ಪ್ರಧಾನ ಮಂತ್ರಿಯವರ ಕಛೇರಿ

ಕನ್ಯಾಕುಮಾರಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದ ನಂತರ ಪ್ರಧಾನಮಂತ್ರಿಯವರ ಭಾಷಣ

Posted On: 01 MAR 2019 5:33PM by PIB Bengaluru

ಕನ್ಯಾಕುಮಾರಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದ ನಂತರ ಪ್ರಧಾನಮಂತ್ರಿಯವರ ಭಾಷಣ 
 

ಸ್ನೇಹಿತರೇ,

ಕನ್ಯಾಕುಮಾರಿಗೆ ಬಂದಿರುವುದು ನನಗೆ ಸಂತೋಷ ತಂದಿದೆ.

ಗೌರವಾನ್ವಿತ ಅಮ್ಮ, ಜಯಲಲಿತಾಜಿಯವರಿಗೆ ಗೌರವ ಅರ್ಪಿಸುವ ಮೂಲಕ ನಾನು ಆರಂಭಿಸುತ್ತೇನೆ.

ತಮಿಳುನಾಡಿನ ಜನತೆಗೆ ಅವರು ಮಾಡಿರುವ ಒಳ್ಳೆಯ ಕೆಲಸಗಳು ತಲೆಮಾರುಗಳವರೆಗೆ ನೆನಪಿನಲ್ಲಿರುತ್ತವೆ.

ಅವರ ಅಭಿವೃದ್ಧಿಯ ದೂರದೃಷ್ಟಿಯನ್ನು ಸಾಕಾರಗೊಳಿಸಲು ತಮಿಳುನಾಡು ಸರ್ಕಾರ ಕಠಿಣ ಶ್ರಮಪಟ್ಟಿದೆ ಎಂದು ನನಗೆ ಸಂತೋಷವಾಗುತ್ತಿದೆ.

ದೇಶದ ಮೊದಲ ಮಹಿಳಾ ರಕ್ಷಣಾ ಸಚಿವೆ ನಿರ್ಮಲಾ ಜಿಯವರು ತಮಿಳುನಾಡಿನವರು ಎಂಬುದು ನನಗೆ ಹೆಮ್ಮೆ.

ವೀರ ವಿಂಗ್ ಕಮಾಂಡರ್ ಅಭಿನಂದನ್ ತಮಿಳುನಾಡಿನವರು ಎಂಬುದು ಪ್ರತೀ ಭಾರತೀಯನ ಹೆಮ್ಮೆ.

ಕೆಲವು ದಿನಗಳ ಹಿಂದೆ ಗಾಂಧಿ ಶಾಂತಿ ಪ್ರಶಸ್ತಿಯಿಂದ ಪುರಸ್ಕೃತವಾದ ವಿವೇಕಾನಂದ ಕೇಂದ್ರಕ್ಕೆ ನನ್ನ ಶುಭಾಶಯಗಳು.

ಕೇಂದ್ರದ ಸಮುದಾಯ ಸೇವೆಯ ಪ್ರಯತ್ನಗಳು ಶ್ಲಾಘನೀಯ ಹಾಗೂ ಸ್ಪೂರ್ತಿದಾಯಕವಾದವು.

ಸ್ನೇಹಿತರೇ,

ಸ್ವಲ್ಪ ಹೊತ್ತಿಗೆ ಮುಂಚೆ ನಾವು, ರಸ್ತೆ, ರೈಲು ಮತ್ತು ಹೆದ್ದಾರಿಗಳಿಗೆ ಸಂಬಂಧಿಸಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಉದ್ಘಾಟಿಸಿದೆವು ಮತ್ತು ಶಿಲಾನ್ಯಾಸ ನೆರವೇರಿಸಿದೆವು.

ಮಧುರೈ ಮತ್ತು ಚೆನ್ನೈ ನಡುವಿನ ಅತ್ಯಂತ ವೇಗದ ರೈಲು ತೇಜಸ್ ಗೆ ನಾನು ಚಾಲನೆ ನೀಡಿದ್ದೇನೆ.

ಇದು ಅತ್ಯಾಧುನಿಕ ರೈಲುಗಳಲ್ಲೊಂದಾಗಿದೆ. ಚೆನ್ನೈನ ಕೋಚ್ ಕಾರ್ಖಾನೆಯಲ್ಲೇ ತಯಾರಾದ ಇದು ‘ಮೇಕ್ ಇನ್ ಇಂಡಿಯಾ’ ಗೆ ಉತ್ತಮ ಉದಾಹರಣೆಯಾಗಿದೆ.

ರಾಮೇಶ್ವರಂ ಮತ್ತು ಧನುಷ್ಕೋಡಿ ನಡುವಿನ ರೈಲು ಮಾರ್ಗಕ್ಕೆ ಇಂದು ಶಿಲಾನ್ಯಾಸ ನೆರವೇರಿಸಲಾಗಿದೆ.

1964ರ ದುರಂತದಲ್ಲಿ ಈ ಮಾರ್ಗವು ಹಾಳಾಗಿತ್ತು. ಆದರೆ ಐವತ್ತು ವರ್ಷಗಳಿಗೂ ಹೆಚ್ಚಿನ ಕಾಲ ಇದರ ಬಗ್ಗೆ ಯಾವುದೇ ಗಮನ ನೀಡಿರಲಿಲ್ಲ.

ಆದರೆ, ಎಂದಿಗೂ ಇಲ್ಲದ್ದಕ್ಕಿಂತ ತಡವಾಗಿಯಾದರೂ ಆಗುತ್ತಿದೆ.

ಹೊಸ ಪಂಬನ್ ರೈಲು ಸೇತುವೆ ನಿರ್ಮಾಣವಾಗುತ್ತಿರುವುದು ನಿಮಗೆ ಸಂತೋಷ ತರಲಿದೆ.

ಸ್ನೇಹಿತರೇ,

ಭಾರತ ಇಂದು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ.

ಭಾರತವು ಮುಂದಿನ ತಲೆಮಾರಿನ ಮೂಲಸೌಕರ್ಯಗಳನ್ನು ದಾಖಲೆಯ ವೇಗದಲ್ಲಿ ಸೃಷ್ಟಿಸಿದೆ.

ಅತಿ ಹೆಚ್ಚು ಸ್ಟಾರ್ಟ್ ಅಪ್ ಗಳನ್ನು ಹೊಂದಿರುವ ದೇಶಗಳಲ್ಲಿ ನಾವೂ ಒಬ್ಬರು.

ವಿಶ್ವದ ಬೃಹತ್ ಆರೋಗ್ಯ ಸೇವೆ ಕಾರ್ಯಕ್ರಮವಾದ ಆಯುಷ್ಮಾನ್ ಭಾರತ್ ನ್ನು ಹೊಂದಿರುವ ದೇಶ ನಮ್ಮದು.

ಸ್ನೇಹಿತರೇ,

21ನೇ ಶತಮಾನದ ಭಾರತವು ವೇಗ ಮತ್ತು ಮಾಪಕದೊಂದಿಗೆ ಕೆಲಸ ಮಾಡಬೇಕಾಗಿದೆ. ಎನ್ ಡಿ ಎ ಸರ್ಕಾರ ಮಾಡುತ್ತಿರುವುದು ಅದನ್ನೇ.

ಈ ವರ್ಷದ ಬಜೆಟ್ ನಲ್ಲಿ ಘೋಷಿಸಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಕಳೆದ ಭಾನುವಾರವಷ್ಟೇ ಆರಂಭವಾಗಿದೆ.

ಈ ಯೋಜನೆಯಡಿಯಲ್ಲಿ, ಐದು ಎಕರೆಯವರೆಗೆ ಜಮೀನು ಹೊಂದಿರುವ ರೈತರು ವರ್ಷಕ್ಕೆ 6 ಸಾವಿರ ರೂಪಾಯಿಗಳ ಧನಸಹಾಯವನ್ನು ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರದಿಂದ ಪಡೆಯುತ್ತಾರೆ.

ಈಗಾಗಲೇ 1.1 ಕೋಟಿ ರೈತರು ಮೊದಲ ಕಂತನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಪಡೆದಿದ್ದಾರೆ.

ಫೆಬ್ರವರಿ ಒಂದರಂದು ಘೋಷಣೆಯಾದ ಒಂದು ಯೋಜನೆಯು ಅದೇ ತಿಂಗಳಿನಲ್ಲಿ ಆರಂಭವಾಗಿರುವುದನ್ನು ನೀವು ಕಲ್ಪಿಸಿಕೊಳ್ಳುತ್ತೀರಾ.

ಯೋಜನೆಯು 24 ದಿನಗಳಲ್ಲಿ ಕಾರ್ಯಗತವಾಗಲು ನಾವು ನಿರಂತರವಾಗಿ 24 ಗಂಟೆಯೂ ಕೆಲಸ ಮಾಡಿದ್ದೇವೆ.

ಸ್ನೇಹಿತರೇ,

ಅಧಿಕ ವರ್ಷಗಳು ಹಾಗೂ ಫುಟ್ ಬಾಲ್ ವಿಶ್ವಕಪ್ ನಾಲ್ಕು ವರ್ಷಗಳಿಗೊಮ್ಮೆ ಬರುವಂತೆ ಕಾಂಗ್ರೆಸ್ ಚುನಾವಣೆಗೆ ಸ್ವಲ್ಪ ಮುನ್ನ ಅಪೂರ್ಣ ಸಾಲಮನ್ನಾ ಮಾಡುತ್ತದೆ.

ರೈತರಿಗಾಗಿ ಏನನ್ನೂ ಮಾಡದೆ, ಕೊನೆಯಲ್ಲಿ ಬಂದು ಹೇಳುತ್ತಾರೆ, ನಾವು ನಿಮ್ಮ ಸಾಲ ಮನ್ನಾ ಮಾಡುತ್ತೇವೆ.

ವಾಸ್ತವವಾಗಿ, ಕಾಂಗ್ರೆಸ್ ಸಾಲಮನ್ನಾ ಕೆಲವು ರೈತರಿಗೆ ಮಾತ್ರ ಪ್ರಯೋಜನವಾಗುತ್ತದೆ.

ಎನ್ ಡಿ ಎ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಹಲವು ವರ್ಷಗಳಿಗೊಮ್ಮೆ ಬರುವ ಯೋಜನೆಯಲ್ಲ.

ಪ್ರತೀ ವರ್ಷ ಸೌಲಭ್ಯವನ್ನು ನೀಡಲಾಗುತ್ತದೆ. ಹತ್ತು ವರ್ಷಗಳಲ್ಲಿ ಸುಮಾರು 7.5 ಲಕ್ಷ ರೂಪಾಯಿಗಳು ಕಠಿಣಶ್ರಮ ಪಡುವ ರೈತರಿಗೆ ದೊರೆಯುತ್ತದೆ.

ಸರ್ಕಾರವೊಂದು ವೇಗ ಮತ್ತ ಮಾಪಕದೊಂದಿಗೆ ಕೆಲಸ ಮಾಡಿದಾಗ ಅದು ಸ್ಪಷ್ಟವಾಗಿ ಗೋಚರಿಸುತ್ತದೆ.

ಸ್ನೇಹಿತರೇ,

ಶ್ರೇಷ್ಠ ಸಂತ ತಿರುವಳ್ಳುವರ್ ಹೇಳುತ್ತಾರೆ “ಅಪರೂಪದ ಅವಕಾಶ ಬಂದಾಗ, ಅಪರೂಪದ ಕೆಲಸ ಮಾಡಲು ಬಳಸಿಕೊಳ್ಳಿ”

30 ವರ್ಷಗಳ ನಂತರ, 2014ರಲ್ಲಿ ಸಂಸತ್ತಿನಲ್ಲಿ ಪಕ್ಷವೊಂದು ಸಂಪೂರ್ಣ ಬಹುಮತ ಪಡೆಯಿತು.

ಜನರ ಸಂದೇಶ ಸ್ಪಷ್ಟವಾಗಿತ್ತು. ಮುಕ್ತ ಮತ್ತು ಕಠಿಣ ತೀರ್ಮಾನಗಳನ್ನು ಕೈಗೊಳ್ಳುವ ಸರ್ಕಾರವನ್ನು ಅವರು ಬಯಸಿದ್ದರು.

ಜನರು ವಂಶಪಾರಂಪರ್ಯದ ಬದಲು ಪ್ರಾಮಾಣಿಕತೆ ಬಯಸಿದ್ದರು.

ಜನರು ನಾಶವನ್ನಲ್ಲ, ಅಭಿವೃದ್ಧಿಯನ್ನು ಬಯಸಿದ್ದರು.

ಜನರು ಪಕ್ಷಪಾತಿ ನೀತಿಗಳನ್ನಲ್ಲ, ಬೆಳವಣಿಗೆಯನ್ನು ಬಯಸಿದ್ದರು.

ಜನರು ಅಡೆತಡೆಗಳನ್ನಲ್ಲ, ಅವಕಾಶಗಳನ್ನು ಬಯಸಿದ್ದರು.

ಜನರು ಬಯಸಿದ್ದು ಒಟ್ಟಾರೆ ಬೆಳವಣಿಗೆಯನ್ನು, ವೋಟ್ ಬ್ಯಾಂಕ್ ರಾಜಕಾರಣವನ್ನಲ್ಲ.

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಾರ್ಗದರ್ಶನದಲ್ಲಿ ಮತ್ತು 130 ಕೋಟಿ ಭಾರತೀಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ಎನ್ ಡಿ ಎ ಸರ್ಕಾರವು ದೇಶದ ಹಿತದೃಷ್ಟಿಯಿಂದ ಕೆಲವು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿತು.

ಕೆಲವು ಸ್ಥಳೀಯ ಹಾಗೂ ರಾಷ್ಟ್ರೀಯ ಉದಾಹರಣೆಗಳನ್ನು ನಾನು ನಿಮಗೆ ಕೊಡುತ್ತೇನೆ.

ತಮಿಳುನಾಡು ಒಂದು ಕರಾವಳಿ ರಾಜ್ಯ. ಇಲ್ಲಿ ಮೀನುಗಾರಿಕೆ ಪ್ರಮುಖವಾದ್ದು.

ಹಲವಾರು ಮೀನಗಾರಿಕಾ ಸೋದರ, ಸೋದರಿಯರು ತಮ್ಮ ಜೀವನಕ್ಕಾಗಿ ಕಠಿಣಶ್ರಮ ಪಡುತ್ತಾರೆ.

ಮೀನುಗಾರಿಕೆಗಾಗಿಯೇ ಹೊಸ ಇಲಾಖೆಯನ್ನು ಸೃಷ್ಟಿಸಿದ ಗೌರವ ಎನ್ ಡಿ ಎ ಸರ್ಕಾರಕ್ಕೆ ಸಲ್ಲುತ್ತದೆ.

ಹಿಂದಿನ ಸರ್ಕಾರಗಳು ವೋಟಿಗಾಗಿ ನಿಮ್ಮ ಬಳಿ ಬರುತ್ತಿದ್ದವು. ಆದರೆ ಕೆಲಸದ ವಿಷಯಕ್ಕೆ ಬಂದಾಗ ಮಾತ್ರ ಅವರು ಏನನ್ನೂ ಮಾಡುತ್ತಿರಲಿಲ್ಲ.

ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನವನ್ನು ನಮ್ಮ ಮೀನುಗಾರರಿಗೂ ಆರಂಭಿಸಲಾಗಿದೆ.

ತಮಿಳುನಾಡಿನಲ್ಲಿ ಆಳ ಸಮುದ್ರ ಮೀನುಗಾರಿಕಾ ಹಡಗುಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು 300 ಕೋ.ರೂ.ಗಳನ್ನು ಬಿಡುಗಡೆ ಮಾಡಿದೆ.

ಸಮುದ್ರದಲ್ಲಿರುವ ಮೀನುಗಾರರು ಬಾಹ್ಯಾಕಾಶದಿಂದ ನೆರವು ಪಡೆಯುತ್ತಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿರುವ ನಾವಿಕ್ ಸಾಧನಗಳನ್ನು ನಾವು ಒದಗಿಸಿದ್ದೇವೆ. ಈ ಸಾಧನವು ಸ್ಥಳೀಯ ಭಾಷೆಯಲ್ಲಿ ಮಾಹಿತಿಯನ್ನು ನೀಡುತ್ತದೆ.

ಈ ನ್ಯಾವಿಗೇಷನ್ ಸಾಧನವು ಮೀನುಗಾರಿಕಾ ವಲಯಗಳ ವಿವರಗಳನ್ನು ಮಾತ್ರವಲ್ಲದೇ, ಹವಾಮಾನ ಸಂಬಂಧಿ ಎಚ್ಚರಿಕೆಗಳನ್ನೂ ಮೀನುಗಾರರಿಗೆ ಒದಗಿಸುತ್ತದೆ.

ಸ್ನೇಹಿತರೇ,

ಮೀನುಗಾರಿಕಾ ಸೋದರ, ಸೋದರಿಯರ ಆದಾಯವನ್ನು ಹೆಚ್ಚಿಸಲು ಮೀನುಗಾರಿಕೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂಬುದು ನಮಗೆ ತಿಳಿದಿದೆ.

ರಾಮನಾಥಪುರಂ ಜಿಲ್ಲೆ ಮುಕಯುರ್ ಮೀನುಗಾರಿಕಾ ಬಂದರು ಮತ್ತು ನಾಗಪಟ್ಟಿಣಂನಲ್ಲಿನ ಪುಂಫುಹಾರ್ ಮೀನುಗಾರಿಕಾ ಬಂದರುಗಳ ಕೆಲಸ ಬಹುತೇಕ ಮುಕ್ತಾಯವಾಗಿದೆ.

ಸ್ನೇಹಿತರೇ,

ಮೀನುಗಾರರ ಸುರಕ್ಷತೆ ಹಾಗೂ ಯೋಗಕ್ಷೇಮದ ಬಗ್ಗೆ ಭಾರತ ಸರ್ಕಾರವು ಹೆಚ್ಚು ಸೂಕ್ಷ್ಮವಾಗಿದೆ.

2014ರ ಮೇ ತಿಂಗಳಿನಿಂದ ನಡೆದ ಸತತ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ 1900ಕ್ಕೂ ಹೆಚ್ಚು ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದೆ.

ಸ್ನೇಹಿತರೇ,

ಎನ್ ಡಿ ಎ ಸರ್ಕಾರವು ಕರಾವಳಿ ಪ್ರದೇಶಗಳ ಸಂಪರ್ಕ ಹಾಗೂ ಸಮೃದ್ಧಿಯ ಮೇಲೆ ಹೆಚ್ಚು ಒತ್ತು ಕೊಟ್ಟು ಗಮನ ಹರಿಸಿದೆ.

ಬಂದರು ಅಭಿವೃದ್ಧಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ನಾವು ಬಂದರುಗಳಿಂದ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡುತ್ತಿದ್ದೇವೆ. 

ಹೆಚ್ಚು ಬಂದರುಗಳು ನಿರ್ಮಾಣವಾಗಲಿವೆ.

ಅಸ್ತಿತ್ವದಲ್ಲಿರುವ ಬಂದರುಗಳ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಸುಧಾರಿಸಲಾಗುತ್ತಿದೆ. ಸಾಗರ್ ಮಾಲಾ ಯೋಜನೆ ಕೂಡ ನಮ್ಮ ದೂರದೃಷ್ಟಿಯ ಒಂದು ಭಾಗವಾಗಿದೆ.

ಪ್ರಸ್ತುತ ತಲೆಮಾರಷ್ಟೇ ಅಲ್ಲದೇ, ಮುಂದಿನ ಪೀಳಿಗೆಯವರನ್ನೂ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸುವ ಕೆಲಸ ನಡೆಯುತ್ತಿದೆ.

ಸ್ನೇಹಿತರೇ,

ರಕ್ಷಣೆ ಹಾಗೂ ಸುರಕ್ಷತೆಯ ಬಗ್ಗೆ ಮಾತನಾಡೋಣ.

ನಮ್ಮ ಮಾಜಿ ಸೈನಿಕರ ಆಶೀರ್ವಾದಗಳೊಂದಿಗೆ ಒಂದು ಶ್ರೇಣಿ ಒಂದು ಪಿಂಚಣಿಯನ್ನು ಜಾರಿಗೊಳಿಸುವ ಐತಿಹಾಸಿಕ ನಿರ್ಧಾರವನ್ನು ನಾವು ಕೈಗೊಂಡೆವು. 

ಇದೊಂದು ಮಾಡಬೇಕಾಗಿದ್ದ ಸರಿಯಾದ ಕೆಲಸ.

ದೇಶವನ್ನು ಹಲವಾರು ವರ್ಷಗಳು ಆಳಿದವರು OROP ಯ ಬಗ್ಗೆ ಸರಿಯಾಗಿ ಯೋಚಿಸಲೂ ಹೋಗಿರಲಿಲ್ಲ.

ಸ್ನೇಹಿತರೇ,

ಭಾರತವು ಹಲವಾರು ವರ್ಷಗಳಿಂದ ಭಯೋಯ್ಪಾದನೆಯ ಭೂತವನ್ನು ಎದುರಿಸುತ್ತಿದೆ.

ಆದರೆ, ಈಗ ದೊಡ್ಡ ಬದಲಾವಣೆಯಾಗಿದೆ. ಭಯೋತ್ಪಾದನೆಯ ವಿಷಯದಲ್ಲಿ ಭಾರತವು ಇನ್ನು ಅಸಹಾಯಕವಲ್ಲ.

2004 ರಿಂದ 2014 ರವರೆಗೆ ಅನೇಕ ಭಯೋತ್ಪಾದಕ ದಾಳಿಗಳು ನಡೆದವು.

ಹೈದರಾಬಾದ್, ಅಹಮದಾಬಾದ್, ಜೈಪುರ್, ಬೆಂಗಳೂರು, ದೆಹಲಿ, ಮುಂಬೈ, ಪುಣೆ ಮತ್ತಿತರ ಸ್ಥಳಗಳಲ್ಲಿ ಸ್ಫೋಟಗಳು ನಡೆದವು.

ಭಯೋತ್ಪಾದನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ದೇಶ ಕಾಯುತ್ತಿತ್ತು. ಆದರೆ ಏನೂ ಆಗಲಿಲ್ಲ.

26/11 ಘಟಿಸಿದಾಗ ಭಯೋತ್ಪಾದಕರ ವಿರುದ್ಧ ಕ್ರಮಗಳಾಗಬೇಕೆಂದು ದೇಶ ನಿರೀಕ್ಷಿಸಿತ್ತು. ಆದರೆ ಏನೂ ಆಗಲಿಲ್ಲ.

ಆದರೆ, ಉರಿ ಘಟನೆಯ ನಂತರ ನಮ್ಮ ವೀರಯೋಧರು ಏನು ಮಾಡಿದರು ಎಂಬುದನ್ನು ನೀವು ನೋಡಿದಿರಿ.

ಪುಲ್ವಾಮಾ ಘಟನೆಯ ನಂತರ ನಮ್ಮ ವಾಯು ವೀರರು ಏನು ಮಾಡಿದರು ಎಂಬುದನ್ನು ನೋಡಿದಿರಿ.

ದೇಶ ರಕ್ಷಣೆಯಲ್ಲಿರುವವರಿಗೆ ನನ್ನ ಸಲ್ಯೂಟ್.

ಅವರ ನಿಗಾ ನಮ್ಮ ದೆಶವನ್ನು ಸುರಕ್ಷಿತವಾಗಿರಿಸಿದೆ.

ಒಂದು ಸಮಯದಲ್ಲಿ ಕೆಲವು ಸುದ್ದಿಗಳು ಇದ್ದವು. 26/11 ರ ನಂತರ ವಾಯುಪಡೆಯು ಸರ್ಜಿಕಲ್ ಸ್ಟ್ರೈಕ್ ನಡೆಸಲು ಬಯಸಿತ್ತು, ಆದರೆ ಯುಪಿಎ ಸರ್ಕಾರ ಅದನ್ನು ತಡೆಯಿತು ಎಂದು.

ಇವತ್ತಿನ ಸುದ್ದಿ ಏನೆಂದರೆ, ತಮಗೆ ಬೇಕಾದ್ದನ್ನು ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಸಶಸ್ತ್ರ ಪಡೆಗಳು ಪಡೆದಿವೆ ಎಂಬುದು.

ಭಯೋತ್ಪಾದಕರು ಹಾಗೂ ಭಯೋತ್ಪಾದನೆಯ ಪ್ರಭಾವವನ್ನು ತಗ್ಗಿಸಲಾಗಿದೆ. ಅದನ್ನು ಮತ್ತಷ್ಟು ಕುಗ್ಗಿಸಲಾಗುವುದು.

ಇದು ನವಭಾರತ.

ಭಯೋತ್ಪಾದಕರು ಮಾಡಿದ ಹಾನಿಗೆ ಬಡ್ಡಿ ಸಮೇತ ಹಿಂದುರುಗಿಸಲಿರುವ ಭಾರತ.

ಸ್ನೇಹಿತರೇ,

ಕಳೆದ ಕೆಲವು ದಿನಗಳ ಘಟನೆಗಳು ನಮ್ಮ ಸಶಸ್ತ್ರ ಪಡೆಗಳ ಬಲವನ್ನು ಮತ್ತೊಮ್ಮೆ ಪ್ರದರ್ಶಿಸಿವೆ.

ಇದು ನಮ್ಮ ದೇಶವನ್ನು ಒಟ್ಟುಗೂಡಿಸಿದೆ.

ನಮ್ಮ ಸಶಸ್ತ್ರ ಪಡೆಗಳಿಗೆ ದೇಶ ನೀಡಿದ ಬೆಂಬಲ ನೀಡಿದ ರೀತಿಗಾಗಿ ಪ್ರತಿಯೊಬ್ಬ ಭಾರತೀಯನಿಗೂ ನಾನು ನಮಿಸುತ್ತೇನೆ.

ದುರದೃಷ್ಟವಶಾತ್, ಕೆಲವು ರಾಜಕೀಯ ಪಕ್ಷಗಳು ಮೋದಿಯ ದ್ವೇಷಿಗಳು ದೇಶವನ್ನು ದ್ವೇಷಿಸಲು ಆರಂಭಿಸಿವೆ.

ಇಡೀ ದೇಶ ನಮ್ಮ ಸಶಸ್ತ್ರ ಪಡೆಗಳನ್ನು ಬೆಂಬಲಿಸುತ್ತಿದ್ದರೆ ಅವರು ಸಶಸ್ತ್ರ ಪಡೆಗಳನ್ನು ಅನುಮಾನಿಸುತ್ತಿದ್ದಾರೆ.

ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟವನ್ನು ವಿಶ್ವವೇ ಬೆಂಬಲಿಸುತ್ತಿದೆ. ಆದರೆ ಕೆಲವು ಪಕ್ಷಗಳು ನಮ್ಮ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಅನುಮಾನಿಸುತ್ತಿವೆ.

ಈ ಜನರ ಹೇಳಿಕೆಗಳೇ ಪಾಕಿಸ್ತಾನಕ್ಕೆ ಸಹಾಯವಾಗುತ್ತಿದ್ದು, ಭಾರತಕ್ಕೆ ಹಾನಿಯಾಗುತ್ತಿದೆ.

ಈ ಜನರ ಹೇಳಿಕೆಗಳನ್ನು ಪಾಕಿಸ್ತಾನದ ಸಂಸತ್ತು ಹಾಗೂ ರೇಡಿಯೋಗಳಲ್ಲಿ ಸಂತೋಷದಿಂದ ಬಳಸಲಾಗುತ್ತಿದೆ.

ನಾನವರನ್ನು ಕೇಳುತ್ತಿದ್ದೇನೆ. ನೀವು ನಮ್ಮ ಸಶಸ್ತ್ರ ಪಡೆಗಳನ್ನು ಬೆಂಬಲಿಸುತ್ತೀರೋ ಅಥವಾ ಅವರನ್ನು ಅನುಮಾನಿಸುತ್ತೀರೋ?

ಅವರು ಸ್ಪಷ್ಟೀಕರಣ ನೀಡಲಿ. ಅವರು ನಮ್ಮ ಸಶಸ್ತ್ರ ಪಡೆಗಳನ್ನು ನಂಬುತ್ತಾರೋ ಅಥವಾ ನಮ್ಮ ನೆಲದಲ್ಲಿ ಭಯೋತ್ಪಾದನೆ ನಡೆಸುವವರಿಗೆ ಬೆಂಬಲ ನೀಡುವ ಪಡೆಗಳನ್ನು ನಂಬುತ್ತಾರೋ?

ನಾನು ಈ ಪಕ್ಷಗಳಿಗೆ ಹೇಳಬಯಸುತ್ತೇನೆ. ಮೋದಿ ಬರುತ್ತಾನೆ, ಹೋಗುತ್ತಾನೆ. ಭಾರತ ಇದ್ದೇ ಇರುತ್ತದೆ.

ನಿಮ್ಮ ರಾಜಕಾರಣವನ್ನು ಬಲಪಡಿಸಿಕೊಳ್ಳಲು ಭಾರತವನ್ನು ದುರ್ಬಲಗೊಳಿಸುವುದನ್ನು ನಿಲ್ಲಿಸಿ.

ದೇಶದ ಭದ್ರತೆಯ ವಿಷಯದಲ್ಲಿ ಭಾರತೀಯರೇ ಮೊದಲು ಮತ್ತು ಭಾರತೀಯರು ಮಾತ್ರ.

ಸ್ನೇಹಿತರೇ,

ಭ್ರಷ್ಟಾಚಾರ ಮತ್ತು ಕಪ್ಪುಹಣದ ಬಗ್ಗೆ ಮಾತನಾಡೋಣ.

ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಗಳನ್ನು ಭಾರತ ನೋಡಿದೆ.

ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣಗಲ್ಲಿ ‘ಶೂನ್ಯ ನಷ್ಟ’ ವನ್ನು ಹೇಳಿದ ಅಹಂಕಾರಿ ಸಂಪುಟ ಸಚಿವರನ್ನು ಭಾರತ ನೋಡಿದೆ.

ಕೆಲವರು ಹೇಳುತ್ತಾರೆ ಭ್ರಷ್ಟಾಚಾರ ಜೀವನದ ಒಂದು ದಾರಿ ಎಂದು.

ಇದು ಅವರಿಗೆ ಒಪ್ಪಿತವಾಗಿರಬಹುದು ಆದರೆ ನನಗಲ್ಲ.

ಭ್ರಷ್ಟಾಚಾರದ ವಿರುದ್ಧ ಎನ್ ಡಿ ಎ ಸರ್ಕಾರವು ಐತಿಹಾಸಿಕ ಹೆಜ್ಜೆಗಳನ್ನು ಇಟ್ಟಿದೆ.

ನಕಲಿ ಕಂಪನಿಗಳು ಮುಚ್ಚಲಾಗಿದೆ. ನಕಲಿ ಫಲಾನುಭವಿಗಳನ್ನು ತೆಗೆದುಹಾಕಲಾಗಿದೆ.

ಭ್ರಷ್ಟಾಚಾರಿ ಈಗ ತಮ್ಮ ದುಷ್ಕೃತ್ಯಗಳಿಗೆ ಉತ್ತರಿಸಬೇಕಾಗಿದೆ.

ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳುವ, ಮಧ್ಯಮವರ್ಗವನ್ನು ಹೀಯಾಳಿಸುವ ಹೆಸರಾಂತ ರೀ ಕೌಂಟಿಂಗ್ ಮಂತ್ರಿಯೊಬ್ಬರು ತಮ್ಮ ಪಕ್ಷದ ಮೊದಲ ಕುಟುಂಬದ ರೀತಿಯಲ್ಲಿ ಫ್ಯಾಮಿಲಿ ಪ್ಯಾಕ್ ಜಾಮೀನಿಗಾಗಿ ಅರ್ಜಿ ಹಾಕಬೇಕಾಗಿದೆ.

ಸ್ನೇಹಿತರೇ,

ಭ್ರಷ್ಟಾಚಾರದ ವಿರುದ್ಧ ನಾವು ಕ್ರಮಕೈಗೊಂಡಂತೆಯೇ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರಿಗೆ ನಾವು ಬಹುಮಾನ ನೀಡುತ್ತಿದ್ದೇವೆ.

ಐದು ಲಕ್ಷ ರೂಪಾಯಿಗಳವರೆಗಿನ ಆದಾಯ ಹೊಂದಿದವರು ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಒಂದು ತಿಂಗಳ ಹಿಂದೆ ಮಂಡಿಸಿದ ಬಜೆಟ್ ನಲ್ಲಿ ಘೋಷಿಸಲಾಗಿದೆ.

ಬಹಳ ವರ್ಷಗಳ ಕಾಲ ಭಾರತವನ್ನು ಆಳಿದವರು ಮಧ್ಯಮ ವರ್ಗಗಳ ಬಗ್ಗೆ ಯೋಚಿಸಿದ್ದರೇ ಅಥವಾ ಅವರಿಗೆ ತೆರಿಗೆ ವಿನಾಯ್ತಿ ನೀಡಿದ್ದರೇ?

ಸ್ನೇಹಿತರೇ,

ಹಲವು ವರ್ಷಗಳಿಂದ ಕಾಂಗ್ರೆಸ್, ದೊಡ್ಡ ವಂಶಸ್ಥರ ಕುಟುಂಬ ಸದಸ್ಯರಿಗೆ ಅನುಕೂಲವಾಗುವಂತಹ ಆರ್ಥಿಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿತ್ತು.

ಜನಸಾಮಾನ್ಯ ಆರ್ಥಿಕವಾಗಿ ಏಳಿಗೆಯಾಗಲು ಯಾವುದೇ ಪ್ರೋತ್ಸಾಹ ಪಡೆಯಲಿಲ್ಲ.

ಕಾಂಗ್ರೆಸ್ ನ ಆರ್ಥಿಕ ಸಂಸ್ಕೃತಿಯ ವಿರುದ್ಧ ಯಾರಾದರೂ ಮಾತನಾಡಿದ್ದರೆ ಅದು ತಮಿಳುನಾಡಿನ ಮಗ ಸಿ. ರಾಜಗೋಪಾಲಚಾರಿಯವರು.

ಇಂದು ನಾವು ಸುಧಾರಿತ ಹಾಗೂ ಜನಸ್ನೇಹಿ ಆರ್ಥಿಕತೆಯನ್ನು ಸೃಷ್ಟಿಸುವ ಮೂಲಕ ರಾಜಾಜಿಯವರ ಕನಸುಗಳನ್ನು ಈಡೇರಿಸಿದ್ದೇವೆ.

‘ವ್ಯವಹಾರದ ಸರಳೀಕರಣ’ ಶ್ರೇಣಿಯಲ್ಲಿ ಭಾರತವು 65 ಸ್ಥಾನಗಳಷ್ಟು ಏರಿಕೆ ಕಂಡಿದೆ.

ನಾವೀಗ 77 ನೇ ಸ್ಥಾನದಲ್ಲಿದ್ದು, ನಾಲ್ಕು ವರ್ಷಗಳ ಹಿಂದೆ 142ನೇ ಸ್ಥಾನದಲ್ಲಿದ್ದೆವು.

ಕಳೆದ ವರ್ಷ ಕೇಂದ್ರ ಸರ್ಕಾರವು MSME ವಲಯಕ್ಕೆ ಹಲವಾರು ಸೌಲಭ್ಯಗಳನ್ನು ಘೋಇಸಿದೆ.

ಈಗ ಕೇವಲ 59 ನಿಮಿಷಗಳಲ್ಲಿ ಒಂದು ಕೋಟಿ ರೂಪಾಯಿಯವರೆಗೆ ಸಾಲ ಪಡೆಯುವುದು ಸಾಧ್ಯವಾಗಿದೆ.

ಇದು ನೀವು ಚೆನ್ನೈ ತಲುಪಲು ತೆಗೆದುಕೊಳ್ಳುವ ಸಮಯಕ್ಕಿಂತ ವೇಗವಾದ್ದು.

ಸ್ನೇಹಿತರೇ,

ನಾವು ಭಾರತದ ಯುವಜನತೆ ಹಾಗೂ ಅವರ ಪ್ರತಿಬೆಯ ಮೇಲೆ ಭರವಸೆ ಇಟ್ಟಿದ್ದೇವೆ.

ಆದ್ದರಿಂದಾಗಿಯೇ ಯುವ ಭಾರತದ ಉತ್ಸಾಹಕ್ಕೆ ರೆಕ್ಕೆಯಾಗಲು ನಾವು ಮುದ್ರಾ ಯೋಜನೆಯನ್ನು ಆರಂಭಿಸಿದ್ದೇವೆ.

ಮುದ್ರಾ ಯೋಜನೆಯಡಿ, 15 ಕೋಟಿ ಜನರು 7 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸಾಲ ಪಡೆದಿದ್ದಾರೆ.

ಈ ಯೋಜನೆಯಡಿ ತಮಿಳುನಾಡು ಸಹ ಒಂದು ಅಗ್ರ ರಾಜ್ಯ.

ಸ್ನೇಹಿತರೇ,

ಪ್ರತಿಪಕ್ಷಗಳಿಗೆ ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆಯಿಲ್ಲ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದಲಿತರ ವಿರುದ್ಧ ಕೆಟ್ಟ ದೌರ್ಜನ್ಯಗಳು ನಡೆದಿವೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಒಂದಲ್ಲ ಎರಡು ಬಾರಿ ಸೋಲಿಸಿತು.

ಡಾ.ಅಂಬೇಡ್ಕರ್ ಅವರಿಗೆ ನಲವತ್ತು ವರ್ಷಗಳ ಕಾಲ ಭಾರತ ರತ್ನ ನೀಡಲಿಲ್ಲ. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಅವರ ಭಾವಚಿತ್ರ ಹಾಕಲಿಲ್ಲ.

ಕಾಂಗ್ರೆಸ್ಸೇತರ ಸರ್ಕಾರವು ಇವೆರಡನ್ನೂ ಮಾಡಲು ಬಿಜೆಪಿ ಬೆಂಬಲ ನೀಡಿತು.

ಸ್ನೇಹಿತರೇ,

ಪ್ರಸ್ತುತ ಇರುವ ಎನ್ ಡಿ ಎ ಸರ್ಕಾರವು SC ST  ಕಾಯ್ದೆಗೆ ಬಲವಾದ ತಿದ್ದುಪಡಿಗಳನ್ನು ಮಾಡಿದೆ.

ಆರ್ಥಿಕತೆ ಮತ್ತು ಸಾಮಾಜಿಕ ನ್ಯಾಯ ನಮಗೆ ನಂಬಿಕೆಯ ಸಾಧನಗಳು. ವೋಟು ಗಳಿಸುವ ಘೋಷಣೆಗಳಲ್ಲ.

ಸ್ನೇಹಿತರೇ,

2019 ಲೋಕಸಭೆ ಚುನಾವಣೆಗಳು ಎರಡು ವಿಭಿನ್ನ ಬದಿಗಳನ್ನು ಹೊಂದಿವೆ.

ನಮ್ಮದು ಶಕ್ತಿ ಮತ್ತು ಸ್ಥಿರತೆಯನ್ನು ನೀಡುತ್ತದೆ.

ಇನ್ನೊಂದು ದೌರ್ಬಲ್ಯ ಮತ್ತು ದುರ್ಬಲತೆಯನ್ನು ನೀಡುತ್ತದೆ.

ನಮ್ಮ ನಾಯಕತ್ವ ಮತ್ತು ಕೆಲಸದ ಸಂಸ್ಕೃತಿ ಭಾರತದಾದ್ಯಂತ ತಿಳಿದಿದೆ.

ಇನ್ನೊಂದೆಡೆ ಗೊಂದಲ ಇದೆ.

ದೇಶದ ಮುಂದಿನ ನಾಯಕರಾಗಿ ಹೇಳಲು ಅವರು ಯಾವುದೇ ಹೆಸರನ್ನು ಹೊಂದಿಲ್ಲ.

ಭಾರತದ ಬೆಳವಣಿಗೆಗೆ ಯಾವುದೇ ಗುರಿ ಅಥವಾ ದೃಷ್ಟಿಕೋನವಿಲ್ಲ.

ಮತ್ತು ದಾಖಲೆಯ ಭ್ರಷ್ಟಾಚಾರದಲ್ಲಿ ತೊಡಗಲು ಅವರನ್ನು ಯಾವುದೇ ಅವಮಾನವೂ ತಡೆಯುವುದಿಲ್ಲ.

2009ರಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಹೇಗೆ ಮಂತ್ರಿ ಸ್ಥಾನಗಳನ್ನು ಹೇಗೆ ಹಂಚಿಕೊಂಡವು ಎಂಬುದನ್ನು ಭಾರತ ನೆನಪಿಸಿಕೊಳ್ಳುತ್ತದೆ.

ಸಚಿವರನ್ನು ಪ್ರಧಾನ ಮಂತ್ರಿಯವರ ಬದಲಿಗೆ ಸಾರ್ವಜನಿಕ ಸೇವೆಯಲ್ಲಿ ಇಲ್ಲದವರು ಆರಿಸುತ್ತಿದ್ದರು.

ಮಂತ್ರಿ ಸ್ಥಾನಕ್ಕಾಗಿ ಟೆಲಿಫೋನ್ ಲಾಬಿ ಇತ್ತು.

ಮಹಾ ಮಿಲಾವತ್ ಅಥವಾ ಕಲಬೆರಕೆ ಸರ್ಕಾರವು ವೈಯಕ್ತಿಕ ಅಹಂ ಹಾಗೂ ವಂಶಪಾರಂಪರ್ಯದ ಮಹತ್ವಾಕಾಂಕ್ಷೆಗಳಿಗೆ ಒತ್ತೆಯಾಳಾಗುತ್ತದೆ.

ನನ್ನ ಕುಟುಂಬ 130 ಕೋಟಿ ಭಾರತೀಯರು.

ನಾನು ಅವರಿಗಾಗಿ ಬದುಕುತ್ತೇನೆ, ಅವರಿಗಾಗಿ ಸಾಯುತ್ತೇನೆ.

ನಾನು ವಂಶಪಾರಂಪರ್ಯದ ಮುಂದುವರಿಕೆಗಾಗಿ ಸಾರ್ವಜನಿಕ ಜೀವನದಲ್ಲಿಲ್ಲ.

ಭಾರತದ ಬೆಳವಣಿಗೆಗೆ ನನ್ನಿಂದಾಗುವುದನ್ನು ಮಾಡಲು ನಾನು ಇಲ್ಲಿದ್ದೇನೆ.

ಕಡುಬಡವರ ಕನಸುಗಳು ಸಾಕಾರವಾಗುವ ಭಾರತ ನಿರ್ಮಾಣ ಮಾಡಲು ನಾನು ನಿಮ್ಮ ಬೆಂಬಲ ಹಾಗೂ ಆಶೀರ್ವಾದ ಬೇಡುತ್ತಿದ್ದೇನೆ.

ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು.

ಭಾರತ್ ಮಾತಾ ಕಿ ಜೈ.

***



(Release ID: 1567466) Visitor Counter : 82