ಪ್ರಧಾನ ಮಂತ್ರಿಯವರ ಕಛೇರಿ
ಸಿಯೋಲ್ ನ ಯೋನ್ಸೆ ವಿಶ್ವ ವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನ ಮಂತ್ರಿಗಳು
प्रविष्टि तिथि:
21 FEB 2019 3:15PM by PIB Bengaluru
ಸಿಯೋಲ್ ನ ಯೋನ್ಸೆ ವಿಶ್ವ ವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನ ಮಂತ್ರಿಗಳು
ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಇಂದು ಸಿಯೋಲ್ ನ ಯೋನ್ಸೆ ವಿಶ್ವ ವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಕೋರಿಯಾ ಗಣರಾಜ್ಯದ ಅಧ್ಯಕ್ಷ ಶ್ರೀ ಮೂನ್ ಜೆ ಇನ್, ಕೋರಿಯಾ ಗಣರಾಜ್ಯದ ಪ್ರಥಮ ಮಹಿಳೆ ಕಿಮ್ ಜಂಗ್ ಸೂಕ್ ಮತ್ತು ವಿಶ್ವ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀ ಬಾನ್ ಕಿ ಮೂನ್ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಗಳು ಯೋನ್ಸೆ ವಿಶ್ವ ವಿದ್ಯಾಲಯದಲ್ಲಿ ಬಾಪೂರವರ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ಲಭಿಸಿರುವುದು ತಮ್ಮ ಅದೃಷ್ಟ ಎಂದು ಬಣ್ಣಿಸಿದರು.
ಬಾಪು ರವರ 150 ನೇ ಜನ್ಮ ಜಯಂತಿಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಈ ಸಂದರ್ಭವನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ನುಡಿದರು.
ಇಂದಿನ ದಿನದಲ್ಲಿ ಮಾನವತೆ ಎದುರಿಸುತ್ತಿರುವ ಭಯೋತ್ಪಾದನೆಯ ಮತ್ತು ಹವಾಮಾನ ಬದಲಾವಣೆ ವಿಪತ್ತಿನಿಂದ ಹೊರಬರಲು ಬಾಪುರವರ ಆಚಾರ ವಿಚಾರಗಳು ನಮಗೆ ಸಹಾಯಮಾಡಬಲ್ಲಂಥ ಶಕ್ತಿ ಹೊಂದಿವೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು.
ಸಾಮರಸ್ಯದಿಂದ ನಿಸರ್ಗದ ಜೊತೆಗೆ ಬಾಳುವುದು ಎಂದರೆ ಏನು ಮತ್ತು ಒಬ್ಬ ವ್ಯಕ್ತಿ ಹೇಗೆ ತನ್ನ ಕಪ್ಪು ಹೆಜ್ಜೆಗುರುತನ್ನು ಕಡಿಮೆ ಮಾಡಬಹುದು/ಜೀವನದಲ್ಲಿ ಒಟ್ಟಾರೆ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸಬಹುದು ಎಂಬುದನ್ನು ಬಾಪು ರವರು ತಮ್ಮ ಜೀವನ ಶೈಲಿ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ನುಡಿದರು.
ಯೋನ್ಸೆ ವಿಶ್ವ ವಿದ್ಯಾಲಯ ದಕ್ಷಿಣ ಕೋರಿಯಾದಲ್ಲಿನ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದೆ.
ದಕ್ಷಿಣ ಕೋರಿಯಾದಲ್ಲಿ ಮಹಾತ್ಮಾ ಗಾಂಧೀಯವರನ್ನು ವಿಶ್ವ ಶಾಂತಿಯ ಸಾಕಾರ ಮೂರ್ತಿಯೆಂದು ಪೂಜಿಸಲಾಗುತ್ತದೆ
(रिलीज़ आईडी: 1565905)
आगंतुक पटल : 121