ಸಂಪುಟ

ಕಂಪೆನಿ ಕಾರ್ಯದರ್ಶಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ ಭಾರತ ಮತ್ತು ಮಲೇಷಿಯಾ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟ ಅನುಮೋದನೆ

Posted On: 06 FEB 2019 9:55PM by PIB Bengaluru

ಕಂಪೆನಿ ಕಾರ್ಯದರ್ಶಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ ಭಾರತ ಮತ್ತು ಮಲೇಷಿಯಾ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತ ಮತ್ತು ಮಲೇಷಿಯಾ ನಡುವೆ ಎರಡೂ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿ ಕಾರ್ಯದರ್ಶಿಗಳ ಸ್ಥಾನಮಾನ ಮತ್ತು ಘನತೆಯನ್ನು ಹೆಚ್ಚಿಸುವ ಹಾಗೂ ಕಂಪನಿ ಕಾರ್ಯದರ್ಶಿಗಳು ಏಷ್ಯಾ ಪೆಸಿಫಿಕ್ ವಲಯದ ಗಡಿಗಳಾಚೆ ಸಂಚರಿಸಲು ಅನುವು ಮಾಡಿಕೊಡುವ ಪರಸ್ಪರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲು ಅನುಮೋದನೆ ನೀಡಿದೆ. 

ವಿವರಗಳು 

ಸಂಪುಟ ಸಭೆಯು ಅನುಮೋದನೆ ನೀಡಿರುವ ಪರಸ್ಪರ ತಿಳುವಳಿಕೆ ಪತ್ರವು “ಭಾರತದ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ICSI)” ಮತ್ತು “ಮಲೇಷಿಯಾ ಕಂಪನಿ ಕಾರ್ಯದರ್ಶಿಗಳ ಸಂಘಟನೆ (MACS)” ನಡುವೆ ನಡೆಯಲಿದೆ. ಎರಡೂ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿ ಕಾರ್ಯದರ್ಶಿಗಳ ಸ್ಥಾನಮಾನ ಮತ್ತು ಘನತೆಯನ್ನು ಹೆಚ್ಚಿಸುವುದು ಮತ್ತು ಏಷ್ಯಾ ಪೆಸಿಫಿಕ್ ವಲಯದ ಗಡಿಗಳಾಚೆ ಸಂಚರಿಸಲು ಅನುವು ಮಾಡಿಕೊಡುತ್ತದೆ. 

ಹಿನ್ನೆಲೆ: 

“ಭಾರತದ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ICSI)”ಯು ಭಾರತದಲ್ಲಿ ಕಂಪನಿ ಕಾರ್ಯದರ್ಶಿಗಳ ವೃತ್ತಿಯನ್ನು ಅಭಿವೃದ್ಧಿಪಡಿಸುವ ಮತ್ತು ನಿಯಂತ್ರಿಸುವ ಸಲುವಾಗಿ ಭಾರತದ ಸಂಸತ್ತಿನ ಕಾಯ್ದೆ ಕಂಪನಿ ಕಾರ್ಯದರ್ಶಿಗಳ ಕಾಯ್ದೆ, 1980 (1980ರ ಕಾಯ್ದೆ ಸಂಖ್ಯೆ 56) ಅನುಸಾರ ಸ್ಥಾಪಿಸಿರುವ ಒಂದು ಶಾಸನಬದ್ಧ ಸಂಸ್ಥೆ. “ಮಲೇಷಿಯಾ ಕಂಪನಿ ಕಾರ್ಯದರ್ಶಿಗಳ ಸಂಘಟನೆ (MACS)” ಯು ಮಲೇಷಿಯಾದ ಕಂಪನಿ ಕಾರ್ಯದರ್ಶಿಗಳ ವೃತ್ತಿಪರ ಕಂಪೆನಿ ಕಾರ್ಯದರ್ಶಿಗಳ ಸಾಮರ್ಥ್ಯ ಹಾಗೂ ಸ್ಥಿತಿಯನ್ನು ಸುಧಾರಿಸುವುದು ಮತ್ತು ವೃತ್ತಿಪರತೆ ಮತ್ತು ಘನತೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಗುರಿಯಾಗಿದೆ. 



(Release ID: 1563119) Visitor Counter : 122