ಗೃಹ ವ್ಯವಹಾರಗಳ ಸಚಿವಾಲಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳ ನಿವಾಸಿಗಳಿಗೆ ಪರಿಹಾರ

Posted On: 12 JUN 2019 7:52PM by PIB Bengaluru

ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳ ನಿವಾಸಿಗಳಿಗೆ ಪರಿಹಾರ

ಉದ್ಯೋಗ ನೇಮಕಾತಿ, ಬಡ್ತಿ ಮತ್ತು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಮೀಸಲು ಪಡೆದುಕೊಳ್ಳಲು ಅನುವಾಗುವಂತೆ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲು ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ವಿಧೇಯಕ 2019ಕ್ಕೆ ಸಂಪುಟದ ಅನುಮೋದನೆ

 

ಜನಪರವಾದ ತನ್ನ ಉಪಕ್ರಮಗಳ ನಿಟ್ಟಿನಲ್ಲಿ ಮತ್ತು ಕೊಟ್ಟ ಕೊನೆಯಲ್ಲಿರುವವರಿಗೂ ಅಭಿವೃದ್ಧಿಯ ಪ್ರಯೋಜನ ದೊರಕಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ‘ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2019’ ತನ್ನ ಅನುಮೋದನೆ ನೀಡಿದೆ. ಈ ಮಸೂದೆಯನ್ನು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಉಭಯ ಸದನಗಳಲ್ಲೂ ಮಂಡಿಸಲಾಗುತ್ತದೆ.

ಸಂಪುಟದ ಈ ನಿರ್ಧಾರ ಪ್ರಧಾನಮಂತ್ರಿಯವರ ಎಲ್ಲರೊಂದಿಗೆ ಎಲ್ಲರ ವಿಕಾಸ ಮತ್ತು ಎಲ್ಲರ ವಿಶ್ವಾಸ ಎಂಬ ಜನಪರ ಆಡಳಿತದ ಮುನ್ನೋಟದ ಪ್ರತಿಬಿಂಬವಾಗಿದೆ.

 

ಪ್ರಯೋಜನಗಳು:

ಈ ನಿರ್ಧಾರವು, ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪರಿಹಾರವನ್ನು ಒದಗಿಸುವಲ್ಲಿ ಬಹು ದೀರ್ಘ ಹಾದಿ ಸವೆಸಲಿವೆ.

ಈಗ ಅವರು ನೇರ ನೇಮಕಾತಿಯಲ್ಲಿ, ಬಡ್ತಿಯಲ್ಲಿ ಮತ್ತು ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶದಲ್ಲಿ ಮೀಸಲು ಪಡೆಯಬಹುದಾಗಿದೆ.

 

ಪರಿಣಾಮಗಳು:

ಈ ಮಸೂದೆಯು ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಕಾಯಿದೆ 2004ಕ್ಕೆ ತಿದ್ದುಪಡಿಗಳನ್ನು ತರುವ ಮೂಲಕ ‘ಜಮ್ಮು ಕಾಶ್ಮೀರ ಮೀಸಲು(ತಿದ್ದುಪಡಿ) ಅಧ್ಯಾದೇಶ 2019’ ನ್ನು ಬದಲಾಯಿಸಲಿದೆ ಮತ್ತು ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿ ವಾಸಿಸುವವರನ್ನು ಸಹ ವಾಸ್ತವ ನಿಯಂತ್ರಣ ರೇಖೆ (ಎಎಲ್.ಓ.ಸಿ.)ಗೆ ಹೊಂದಿಕೊಂಡ ಪ್ರದೇಶದಲ್ಲಿ ವಾಸಿಸುವವರಿಗೆ ಇರುವ ಮೀಸಲಿನ ವ್ಯಾಪ್ತಿಗೆ ತರಲಿದೆ.  

 

ಹಿನ್ನೆಲೆ:

ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡ ಪ್ರದೇಶದ ಜನರು ಜಮ್ಮು ಮತ್ತು ಕಾಶ್ಮೀರ ಮೀಸಲು ಕಾಯಿದೆ 2004 ಮತ್ತು ಕಾನೂನು 2005ರಲ್ಲಿ ಸೇರ್ಪಡೆಯಾಗಿರಲಿಲ್ಲ. ಈ ಕಾಯಿದೆ ವಾಸ್ತವ ನಿಯಂತ್ರಣ ರೇಖೆಗೆ ಹೊಂದಿಕೊಂಡ ಪ್ರದೇಶದ ನಿವಾಸಿಗಳಿಗೆ ಮಾತ್ರ ವಿವಿಧ ಪ್ರವರ್ಗಗಳಲ್ಲಿ ನೇರ ನೇಮಕಾತಿ, ಬಡ್ತಿ ಮತ್ತು ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶದಲ್ಲಿ ಮೀಸಲು ಕಲ್ಪಿಸುತ್ತಿತ್ತು. ಹೀಗಾಗಿ ಅವರು ದೀರ್ಘ ಕಾಲದಿಂದ ಪ್ರಯೋಜನ ಪಡೆಯುತ್ತಿರಲಿಲ್ಲ.

ಗಡಿಯಾಚೆಗಿನ ನಿರಂತರ ಉದ್ವಿಗ್ನತೆಯಿಂದಾಗಿ, ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿ ವಾಸಿಸುವ ಜನರು ಸಾಮಾಜಿಕ – ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಗಡಿಯಾಚೆಯಿಂದ ಶೇಲ್ ದಾಳಿ ನಡೆಯುತ್ತಲೇ ಇರುವ ಕಾರಣ, ಈ ನಿವಾಸಿಗಳು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತವಾಗುವುದು ಅನಿವಾರ್ಯವಾಗಿದ್ದು ಶೈಕ್ಷಣಿಕ ಸಂಸ್ಥೆಗಳು ದೀರ್ಘ ಕಾಲ ಮುಚ್ಚುವ ಕಾರಣ, ಇದು ಅವರ ಶಿಕ್ಷಣದ ಮೇಲೆ ಪ್ರತೀಕೂಲ ಪರಿಣಾಮ ಬೀರಿದೆ.

ಹೀಗಾಗಿ, ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ವಾಸಿಸುವ ಜನರಿಗೂ ವಾಸ್ತವ ಗಡಿ ನಿಯಂತ್ರಣ ರೇಖೆ (ಎ.ಎಲ್.ಓ.ಸಿ)ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ನೀಡಲಾಗಿರುವ ನಿಟ್ಟಿನಲ್ಲೇ ಮೀಸಲು ವಿಸ್ತರಿಸುವುದು ನ್ಯಾಯಸಮ್ಮತ ಎಂದು ಅಭಿಪ್ರಾಯಪಡಲಾಗಿದೆ.

ರಾಷ್ಟ್ರಪತಿ ಆಳ್ವಿಕೆಯ ಕಾಲದಲ್ಲಿ, ರಾಜ್ಯ ವಿಧಾನಸಭೆಯ ಅಧಿಕಾರವು ಸಂಸತ್ತಿಗೆ ಇರುತ್ತದೆ ಹೀಗಾಗಿ, ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ) ಅಧ್ಯಾದೇಶ 2019ನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಸೂದೆ ಮಂಡಿಸುವ ಮೂಲಕ ಬದಲಾಯಿಸಲು ನಿರ್ಧರಿಸಲಾಗಿದೆ.

 

******



(Release ID: 1574544) Visitor Counter : 49


Read this release in: English , Tamil , Telugu