ಹಣಕಾಸು ಆಯೋಗ
ಕರ್ನಾಟಕದ ಯು.ಎಲ್.ಬಿ.ಗಳ ಪ್ರತಿನಿಧಿಗಳೊಂದಿಗೆ ಹದಿನೈದನೇ ಹಣಕಾಸು ಆಯೋಗದ ಭೇಟಿ
Posted On:
24 JUN 2019 2:25PM by PIB Bengaluru
ಕರ್ನಾಟಕದ ಯು.ಎಲ್.ಬಿ.ಗಳ ಪ್ರತಿನಿಧಿಗಳೊಂದಿಗೆ ಹದಿನೈದನೇ ಹಣಕಾಸು ಆಯೋಗದ ಭೇಟಿ
ಶ್ರೀ ಎನ್.ಕೆ. ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗ ಮತ್ತು ಅದರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಇಂದು ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು.
ಆಯೋಗ ಈ ಕೆಳಕಂಡ ವಿಷಯವನ್ನು ತಿಳಿಯಪಡಿಸಿತು:
· ಸಂವಿಧಾನದ 12ನೇ ಪರಿಚ್ಛೇದದಲ್ಲಿ ರೂಪಿಸಲಾಗಿರುವ 18 ಕರ್ತವ್ಯಗಳ ಪೈಕಿ 17ನ್ನು ಕರ್ನಾಟಕದ ಯು.ಎಲ್.ಬಿ.ಗಳಿಗೆ ಹಂಚಿಕೆ ಮಾಡಲಾಗಿದೆ. ಅಗ್ನಿಶಾಮಕ ಸೇವೆಯ ಕರ್ತವ್ಯವನ್ನು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ)ಗೆ ಮಾತ್ರವೇ ಹಂಚಿಕೆ ಮಾಡಲಾಗಿದೆ.
· ರಾಜ್ಯವು 4ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸಿನ ರೀತ್ಯ (2018-19ರಿಂದ 2022-23ರವರೆಗೆ) ಪ್ರಸ್ತುತ ಹಣ ಬಿಡುಗಡೆ ಮಾಡುತ್ತಿದೆ.
· ಕರ್ನಾಟಕದಲ್ಲಿ ಒಟ್ಟು 280 ಯು.ಎಲ್.ಬಿ.ಗಳಿವೆ, ಈ ಪೈಕಿ 115 ಪುರಸಭೆಗಳು, 92 ಪಟ್ಟಣ ಪಂಚಾಯ್ತಿಗಳು, 58 ನಗರ ಸಭೆಗಳು, 11 ನಗರ ಪಾಲಿಕೆಗಳು ಮತ್ತು 4 ಅಧಿಸೂಚಿತ ಪ್ರದೇಶ ಮಂಡಳಿಗಳು.
4ನೇ ಎಸ್.ಎಫ್.ಸಿ. ಶಿಫಾರಸಿನ ಪ್ರಕಾರ (2018-19ರಿಂದ 2022-23).
· ರಾಜ್ಯದ ಶೇ.48ರಷ್ಟು ಸಾಲಯೇತರ ನಿವ್ವಳ ಆದಾಯ (ಎನ್.ಎಲ್.ಎನ್.ಓ.ಆರ್.ಆರ್.)ವನ್ನು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಬೇಕು.
· ಎನ್.ಎಲ್.ಎನ್.ಓ.ಆರ್.ಆರ್.ನ ಶೇ.1 ರಷ್ಟನ್ನು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಗೆ ಹಂಚಿಕೆ ಮಾಡಿ ಶೇ.47ರಷ್ಟನ್ನು ಪಿಆರ್.ಐ,ಗಳಿಗೆ ಮತ್ತು ಯು.ಎಲ್.ಬಿ.ಗಳಿಗೆ 75:25 ಅನುಪಾತದಲ್ಲಿ ಹಂಚಿಕೆ ಮಾಡಬೇಕು. (ಅಂದರೆ ಪಿಆರ್.ಐ. ಮತ್ತು ಯುಎಲ್.ಬಿ.ಗಳ ಪಾಲು ಅನುಕ್ರಮವಾಗಿ ಶೇ.35 ಮತ್ತು ಶೇ.12 ಆಗಿರುತ್ತದೆ)
· ಕೇಂದ್ರೀಯ ಎಫ್.ಸಿ. ಅನುದಾನವನ್ನು ಹಂಚಿಕೆಯ ಭಾಗವಾಗಿ ಸೇರಿಸಬಾರದು.
ಆಯೋಗಕ್ಕೆ ಈ ಕೆಳಗಿನ ವಿಷಯಗಳ ಬಗ್ಗೆ ತಿಳಿಸಲಾಗಿದೆ:
i) ಜಿಐಎಸ್ ಆಧಾರಿತ ಸ್ವತ್ತಿನ ತೆರಿಗೆ ವ್ಯವಸ್ಥೆಗೆ ಆಸ್ತಿ ಯೋಜನೆ: ಈ ಯೋಜನೆಯಡಿ, ಸ್ವತ್ತಿನ ತೆರಿಗೆ ಮೌಲ್ಯೀಕರಣ ವಾರ್ಷಿಕ ಬಾಡಿಕೆ ಮೌಲ್ಯದ ನಿರ್ಧರಣೆಯಿಂದ ಬಂಡವಾಳ ಮೌಲ್ಯ ಪದ್ಧತಿಗೆ ಬದಲಾಗಿದೆ ಮತ್ತು ಜಿ.ಐ.ಎಸ್. ಆಧಾರಿತ ಸ್ವತ್ತಿನ ತೆರಿಗೆ ಮಾಹಿತಿ ವ್ಯವಸ್ಥೆಯನ್ನು ಅದರ ಬದಲಿಗೆ ತರಲಾಗಿದೆ. ‘ಸ್ವಯಂ ನಿರ್ಧರಣೆ ವ್ಯವಸ್ಥೆ’ಯನ್ನೂ ಅನುಷ್ಠಾನಗೊಳಿಸಲಾಗಿದ್ದು, ಆಸ್ತಿಯ ತೆರಿಗೆಯ ಲೆಕ್ಕಾಚಾರ ಹಾಕುವ ಜವಾಬ್ದಾರಿಯನ್ನು ನಗರ ಅಧಿಕಾರಿಗಳ ಬದಲಾಗಿ ಸ್ವತ್ತಿನ ಮಾಲೀಕರಿಗೇ ವಹಿಸಲಾಗಿದೆ.
ii) ಕರ್ನಾಟಕ ಪುರಸಭೆ ದತ್ತಾಂಶ ಸೊಸೈಟಿ (ಕೆಎಂಡಿಎಸ್) : ರಾಜ್ಯವು ಕರ್ನಾಟಕ ಪುರಸಭೆ ದತ್ತಾಂಶ ಸೊಸೈಟಿ (ಕೆಎಂಡಿಎಸ್) ರೂಪಿಸಿದೆ, ಇದು ಮುನಿಸಿಪಲ್ ಐಟಿ ಅರ್ಜಿಗಳನ್ನು ಪೌರ ಸೇವೆ ಮತ್ತು ಕರ್ನಾಟಕದ ಯುಎಲ್.ಬಿ.ಗಳ ಪುರಸಭೆ ಆಡಳಿತಕ್ಕೆ ಜಾರಿಗೆ ತರುತ್ತದೆ, ಅವರ ವೆಬ್‌ಸೈಟ್‌ಗಳನ್ನು ನಿರ್ವಹಿಸುತ್ತದೆ ಮತ್ತು ಅದು ಪುರಸಭೆಯ ದತ್ತಾಂಶಗಳ ಭಂಡಾರವಾಗಿದೆ.
ಆಯೋಗವು ಈ ಕೆಳಗಿನ ಅಂಶಗಳನ್ನು ಗಮನಿಸಿದೆ:
· 2017-18 ಮತ್ತು 2018-19ರಲ್ಲಿ ಯುಎಲ್.ಬಿ.ಗಳಿಗೆ ಕಾರ್ಯಕ್ಷಮತೆ ಅನುದಾನ ಬಿಡುಗಡೆ ಮಾಡಲಾಗಿಲ್ಲ.
· ರಾಜ್ಯ ಸರ್ಕಾರಗಳು ಇಷ್ಟು ಹೊತ್ತಿಗೆ ಎಸ್.ಎಫ್.ಸಿ. – Vನ್ನು ರಚಿಸಬೇಕಾಗಿತ್ತು, ಹಿಂದಿನ ಎಸ್‌ಎಫ್‌ಸಿಗಳನ್ನು ಸಹ ಸಮಯಕ್ಕೆ ಸರಿಯಾಗಿ ರಚಿಸಲಾಗಿರಲಿಲ್ಲ.,
· ರಾಜ್ಯ ಸರ್ಕಾರ ಕೇಂದ್ರೀಯ ಎಫ್.ಸಿ. ಅನುದಾನವನ್ನು ರಾಜ್ಯದ ಹಂಚಿಕೆಯ ಭಾಗವಾಗಿ ಸೇರ್ಪಡೆ (ಎಸ್.ಎಫ್.ಸಿ. – IV ಶಿಫಾರಸುಗಳಿಗೆ ವಿರುದ್ಧವಾಗಿ) ಮಾಡಿದೆ.
· ಯು.ಎಲ್.ಬಿ.ಗಳಿಗೆ ಜಾಹೀರಾತು ತೆರಿಗೆಯಿಂದ ಬರುವ ಆದಾಯ 2018-19ರಲ್ಲಿ ರೂ.200 ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದಾಗ್ಯೂ, ಇದು ಜಿಎಸ್ಪಿಯಲ್ಲಿ ಅಂತರ್ಗತವಾಗಿದೆ. ಈ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಯು.ಎಲ್.ಬಿ.ಗಳಿಗೆ ಎಸ್.ಎಫ್.ಸಿ.- IVರಎನ್.ಎಲ್.ಎನ್.ಓ.ಆರ್.ಆರ್.ನ ವಾರ್ಷಿಕ ಶೇ.0.5ರಷ್ಟು ಹೆಚ್ಚುವರಿ ಹಂಚಿಕೆಗೆ ಸ್ಪಂದಿಸಿದೆ, ಇದು ಈ ಕೊರತೆಯನ್ನು ತುಂಬಲಿದೆ..
ಸಭೆಯಲ್ಲಿ ಉಪಸ್ಥಿತರಿದ್ದ ಯು.ಎಲ್.ಬಿ. ಪ್ರತಿನಿಧಿಗಳು – ಶ್ರೀಮತಿ ಗಂಗಾಂಬಿಕಾ ಮಲ್ಲಿಕಾರ್ಜುನ್, ಮೇಯರ್, ಬಿಬಿಎಂಪಿ; ಶ್ರೀ ಪದ್ಮನಾಭರೆಡ್ಡಿ, ನಗರಪಾಲಿಕೆ ಸದಸ್ಯರು, ಬಿಬಿಎಂಪಿ ವಾರ್ಡ್ ನಂ.29, ಬಿಬಿಎಂಪಿ ಪ್ರತಿಪಕ್ಷ ನಾಯಕರು; ಶ್ರೀ ಬಿ.ಎಸ್. ಸತ್ಯನಾರಾಯಣ, ನಗರ ಪಾಲಿಕೆ ಸದಸ್ಯರು, ಬಿಬಿಎಂಪಿ, ವಾರ್ಡ್ ನಂ. 154, ಬಸವನಗುಡಿ; ಶ್ರೀಮತಿ ರೂಪಶ್ರೀ ಬಿ.ಎಸ್., ಉಪ ಮೇಯರ್, ತುಮಕೂರು ನಗರ ಪಾಲಿಕೆ; ಶ್ರೀ ಚನ್ನಬಸಪ್ಪ ಎಸ್.ಎನ್., ಉಪ ಮೇಯರ್, ಶಿವಮೊಗ್ಗ ನಗರ ಪಾಲಿಕೆ; ಶ್ರೀ ಬಿ. ಎ. ರಮೇಶ್ ಹೆಗಡೆ, ನಗರಪಾಲಿಕೆ ಸದಸ್ಯರು, ಶಿವಮೊಗ್ಗ ನಗರ ಪಾಲಿಕೆ; ಶ್ರೀ ಎಂ. ಸುಧೀರ್, ಅಧ್ಯಕ್ಷರು ಕಂಪ್ಲಿ, ಟಿಎಂಸಿ; ಶ್ರೀ ಎಚ್. ವಿಷ್ಣು ನಾಯಕ್, ಅಧ್ಯಕ್ಷರು, ಮರಿಯಮ್ಮನಹಳ್ಳಿ ತಾಲೂಕು ಪಂಚಾಯ್ತಿ ಮತ್ತು ಶ್ರೀ ಜಿ. ರಾಘವೇಂದ್ರ, ಪಾಲಿಕೆ ಸದಸ್ಯರು ಮತ್ತು ಸ್ಥಾಯಿ ಸಮಿತಿ ಸದಸ್ಯರು, ಕೂಡ್ಲಿಗಿ ತಾಲೂಕು ಪಂಚಾಯ್ತಿ.
ಆಯೋಗವು ಯು.ಎಲ್.ಬಿ.ಯ ಪ್ರತಿನಿಧಿಗಳು ವ್ಯಕ್ತಪಡಿಸಿದ ಎಲ್ಲ ಕಳಕಳಿಯನ್ನು ಆಯೋಗ ಪರಿಗಣನೆಗೆ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರಕ್ಕೆ ನೀಡುವ ತನ್ನ ಶಿಫಾರಸಿನಲ್ಲಿ ಆ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿತು.
*****
(Release ID: 1575445)
Visitor Counter : 161