ಪ್ರಧಾನ ಮಂತ್ರಿಯವರ ಕಛೇರಿ

ಶಿಕ್ಷಣ ಭವನ ಮತ್ತು ವಿದ್ಯಾರ್ಥಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

Posted On: 05 MAR 2019 11:35AM by PIB Bengaluru

ಶಿಕ್ಷಣ ಭವನ ಮತ್ತು ವಿದ್ಯಾರ್ಥಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಅದಲಾಜ್ ನಲ್ಲಿನ ಅನ್ನಪೂರ್ಣ ಧಾಮ ಟ್ರಸ್ಟ್ ನಲ್ಲಿ ಶಿಕ್ಷಣ ಭವನ ಮತ್ತು ವಿದ್ಯಾರ್ಥಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಯುಗದಲ್ಲಿ ಎದುರಾದ ಸವಾಲುಗಳನ್ನು ಪರಿಹರಿಸುವಲ್ಲಿ ಸಮುದಾಯಗಳೇ ಮುಂದಾಳತ್ವ ವಹಿಸಿದ ಶ್ರೀಮಂತ ಪರಂಪರೆ ಭಾರತದ್ದಾಗಿದೆ ಎಂದರು. ಶಿಕ್ಷಣ ಮತ್ತು ನೀರಾವರಿಯನ್ನು ಸುಧಾರಿಸಲು ಸಮುದಾಯಗಳು ಒಗ್ಗೂಡಿವೆ ಎಂಬುದನ್ನು ಅವರು ಉಲ್ಲೇಖಿಸಿದರು. ಇಂಥ ಸಾಮುದಾಯಿಕ ಪ್ರಯತ್ನಗಳು ಜನರಿಗೆ ದೊಡ್ಡ ಉಪಯೋಗ ಮಾಡಿವೆ ಎಂದೂ ಅವರು ಹೇಳಿದರು.

 

ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸಹಕಾರ ಕ್ಷೇತ್ರದಲ್ಲಿ ಸರ್ದಾರ್ ಪಟೇಲರು ಮಾಡಿದ ಪ್ರಯತ್ನಗಳು ಅವಿಸ್ಮರಣೀಯ ಎಂದರು.

 

ಆಹಾರ ಸಂಸ್ಕರಣೆಗೆ ಶ್ರಮಿಸುವಂತೆ ಗುಜರಾತ್ ಜನತೆಗೆ ಪ್ರಧಾನಮಂತ್ರಿ ಮನವಿ ಮಾಡಿದರು. ಇಂಥ ಮೌಲಿಕ ಸೇರ್ಪಡೆ ರೈತರಿಗೆ ಮತ್ತು ಕೈಗಾರಿಕೆಗಳೆರಡಕ್ಕೂ ಪ್ರಯೋಜನಕಾರಿ ಎಂದರು.

 

 ತಾಯಿ ಅನ್ನಪೂರ್ಣೆಗೆ ಪೂಜೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಅನ್ನಪೂರ್ಣ ಧಾಮ ಟ್ರಸ್ಟ್, ಸಮಾಜದಲ್ಲಿ ಲಿಂಗ ಸಮಾನತೆಯ ಖಾತ್ರಿಗೆ ಮತ್ತು ಪ್ರತಿಯೊಬ್ಬರ ಪ್ರಗತಿಗೆ ಚೈತನ್ಯ ತುಂಬಲಿ ಎಂದು ಹೇಳಿದರು.



(Release ID: 1567721) Visitor Counter : 73