ಪ್ರಧಾನ ಮಂತ್ರಿಯವರ ಕಛೇರಿ
ಅಣ್ವಸ್ತ್ರದ ಮೂಲಕ ಸರ್ವನಾಶ ಮಾಡುವ ಬೆದರಿಕೆಯೊಡ್ಡುತ್ತಿರುವುದು ಯುದ್ಧ ಭೂಮಿಯಿಂದ ಓಡಿ ಹೋಗುವ ಮಸ್ಥಿತಿಯನ್ನು ತೋರಿಸುತ್ತದೆಯೇ ಹೊರತು ಅದು ಉತ್ತಮ ಆಡಳಿತಗಾರನ ಲಕ್ಷಣವಲ್ಲ
प्रविष्टि तिथि:
28 SEP 2019 11:29AM by PIB Bengaluru
ಅಣ್ವಸ್ತ್ರದ ಮೂಲಕ ಸರ್ವನಾಶ ಮಾಡುವ ಬೆದರಿಕೆಯೊಡ್ಡುತ್ತಿರುವುದು ಯುದ್ಧ ಭೂಮಿಯಿಂದ ಓಡಿ ಹೋಗುವ ಮಸ್ಥಿತಿಯನ್ನು ತೋರಿಸುತ್ತದೆಯೇ ಹೊರತು ಅದು ಉತ್ತಮ ಆಡಳಿತಗಾರನ ಲಕ್ಷಣವಲ್ಲ
ವಿಶ್ವ ಸಂಸ್ಥೆಯ 74ನೇ ಮಹಾಧಿವೇಶನದ ಸಾಮಾನ್ಯ ಚರ್ಚೆಗೆ ಭಾರತದ ದಿಟ್ಟ ಉತ್ತರ
ಗೌರವಾನ್ವಿತ ಅಧ್ಯಕ್ಷರೇ,
ನಾನು ಈ ವೇದಿಕೆಯನ್ನು ಪಾಕಿಸ್ತಾನದ ಪ್ರಧಾನಮಂತ್ರಿ ಮಾಡಿದ ಹೇಳಿಕೆಗೆ ಭಾರತದ ದಿಟ್ಟ ಪ್ರತ್ಯುತ್ತರ ನೀಡಲು ಬಳಸಿಕೊಳ್ಳುತ್ತೇನೆ.
2. ಮಹಾಧಿವೇಶನದ ಈ ವೇದಿಕೆಯಲ್ಲಿ ಮಾತನಾಡುವ ಪ್ರತಿ ಶಬ್ದವೂ ಐತಿಹಾಸಿಕ ಘನತೆಯನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ದುರಾದೃಷ್ಟವೆಂದರೆ ಇಂದು ನಾವು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿಂದ ಕೇಳಿದ ಮಾತುಗಳು, ಜಗತ್ತನ್ನು ವಿಭಜಿಸಿದಾಗ ರೂಪುಗೊಳ್ಳುವ ಚಿತ್ರಣವನ್ನು ಕಟ್ಟಿಕೊಟ್ಟಿವೆ. ನಾವು – ಅವರು, ಶ್ರೀಮಂತರು-ಬಡವರು, ಉತ್ತರ-ದಕ್ಷಿಣ ಅಭಿವೃದ್ಧಿಶೀಲ- ಅಭಿವೃದ್ಧಿ ಹೊಂದುತ್ತಿರುವ, ಮುಸ್ಲಿಮರು – ಇತರರು ಎಂದು ಜಗತ್ತನ್ನು ವಿಭಜಿಸಲಾಗುತ್ತಿದೆ. ಅವರ ಭಾಷಣ ಭಿನ್ನತೆಯನ್ನು ಹೆಚ್ಚಿಸುವ ಮತ್ತು ದ್ವೇಷವನ್ನು ಉದ್ದೀಪಿಸುವ ಪ್ರಯತ್ನವಿದು, ಇದೆಲ್ಲವನ್ನೂ ನೋಡಿದರೆ ಅವರದ್ದು ‘ದ್ವೇಷ ಪೂರಿತ ಭಾಷಣ’ ಎಂದು ಸರಳವಾಗಿ ಹೇಳಬಹುದು.
3. ಮಹಾಧಿವೇಶನವನ್ನು ಅಪರೂಪಕ್ಕೆ ಬಳಕೆಗೆ ಬದಲು ದುರ್ಬಳಕೆ ಮಾಡಿಕೊಂಡಿರುವುದು ಅಂತಹ ಅವಕಾಶವನ್ನು ಪ್ರತಿಬಿಂಬಿಸುತ್ತದೆ. ರಾಜತಂತ್ರದಲ್ಲಿ ಪದ ಬಳಕೆಗೆ ಬಹಳ ಮಹತ್ವವಿದೆ. ‘ನರಮೇಧ’, ‘ರಕ್ತದೋಕುಳಿ’, ‘ಬಂದೂಕನ್ನು ಕೈಗೆತ್ತಿಕೊಳ್ಳಿ’ ಜನಾಂಗೀಯ ಮೇಳರಿಮೆ ಮತ್ತು ‘ಸಾಯುವವರೆಗೂ ಹೋರಾಡು’ ಎಂಬ ಮಾತುಗಳು ಮಧ್ಯ ಯುಗದ ಮನಸ್ಥಿತಿಯನ್ನು ಬಿಂಬಿಸುತ್ತವೆಯೇ ಹೊರತು 21ನೇ ಶತಮಾನದ ಧ್ಯೇಯಗಳನ್ನಲ್ಲ.
4. ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಅಣ್ವಸ್ತ್ರ ನಾಶದ ಬೆದರಿಕೆ , ಯುದ್ಧ ಭೂಮಿಯಿಂದ ಓಡಿ ಹೋಗುವ ಮಸ್ಥಿತಿಯನ್ನು ತೋರಿಸುತ್ತದೆಯೇ ಹೊರತು ಅದು ಉತ್ತಮ ಆಡಳಿತಗಾರನ ಲಕ್ಷಣವಲ್ಲ.
5. ಉಗ್ರರ ಕೈಗಾರಿಕೆಗಳನ್ನು ನಿರ್ಮಿಸುತ್ತಿರುವ ದೇಶದ ನಾಯಕರಾಗಿರುವ ಪ್ರಧಾನಮಂತ್ರಿ ಖಾನ್ ಅವರು, ಭಯೋತ್ಪಾದನೆಯನ್ನುಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಮತ್ತು ಪ್ರಚೋದನಕಾರಿ.
6. ಒಮ್ಮೆ ಕ್ರಿಕೆಟ್ ಪಟು ಆಗಿದ್ದವರು ಮತ್ತು ಸಭ್ಯರ ಕ್ರೀಡೆಯಲ್ಲಿ (ಜಂಟಲ್ಮೆನ್ ಗೇಮ್ ) ನಂಬಿಕೆ ಹೊಂದಿದ್ದವರು ಇಂದಿನ ಭಾಷಣದಲ್ಲಿ ದಾರಾ ಅದಂ ಕ್ರೀಡೆಯಲ್ಲಿ ಬಂದೂಕುಗಳನ್ನು ಬಳಕೆ ಮಾಡುತ್ತಿದ್ದ ಭೀಕರತೆಯನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ.
7. ಇದೀಗ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು, ವಿಶ್ವ ಸಂಸ್ಥೆಯ ವೀಕ್ಷಕರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿ ಪಾಕಿಸ್ತಾನದಲ್ಲಿ ಯಾವುದೇ ಉಗ್ರಗಾಮಿ ಸಂಘಟನೆಗಳಿಲ್ಲ ಎಂಬುದನ್ನು ಪರಿಶೀಲಿಸುವಂತೆ ಆಹ್ವಾನಿಸಿದ್ದಾರೆ. ಆ ವಾಗ್ದಾನಕ್ಕೆ ಅವರು ಬದ್ಧರಾಗಿದ್ದಾರೆಯೇ?
8. ಈಗ ಕೆಲವು ಪ್ರಶ್ನೆಗಳನ್ನು ಪಾಕಿಸ್ತಾನಕ್ಕೆ ಕೇಳಲಾಗುತ್ತಿದ್ದು, ಅದು ಈ ಉದ್ದೇಶಿತ ಮರು ಪರಿಶೀಲನೆಗೆ ಉತ್ತರಿಸಲಿದೆಯೇ ?
• ವಿಶ್ವ ಸಂಸ್ಥೆಯು ಜಾಗತಿಕ ಉಗ್ರ ಎಂದು ಹೆಸರಿಸಿರುವ 130 ಉಗ್ರರು ಮತ್ತು 23 ಭಯೋತ್ಪಾದಕ ಸಂಘಟನೆಗಳು ಇಂದಿಗೂ ತಮ್ಮ ನೆಲದಲ್ಲಿವೆ ಎಂಬುದನ್ನು ಪಾಕಿಸ್ತಾನ ಒಪ್ಪುತ್ತದೆಯೇ ?
• ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಅಲ್ ಖೈದಾ ಮತ್ತು ದಾಯಿಶ್ ಸಂಘಟನೆಗಳು ಸೇರಿದಂತೆ ಉಗ್ರರ ಪಟ್ಟಿಯಲ್ಲಿರುವ ಪ್ರತಿ ವ್ಯಕ್ತಿಗೂ ಪಿಂಚಣಿ ನೀಡುತ್ತಿರುವ ವಿಶ್ವದ ಏಕೈಕ ರಾಷ್ಟ್ರ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಾ ?
• ಪಾಕಿಸ್ತಾನದ ಅತ್ಯುನ್ನತ ಹಣಕಾಸು ಸಂಸ್ಥೆ ಹಬೀಬ್ ಬ್ಯಾಂಕ್ ನ ನ್ಯೂಯಾರ್ಕ್ ಶಾಖೆಯು ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಲಕ್ಷಾಂತರ ಡಾಲರ್ ಮೌಲ್ಯ ದಂಡ ತೆರಬೇಕಾಯಿತು. ಇದೆಲ್ಲಾ ಆಗಿದ್ದು ಏಕೆ ?
• 20 ರಿಂದ 27ಕ್ಕೂ ಅಧಿಕ ಪ್ರಮುಖ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಣಕಾಸು ಕ್ರಿಯಾ ಕಾರ್ಯಪಡೆ ನಿಮ್ಮ ದೇಶಕ್ಕೆ ಎಚ್ಚರಿಕೆಯ ನೋಟೀಸ್ ನೀಡಿರುವುದನ್ನು ಪಾಕಿಸ್ತಾನ ನಿರಾಕರಿಸುತ್ತದೆಯೇ ?
• ಉಗ್ರ ಒಸಾಮಾ ಬಿನ್ ಲಾಡೆನ್ ತಮ್ಮ ನೆಲದಲ್ಲಿ ಇರಲಿಲ್ಲ ಎಂದು ಪ್ರಧಾನಮಂತ್ರಿ ಖಾನ್ ಅವರು ನ್ಯೂಯಾರ್ಕ್ ನೆದುರು ಹೇಳುತ್ತಾರೆಯೇ ?
ಗೌರವಾನ್ವಿತ ಅಧ್ಯಕ್ಷರೇ,
9. ಭಯೋತ್ಪಾದನೆ ಮತ್ತು ದ್ವೇಷ ಭಾಷಣಗಳನ್ನು ಮುಖ್ಯವಾಹಿನಿಗೆ ತಂದು ಪಾಕಿಸ್ತಾನ ಇದೀಗ ತಾನುಮಾನವ ಹಕ್ಕುಗಳ ಚಾಂಪಿಯನ್ ಅಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ.
10. ಆ ದೇಶ ಅಲ್ಲಿ 1947ರಲ್ಲಿ ಶೇಕಡ 23ರಷ್ಟಿದ್ದ ಅಲ್ಪಸಂಖ್ಯಾತ ಸಮುದಾಯವನ್ನು, ಇಂದು ಶೇಕಡ 3ಕ್ಕೆ ಇಳಿಸಿದೆ ಮತ್ತು ಕ್ರಿಶ್ಚಿಯನ್ನರು, ಸಿಖ್ಖರು, ಅಹಮದೀಯಾಗಳು, ಹಿಂದೂಗಳು, ಶಿಯಾ, ಪಾಸ್ತುನೀಸ್, ಸಿಂಧಿಗಳು ಮತ್ತು ಬಲೂಚಿಗಳನ್ನು ದೌರ್ಜನ್ಯ, ಶೋಷಣೆ, ಚಿತ್ರಹಿಂಸೆ, ಬಲವಂತದ ಮತಾಂತರಗಳನ್ನು ಮಾಡಲಾಗುತ್ತಿದೆ.
11. ಅವರ ಮಾನವ ಹಕ್ಕುಗಳ ಬೋಧನೆಯ ಹೊಸ ಮುಗ್ದ ಮಾತಿನ ವಿಷಯ ವಿನಾಶದ ಅಂಚಿನಲ್ಲಿರುವ ಮೇಕೆ – ಮೋರ್ ಕೋರ್ ಬೇಟೆ ಯಂತೆ.
12. ಪ್ರಧಾನಮಂತ್ರಿ ಇಮ್ರಾನ್ ಖಾನ್ ನೈಜಿ ಅವರೇ ಇಂದಿನ ಪ್ರಭಾವಶಾಲಿ ರಾಜತಂತ್ರಗಳಿಗೆ ಹೊಸದೇನಲ್ಲ, ನಾವು ನಿಮ್ಮ ಇತಿಹಾಸ ಅರ್ಥೈಸುವಿಕೆಯನ್ನು ರಿಫ್ರೆಶ್ ಮಾಡಿಕೊಳ್ಳಿ ಎಂದು ಕೇಳಿಕೊಳ್ಳುತ್ತೇವೆ. 1971ರಲ್ಲಿ ಪಾಕಿಸ್ತಾನ ತನ್ನದೇ ಜನರ ವಿರುದ್ಧ ನಡೆಸಿದ ಭೀಕರ ನರಮೇಧವನ್ನು ಎಂದಿಗೂ ಮರೆಯಬೇಡಿ ಮತ್ತು ಲೆಫ್ಟಿನೆಂಟ್ ಜನರಲ್ ಎಎಕೆ ನೈಜಿ ಅವರ ಪಾತ್ರವನ್ನೂ ಸಹ. ಗೌರವಾನ್ವಿತ ಬಾಂಗ್ಲಾದೇಶದ ಪ್ರಧಾನಮಂತ್ರಿಯವರು ಈ ಮಹಾಸಭೆಗೆ ಮಧ್ಯಾಹ್ನವಷ್ಟೇ ವಸ್ತುಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಗೌರವಾನ್ವಿತ ಅಧ್ಯಕ್ಷರೇ,
13. ಪಾಕಿಸ್ತಾನದ ಮಹಾಮತ್ಸರವುಳ್ಳ ಪ್ರತಿಕ್ರಿಯೆ ಮತ್ತು ಅಪ್ ಡೇಟ್ ಆಗದ ತಾತ್ಕಾಲಿಕ ಅಂಶಗಳಿಂದಾಗಿ ಭಾರತದ ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ದೊಡ್ಡ ತೊಡಕಾಗಿತ್ತು. ಅಲ್ಲಿ ಸಂಘರ್ಷದಿಂದಾಗಿ ಶಾಂತಿಯ ಭರವಸೆಯನ್ನು ಸ್ವಾಗತಿಸಿರಲಿಲ್ಲ.
14. ಪಾಕಿಸ್ತಾನ ಭಯೋತ್ಪಾದನೆಗೆ ಪೋಷಣೆ ಮತ್ತು ದ್ವೇಷ ಭಾವನೆಯನ್ನು ಬಿತ್ತುವುದನ್ನೇ ಮಾಡಿಕೊಂಡು ಹೋಗುತ್ತಿದ್ದರೆ, ಭಾರತ ಜಮ್ಮು-ಕಾಶ್ಮೀರದ ಅಭಿವೃದ್ಧಿಯ ಮುಖ್ಯವಾಹಿನಿಯನ್ನು ಮುಂದುವರಿಸಿಕೊಂಡು ಹೋಗುತ್ತದೆ.
15. ಜಮ್ಮು-ಕಾಶ್ಮೀರದ ಕಾಶ್ಮೀರವನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವಾಗ ಅದರ ಜೊತೆಗೆ ಲಡಾಕ್ ಕೂಡ ಇರುತ್ತದೆ. ಭಾರತದಲ್ಲಿ ಚಾಲ್ತಿಯಲ್ಲಿರುವ ಕ್ರಿಯಾಶೀಲ ರಾಜತಾಂತ್ರಿಕ ವ್ಯವಸ್ಥೆಯಲ್ಲಿ ಶತಮಾನಗಳಷ್ಟು ಹಳೆಯದಾದ ವೈವಿಧ್ಯತೆಯ ಪರಂಪರೆಯ ಬಹುತ್ವ ಮತ್ತು ತಾಳ್ಮೆ ಇದ್ದು, ಅದನ್ನು ಅಕ್ಷರಶಃ ಪಾಲಿಸಲಾಗುತ್ತಿದೆ.
16. ಭಾರತದ ನಾಗರಿಕರಿಗೆ ತಮ್ಮ ಪರವಾಗಿ ಬೇರೆ ಯಾವುದೋ ವ್ಯಕ್ತಿ ಮಾತನಾಡುವ ಅಗತ್ಯವಿಲ್ಲ, ದ್ವೇಷದ ಆದರ್ಶದೊಂದಿಗೆ ಭಯೋತ್ಪಾದನೆಯ ಕೈಗಾರಿಕೆಯನ್ನು ನಿರ್ಮಿಸುತ್ತಿರುವವರು ಕನಿಷ್ಠ ಈಗಲಾದರೂ ಯೋಚಿಸಬೇಕು.
ಧನ್ಯವಾದಗಳು, ಗೌರವಾನ್ವಿತ ಅಧ್ಯಕ್ಷರೇ
*****
(रिलीज़ आईडी: 1586847)
आगंतुक पटल : 160