ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ದೆಹಲಿಯಲ್ಲಿನ ಅನಧಿಕೃತ ಕಾಲೋನಿಗಳ ನಿವಾಸಿಗಳನ್ನು ಮಾಲೀಕತ್ವಕ್ಕೆ ಪರಿಗಣಿಸಲು ಅಥವಾ ವರ್ಗಾವಣೆ / ಭೋಗ್ಯದ ಹಕ್ಕು ಗುರುತಿಸಲು / ಪ್ರಕ್ರಿಯೆಗಳ ಕುರಿತಂತೆ ಶಿಫಾರಸು ಮಾಡಲು ಸಮಿತಿಯನ್ನು ರಚಿಸುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ
प्रविष्टि तिथि:
07 MAR 2019 2:39PM by PIB Bengaluru
ದೆಹಲಿಯಲ್ಲಿನ ಅನಧಿಕೃತ ಕಾಲೋನಿಗಳ ನಿವಾಸಿಗಳನ್ನು ಮಾಲೀಕತ್ವಕ್ಕೆ ಪರಿಗಣಿಸಲು ಅಥವಾ ವರ್ಗಾವಣೆ / ಭೋಗ್ಯದ ಹಕ್ಕು ಗುರುತಿಸಲು / ಪ್ರಕ್ರಿಯೆಗಳ ಕುರಿತಂತೆ ಶಿಫಾರಸು ಮಾಡಲು ಸಮಿತಿಯನ್ನು ರಚಿಸುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿಯಲ್ಲಿನ ಅನಧಿಕೃತ ಕಾಲೋನಿಗಳ ನಿವಾಸಿ (ಯುಸಿಗಳು) ಗಳನ್ನು ಮಾಲೀಕತ್ವಕ್ಕೆ ಪರಿಗಣಿಸಲು ಅಥವಾ ಹಕ್ಕು ವರ್ಗಾವಣೆ / ಭೋಗ್ಯದ ಹಕ್ಕು ಗುರುತಿಸಲು / ಪ್ರಕ್ರಿಯೆಗಳ ಕುರಿತಂತೆ ಶಿಫಾರಸು ಮಾಡಲು ಸಮಿತಿಯನ್ನು ರಚಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಈ ಸಮಿತಿಯ ಅಧ್ಯಕ್ಷತೆಯನ್ನು ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ವಹಿಸಲಿದ್ದು, ಸದಸ್ಯರು ಈ ಕೆಳಕಂಡಂತೆ ಇದ್ದಾರೆ:
i. ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಉಪಾಧ್ಯಕ್ಷರು;
ii. ಹೆಚ್ಚುವರಿ ಕಾರ್ಯದರ್ಶಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂ.ಓ.ಎಚ್ಯು.ಎ), ಭಾರತ ಸರ್ಕಾರ;
iii. ಮುಖ್ಯ ಕಾರ್ಯದರ್ಶಿ, ದೆಹಲಿ ಎನ್.ಸಿ.ಟಿ. ಸರ್ಕಾರ;
iv. ಆಯುಕ್ತರು ಪೂರ್ವ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆ ದೆಹಲಿ;
v. ಅಧ್ಯಕ್ಷರು, ದೆಹಲಿ ನಗರ ಕಲಾ ಆಯೋಗ;
vi. ಪ್ರೊಫೆಸರ್, ನಗರ ಸಾರಿಗೆ, ಯೋಜನೆ ಮತ್ತು ವಾಸ್ತುಶಾಸ್ತ್ರ ಶಾಲೆ (ಎಸ್ಪಿಎ), ದೆಹಲಿ;
vii. ನಗರ ಯೋಜಕರು ಮತ್ತು ನಿರ್ದೇಶಕರು, ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ;
viii. ಮಾಜಿ ನಿರ್ದೇಶಕರು, ದೆಹಲಿ ಅಗ್ನಿಶಆಮಕ ಸೇವೆ; ಮತ್ತು
ix. ಪ್ರಧಾನ ಆಯುಕ್ತರು, ಡಿಡಿಎ ಸದಸ್ಯ ಕಾರ್ಯದರ್ಶಿಯಾಗಿ
ರಚನೆಯಾಗುವ ಸಮಿತಿ ತನ್ನ ವರದಿಯನ್ನು 90 ದಿನಗಳ ಒಳಗಾಗಿ ಎಂ.ಓ. ಎಚ್.ಯು.ಎ.ಗೆ ಸಲ್ಲಿಸಲಿದೆ. ಸಮಿತಿಯು ಈ ವರದಿಯ ಸಲ್ಲಿಕೆಯ ವೇಳೆ, ಸಂಪುಟ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಲಾಗುವುದು ಮತ್ತು ಸಮಿತಿಯ ಶಿಫಾರಸ್ಸನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಪ್ರಯೋಜನಗಳು:
ಸಮಿತಿಯ ಶಿಫಾರಸುಗಳು ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುತ್ತಿರುವವರಿಗೆ ಮಾಲಿಕತ್ವ ನೀಡಲು ಅಥವಾ ಭೋಗ್ಯ/ಹಕ್ಕು ವರ್ಗಾವಣೆ ನಿಟ್ಟಿನಲ್ಲಿ ಮಾರ್ಗ ತೋರಲಿದೆ. ಇದೇ ಮೊದಲ ಬಾರಿಗೆ ದೆಹಲಿ ಯುಸಿ ನಿವಾಸಿಗಳಿಗೆ ಹಕ್ಕು ನೀಡುವ ಕುರಿತಂತೆ ಪರಿಗಣಿಸಲಾಗುತ್ತಿದೆ.
(रिलीज़ आईडी: 1568229)
आगंतुक पटल : 118