ರೈಲ್ವೇ ಸಚಿವಾಲಯ

ರೈಲ್ವೆ ನೌಕರರಿಗೆ 2018-19ನೇ ಸಾಲಿನ ಬೋನಸ್ ಪಾವತಿಗೆ ಸಂಪುಟದ ಅನುಮೋದನೆ

Posted On: 18 SEP 2019 4:18PM by PIB Bengaluru

ರೈಲ್ವೆ ನೌಕರರಿಗೆ 2018-19ನೇ ಸಾಲಿನ ಬೋನಸ್ ಪಾವತಿಗೆ ಸಂಪುಟದ ಅನುಮೋದನೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 11.52 ಲಕ್ಷ ಅರ್ಹ ನಾನ್ ಗೆಜೆಟೆಡ್ ರೈಲ್ವೆ ನೌಕರರಿಗೆ (ಆರ್ಪಿಎಫ್ / ಆರ್ಪಿಎಸ್ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮಾನವಾದ 2018-19ನೇ ಹಣಕಾಸು ವರ್ಷದ ಉತ್ಪಾದಕತೆ ಆಧಾರಿತ  ಬೋನಸ್ (ಪಿಎಲ್ಬಿ) ಪಾವತಿಸಲು ಅನುಮೋದನೆ ನೀಡಿದೆ.  ಇದು ಬೊಕ್ಕಸಕ್ಕೆ 2024.40 ಕೋಟಿ ರೂ.ಗಳ ಹೊರೆಯಾಗಲಿದೆ.

ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು 78 ದಿನಗಳ ವೇತನದ ಬೋನಸ್ ಅನ್ನು ಸತತ ಆರನೇ ವರ್ಷಗಳಿಂದ ಕಾಯ್ದುಕೊಂಡಿದೆ. ಅದನ್ನು ಎಂದಿಗೂ ಇಳಿಸಿಲ್ಲ.

 

ಪ್ರಯೋಜನಗಳು:

2018-19ನೇ ಹಣಕಾಸು ವರ್ಷದಲ್ಲಿ ಅರ್ಹ ರೈಲ್ವೆ ಉದ್ಯೋಗಿಗಳಿಗೆ (ಆರ್ಪಿಎಫ್ / ಆರ್ಪಿಎಸ್ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ ಆಧಾರಿತ  ಬೋನಸ್ ಪಾವತಿಯು, ಕೈಗಾರಿಕಾ ಶಾಂತಿಯನ್ನು ಕಾಪಾಡಿಕೊಳ್ಳುವುದರೊಂದಿಗೆ ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಉತ್ಪಾದಕತೆಯ ಮಟ್ಟವನ್ನು ಹೆಚ್ಚಿಸಲು ರೈಲ್ವೆ ನೌಕರರನ್ನು ಪ್ರೇರೇಪಿಸುತ್ತದೆ. 

ಈ ಬೋನಸ್ ಎಲ್ಲಾ ನಾನ್ ಗೆಜೆಟೆಡ್ ರೈಲ್ವೆ ನೌಕರರಿಗೆ ರೈಲ್ವೆಯ ಸಮರ್ಥ ನಿರ್ವಹಣೆಗಾಗಿ  ಅವರಿಗೆ ನೀಡುತ್ತಿರುವ ಕೊಡುಗೆಯಾಗಿದೆ.

ಈ ಬೋನಸ್, ಹೆಚ್ಚಿನ ಸಂಖ್ಯೆಯಲ್ಲಿರುವ ರೈಲ್ವೆ ನೌಕರರು ಮತ್ತು ಅವರ ಕುಟುಂಬಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಾನತೆಯ ಭಾವವನ್ನು ಹೆಚ್ಚಿಸುತ್ತದೆ.


(Release ID: 1585530) Visitor Counter : 113