೇನೆ ಮತ್ತು ಎಲ್ಲರಿಗೂ ಶುಭಾಶಯಗಳು. ಯೋಜನೆಯ ಹಲವು ಜನರು ಇಲ್ಲಿ ಸೇರಿರುವುದು ಶುಭ ಸೂಚಕ. ಗುಜರಾತ್ ಭವನಕ್ಕೆ ಆಗಾಗ್ಗೆ ಮಿಷನ್ ನ ಹಲವು ಜನರನ್ನು ಆಹ್ವಾನಿಸಬೇಕು ಮತ್ತು ಆಗ ನಿಮ್ಮ ವಹಿವಾಟು ಸಹಜವಾಗಿಯೇ ವೃದ್ಧಿಯಾಗುತ್ತದೆ. ಆ ಕೆಲಸವನ್ನು ಮಾಡಬೇಕಾಗಿದೆ. 

ತುಂಬಾ ಧನ್ಯವಾದಗಳು ಮತ್ತು ಎಲ್ಲರಿಗೂ ಶುಭಾಶಯಗಳು

 

***************

 


(Release ID: 1588581) Visitor Counter : 118