ಪ್ರಧಾನ ಮಂತ್ರಿಯವರ ಕಛೇರಿ

ಖತಾರ್ ದೊರೆಯೊಂದಿಗೆ ಪ್ರಧಾನಮಂತ್ರಿಯವರ ದೂರವಾಣಿ ಸಂಭಾಷಣೆ

Posted On: 02 MAR 2019 9:23PM by PIB Bengaluru

ಖತಾರ್ ದೊರೆಯೊಂದಿಗೆ ಪ್ರಧಾನಮಂತ್ರಿಯವರ ದೂರವಾಣಿ ಸಂಭಾಷಣೆ 
 

ಖತಾರ್ ನ ದೊರೆ ಶೇಖ್ ತಮೀಮ್ ಬಿನ್ ಅಹಮದ್ ಬಿನ್ ಖಲೀಫಾ ಅಲ್ ಥಾನಿ ಅವರಿಂದು ದೂರವಾಣಿ ಕರೆ ಮಾಡಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.

 

ಖತಾರ್ ನಮ್ಮ ಆಪ್ತ ಮಿತ್ರನಾಗಿದ್ದು, ಅದರೊಂದಿಗೆ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಭಾರತ ಪ್ರಾಮುಖ್ಯತೆ ನೀಡಿದೆ, ಈ ದೇಶದೊಂದಿಗೆ ನಾವು ವಿಸ್ತರಿತ ನೆರೆಹೊರೆಯನ್ನು ಹಂಚಿಕೊಂಡಿದ್ದೇವೆ ಎಂದು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಅವರು ಖತಾರ್ ನ ದೊರೆಗೆ ಅವರ ನಾಯಕತ್ವ ಮತ್ತು ದ್ವಿಪಕ್ಷೀಯ ಬಾಂಧವ್ಯ ತ್ವರಿತವಾಗಿ ಬಲವರ್ಧನೆಯಾಗಲು ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ನೀಡುತ್ತಿರುವ ಮಾರ್ಗದರ್ಶನಕ್ಕೆ ಧನ್ಯವಾದ ಅರ್ಪಿಸಿದರು.

 

ಇಬ್ಬರೂ ನಾಯಕರು ಪ್ರಾದೇಶಿಕ ಸನ್ನಿವೇಶಗಳ ಕುರಿತು ಚರ್ಚಿಸಿದರು. ಪ್ರಧಾನಮಂತ್ರಿಯವರು, ಭಯೋತ್ಪಾದನೆಯು ವಲಯದ ಮತ್ತು ವಲಯದಾಚೆ ಶಾಂತಿ ಮತ್ತು ಭದ್ರತೆಗೆ ಗಂಭೀರವಾದ ಅಪಾಯ ಒಡ್ಡಿದೆ ಎಂದು ಹೇಳಿದರು. ಎಲ್ಲ ಸ್ವರೂಪದ ಭಯೋತ್ಪಾದನೆಗೆ ಕೊನೆ ಹಾಡಲು ಮತ್ತು ಅದಕ್ಕೆ ಎಲ್ಲ ಬೆಂಬಲ ನಿಲ್ಲಿಸಲು ತತ್ ಕ್ಷಣವೇ ಸಂಬಂಧಿತ ಎಲ್ಲರೂ ತಮ್ಮ ಕ್ರಮ ಪ್ರದರ್ಶಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

 

ನಿನ್ನೆ ಅಬು ದಾಬಿಯಲ್ಲಿ ನಡೆದ ಇಸ್ಲಾಮಿಕ್ ಸಹಕಾರ ಸಂಘಟನೆಯ 46ನೇ ವಿದೇಶಾಂಗ ಸಚಿವರುಗಳ ಮಂಡಳಿ (ಓಐಸಿ)ಯ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾಗಿಯಾದ ಐತಿಹಾಸಿಕ ಮಹತ್ವವನ್ನು ಈ ನಾಯಕರು ಉಲ್ಲೇಖಿಸಿದರು.  

 

***



(Release ID: 1567459) Visitor Counter : 86