ಗ್ರಾಮೀಣಾಭಿವೃದ್ಧಿ ಸಚಿವಾಲಯ
ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ ಜಾರಿಗೆ ಕೇಂದ್ರ ಸಂಪುಟ ಅನುಮೋದನೆ
Posted On:
19 FEB 2019 9:01PM by PIB Bengaluru
ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ ಜಾರಿಗೆ ಕೇಂದ್ರ ಸಂಪುಟ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ವಿಶ್ವ ಬ್ಯಾಂಕ್ ನ ( ಐಆರ್ ಡಿಬಿ) ಸಾಲದ ನೆರವಿನಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ(ಎನ್ ಆರ್ ಇಟಿಪಿ) ಜಾರಿಗೆ ಅನುಮೋದನೆ ನೀಡಿತು.
ಪ್ರಯೋಜನಗಳು:
ಎನ್ ಆರ್ ಇ ಟಿಪಿ ಅಡಿಯಲ್ಲಿ ತಾಂತ್ರಿಕ ಸಹಾಯವನ್ನು ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಜೀವನೋಪಾಯ ಉತ್ತೇಜನಕ್ಕೆ ಉನ್ನತ ಮಟ್ಟದಲ್ಲಿ ನೀತಿ ನಿರೂಪಣೆಗಳ ಹಸ್ತಕ್ಷೇಪ ಮಾಡುವುದು ಮತ್ತು ಡಿಜಿಟಲ್ ಹಣಕಾಸು ಲಭ್ಯತೆ ಕ್ರಮಗಳನ್ನು ಹೆಚ್ಚಿಸುವುದು ಮತ್ತು ಜೀವನೋಪಾಯಗಳಿಗೆ ನೆರವಾಗುವ ಉದ್ದೇಶವಿದೆ.
ಪ್ರಮುಖಾಂಶಗಳು:
ಈ ಡಿಎವೈ-ಎನ್ ಆರ್ ಎಲ್ ಎಂ ಅಡಿಯಲ್ಲಿ ವಿಶೇಷವಾಗಿ ಬಡವರಲ್ಲಿ ಅತಿ ಕಡುಬಡವರು ಮತ್ತು ದುರ್ಬಲ ಸಮುದಾಯಗಳು ಮತ್ತು ಅವುಗಳ ಆರ್ಥಿಕ ಸೇರ್ಪಡೆಗೆ ವಿಶೇಷ ಒತ್ತು ನೀಡಲಾಗುವುದು.
ಗ್ರಾಮೀಣ ಉತ್ಪನ್ನಗಳ ಸುತ್ತ ಮೌಲ್ಯ ಸರಣಿ ಸೃಷ್ಟಿಸುವುದು, ಹಣಕಾಸು ಸೇರ್ಪಡೆ ಮತ್ತಿತರ ಪರ್ಯಾಯ ಪ್ರಾಯೋಗಿಕ ವಿಧಾನಗಳ ಮೂಲಕ ಎನ್ ಆರ್ ಇ ಟಿಪಿ ಅಡಿಯಲ್ಲಿ ಹೊಸ ಆವಿಷ್ಕಾರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಜೀವನೋಪಾಯ, ಡಿಜಿಟಲ್ ಹಣಕಾಸು ಲಭ್ಯತೆ ಮತ್ತು ಜೀವನೋಪಾಯ ಉತ್ತೇಜನ ಕಾರ್ಯಕ್ರಮಗಳಲ್ಲಿ ಆವಿಷ್ಕಾರಿ ಮಾದರಿಗಳನ್ನು ಪರಿಚಯಿಸಲಾಗುವುದು.
ಡಿಎವೈ-ಎಆರ್ ಎಂ ಎಲ್ ಅಡಿಯಲ್ಲಿ ಪರಸ್ಪರ ಅನುಕೂಲವಾಗುವ ಕಾರ್ಯಕಾರಿ ಸಂಬಂಧ ಒದಗಿಸುವ ಜೊತೆಗೆ ಪಂಚಾಯತ್ ರಾಜ್ ಸಂಸ್ಥೆಗಳು(ಪಿಆರ್ ಐ) ಸಮುದಾಯ ಆಧಾರಿತ ಸಂಸ್ಥೆಗಳು(ಸಿಬಿಒ) ನಡುವೆ ಸಮಾಲೋಚನೆಗೆ ಅಧಿಕೃತ ವೇದಿಕೆ ಒದಗಿಸಲಿದೆ. ಅಲ್ಲದೆ ಎನ್ ಆರ್ ಎಲ್ ಎಂ ಅಡಿಯಲ್ಲಿ ಹಲವು ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಜೊತೆಗೂಡಿ ಎಲ್ಲ ಬಗೆಯ ಎಲ್ಲ ರಾಜ್ಯಗಳ ಗ್ರಾಮೀಣ ಜೀವನೋಪಾಯ ಯೋಜನೆಗಳನ್ನು ಒಂದೆಡೆ ತಂದು ಅದರಡಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು.
(Release ID: 1565711)
Visitor Counter : 365