ಗೃಹ ವ್ಯವಹಾರಗಳ ಸಚಿವಾಲಯ

ನಾಪತ್ತೆಯಾದ ಮತ್ತು ಶೋಷಣೆಗೆ ಒಳಗಾದ ಮಕ್ಕಳ ಮಾಹಿತಿ ವರದಿಗಳನ್ನು ಪಡೆಯುವುದಕ್ಕಾಗಿ ಭಾರತ ಮತ್ತು ಯು.ಎಸ್.ಎ. ನಡುವೆ ತಿಳುವಳಿಕಾ ಒಡಂಬಂಡಿಕೆಗೆ ಸಂಪುಟ ಅನುಮೋದನೆ. 

Posted On: 28 FEB 2019 10:41PM by PIB Bengaluru

ನಾಪತ್ತೆಯಾದ ಮತ್ತು ಶೋಷಣೆಗೆ ಒಳಗಾದ ಮಕ್ಕಳ ಮಾಹಿತಿ ವರದಿಗಳನ್ನು ಪಡೆಯುವುದಕ್ಕಾಗಿ ಭಾರತ ಮತ್ತು ಯು.ಎಸ್.ಎ. ನಡುವೆ ತಿಳುವಳಿಕಾ ಒಡಂಬಂಡಿಕೆಗೆ ಸಂಪುಟ ಅನುಮೋದನೆ. 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ನಾಪತ್ತೆಯಾದ ಮತ್ತು ಶೋಷಣೆಗೆ ಒಳಗಾದ ಮಕ್ಕಳ ಮಾಹಿತಿ ವರದಿಗಳನ್ನು ಪಡೆಯುವುದಕ್ಕಾಗಿ ಭಾರತ ಮತ್ತು ಯು.ಎಸ್.ಎ. ನಡುವೆ ತಿಳುವಳಿಕಾ ಒಡಂಬಂಡಿಕೆಗೆ ಅನುಮೋದನೆ ನೀಡಿತು. ಈ ತಿಳುವಳಿಕಾ ಒಡಂಬಡಿಕೆಗೆ ಭಾರತದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ( ಎನ್.ಸಿ.ಆರ್. ಬಿ.) ಮತ್ತು ಯು.ಎಸ್.ಎ. ಯ ನಾಪತ್ತೆಯಾದ ಮತ್ತು ಶೋಷಣೆಗೆ ಒಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರ (ಎನ್.ಸಿ.ಎಂ.ಇ.ಸಿ.) ಗಳು ಅಂಕಿತ ಹಾಕಿವೆ. 

ಪ್ರಯೋಜನಗಳು: 

ಯು.ಎಸ್.ಎ. ಯ ಎನ್.ಸಿ.ಎಂ.ಇ.ಸಿ. ಯಲ್ಲಿರುವ ಒಂದು ಲಕ್ಷಕ್ಕೂ ಅಧಿಕ ಮಾಹಿತಿ ವರದಿಗಳನ್ನು ಪಡೆದುಕೊಳ್ಳಲು ಈ ತಿಳುವಳಿಕಾ ಒಡಂಬಡಿಕೆ ಅವಕಾಶ ಮಾಡಿಕೊಡುತ್ತದೆ ಮತ್ತು ಭಾರತದ ಕಾನೂನು ಜಾರಿ ಏಜೆನ್ಸಿಗಳಿಗೆ ಇದರಿಂದ ಪ್ರಯೋಜನವಾಗುತ್ತದೆ. ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ಮಕ್ಕಳ ಲೈಂಗಿಕ ದುರ್ಬಳಕೆ ವಸ್ತುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನವೀನ ವ್ಯವಸ್ಥೆಯೊಂದನ್ನು ಸ್ಥಾಪಿಸಲು ಇದು ಅವಕಾಶ ಮಾಡಿಕೊಡುವುದಲ್ಲದೆ , ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಅವಕಾಶ ಒದಗಿಸುತ್ತದೆ. ಇದರ ಜೊತೆಗೆ ಸೈಬರ್ ಜಾಲದಿಂದ ಮಕ್ಕಳ ಅಶ್ಲೀಲ ಚಿತ್ರಗಳನ್ನು ಮತ್ತು ಮಕ್ಕಳ ಲೈಂಗಿಕ ದುರ್ಬಳಕೆ ವಸ್ತುವನ್ನು ತೆಗೆದುಹಾಕಲು ಕಾನೂನು ಜಾರಿ ಏಜೆನ್ಸಿಗಳಿಗೆ ಅಧಿಕಾರ ಕೊಡುತ್ತದೆ. ಮತ್ತು ಆ ಮೂಲಕ ಮಾನವ ಘನತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 



(Release ID: 1566950) Visitor Counter : 171


Read this release in: English , Urdu , Tamil